Tag: Bigg Boss Kannada

  • ಒಂದೆ ವಾರಕ್ಕೆ ಮನೆಯಿಂದ ಹೋಗ್ಬೇಕಾ ಅಂದ ಧನುಶ್ರೀ..!

    ಒಂದೆ ವಾರಕ್ಕೆ ಮನೆಯಿಂದ ಹೋಗ್ಬೇಕಾ ಅಂದ ಧನುಶ್ರೀ..!

    ಬೆಂಗಳೂರು: ಬಿಗ್ ಮನೆಯಲ್ಲಿ ರಂಗು ರಂಗಿನ ಆಟ ಮುಂದುವರೆದಿದೆ. ವಾರಾಂತ್ಯದಲ್ಲೊಬ್ಬರು ಮನೆಯಿಂದ ಹೊರ ಹೋಗುತ್ತಾರೆ. ಈ ವಿಚಾರವಾಗಿ ರಘು ಮತ್ತು ಧನುಶ್ರೀ ಮಾತನಾಡಿದ್ದಾರೆ. ಮನೆಯ ರಂಗು ರಂಗಿನ ಆಟದ ಬಿಸಿ ಹೆಚ್ಚಾಗುತ್ತಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ಯಾರು ಹೋಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.
    ಮನೆಯಲ್ಲಿ ಕೆಲವು ದಿನ ಮಾತ್ರ ಇದ್ದು ಹೋಗಬೇಕಾ..? ಹೊಂದಿಕೊಂಡು ಬೆರೆಯಲು ನನಗೆ ಸಮಯ ಬೇಕು ಅಷ್ಟರಲ್ಲಿ ಹೋಗಬೇಕಾ ಎಂದು ನೋವಾಗುತ್ತಿದೆ ಎಂದು ಧನುಶ್ರೀ ರಘು ಜೊತೆ ಹೇಳಿಕೊಂಡಿದ್ದಾರೆ.

    ಭಯಾ ಆಗುತ್ತಿದೆಯಾ.. ಎರಡನೇ ವಾರದ ಕ್ಯಾಪ್ಟನ್ ಆಯ್ಕೆ ಸಂದರ್ಭದಲ್ಲಿ ಕೊನೆಗೆ ನಿರ್ಮಲಾ ಎಸ್ ಎಂದ ಟೀಮ್‍ಗೆ ಯಾರನ್ನೋ ಮೆಚ್ಚಿಸಲು ಹೋಗಿಬಿಟ್ಟರು. ಇವರು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಕ್ಯಾಪ್ಟನ್ ಅವರಿಂದ ತಾನು ಈ ಮನೆಯಲ್ಲಿ ಉಳಿಯಬಹುದು ಎಂದು ಹೀಗೆ ಮಾಡಿದ್ದಾರೆ ಅನ್ನಿಸುತ್ತದೆ ಅಂತ ಇಬ್ಬರೂ ಗುಟ್ಟಾಗಿ ಚರ್ಚೆ ನಡೆಸಿದ್ದಾರೆ.

    ವಾರಾಂತ್ಯದಲ್ಲಿ ಯಾರು ಮನೆಯಿಂದ ಹೋಗುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ನಾನು ಉಳಿಯಬೇಕು ಎನ್ನುವ ಮನಸ್ಥಿತಿ ಇದೆ. ಆದರೆ ಯಾರು ಅದನ್ನು ಬಾಯಿಬಿಟ್ಟು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಆದರೆ ಇವರೆಲ್ಲ ಕೀ ಕೊಟ್ಟ ಗೊಂಬೆಗಳಂತೆ. ಬಿಗ್ ಬಾಸ್ ಹೇಳಿದಂತೆ ಆಟವಾಡುವ ಗೊಂಬೆಗಳು ಮಾತ್ರ ಇವರು ಎನ್ನುವುದು ಅಷ್ಟೆ ಸತ್ಯವಾಗಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ವಾರಾಂತ್ಯದಲ್ಲಿ ಯಾರು ಮನೆಯಿಂದ ಹೊರ ಹೋಗುತ್ತಾರೆ. ಯಾರು ಸೇಫ್ ಆಗಿ ಉಳಿದು ತಮ್ಮ ಆಟ ಮುಂದುವರಿಸ್ತಾರೆ ಎಂದು ಕಾದುನೋಡಬೇಕಿದೆ.

  • ಫೆ.28ರಿಂದ ಬಿಗ್ ಬಾಸ್ ಹವಾ ಶುರು- ಸಂಜೆ 6ಕ್ಕೆ ಚಾಲನೆ

    ಫೆ.28ರಿಂದ ಬಿಗ್ ಬಾಸ್ ಹವಾ ಶುರು- ಸಂಜೆ 6ಕ್ಕೆ ಚಾಲನೆ

    ಬೆಂಗಳೂರು: ಬಿಗ್ ಬಾಸ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಫೆ.28 ರಂದು ಸಂಜೆ 6 ಗಂಟೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಎಂದಿನಂತೆ ಕಿಚ್ಚ ಸುದೀಪ್ ಕಾರ್ಯಕ್ರವನ್ನು ನಿರೂಪಿಸಲಿದ್ದಾರೆ.

    ಕಿಚ್ಚ ಸುದೀಪ್ ದ್ವಿಪಾತ್ರದಲ್ಲಿ ನಟಿಸಿರುವ ಹೊಸ ಟೀಸರ್ ಬಿಡುಗಡೆ ಮಾಡಲಾಗಿದ್ದು, ಈ ಮೂಲಕ 100 ದಿನಗಳ ಕಾಲ ನಡೆಯಲಿರುವ ಜನಪ್ರಿಯ ಬಿಗ್ ಬಾಸ್ ಶೋವನ್ನು ಅವರೇ ನಡೆಸಿಕೊಡಲಿದ್ದಾರೆ ಎಂದು ಘೋಷಿಸಲಾಗಿದೆ. ಫೆಬ್ರವರಿ 29ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ಬಿಗ್ ಬಾಸ್ ಪ್ರಸಾರವಾಗಲಿದ್ದು, ಯಾವ ಸಮಯ ಎಂಬುದರ ಕುರಿತು ಇನ್ನೂ ಮಾಹಿತಿ ಹೊರ ಬಿದ್ದಿಲ್ಲ. ರಾತ್ರಿ 8ರಿಂದ ಪ್ರಸಾರವಾಗುವ ಸಾಧ್ಯತೆ ಇದೆ.

    ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಬಿಗ್‍ಬಾಸ್ ರಿಯಾಲಿಟಿ ಶೋಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಇತ್ತೀಚೆಗೆ ಕಿಚ್ಚ ಸುದೀಪ್ ಹೊಸ ಜೋಯಿಸರ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಬಿಗ್ ಬಾಸ್ ಕುರಿತು ಸುಳಿವು ನೀಡಿದ್ದರು.

    ಬಿಗ್‍ಬಾಸ್ ಕಾರ್ಯಕ್ರಮ ಪ್ರಸಾರವಾಗುವ ಖಾಸಗಿ ವಾಹಿನಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕಿಚ್ಚ ಅವರ ಹೊಸ ಫೋಟೋವನ್ನು ಹಂಚಿಕೊಂಡು ಇನ್ನೊಂದು ಸುದ್ದಿಯನ್ನು ಹಂಚಿಕೊಂಡಿದ್ದರು. ಸುದೀಪ್ ಜೋಯಿಸರ ಅವರತಾರದಲ್ಲಿರುವ ಫೋಟೋವನ್ನು ಹಂಚಿಕೊಂಡು ಲಾಕ್ ಡೌನ್ 8.0ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಗೆಸ್ ಮಾಡಿ, ಕಮೆಂಟ್‍ನಲ್ಲಿ ಹೇಳಿ ಎಂದು ಬರೆದು ಬಿಗ್ ಬಾಸ್ ತಂಡದಿಂದ ಹೊಸ ಮಾಹಿತಿಯನ್ನು ಹೊರಹಾಕಿದ್ದರು.

    ಪ್ರತಿ ಸೀಸನ್‍ನಲ್ಲಿಯೂ ವಿಭಿನ್ನವಾಗಿ ಕಾಣಿಸಿಕೊಳ್ಳುವ ಸುದೀಪ್ ಇದೀಗ ಜೋಯಿಸರ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಇನ್ನಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದ್ದಾರೆ.

    ಈಗಾಗಲೇ ಸಾಕಷ್ಟು ಅಭಿಮಾನಿಗಳು ಬಿಗ್‍ಬಾಸ್ ಸೀಸನ್ 8 ಗಾಗಿ ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ಬಿಗ್ ಬಾಸ್ ತಂಡ ದಿನಕ್ಕೊಂದು ಮಾಹಿತಿಯನ್ನು ನೀಡುತ್ತಾ ಎಲ್ಲರ ಕೌತುಕವನ್ನು ಇನ್ನಷ್ಟು ಹೆಚ್ಚು ಮಾಡುತ್ತಿದೆ. ಸೀಸನ್ 8ಕ್ಕೆ ಯಾವೆಲ್ಲ ಸೆಲೆಬ್ರಿಟಿಗಳು ಹೋಗಬಹುದು ಎಂಬ ಕುರಿತಾಗಿ ನಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಕೆಲವು ಹೆಸರುಗಳನ್ನು ಸಹ ಹೇಳುತ್ತಿದ್ದಾರೆ.

    ಕೆಲ ದಿನಗಳ ಹಿಂದೆ ಪ್ರೋಮೋ ಶೂಟ್‍ನಲ್ಲಿ ಭಾಗವಹಿಸಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಬಿಗ್ ಬಾಸ್ ಸೀಸನ್ 8ರ ಪ್ರೋಮೋ ನಡೆಯುತ್ತಿದೆ. ಸದ್ಯದಲ್ಲೇ ಕಾರ್ಯಕ್ರಮ ಆರಂಭವಾಗಲಿದೆ ಎಂದು ಸುದೀಪ್ ಬರೆದುಕೊಂಡಿದ್ದರು. ಕೆಲವು ದಿನಗಳ ನಂತರ ಖಾಸಗಿ ವಾಹಿನಿ ಪ್ರೋಮೋ ಹೊರಬಿಟ್ಟಿದ್ದು, ಕಿಚ್ಚ ಅದನ್ನು ರೀ ಟ್ವೀಟ್ ಮಾಡಿ ಬಿಗ್‍ಬಾಸ್ ಕನ್ನಡ ಸೀಸನ್-8 ಬರ್ತಿದೆ. ನೀವು ಮುಂದಿನ 100 ದಿನದ ಮನರಂಜನೆಗಾಗಿ ತಯಾರಾಗಿ ಎಂದು ಬರೆದುಕೊಂಡಿದ್ದರು. ಈ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟು ನೀರಿಕ್ಷೆಯ ಮಟ್ಟವನ್ನು ಇನ್ನಷ್ಟು ಹೆಚ್ಚಿಸಿದ್ದರು.