Tag: bigg boss kannada season 8

  • ಎಷ್ಟು ಸಲ ಬೀಪ್ ಮಾಡುವುದು?- ಚಕ್ರವರ್ತಿಗೆ ಕಿಚ್ಚ ಸುದೀಪ್ ಕ್ಲಾಸ್

    ಎಷ್ಟು ಸಲ ಬೀಪ್ ಮಾಡುವುದು?- ಚಕ್ರವರ್ತಿಗೆ ಕಿಚ್ಚ ಸುದೀಪ್ ಕ್ಲಾಸ್

    ಕ್ರವರ್ತಿ ಹಾಗೂ ಪ್ರಶಾಂತ್ ಸಂಬರಗಿ ಅವರಿಗೆ ಹಲವು ಬಾರಿ ಕಿಚ್ಚ ಸುದೀಪ್ ಎಚ್ಚರಿಸಿದ್ದಾರೆ. ಆದರೂ ಕೆಲ ಸಂದರ್ಭಗಳಲ್ಲಿ ಎಡವಟ್ಟುಗಳು ಆಗುತ್ತಲೇ ಇವೆ. ಹೀಗಾಗಿ ಈ ವಾರದ ಪಂಚಾಯಿತಿಯಲ್ಲಿ ಸಹ ಸುದೀಪ್ ಮತ್ತೆ ಚಕ್ರವರ್ತಿಯವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವೈಷ್ಣವಿ ಅವರ ಬಗ್ಗೆ ಪ್ರಶಾಂತ್ ಸಂಬರಗಿ ಬಳಿ ಸುಳ್ಳು ಹೇಳಿದ್ದಕ್ಕೆ ಕ್ಲಾಸ್ ತೆಗೆದುಕೊಂಡಿದ್ದು, ಯಾಕೆ ಸುಳ್ಳು ಹೇಳಿದ್ದೀರಿ, ಯಾಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದಿರಿ, ನಾವೂ ಮನೆಯಲ್ಲಿ ಮತ್ತೆ ಈ ಶೋ ನೋಡಬೇಕು. ನೀವಾಡಿದ ಮಾತುಗಳನ್ನು ಬೀಪ್ ಮಾಡಬೇಕು. ಎಷ್ಟು ಬಾರಿ ಬೀಪ್ ಮಾಡಬೇಕು ಎಂದು ತುಂಬಾ ಖಾರವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಚಕ್ರವರ್ತಿ ಅವರು ಪ್ರತಿಕ್ರಿಯಿಸಿ, ಆ ರೀತಿ ಮಾತನಾಡಬಾರದಿತ್ತು, ತಪ್ಪು ಮಾಡಿದೆ ಎಂದು ಕ್ಷಮೆಯಾಚಿಸಿದ್ದಾರೆ.

    ನೀವು ಹೀಗೆ ಸುಳ್ಳು ಹೇಳಿದರೆ ವೈಷ್ಣವಿ ಅವರ ವ್ಯಕ್ತಿತ್ವ ಏನಾಗಬೇಕು, ಈ ಶಬ್ದ ಬಳಸ್ತಾರಾ ಎಂದು ಪ್ರಶ್ನಿಸಿದ್ದಾರೆ. ಆದರೂ ಚಕ್ರವರ್ತಿ ವಾದ ಮಾಡಿದ್ದಾರೆ. ನನ್ನ ಕಣ್ಣಲ್ಲೇ ಕಣ್ಣಿಟ್ಟು ಸುಳ್ಳು ಹೇಳುತ್ತೀರಿ, ನಾನಿದನ್ನು ಸಹಿಸುವುದಿಲ್ಲ. ಪ್ರತಿಯೊಬ್ಬ ಸ್ಪರ್ಧಿಯ ವ್ಯಕ್ತಿತ್ವ ಕಾಪಾಡುವುದು ನನ್ನ ಕರ್ತವ್ಯ. ಆಟದಲ್ಲಿ ಬಿಗ್ ಬಾಸ್ ಚೌಕಟ್ಟಿನಲ್ಲೇ ಇರಬೇಕು. ಯಾವುದೋ ಒಂದರಿಂದ ಮನೆಯಲ್ಲಿನವರ ಅಭಿಪ್ರಾಯವೇ ಬದಲಾಗುತ್ತಿದೆ ಎಂದರೆ ಅದನ್ನು ನೋಡಿಕೊಂಡು, ಹಾಳಾಗಲಿ ಎಂದು ಬಿಟ್ಟು ಹೋಗುವ ವ್ಯಕ್ತಿ ನಾನಲ್ಲ. ಹಾಗಂತ ನನಗೆ ಹತ್ತಿರ, ನನಗೆ ಬೇಕಾದವರು ಎಂದು ಬಿಡಲು ಆಗಲ್ಲ ಎಂದು ಸುದೀಪ್ ಖಾರವಾಗಿ ಎಚ್ಚರಿಸಿದ್ದಾರೆ.

    ನೀವು ಹೇಳಿದ್ದನ್ನು ಪ್ರಶಾಂತ್ ನಂಬಿದ್ದರೆ ವೈಷ್ಣವಿ ವ್ಯಕ್ತಿತ್ವ ಏನಾಗಬೇಡ, ವೈಷ್ಣವಿ ಬಗ್ಗೆ ಕೆಟ್ಟ ಅಭಿಪ್ರಾಯ ಸಂಬರಗಿ ಅವರಲ್ಲಿ ಉಳಿಯುತ್ತಿತ್ತು ಎಂದಿದ್ದಾರೆ. ನಿಮ್ಮ ಓದಿಗೆ, ನಿಮ್ಮ ತಿಳುವಳಿಕೆ, ನಿಮಗಿರುವ ಜ್ಞಾನವನ್ನು ಈ ವೇದಿಕೆಯಲ್ಲಿ ಇನ್ನಷ್ಟು ಜನ ಕಲಿಯಲಿ ಎಂದು ಕಳೆದ ಬಾರಿ ಹೇಳಿದ್ದೆ. ಆದರೆ ನೀವು ಯಾವ ಭಾಷೆ ಬಳಸಿದಿರಿ? ಮನೆಯಲ್ಲಿ ನಾವೂ ಕುಳಿತು ನೋಡಬೇಕು ಈ ಶೋವನ್ನು. ಎಷ್ಟು ಸಲ ಬೀಪ್ ಮಾಡುವುದು. ಇದು ನಿಮ್ಮ ವಿದ್ಯೆಯೇ? ಏನು ಭಾಷೆ ಇದು ಒಳಗಡೆ ಎಂದು ಚಕ್ರವರ್ತಿ ಅವರು ಬಳಿಸಿದ ಅವಾಚ್ಯ ಶಬ್ದಗಳ ಬಗ್ಗೆ ಚಳಿ ಬಿಡಿಸಿದ್ದಾರೆ.

  • ಯೋಚಿಸಿ ಮಾತನಾಡಿ – ಸಂಬರಗಿಗೆ ಸುದೀಪ್ ಖಡಕ್ ವಾರ್ನಿಂಗ್

    ಯೋಚಿಸಿ ಮಾತನಾಡಿ – ಸಂಬರಗಿಗೆ ಸುದೀಪ್ ಖಡಕ್ ವಾರ್ನಿಂಗ್

    ವಾರದ ಪಂಚಾಯ್ತಿಯಲ್ಲಿ ಸುದೀಪ್ ಪ್ರಶಾಂತ್ ಸಂಬರಗಿ ಅವರಿಗೆ ತಿರುಗೇಟು ನೀಡಿದ್ದಾರೆ. ದಿವ್ಯಾ ಸುರೇಶ್ ಅವರ ವೈಯಕ್ತಿಕ ವಿಚಾರವನ್ನು ತೆಗೆದುಕೊಂಡು ಗೇಲಿ ಮಾಡಿರುವ ಕುರಿತಾಗಿ ಸುದೀಪ್ ವಾರದ ಕತೆ ಕಿಚ್ಚನ ಜೊತೆಯಲ್ಲಿ ಸಖತ್ ಖಾರವಾಗಿ ಉತ್ತರ ಕೊಟ್ಟಿದ್ದಾರೆ.

    ಪ್ರಶಾಂತ್ ಅವರೇ, ನಿಮ್ಮ 45 ವರ್ಷದ ಈ ಜರ್ನಿಯಲ್ಲಿ ನಿಮಗೆ ನೀವು ಮಾಡಿರುವ ಯಾವುದಾದರೂ ಒಂದು ಕೆಲಸದ ಬಗ್ಗೆ ನಿಮಗೆ ಬೇಸರ, ಮುಜುಗರ ಅನ್ನಿಸಿದೆಯಾ..? ನಾನು ಹೀಗೆ ಮಾಡಬಾರದಿತ್ತು ಅಂತ ಸುದೀಪ್ ಕೇಳಿದ್ದಾರೆ. ಆಗ ಪ್ರಶಾಂತ್ ಇಲ್ಲ ಎಂದು ಮೊದಲು ಹೇಳಿದ್ದಾರೆ. ಆಗ ಸುದೀಪ್ ಮತ್ತೆ ಮತ್ತೆ ಕೇಳಿದ್ದಾರೆ. ನೀವು ಡಿಗ್ರಿ ಓದುತ್ತಿದ್ದಾಗ ಏನೂ ನಡೆದಿಲ್ಲವಾ ಎಂದು ಕೇಳಿದ್ದಾರೆ. ಆಗ ಪ್ರಶಾಂತ್ ನನಗೆ ನೆನಪಾಗುತ್ತಿಲ್ಲ ಎಂದು ಹೇಳಿ ಜಾರಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ.

    ಆಗ ಪ್ರಶಾಂತ್ ಹೌದು, ನಾನು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಕೆಲವೊಮ್ಮೆ ಬೇಸರವಾಗಿದೆ ಎಂದು ಹೇಳಿದ್ದಾರೆ. ಆಗ ಸುದೀಪ್ ಹಾಗಾದ್ರೆ ನೀವು ದಿವ್ಯಾ ಸುರೇಶ್ ಅವರು ಮಾಡಿರುವ ಸಿನಿಮಾ ಹೆಸರು ತೆಗೆದುಕೊಂಡು ರ್ಯಾಗಿಂಗ್ ಮಾಡುತ್ತಿದ್ದೀರಾ ಯಾಕೆ? ಎಂದು ತುಂಬಾ ಸೂಕ್ಷ್ಮವಾಗಿ ಕೇಳಿದ್ದಾರೆ. ಆಗ ಇಲ್ಲ ಸರ್ ನಾನು ಒಂದು ದಿನ ಮಾಡಿದ್ದೇನೆ ಅಷ್ಟೇ ಎಂದು ಪ್ರಶಾಂತ್ ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಆಗ ಸುದೀಪ್, ನಾನು ಸುದೀಪ್ ಪ್ರಶಾಂತ್ ಅವರೇ.. ಕಿಚ್ಚನಾ ಅಂತಾ ಎಂದು ಗರಂ ಆಗಿರುವ ವಿಚಾರವನ್ನು ಸಾಫ್ಟ್ ಆಗಿ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ.

    ನೀವು ನೋವು ಮಾಡುವ ಉದ್ದೇಶದಿಂದಲೇ ಮಾಡಿದಾಗ ನಾಟ್ ಓಕೆ, ಕೆಲವು ವಿಚಾರಗಳನ್ನು ಮಾತನಾಡುವಾಗ ಯೋಚಿಸಿ ಮಾತನಾಡಿ, ನಾನು ಕೂಡಾ ಸಿನಿಮಾ ಮಾಡಿದ್ದೇನೆ, ನಾನು ಗೆದ್ದಿದ್ದೇನೆ, ಸೋತಿದ್ದೇನೆ. ಒಂದೊಂದು ಪಾಠವನ್ನು ಕಲಿತ್ತಿದ್ದೇನೆ. ನಾನು 72 ದಿನದಲ್ಲಿ ಒಂದೇ ಒಂದು ನೆಗಿಟಿವ್ ಆಗಿ ಮಾತಾಡಿಲ್ಲ ದಿವ್ಯಾ ಸುರೇಶ್ ಅವರ ಬಗ್ಗೆ ಎಂದು ಆಗಾಗ ಹೇಳಿತ್ತೀರಾ. ನಾವು ಫ್ಯಾಕ್ಟ್ ಚೆಕ್ ಮಾಡಿದರೇ ಪ್ರಶಾಂತ್ ಅವರೇ ನೀವು ಶೃತಿ ತಪ್ಪುತ್ತಾ ಇದ್ದೀರಾ ನೀವು.. ಇನ್ಮೇಲೆ ನಿಮಗೆ ಬಿಟ್ಟಿದ್ದು, ನಾನು ಹೇಳುವುದನ್ನು ನೇರವಾಗಿ ಹೇಳಿದ್ದೇನೆ ಎಂದಿದ್ದಾರೆ.

    ದಿವ್ಯಾ ಸುರೇಶ್, ನೀವೆಲ್ಲಾ ನನಗೆ ಒಂದೇ ಎಲ್ಲರೂ ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ಎಂದಿದ್ದಾರೆ. ನಿಮಗೆ ನಿಮ್ಮದೇ ಐಡೆಂಟಿಗಳಿವೆ. ನಿಮ್ಮ ಸಿನಿಮಾ ನಿಮಗೆ ಹೆಮ್ಮೆ ಇರಲಿ ದಿವ್ಯಾ ಅವರೇ ನಿಮ್ಮ ಕುರಿತಾಗಿ ಮಾತನಾಡುವಾಗ ಕಣ್ಣೀರು ಹಾಕುತ್ತಾ ಇರುವುದಲ್ಲ ನಿಮಗೆ ಅನ್ನಿಸಿದ್ದನು ನೇರವಾಗಿ ಮಾತನಾಡಿ ದಿವ್ಯಾ ಎಂದು ಹೇಳುತ್ತಾ ಖಡಕ್ ಆಗಿರುವ ವಾರ್ನಿಂಗ್ ಅನ್ನು ಸುದೀಪ್ ಅವರು ಸೂಕ್ಷ್ಮವಾಗಿ ಹೇಳಿದ್ದಾರೆ.

    ಒಟ್ಟಾರೆಯಾಗಿ ವಾರದ ಕತೆ ಕಿಚ್ಚನ ಜೊತೆಯ ವಾರಾಂತ್ಯ ಕಾರ್ಯಕ್ರಮ ಸಖತ್ ಖಾರ ಖಾರವಾಗಿದ್ದಂತೂ ಖಂಡಿತಾ ಹೌದು. ಸುದೀಪ್ ಹಿಂದಿನ ವಾರ ಸುಮ್ಮನೆ ಇದ್ದರು. ಆದರೆ ಈ ವಾರ ಸ್ಪರ್ಧಿಗಳ ತಪ್ಪನ್ನು ಒಂದೊಂದೇ ಆಗಿ ಹೇಳುತ್ತಾ ಅವರಿಗೆ ತಪ್ಪಿನ ಅರಿವನ್ನು ಮಾಡಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ.

  • ರಘು ಕಿವಿಯಲ್ಲಿ ಹೂ ಇಟ್ಟ ಬಿಗ್‍ಬಾಸ್ ಸ್ಪರ್ಧಿಗಳು

    ರಘು ಕಿವಿಯಲ್ಲಿ ಹೂ ಇಟ್ಟ ಬಿಗ್‍ಬಾಸ್ ಸ್ಪರ್ಧಿಗಳು

    ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ಎಲ್ಲರ ಜೊತೆಗೆ ತಮಾಷೆ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಬಿಗ್‍ಬಾಸ್ ಅಸಲಿ ಆಟ ಆರಂಭಗೊಂಡಿದ್ದು, ಸ್ಪರ್ಧಿಗಳು ರಘುಗೆ ಚಮಕ್‍ಕೊಟ್ಟು ಕಿಮಿ ಮೇಲೆ ಹೂ ಇಡುವ ಪ್ರಯತ್ನವನ್ನು ಮಾಡಿದ್ದಾರೆ.

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್ ಆಟ ಶುರುವಾಗಿದೆ. ರೋಸ್, ಪಂಚಿಂಗ್ ಗ್ಲೌಸ್, ಹುಂಡಿಯನ್ನು ಮನೆಗೆ ಬಿಗ್‍ಬಾಸ್ ಕಳುಹಿಸಿಕೊಟ್ಟಿದ್ದಾರೆ. ಇದನ್ನು ನೋಡಿದ ಸ್ಪರ್ಧಿಗಳು ಒಂದೊಂದು ರೀತಿಯಾಗಿ ಯೋಚನೆ ಮಾಡಿದ್ದಾರೆ. ಈ ವೇಳೆ ರಘು ಕಿವಿ ಮೇಲೆ ಹೂ ಇಡುವ ಯೋಚನೆಯನ್ನು ಮಾಡಿದ್ದಾರೆ.

    ರಘು ಅಲ್ಲಿ ಇರಲಿಲ್ಲ. ಹೀಗಾಗಿ ರಘುಗೆ ಟಾಸ್ಕ್ ಎಂದು ಹೇಳಿ ಮಜಾ ಮಾಡುವ ಏನೂ ಹೇಳುತ್ತಾನೆ ನೋಡೋಣ ಎಂದು ಮನೆಮಂದಿ ಪ್ಲ್ಯಾನ್ ಮಾಡಿದ್ದಾರೆ. ಆಗ ರಘು ಟಾಸ್ಕ್ ಎಂದು ನಂಬಿಕೊಂಡು ಕೆಲವು ಕಾರಣಗಳನ್ನು ಕೊಟ್ಟು ಒಂದೊಂದು ವಸ್ತುವನ್ನು ಒಬ್ಬೊಬ್ಬರಿಗೆ ಕೊಡುವುದಾಗಿ ಹೇಳಿದ್ದಾರೆ. ಸಂಬರಗಿ ಮಾತ್ರ ನಿಜವಾಗಿಯೂ ಜಗಳ ಮಾಡುವಂತೆ ಸಖತ್ ಆಗಿ ಆ್ಯಕ್ಟ್ ಮಾಡಿದ್ದಾರೆ.

    ಹಿಂದಿನ ಸೀಸನ್‍ನಂತೆ ಈಗಲೂ ಮಾಡುತ್ತಿದ್ದಾನೆ ಎಂದು ಸಂಬರಗಿ ಹೇಳಿದ್ದಾರೆ. ಆಗ ರಘು ಸಿಟ್ಟಿನಿಂದ ವಾಯ್ಸ್ ರೈಸ್ ಮಾಡುವುದು ನನಗೂ ಗೊತ್ತಿರುವ ವಿಚಾರವಾಗಿದೆ. ನಾನು ಇನ್ನು ಹತ್ತು ಸೀಸನ್ ಬಂದ್ರೂ ಕೂಡ ಹೀಗೆ ಇರುತ್ತೇನೆ ಎಂದು ಹೇಳಿದ್ದಾರೆ. ಆಗ ರಘು ಕಿವಿಗೆ ಹೂ ಮೂಡಿಸಿದ್ದು ಎಂದು ಮನೆ ಮಂದಿ ಹೇಳುತ್ತಾ ಜೋರಾಗಿ ಕೂಗಿದ್ದಾರೆ. ಆಗ ರಘುಗೆ ತನ್ನ ಕಿವಿ ಮೇಲೆ ಹೂ ಇಟ್ಟಿರುವ ವಿಚಾರ ತಿಳಿದು ನಕ್ಕು ಸುಮ್ಮನಾಗಿದ್ದಾರೆ.

    ಬಿಗ್‍ಬಾಸ್ ಸ್ಪರ್ಧಿಗಳ ಸೂತ್ರವನ್ನು ಹಿಡಿದು ಆಟ ಆಡಲು ಪ್ರಾರಂಭಿಸಿದ್ದಾರೆ. ಈಗ ತಾನೇ ಮನೆಗೆ ಎಂಟ್ರಿಕೊಟ್ಟ ಸ್ಪರ್ಧಿಗಳು ಮನೆಯಿಂದ ಆಚೆ ಹೋದ ಮೇಲೆ ಏನಾಯ್ತು? ಯಾರಿಂದ ಬೇಜಾರ್ ಆಗಿದೆ ಎಂದು ಹೇಳುತ್ತಾ ತಮ್ಮ ಮನಸ್ಸಿನ ಬೇಸರವನ್ನು ಹೊರ ಹಾಕುತ್ತಾ ಕೆಲವು ಘಟನೆಗಳನ್ನು ಮೆಲುಕು ಹಾಕುತ್ತಿದ್ದಾರೆ.

  • ಮೊದಲ ದಿನವೇ DU,DS ಕಿತ್ತಾಟ ಶುರು

    ಮೊದಲ ದಿನವೇ DU,DS ಕಿತ್ತಾಟ ಶುರು

    ಬಿಗ್‍ಬಾಸ್ ಮನೆಗೆ ಸ್ಪರ್ಧಿಗಳು ಗ್ರ್ಯಾಂಡ್ ಎಂಟ್ರಿ ಕೊಟ್ಟು ಬಿಗ್‍ಬಾಸ್ ಮೇಲೆ ಇರುವ ನಿರೀಕ್ಷೆಯನ್ನು ಹೆಚ್ಚಿಸಿದ್ದರು. ಅದಕ್ಕೆ ಪೂರಕವಾಗಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್ ಮೊದಲ ದಿನವೇ ಕಿತ್ತಾಡಿಕೊಂಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿರುವ ಮುಖ್ಯದ್ವಾರದ ಮೂಲಕ ಸ್ಪರ್ಧಿಗಳು ಒಳಗೆ ಹೋಗುವುದು ಹಾಗೂ ಎಲಿಮಿನೇಟ್ ಆದಾಗ ಹೊರಗೆ ಬರುತ್ತಿದ್ದರು. ಆದರೆ ಈ ಸಲ ಸ್ಪರ್ಧಿಗಳನ್ನು ಬೇರೆ ಬೇರೆ ದ್ವಾರಗಳ ಮೂಲಕ ಮನೆ ಒಳಗೆ ಕಳುಹಿಸಲಾಗಿದೆ. ಬಿಗ್‍ಬಾಸ್ ಮನೆಯಲ್ಲಿ ಮೊಟಕುಗೊಂಡಿದ್ದ ಜರ್ನಿಯನ್ನೂ ಪೂರ್ತಿ ಮಾಡಲು ಸ್ಪರ್ಧಿಗಳು ಹೊಸ ಗೇಮ್ ಪ್ಲ್ಯಾನ್‍ನೊಂದಿಗೆ ತಾನೇ ಗೆಲ್ಲಬೇಕು ಎಂಬ ಹಂಬಲದೊಂದಿಗೆ ಎಂಟ್ರಿಕೊಟ್ಟಿದ್ದಾರೆ.ಇದನ್ನೂ ಓದಿ:  ಸ್ಪರ್ಧಿಗಳ ಗೇಮ್ ಪ್ಲ್ಯಾನ್ ಕೇಳಿ ಅಚ್ಚರಿಗೊಳಗಾದ್ರು ಸುದೀಪ್..!

    ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಕೈ ಕೈ ಮಿಲಾಯಿಸಿ, ಜುಟ್ಟು, ಬಟ್ಟೆ ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ಇದು ತುಂಬಾ ದಿನಗಳ ನಂತರ ನೋಡಿದ್ದಕ್ಕಾಗಿ ಮಿಸ್ ಮಾಡಿಕೊಂಡಿರುವುದಕ್ಕೆ ಪ್ರೀತಿಯ ಜಗಳನಾ? ಮೊದಲ ದಿನವೇ ಇವರಿಗೆ ಬಿಗ್‍ಬಾಸ್ ಟಾಸ್ಕ್ ಏನಾದರೂ ಕೊಟ್ಟಿದ್ದಾರಾ? ಇವರು ಹೀಗೆ ಹೊಡೆದಾಡಿಕೊಂಡು ನೆಲದ ಮೇಲೆ ಬಿದ್ದು ಕಿತ್ತಾಡಿಕೊಂಡಿದ್ದು ಏಕೆ ಅನ್ನೋದು ಪ್ರೇಕ್ಷರಲ್ಲಿ ಕುತೂಹಲ ಹೆಚ್ಚಿಸುವಂತೆ ಮಾಡಿದೆ.

    ಈಗಾಗಲೇ ಮನೆಯಿಂದ ಹೊರ ಹೋಗಿ, ಈ ಹಿಂದೆ ನಡೆದಿರುವ ಎಪಿಸೋಡ್‍ಗಳನ್ನು ನೋಡಿರುವ ಸ್ಪರ್ಧಿಗಳು ಯಾರು ನಿಜವಾದ ಸ್ನೇಹಿತರು ಹಾಗೂ ಏನೆಲ್ಲ ಹಿಂದೆ ಮಾತನಾಡಿದ್ದಾರೆ ಅಂತ ತಿಳಿದುಕೊಂಡು ಮನೆಗೆ ಬಂದಿದ್ದಾರೆ. ಹೀಗಿರುವಾಗ ಯಾರು ಯಾರ ಸ್ನೇಹಿತರು, ಯಾರು ಕೇವಲ ಪರಿಚಯಸ್ಥರು ಅನ್ನೋದು ಇನ್ನು ಮುಂದಿನದಿನಗಳಲ್ಲಿ ತಿಳಿಯಲಿದೆ. ಬಿಗ್‍ಬಾಸ್ ಮೊದಲ ದಿನವೇ ತಮ್ಮ ಆಟವನ್ನು ಆರಂಭಿಸಿದ್ದಂತೂ ಪಕ್ಕವಾಗಿದೆ.

  • ಸ್ಪರ್ಧಿಗಳ ಗೇಮ್ ಪ್ಲ್ಯಾನ್ ಕೇಳಿ ಅಚ್ಚರಿಗೊಳಗಾದ್ರು ಸುದೀಪ್..!

    ಸ್ಪರ್ಧಿಗಳ ಗೇಮ್ ಪ್ಲ್ಯಾನ್ ಕೇಳಿ ಅಚ್ಚರಿಗೊಳಗಾದ್ರು ಸುದೀಪ್..!

    ಬಿಗ್‍ಬಾಸ್ ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಆದರೆ ಬಿಗ್‍ಬಾಸ್ ಸ್ಪರ್ಧಿಗಳು ಮಾತ್ರ ಸಖತ್ ಗೇಮ್ ಪ್ಲ್ಯಾನ್‍ನೊಂದಿಗೆ ಬಂದಿದ್ದಾರೆ. ಯಾವೆಲ್ಲಾ ಪ್ಲ್ಯಾನ್‍ನೊಂದಿಗೆ ಬಂದಿದ್ದಾರೆ ಎನ್ನುವುದನ್ನು ಕೇಳಿದ ಕಿಚ್ಚನಿಗೆ ಸ್ಪರ್ಧಗಳಿಂದಿ ಬಂದಿರುವ ಉತ್ತರಗಳು ಆಶ್ಚರ್ಯವನ್ನುಂಟು ಮಾಡಿದೆ.

    ಹೌದು, ಬಿಗ್‍ಬಾಸ್ ಸ್ಪರ್ಧಿಗಳು ಒಂಟಿಮನೆಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಸುದೀಪ್ ಹೇಗೆ ಈ ಬಾರಿ ಹಿಂದಿನ ಇನ್ನಿಂಗ್ಸ್‍ಗಿಂತ ಹೇಗೆ ವಿಭಿನ್ನವಾಗಿ ಆಟವಾಡುತ್ತೀರಾ? ಏನು ಹೊಸತು ಇರಲಿದೆ. ಹೊರಜಗತ್ತನ್ನು ನೋಡಿ ಬಂದಿದ್ದೀರಾ? ಎಂದು ಪ್ರತಿಯೊಬ್ಬ ಸ್ಪರ್ಧಿಗೆ ಪ್ರಶ್ನಿಸಿದ್ದಾರೆ. ಆದರೆ ಸ್ಪರ್ಧಿಳು ಮಾತ್ರ ಹಿಂದೆ ಇದ್ದಂತೆ ಇಲ್ಲ. ದೊಡ್ಡಮನೆಯ ಆಟಕ್ಕೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಬಂದಂತೆ ಉತ್ತರಗಳನ್ನು ಕೊಟ್ಟಿದ್ದಾರೆ. ಇದನ್ನೂ ಓದಿ:  50 ದಿನ ನಡೆಯಲಿದೆ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್

    ನಾನೆ ಆನೆ.. ನಾನೆ ಇರುವೆ ಎಂದು ರಘು ಹೇಳಿದ್ದಾರೆ. ವೈಷ್ಣವಿ ಜೊತೆಗಿನ ಸ್ನೇಹ ಅಷ್ಟಾಗಿ ಚೆನ್ನಾಗಿರಲ್ಲ ಎನ್ನುವ ಕ್ಲ್ಯೂ ರಘು ಉತ್ತರದಿಂದ ಸಿಕ್ಕಂತಿದೆ. ನನ್ನ ಬೈಕ್ ರೈಡ್‍ನಲ್ಲಿ ಸಿಂಗಲ್ ರೈಡ್ ಇರುತ್ತದೆ ಎಂದು ಹೇಳುವ ಮೂಲಕವಾಗಿ ಮಂಜು, ದಿವ್ಯಾ ಸುರೇಶ್ ಅವರ ಜೊತೆಗೆ ಮೊದಲ ಸಂಚಿಕೆಯಲ್ಲಿದ್ದಂತೆ ಇರುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.

    ಹಿಂದಿನ ಆಟಕ್ಕಿಂತ ಈ ಬಾರಿ ಚಿಂದಿ ಮಾಡೋಣ ಎಂದು ಬಂದಿದ್ದೇನೆ ಎಂದು ದಿವ್ಯಾ ಸುರೇಶ್ ಹೇಳಿದ್ದಾರೆ. ವೈಷ್ಣವಿ ಮತ್ತೆ ಆನೆ… ಇರುವೆ ಜೋಕ್‍ನೊಂದಿಗೆ ನಗುಮುಖದಿಂದ ಎಂಟ್ರಿಕೊಟ್ಟಿದ್ದಾರೆ. ಹೀಗೆ ಶಮಂತ್, ಅರವಿಂದ್, ಪ್ರಶಾಂತ್ ಸಂಬರಗಿ, ಚಕ್ರವರ್ತಿ, ದಿವ್ಯಾ ಉರುಡುಗ, ಪ್ರಿಯಾಂಕ, ಶುಭಾ, ನಿಧಿ ಗ್ರ್ಯಾಂಡ್ ಆಗಿ ಮನೆಯನ್ನು ಪ್ರವೇಶಿಸಿದ್ದಾರೆ.

    ಮೊದಲ ಸಂಚಿಕೆಗಿಂತ ಸೆಕೆಂಡ್ ಇನ್ನಿಂಗ್ಸ್ ಮೇಲೆ ಹೆಚ್ಚಿನ ನೀರಿಕ್ಷೆಗಳಿವೆ. ಬಿಗ್‍ಬಾಸ್ ಏನೆಲ್ಲಾ ಹೊಸ ಗೇಮ್ ಪ್ಲ್ಯಾನ್ ಮಾಡಿದ್ದಾರೆ. ವೀಕ್ಷಕರ ನೀರಿಕ್ಷೆಗೂ ಮೀರಿದ ಸಂಗತಿಗಳು ನಡೆಯುತ್ತಾ? ರೋಚಕತೆಯಿಂದ ಕೂಡಿರುತ್ತಾ? ಜಗಳ, ಪ್ರೀತಿ, ಸ್ನೇಹ ಬಿಟ್ಟಿ ಹೊಸದೇನು ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸ್ಫರ್ಧಿಗಳ ಸೂತ್ರ ಇನ್ನು ಬಿಗ್‍ಬಾಸ್ ಕೈಯಲ್ಲಿ ಇರಲಿದೆ.

  • ಜೂನ್ 21 ರಿಂದ ಬಿಗ್‍ಬಾಸ್ ಆಟ ಮತ್ತೆ ಶುರು

    ಜೂನ್ 21 ರಿಂದ ಬಿಗ್‍ಬಾಸ್ ಆಟ ಮತ್ತೆ ಶುರು

    ಬೆಂಗಳೂರು: ಕೊರೊನಾದಿಂದ ಅರ್ಧಕ್ಕೆ ನಿಂತಿರುವ ಬಿಗ್‍ಬಾಸ್ ರಿಯಾಲಿಟಿ ಶೋ ಜೂನ್ 21 ರಿಂದ ಮತ್ತೆ ಪ್ರಾರಂಭವಾಗಲಿದೆ.

    ಬಿಗ್‍ಬಾಸ್ 8ನೇ ಆವೃತ್ತಿ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಮೊಟಕುಗೊಳಿಸಲಾಗಿತ್ತು. ಇದೀಗ ಮತ್ತೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ನಿಟ್ಟಿನಲ್ಲಿ ಎಲ್ಲಾ ಸ್ಪರ್ಧಿಗಳು ಕ್ವಾರಂಟೈನ್ ಮಾಡಿ ಕೊರೊನಾ ಪರೀಕ್ಷೆ ಮಾಡಿದ ನಂತರ ಬಿಗ್‍ಬಾಸ್ ಮನೆಗೆ ಮತ್ತೆ ಸ್ಫರ್ಧಿಗಳು ಗ್ರ್ಯಾಂಡ್ ಎಂಟ್ರಿಕೊಡಲಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಸುದ್ದಿ ಪ್ರಕಟಗೊಂಡಿದೆ. ಇದನ್ನೂ ಓದಿ:  ಕೊರೊನಾ ನಿಯಂತ್ರಣಕ್ಕೆ ಮುಲಾಮು – ಕನ್ನಡಿಗನಿಂದ ಸಂಶೋಧನೆ

    ಕೊರೊನಾ ನಿಯಮಗಳ ಕಾರಣಕ್ಕೆ ಬಿಗ್‍ಬಾಸ್ 8 ನೇ ಆವೃತ್ತಿ 72 ದಿನಗಳಿಗೆ ಅರ್ಧದಲ್ಲೇ ನಿಂತು ಹೋಗಿತ್ತು. 12 ಮಂದಿ ಸ್ಪರ್ಧಿಗಳನ್ನು ಬಿಗ್‍ಬಾಸ್ ಮನೆಯಿಂದ ಆಚೆ ಕರೆತರಲಾಗಿತ್ತು. ಆದರೆ ವಿನ್ನರ್ ಯಾರು ಎಂದು ಬಿಗ್‍ಬಾಸ್ ಹೇಳಿರಲಿಲ್ಲ. ಈಗ ಪೂರ್ತಿ ನೂರು ದಿನಗಳನ್ನು ಪೂರೈಸುವ ಯೋಜನೆ ವಾಹಿನಿಯದ್ದಾಗಿದೆ. ಹೀಗಾಗಿ ಈಗ ಮತ್ತೆ 28 ದಿನಗಳ ಕಾಲ ಮತ್ತೆ ಶೋ ಪ್ರಸಾರ ನಡೆಸಲು ಸಿದ್ಧತೆ ನಡೆಯುತ್ತಿದೆ.

    12 ಮಂದಿ ಸ್ಪರ್ಧಿಗಳ ಜೊತೆಗೆ ಇಬ್ಬರು ಹೊಸ ಸ್ಪರ್ಧಿಗಳನ್ನೂ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳು ಇದೆ ಎನ್ನಲಾಗುತ್ತಿದೆ. ಈ ಹೊಸ ಸ್ಫರ್ಧಿಗಳು ಯಾರು ಎಂಬುದು ಗೊತ್ತಾಗಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಸ್ತುತ ನಾನ್ ಫಿಕ್ಷನ್ ಕಾರ್ಯಕ್ರಮಗಳು ಯಾವುದೂ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿಲ್ಲ. ಹೀಗಾಗಿ ಅರ್ಧದಲ್ಲೇ ನಿಂತಿದ್ದ ಬಿಗ್‍ಬಾಸ್ ಶೋ ಮತ್ತೆ ಪ್ರಸಾರ ಮಾಡಲು ವಾಹಿನಿ ಎಲ್ಲಾ ಸಿದ್ಧತೆಗಳು ಮಾಡಿಕೊಳ್ಳುತ್ತಿದೆ. ವಾರಾಂತ್ಯದ ಕಾರ್ಯಕ್ರಮದಲ್ಲೂ ಎಂದಿನಂತೆ ಸುದೀಪ್ ಕೂಡಾ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

    ಬಿಗ್‍ಬಾಸ್ ಮತ್ತೆ ಪ್ರಾರಂಭವಾಗುತ್ತಾ ಎಂದು ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಬಿಗ್‍ಬಾಸ್ ಮತ್ತೆ ಪ್ರಾರಂಭವಾಗುತ್ತದೆ ಎನ್ನುವ ಸುದ್ದಿ ಸಖತ್ ಖುಷಿಯನ್ನು ತಂದಿದೆ. ಬಿಗ್‍ಬಾಸ್‍ನಲ್ಲಿ ಏನೆಲ್ಲಾ ಬದಲಾವಣೆಗಳು ಇರಲಿವೆ, ಯಾರೆ ಲ್ಲಾ ಮನೆಯಲ್ಲಿ ಹೊಸ ಆಟವನ್ನೂ ಶುರು ಮಾಡಲಿದ್ದಾರೆ. ಏನೆಲ್ಲಾ ಹೊಸ ಮಸಾಲೆಯನ್ನು ಬಿಗ್‍ಬಾಸ್ ತೆರೆಮೆಲೆ ತರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.