Tag: Bigg Boss Kannada

  • ಬಿಗ್‌ ಬಾಸ್ ಸೀಸನ್-12ಕ್ಕೆ ಕಿಚ್ಚ ಸುದೀಪ್ ಒಪ್ಪಿಕೊಂಡ್ರಾ?

    ಬಿಗ್‌ ಬಾಸ್ ಸೀಸನ್-12ಕ್ಕೆ ಕಿಚ್ಚ ಸುದೀಪ್ ಒಪ್ಪಿಕೊಂಡ್ರಾ?

    ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್‌ಬಾಸ್ (Bigg Boss Kannada) 11 ಸೀಸನ್‌ಗಳನ್ನ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಈ ಕಾರ್ಯಕ್ರಮದ ಏಕಮಾತ್ರ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಗುಡ್‌ಬೈ ಹೇಳಿದ್ರು. 11ನೇ ಸೀಸನ್ ನಡೆಯುತ್ತಿರುವಾಗಲೇ ಇದು ನಾನು ನಡೆಸಿಕೊಡುವ ಕೊನೆಯ ಸೀಸನ್ ಅಂತಾ ಅನೌನ್ಸ್ ಮಾಡಿದ್ದರು ಕಿಚ್ಚ ಸುದೀಪ್. ಕಿಚ್ಚನ ಈ ಮಾತು ಬಿಗ್‌ಬಾಸ್ ವೀಕ್ಷಕರಿಗೆ ಶಾಕ್ ನೀಡಿತ್ತು.

    ಬಿಗ್‌ಬಾಸ್ ಸೀಸನ್ 12 ಶುರುವಾಗೋದಕ್ಕೆ ಇನ್ನು 3-4 ತಿಂಗಳು ಬಾಕಿ ಇದೆ. ಹೀಗಿರೋವಾಗ ಕಿಚ್ಚ ಸುದೀಪ್ ಅವರ ಮನಸ್ಸನ್ನ ಆ ವಾಹಿನಿ ಒಲಿಸುವುದಕ್ಕೆ ಪ್ರಯತ್ನ ಮಾಡಿದೆ ಎನ್ನಲಾಗುತ್ತಿದೆ. ಜೊತೆಗೆ ಈ ಬಾರಿಯ ಬಿಗ್‌ಬಾಸ್ ಶೋ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿಯನ್ನ ಕರೆಯಲಾಗಿದೆ. ಇದೇ ಜೂನ್ 30ರಂದು ಈ ಬಾರಿಯ ಬಿಗ್‌ಬಾಸ್ ರಿಯಾಲಿಟಿ ಶೋ ಬಗ್ಗೆ ಮಾಹಿತಿ ನೀಡಲು ಆಯೋಜಕರು ಹಾಗೂ ಕಲರ್ಸ್‌ ತಂಡ ಸಜ್ಜಾಗಿದೆ. ಇದನ್ನೂ ಓದಿ: ರಶ್ಮಿಕಾರನ್ನೇ ಫಾಲೋ ಮಾಡ್ತಿದ್ದಾರಾ ‘ಕಿಸ್ಸಿಕ್’ ಬೆಡಗಿ – 7 ಕೋಟಿಗೆ ಸಂಭಾವನೆ ಹೆಚ್ಚಿಸಿಕೊಂಡ ಶ್ರೀಲೀಲಾ!

    ಬಿಗ್‌ಬಾಸ್ ಸೀಸನ್-12ರ ನಿರೂಪಣೆಯನ್ನ ಯಾರು ಮಾಡುತ್ತಾರೆ ಅನ್ನೋದು ಈಗಲೂ ಕೂಡಾ ಪ್ರಶ್ನೆಯಾಗಿ ಕಾಡುತ್ತಿದೆ. ಈ ವಿಚಾರವಾಗಿ ನಟ ಸುದೀಪ್ ಅವರನ್ನ ರಿಯಾಲಿಟಿ ಶೋಗೆ ನಿರೂಪಕರಾಗಿ ಮುಂದುವರೆಯುವಂತೆ ಮನವೊಲಿಸುವ ಪ್ರಯತ್ನ ತೆರೆಮರೆಯಲ್ಲಿ ನಡೆದಿದೆಯಂತೆ. ಅಲ್ಲದೇ ಕಿಚ್ಚ ಸುದೀಪ್ ಅವರು ಕೂಡಾ ಕೆಲವು ಷರತ್ತುಗಳನ್ನ ಹಾಕಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಜೂನ್ 30 ಸೋಮವಾರದಂದು ನಡೆಯುವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇದನ್ನೂ ಓದಿ: ವೃದ್ಧಾಪ್ಯ ತಡೆಯುವ ಚಿಕಿತ್ಸೆಯೇ ಶೆಫಾಲಿ ಜರಿವಾಲಾಗೆ ಮುಳುವಾಯ್ತಾ ?

    ಅಂದಹಾಗೆ ಈ ಬಾರಿಯ ರಿಯಾಲಿಟಿ ಶೋ ಯಾವ ರೀತಿಯಾದ ಕಾನ್ಸೆಪ್ಟ್‌ನಲ್ಲಿ ಮೂಡಿ ಬರಲಿದೆ..? ಯಾವ ರೀತಿಯಾದ ಸ್ಪರ್ಧಿಗಳಿಗೆ ಅವಕಾಶ ಸಿಗಲಿದೆ ಅನ್ನೋ ಬಗ್ಗೆ ಮಾಹಿತಿ ಕೂಡಾ ಹೊರಬೀಳಲಿದೆ. ಅಲ್ಲದೇ ಕೆಲವರ ಹೆಸರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಈ ಬಗ್ಗೆ ಕೂಡಾ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಗಳಿವೆ.  ಇದನ್ನೂ ಓದಿ: ಹನಿಮೂನ್ ಟ್ರಿಪ್‌ನಲ್ಲಿ ವೈಷ್ಣವಿ ಮಸ್ತ್ ಡ್ಯಾನ್ಸ್..ಫುಲ್ ಮಸ್ತಿ!

  • ನಟ ನಾಗಾರ್ಜುನ್ ರೀತಿಯಲ್ಲೇ ಸುದೀಪ್ ವಾಪಸ್ಸು

    ನಟ ನಾಗಾರ್ಜುನ್ ರೀತಿಯಲ್ಲೇ ಸುದೀಪ್ ವಾಪಸ್ಸು

    ಬಿಗ್ ಬಾಸ್ (Bigg Boss) ನಿರೂಪಕರ ಬಗ್ಗೆ ಕನ್ನಡ ಮತ್ತು ತೆಲುಗಿನಲ್ಲಿ ಹೆಚ್ಚು ಚರ್ಚೆ ಮಾಡಲಾಗುತ್ತಿತ್ತು. ತೆಲುಗು ಮತ್ತು ಕನ್ನಡ ಬಿಗ್ ಬಾಸ್ ಶೋಗೆ ಈ ಬಾರಿ ಹೋಸ್ಟ್ ಯಾರು ಮಾಡ್ತಾರೆ ಅನ್ನೋ ಪ್ರಶ್ನೆ ಮೂಡಿತ್ತು. ಈ ಗೊಂದಲಕ್ಕೆ ತೆಲುಗಿನಲ್ಲಿ ತೆರೆ ಬಿದ್ದಿದೆ. ಕನ್ನಡದಲ್ಲಿ ಇನ್ನೂ ಬಾಕಿ ಇದೆ. ಈ ವರ್ಷದಿಂದ ಬಿಗ್ ಬಾಸ್ ನಿರೂಪಿಸಲ್ಲ ಅಂತ ಸುದೀಪ್ (Kichcha Sudeep) ಹೇಳಿದ್ದಾರೆ. ಹಾಗಾಗಿ ಗೊಂದಲ ಹಾಗೆಯೇ ಮುಂದುವರೆದಿದೆ.

    ಕೆಲ ವರ್ಷಗಳಿಂದ ತೆಲುಗು ಬಿಗ್ ಬಾಸ್ ಅನ್ನು ನಾಗಾರ್ಜುನ್ (Nagarjuna) ನಡೆಸಿಕೊಡುತ್ತಿದ್ದರು. ಈ ಸೀಸನ್ ನಲ್ಲಿ ನಾಗಾರ್ಜುನ್ ಇರುವುದಿಲ್ಲ ಎಂದು ಹೇಳಲಾಗಿತ್ತು. ವಿಜಯ್ ದೇವರಕೊಂಡ ಅಥವಾ ಬಾಲಯ್ಯ ಶೋ ನಡೆಸಿಕೊಡಲಿದ್ದಾರೆ ಅಂತಾನೂ ಸುದ್ದಿ ಆಗಿತ್ತು. ಇದೀಗ ಬಿಗ್ ಬಾಸ್ ಪ್ರೋಮೋ ರಿಲೀಸ್ ಆಗಿದ್ದು, ನಾಗಾರ್ಜುನ್ ಅವರೇ ಪ್ರೋಮೋದಲ್ಲಿದ್ದಾರೆ. ಅಲ್ಲಿಗೆ ತೆಲುಗು ಶೋ ನಿರೂಪಣೆಯನ್ನು ನಾಗಾರ್ಜುನ್ ಮಾಡೋದು ಪಕ್ಕಾ ಆಗಿದೆ. ಇದನ್ನೂ ಓದಿ: ಮಾದಕ ಲುಕ್‌ನಲ್ಲಿ ಸಪ್ತಮಿ ಶೈನ್‌ – ಅದೆಷ್ಟು ಅಂತ ನಮ್ಮ ಎದೆಗೆ ಕೊಳ್ಳಿ ಇಡ್ತೀರಿ ಅಂದ್ರು ಪಡ್ಡೆ ಹೈಕ್ಳು

    ಕನ್ನಡದಲ್ಲೂ ಸುದೀಪ್ ಜಾಗಕ್ಕೆ ಯಾರನ್ನು ತರಬೇಕು ಅಂತ ತಲೆಕೆಡಿಸಿಕೊಂಡು ಕೂತಿದೆ ಕಲರ್ಸ್ ವಾಹಿನಿ. ಈ ನಡುವೆ ವಾಹಿನಿಯ ಮುಖ್ಯಸ್ಥರು ಸುದೀಪ್ ಅವರನ್ನು ಭೇಟಿ ಮಾಡಿದ ವಿಚಾರವೂ ಹರಿದಾಡುತ್ತಿದೆ. ವಾಹಿನಿಗೆ ಕೆಲವು ಕಂಡಿಷನ್ ಅನ್ನು ಸುದೀಪ್ ಹಾಕಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ. ಸುದೀಪ್ ಕಂಡಿಷನ್ ಗೆ ಚಾನೆಲ್ ಕೂಡ ಒಪ್ಪುವ ಸಾಧ್ಯತೆ ಇದೆಯಂತೆ. ಹಾಗಾಗಿ ಕನ್ನಡದಲ್ಲಿ ಸುದೀಪ್ ಅವರೇ ಮುಂದುವರೆಯಲಿದ್ದಾರೆ ಅನ್ನೋದು ಆಪ್ತರ ಅನಿಸಿಕೆ. ಇದನ್ನೂ ಓದಿ: ಜೂ.ಎನ್‌ಟಿಆರ್ ಕೈಯಲ್ಲಿ `ಗಾಡ್ ಆಫ್ ವಾರ್ ಮುರುಗ’ ಬುಕ್ ಯಾಕೆ?

  • ಶಾರ್ಟ್‌ ಡ್ರೆಸ್‌ ಧರಿಸಿ ನಿವೇದಿತಾ ಹೊಸ ರೀಲ್ಸ್-‌ ಕಾಲೆಳೆದ ನೆಟ್ಟಿಗರು

    ಶಾರ್ಟ್‌ ಡ್ರೆಸ್‌ ಧರಿಸಿ ನಿವೇದಿತಾ ಹೊಸ ರೀಲ್ಸ್-‌ ಕಾಲೆಳೆದ ನೆಟ್ಟಿಗರು

    ‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಅವರು ಡಿವೋರ್ಸ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಬೋಲ್ಡ್ ಮತ್ತು ಆ್ಯಕ್ಟೀವ್ ಆಗಿದ್ದಾರೆ. ಇದೀಗ ಶಾರ್ಟ್ ಡ್ರೆಸ್ ಧರಿಸಿ ಸಿನಿಮಾ ಹಾಡೋದಕ್ಕೆ ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ. ಇದನ್ನೂ ಓದಿ:ಭಾವಿ ಪತಿ ಜೊತೆ ವೈಷ್ಣವಿ ರೊಮ್ಯಾಂಟಿಕ್ ಡಿನ್ನರ್ ಡೇಟ್- ಸೂಪರ್‌ ಜೋಡಿ ಎಂದ ಫ್ಯಾನ್ಸ್

    ದಿನದಿಂದ ದಿನಕ್ಕೆ ನಿವೇದಿತಾ ಬೋಲ್ಡ್ ಅವತಾರ ತಾಳುತ್ತಿದ್ದಾರೆ. ಸದಾ ಒಂದಲ್ಲಾ ಒಂದು ರೀಲ್ಸ್ ಹಾಗೂ ಫೋಟೋಶೂಟ್ ಮೂಲಕ ಅವರು ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತಾರೆ. ಈಗ ಶಾರ್ಟ್ ಆಗಿರೋ ಬಟ್ಟೆ ಧರಿಸಿ ರೊಮ್ಯಾಂಟಿಕ್ ಹಾಡೋದಕ್ಕೆ ಹೆಜ್ಜೆ ಹಾಕಿದ್ದಾರೆ.

    ‘ಕೆಂಪೇಗೌಡ’ ಸಿನಿಮಾದ ‘ತರ ತರ ಹಿಡಿಸಿದೆ ಮನಸ್ಸಿಗೆ ನೀನು’ ಎಂಬ ಹಾಡು ಮಸ್ತ್ ಆಗಿ ಕುಣಿದಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಮತ್ತೆ ಲವ್ ಆಯ್ತಾ ಎಂದೆಲ್ಲಾ ನಟಿಗೆ ಕಾಲೆಳೆದಿದ್ದಾರೆ. ಇದನ್ನೂ ಓದಿ:18ನೇ ಆ್ಯನಿವರ್ಸರಿ ಸಂಭ್ರಮ: ಪತಿಯೊಂದಿಗಿನ ಫೋಟೋ ಹಂಚಿಕೊಂಡ ಐಶ್ವರ್ಯಾ ರೈ

    ಮಾಜಿ ಪತಿ ಚಂದನ್ ಶೆಟ್ಟಿ (Chandan Shetty) ಜೊತೆಗಿನ ‘ಮುದ್ದು ರಾಕ್ಷಸಿ’ (Muddu Rakshasi) ಸಿನಿಮಾವನ್ನು ನಿವೇದಿತಾ ಶೂಟಿಂಗ್ ಮುಗಿಸಿ ಕೊಟ್ಟಿದ್ದಾರೆ. ಸದ್ಯದಲ್ಲೇ ಚಿತ್ರತಂಡ ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ.

  • ಸ್ನೇಹಿತರ ಸಂಬಂಧ ಗಂಡ-ಹೆಂಡತಿ ಜಗಳ ಇದ್ದಂತೆ, ನಮ್ಮಿಬ್ಬರ ಮಧ್ಯೆ ಬ್ರೇಕಪ್ ಏನಿಲ್ಲ: ವಿನಯ್‌ ಗೌಡ

    ಸ್ನೇಹಿತರ ಸಂಬಂಧ ಗಂಡ-ಹೆಂಡತಿ ಜಗಳ ಇದ್ದಂತೆ, ನಮ್ಮಿಬ್ಬರ ಮಧ್ಯೆ ಬ್ರೇಕಪ್ ಏನಿಲ್ಲ: ವಿನಯ್‌ ಗೌಡ

    – ರಜತ್‌ ಜೊತೆಗಿನ ಸ್ನೇಹದಲ್ಲಿ ಬಿರುಕು ವದಂತಿಗೆ ವಿನಯ್‌ ಸ್ಪಷನೆ

    ಬೆಂಗಳೂರು: ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ಪ್ರಕರಣ ಈಗ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಾದ ವಿನಯ್‌ ಗೌಡ – ರಜತ್‌ ಕಿಶನ್‌ (Rajath Kishan) ಸ್ನೇಹದಲ್ಲಿ ಬಿರುಕು ಮೂಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಜತ್‌ ಕಿಶನ್‌ ಕೂಡ ನನ್ನ ಫ್ರೆಂಡ್‌ಶಿಪ್‌ ಬೇಡ ಅಂದ್ರೆ ನೇರವಾಗಿ ಹೇಳಿಬಿಡಲಿ ಎಂದೇ ಹೇಳಿದ್ದರು. ಇದೀಗ ಇಬ್ಬರ ಸ್ನೇಹದ ಬಿರುಕಿನ ಬಗ್ಗೆ ವಿನಯ್‌ ಗೌಡ (Vinay Gowda) ಪ್ರತಿಕ್ರಿಯೆ ನೀಡಿದ್ದಾರೆ.

    ರಜತ್ ಜೊತೆ ನನ್ನ ಫ್ರೆಂಡ್ ಶಿಪ್ ಕಟ್ ಆಗಿಲ್ಲ. ಸಣ್ಣ ಸಣ್ಣ ವಿಷಯಕ್ಕೆ ಫ್ರೆಂಡ್ ಶಿಪ್ ಕಟ್ ಮಾಡ್ಕೊಳ್ಳೋವನು ನಾನಲ್ಲ. ಅವನು ನನ್ನನ್ನ ಎಲ್ಲೂ ಬಿಟ್ಟುಕೊಟ್ಟಿಲ್ಲ. ನಾನೂ ಬಿಟ್ಟು ಕೊಡಲ್ಲ, ಸ್ನೇಹಿತರ ಸಂಬಂಧ ಗಂಡ ಹೆಂಡತಿ ಜಗಳ ಇದ್ದಂತೆ, ಎರಡ್ಮೂರು ದಿನ ಇರುಸು-ಮುರುಸು ಇರುತ್ತೆ, ಹಾಗೇ ಬಿಟ್ರೆ ಅದಾಗೇ ಸರಿ ಹೋಗುತ್ತೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಮಚ್ಚು ಹಿಡಿದು ರೀಲ್ಸ್ ಪ್ರಕರಣ; ವಿನಯ್‌ ಗೌಡ – ರಜತ್‌ ನಡುವೆ ಬಿರುಕು?

    Rajath Kishan 2

    ನಮ್ಮಿಬ್ಬರ ಮಧ್ಯೆ ಬ್ರೇಕಪ್ ಏನಿಲ್ಲ, ಅವನಿಗಿಂತ ನಾನು ವಯಸ್ಸಿನಲ್ಲಿ ದೊಡ್ಡವನು. ಅವನು ಬ್ಲೇಮ್ ಮಾಡ್ದ ಅಂತ ನಾನ್ ಮಾಡಲ್ಲ. ಅವನು ಕರೆದ ಅಂತ ನಾನ್ ಒಪ್ಕೊಂಡೆ ಅದು ತಪ್ಪಾಯ್ತು ಅಂದೆ ಅಷ್ಟೇ. ನಾನು ಕೂಡ ಅವನು ಬಲವಂತವಾಗಿ ಕರೆದ ಅಂತ ಹೇಳಿಲ್ಲ. ಜೈಲಿಂದ ಬಂದ ಬಳಿಕ ನಾವ್ ಒಟ್ಟಿಗೆ ಕಾಣಿಸ್ಕೊಂಡಿಲ್ಲ ನಿಜ, ಅನಿವಾರ್ಯತೆಯಿಂದ ಹೋಗಿಲ್ಲ. ರಜತ್ ಬಂದ್ರೆ ನಾನ್ ಬರಲ್ಲ ಅಂತ ಸುದ್ದಿಯಾಗೋದು ಬೇಡ. ನಾನು ಪ್ರೊಗ್ರಾಮ್‌ನಲ್ಲಿ ಜಡ್ಜ್ ಆಗಿರೋದ್ರಿಂದ ಅನಿವಾರ್ಯತೆ ಇದ್ದಾಗ ಮಾತ್ರಾ ಹೋಗ್ತಿದ್ದೆ. ಮುಂದಿನ ವಾರ ಸಹ ನನಗೆ ಹೋಗೋಕಾಗಲ್ಲ. ಹಾಗೆಂದ ಮಾತ್ರಕ್ಕೆ ನನ್ನ ರಜತ್ ಫ್ರೆಂಡ್ ಶಿಪ್ ಕಟ್ ಆಗಿಲ್ಲ. ಕಂಟಿನ್ಯೂ ಆಗುತ್ತೆ. 18 ಸೆಕೆಂಡ್ ರೀಲ್ಸ್ ಗೋಸ್ಕರ 18 ವರ್ಷದ್ ಫ್ರೆಂಡ್ ಶಿಪ್ ಕಟ್ ಮಾಡ್ಕೊಳ್ಳಲ್ಲ ಅಂತ ವಿನಯ್‌ ಗೌಡ ಹೇಳಿದ್ದಾರೆ. ಇದನ್ನೂ ಓದಿ: ಸಂಬಂಧಗಳು ಇಂದು ಗಟ್ಟಿಯಾಗಿ ಉಳಿದಿದೆ ಅಂದ್ರೆ ಅಪ್ಪಾಜಿ ಸಿನಿಮಾಗಳೇ ಕಾರಣ: ಶಿವಣ್ಣ

    Rajath Kishan

    ರಜತ್‌ ಕಿಶನ್‌ ಹೇಳಿದ್ದೇನು?
    ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದ ರಜತ್‌ ಕಿಶನ್‌, ಕಳೆದ 11 ವರ್ಷಗಳಿಂದ ನಾನು ವಿನಯ್, ಸ್ನೇಹಿತರು. ಬಿಗ್ ಬಾಸ್‌ಗೆ ಹೋಗೋಕು ಮುಂಚೆ ಪರಿಚಯ ಇತ್ತು. ಆದರೆ ರೀಲ್ಸ್ ಮಾಡಿ ಜೈಲಿಗೆ ಹೋಗಿ ಬಂದ ನಂತರ ಅವ‌ನೇ ಮಾಧ್ಯಮಗಳಿಗೆ ಮಾತಾಡೋದು ಬೇಡ ಅಂದ. ನಂತರ ಅವನೇ ಮೊದಲು ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾನೆ. ಆಮೇಲೆ ನನ್ನಿಂದಲೇ ಇದೆಲ್ಲಾ ಆಯ್ತು ಅನ್ನೋ ತರ ನಡ್ಕೋತಿದ್ದಾನೆ. ಕಳೆದ ಒಂದು ವಾರದಿಂದ ಅವನ ಅಕೌಂಟ್‌ನಲ್ಲಿ ಕೆಲವರು ರಜತ್ ಫ್ರೆಂಡ್‌ಶಿಪ್‌ ಕಟ್ ಮಾಡು ಅಂತಾ ವಿನಯ್‌ಗೆ ಕಾಮೆಂಟ್ ಮಾಡ್ತಿದ್ದಾರೆ. ಆ ಕಾಮೆಂಟ್‌ಗಳಿಗೆ ವಿನಯ್ ಕೂಡ ಲೈಕ್ಸ್ ಕೊಡ್ತಿದ್ದಾನೆ. ಇದು ಸರಿಯಿಲ್ಲ, ನನ್ನ ಫ್ರೆಂಡ್‌ಶಿಪ್‌ ಬೇಡ ಅಂದ್ರೆ ನೇರವಾಗಿ ಹೇಳಿಬಿಡಲಿ. ಅದು ಬಿಟ್ಟು ಈ ರೀತಿ ಮಾಡೋದು ಸರಿಯಿಲ್ಲ ಅಂತ ವಿನಯ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸುಶ್ಮಿತಾ ಸೇನ್ ಮಾಜಿ ಅತ್ತಿಗೆಗೆ ಆರ್ಥಿಕ ಸಂಕಷ್ಟ- ಆನ್‌ಲೈನ್‌ನಲ್ಲಿ ನಟಿ ಸೀರೆ ಮಾರಾಟ

  • ಮಚ್ಚು ಹಿಡಿದು ರೀಲ್ಸ್ ಪ್ರಕರಣ; ವಿನಯ್‌ ಗೌಡ – ರಜತ್‌ ನಡುವೆ ಬಿರುಕು?

    ಮಚ್ಚು ಹಿಡಿದು ರೀಲ್ಸ್ ಪ್ರಕರಣ; ವಿನಯ್‌ ಗೌಡ – ರಜತ್‌ ನಡುವೆ ಬಿರುಕು?

    – ವಿನಯ್‌ಗೆ ನನ್ನ ಫ್ರೆಂಡ್‌ಶಿಪ್‌ ಬೇಡ ಅಂದ್ರೆ ನೇರವಾಗಿ ಹೇಳಿಬಿಡಲಿ ಎಂದ ರಜತ್‌

    ಬೆಂಗಳೂರು: ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ಪ್ರಕರಣ ಈಗ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಾದ ವಿನಯ್‌ ಗೌಡ – ರಜತ್‌ ಕಿಶನ್‌ (Rajath Kishan) ಸ್ನೇಹದಲ್ಲಿ ಬಿರುಕು ಮೂಡಿಸಿದೆ ಎಂದು ಹೇಳಲಾಗುತ್ತಿದೆ.

    ಹೌದು. ಬಿಗ್ ಬಾಸ್ (Bigg Boss Kannada) ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ (Vinay Gowda) ಮಚ್ಚು ಹಿಡಿದು ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು. ಪೋಸ್ಟ್ ಗಮನಿಸಿದ್ದ ಬಸವೇಶ್ವರ ನಗರ ಠಾಣೆ ಪೊಲೀಸರು ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧನ ಕೂಡ ಮಾಡಿದ್ರು. ನಂತರ ಪರಪ್ಪನ ಅಗ್ರಹಾರ ಜೈಲಿಗೂ ಕಳುಹಿಸಲಾಗಿತ್ತು. ಆ ನಂತರ ವಿನಯ್ ವಿಡಿಯೋ ಮಾಡಿ ರೀಲ್ಸ್ ಮಾಡಿದ್ದು ತಪ್ಪು, ಇನ್ಮುಂದೆ ಜೀವನದಲ್ಲಿ ಯಾವತ್ತೂ ರೀಲ್ಸ್ ಮಾಡಲ್ಲ ಅಂತಾ ಹೇಳಿಕೆ ಕೂಡ ಕೊಟ್ಟಿದ್ರು. ಆದ್ರೆ ಇಲ್ಲಿವರೆಗೂ ರಜತ್ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದನ್ನೂ ಓದಿ: ಒಬಿಸಿ ಮೀಸಲಾತಿ ಪ್ರಮಾಣವನ್ನು 32% ರಿಂದ 51%ಕ್ಕೆ ಏರಿಸಿ – ಆಯೋಗದ ಶಿಫಾರಸು ಏನು? ಯಾವ ಜಾತಿಗೆ ಎಷ್ಟು ಮೀಸಲಾತಿ ಏರಿಕೆ? 

    ಇದೇ ಮೊದಲ ಬಾರಿಗೆ ʻಪಬ್ಲಿಕ್ ಟಿವಿʼಯೊಂದಿಗೆ ರಜತ್ ರೀಲ್ಸ್ ಮಾಡಿದ್ದು ಹೇಗೆ ಏನೆಲ್ಲಾ ಆಯ್ತು ಅನ್ನೋ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಅಕ್ಷಯ್ ಸ್ಟುಡಿಯೋದಲ್ಲಿ ಖಾಸಗಿ ಕಾರ್ಯಕ್ರಮ ಇತ್ತು. ಕಾರ್ಯಕ್ರಮ ಮುಗಿಸಿ ಹೊರಗೆ ಬಂದ ವೇಳೆ ನಾನೇ ರೀಲ್ಸ್ ಮಾಡೋಣ ಅಂತ ವಿನಯ್‌ಗೆ ಹೇಳಿದ್ದೆ. ಅಲ್ಲೇ ಸೆಟ್‌ನಲ್ಲಿದ್ದ ಫೈಬರ್ ಮಚ್ಚು ತಗೊಂಡು ರೀಲ್ಸ್ ಮಾಡಿ ಇಬ್ಬರು ಇನ್‌ಸ್ಟಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ವಿ. ನಾವು ಫೈಬರ್ ಮಚ್ಚು ಬಳಸಿ ರೀಲ್ಸ್ ಮಾಡಿದ್ದು, ಆಸಲಿ ಮಚ್ಚು‌ ಬಳಸಿಲ್ಲ. ಮಚ್ಚು ಹಿಡಿದು ರೀಲ್ಸ್ ಮಾಡೋದು ತಪ್ಪು ಅಂತ ಗೊತ್ತಿರಲಿಲ್ಲ, ಯಾರು ಕೂಡ ಮುಂದೆ ಈ ರೀತಿ ಮಾಡಬೇಡಿ ಅಂತ ಮನವಿ ಕೂಡ ಮಾಡಿದ್ದಾರೆ. ಇದನ್ನೂ ಓದಿ: ದೇಶದ ಇತಿಹಾಸದಲ್ಲಿ ಮೊದಲು; ರಾಜ್ಯಪಾಲರು-ರಾಷ್ಟ್ರಪತಿಗಳ ಸಮ್ಮತಿಯಿಲ್ಲದೆ 10 ಕಾಯ್ದೆಗಳನ್ನ ಜಾರಿಗೊಳಿಸಿದ ತ.ನಾಡು ಸರ್ಕಾರ

    ವಿನಯ್ ಬಗ್ಗೆ ಅಸಮಾಧಾನ:
    ಮುಂದುವರಿದು ಮಾತನಾಡಿದ ರಜತ್, ಕಳೆದ 11 ವರ್ಷಗಳಿಂದ ನಾನು ವಿನಯ್, ಸ್ನೇಹಿತರು. ಬಿಗ್ ಬಾಸ್‌ಗೆ ಹೋಗೋಕು ಮುಂಚೆ ಪರಿಚಯ ಇತ್ತು. ಆದರೆ ರೀಲ್ಸ್ ಮಾಡಿ ಜೈಲಿಗೆ ಹೋಗಿ ಬಂದ ನಂತರ ಅವ‌ನೇ ಮಾಧ್ಯಮಗಳಿಗೆ ಮಾತಾಡೋದು ಬೇಡ ಅಂದ. ನಂತರ ಅವನೇ ಮೊದಲು ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾನೆ. ಆಮೇಲೆ ನನ್ನಿಂದಲೇ ಇದೆಲ್ಲಾ ಆಯ್ತು ಅನ್ನೋ ತರ ನಡ್ಕೋತಿದ್ದಾನೆ. ಕಳೆದ ಒಂದು ವಾರದಿಂದ ಅವನ ಅಕೌಂಟ್‌ನಲ್ಲಿ ಕೆಲವರು ರಜತ್ ಫ್ರೆಂಡ್‌ಶಿಪ್‌ ಕಟ್ ಮಾಡು ಅಂತಾ ವಿನಯ್‌ಗೆ ಕಾಮೆಂಟ್ ಮಾಡ್ತಿದ್ದಾರೆ. ಆ ಕಾಮೆಂಟ್‌ಗಳಿಗೆ ವಿನಯ್ ಕೂಡ ಲೈಕ್ಸ್ ಕೊಡ್ತಿದ್ದಾನೆ. ಇದು ಸರಿಯಿಲ್ಲ, ನನ್ನ ಫ್ರೆಂಡ್‌ಶಿಪ್‌ ಬೇಡ ಅಂದ್ರೆ ನೇರವಾಗಿ ಹೇಳಿಬಿಡಲಿ. ಅದು ಬಿಟ್ಟು ಈ ರೀತಿ ಮಾಡೋದು ಸರಿಯಿಲ್ಲ ಅಂತ ವಿನಯ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಗೆಳತಿಯನ್ನು ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟು ಹಾಸ್ಟೆಲ್‌ಗೆ ತಂದು ಸಿಕ್ಕಿಬಿದ್ದ ಯುವಕ! 

  • ಅದ್ಧೂರಿಯಾಗಿ 2ನೇ ಮದುವೆಯಾದ ಚೈತ್ರಾ ವಾಸುದೇವನ್

    ಅದ್ಧೂರಿಯಾಗಿ 2ನೇ ಮದುವೆಯಾದ ಚೈತ್ರಾ ವಾಸುದೇವನ್

    ‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ವಾಸುದೇವನ್ (Chaitra Vasudevan) ಅದ್ಧೂರಿಯಾಗಿ 2ನೇ ಮದುವೆಯಾಗಿದ್ದಾರೆ. ಉದ್ಯಮಿ ಜಗದೀಪ್ ಜೊತೆ ನಿರೂಪಕಿ ಹಸೆಮಣೆ ಏರಿದ್ದಾರೆ. ಇದನ್ನೂ ಓದಿ:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಚಾಲನೆ

    ಬೆಂಗಳೂರಿನ ಅರಮನೆ ಮೈದಾನದಲ್ಲಿ ಚೈತ್ರಾ ವಾಸುದೇವನ್ ಮದುವೆ ಜರುಗಿದೆ. ಈ ಮದುವೆಗೆ ‘ರಾಬರ್ಟ್’ ನಿರ್ಮಾಪಕ ಉಮಾಪತಿ ಸೇರಿದಂತೆ ಅನೇಕರು ಭಾಗಿಯಾಗಿ ಈ ಜೋಡಿಗೆ ಶುಭಕೋರಿದ್ದಾರೆ.

    ಇನ್ನೂ ಉದ್ಯಮಿ ಜಗದೀಪ್ ಪ್ರೇಮ ನಿವೇದನೆಗೆ ಸಮ್ಮತಿಸಿ ಗುರುಹಿರಿಯರ ಒಪ್ಪಿಗೆಯ ಮೇರೆಗೆ ಈ ಮದುವೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಈ ಜೋಡಿ ಪ್ಯಾರಿಸ್‌ಗೆ ಹೋಗಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದರು.

    ಇನ್ನೂ ಈ ಹಿಂದೆ ಸತ್ಯ ನಾಯ್ಡು ಎಂಬುವರ ಜೊತೆ ಚೈತ್ರಾ ಮದುವೆಯಾಗಿತ್ತು. ಕೆಲ ಮನಸ್ತಾಪಗಳಿಂದ 2023ರಲ್ಲಿ ಇಬ್ಬರೂ ಡಿವೋರ್ಸ್ ಪಡೆದರು.

  • BBK 11 Finale| 50 ಲಕ್ಷದಲ್ಲಿ ಹನುಮಂತಗೆ ಎಷ್ಟು ಹಣ ಸಿಗುತ್ತೆ?

    BBK 11 Finale| 50 ಲಕ್ಷದಲ್ಲಿ ಹನುಮಂತಗೆ ಎಷ್ಟು ಹಣ ಸಿಗುತ್ತೆ?

    ಬೆಂಗಳೂರು: ಬಿಗ್‌ಬಾಸ್‌ ಸೀಸನ್‌ (Bigg Boss Kannada 11) ಚಾಂಪಿಯನ್‌ ಆಗಿ ಹೊರ ಹೊಮ್ಮಿದ ಹನುಮಂತ (Hanumantha) ಅವರಿಗೆ 50 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. 50 ಲಕ್ಷ ರೂ. ಬಹುಮಾನ ಸಿಕ್ಕಿದರೂ ಅವರಿಗೆ ಪೂರ್ಣ ಪ್ರಮಾಣದ ಹಣ ಕೈ ಸೇರುವುದಿಲ್ಲ.

    ನಗದು ಬಹುಮಾನ ಮೊತ್ತಕ್ಕೆ 30% ಗಿಫ್ಟ್‌ ಟ್ಯಾಕ್ಸ್‌ (Gift Tax) ವಿಧಿಸಲಾಗುತ್ತದೆ. ಹೀಗಾಗಿ ಸಿಗುವ ಬಹುಮಾನದಲ್ಲಿ 30% ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಈ ಹಣವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ.

    1961ರ ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ, ಗೇಮ್ ಶೋಗಳು, ಲಾಟರಿಗಳು ಮತ್ತು ಅಂತಹುದೇ ಚಟುವಟಿಕೆಗಳಿಂದ ಗೆದ್ದ ಹಣವನ್ನು ಇತರ ಮೂಲಗಳಿಂದ ಬಂದ ಆದಾಯ ಎಂದು ವರ್ಗೀಕರಿಸಲಾಗಿದೆ.  ಇದನ್ನೂ ಓದಿ: BBK 11| ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲ್ತಿದ್ರು: ರಜತ್ ಕಿಶನ್

    ಕಾಯ್ದೆಯ ಸೆಕ್ಷನ್ 194B ಪ್ರಕಾರ ಈ ಗೆಲುವಿನ ಮೇಲೆ 30% ರಷ್ಟು ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ವಿಜೇತರು 1% ರಷ್ಟು ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಸೆಸ್ ಅನ್ನು ಸಹ ಪಾವತಿಸಬೇಕಾಗುತ್ತದೆ. ಇದರಿಂದ ಒಟ್ಟು ತೆರಿಗೆ ದರ 31.2% ಏರಿಕೆಯಾಗುತ್ತದೆ. ಇದರ ಜೊತೆ ಬಹುಮಾನದ ಹಣವು 10 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಹೆಚ್ಚುವರಿಯಾಗಿ 10% ಶುಲ್ಕ ಅನ್ವಯಿಸಲಾಗುತ್ತದೆ.

    ಎಷ್ಟು ಸಿಗಬಹುದು?
    ಈ ಮೊದಲು ಬೇರೆ ಬೇರೆ ಬಿಗ್‌ ಬಾಸ್‌ ಶೋ ವಿಜೇತರಿಗೆ ನಗದು ಬಹುಮಾನ ಮೌಲ್ಯ 50 ಲಕ್ಷ ರೂ., 1 ಕೋಟಿ ರೂ. ಇರುತ್ತಿತ್ತು. ಆದರೆ ಈಗ ಎಲ್ಲಾ ಬಿಗ್‌ ಬಾಸ್‌ ಶೋ ವಿಜೇತರಿಗೆ 50 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ.

    ಹನುಮಂತ ಅವರಿಗೆ ತೆರಿಗೆ, ಸೆಸ್‌ ಎಲ್ಲಾ ಕಡಿತಗೊಂಡು 34,40,000 ರೂ. ಸಿಗಬಹುದು. ಬಹುಮಾನದಲ್ಲಿ 15,60,000 ರೂ. ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹೋಗುತ್ತದೆ.  ಇದನ್ನೂ ಓದಿ: ದೇವರಾಣೆ ಗೆಲ್ತೀನಿ ಅಂತ ಬಂದಿರಲಿಲ್ಲ, ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ: ಹನುಮಂತ

     

    ಬಿಗ್‌ ಬಾಸ್‌ ಶೋದಲ್ಲಿ ಬಹುಮಾನ ಮುಖ್ಯವಲ್ಲ. ಭಾಗವಹಿಸುವುದೇ ಮುಖ್ಯ ಆಗಿರುತ್ತದೆ. ಯಾಕೆಂದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ದೊಡ್ಡ ಮಟ್ಟದ ಜನಪ್ರಿಯತೆ ಸಿಗುತ್ತದೆ. ಎಲ್ಲೂ ಹೋದರೂ ಬಿಗ್‌ ಬಾಸ್‌ ಸ್ಪರ್ಧಿ ಎಂದೇ ಕರೆದು ಗೌರವಿಸುತ್ತಾರೆ.

    ಮಲೆಯಾಳಂ ಬಿಗ್‌ಬಾಸ್‌ 6 ಕಳೆದ ವರ್ಷ ಮುಕ್ತಾಯಗೊಂಡಿತ್ತು. ದೈಹಿಕ ತರಬೇತುದಾರ ಜಿಂಟೋ ಅವರು ಚಾಂಪಿಯನ್‌ ಆಗಿ ಹೊರಹೊಮ್ಮಿ 50 ಲಕ್ಷ ರೂ. ನಗದು ಬಹುಮಾನ ಗೆದ್ದಿದ್ದರು. ಈ ಸಂದರ್ಭದಲ್ಲಿ ಬಹುಮಾನ ಪ್ರಾಯೋಜಿಸಿದ್ದ ಉದ್ಯಮಿ, ಕಾನ್ಫಿಡೆಂಟ್‌ ಗ್ರೂಪ್‌ ಮುಖ್ಯಸ್ಥ ಸಿಜೆ ರಾಯ್ ಅವರು ತೆರಿಗೆ ಕಡಿತದ ನಂತರ ಜಿಂಟೋ ಅವರಿಗೆ 34,40,000 ರೂ. ನೀಡಲಾಗಿದೆ ಎಂದು ತಿಳಿಸಿದ್ದರು.

  • BBK 11| ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲ್ತಿದ್ರು: ರಜತ್ ಕಿಶನ್

    BBK 11| ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲ್ತಿದ್ರು: ರಜತ್ ಕಿಶನ್

    ಬೆಂಗಳೂರು: ಹನುಮಂತು (Hanumantha) ಮುಂದೆ ಗಾಂಧೀಜಿ ನಿಂತಿದ್ದರು ಹನುಮಂತುನೇ ಗೆಲ್ಲುತ್ತಿದ್ದರು ಎಂದು ಬಿಗ್ ಬಾಸ್ ಸೀಸನ್ 11ರ (Bigg Boss 11) ಸೆಕೆಂಡ್ ರನ್ನರ್ ಅಪ್ ರಜತ್ ಕಿಶನ್ (Rajath Kishan) ಸಂತಸ ವ್ಯಕ್ತಪಡಿಸಿದರು.

    ಬಿಗ್ ಬಾಸ್ 11ರ ಗ್ರ್ಯಾಂಡ್ ಫಿನಾಲೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಗ್ ಬಾಸ್ ಜರ್ನಿ ಚೆನ್ನಾಗಿತ್ತು. ಶಾರ್ಟ್ ಟೈಂನಲ್ಲಿ ಇಷ್ಟೊಂದು ಪ್ರೀತಿ ವಿಶ್ವಾಸ ಸಿಕ್ಕಿರೋದು ಖುಷಿ ಇದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇವರಾಣೆ ಗೆಲ್ತೀನಿ ಅಂತ ಬಂದಿರಲಿಲ್ಲ, ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ: ಹನುಮಂತ

    ಇನ್ನು ಮಾಜಿ ಪ್ರೇಯಸಿ ಜೊತೆ ಪೋಟೋ ವೈರಲ್ ಮಾಡಿ ಟ್ರೋಲ್ ಪೇಜ್‌ಗಳು ಬೆದರಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಹೊರಗಡೆ ಬಂದಿದ್ದೀನಲ್ಲ, ನೋಡಿಕೊಳ್ಳುತ್ತೇನೆ ಬಿಡಿ ಎಂದರು. ಇದನ್ನೂ ಓದಿ: BBK 11: ಬಿಗ್‌ ಬಾಸ್‌ ಟ್ರೋಫಿ ಗೆದ್ದು ಸುದೀಪ್‌ ಕಾಲಿಗೆ ಬಿದ್ದ ಹನುಮಂತ

    ಬಿಗ್ ಬಾಸ್ ಸೀಸನ್ 11ರಲ್ಲಿ ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ರೆ, ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಇನ್ನು ಬಿಗ್ ಬಾಸ್ 11ರ ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ರಜತ್ ಅವರು ಮನೆಯಲ್ಲಿ ವೈಲ್ಡ್ ಆಗಿ ಆಟ ಆಡಿ ಸೆಕೆಂಡ್ ರನ್ನರ್ ಅಪ್ ಪಟ್ಟ ಸ್ವೀಕರಿಸಿದ್ದಾರೆ.‌ ಇದನ್ನೂ ಓದಿ: BBK 11: ಹನುಮಂತ ಟ್ರೋಫಿ ಗೆದ್ದಿರೋದು ಖುಷಿಯಿದೆ- ತ್ರಿವಿಕ್ರಮ್‌ ರಿಯಾಕ್ಷನ್‌

  • ದೇವರಾಣೆ ಗೆಲ್ತೀನಿ ಅಂತ ಬಂದಿರಲಿಲ್ಲ, ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ: ಹನುಮಂತ

    ದೇವರಾಣೆ ಗೆಲ್ತೀನಿ ಅಂತ ಬಂದಿರಲಿಲ್ಲ, ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ: ಹನುಮಂತ

    ಬೆಂಗಳೂರು: ಹಳ್ಳಿ ಹೈದ ಹನಮಂತ ಬಿಗ್‌ಬಾಸ್ ಸೀಸನ್ 11ರ (Bigg Boss Kannada Season 11) ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದಾರೆ. ವೈಲ್ಡ್ ಕಾರ್ಡ್ (Wild Card) ಮೂಲಕ ಎಂಟ್ರಿಕೊಟ್ಟಿದ್ದ ಹನುಮಂತ ಈಗ ಕಪ್‌ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

    ಬಿಗ್‌ಬಾಸ್ ಶುರುವಾದ 15 ದಿನಗಳ ನಂತರ ಹನುಮಂತ (Hanumantha) ಮನೆಯನ್ನು ಪ್ರವೇಶಿಸಿದ್ದರು. ಇಲ್ಲಿಯವರೆಗೆ ಶೋ ಆರಂಭಗೊಂಡಾಗ ಮನೆಯನ್ನು ಪ್ರವೇಶ ಮಾಡಿದ ಸ್ಪರ್ಧಿಗಳೇ ಬಿಗ್‌ ಬಾಸ್‌ ಟ್ರೋಫಿ ಗೆಲ್ಲುತ್ತಿದ್ದರು. ಆದರೆ ಬಿಗ್‌ ಬಾಸ್‌ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಗೆದ್ದಿದ್ದು ಇದೇ ಮೊದಲು. ಇದನ್ನೂ ಓದಿ: BBK 11: ಹನುಮಂತ ಟ್ರೋಫಿ ಗೆದ್ದಿರೋದು ಖುಷಿಯಿದೆ- ತ್ರಿವಿಕ್ರಮ್‌ ರಿಯಾಕ್ಷನ್‌

    ಟ್ರೋಫಿ ಜಯಿಸಿದ ಬಳಿಕ ವೇದಿಕೆಯಲ್ಲಿ ಮಾತನಾಡಿದ ಹನುಮಂತ, ದೇವರಾಣೆ ನಾನು ಗೆಲ್ಲುತ್ತೇನೆ ಅಂತ ಬಿಗ್‌ ಬಾಸ್‌ ಮನೆಗೆ ಬಂದಿರಲಿಲ್ಲ. ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ ಎಂದು ತಿಳಿಸಿದರು.

    ನಾನು ಗೆಲ್ತೀನಿ ಅಂತ ಗೊತ್ತಿದ್ದರೆ ಬಾಯಿ ಪಾಠ ಮಾಡಿಕೊಂಡು ಬರುತ್ತಿದ್ದೆ. ಆದರೆ ಈಗ ಏನು ಮಾತನಾಡಬೇಕು ಅಂತ ಗೊತ್ತಾಗುತ್ತಿಲ್ಲ. ದೇವರು, ಸುದೀಪ್‌ ಸರ್‌, ಕನ್ನಡ ನಾಡಿನ ಜನರ ಆಶೀರ್ವಾದದಿಂದ ನಾನು ಗೆದ್ದಿದ್ದಿದ್ದೇನೆ ಎಂದರು. ಇದನ್ನೂ ಓದಿ: BBK 11: ಮಗನ ಕೊನೆ ಶೋ ನೋಡಲು ಬಿಗ್‌ ಬಾಸ್‌ ಮನೆಗೆ ಬಂದಿದ್ದ ಸುದೀಪ್‌ ತಂದೆ

    ಅಂತಿಮವಾಗಿ ಹನುಮಂತ ಅವರಿಗೆ 5,23,89318 ಮತಗಳು ಬಿದ್ದಿದ್ದರೆ ರನ್ನರ್‌ ಅಪ್‌ ತ್ರಿವಿಕ್ರಮ್‌ ಅವರಿಗೆ 2,53,12518 ಮತಗಳು ಬಿದ್ದಿದ್ದವು.

    ವಿಶೇಷ ಏನೆಂದರೆ ಹನುಮಂತ ಫಿನಾಲೆ ಪ್ರವೇಶಿಸಿದ ಮೊದಲ ಸ್ಪರ್ಧಿ ಆಗಿದ್ದರು. ಟಿಕೆಟ್‌ ಟು ಫಿನಾಲೆ ಟಾಸ್ಕ್‌ ಗೆದ್ದು ಹನುಮಂತ ಫೈನಲ್‌ ಪ್ರವೇಶಿಸಿದ್ದರು.

  • BBK 11: ಚೈತ್ರಾ ಹ್ಯಾಟ್ರಿಕ್‌ ಕಳಪೆ- ಮತ್ತೆ ಕಂಬಿ ಹಿಂದೆ ಫೈರ್‌ ಬ್ರ್ಯಾಂಡ್‌

    BBK 11: ಚೈತ್ರಾ ಹ್ಯಾಟ್ರಿಕ್‌ ಕಳಪೆ- ಮತ್ತೆ ಕಂಬಿ ಹಿಂದೆ ಫೈರ್‌ ಬ್ರ್ಯಾಂಡ್‌

    ಬಿಗ್ ಬಾಸ್ ಮನೆಯ ಆಟ (Bigg Boss Kannada 11)  ಇದೀಗ 90ನೇ ದಿನದತ್ತ ಮುನ್ನಗ್ಗುತ್ತಿದೆ. ಅಸಲಿ ಆಟ ಶುರುವಾಗಿರೋ ಮನೆಯಲ್ಲಿ ಚೈತ್ರಾರನ್ನು ಕಳಪೆ ಎಂದು ಮನೆ ಮಂದಿ ಜೈಲಿಗಟ್ಟಿದ್ದಾರೆ. ಎಂದಿನಂತೆ ಉತ್ತಮ ಮತ್ತು ಕಳಪೆ ಚಟುವಟಿಕೆಗಳು ನಡೆದಿವೆ. ಈಗಾಗಲೇ ಅನೇಕ ಬಾರಿ ಬಿಗ್ ಬಾಸ್ ಮನೆಯ ಜೈಲು ಸೇರಿದ್ದ ಚೈತ್ರಾ ಕುಂದಾಪುರ (Chaithra Kundapura) ಮತ್ತೆ ಕಂಬಿ ಹಿಂದೆ ಹೋಗಿದ್ದಾರೆ.

    ಬಹುತೇಕ ಸ್ಪರ್ಧಿಗಳು ಕಳಪೆಗೆ ಚೈತ್ರಾ ಕುಂದಾಪುರ ಹೆಸರನ್ನೇ ತೆಗೆದುಕೊಂಡಿದ್ದಾರೆ. ಹೀಗಾಗಿ ಚೈತ್ರಾ ಕುಂದಾಪುರ ಮತ್ತೆ ಜೈಲು ಸೇರಿದ್ದಾರೆ. ಇನ್ನು ಕಳಪೆ (Kalape) ನೀಡುವ ವೇಳೆ ಎಂದಿನಂತೆ ಮಾತಿನ ಸಮರಗಳು ನಡೆದಿವೆ. ವಿಶೇಷವಾಗಿ ಚೈತ್ರಾ ಕುಂದಾಪುರಗೆ ಹನಮಂತು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ:UI ಅಬ್ಬರ: ಉಪ್ಪಿ ನಟನೆ, ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ಕೊಟ್ಟ ಪ್ರೇಕ್ಷಕರು

    ಟಾಸ್ಕ್‌ವೊಂದರಲ್ಲಿ ಚೈತ್ರಾ ಸರಿಯಾಗಿ ಉಸ್ತುವಾರಿ ಮಾಡದೇ ಬೇಕಂತಲೇ ಫೌಲ್ ಕೊಟ್ಟರೂ ಎಂಬ ಕಾರಣಕ್ಕೆ ಮೋಕ್ಷಿತಾ, ಧನರಾಜ್ ಸೇರಿದಂತೆ ಅನೇಕರು ಕಳಪೆ ಪಟ್ಟ ನೀಡಿದರು. ಬಳಿಕ ಕಳಪೆ ಪ್ರದರ್ಶನ ಎಂದ ಹನುಮಂತ ನಡುವೆ ವಾಕ್ಸಮರ ನಡೆದಿದೆ. ಕಳಪೆ ಕೊಡಲು ನಾನು ಇಲ್ಲಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನೀನು ನನ್ನ ದೊಡ್ಡಪ್ಪನ ಮಗಳು, ಅತ್ತೆ ಮಗಳು ಅಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ. ಇನ್ನೂ ಮುಂದಿನ ವಾರಕ್ಕೆ ಯಾರು ನಾಯಕರಾಗುತ್ತಾರೆ ಅನ್ನೋದು ಕೂಡ ರಿವೀಲ್ ಆಗಿದೆ. ಆದರೆ ಬಿಗ್ ಬಾಸ್ ಅಧಿಕೃತವಾಗಿ ಇನ್ನೂ ಘೋಷಣೆ ಮಾಡಿಲ್ಲ. ಐಶ್ವರ್ಯಾಗೆ ಠಕ್ಕರ್ ಕೊಟ್ಟು ಭವ್ಯಾ ಬಿಗ್ ಬಾಸ್ ಮನೆಗೆ ಕ್ಯಾಪ್ಟನ್ ಆಗಿದ್ದಾರೆ.