Tag: Bigg Boss Kannada

  • ಬಿಗ್‍ಬಾಸ್ ಮನೆಯಲ್ಲಿ ಶಮಂತ್, ಶುಭಾ ಬಳಸಿದ್ರಾ ಫೋನ್..?

    ಬಿಗ್‍ಬಾಸ್ ಮನೆಯಲ್ಲಿ ಶಮಂತ್, ಶುಭಾ ಬಳಸಿದ್ರಾ ಫೋನ್..?

    ಬಿಗ್‍ಬಾಸ್ ಮನೆ ಜಗಳ, ಟಾಸ್ಕ್, ಚಪಾತಿಗಾಗಿ ಗಲಾಟೆಯನ್ನು ನೋಡಿ ಬೇಸರಗೊಂಡ ವೀಕ್ಷಕರಿಗೆ ಶುಭಾ ಮತ್ತು ಶಮಂತ್ ಕ್ಯೂಟ್ ಆಗಿ ಮನರಂಜನೆಯನ್ನು ನೀಡಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ಮೊಬೈಲ್‍ಗಳನ್ನು ತರಲು ಅನುಮತಿ ಇಲ್ಲ ಆದರೂ ಶಮಂತ್ ಮತ್ತು ಶುಭಾ ಫೋನ್‍ನಲ್ಲಿ ಮಾತನಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಶಮಂತ್… ಅಲ್ಲಿಯೇ ಇದ್ದ ಶುಭಾ ಅವರಿಗೆ ಫೋನ್ ಮಾಡುವಂತೆ ನಟಿಸುತ್ತಾ..ನಾನು ನಿಮ್ಮ ಅಪ್ಪಟ ಅಭಿಮಾನಿ ಎಂದು ಹೇಳಿದ್ದಾರೆ. ಓ.. ಹೌದಾ ಹಾಗಾದ್ರೆ ನೀವು ನನ್ನ ಅಭಿಮಾನಿನಾ. ಜೋರಾಗಿ ಗಾಳಿ ಬೀಸಿ ಮಳೆ ಬರುವ ಹಾಗೇ ಮಾಡಿದ್ದೀರಾ. ಮಳೆಯನ್ನು ಸುರಿಸಿ ನಮಗೆ ಸಂತೋಷವಾಗುತ್ತದೆ ಎಂದು ಶುಭಾ ಹೇಳಿದ್ದಾರೆ. ಈ ವೇಳೆ ಹೌದಾ.. ನಾನು ಮಳೆಯನ್ನು ಸುರಿಸಿದರೆ ನನಗೆ ಏನನ್ನು ಕೋಡುತ್ತೀಯಾ ದೇವಿ ಎಂದು ಶಮಂತ್ ಕೇಳಿದಾಗ.. ಅಲ್ಲಿಯೇ ಇದ್ದ ಮಂಜು ನಾನು ನಾಮಿನೇಶನ್ ನಿಂದ ಪಾರು ಮಾಡುತ್ತೇನೆ ಎಂದು ಹೇಳಿ ತಮಾಷೆ ಮಾಡಿದ್ದಾರೆ.

    ಮಳೆ ಬಂದರೆ ನಾನು ಹಣವನ್ನು ಕೋಡುತ್ತೇನೆ ಎಂದು ಶುಭಾ ಹೇಳಿದ್ದಾರೆ. ಹಾಗಾದ್ರೆ 10, 20 ಎಷ್ಟು ರೂಪಾಯಿಯ ಮಳೆ ಬೇಕು ಎಂದು ಶಮಂತ್ ಕೇಳಿದಾಗ.. ಶುಭಾ ನನಗೆ 120 ರೂಪಾಯಿ ಮಳೆ ಬೇಕು ನಾನು ನಿಮಗೆ ಹಣವನ್ನು ಗೂಗಲ್ ಪೇ ಮಾಡುತ್ತೇನೆ ಎಂದಿದ್ದಾರೆ. ನನ್ನ ಕ್ಯೂಆರ್ ಕೋಡ್ ಮೇಲೆ ಇದೆ.. ನಾನು ಮೂನ್ ಮೇಲೆ ಕ್ಯೂಆರ್ ಸ್ಟಿಕ್ಕರ್ ಹಾಕಿದ್ದೇನೆ. ಮೂನ್ ವಾಕಿಂಗ್ ಹೋಗಿದೆ, ಬಂದ ಮೇಲೆ ಹಣವನ್ನು ಕಳುಹಿಸು ಎಂದು ಶಮಂತ್ ಹೇಳಿದ್ದಾರೆ. ನಗುತ್ತಾ ಶುಭಾ ಆಯಿತು ಮಾಡುತ್ತೇನೆ ಎಂದು ಹೇಳಿದ್ದಾರೆ.

    ನಿಮಗೆ ಇಲ್ಲಿಯಂತೂ ಹುಡುಗಿ ಸಿಗಲಿಲ್ಲ. ಅಲ್ಲಿ ಹೇಗಿದೆ ಎಂದು ಶುಭಾ ಕೇಳಿದಾಗ ಶಮಂತ್, ಇಲ್ಲ ನಮಗೆ ಬೇಡಾ ನಾವು ಹೊರಗಡೆ ಹೋಗಿ ಹುಡುಕಿಕೊಳ್ಳುತ್ತೇವೆ ಎಂದಿದ್ದಾರೆ. ಹಾಗಾದರೆ ನೀವು ಬಿಗ್‍ಬಾಸ್ ಮನೆಯಿಂದ ಹೊರಗೆ ಹೋಗಬೇಕು ಅಲ್ಲವೇ ಎಂದು ಕ್ಯೂಟ್ ಆಗಿ ಹೇಳುತ್ತಾ ತಮಾಷೆ ಮಾಡಿದ್ದಾರೆ.

    ಟಾಸ್ಕ್ ಅಂತಾನೇ ದಿನ ಪೂರ್ತಿಯಾಗಿ ಕಳೆದ ಸ್ಪರ್ಧಿಗಳು ಮನರಂಜನೆಗಾಗಿ ಏನಾದರೂ ಮಾಡುತ್ತಲೇ ಇರುತ್ತಾರೆ. ಶಮಂತ್ ಮತ್ತು ಶುಭಾ ತಮ್ಮ ಕೈಗಳನ್ನು ಫೋನಿನಂತೆ ಹಿಡಿದು ಮಾತನಾಡುತ್ತಾ ಸಖತ್ ಮಜಾ ಕೊಟ್ಟಿದ್ದಾರೆ. ಶುಭಾ ಮನೆಯಲ್ಲಿರುವ ಅತ್ಯಂತ ಕ್ಯೂಟ್ ಮತ್ತು ಮುಗ್ಧ ಸ್ಪರ್ಧಿಯಾಗಿದ್ದಾರೆ. ಸದಾ ನಗುತ್ತಾ ಸಣ್ಣ ಮಕ್ಕಳಂತೆ ಬಿಗ್‍ಬಾಸ್ ಮನೆಯಲ್ಲಿ ಮನರಂಜನೆ ನೀಡುತ್ತಿದ್ದಾರೆ.

  • ದಿವ್ಯಾ-ರಘು ನೋಡಿ ಕಟಕಟ ಹಲ್ಲು ಕಡಿದಿದ್ದೇಕೆ ಮಂಜು?

    ದಿವ್ಯಾ-ರಘು ನೋಡಿ ಕಟಕಟ ಹಲ್ಲು ಕಡಿದಿದ್ದೇಕೆ ಮಂಜು?

    ಬಿಗ್‍ಬಾಸ್ ಮನೆ ಅಂದ್ರೆ ಫುಲ್ ಸೆಕ್ಯೂರ್ ಇರುತ್ತೆ. ಕಂಟೆಸ್ಟೆಂಟ್ ಗೆ ಏನೇ ತೊಂದ್ರೆ ಆದ್ರು ಬಿಗ್ ಬಾಸ್ ಇರ್ತಾರೆ. ಮನೆ ತುಂಬಾ ಕ್ಯಾಮೆರಾಗಳಿವೆ. ಅಲ್ಲದೇ ಮನೆಯ ಕಂಟೆಸ್ಟೆಂಟ್ ಎಲ್ಲರೂ ಒಟ್ಟಾಗಿ ಇರ್ತಾರೆ. ಹೀಗಿರುವಾಗ ಬಿಗ್‍ಬಾಸ್ ಸೀಸನ್-8ರಲ್ಲಿ ಪ್ರಾಣ ಬೆದರಿಕೆ ಆಪಾದನೆಯೊಂದು ಕೇಳಿ ಬಂದಿದೆ. ಒಂಟಿ ಮನೆಯ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಎನಿಸಿಕೊಂಡಿರುವ ದಿವ್ಯಾ ಉರುಡುಗ ಹಾಗೂ ರಘು ಗೌಡಗೆ ಪ್ರಾಣ ಬೆದರಿಕೆ ಹಾಕಲಾಗಿದೆ. ಅಷ್ಟಕ್ಕೂ ಇವರಿಬ್ಬರಿಗೆ ಪ್ರಾಣ ಬೆದರಿಕೆ ಹಾಕಿರೋದು ಬೇರೆ ಯಾರೂ ಅಲ್ಲ ಬಿಗ್ ಮನೆಯ ಮತ್ತೊಬ್ಬ ಕಂಟೆಸ್ಟೆಂಟ್.

    ಬಿಗ್ ಬಾಸ್, ಮಾತುಗಾರ ಚಟುವಟಿಕೆ ವೇಳೆ ಹೆಚ್ಚಾಗಿ ಮಾತನಾಡುವ ಕಂಟೆಸ್ಟೆಂಟ್ ಲ್ಯಾಗ್ ಮಂಜುಗೆ ಮುಂದಿನ ಆದೇಶ ಬರುವವರೆಗೂ ಮಾತನಾಡದಂತೆ ಆದೇಶ ನೀಡಿದ್ದರು. ಅವರು ಯಾರ ಬಳಿಯಾದ್ರೂ ಏನೇ ಮಾತಾಡಬೇಕು ಅಂದ್ರೂ ವೈಷ್ಣವಿ ಮೂಲಕ ಸನ್ನೆ ಸೂಚನೆ ಮಾತನಾಡಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ಹೀಗಾಗಿ ಮಂಜು ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಇದನ್ನೇ ಇಟ್ಕೊಂಡು ಮನೆಯ ಕೆಲ ಕಂಟೆಸ್ಟೆಂಟ್ ಮಂಜು ಕಾಲೆಳೆಯುತ್ತಿದ್ದರು.

    ನಿನ್ನೆ ಗಾರ್ಡನ್ ಏರಿಯಾದಲ್ಲಿ ದಿವ್ಯಾ ಉರುಡುಗ, ರಘು, ಅರವಿಂದ್, ಲ್ಯಾಗ್ ಮಂಜು ಹಾಗೂ ವಿಶ್ವ ಕುಳಿತುಕೊಂಡಿದ್ದರು. ಈ ವೇಳೆ ದಿವ್ಯಾ ಮಂಜುಗೆ ಹೀಯಾಳಿಸುತ್ತಿದ್ದರು. ನೀನು ಕುಳಿತುಕೊಳ್ಳೋ ಸ್ಟೈಲ್ ತುಂಬಾ ಚೆನ್ನಾಗಿದೆ.. ಹಾಗೇ ಹೀಗೆ ಅಂತಾ ಟೀಸ್ ಮಾಡ್ತಿದ್ದರು. ಆಗ ಮಂಜು, ಅಲ್ಲಿಯೇ ಇದ್ದ ಮರಳಿನ ಮೇಲೆ ನಿಮಗೆ ಐತಿ ಎಂದು ಬರೆದರು. ಆಗ ರಘು, ಬಿಗ್ ಬಾಸ್ ನಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳ್ತಿದ್ದಂತೆ ದಿವ್ಯಾ ಉರುಡುಗ, ಬಿಗ್ ಬಾಸ್ ಪ್ರಾಣ ಬೆದರಿಕೆ ಹಾಕ್ತಿದ್ದಾರೆ ಎಂದು ಮಂಜು ಬಗ್ಗೆ ಆರೋಪ ಮಾಡಿದರು.

    ಅಷ್ಟರಲ್ಲಿ ವೈಷ್ಣವಿ ಎಂಟ್ರಿ ಕೊಡ್ತಾರೆ ಆಗ ಮಂಜು ವೈಷ್ಣವಿ ಮೂಲಕ ಮಾತಾಡಿಸ್ತಾರೆ. ರಘು ದಿವ್ಯಾ ಮುಗಿಸಿಬೇಡ್ತೇನೆ. ತಿಂದು ಹಾಕ್ತೇನೆ ಎಂದು ಮಂಜು ಸನ್ನೆ ಮಾಡ್ತಾರೆ. ಆಗ ವೈಷ್ಣವಿ ಅವರೇನು ಕಡಲೇ ಕಾಯಿ ತಿನ್ನೋದಿಕ್ಕೆ ಎಂದು ಕಾಮಿಡಿ ಮಾಡ್ತಾರೆ. ಕಟಕಟ ಹಲ್ಲು ಕಡಿಯುತ್ತಾ ಮಂಜು ದಿವ್ಯಾ ಉರುಡುಗ ಹಾಗೂ ರಘು ಗೌಡ ಸೀಳಿ ಬೆಂಕಿಗೆ ಹಾಕುತ್ತೇನೆ ಎಂದು ಸನ್ನೆ ಮಾಡ್ತಾರೆ. ಆಗ ದಿವ್ಯಾ ಉರುಡುಗ, ಬಿಗ್ ಬಾಸ್ ನನ್ನ ಜೀವಕ್ಕೆ ಏನಾದ್ರೂ ಆದ್ರೆ ಮಂಜು ಕಾರಣ ಅಂತಾ ಹೇಳಿ ಜೋರಾಗಿ ನಕ್ಕಿದರು. ಒಟ್ನಲ್ಲಿ ಮಂಜು ಮಾತಾಡದೇ ಇದ್ರೂ ತಮ್ಮ ಆ?ಯಕ್ಷನ್ ಮೂಲಕವೇ ಸಖತ್ ಕಾಮಿಡಿ ಮಾಡ್ತಾ ಮನೆಯವರನ್ನು ನಗಿಸುವ ಪ್ರಯತ್ನ ಮಾಡಿದ್ದಂತೂ ಸುಳ್ಳಲ್ಲ.

  • ಬಿಗ್ ಮನೆಯ ಇಬ್ಬರು ರಾಣಿಯರಿಗೆ ರಾಜನಾದ ವಿಶ್ವನಾಥ್

    ಬಿಗ್ ಮನೆಯ ಇಬ್ಬರು ರಾಣಿಯರಿಗೆ ರಾಜನಾದ ವಿಶ್ವನಾಥ್

    ಬಿಗ್ ಬಾಸ್ ಮನೆ ಅಂಗಳದಲ್ಲಿ ರಾಜನ ದರ್ಬಾರ್ ಶುರುವಾಗಿದೆ. ಮನೆಯ ಕಿರಿಯ ಸದಸ್ಯ ವಿಶ್ವನಾಥ್ ಕ್ಯಾಪ್ಟನ್ ಆಗಿ ಮಿಂಚುತ್ತಿರುವ ಟೈಮ್ ನಲ್ಲಿಯೇ ರಾಜನಾಗುವ ಸದವಕಾಶವೊಂದು ಸಿಕ್ಕಿದೆ. ಒಂಟಿ ಮನೆಯ ರಾಜನಾದ ವಿಶ್ವನಾಥ್ ಗೆ ಇಬ್ಬರು ರಾಣಿಯರು. ನೆನಪಿರಲಿ ಮನೆಯ ಯಾವ ಸದಸ್ಯ ರಾಜನ ಮಾತು ಮೀರುವಂತಿಲ್ಲ. ಒಂದ್ ವೇಳೆ ಅದನ್ನು ಬ್ರೇಕ್ ಮಾಡಿದ್ರೆ ಶಿಕ್ಷೆ ತಪ್ಪಿದ್ದಲ್ಲ.

    ಬಿಗ್ ಬಾಸ್ ನಿನ್ನೆ ವಿಶೇಷ ಚಟುವಟಿಕೆಯೊಂದನ್ನು ನೀಡಿದ್ದರು. ಕ್ಯಾಪ್ಟನ್ ಆಗಿರುವ ವಿಶ್ವನಾಥ್ ಒಂದು ದಿನ ರಾಜನಾಗಿರುತ್ತಾರೆ. ಅವರಿಗೆ ಇಬ್ಬರು ರಾಣಿಯರು ಇರ್ತಾರೆ. ಆ ಇಬ್ಬರು ರಾಣಿಯರು ತಮ್ಮ ಕಾರ್ಯ ವೈಖರಿ ಮೂಲಕ ರಾಜನನ್ನು ಮೆಚ್ಚಿಸಿಬೇಕು. ಬಿಗ್ ಬಾಸ್ ಕೇಳಿದಾಗ ರಾಜ ಉತ್ತಮರಾಣಿ ಯಾರೆಂದು ತಿಳಿಸಬೇಕು. ಮಿಕ್ಕ ಮನೆಯ ಸದಸ್ಯರು ರಾಜನ ಮಾತು ಪಾಲಿಸಬೇಕು.

    ಅದರಂತೆ ವಿಶ್ವನಾಥ್ ಬಿಗ್‍ಬಾಸ್ ಮನೆಯ ಹುಡ್ಗಿಯರ ಪೈಕಿ ಯಾರನ್ನಾದ್ರೂ ಇಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದ್ದರು. ಆಗ ವಿಶ್ವನಾಥ್, ನಿಧಿ ಸುಬ್ಬಯ್ಯ ಹಾಗೂ ವೈಷ್ಣವಿ ಗೌಡ ಅವರನ್ನು ಆಯ್ಕೆ ಮಾಡಿಕೊಂಡರು. ಆಗ ರಾಜೀವ್ ರೋಗಿ ಬಯಸಿದ್ದು ಹಾಲು ಅನ್ನ ಡಾಕ್ಟರ್ ಹೇಳಿದ್ದು ಹಾಲು ಅನ್ನ ಎಂದು ಜೋರಾಗಿ ಹೇಳಿ ನಕ್ಕಾಗ ಮನೆಯವರು ಬಿದ್ದು ಬಿದ್ದು ನಕ್ಕರು.

    ನಿಧಿ ಹಾಗೂ ವೈಷ್ಣವಿ ರಾಣಿಯರಾದ ಬಳಿಕ ಉಳಿದ ಸದಸ್ಯರಿಗೂ ರಾಜ ವಿಶ್ವನಾಥ್ ಪಾತ್ರ ಹಂಚಿಕೆ ಮಾಡಿದರು. ಲ್ಯಾಗ್ ಮಂಜು ರಾಜನ ಸಲಹೆಗಾರನಾಗಿ, ಪ್ರಶಾಂತ್ ಸಂಬರ್ಗಿ ಹಾಗೂ ಶಂಕರ್ ಅಶ್ವತ್ಥ್ ಅವರನ್ನು ವಿದೂಷಕರಾಗಿ, ನರ್ತಕಿಯರನ್ನಾಗಿ ರಾಜೀವ್ ಹಾಗೂ ರಘು ಆಯ್ಕೆ ಮಾಡಿಕೊಂಡ್ರೆ ಅರವಿಂದ್ ಗೆ ರಾಣಿಯರ ದಾಸನ ಪಾತ್ರ ನೀಡಲಾಯಿತು.

    ಈ ವೇಳೆ ಪ್ರಜೆಗಳನ್ನು ನಗಿಸುವ ಕೆಲಸವನ್ನು ವಿದೂಷಕರಾದ ಪ್ರಶಾಂತ್ ಸಂಬರ್ಗಿ ಮಾಡಬೇಕು. ಆಗ ಪ್ರಶಾಂತ್ ಜೋಕ್ ಹೇಳಲು ಬರದೇ ಇದ್ದಾಗ ಮನೆಯವರು ಎಲ್ಲಾ ಸೇರಿ ಕಾಲೆಳೆಯುತ್ತಾರೆ. ಒಟ್ನಲ್ಲಿ ಅದೃಷ್ಟ ಅಂದ್ರೆ ಇದೇ ಇರಬೇಕು. ವಿಶ್ವನಾಥ್ ಗೆ ಕ್ಯಾಪ್ಟನ್ ಜೊತೆಗೆ ರಾಜನಾಗುವ ಅವಕಾಶ ದಕ್ಕಿದೆ. ಮನೆಯ ಇಬ್ಬರು ರಾಣಿಯರ ಸೇವೆಯೊಂದಿಗೆ, ಉಳಿದ ಕಂಟೆಸ್ಟೆಂಟ್ ಗೆ ಆಜ್ಞೆ ನೀಡುವ ವಿಶೇಷ ಅಧಿಕಾರವನ್ನು ವಿಶ್ವನಾಥ್ ಸರಿಯಾಗಿಯೇ ಬಳಸಿಕೊಂಡಿದ್ದಾರೆ.

  • ದೊಡ್ಮನೆಯ ಭಯಾನಕ ಸತ್ಯ ಬಿಚ್ಚಿಟ್ಟ ರಾಜೀವ್..!

    ದೊಡ್ಮನೆಯ ಭಯಾನಕ ಸತ್ಯ ಬಿಚ್ಚಿಟ್ಟ ರಾಜೀವ್..!

    ಬಿಗ್ ಬಾಸ್ ಮನೆಯಲ್ಲಿ ನಡೆದ ಭಯಾನಕ ಸತ್ಯವೊಂದನ್ನು ಸ್ಪರ್ಧಿಗಳ ಮುಂದೆ ರಾಜೀವ್ ಬಿಚ್ಚಿಟ್ಟು ಅಚ್ಚರಿಗೊಳಪಡಿಸಿದ್ದಾರೆ. ಇದ್ದಕ್ಕಿದ್ದಂತೆಯೇ ಕರೆಂಟ್ ಹೋದಾಗ ನಡೆದ ಘಟನೆ ವಿವರಿಸಿರುವ ರಾಜೀವ್, ಕೊನೆಗೆ ನಿಜಾಂಶವನ್ನು ಹೇಳುವ ಮೂಲಕ ಸ್ಪರ್ಧಿಗಳು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

    ಹೌದು. ಮನೆಯವರೆಲ್ಲರೂ ಗಾರ್ಡನ್ ಏರಿಯಾದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಶುಭಾ ಪೂಂಜಾ ಅವರು ಕನಸಿನ ಬಗ್ಗೆ ಮಾತನಾಡುತ್ತಾ, ನಮ್ಮ ಕನಸಲ್ಲಿ ನಾವೇ ಬರುತ್ತಿದ್ದೇವೆ ಅಂತ ಮಾತಿಗಿಳಿದ್ರು. ಶುಭಾ ಮಾತು ಕೇಳಿಸಿಕೊಂಡ ರಾಜೀವ್ ಮನೆಯಲ್ಲಿ ನಡೆದ ನೈಜ ಘಟನೆಯನ್ನು ವಿವರಿಸಲು ಮುಂದಾದ್ರು.

    ನಾನು ದಿವ್ಯ, ವಿಶ್ವ ಕೂತ್ಕೊಂಡಿದ್ದೀವಿ. ಆಗ ಏಕಾಏಕಿಯಾಗಿ ಲೈಟ್ ಆಫ್ ಆಯ್ತು. ಟಕ್ ಅಂತ ಶಬ್ದ ಬಂತು. ಇತ್ತ ವಿಶ್ವ ಅಣ್ಣಾ.. ಅಂದ. ನೋಡಿದಾಗ ಕುಕ್ಕರ್ ಮುಚ್ಚಳ ನಿಂತಿತ್ತು. ಲೈಟ್ ಆಫ್ ಆಗ್ತಿದ್ದಂತೆ ಅದು ಮಲಕ್ಕೊಂತು ಅಂತ ರಾಜೀವ್ ತನ್ನದೇ ಶೈಲಿಯಲ್ಲಿ ವಿವರಿಸಿದರು.

    ರಾಜೀವ್ ವಿವರಣೆ ನೀಡುತ್ತಿದ್ದಂತೆಯೇ ಮೊದಲು ಇವರೇನೋ ಜೋಕ್ ಮಾಡ್ತಿದ್ದಾರೆ ಅಂತ ಅಂದುಕೊಂಡ ಮನೆ ಮಂದಿ, ಪೂರ್ತಿ ಸ್ಟೋರಿ ಕೇಳಿದ ಬಳಿಕ ಒಂದು ಬಾರಿ ದಂಗಾದ್ರು. ಅಲ್ಲದೆ ಆತಂಕಗೊಂಡು ಭಯಭೀತರಾದರು. ಈ ವೇಳೆ ವಿಶ್ವ ಅಣ್ಣಾ ಎಲ್ಲೋ ನೀರು ಜಾರಿಕೊಂಡರಬೇಕು ಅಂತ ಹೇಳಿದ. ಆಗ ನಾನು ಇರಬಹುದು ಕಣೋ ಆದರೆ ನಿಂತಿರೋ ಕುಕ್ಕರ್ ಹಿಂಗೆ ಮಲಕ್ಕೊಂಡಿರೋಕೆ ಸಾಧ್ಯ ಇಲ್ಲ ಅಂದೆ.

    ರಾಜೀವ್ ಕಥೆ ಕೇಳಿಸಿಕೊಂಡ ಬಳಿಕ ಶುಭಾ, ಏನಿದೆ ಈ ಮನೆಯಲ್ಲಿ ಅಂತ ಕೇಳಿದರು. ಅಲ್ಲದೆ ಮನೆಯಲ್ಲಿ ದೆವ್ವದ ಕಾಟ ಇದೆಯೋ ಅಂತ ಭಾವಿಸಿದರು. ಈ ವೇಳೆ ನಿಧಿ ಪ್ರಶ್ನೆಯೊಂದನ್ನು ಕೇಳಿದರು. ಆಗ ರಾಜೀವ್, ಕುಕ್ಕರ್ ತೊಳೆದುಬಿಟ್ಟು ಒರೆಸಿ ಇಟ್ಟಿರ್ತಿ ಅಲ್ವ ಅಂತ ಮತ್ತೆ ವಿವರಣೆ ನೀಡಲು ಮುಂದಾದ್ರು. ಆಗ ಶುಭಾ ಹಂಗಂದ್ರೆ ಅದು ಜಾರಿ ಬಿದ್ದಿರತ್ತೆ ಅಷ್ಟೆ ಅಂದ್ರು. ಆಗ ರಾಜೀವ್ ಹೌದು ಜಾರಿನೇ ಬಿದ್ದಿರೋದು ಅಂದ್ರೆ, ಇತ್ತ ಅರವಿಂದ್ ನೀವು ಹೇಳಿದ್ದು ಸರಿ ಅಂತ ಹೇಳಿದ್ರು. ಸತ್ಯ ಗೊತ್ತಾದಾಗ ಎಲ್ಲರೂ ನಿಟ್ಟುಸಿರು ಬಿಟ್ಟು ನಕ್ಕರು.

  • ಸಂಬರಗಿ ನಂದೆಲ್ಲಿಡಲಿ ಅನ್ನೋ ವ್ಯಕ್ತಿ- ಬಿಗ್ ಮನೆಯಲ್ಲಿ ಶುರುವಾಯ್ತು ಗುಸು ಗುಸು

    ಸಂಬರಗಿ ನಂದೆಲ್ಲಿಡಲಿ ಅನ್ನೋ ವ್ಯಕ್ತಿ- ಬಿಗ್ ಮನೆಯಲ್ಲಿ ಶುರುವಾಯ್ತು ಗುಸು ಗುಸು

    ಬಿಗ್‍ಬಾಸ್‍ನಲ್ಲಿ ದಿನೇ ದಿನೇ ಪ್ರಶಾಂತ್ ಸಂಬರಗಿ ವಿರುದ್ಧ ಅಸಮಾಧಾನ ಸ್ಫೋಟಗೊಂಡಂತೆ ಕಾಣಿಸ್ತಿದೆ. ಮನೆಯ ಸದಸ್ಯರಿಗೆ ಪ್ರಶಾಂತ್ ಸಂಬರಗಿ ಕಿರಿಕಿರಿಯುನ್ನುಂಟು ಮಾಡ್ತಿದ್ದಾರೆ ಅನ್ನೋದು ಅವರ ಮಾತುಗಳಲ್ಲಿಯೇ ಅರ್ಥ ಆಗ್ತಿದೆ. ಒಂದು ವಿಶೇಷ ಅಂದ್ರೆ ಯಾರು ನೇರವಾಗಿ ಸಂಬರಗಿ ಮುಂದೆ ಹೇಳದೇ, ತಾವೇ ತಾವೇ ಮಾತಾಡಿಕೊಳ್ಳುತ್ತಿದ್ದಾರೆ.

    ಮಂಗಳವಾರ ಕಿಚನ್‍ನಲ್ಲಿ ನಿಧಿ ಸುಬ್ಬಯ್ಯ, ರಘು ಮಾತನಾಡಿಕೊಳ್ಳುತ್ತಾ ಸಂಬರಗಿ ದಡ್ಡ, ಹಾಗೆ ಹೀಗೆ ಅಂತ ಮಾತಾಡಿಕೊಂಡಿದ್ದರು. ನಿನ್ನೆ ಎಪಿಸೋಡ್ ನಲ್ಲಿ ಒಂದೆಡೆ ಕುಳಿತಿದ್ದ ವಿಶ್ವನಾಥ್, ರಘು ಮತ್ತು ಅರವಿಂದ್ ಮೂವರ ನಡುವೆಯೂ ಸಂಬರಗಿಯ ಕುರಿತಾದ ಮಾತುಗಳನ್ನಾಡುತ್ತಿದ್ದರು.

    ಪ್ರಶಾಂತ್ ಸಂಬರಗಿ ತಮಗೆ ಬೇಕಾಗಿದ್ದನ್ನ ಮಾಡ್ತಾರೆ. ಇಲ್ಲ ಅಂದ್ರೆ ಆಗಲ್ಲ ಗುರು ಅಂತ ಹೇಳ್ತಾರೆ. ತಾವು ಏನೇ ಕೆಲಸ ಮಾಡಿದ್ರೂ ಎಲ್ಲರಿಗೂ ತಿಳಿಯುವಂತೆ ಹೇಳೋದು ಅವರ ನಡವಳಿಕೆ. ಊಟ, ಟೀ ತಂದಾಗಲೂ ಅದನ್ನ ಪದೇ ಪದೇ ಹೇಳ್ತಾರೆ ಎಂದು ಅರವಿಂದ್ ಮತ್ತು ವಿಶ್ವನಾಥ್ ಅಂದ್ರು.

    ನಮ್ಮ ತಾಯಿಯ ವಿಷಯ ಹೇಳಿದಾಗ ರಘು ತಬ್ಬಲಿ ಅಲ್ಲ. ನಾವೆಲ್ಲ ಅವನ ಜೊತೆಯಲ್ಲಿದ್ದೇವೆ ಎಂದು ಸಂಬರಗಿ ಹೇಳಿದಾಗ ಬೇಜಾರ ಆಯ್ತು. ನಾನು ಯಾವಾಗಾದ್ರೂ ತಬ್ಬಲಿ ಅಂತ ಯಾರಿಗಾದ್ರೂ ಹೇಳಿದ್ನಾ? ಏನೇ ಮಾತಾಡಿದ್ರೂ ಸಂಬರಗಿ ಅವರು ಅದನ್ನ ಕಂಟೆಂಟ್ ತರ ನೋಡ್ತಾರೆ. ಯಾವುದೇ ಟಾಪಿಕ್ ಬಂದ್ರೂ ನಂದೆಲ್ಲಿಡಲಿ ಅನ್ನೋ ಜಾಯಮಾನದವರು ಅಂತ ಆಡಿಕೊಂಡ್ರು. ಇದೇ ವಿಷಯವಾಗಿ ನಿಧಿ ಸುಬ್ಬಯ್ಯ ಮುಂದೆಯೂ ರಘು ಮಾತಾಡಿದ್ರು.

  • ಸಂಬರಗಿ ಒಬ್ಬ ದಡ್ಡ: ನಿಧಿ ಸುಬ್ಬಯ್ಯ

    ಸಂಬರಗಿ ಒಬ್ಬ ದಡ್ಡ: ನಿಧಿ ಸುಬ್ಬಯ್ಯ

    ಬೆಂಗಳೂರು: ನಾಲ್ಕನೇ ವಾರದಲ್ಲಿ ಸ್ಪರ್ಧಿಗಳಿಗೆ ಯಾರು ಹೇಗೆ ಅನ್ನೋ ಲೆಕ್ಕ ಸಿಕ್ಕಂತೆ ಕಾಣುತ್ತಿದ್ದು, ಯಾರು ತಮ್ಮ ಹಿತೈಶಿಗಳು ಮತ್ತು ಯಾರ ಜೊತೆ ಕಂಫರ್ಟ್ ಝೋನ್ ಅಂತ ಅನ್ನೋದು ಅರ್ಥ ಆದಂತೆ ಆಗಿದೆ. ಅಡುಗೆ ಮನೆಯಲ್ಲಿ ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಮತ್ತು ರಘು ಮೂವರು ಪ್ರಶಾಂತ್ ಸಂಬರಗಿಯ ಆಟದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಸಂಬರಗಿ ಒಬ್ಬ ದಡ್ಡ, ಕೊನೆಯಲ್ಲಿ ಬಂದು ನಾನು ಮಾಡಿದೆ ಅಂತ ಹೇಳಿಕೊಳ್ಳುವ ಜಾಯಮಾನದ ವ್ಯಕ್ತಿ ಎಂದರು.

    ಇದಕ್ಕೂ ಮೊದಲು ನಾನು ಅಮ್ಮನ ಡೆತ್ ಆ್ಯನಿವರ್ಸರಿ ವಿಷಯ ಹೇಳಿದಾಗ, ನನ್ನ ಬಳಿ ಬಂದ ಸಂಬರಗಿ ಸಾಂತ್ವಾನದ ಮಾತುಗಳನ್ನಾಡಿದರು. ರಘು ತಬ್ಬಲಿ ಅಂತ ಹೇಳಿಕೊಳ್ಳುತ್ತಿರುತ್ತಾರೆ. ಅವನು ತಬ್ಬಲಿ ಅಲ್ಲ, ನಾವೆಲ್ಲ ಅವನೊಂದಿಗೆ ಇದ್ದೇವೆ ಅಂದ್ರು. ಆದ್ರೆ ಯಾರಿಗೂ ನಾನು ತಬ್ಬಲಿ ಅಂತ ಹೇಳಿಕೊಂಡು ಸಿಂಪಥಿ ಕ್ರಿಯೇಟ್ ತೆಗೆದುಕೊಳ್ಳಲು ಟ್ರೈ ಮಾಡಿಲ್ಲ. ಆದ್ರೆ ಸಂಬರಗಿ ಯಾಕೆ ಹಾಗೆ ಹೇಳಿದ್ರು ಅಂತ ಇವಾಗೂ ನನಗೆ ತಿಳಿಯುತ್ತಿಲ್ಲ ಎಂದು ಹೇಳಿದರು.

    ನೀನು ವೀಕ್ ಅನ್ನೋ ಸುಳ್ಳನ್ನ ಹತ್ತು ಬಾರಿ ಹೇಳಿದಾಗ ಅದನ್ನ ನಂಬೋಕೆ ಹೋಗ್ತೀವಿ. ಎಲ್ಲರನ್ನ ಹೀಗೆ ವೀಕ್ ಮಾಡೋದು ಸಂಬರಗಿ ಆಟದ ಪ್ಲಾನ್ ಅಂತ ರಘುಗೆ ನಿಧಿ ಸಮಜಾಯಿಸಿ ಕೊಟ್ರು. ಇನ್ನೊಮ್ಮೆ ಆ ರೀತಿ ಮಾತಾಡಿದ್ರೆ ಮುಚ್ಕೊಂಡು ಹೋಗಿ ಎಂದು ಮುಖಕ್ಕೆ ನೇರವಾಗಿ ಹೇಳಿ ಎಂದು ರಘುಗೆ ಸಲಹೆ ನೀಡಿದ್ರು ನಿಧಿ.

    ದಿವ್ಯ ಉರುಡುಗಳ ಕೆಲ ಘಟನೆಗಳು ನೋಡಿದೆ. ಆಕೆ ಪ್ರಶಾಂತ್ ಸಂಬರಗಿಗಿಂತ ಹೆಚ್ಚು ನಾಟಕ ಮಾಡ್ತಾಳೆ. ಕೆಲವೇ ಕ್ಷಣಗಳಲ್ಲಿ ಹೇಗೆ ಚೇಂಜ್ ಆಗ್ತಾಳೆ ಅನ್ನೋದು ಗೊತ್ತಾಯ್ತು. ಆದ್ರೆ ಪ್ರಶಾಂತ್ ಸಂಬರಗಿ ಒಬ್ಬ ದಡ್ಡ. ಅವನಿಗೆ ಅದನ್ನೆಲ್ಲ ಕ್ಯಾಚ್ ಮಾಡೋಕೆ ಸಾಧ್ಯವಿಲ್ಲ ಎಂದು ಸಂಬರಗಿ ಬಗ್ಗೆ ಶುಭಾ, ನಿಧಿ ಮತ್ತು ರಘು ಮಾತಾಡಿಕೊಂಡ್ರು.

  • ರಘು ಕೂದಲು ಉದುರಿದ್ಯಾಕೆ? ಲ್ಯಾಗ್ ಮಂಜು ತರಲೆ ಉತ್ತರ

    ರಘು ಕೂದಲು ಉದುರಿದ್ಯಾಕೆ? ಲ್ಯಾಗ್ ಮಂಜು ತರಲೆ ಉತ್ತರ

    ಬಿಗ್‍ಬಾಸ್ ಸೀಸನ್ 8ರ ಮೂರನೇ ವಾರದಲ್ಲಿ ಸ್ಪರ್ಧಿಗಳ ನಿಜವಾದ ಮುಖ ಪ್ರೇಕ್ಷಕರ ಮುಂದೆ ಬರ್ತಿದೆ. ನಿನ್ನೆ ಎಪಿಸೋಡ್ ನಲ್ಲಿ ಸಂಬರಗಿ ಕಣ್ಣೀರು, ಶುಭಾ ಮುನಿಸು, ಗೀತಾ ಲೆಕ್ಕಾಚಾರದ ಆಟ, ಮಂಜನ ಕಾಮಿಡಿ ನಡುವೆ ದೇಸಿ ಗೇಮ್, ಚಂದ್ರಕಲಾ ಮತ್ತು ಶಂಕರ್ ಅಶ್ವಥ್ ಸೇಫ್ ಜೋನ್ ಹೀಗೆ ಒಂದೊಂದು ಗುಣಗಳು ನೋಡಲು ಸಿಗುತ್ತಿವೆ. ಇಂದು ವಾಹಿನಿ ಪ್ರೋಮೋ ರಿಲೀಸ್ ಮಾಡಿದ್ದು, ರಘು ಕೂದಲು ಉದುರಿದ್ಯಾಕೆ ಅಂತ ಮಂಜು ಹೇಳಿದ್ದಾರೆ.

    ಹಾಲ್ ನಲ್ಲಿ ಮಂಜು, ಅರವಿಂದ್, ರಘು, ದಿವ್ಯಾ ಸುರೇಶ್ ಮತ್ತು ದಿವ್ಯಾ ಉರುಡುಗ ಕುಳಿತಿದ್ದರು. ದಿವ್ಯಾ ಸುರೇಶ್ ಮುಂದೆ ನಾನು ಸುಳ್ಳು ಹೇಳುವ ರೀತಿ ಕಾಣಬಹುದು. ಆದ್ರೆ ಸುಳ್ಳು ಹೇಳ್ತೀನಾ ಅಂತ ರಘು ಹೇಳಿದ್ರು. ರಘು ಮಾತು ಕೇಳಿದ ಅರವಿಂದ್ ನಗಲಾರಂಭಿಸಿದರು. ಅಲ್ಲಿಯೇ ಕುಳಿತಿದ್ದ ಮಂಜು, ಇಷ್ಟು ವರ್ಷದಲ್ಲಿ ರಘು ಇದುವರೆಗೂ ನಿಜನಾ ಹೇಳಿಲ್ಲ ಅನ್ನೋದು ನನ್ನ ಅನಿಸಿಕೆ. ನಿಜ ಹೇಳಿದ್ರೆ ಕೂದಲು ಜೋರಾಗಿ ಬೆಳೆದಿರೋದು ಅಂತ ಕಾಲೆಳೆದರು.

    ಸುಳ್ಳು ಹೇಳೋರಿಗೆ ಹೆಚ್ಚು ಕೂದಲು ಉದುರೋದು. ಬೇಕಿದ್ರೆ ನಮ್ಮ ಮಾವ ಸಂಬರಗಿಯನ್ನ ಕೇಳು. ಸೆಕ್ಷನ್ 56ರ ಪ್ರಕಾರ ಕೂದಲು ಉದುರೋದೇ ಸುಳ್ಳು ಹೇಳಲು ಅಂತ ಹೇಳ್ತಾರೆ. ಬೇಕಿದ್ರೆ ಕರಿ ಗೊಂಬೆ ಮತ್ತು ರಘುನನ್ನ ನೋಡಿ ಅಂತ ಹೇಳಿ ಹಾಲ್ ನಲ್ಲಿ ಕುಳಿತಿದ್ದ ಎಲ್ಲರನ್ನ ನಗಿಸಿದರು.

    ಈ ವಾರ ಜೋಡಿಯಾಗಿ ಟಾಸ್ಕ್ ನೀಡಿರುವ ಬಿಗ್‍ಬಾಸ್ ಎಲ್ಲರಿಗೂ ರಿಚಾರ್ಜ್ ಸ್ಟಿಕ್ ನೀಡಿದ್ದಾರೆ. ಅದನ್ನ ಕಾಪಾಡಿಕೊಳ್ಳುವದರ ಜೊತೆಗೆ ಬೇರೆಯವರ ಸ್ಟಿಕ್ ಪಡೆದುಕೊಂಡ ಜೋಡಿ ವಿನ್ ಆಗಲಿದೆ. ಹಾಗಾಗಿಯೇ ಎಲ್ಲರೂ ಬೇರೆಯವರ ರಿಚಾರ್ಜ್ ಸ್ಟಿಕ್ ಹುಡುಕೋದರಲ್ಲಿ ಬ್ಯುಸಿಯಾಗಿದ್ದಾರೆ.

  • ಬಿಗ್‍ಬಾಸ್ ಚಿಕನ್ ನೀಡೋದ್ಯಾಕೆ ಅಂತ ಹೇಳಿದ್ರು ಮಂಜು

    ಬಿಗ್‍ಬಾಸ್ ಚಿಕನ್ ನೀಡೋದ್ಯಾಕೆ ಅಂತ ಹೇಳಿದ್ರು ಮಂಜು

    – ಮಂಜುಗೆ ಚಿಕನ್ ಫ್ರೈ, ಡ್ರೈ ಪಾಠ

    ಎಂಟನೇ ಆವೃತ್ತಿಯ ಬಿಗ್‍ಬಾಸ್ ನಲ್ಲಿ ವೀಕ್ಷಕರನ್ನ ಹೆಚ್ಚು ಸೆಳೆಯುತ್ತಿರೋದು ಹಾಸ್ಯ ಕಲಾವಿದ ಪಾವಗಡ ಮಂಜು. ತಮ್ಮ ತರಲೆ ಮಾತುಗಳು, ಹಳ್ಳಿ ಸೊಗಡಿನ ಭಾಷೆ, ಪ್ರೇಮ ಕಥೆ ಹೀಗೆ ಪಾವಗಡ ಮಂಜು ಈ ಬಾರಿ ಬಿಗ್ ಮನೆಯ ಸೆಂಟರ್ ಆಫ್ ಅಟ್ರ್ಯಾಕ್ಷನ್. ಮೊದಲ ವಾರದಿಂದಲೇ ಬಿಗ್ ಮಂದಿಯನ್ನ ರಂಜಿಸುತ್ತಿರುವ ಮಂಜು ಮಾತುಗಳು ಪ್ರಶಾಂತ್ ಸಂಬರಗಿ ಸೇರಿದಂತೆ ಕೆಲವರಿಗೆ ಕಿರಿಕಿರಿ ಮಾಡಿದ್ದುಂಟು. ಇದನ್ನ ಸ್ವತಃ ಸಂಬರಗಿಯವರೇ ಹೇಳಿದ್ರು. ವಾಹಿನಿ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್ ಮಾಡಿದ್ದು, ಅದರಲ್ಲಿ ಬಿಗ್‍ಬಾಸ್ ಚಿಕನ್ ನೀಡೋದ್ಯಾಕೆ ಅಂತ ಮಂಜು ತಮ್ಮ ಧಾಟಿಯಲ್ಲಿ ಹೇಳಿದ್ದು ಸದ್ದು ಮಾಡ್ತಿದೆ.

    ಮೂರನೇ ವಾರ ಲಕ್ಷುರಿ ಪಾಯಿಂಟ್ ನಲ್ಲಿ ಚಿಕನ್ ಪಡೆದುಕೊಂಡಿದ್ದಾರೆ. ಕಿಚನ್ ನಲ್ಲಿ ಚಂದ್ರಕಲಾ ಮೋಹನ್, ಗೀತಾ, ದಿವ್ಯಾ ಮತ್ತು ರಾಜೀವ್ ಅಡುಗೆ ಮಾಡುತ್ತಿದ್ರೆ, ಹಾಲ್ ನಲ್ಲಿ ಕುಳಿತಿದ್ದ ಶುಭಾ, ವೈಷ್ಣವಿ ಮತ್ತು ಮಂಜು ಹರಠೆ ಹೊಡೆಯುತ್ತಿದ್ರು. ಈ ವೇಳೆ ಚಿಕನ್ ಫ್ರೈ ಮತ್ತು ಡ್ರೈಗಿರೋ ವ್ಯತ್ಯಾಸವನ್ನ ಮಂಜುಗೆ ಹೇಳಿಕೊಡುತ್ತಿದ್ದರು.

    ಬಿಗ್‍ಬಾಸ್ ಲಕ್ಷುರಿ ಬಜೆಟ್ ಪಾಯಿಂಟ್ ನಲ್ಲಿ ಒಂಚೂರು ಚಿಕನ್ ಜಾಸ್ತಿ ಕಳಿಸಬಹುದಿತ್ತು. ಇಷ್ಟು ಜನಕ್ಕೆ ಮೂರರಿಂದ ನಾಲ್ಕು ಕೆಜಿ ಕಳಿಸಬಹುದಿತ್ತು ಅಲ್ವಾ ಅಂದ್ರು. ಮತ್ತೆ ಯಾಕೆ ಅಷ್ಟು ಚಿಕನ್ ಕಳಿಸಲ್ಲಾ ಅನ್ನೋದನ್ನ ಸ್ವತಃ ಮಂಜು ಹೇಳಿದ್ರು. ಜಾಸ್ತಿ ಕಳಿಸಿದ್ರೆ ತಿಂದು ದಪ್ಪ ಆಗ್ತಾರೆ. ಶಕ್ತಿ ಬರೋದಕ್ಕೆ ಪ್ರೊಟಿನ್ ಕಳುಹಿಸಿದ್ದಾರೆ. ಮನೆಯಲ್ಲಿದ್ದ ನಾವು ಚಿಕನ್ ಇದೆ ಅನ್ನೋದನ್ನ ಮರೀತಾರೆ ಅಂತ ರುಚಿಗೆ ಕಳಿಸ್ತಾರೆ ಎಂದು ಹೇಳಿದ್ರು.

    ಮೊದಲ ವಾರ ಟಿಕ್‍ಟಾಕ್ ಧನುಶ್ರೀ ಮತ್ತು ಎರಡನೇ ವಾರ ನಿರ್ಮಲಾ ಚೆನ್ನಪ್ಪ ಮನೆಯಿಂದ ಹೊರ ಬಂದಿದ್ದಾರೆ. ಸೋಮವಾರ ಟಾಸ್ಕ್ ಗೆದ್ದಿದ್ದ ಮಹಿಳಾ ಸದಸ್ಯರಿಗೆ ಬಿಗ್‍ಬಾಸ್ ಪಿಜ್ಜಾ ಕಳುಹಿಸಿದ್ದರು. ಬಹು ದಿನಗಳ ನಂತ್ರ ಪಿಜ್ಜಾ ನೋಡಿದ ಮಹಿಳಾ ಸ್ಪರ್ಧಿಗಳು ತಿಂದು ಎಂಜಾಯ್ ಮಾಡಿದ್ದರು.

  • ಎರಡನೇ ವಾರದಲ್ಲಿಯೇ ‘ಬಿಗ್’ ರಹಸ್ಯ ಬಿಚ್ಚಿಟ್ಟ ಶಂಕರ್ ಅಶ್ವಥ್

    ಎರಡನೇ ವಾರದಲ್ಲಿಯೇ ‘ಬಿಗ್’ ರಹಸ್ಯ ಬಿಚ್ಚಿಟ್ಟ ಶಂಕರ್ ಅಶ್ವಥ್

    ಬಿಗ್‍ಬಾಸ್ ಆರಂಭಗೊಂಡು ಎರಡು ವಾರ ಕಳೆದಿದೆ. ಮನೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಆಟ. ಕೆಲವರು ಕ್ಯಾಮೆರಾ ಮುಂದೆ ಹೈಲೆಟ್ ಆಗೋಕೆ ಟ್ರೈ ಮಾಡ್ತಿರೋದು ವೀಕ್ಷಕರ ಗಮನಕ್ಕೂ ಬಂದಿದೆ. ನಿರ್ಮಲಾ ಚೆನ್ನಪ್ಪ ವಿಷಯದಲ್ಲಿ ಈ ಬಗ್ಗೆ ದೊಡ್ಮನೆ ಸದಸ್ಯರು ತಮ್ಮೊಳಗೆಯೇ ಮಾತಾಡಿಕೊಂಡಿದ್ರು. ಇದೀಗ ಸೀಸನ್ 8ರ ಹಿರಿಯ ಆಟಗಾರ ಶಂಕರ್ ಅಶ್ವಥ್ ಎರಡು ವಾರದ ಬಳಿಕ ಮನೆಯ ಸದಸ್ಯರ ಆಟದ ಅಸಲಿ ವಿಷಯವನ್ನ ಸುದೀಪ್ ಮುಂದೆ ಹೇಳಿದ್ದಾರೆ.

    ಸೂಪರ್ ಸಂಡೇ ವಿಥ್ ಸುದೀಪ ಸಂಚಿಕೆಯ ಪ್ರೋಮೋ ಹೊರ ಬಂದಿದ್ದು, ನಟ ಶಂಕರ್ ಅಶ್ವಥ್ ಬಿಗ್ ಮನೆಯ ಮಂದಿಯೆಲ್ಲ ಫೇಕ್ ಅಂದಿದ್ದಾರೆ. ಹೌದು, ಮುಂದಿರುವ ಬೋರ್ಡ್ ನಲ್ಲಿ ಫೇಕ್ ಮತ್ತು ರಿಯಲ್ ಆಗಿರೋ ಒಬ್ಬ ಸದಸ್ಯರ ಫೋಟೋ ಹಚ್ಚುವಂತೆ ಮನೆ ಮಂದಿಗೆ ಸೂಚಿಸಿದ್ದರು. ಹಾಗೆ ಕೆಲವರು ಗೀತಾ ಭಾರತಿ ಈ ಮನೆಯಲ್ಲಿ ನನಗೆ ಫೇಕ್ ಅನ್ನಿಸ್ತಾರೆ. ಅದೇ ಪಾವಗಡದ ಮಂಜು ರಿಯಲ್ ಅಂತ ಹೇಳಿದ್ರು.

    ಅಶ್ವಥ್ ಸರದಿ ಬಂದಾಗ, ನೀವು ನೇರವಾಗಿ ಮಾತನಾಡಿ ಅಭಿಪ್ರಾಯ ಹೇಳುವಂತೆ ಹೇಳಿದ್ದೀರಿ. ಆದ್ರೆ ಈ ಮನೆಯಲ್ಲಿರುವ ಎಲ್ಲರೂ ಫೇಕ್. ಯಾರ ಬಗ್ಗೆ ಹೇಳಿದ್ರೆ ಪಕ್ಕದಲ್ಲಿ ಇನ್ಯಾರು ಚುಚ್ತಾರೆ ಅನ್ನೋ ಭಯ ಮತ್ತು ಅಳಕಿದೆ ಅಂತ ನೇರವಾಗಿಯೇ ಹೇಳಿದ್ರು. ಆದರೂ ಶಂಕರ್ ಅಶ್ವಥ್ ತಮ್ಮ ಕೈಯಲ್ಲಿ ಇಬ್ಬರ ಫೋಟೋ ಹಿಡಿದಿರೋದನ್ನ ಕಾಣಬಹುದು. ಆದ್ರೆ ಆ ಇಬ್ಬರು ಯಾರು? ನಿಜವಾಗಲೂ ಎಲ್ಲರೂ ಕ್ಯಾಮೆರಾ ಮುಂದೆ ತೋರಿಕೆಯಾಟ ಆಡ್ತಿದ್ದಾರೆ ಅನ್ನೋ ಪ್ರಶ್ನೆಯನ್ನ ಅಶ್ವಥ್ ಮಾತುಗಳು ಹುಟ್ಟು ಹಾಕಿವೆ.

  • ಹುಡುಗಿಯರು ಯಾಕೆ ಹೀಗೆ ಉಲ್ಟಾ ಹೊಡಿತಾರೆ?

    ಹುಡುಗಿಯರು ಯಾಕೆ ಹೀಗೆ ಉಲ್ಟಾ ಹೊಡಿತಾರೆ?

    ಬಿಗ್ ಮನೆಯಲ್ಲಿ ಈ ವಾರದ ಕಳಪೆ ಪ್ರದರ್ಶನ ನೀಡಿದ ಸದಸ್ಯರನ್ನು ಒಮ್ಮತದಿಂದ ಗುರುತಿಸಿ ಸೂಕ್ತ ಕಾರಣವನ್ನು ಗುರುತಿಸಿ ಹೇಳಿ ಎಂದು ಬಿಗ್‍ಬಾಸ್ ಸೂಚಿಸಿದ್ದರು. ಮನೆಯ ಸದಸ್ಯರೆಲ್ಲರು ಶಮಂತ್ ಹೆಸರನ್ನು ಸೂಚಿಸಿದ್ದಾರೆ.

    ಶಮಂತ್‍ಗೆ ಬ್ಯಾಡ್ ಟೈಮ್!

    ಬಿಗ್‍ಬಾಸ್ ಮನೆಯಲ್ಲಿ ಮೊದಲವಾರವೇ ಕ್ಯಾಪ್ಟನ್ ಆಗಿ ಆಯ್ಕೆಯಾದ ಶಮಂತ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಮನೆ ಸದಸ್ಯರು ಮುಂದಿನವಾರವು ಅವರೆ ಇರಲಿ ಎಂದು ಸೂಚಿಸಿದ್ದರು. ಆದರೆ ಕ್ಯಾಪ್ಟನ್ ಪಟ್ಟ ಕಳೆದುಕೊಳ್ಳುತ್ತಿದ್ದಂತೆ ಕೆಟ್ಟ ಕಾಲ ಶುರುವಾಗಿದೆ. ಕಾಪ್ಟನ್ ರೂಮ್‍ನಲ್ಲಿ ಹಾಯಾಗಿದ್ದ ಶಮಂತ್ ಇಂದು ಜೈಲು ಪಾಲಾಗಿದ್ದಾರೆ.

    ಟಾಸ್ಕ್ ಮಾತ್ರವಲ್ಲದೇ ಕೆಲವರು ವೈಯಕ್ತಿಕ ಕಾರಣ ಮತ್ತು ಅವರ ನಡವಳಿಕೆಯನ್ನು ಆಧರಿಸಿ ಶಮಂತ್ ಅವರಿಗೆ ಕಳಪೆ ಪ್ರದರ್ಶನ ಎಂದು ಗುರುತಿಸಿದ್ದಾರೆ. ಖೈದಿಯ ಬಟ್ಟೆ ಧರಿಸಿ ಜೈಲು ಪ್ರವೇಶಿಸಿದ ಶಮಂತ್ ಕೊಂಚ ಬೇಸರವಾಗಿದ್ದಾರೆ.

    ನಿಧಿ ಅವರಿಗೆ ನಾನು ಎಷ್ಟು ಸಹಾಯ ಮಾಡಿದೆ. ಅವರು ನನ್ನ ಕಳಪೆ ಎಂದಿದ್ದಾರೆ. ಒಳ್ಳೆತನಕ್ಕೆ ಬೆಲೆ ಇಲ್ಲ. ಹುಡುಗಿಯರು ಯಾಕೆ ಹೀಗೆ ಉಲ್ಟಾ ಹೊಡಿತಾರೆ? ಇಲ್ಲಿಂದ ಕಾಲು ಆಚೆ ಇಡುತ್ತಿದ್ದಂತೆ ನನ್ನಲ್ಲಿ ಎಷ್ಟು ಬದಲಾವಣೆ ಇರುತ್ತದೆ ನೋಡಿ. ನಾನು ಸೈಲೆಂಟ್ ಆಗಿ ಇದ್ದು ತಪ್ಪು ಮಾಡಿದೆ ಬಿಗ್‍ಬಾಸ್ ಎಂದು ಹೇಳಿದ್ದಾರೆ.

    ಕ್ಯಾಪ್ಟನ್ ಜವಾಬ್ದಾರಿಯಲ್ಲಿ ಶಮಂತ್ ಕೊಂಚ ಎಡವಿದಂತೆ ಕಾಣುತ್ತದೆ. ಮನೆಯ ಸದಸ್ಯರನ್ನು ನಿಭಾಯಿಸಿಕೊಂಡು, ಟಾಸ್ಕ್‍ನಲ್ಲಿ ಎಲ್ಲರೂ ಭಾಗವಹಿಸುತ್ತಿದ್ದಾರಾ? ಅವರ ಸಮಸ್ಯೆಗಳೆನು ಎಂಬುದನ್ನು ಕೇಳಿ ಸರಿದೂಗಿಸಿಕೊಂಡು ಹೋಗಬೇಕಿತ್ತು. ಆದರೆ ಮನೆಯವರ ದೃಷ್ಟಿಯಲ್ಲಿ ಅವರು ಕೊಂಚ ಎಡವಿದ್ದಾರೆ ಎಂದು ಅನ್ನುಸುತ್ತದೆ ಹೀಗಾಗಿ ಈವಾರದ ಕಳಪೆ ಹಣೆಪಟ್ಟಿಯನ್ನು ಧರಿಸಿ ಜೈಲುವಾಸ ಅನುಭವಿಸುತ್ತಿದ್ದಾರೆ.

    ಮೊದಲವಾರ ಧನುಶ್ರೀ ಎಲಿಮಿನೆಟ್ ಆಗಿ ಮನೆಯಿಂದ ಹೊರ ನಡೆದಿದ್ದರು. ಈ ವಾರ ಮನೆಯಿಂದ ಯಾರು ಹೋಗುತ್ತಾರೆ ಎನ್ನುವ ಕೂತುಹಲ ಎಲ್ಲರಲ್ಲಿದೆ. ವಾರದ ಕಟ್ಟೆಪಂಚಾಯ್ತಿಯಲ್ಲಿ ಸುದೀಪ್ ಇಂದು ಮನೆಯವರ ಬಳಿ ಯಾವೆಲ್ಲ ವಿಚಾರವಾಗಿ ಚರ್ಚೆಮಾಡಿ ಬುದ್ದಿವಾದ ಹೇಳಲಿದ್ದಾರೆ. ಯಾರು ಒಂಟಿ ಮನೆಯಿಂದ ಆಚೆ ಹೋಗಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಂದು ಸಿಗಲಿದೆ.