Tag: Bigg Boss Kannada OTT

  • Bachelorette ಪಾರ್ಟಿಯಲ್ಲಿ ಮಿಂಚಿದ ʻಬಿಗ್ ಬಾಸ್ʼ ಅಕ್ಷತಾ ಕುಕಿ

    Bachelorette ಪಾರ್ಟಿಯಲ್ಲಿ ಮಿಂಚಿದ ʻಬಿಗ್ ಬಾಸ್ʼ ಅಕ್ಷತಾ ಕುಕಿ

    ಬಿಗ್ ಬಾಸ್ (Bigg Boss Kannada) ಮೂಲಕ ಮೋಡಿ ಮಾಡಿದ್ದ ಅಕ್ಷತಾ ಕುಕಿ (Akshtha Kukki) ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಮದುವೆಗೂ ಮಸ್ತ್ ಆಗಿ Bachelorette ಪಾರ್ಟಿಯಲ್ಲಿ ನಟಿ ಮಿಂಚಿದ್ದಾರೆ. ಈ ಕುರಿತ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ.

    ಒಟಿಟಿ ಬಿಗ್ ಬಾಸ್ ಮೂಲಕ ಮನಗೆದ್ದ ಸ್ಪರ್ಧಿ ಅಕ್ಷತಾ ಅವರು `ಮಾರ್ಟಿನ್’ (Martin) ಸಿನಿಮಾ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಗ ಸಿನಿಮಾ ವಿಚಾರ ಬಿಟ್ಟು ತಮ್ಮ ಖಾಸಗಿ ಜೀವನದ ವಿಷ್ಯವಾಗಿ ನಟಿ ಸುದ್ದಿಯಾಗುತ್ತಿದ್ದಾರೆ.

    ಗುರುಹಿರಿಯರು ನಿಶ್ಚಯಿಸಿದ ವರನ ಜೊತೆ ಮಾರ್ಚ್ 27ರಂದು ಅಕ್ಷತಾ ಮದುವೆಯಾಗುತ್ತಿದ್ದಾರೆ. ಅವಿನಾಶ್ (Avinash) ಎಂಬ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ನಟಿ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಬೆಳಿಗಾವಿಯಲ್ಲಿ ಮದುವೆ ನಡೆಯಲಿದೆ. ಮದುವೆಗೂ ಮುನ್ನ Bachelorette Party ಮಾಡಿರುವ ಫೋಟೋಗಳು ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣಕ್ಕೆ ಬ್ರೇಕ್‌ – ಸಿನಿಮಾ ಮಾಡಲ್ಲ ಎಂದ ಮುನಿರತ್ನ

    ಪಿಂಕ್ ಬಣ್ಣದ ಮಾಡ್ರನ್ ಧರಿಸಿ ಮುದ್ದಾಗಿ ಅಕ್ಷತಾ ಕಾಣಿಸಿಕೊಂಡಿದ್ದಾರೆ.  ನಟಿ ಅಕ್ಷತಾಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

  • ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!

    ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!

    40 ದಿನಗಳ ಕಾಲ ಬಿಗ್ ಬಾಸ್ (Bigg Boss Kannada OTT)  ಮನೆಯಲ್ಲಿ ಕಳೆದಿದ್ದಾರೆ. ಆದರೆ ಒಂದಷ್ಟು ಜನ ಸಮಾನ ಮನಸ್ಕರಿದ್ದರೆ ಇನ್ನೊಂದು ಜನರಿಗೆ ಅಷ್ಟು ಕನೆಕ್ಟ್ ಆಗಿರಲಿಲ್ಲ. ಟಾಸ್ಕ್ ವಿಚಾರ ಬರುತ್ತೆ, ಮನೆಕೆಲಸದ ವಿಚಾರ ಬರುತ್ತೆ. ಆ ಸಮಯದಲ್ಲೆಲ್ಲಾ ಎಷ್ಟೋ ಸಲ ಜಗಳಗಳು ಆಗಿರುತ್ತವೆ. ಆ ಜಗಳ ಬೇರೆಯವರಿಗೆ ಹರ್ಟ್ ಆಗುವ ಹಂತಕ್ಕೂ ತಲುಪಿರುತ್ತದೆ. ಬಿಗ್ ಬಾಸ್ ಮುಗಿದ ಮೇಲೆ ಯಾರು, ಎಲ್ಲೆಲ್ಲಿ ಇರುತ್ತಾರೆ ಗೊತ್ತಿಲ್ಲ. ಮತ್ತೆ ಎಲ್ಲರೂ ಒಟ್ಟಿಗೆ ಭೇಟಿಯಾಗುತ್ತಾರೆ ಎಂಬುದು ಭರವಸೆ ಇರುವುದಿಲ್ಲ. ಆದರೆ ಬಿಗ್ ಬಾಸ್ ಮನೆಯಿಂದ ಹೊರಡುವುದಕ್ಕೂ ಮುನ್ನ ಯಾರ ಮನಸ್ಸಲ್ಲೂ ಭಾರ ಇಲ್ಲದಂತೆ ಮಾಡಿದೆ. ಕ್ಷಮೆ ಕೇಳುವವರು ಕೇಳಿದ್ದಾರೆ, ಥ್ಯಾಂಕ್ಸ್ ಹೇಳುವವರು ಹೇಳಿದ್ದಾರೆ, ಗಿಫ್ಟ್ ಕೊಡುವವರು ಕೊಟ್ಟಿದ್ದಾರೆ. ಅದರಲ್ಲಿ ಹೆಚ್ಚಾಗಿ ಸೋನು ಮತ್ತು ಜಯಶ್ರೀಗೇನೆ ಹಲವು ಬಾರಿ ಬಂದಿದೆ.

    ಮೊದಲಿಗೆ ರಾಕಿ (Rakesh Adiga)  ಸೋನುಳ (Sonu Srinivas Gowda) ಹೆಸರನ್ನು ತೆಗೆದುಕೊಂಡ. ಆತನ ಮನಸ್ಸಲ್ಲಿ ಕ್ಷಮೆ ಹಾಗೂ ಥ್ಯಾಂಕ್ಸ್ ಎರಡು ಇತ್ತು. ಆದರೆ ಅದಾಗಲೇ ಒಬ್ಬರಿಗೆ ಕ್ಷಮೆ ಕೇಳಿದ್ದರಿಂದ ಕ್ಷಮಾಪಣಾ ರೀತಿಯಲ್ಲಿಯೇ ಥ್ಯಾಂಕ್ಸ್ ಹೇಳಿದ್ದಾನೆ. ಸಾಕಷ್ಟು ಸಲ ನಮ್ಮ ನೆನಪಿಗೆ ಬರುತ್ತಾ ಇದ್ರು. ಕ್ರೀಮ್ ಹಚ್ಚುವುದಾಗಲಿ, ಯಾವ ರೀತಿ ಬೈತಾ ಇದ್ರು, ಜೆನ್ಯೂನ್ ಆಗಿ ನನಗೆ ಎಲ್ಲದನ್ನು ಕೊಟ್ಟಿದ್ದು ಸೋನು. ಅವಳಿಗೆ ಟಾಸ್ಕ್ ಪ್ರಕಾರ ಕ್ಷಮೆ ಹೇಳುವುದಕ್ಕೆ ಆಗಲ್ಲ. ಆದರೆ ಥ್ಯಾಂಕ್ಸ್ ಎಂದಿದ್ದಾನೆ. ಇದನ್ನೂ ಓದಿ: ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

    ಬಳಿಕ ಸೋನು ಹೆಸರನ್ನು ರೂಪೇಶ್ (Roopesh Shetty) ತೆಗೆದುಕೊಂಡಿದ್ದು, ನಾನೇನೋ ತಪ್ಪು ಮಾಡಿದ ವಿಚಾರಕ್ಕಲ್ಲ, ಎಗ್ ರೈಸ್ ಮಾಡಿಕೊಟ್ಟಿದ್ದಾಳೆ ಅನ್ನೋ ವಿಚಾರಕ್ಕೂ ಅಲ್ಲ. ಕೆಲವಾರು ವಿಚಾರಕ್ಕೆ ನಾನು ಅವಳನ್ನು ನಾಮಿನೇಟ್ ಮಾಡಿರುತ್ತೀನಿ, ಕೆಲವೊಂದು ವಿಚಾರಗಳು ಬಂದಾಗ ಅವಳ ಹೆಸರು ಎತ್ತಿರುತ್ತೀನಿ, ಕೆಲವೊಂದು ವಿಚಾರಗಳಲ್ಲಿ ಅವಳ ತಪ್ಪುಗಳನ್ನು ಹೇಳಿರುತ್ತೀನಿ ಎಲ್ಲರ ಮುಂದೆ. ಮೊನ್ನೆ ಕಳಪೆ ಬಂದಾಗಲೂ ಅವಳ ಹೆಸರನ್ನು ಎತ್ತಿದ್ದೀವಿ. ಆದರೆ ಅದರ ಹಿಂದೆ ಯಾವ ಉದ್ದೇಶವೂ ಇರಲ್ಲ. ಆದರೆ ನನ್ನಿಂದ ಹರ್ಟ್ ಆಗಿದ್ರೆ ನನ್ನನ್ನು ಕ್ಷಮಿಸು ಎಂದಿದ್ದಾನೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

    ಇನ್ನು ಸೋಮಣ್ಣ ಕೂಡ ಸೋನುಗೆ ಥ್ಯಾಂಕ್ಸ್ ಹೇಳಿದ್ದಾರೆ. ಯಾರಿಗೆ ಏನೇ ಇರಲಿ ಸೋನು ಅಂದ್ರೆ ಇಷ್ಟ. ನಂಗೆ ನೋವಾದಾಗ, ನಂಗೆ ನಗಿಸಿದ್ದು, ಎಂಗೇಜ್ ಮಾಡಿದ್ದು ಸೋನು ಎಂದಿದ್ದಾರೆ. ಆಗ ಸೋನು ರಿಯಾಕ್ಟ್ ಮಾಡಿದ್ದು, ನಾನು ಬೇಜಾರು ಮಾಡಲ್ಲ ಅಂತ ಅಲ್ಲ. ಖುಷಿನು ಕೊಟ್ಟಿದ್ದೀನಿ. ಆದರೆ ನನ್ನಿಂದ ನಕ್ಕಿದ್ದಾರೆ ಅಂದ್ರೆ ಅದು ನನಗೂ ಖುಷಿ ಕೊಟ್ಟಿದೆ ಎಂದಿದ್ದಾಳೆ. ಇದನ್ನೂ ಓದಿ: ಸಿದ್ಧಾರ್ಥ್‌ ಜೊತೆ ಡ್ಯುಯೆಟ್‌ ಹಾಡಲು ಕಾಲಿವುಡ್‌ಗೆ ಹೊರಟ ಆಶಿಕಾ ರಂಗನಾಥ್

    ಬಳಿಕ ಸದಸ್ಯರ ಬಾಯಲ್ಲಿ ಬಂದ ಹೆಸರು ಜಯಶ್ರೀ, (Jayashree Aradhya) ಸೋಮಣ್ಣ (Somanna Machimada) ಜಯಶ್ರೀಗೆ ಕ್ಷಮೆ ಕೇಳಿದ್ದು, ಕ್ಷಮೆ ಕೇಳುವುದಕ್ಕೆ ನಾನು ಜಯಶ್ರೀಯನ್ನು ಕರೆಯುತ್ತೇನೆ. ಕ್ಯಾಪ್ಟೆನ್ಸಿ ಗೇಮ್ ನಲ್ಲೂ ನನಗೆ ಡಿಸ್ಟರ್ಬ್ ಮಾಡಿದ್ದರು. ಆ ಟಾಸ್ಕ್ ಆದ ಮೇಲೆ ನಾನು ತುಂಬಾ ರೂಡ್ ಆಗಿ ಬಿಹೇವ್ ಮಾಡಿದ್ದೆ. ಗೊತ್ತಿಲ್ಲ ಆ ಸಮಯದಲ್ಲಿ ಬೇಜಾರು ಆಗಿತ್ತು. ದಯವಿಟ್ಟು ಕ್ಷಮಿಸಿ ಎಂದಿದ್ದಾರೆ. ಅದಕ್ಕೆ ಉತ್ತರ ಕೊಟ್ಟ ಜಯಶ್ರೀ, ನಾನು ಎಲ್ಲರ ಬಳಿ ರಿಯಾಕ್ಟ್ ಮಾಡಿ ಬಿಡುತ್ತೇನೆ ಆದರೆ ನಿಮ್ಮ ಬಳಿ ನಾನು ಯಾಕೆ ಮಾಡಲ್ಲ ಎಂದರೆ ನಿಮ್ಮ ಮೇಲೆ ಗೌರವಾನು ಇದೆ, ಭಯಾನು ಇದೆ ಎಂದಿದ್ದಾರೆ.

    ಸಾನ್ಯಾ ಕೂಡ ಜಯಶ್ರೀ ಬಳಿ ಕ್ಷಮಾಪಣೆ ಕೇಳಿದ್ದಾಳೆ. ಇವಳಿಗೆ ಏನು ಮಾಡಿಯೇ ಇಲ್ಲ. ಆದರೂ ಪ್ರತಿಸಲ ನಾಮಿನೇಟ್ ಅಂತ ಬಂದಾಗ ನಿನ್ನ ಹೆಸರನ್ನೇ ಎತ್ತಿದ್ದೀನಿ. ಟಾಸ್ಕ್ ಆಡುವಾಗಲೂ ಫಿಟ್ನೆಸ್ ಇರಬೇಕು ಅಂತೆಲ್ಲಾ ಹೇಳಿದ್ದೀನಿ. ಆದರೆ ಈ ಮನೆಯಲ್ಲಿ ಅದು ಈಗ ಉಪಯೋಗಕ್ಕೆ ಇಲ್ಲ. ಗೊತ್ತೋ ಗೊತ್ತಿಲ್ಲದೆಯೋ ನಿನ್ನ ಹೆಸರನ್ನೇ ಹೆಚ್ಚು ಸಲ ಎತ್ತಿದ್ದೀನಿ ನನ್ನನ್ನು ಕ್ಷಮಿಸು. ನಿನ್ನ ಸದ್ಗುಣಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅರ್ಥಾನೆ ಮಾಡಿಕೊಳ್ಳಲಿಲ್ಲ. ನಾನು ನಿನ್ನ ಒಳ್ಳೆ ಗೆಳತಿಯಾಗಬೇಕು ಎಂದಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

    ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

    ಸೋನು ಸದ್ಯಕ್ಕೆ ರಾಕಿ (Rakesh Adiga)  ಬಗ್ಗೆ ಇರುವ ಪೊಸೆಸಿವ್‍ನೆಸ್ ಅನ್ನು ಕಳೆಯುವುದಕ್ಕೆ ಯತ್ನಿಸುತ್ತಿದ್ದಾಳೆ. ಇಂದು ಬೆಳ್ಳಂ ಬೆಳ್ಳಗ್ಗೆಯೇ ಕುಳಿತು ರಾಕಿ ಬಗ್ಗೆ ಸೋಮಣ್ಣ (Somanna Machimada) ಹತ್ತಿರ ಮಾತನಾಡುತ್ತಿದ್ದಳು. ಬೇಬಿ ಥರ ಚೇಂಜ್ ಇರೋನು ಅಂದ್ರೆ ಅದು ನನ್ನ ಮೂರ್ಖತನ. ಅವನು ನನಗೆ ಆ ಸಲಿಗೆ ಕೊಟ್ಟು, ನನಗೆ ಕೇರ್ ಮಾಡಿದ್ದಾನೆ ಅಂದ್ರೆ ಅದು ನನಗೆ ಒಳ್ಳೆಯದ್ದೆ. ನಂಗೆ ಯಾವ ಥರದ್ದು ಫೀಲಿಂಗ್ಸ್ ಇಲ್ಲ ಸೋಮಣ್ಣ. ನಂಗೆ ಅವನ ಮೇಲೆ ಅಯ್ಯೋ ಎನಿಸಿದೆ. ಅಯ್ಯೋ ಎನಿಸಿದಾಗಲೇ ಒಬ್ಬ ಮನುಷ್ಯ ಇನ್ನೊಬ್ಬನಿಗೆ ಕೇರ್ ಮಾಡುವುದಕ್ಕೆ ಸಾಧ್ಯ. ಸದ್ಯಕ್ಕೆ ನನಗೆ ಏನು ಕೊರತೆಯಾಗಿದೆ ಅಂದ್ರೆ. ಅವನ ಕ್ಯಾರೆಕ್ಟರ್ ಇರುವುದೇ ಹಾಗೆ ಅಲ್ವಾ. ಅವನು ನನ್ನ ಜೊತೆ ಇರುವ ತರ ಬೇರೆ ಹುಡುಗಿಯರ ಬಳಿ ಇದ್ದರೆ ನನಗ್ಯಾಕೆ ಪೊಸೆಸಿವ್‍ನೆಸ್ ಆಗ್ತಿದೆ. ಲವ್ ಅಲ್ಲ ಮಣ್ಣು ಅಲ್ಲ ಮಸಿ ಅಲ್ಲ ಎಂದಿದ್ದಾರೆ.

    ನನ್ನ ಫ್ಯೂಚರೇ ಬೇರೆ, ಅವನ ಕನಸೇ ಬೇರೆ. ಆದರೆ ಅವನು ಎಲ್ಲಾ ಹುಡುಗಿಯರ ಜೊತೆ ಇದ್ದಾಗ ನಂಗ್ಯಾಕೆ ಪೊಸೆಸಿವ್‍ನೆಸ್ ಬರುತ್ತಿದೆ ಗೊತ್ತಾಗುತ್ತಿಲ್ಲ. ಅವನು ಮೊದಲಿನಿಂದಲೂ ಎಲ್ಲಾ ಹುಡುಗಿಯರ ಜೊತೆಗೂ ಒಂದೇ ರೀತಿಯಲ್ಲಿ ಇದ್ದಿದ್ದರೆ ನಂಗೆ ಈ ರೀತಿಯೆಲ್ಲಾ ಅನ್ನಿಸುತ್ತಾ ಇರಲಿಲ್ಲ. ಆದರೆ ಅವನು ಮಾತಲ್ಲಿ ಹೇಳುತ್ತಿದ್ದಾನೆ. ಎರಡು ದಿನದಿಂದ ನಡವಳಿಕೆ ಚೇಂಜ್ ಆಗುತ್ತಿದೆ. ನೀನು ಪೊಸೆಸಿವ್‍ ಆಗಬೇಡ. ನಾನು ಎಲ್ಲರ ಜೊತೆಗೂ ಹೀಗೆ ಇರೋದು ಅಂತಿದ್ದಾನಲ್ಲ. ಹಂಗೆಲ್ಲಾ ಎಲ್ಲಿದ್ದ. ಮೊದಲಿನಿಂದ ನನ್ನ ಜೊತೆಗೆ ಮಾತ್ರ ಅಲ್ವಾ ಇದ್ದದ್ದು ಎಂದಿದ್ದಾಳೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

    ಇದನ್ನೆಲ್ಲಾ ಕೇಳಿಸಿಕೊಂಡ ಗುರೂಜಿ, ಹಂಗೆಲ್ಲಾ ಏನಿಲ್ಲಾ ಕಣವ್ವ ನೀನೇ ಲೇಟ್ ಆಗಿ ಹೋಗಿ ನಂದೆ ಬಸ್ಸು ಅಂತ ಇದ್ದೀಯಾ. ಬಸ್ ಮುಂಚೆನೆ ಓಡಿದೆ, ಪಿಕಪ್ ಮಾಡಿದೆ, ಡ್ರಾಪ್ ಮಾಡಿದೆ ಎಲ್ಲಾ ಕಥೆ ಗೊತ್ತಿದ್ದರು, ನಂದೇ ಬಸ್ ನಂದೆ ಬಸ್ ಅಂದ್ರೆ. ಊರಿಗೆ ಗೊತ್ತು ಆ ಬಸ್ ಬೇರೆ ಹತ್ತಿದೆ ಅಂತ. ಟಿಕೆಟ್ ತಗೊಂಡ್ವಾ ಮನೆಗೋದ್ವಾ, ಇಳಿದ್ವಾ ಅಂತ ಅನ್ನೋದು ಬಿಡೋದು ಬಿಟ್ಟು ನಂದೆ ಬಸ್ ಅಂತಾ ಇದ್ರೆ ಅಂತ ಗುರೂಜಿ ಅಷ್ಟೆಲ್ಲಾ ಹೇಳಿದರೂ ಅದನ್ನು ಕೇಳುವುದಕ್ಕೆ ಸೋನು ರೆಡಿ ಇಲ್ಲ. ನಿನ್ನೆಯಿಂದ ನಾನು ಹ್ಯಾಪಿಯಾಗಿದ್ದೀನಿ. ಬಿಕಾಸ್ ನಿಮ್ಮತ್ರ ಎಲ್ಲಾ ಟೈಪಾಸ್ ಮಾಡುತ್ತಾ ಇದ್ದೀನಿ ಎಂದಿದ್ದಾಳೆ. ಜೊತೆಗೆ ನನಗೆ ಉರಿಸಬೇಕು ಅಂತ ಯಾರಾದರೂ ಮಾಡಿದರೆ ನಾನು ಉರಿದುಕೊಳ್ಳಲ್ಲ. ನಾಣು ಹೊರಗಡೆ ಬಂದು ಬಿಟ್ಟಿದ್ದೀನಿ. ಇದನ್ನೂ ಓದಿ: ಸಿದ್ಧಾರ್ಥ್‌ ಜೊತೆ ಡ್ಯುಯೆಟ್‌ ಹಾಡಲು ಕಾಲಿವುಡ್‌ಗೆ ಹೊರಟ ಆಶಿಕಾ ರಂಗನಾಥ್

    ಅದಾದ ಮೇಲೆ ರಾಕಿಗೆ ಉರಿಸುವುದಕ್ಕೆ ಸೋನು (Sonu Srinivas Gowda) ಶುರು ಮಾಡಿದಳು. ಸೋನುಗೆ ಉರಿಸಲು ರಾಕಿ ಮತ್ತು ಜಯಶ್ರೀ ಶುರು ಮಾಡಿದರು. ಇದರ ಪರಿಣಾಮ ರೂಪೇಶ್ ಬಳಿ ಒಂದು ಮೊಟ್ಟೆ ತೆಗೆದುಕೊಂಡು, ತನ್ನ ಬಳಿಯಿದ್ದ ಒಂದು ಮೊಟ್ಟೆ ಹಾಕಿದ ಸೋನು (Jayashree Aradhya) ಸೂಪರ್ ಆಗಿ ಎಗ್ ರೈಸ್ (Egg Rice) ಮಾಡಿದಳು. ಜಯಶ್ರೀ ಒಂದೇ ಒಂದು ತುತ್ತು ಕೊಡು ಎಂದರೂ ಕೊಡಲಿಲ್ಲ. ಆದರೆ ರೂಪೇಶ್ (Roopesh Shetty)  ಮೂರು ಸ್ಪೂನ್ ಕೊಟ್ಟಿದ್ದಾನೆ. ಎಗ್ ರೈಸ್  ತಿನ್ನುವಾಗ ಡೈನಿಂಗ್ ಟೇಬಲ್ ಮೇಲೆ ನಾನಾ ಫನ್‍ಗಳು ನಡೆದಿವೆ. ಸೋನು, ರೂಪೇಶ್‍ಗೆ ಎಗ್ ರೈಸ್ ತುತ್ತು ಕೊಟ್ಟಿದ್ದಾಳೆ. ಆಗ ಎದುರಿಗಿದ್ದ ರಾಕಿ, ಕಿಸ್ ಕೊಡೇ ಜಯಶ್ರೀ, ನೀನೆ ಕೊಡ್ತಿಯಾ ಅಥವಾ ನಾನು ಕೊಡ್ಲಾ ಅಂತ ಹೇಳಿ ರಾಕಿನೆ ಕಿಸ್ ಕೊಟ್ಟಿದ್ದಾನೆ. ಈ ಕಡೆ ರೂಪಿಗೆ ಭಯ. ಸೋನು ಎಲ್ಲಿ ನನಗೆ ಕಿಸ್ ಕೊಟ್ಟು ಬಿಡುತ್ತಾಳೋ ಅಂತ. ಮುಖ ಮುಖ ನೋಡಿ ಗಾಬರಿಯಲ್ಲಿಯೇ ಎಗ್ ರೈಸ್ ತಿಂದಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಉದಯ್‍ಗೆ ಹೋಲಿಸಿದ ಸಾನ್ಯಾ – ರೂಪೇಶ್ ಮನಸ್ಸಿಗೆ ತುಂಬಾ ನೋವು?

    ಉದಯ್‍ಗೆ ಹೋಲಿಸಿದ ಸಾನ್ಯಾ – ರೂಪೇಶ್ ಮನಸ್ಸಿಗೆ ತುಂಬಾ ನೋವು?

    – ರೂಪೇಶ್‍ನನ್ನು ಸಾನ್ಯಾ ಇಷ್ಟೇನಾ ಅರ್ಥ ಮಾಡಿಕೊಂಡಿದ್ದು

    ರೂಪೇಶ್ ಮತ್ತು ಸಾನ್ಯಾ ನಡುವೆ ಮನೆಯಲ್ಲಿ ಆಗಾಗ ಸಣ್ಣ ಸಣ್ಣ ಮನಸ್ತಾಪಗಳು ಆಗುತ್ತಲೇ ಇರುತ್ತವೆ. ಒಂದು ಹಗ್ ಕೊಟ್ಟಿಲ್ಲದ ಕಾರಣಕ್ಕೋ, ಸಮಯ ಕೊಡದೆ ಇರುವ ಕಾರಣಕ್ಕೋ ಅದು ಜಗಳ ಅಲ್ಲ ಹೆಲ್ದಿ ಚರ್ಚೆಗಳು ನಡೆಯುತ್ತಲೆ ಇರುತ್ತವೆ. ಇವತ್ತು ಕೂಡ ಅಂತದ್ದೊಂದು ಸಣ್ಣ ಜಗಳವೇ ಆರಂಭವಾಗಿತ್ತು. ಆದರೆ ಮಧ್ಯೆ ಮಾಜಿ ಸ್ಪರ್ಧಿ ಉದಯ್ ಹೋಲಿಕೆ ರೂಪೇಶ್ ಮನಸ್ಸಿಗೆ ಅಗಾಧವಾದ ನೋವು ತಂದಿದೆ.

    ಸಾನ್ಯಾ, ರೂಪೇಶ್ ಮತ್ತು ಸೋನು ಕೂತು ಬಿಟ್ಟರ್ ಬೆಟರ್ ಹೇಳುತ್ತಾ ಇದ್ದರು. ಆ ರೈಮ್ಸ್ ಅಷ್ಟು ಈಸಿಯಾಗಿಲ್ಲದ ಕಾರಣ ಕಷ್ಟಪಟ್ಟು ಸಾನ್ಯಾ ಹೇಳುತ್ತಾ ಇದ್ದಳು. ರೂಪೇಶ್ ಗಮನವಿಟ್ಟು ಕೇಳುತ್ತಾ ಇದ್ದ. ಆದ್ರೆ ರೂಪೇಶ್ ಪಕ್ಕದಲ್ಲಿ ಕೂತಿದ್ದ ಗುರೂಜಿ ಸಣ್ಣ ಚೇಷ್ಟೇ ಮಾಡಿದ್ದಾರೆ. ಅದು ಸಾನ್ಯಾಗೆ ಉರಿದು, ಅಲ್ಲಿಂದ ಮತ್ತೊಂದು ಸೋಫಾದ ಮೇಲೆ ಎದ್ದು ಹೋಗಿದ್ದಾಳೆ. ನಾವೂ ಎಷ್ಟು ಅಂತ ನೋಡುವುದು. ಬರೀ ನಿಮ್ಮದೇ ಕೇಳಬೇಕಾ. ಇದು ಫಸ್ಟ್ ಟೈಮ್ ಅಲ್ಲ ನೀವೂ ಹಿಂಗೆ ಮಾಡುತ್ತಾ ಇರುವುದು. ನಾನು ತಾಳ್ಮೆಯಿಂದ ಎಷ್ಟು ಸಲ ಅಂತ ಇರಲಿ. ಮಾತಾಡಿಕೊಳ್ಳಿ, ಏನಾದರೂ ಮಾಡಿಕೊಳ್ಳಿ. ತುಂಬಾ ಇರಿಟೇಟ್ ಮಾಡ್ತೀರಾ ಎಂದಿದ್ದಾಳೆ. ಇದನ್ನೂ ಓದಿ: ಮುಂದೆ ಕ್ಲೋಸ್ ಆಗಿರುವ ಜಯಶ್ರೀಯೇ ಸೋನು ಬಗ್ಗೆ ಕೆಟ್ಟ ಭವಿಷ್ಯ ನುಡಿದಳಾ?

    ಆದ್ರೆ ರೂಪೇಶ್ ಬಾ ಇಲ್ಲಿಗೆ ಬಾ ಇಲ್ಲಿಗೆ ಅಂತ ಕರೆದರೂ ಸಾನ್ಯಾ ಬಂದಿಲ್ಲ. ನಿನ್ನೆ ರಾತ್ರಿಯೂ ಅದನ್ನೇ ಮಾಡಿದ್ದೀರಿ. ನಾನು ನೀವಿಬ್ಬರು ಇದ್ದ ಕಡೆ ನಾನು ಬರುವುದೇ ಇಲ್ಲ ಎಂದಿದ್ದಾಳೆ. ಆಗ ರೂಪೇಶ್, ಇದು ಮೊದಲ ಸಲ ತಾನೇ. ಬಾ ಇಲ್ಲಿಗೆ ಒಂದೇ ಒಂದು ಸಲ ಎಂದಿದ್ದಾನೆ. ಇದೆಲ್ಲಾ ಮುಗಿದರು ಸಾನ್ಯಾ ಮಾತ್ರ ಬರಲಿಲ್ಲ. ಕಡೆಗೆ ಎಲ್ಲಾ ಎದ್ದು ಹೋಗುವಾಗ ಗುರೂಜಿ, ನೀವಿಬ್ಬರು ಇಲ್ಲಿಯ ತನಕ ಮಾತನಾಡುತ್ತಲೇ ಇರಲಿಲ್ಲ ಹೊಸದಾಗಿ ಮಾತನಾಡುತ್ತಿದ್ದೀವಿ ಅನ್ನೋ ಥರ ಆಡುತ್ತಿರಲ್ಲ ಅಂದಿದ್ದಾರೆ. ಇದು ಸಾನ್ಯಾಗೆ ಕೋಪ ತರಿಸಿದೆ. ಇದನ್ನೂ ಓದಿ: ಸೋನು ಹಿಂದೆ ಸಾವಿರ ಹುಡುಗರು ಇದ್ದಾರಂತೆ – ಹಿಂದೆ ನಿಂತಿದ್ದ ಗುರೂಜಿಗೆ ನಾನೊಬ್ಬನೆ ಅಲ್ವಾ ಅನ್ನೋ ಅನುಮಾನ!

    ಸಾನ್ಯಾ ಬಳಿ ಬಂದು ರೂಪೇಶ್ ವಿವರಣೆ ನೀಡಿದ್ದಾನೆ. ಅದಕ್ಕೂ ಒಪ್ಪದೆ ಮತ್ತೆ ವಾದ ಮಾಡುತ್ತಲೇ ಇದ್ದಾಗ, ರೂಪೇಶ್, ಆಯ್ತು ಬಿಡು ಸಾರಿ ಎಂದಿದ್ದಾನೆ. ಇಬ್ಬರ ನಡುವೆ ಕೋಳಿ ಜಗಳ ಮುಂದುವರೆದಿದೆ. ನನ್ನದು ತಪ್ಪಲ್ಲ ನಿನ್ನದು ತಪ್ಪಲ್ಲ ಎಂದೇ ವಾದ ಮಾಡಿದ್ದಾರೆ.

    ಮತ್ತೆ ರಾತ್ರಿ 9.30ಕ್ಕೆ ಮತ್ತೆ ರೂಪೇಶ್ ಸಾನ್ಯಾ ಮಾತು ಶುರು ಮಾಡಿದ್ದಾರೆ. ನಾನು ಆಗಲೇ ಕರೆದಾಗಲೂ ನೀನು ಬರಲೇ ಇಲ್ಲ. ಒಂದು ಹಗ್ ಬೇಕು ಅಂತ ಕರೆದೆ ಅಷ್ಟೇ ಎಂದಾಗ ಜಶ್ವಂತ್, ನೀವು ಕೂತಿದ್ರಿ. ಆಗ ನೀನು ಏನೋ ಅಂದೆ ಅದು ನಂಗೆ ಕ್ಲಾರಿಟಿ ಸಿಕ್ಕಿಲ್ಲ. ಅದಕ್ಕೆ ಹೋದೆ ಎಂದಿದ್ದಾನೆ ರೂಪೇಶ್. ಏನೋ ಅಂದೇ ನಂಗೆ ಕನೆಕ್ಟ್ ಅಲ್ಲ ಅಂತ ನಾನು ಹೋದೆ ಅಂದಾಗ ಸಾನ್ಯಾ ಅದೇನು ಅಂತ ಬಿಡಿಸಿ ಹೇಳು ಅಂದಿದ್ದಾಳೆ. ಆಗ ರೂಪೇಶ್ ವಿಚಾರ ಹೇಳುವುದಕ್ಕೆ ತಡಕಾಡಿದ್ದಾನೆ. ನಾನು ಬಂದಾಗ ನಿಮ್ಮಿಬ್ಬರ ಮಾತು ಕಟ್ ಆಯ್ತು. ಅದಕ್ಕೆ ನಾನು ಎದ್ದು ಹೋದೆ ಎಂದಿದ್ದಾನೆ. ಅದಾದ ಬಳಿಕ ಸಾನ್ಯಾ ಒಂದಷ್ಟು ವಿಚಾರಗಳನ್ನು ತೆಗೆದು ಮತ್ತೆ ವಾದ ಮಾಡಿದ್ದಾಳೆ. ವಾದವೆಲ್ಲಾ ಮುಗಿದ ಮೇಲೆ ನಾನು ನಿನ್ನ ಕ್ಯಾರೆಕ್ಟರ್‌ಗೂ ಅವನ ಕ್ಯಾರೆಕ್ಟರ್ ಹೋಲಿಕೆ ಮಾಡುತ್ತಿಲ್ಲ ಎಂದಾಗ ರೂಪೇಶ್ ಹಂಗೆಲ್ಲಾ ಮಾತನಾಡಬೇಡ. ಎಲ್ಲರಿಗೂ ಗೊತ್ತಾಗಲ್ಲ. ಅಂತದ್ದು ನಾನು ಏನು ಮಾಡಿದೆ ಎಂದಿದ್ದಾಳೆ.

    ಮತ್ತೆ ವಾದ ಪ್ರತಿವಾದ ಮುಂದುವರಿದು ಮಾತು ಮತ್ತೊಂದು ಸೋಫಾಗೆ ಶಿಫ್ಟ್ ಆಗಿದೆ. ಸಣ್ಣ ಸಣ್ಣ ಕೋಪ ಇರಬೇಕು ಓಕೆ. ಆದರೆ ಅದನ್ನೇ ಕಾಂಪ್ಲಿಕೇಟ್ ಮಾಡಿದರೆ ಮತ್ತೆ ಇನ್ನೇನೋ ಆಗುತ್ತೆ ಎಂದು ರೂಪಿ ಹೇಳಿದ್ದಾನೆ. ಅದಕ್ಕೆ ಸಾನ್ಯಾ, ಈಗ ಏನಾಗಿದ್ದು ನಿಂಗೆ ಅವನ ಹೆಸರು ಎತ್ತಿದ್ದ ಎಂದಾಗ. ಎತ್ತಬೇಡ. ಅದು ನಂಗೆ ಇಷ್ಟವೂ ಇಲ್ಲ. ನೀನು ಒಂದು ವಿಚಾರಕ್ಕೆ ತೆಗೆದಿರುತ್ತೀಯಾ. ಅದು ಎಷ್ಟು ದೊಡ್ಡ ಪದ ಗೊತ್ತಾ. ನೀನು ಉದಯ್ ಥರ ಕಾಣುತ್ತೀಯಾ ಅಂತ ಛೀ.. ಆ ಥರ ಎಲ್ಲಾ ಯಾಕೆ ಮಾತನಾಡುತ್ತೀಯಾ. ಹಂಗೇನಾದರೂ ಕಾಣಿಸ್ತಾ ನಿಂಗೆ ಎಂದಾಗ ಸಾನ್ಯಾ ಕ್ಷಮೆ ಕೇಳಿದ್ದಾಳೆ. ಒಂದಷ್ಟು ಮಾತು ಕತೆಯ ಮೂಲಕ ಆ ಟಾಪಿಕ್ ಮುಗಿದಿದೆ.

    Live Tv
    [brid partner=56869869 player=32851 video=960834 autoplay=true]

  • ಸೋನು ಹಿಂದೆ ಸಾವಿರ ಹುಡುಗರು ಇದ್ದಾರಂತೆ – ಹಿಂದೆ ನಿಂತಿದ್ದ ಗುರೂಜಿಗೆ ನಾನೊಬ್ಬನೆ ಅಲ್ವಾ ಅನ್ನೋ ಅನುಮಾನ!

    ಸೋನು ಹಿಂದೆ ಸಾವಿರ ಹುಡುಗರು ಇದ್ದಾರಂತೆ – ಹಿಂದೆ ನಿಂತಿದ್ದ ಗುರೂಜಿಗೆ ನಾನೊಬ್ಬನೆ ಅಲ್ವಾ ಅನ್ನೋ ಅನುಮಾನ!

    ಬಿಗ್ ಬಾಸ್ (Bigg Boss) Kannada OTT Aryavardhan Guruji And  ಮನೆಯಲ್ಲಿ ಸೋನು (Sonu Srinivas Gowda) ಸಿಕ್ಕಾಪಟ್ಟೆ ಹಚ್ಚಿಕೊಂಡಿರುವುದು ಒನ್ ಅಂಡ್ ಓನ್ಲಿ ರಾಕೇಶ್‍ನನ್ನು (Rakesh Adiga) ಮಾತ್ರ. ಅದಕ್ಕೂ ಒಂದು ರೀಸನ್ ಇದೆ. ರಾಕೇಶ್ ಬೇರೆ ಯಾವ ಹುಡುಗಿಯರ ಜೊತೆ ಮಾತನಾಡುವುದಿಲ್ಲ, ಬೇರೆ ಯಾವ ಹುಡುಗಿಯರನ್ನು ಹಗ್ ಮಾಡುವುದಿಲ್ಲ ಎಂಬ ಕಾರಣಕ್ಕೆ ಸೋನು ಕೂಡ ಅದಕ್ಕೆ ಹೊರತಾಗಿಲ್ಲ. ತಾನು ಎಕ್ಸ್ಪೆಕ್ಟ್ ಮಾಡಿದ್ದಂತೆ ಅವಳು ನಡೆದುಕೊಂಡಿದ್ದಾಳೆ. ಅದು ಇವತ್ತು ರೂಪೇಶ್‍ಗೆ ಕೈ ತುತ್ತು ಕೊಟ್ಟಾಗಲೇ ಗೊತ್ತಾಯ್ತು. ಬಿಗ್ ಬಾಸ್ ಮನೆಯಲ್ಲಿ ನಾನು ಕೈ ತುತ್ತು ಕೊಡುತ್ತಿರುವ ಎರಡನೇ ಹುಡುಗ ನೀನು ಎಂದಿದ್ದಾಳೆ.

    ಆದ್ರೆ ಸೋನು ಈ ರೀತಿ ಹಚ್ಚಿಕೊಳ್ಳುವುದು ರಾಕೇಶ್‍ಗೆ ಇಷ್ಟವಾಗುತ್ತಿಲ್ಲ. ಅವನು ಯೋಚನೆ ಮಾಡುವ ರೀತಿಯೂ ಸರಿಯಾಗಿದೆ. ಬಿಗ್ ಬಾಸ್ ಮನೆಯ ಜರ್ನಿ ಇರುವುದು ಇನ್ನು ಮೂರೇ ದಿನ. ನಾಲ್ಕನೇ ದಿನಕ್ಕೆ ಎಲ್ಲರೂ ಹೊರಗಿನ ಪ್ರಪಂಚದಲ್ಲಿರುತ್ತಾರೆ. ಅವಳ ಫೀಲಿಂಗ್ಸ್ ಜಾಸ್ತಿಯಾಗಿ ಅದರಿಂದ ಇಬ್ಬರಿಗೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆಲವೊಮ್ಮೆ ನೇರ ಮಾತಿನಿಂದ ಉತ್ತರ ಕೊಡುತ್ತಾನೆ. ಈ ಮಾತುಗಳು ಸೋನುಗೆ ಫೀಲಿಂಗ್ ಲೆಸ್ ಹುಡುಗ ಎನಿಸಿದೆ. ಇದನ್ನೂ ಓದಿ: ಸೋನು-ರಾಕೇಶ್ ನಡುವೆ ಜಯಶ್ರೀ ಆಟ!

    ಸೋನು ತನಗೆ ಬೇಜಾರಾದಾಗ ಕನ್ನಡಿ ಮುಂದೆ ನಿಂತು ಮಾತನಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿದ್ದಾಳೆ. ಅವಳೇನಾದರೂ ತಪ್ಪು ಮಾಡಿದ್ದೀನಿ ಎನಿಸಿದರೆ ಆ ಕನ್ನಡಿಯಲ್ಲಿರುವ ಸೋನುಗೆ ಹೇಳಿ, ತಿದ್ದಿಕೊಳ್ಳುತ್ತಾಳೆ. ಈಗ ರಾಕಿ ವಿಚಾರದಲ್ಲಿಯೂ ಅದನ್ನೇ ಮಾಡುತ್ತಿದ್ದಾಳೆ. ಮಿರರ್ ಮುಂದೆ ಕುಳಿತು, ಬಿಡು ಸೋನು ನಿಂಗೆ ಯಾರ ಜೊತೆಗೂ ಫೀಲಿಂಗ್ಸ್ ಬರಲ್ಲ. ನೀನು ಆ ಥರದ ಹುಡುಗಿ. ನಿನಗೆ ಕಲ್ಲು ಮನಸ್ಸು, ನಂಗೆ ಗೊತ್ತು ನೀನು ಏನು ಅಂತ ಹಂಗೆ ಹಿಂಗೆ ಅಂತ ಹೇಳ್ತಿದ್ದೆ ತಾನೇ. ಈಗ ಹೆಂಗೆ ಫೀಲಿಂಗ್ಸ್ ಬಂತು ಹೇಳು. ನಿಂದು ತಪ್ಪು ಸೋನು. ಗುಡ್ ಗರ್ಲ್. ನಾಳೆಯಿಂದ ಕೇರ್ ಟೇಕ್ ಮಾಡಬಾರದು. ಅವರಾಗಿ ಅವರು ಮಾತನಾಡಿಸಿದರೆ ಮಾತ್ರ ಮಾತನಾಡಬೇಕು. ಇಲ್ಲಿ ಫೀಲಿಂಗ್ಸ್‌ಗೆ ವ್ಯಾಲ್ಯೂ ಇಲ್ಲ ಆಯ್ತಾ. ಆದರೂ ಏನೋ ಒಂಥರ ಫೀಲ್ ಆಗುತ್ತಾ ಇದೆ. ಕಣೇ. ಏನು ಫೀಲಿಂಗ್ ಆಗುತ್ತಾ ಇದೆ ಕಣೆ. ಅದೇ ನಂಗು ಗೊತ್ತಿಲ್ಲ ಕಣೇ. ಮಾಡುವುದೆಲ್ಲಾ ಮಾಡಿ ಈಗ ಏನು ಗೊತ್ತಿಲ್ಲ ಅಂದ್ರೆ. ನೀನು ಏನು ತಪ್ಪು ಮಾಡಿಲ್ಲ. ನೀನು ಜಸ್ಟ್ ಅವನಿಗೆ ಒಂದು ತಾಯಿ ಮಗು ಥರ ಟ್ರೀಟ್ ಮಾಡಿದ್ದೀಯಾ ಅಷ್ಟೇ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದೀಯಾ ತಾನೇ. ಇದನ್ನೂ ಓದಿ: ಪ್ರೀತಿಯಿಂದ ಆಯ್ಕೆ ಮಾಡಿದ ಸೋನು ಮಾತಿನಿಂದ ಜಯಶ್ರೀಗೆ ಬೇಸರ – ಎಲ್ಲರೂ ದಂಗಾಗುವಂತೆ ಕಿರುಚಿದ್ಯಾಕೆ ಜಯಶ್ರೀ

    ನೀನು ಮಗು ಥರ ನೋಡಿದ್ದು ಅದೆಲ್ಲಾ ಓಕೆ. ಆದರೆ ಯಾಕೆ ನಿಂಗೆ ಪೊಸೆಸಿವ್‌ನೆಸ್ ಆಗುತ್ತಿದೆ. ತಲೇನೆ ಕೆಡಿಸಿಕೊಳ್ಳುವುದಕ್ಕೆ ಹೋಗಬೇಡ. ಯಾರಿಗೋ ಕೇರ್ ಟೇಕ್ ಮಾಡುವುದಕ್ಕೆ ಹೋಗಿ, ನೀನ್ಯಾಕೆ ಮೂಡ್‍ಆಫ್ ಆಗ್ತೀಯಾ. ನಿನ್ನ ಹಿಂದೆ ಸಾವಿರ ಜನ ಹುಡುಗರು ಇದ್ದಾರೆ ಅಂತ ಸೋನು ಹೇಳಿದ್ದೆ ತಡ, ಆ ಕತ್ತಲಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದ ಗುರೂಜಿ (Aryavardhan Guruji)  ಹೊಟ್ಟೆ ಉಣ್ಣಾಗಿಸುವಷ್ಟು ಕಾಮಿಡಿ ಮಾಡಿದ್ದಾರೆ. ಎಲ್ಲಿದ್ದಾರೆ ಸಾವಿರ ಜನ ಹುಡುಗರು. ಇಲ್ಲಿ ನಾನೊಬ್ಬನೆ ಇರುವುದು. ಹಲೋ ನಾನು ಒಬ್ಬನೆ ಇರುವುದು. ನಾನೇ ನಿಂಗೆ ಸಾವಿರ ಜನರಂತೆ ಕಾಣುತ್ತಿದ್ದೀನಾ ಸೋನು ಅಂತ ಪ್ರಶ್ನೆ ಮಾಡಿದರೂ ಸೋನು ಸುಮ್ಮನೆ ಹೋಗಿದ್ದಾಳೆ. ಆದರೆ ಸೋನು ಮನಸ್ಥಿತಿ ನಾರ್ಮಲ್ ಆಗಿ ಇದ್ದಿದ್ದರೆ ಗುರೂಜಿ ಕಥೆ ಆ ಕಷ್ಣ ಮುಗಿದೇ ಹೋಗಿ ಬಿಡುತ್ತಾ ಇತ್ತು. ಮೈಯಲ್ಲಿರುವ ಬೆವರನ್ನೇ ಇಳಿಸುವಷ್ಟು ಜೋರು ಧ್ವನಿಯಲ್ಲಿ ಸೋನು ಮಾತನಾಡುತ್ತಿದ್ದಳು.

    Live Tv
    [brid partner=56869869 player=32851 video=960834 autoplay=true]

  • ಸಾಲ ತೀರಿಸಲು ಬಂದಿದ್ದಾರಾ ಜಶು – ರೂಪೇಶ್ ಮೇಲೆ ಇರೋದು ಸಿಟ್ಟೋ, ಕಿಂಡಲ್ಲೋ?

    ಸಾಲ ತೀರಿಸಲು ಬಂದಿದ್ದಾರಾ ಜಶು – ರೂಪೇಶ್ ಮೇಲೆ ಇರೋದು ಸಿಟ್ಟೋ, ಕಿಂಡಲ್ಲೋ?

    ಬಿಗ್‍ಬಾಸ್ ಓಟಿಟಿ ಮುಗಿಯುವುದಕ್ಕೆ ಕಾಲ ತುಂಬಾ ಸನಿಹವಾಗಿದೆ. ಇನ್ನೆರಡು ವಾರ ಕಳೆದರೆ ಸಂಪೂರ್ಣವಾಗಿ ಬಿಗ್‍ಬಾಸ್ ಮುಗಿದಿರುತ್ತದೆ. ಈ ಮಧ್ಯೆ ಇಂದು ನಾಮಿನೇಷನ್ ಪ್ರಕ್ರಿಯೆ ಕೂಡ ಮೊದಲಿನಂತೆಯೇ ನಡೆದಿದೆ. ಮನೆಯವರೆಲ್ಲರ ಆಯ್ಕೆಯ ಪ್ರಕಾರ, ಸೋಮಣ್ಣ, ನಂದಿನಿ, ಸೋನು, ಜಯಶ್ರೀ, ಆರ್ಯವರ್ಧನ್ ಅವರು ನಾಮಿನೇಷನ್ ಆಗಿದ್ದರು. ಇನ್ನು ರಾಕೇಶ್ ಜನರ ಆಯ್ಕೆಯಂತೆ ಬಚಾವ್ ಆಗಿದ್ದಾರೆ. ರೂಪೇಶ್ ಕ್ಯಾಪ್ಟನ್ ಆಗಿರುವ ಕಾರಣ ನಾಮಿನೇಷನ್ ಮಾಡುವಂಗಿಲ್ಲ. ಇನ್ನುಳಿದದ್ದು ಸಾನ್ಯಾ ಮತ್ತು ಜಶ್ವಂತ್ ನಾಮಿನೇಷನ್ ಆಗದೇ ಇದ್ದವರು. ಕ್ಯಾಪ್ಟನ್ ಆಗಿದ್ದ ರೂಪೇಶ್ ಅವರಿಗೆ ಬಿಗ್‍ಬಾಸ್ ಸೂಚನೆ ನೀಡಿತ್ತು. ನೇರ ನಾಮಿನೇಷನ್ ಮಾಡುವ ಅವಕಾಶ. ರೂಪೇಶ್‍ಗೆ ಸಾನ್ಯಾ ಕೂಡ ಮುಖ್ಯ ಜಶ್ವಂತ್ ಕೂಡ ಮುಖ್ಯ. ಆದರೆ ಮೊದಲ ಆದ್ಯತೆ ಕೊಟ್ಟಿದ್ದು ಸಾನ್ಯಾಗೆ. ಸೋ ಇಲ್ಲಿ ಜಶ್ವಂತ್ ನೇರ ನಾಮಿನೇಟ್ ಆಗಿದ್ದರು. ಆದರೆ ಇದಾದ ಮೇಲೆ ಒಂದು ಸ್ವಲ್ಪ ಜಶ್ವಂತ್ ಬೇಸರ ಮಾಡಿಕೊಂಡರು ಎನಿಸುತ್ತದೆ. ಫ್ರೆಂಡ್ ಅಂತ ಹೇಳಿ ನಾಮಿನೇಟ್ ಮಾಡಿಬಿಟ್ಟ ಅಂತ ಫನ್ ಆಗಿ ಅಂದು ಹೊರಟಿದ್ದಾರೆ.

    ಆದರೆ ಕುಂತರೂ ನಿಂತರೂ ನಾಮಿನೇಷನ್ ದೇ ಡಿಸ್ಕಷನ್, ನಂದು ಬಳಿ ಬಂದು ಅಳಲು ತೋಡಿಕೊಳ್ಳುತ್ತಿದ್ದ, ಜಶ್ವಂತ್ ಇನ್ನು ಎಂಟರ್ಟೈನ್ ಮಾಡಬೇಕು ಅಂತಿದ್ದಾಗ, ನಂದು ರಿಪ್ಲೆ ಮಾಡಿ ಮಾಡ್ತಾ ಇದ್ದಿಯಾ ಅಲ್ವಾ ಅಂದಿದ್ದಾರೆ. ಆದರೆ ರೂಪೇಶ್ ಕೊಟ್ಟ ರೀಸನ್ ನನಗೆ ಇಷ್ಟ ಆಗಲಿಲ್ಲ. ಹೆಚ್ಚು ನಾಮಿನೇಟ್ ಆಗಿಲ್ಲವಲ್ಲ ಅದಕ್ಕೆ ಅಂತ ಹೇಳಿ ನಾಮಿನೇಟ್ ಮಾಡುವುದು ಎಷ್ಟು ಸರಿ ಎಂದು ಕೇಳಿದ್ದಾರೆ. ಅಲ್ಲಿಗೆ ಮುಗಿದ ಮಾತುಕತೆ ಮತ್ತೆ ಕಸ ಗೂಡಿಸುವಾಗ ಶುರುವಾಗಿದೆ. ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

    ಅತ್ತ ರೂಪೇಶ್ ಮತ್ತು ಸಾನ್ಯಾ ಕೂಡ ಈ ಬಗ್ಗೆ ಡಿಸ್ಕಷನ್ ಮಾಡಿದ್ದಾರೆ. ರೂಪೇಶ್, ನೇರ ನಾಮಿನೇಟ್ ಮಾಡಿದ್ದಕ್ಕೆ ಜಶು ಫೀಲ್ ಮಾಡಿಕೊಂಡಿದ್ದಾರೆ. ಆದರೆ ನನಗೆ ಆಪ್ಶನ್ ಇರಲಿಲ್ಲ. ನಿನ್ನ ಹೇಗೆ ನಾಮಿನೇಟ್ ಮಾಡುವುದಕ್ಕೆ ಸಾಧ್ಯ. ಅದು ನ್ಯಾಯನೂ ಅಲ್ಲ. ನಾನು ಮಾಡಿರುವುದರಲ್ಲಿ ತಪ್ಪಿಲ್ಲ. ಸರಿಯಾಗಿದೆ ನನ್ನ ನಿರ್ಧಾರ ಅಂತ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದಾನೆ. ಆಗ ಸಾನ್ಯ, ಜಶ್ವಂತ್ ಪರ ಮಾತನಾಡಿದ್ದು, ಅವನು ಮೆಚ್ಯುರ್ಡ್ ಇದ್ದಾನೆ. ಅರ್ಥ ಮಾಡಿಕೊಳ್ಳುತ್ತಾನೆ ಎಂದಿದ್ದಾರೆ. ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡಗೆ ಉರಿಸಲು ಜಯಶ್ರೀ ಕೆನ್ನೆಗೆ ಮುತ್ತಿಟ್ಟ ನಟ ರಾಕೇಶ್ ಅಡಿಗ

    ಜಶ್ವಂತ್ ಕಸ ಗುಡಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ರೂಪೇಶ್‍ನಿಂದ ಮತ್ತೆ ಒಂದಷ್ಟು ಫನ್ನಿ ಇನ್ಸಿಡೆಂಟ್ ನಡೆದಿದೆ. ಸ್ಲೈಲ್ ಕೊಟ್ಟು ರೂಪೇಶ್ ಹಗ್ ಮಾಡಿದ್ದಾರೆ. ಆಗ ಜಶ್ವಂತ್, ಏನು ಒಂದು ಸ್ಮೈಲ್ ಕೊಟ್ಟರೆ ಅದಕ್ಕೆ ನಾನು ಬೀಳುತ್ತೇನೆ ಅಂತಾನ. ಒಂದು ಬೆಟರ್ ರೀಸನ್ ಗೊತ್ತಿಲ್ವಾ ನಿನಗೆ ಎಂದಿದ್ದಾರೆ. ಅದಕ್ಕೆ ರೂಪೇಶ್ ಸಮಾಧಾನ ಮಾಡಿದ್ದು, ನೀವಿಬ್ಬರು ಸ್ಟ್ರಾಂಗ್ ಅಂತ ಹೇಳಿದ್ದಾರೆ. ಆದರೆ ಜಶ್ವಂತ್ ಬೇಸರ ಏನು ಅಂದರೆ ಸರಿಯಾದ ರೀಸನ್ ಕೊಟ್ಟಿಲ್ಲ ಅಂತ. ಆಗ ನಂದಿನಿ ಅಲ್ಲಿಯೇ ಪಾಸಾದಾಗ ನಾಮಿನೇಷನ್ ನಿಂಗೆ ಪಾಪ ಎನ್ನಿಸೋದಿಲ್ವಾ ಎಂದಿದ್ದಾರೆ. ಆಗ ನೀನು ಹೀರೋ ಬಿಡು ಎಂದು ನಂದಿನಿ ಹೇಳಿ ತನ್ನ ಕೆಲಸವನ್ನು ಮುಂದುವರೆಸಿದ್ದಾರೆ.

    ಮತ್ತೆ ಅಡುಗೆ ಮನೆಯಲ್ಲಿ ಜಶ್ವಂತ್ ಅಂಡ್ ರೂಪೇಶ್ ಮುಖಾಮುಖಿಯಾಗಿದ್ದಾರೆ. ಆಗ ಜಶ್ವಂತ್, ರೂಪೇಶ್ ಬಳಿ ನಾನು ನನ್ನ ಫ್ಯಾಮಿಲಿಗೆ ಹೇಳಿ ಬಂದಿದ್ದೇನೆ, ಗೆದ್ದುಕೊಂಡು ಬರುತ್ತೇನೆ. ಸಾಲ ಎಲ್ಲಾ ತೀರಿಸೋಣಾ ಅಂತ ಹೇಳಿದ್ದೇನೆ. ಆದರೆ ನೀನು ನನ್ನ ನಾಮಿನೇಟ್ ಮಾಡಿದ್ದೀಯಾ ಅಂದಾಗ ರೂಪೇಶ್ ನಾನು ನಾಮಿನೇಟ್ ಮಾಡಿರುವುದು ಎಲಿಮಿನೇಟ್ ಮಾಡಿಲ್ಲ ಎಂದಿದ್ದಾರೆ. ಈ ಮಧ್ಯೆ ರೂಪೇಶ್ ನೊಣದ ಬಗ್ಗೆ ಕಾಳಜಿ ತೋರಿಸಿದಾಗ ಮತ್ತೆ ಜಶ್ವಂತ್ ಕಿಂಡಲ್ ಮಾಡಿದ್ದಾರೆ. ನೋಡು ನೊಣದ ಬಗ್ಗೆ ಕಾಳಜಿ ತೋರಿಸುತ್ತೀಯಾ ನನ್ನ ಬಗ್ಗೆ ಇಲ್ಲ ಅಂತಾನೆ. ಆಗ ಮತ್ತೆ ವಿವರಣೆ ನೀಡಿದ ರೂಪೇಶ್, ನೋಡು ಹೊರಗೆ ಬಂದಾಗ ಯಾರಾದರೂ ನಿನ್ನ ಅಟ್ಯಾಕ್ ಮಾಡಿದರೆ ನಾನು ಅಲ್ಲಿ ಇರುತ್ತೇನೆ. ಮೊದಲು ನನ್ನ ಟಚ್ ಮಾಡು ಅಂತ ಅಂದಾಗ. ಹಾ ನಂಗೆ ಯಾರಾದರೂ ಹೊಡೆಯೋದಕ್ಕೆ ಬಂದಾಗ ನಾನು ನಿನಗೆ ಫೋನ್ ಮಾಡಿದರೇ ಆ ಮಗ ಇನ್ನೊಂದು 6 ಅವರ್ಸ್‍ನಲ್ಲಿ ಬರುತ್ತೇನೆ ಅಂತ ಹೇಳುತ್ತೀಯಾ ಅಂತ ಒಂದಷ್ಟು ತಮಾಷೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಳಪೆ ಎಂದ ರಾಕೇಶ್ ಮೇಲೆ ಸೋನುಗೆ ಕೆಂಡದಷ್ಟು ಕೋಪ

    ಕಳಪೆ ಎಂದ ರಾಕೇಶ್ ಮೇಲೆ ಸೋನುಗೆ ಕೆಂಡದಷ್ಟು ಕೋಪ

    ವಾರದ ಕ್ಯಾಪ್ಟನ್ ಆಗಬೇಕು ಎಂದು ಸ್ಪರ್ಧೆಗೆ ಇಳಿದಿದ್ದ ಸೋನು ಅಕಸ್ಮಾತ್ ಆಗಿ ನಿರೀಕ್ಷೆಯನ್ನೇ ಮಾಡದೆ ಕಳಪೆ ಬೋರ್ಡ್ ಹೊತ್ತು ಜೈಲು ಪಾಲಾಗಿದ್ದಾಳೆ. ಯಾರು ಏನೇ ಹೇಳಲಿ ಯಾವುದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿರಲಿಲ್ಲ. ತಾನು ಆಡುತ್ತಿದ್ದ ಮಾತಿಗೆ ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆಗಲೂ ತನಗೆ ಏನು ಅನ್ನಿಸುತ್ತೆ ಅದನ್ನ ಮಾತನಾಡಿ, ಅಲ್ಲಿಗೆ ಅದನ್ನೆಲ್ಲ ಮರೆತು ಮತ್ತೆ ನೆಕ್ಸ್ಟ್ ಮೂಮೆಂಟೇ ಅವಳದ್ದೆ ಲೋಕದಲ್ಲಿ ಆಕ್ಟೀವ್ ಆಗಿದ್ದಂತಹ ಹುಡುಗಿ ಎಂದರೆ ಸೋನು. ಆದರೆ ಈ ಬಾರಿ ಸೋನು ಉಳಿಯುವುದು ಕಷ್ಟ ಎನ್ನಲಾಗುತ್ತಿದೆ. ಯಾಕೆಂದರೆ ಕಳಪೆ ಬೋರ್ಡ್ ಹೊತ್ತ ಕೂಡಲೇ ತುಂಬಾ ವೀಕ್ ಆದವಳಂತೆ ಭಾಸವಾಗುತ್ತಿದ್ದಾಳೆ.

    ತನಗೆ ಯಾರಾದರೂ ಕೆಲಸ ಮಾಡು ಎಂದಾಗ, ನಾನೇನು ಕೆಲಸ ಮಾಡಲು ಬಂದಿದ್ದೀನಾ ಅಂತ ಪ್ರತಿ ಬಾರಿಯೂ ಪ್ರಶ್ನಿಸುತ್ತಿದ್ದಳು. ಇದಕ್ಕೆ ಮನೆಮಂದಿಯೆಲ್ಲಾ ಸೇರಿ ಬೆಸ್ಟ್ ಅಂಡ್ ವರ್ಸ್ಟ್ ಪರ್ಫಾಮರ್ ಅನ್ನು ಆಯ್ಕೆ ಮಾಡಬೇಕಾದ ಸಂದರ್ಭ ತಕ್ಕ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಒಂದಷ್ಟು ಮಂದಿ ಜಯಶ್ರೀಗೆ ಬೆಸ್ಟ್ ಎಂದು ಹೇಳಿದರು, ಇನ್ನೊಂದಷ್ಟು ಮಂದಿ ಜಯಶ್ರೀಯನ್ನೇ ವರ್ಸ್ಟ್ ಎಂದರು. ಆದರೂ ಜಯಶ್ರೀ ಜೈಲಿನಿಂದ ಬಂದ ಮೇಲಿಂದ ಹೇಗಾದರೂ ಗೆಲ್ಲಲೇಬೇಕು ಎಂಬ ಹಠ ಹೊತ್ತು ಇವತ್ತು ಬೆಸ್ಟ್ ಎಂಬ ಅವಾರ್ಡ್ ತೆಗೆದುಕೊಂಡಿದ್ದಾಳೆ. ಅದರಂತೆ ಸೋನುಳನ್ನು ಹಲವು ಜನ ಕಳಪೆಗೆ ಆಯ್ಕೆ ಮಾಡಿದರು. ಕೊನೆಗೆ ಸೋನು ಜೈಲು ಸೇರಬೇಕಾಗಿ ಬಂತು.

    ಸೋನುಗೆ ಯಾರೇ ಕಳಪೆ ಅಂತ ಹೇಳಿದ್ದರೂ, ಜೈಲಿಗೆ ಹಾಕಿದ್ದರೂ ಇಷ್ಟು ನೋವು ಆಗುತ್ತಿರಲಿಲ್ಲ ಎಂದು ಕಾಣುತ್ತದೆ. ಆದರೆ ರಾಕೇಶ್ ಅವಳ ಹೆಸರನ್ನು ತೆಗೆದುಕೊಂಡಾಗಲೇ ಆಕೆಯ ಮನಸ್ಸು ಭಾರವಾದಂತೆ ಕಾಣುತ್ತಿತ್ತು. ಜೈಲಿಗೆ ಹೋಗುವ ಸಂದರ್ಭ ದಯವಿಟ್ಟು ಎಲ್ಲರೂ ಇಲ್ಲಿಂದ ಹೋಗಿ ಬಿಡಿ ಎಂದು ರಿಕ್ವೆಸ್ಟ್ ಮಾಡಿದ್ದಳು. ಸ್ವಲ್ಪ ಸಮಯದ ಬಳಿಕ ರಾಕೇಶ್ ಬಂದು ಸಮಾಧಾನ ಮಾಡಲು ಯತ್ನಿಸಿದ. ಆಯ್ತು ಬೈಯ್ಯಬೇಕು ಎನಿಸಿದರೆ ನನ್ನನ್ನು ಬೈದು ಬಿಡು ಎಂದ. ಆದರೆ ಸೋನುಗೆ ರಾಕೇಶ್ ಮುಖವನ್ನು ನೋಡುವುದಕ್ಕೆ ಇಷ್ಟವಿರಲಿಲ್ಲ. ಸುಮ್ಮನೆ ಹೋಗಿಬಿಡು. ನಾನು ಕಿರುಚಿಕೊಳ್ಳುವಂತೆ ಮಾಡಬೇಡ ಎಂದಳು. ಇದನ್ನೂ ಓದಿ: ಹಳೆ ಗರ್ಲ್ ಫ್ರೆಂಡ್‍ಗಾಗಿ ಹಂಬಲಿಸುತ್ತಿರುವ ಜಶ್ವಂತ್..!

    ರಾಕೇಶ್ ಅಲ್ಲಿಂದ ವಾಪಾಸ್ ಆದವ ಗುರೂಜಿ ಬಳಿ ಕುಳಿತು ಆ ಬಗ್ಗೆ ಬೇಸರ ಹೊರಹಾಕಿದ. ತುಂಬಾ ಒಳ್ಳೆ ಫ್ರೆಂಡು ಅಂದುಕೊಂಡಿದ್ದವನೇ ಕಳಪೆ ಕೊಟ್ಟರೆ ಯಾರಿಗೆ ತಾನೇ ಹರ್ಟ್ ಆಗಲ್ಲ ಹೇಳಿ ಎಂದಿದ್ದ. ಎಲ್ಲವೂ ಒಂದು ತಹಬದಿಗೆ ಬಂದ ಮೇಲೆ ಚೈತ್ರಾ ಸಮಾಧಾನ ಮಾಡಲು ಹೋದಳು. ಅಷ್ಟರಲ್ಲಾಗಲೇ ಸೋನು ಕಣ್ಣಲ್ಲಿ ಕಣ್ಣೀರ ಕೋಡಿ ತುಂಬಿತ್ತು. ಚೈತ್ರಾ ಸಮಾಧಾನದ ಮಾತುಗಳನ್ನು ಆಡುತ್ತಿದ್ದಂತೆ ಜೋರು ಸುರಿಯಿತು. ಅಲ್ಲ ಮನೆ ಕೆಲಸ ಮಾಡಲಿಲ್ಲ ಅಂತ ಕಳಪೆ ಕೊಡುತ್ತಾರಲ್ಲ. ಅದು ನಂಬಿದ್ದವರೆ ಇಂತಹ ದ್ರೋಹ ಮಾಡುತ್ತಾರಲ್ಲ. ನಾವೇನು ಮನೆ ಕೆಲಸಕ್ಕೆ ಬಂದಿದ್ದೀವಾ? ಯಾವನ್ ಹೇಳಿದ್ದು ಹಾಗೇ. ಇವತ್ತು ಯಾರೆಲ್ಲಾ ಕಳಪೆ ಎಂದರೋ, ಯಾರೂ ಸರಿ ಇಲ್ಲ. ಎಲ್ಲಾ ನಕಲಿ ಜನರೇ ಎಂದಿದ್ದಾಳೆ.

    ಈಗಾಗಲೇ ಸೋನುಗೆ ರಾಕೇಶ್ ಮೇಲೆ ಕೆಂಡದಷ್ಟು ಕೋಪ ಬಂದಿದೆ. ಮತ್ತೆ ಕಳಪೆ ಎಂದಿದ್ದಾರೆ. ನೆಕ್ಸ್ಟ್ ಪ್ರೂವ್ ಮಾಡೋಣಾ ಎಂಬ ಹಠ ಅವಳಲ್ಲಿ ಹುಟ್ಟಿಕೊಂಡಂತೆ ಇಲ್ಲ. ಕಳಪೆ ಎಂದುಬಿಟ್ಟರಲ್ಲ ಎಂಬ ನೋವೇ ಎದ್ದು ಕಾಣುತ್ತಿದೆ. ಇಷ್ಟು ದಿನ ರಾಕೇಶ್‌ಗೆ ಹರ್ಟ್ ಆಗುವಂತೆ ಮಾತನಾಡಿದರು. ರಾಕಿ ಅದ್ಯಾವುದನ್ನು ಮನಸ್ಸಲ್ಲಿ ಇಟ್ಟುಕೊಂಡಿರಲಿಲ್ಲ. ಮತ್ತೆ ಮತ್ತೆ ಸರಿ ಮಾಡಿಕೊಂಡು ಮಾತನಾಡುತ್ತಿದ್ದ. ಆದರೆ ಸೋನು ಆ ರೀತಿ ಅಲ್ಲ. ಇದನ್ನೇ ಸ್ಟ್ರಾಂಗ್ ಆಗಿ ಹಿಡಿದುಕೊಳ್ಳುತ್ತಾಳೆ ಅನ್ನಿಸುತ್ತೆ. ನನ್ನನ್ನೇ ಕಳಪೆ ಎಂದವನು ನನಗೆ ಯಾವ ಸೀಮೆ ಫ್ರೆಂಡ್ ಅಂತ ಈಗಾಗಲೇ ಹೇಳಿದ್ದಾಳೆ. ಹೀಗಾಗಿ ಜೈಲಿನಿಂದ ಬಂದ ಮೇಲೆ ರಾಕಿನ ಕ್ಷಮಿಸೋದು ಸುಳ್ಳು ಎನಿಸುತ್ತಿದೆ. ಇದನ್ನೂ ಓದಿ: ‘ಲೈಗರ್’ ಸಿನಿಮಾ ಸೋಲು: ನಿರ್ಮಾಪಕರಿಗೆ ಸಂಭಾವನೆ ಹಿಂದಿರುಗಿಸಿದ ವಿಜಯ್ ದೇವರಕೊಂಡ

    Live Tv
    [brid partner=56869869 player=32851 video=960834 autoplay=true]

  • ಸೋನು ಮುಖ ನೋಡಿ ಪ್ರಜ್ಞೆತಪ್ಪಿ ಬಿದ್ದಿದ್ರಂತೆ ಆರ್ಯವರ್ಧನ್!

    ಸೋನು ಮುಖ ನೋಡಿ ಪ್ರಜ್ಞೆತಪ್ಪಿ ಬಿದ್ದಿದ್ರಂತೆ ಆರ್ಯವರ್ಧನ್!

    ಬಿಗ್ ಬಾಸ್ ಮನೆಯಲ್ಲಿ ಸೋನು ಹಾಗೂ ಅಕ್ಷತಾ ಮಾಡಿದ ಪ್ರ್ಯಾಂಕ್ ಬಗ್ಗೆ ಸೂಪರ್ ಸಂಡೇ ವಿತ್ ಸುದೀಪ ವೇದಿಕೆಯಲ್ಲಿ ಚರ್ಚೆಯಾಗಿತ್ತು. ದೆವ್ವದಂತೆ ಮೇಕಪ್ ಮಾಡ್ಕೊಂಡು ಬಂದಿದ್ದ ಸೋನು ನೋಡಿ ಆರ್ಯವರ್ಧನ್ ಅವರು ತಲೆ ತಿರುಗಿ ಬಿದ್ದುಬಿಟ್ಟಿದ್ದರು. ಆದರೆ ಮನೆಮಂದಿಯೆಲ್ಲಾ ಅವರು ಆಕ್ಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡಿದ್ದರಂತೆ. ಆದರೆ ಅಂದು ನಿಜವಾಗಲೂ ಅವರ ಜೀವಕ್ಕೆ ಅಪಾಯ ಬಂದೊದಗಿತ್ತು ಎಂಬುದು ಬಳಿಕ ಗೊತ್ತಾಗಿದೆ.

    ಹೌದು, ಅಕ್ಷತಾ ಮತ್ತು ಸೋನು ಗುರೂಜಿಯನ್ನು ಪ್ರ‍್ಯಾಂಕ್ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದರು. ಅದರಂತೆ ಸೋನು ದೆವ್ವದಂತೆ ಮೇಕಪ್ ಕೂಡ ಮಾಡಿಕೊಂಡಳು. ಇದಕ್ಕೂ ಮುನ್ನ ರಾಕೇಶ್ ಹಾಗೂ ರೂಪೇಶ್ ಗುರೂಜಿ ಬಳಿ ಹೋಗಿ ಈ ರೀತಿ ನಿಮಗೆ ಪ್ರ್ಯಾಂಕ್ ಮಾಡುತ್ತಾರೆ, ಅವರು ಬಂದಾಕ್ಷಣ ನೀವೂ ಪ್ರಜ್ಞೆ ತಪ್ಪಿ ಬಿದ್ದು ಬಿಡಿ ಎಂದು ಆರ್ಯವರ್ಧನ್ ಅವರಿಗೆ ಹೇಳಿಕೊಟ್ಟಿದ್ದರು. ಎಲ್ಲವೂ ಹೇಳಿದಂತೆಯೇ ನಡೆಯಿತು. ಗುರೂಜಿ ಬಾತ್ ರೂಮಿನಿಂದ ಹೊರಗೆ ಬಂದಾಗ ಸೋನು ಹೆದರಿಸಿದಳು. ಗುರೂಜಿ ತಕ್ಷಣ ಬಿದ್ದು ಬಿಟ್ಟರು. ಎಷ್ಟೇ ಎಚ್ಚರ ಮಾಡಿದರೂ ಎಚ್ಚರವಾಗಲೇ ಇಲ್ಲ. ರಾಕೇಶ್ ಇದು ಸೂಪರ್ ಪರ್ಫಾಮೆನ್ಸ್ ಎಂದುಕೊಂಡರು. ಆದರೆ ರೂಪೇಶ್‌ಗೆ ಕೊಂಚ ಅನುಮಾನ ಮೂಡಿತ್ತು. ಆಮೇಲೆ ಅವರನ್ನು ಕಷ್ಟಪಟ್ಟು ಹೊರಗೆ ಎಳೆದು ತಂದರು.

    ಇದೆಲ್ಲಾ ನೋಡುತ್ತಿದ್ದಂತೆ ಅಕ್ಷತಾ ಹಾಗೂ ಸೋನು ಗಾಬರಿಗೊಂಡಿದ್ದರು. ಸ್ವಲ್ಪ ಸಮಯವಾದ ಬಳಿಕ ಗುರೂಜಿಗೆ ಪ್ರಜ್ಞೆ ಬಂತು. ಆದರೆ ಜಯಶ್ರೀ ಈ ಮಧ್ಯೆ ಸೋನು ಹಾಗೂ ಅಕ್ಷತಾ ಬಳಿ ಹೋಗಿ, ಇದು ಅವರೆಲ್ಲ ಸೇರಿ ಮಾಡಿದ ಪ್ರ್ಯಾಂಕ್ ಅಂತ ಹೇಳಿದ್ದರು. ಈ ಬಗ್ಗೆ ಸೋನು ಕ್ಲಾರಿಟಿ ತೆಗೆದುಕೊಳ್ಳಲು ಹೋದಾಗ ರಾಕೇಶ್ ಹಾಗೂ ರೂಪೇಶ್ ಬುದ್ಧಿ ಹೇಳಿ ಕಳುಹಿಸಿದ್ದರು. ಇದರ ನಡುವೆ ತಾವು ಮಾಡಿದ ತಪ್ಪನ್ನು ನೆನೆದು ಅಕ್ಷತಾ ಜೋರಾಗಿ ಅತ್ತಿದ್ದು, ರಾಕೇಶ್ ಆಕೆಯನ್ನು ಸಮಾಧಾನ ಮಾಡಿದ್ದ. ಇದನ್ನೂ ಓದಿ: ಮೊದಲ ಜಗಳ, ವಾದ, ಗಾಯ ಆಗಿದ್ದೇ ಉದಯ್‍ಯಿಂದ – ಬೇರೆಯವರ ಇಮೋಷನ್ ನೋಡಿ ಉದಯ್ ಡಿಸ್ಟರ್ಬ್ ಆಗಿದ್ರಾ?

    ಈ ಎಲ್ಲಾ ಡ್ರಾಮಾದ ಬಗ್ಗೆ ಸೂಪರ್ ಸಂಡೇನಲ್ಲಿ ಸುದೀಪ್ ಕೇಳಿದಾಗ ರೂಪೇಶ್ ಮತ್ತು ರಾಕೇಶ್, ನಾವೂ ಕೂಡ ಅದನ್ನು ಆಕ್ಟಿಂಗ್ ಎಂದೇ ಭಾವಿಸಿದ್ದೆವು. ಆದರೆ ಅವರು ನಿಜವಾಗಿಯೂ ಪ್ರಜ್ಞೆ ತಪ್ಪಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಸುದೀಪ್ ಗುರೂಜಿ ಅವರಿಗೆ ಧೈರ್ಯ ತುಂಬಿದ್ದಾರೆ. ಇಲ್ಲಿ ಎರಡೇ ದೆವ್ವ ಇರುವುದು. ಪಿಂಕ್ ಕಲರ್ ಹಾಕಿರುವ ದೆವ್ವ ಹಾಗೂ ಹಸಿರು ಬಣ್ಣ ತೊಟ್ಟಿರುವ ದೆವ್ವ. ನೀವು ಯಾವುದಕ್ಕೂ ಹೆದರಬೇಡಿ. ಇಲ್ಲಿ ನಮ್ಮನ್ನು ಹೊರತುಪಡಿಸಿ 300 ಜನ ನಿಮ್ಮ ಕಾವಲಿಗಿದ್ದಾರೆ ಎಂದು ಧೈರ್ಯ ತುಂಬಿದರು.

    ಆಗ ಗುರೂಜಿ ನನಗೆ ದೆವ್ವ ಎಂದರೆ ತುಂಬಾ ಭಯ. ಸೋನು ಬಂದಾಗ ವಿಕಾರವಾಗಿ ಕಂಡಿತು, ತಕ್ಷಣ ಬಿದ್ದು ಬಿಟ್ಟೆ. ಆಮೇಲೆ ಇವರೆಲ್ಲ ಕರೆದು ತಂದು ಮಲಗಿಸಿದ್ದರು ಎಂದರು. ಮತ್ತೆ ಸುದೀಪ್ ನಿಮಗೆ ಏನು ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಕೂಡ ಎಂದು ಸೋನು ಹಾಗೂ ಅಕ್ಷತಾಗೂ ಬುದ್ಧಿ ಹೇಳಿದ್ದಾರೆ. ಪ್ರ‍್ಯಾಂಕ್ ಮಾಡಿ ಆದರೆ ಈ ರೀತಿಯಾದ ಟಾಪಿಕ್ ಬೇಡ ಎಂದಿದ್ದಾರೆ. ಇದನ್ನೂ ಓದಿ: ಜಯಶ್ರೀ, ಚೈತ್ರಾ ಬೆಸ್ಟಿ ಅಂದ ರೂಪೇಶ್- ಸಾನ್ಯಾಗೆ ಶುರುವಾಯ್ತು ಹೊಟ್ಟೆಕಿಚ್ಚು..?

    Live Tv
    [brid partner=56869869 player=32851 video=960834 autoplay=true]