Tag: bigg boss kannada 9

  • ಸಿಹಿಸುದ್ದಿ ಹಂಚಿಕೊಂಡ `ಬಿಗ್ ಬಾಸ್’ ಖ್ಯಾತಿಯ ಸಾನ್ಯ ಅಯ್ಯರ್

    ಸಿಹಿಸುದ್ದಿ ಹಂಚಿಕೊಂಡ `ಬಿಗ್ ಬಾಸ್’ ಖ್ಯಾತಿಯ ಸಾನ್ಯ ಅಯ್ಯರ್

    `ಬಿಗ್ ಬಾಸ್’ ಖ್ಯಾತಿಯ(Bigg Boss) ಸಾನ್ಯ ಅಯ್ಯರ್ (Sanya Iyer) ಇದೀಗ ಸಿಹಿ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ. ಸಾನ್ಯ ತಾವು ಪದವಿ ಪಡೆದ ಖುಷಿಯಲ್ಲಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

    ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಸಾನ್ಯ ಅಯ್ಯರ್ ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Kannada 9) ಮೋಡಿ ಮಾಡಿದ್ದರು. ಇದೀಗ ಸಿನಿಮಾಗಾಗಿ ಒಳ್ಳೆಯ ಕಥೆಗಾಗಿ ಕಾಯ್ತಿರುವ ನಟಿ ತಾವು ಗ್ರಾಜುಯೇಟ್ ಆಗಿರುವ ಬಗ್ಗೆ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ತೀವ್ರ ಎದೆನೋವಿನಿಂದ ಬಾಲಿವುಡ್ ನಟ ಅನ್ನು ಕಪೂರ್ ಆಸ್ಪತ್ರೆಗೆ ದಾಖಲು

    ಸಾನ್ಯ ಅಯ್ಯರ್ ಅವರು ಮಾಸ್ ಮೀಡಿಯಾ ಆ್ಯಂಡ್ ಮಾಸ್ ಕಮ್ಯನಿಕೇಷನ್ ವಿಭಾಗದಲ್ಲಿ ಫಸ್ಟ್ ಕ್ಲಾಸ್ ವಿತ್ ಡಿಸ್ಟಿಂಕ್ಷನ್ ಪಡೆದಿದ್ದಾರೆ. ನಾನು ಗ್ರಾಜುಯೇಟೆಡ್ ಗುರು ಸಂತಸದಿಂದ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಇದೀಗ ನಟಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಬೆನ್ನಲ್ಲೇ ನಟಿಗೆ ರೂಪೇಶ್ ಶೆಟ್ಟಿ ಜೊತೆ ಮದುವೆ ಯಾವಾಗ ಎಂದು ಕಾಮೆಂಟ್ ಮಾಡ್ತಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಮತ್ತು ರೂಪೇಶ್ ಶೆಟ್ಟಿ ನಡುವಿನ ಸ್ನೇಹ ನೋಡಿ, ಅಭಿಮಾನಿಗಳು ಇಬ್ಬರು ಪ್ರೀತಿಸುತ್ತಿದ್ದಾರೆ ಎಂದೇ ಭಾವಿಸಿದ್ದಾರೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಿವ್ಯಾ ಹುಟ್ಟುಹಬ್ಬಕ್ಕೆ ಅರವಿಂದ್ ಸ್ವೀಟ್ ಸರ್ಪ್ರೈಸ್‌

    ದಿವ್ಯಾ ಹುಟ್ಟುಹಬ್ಬಕ್ಕೆ ಅರವಿಂದ್ ಸ್ವೀಟ್ ಸರ್ಪ್ರೈಸ್‌

    ಬಿಗ್ ಬಾಸ್ ಸೀಸನ್ 8 ಮತ್ತು 9ರಲ್ಲಿ ಸ್ಪರ್ಧಿಯಾಗಿದ್ದ ದಿವ್ಯಾ ಉರುಡುಗ (Divya Uruduga) ಹುಟ್ಟುಹಬ್ಬಕ್ಕೆ ಅರವಿಂದ್ ಕೆಪಿ ಸರ್ಪ್ರೈಸ್‌ ನೀಡಿದ್ದಾರೆ. ವಿಶೇಷವಾಗಿ ದಿವ್ಯಾ ಬರ್ತ್‌ಡೇ ಆಚರಿಸುವುದರ ಜೊತೆಗೆ ವಿಶೇಷ ಪೋಸ್ಟ್‌ವೊಂದನ್ನ ಅರವಿಂದ್ (Aravind Kp) ಶೇರ್ ಮಾಡಿದ್ದಾರೆ.

    ದೊಡ್ಮನೆಯ ಆಟ ಸೀಸನ್ 8ರಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಪ್ರೇಮ ಪಕ್ಷಿಗಳಾಗಿ (Love Birds) ಹೈಲೈಟ್ ಆಗಿದ್ದರು. ಇತ್ತೀಚೆಗಷ್ಟೇ ಮದುವೆಯ ಬಗ್ಗೆ ಅರವಿಂದ್ ಸಿಹಿಸುದ್ದಿ ಕೊಟ್ಟಿದ್ದರು. ಈಗ ದಿವ್ಯಾಗೆ ಬಿಗ್ ಸರ್ಪ್ರೈಸ್‌‌ ಕೊಟ್ಟಿದ್ದಾರೆ. ಹುಟ್ಟುಹಬ್ಬಕ್ಕೆ (Birthday) ಗ್ರ್ಯಾಂಡ್ ಪಾರ್ಟಿ ಅರೆಂಜ್ ಮಾಡಿ, ದಿವ್ಯಾ ಅವರ ಆಪ್ತರನ್ನ ಕರೆದಿದ್ದಾರೆ. ಈ ಮೂಲಕ ಭಾವಿ ಪತ್ನಿಗೆ ಖುಷಿಪಡಿಸಿದ್ದಾರೆ. ಇಬ್ಬರು ಬ್ಲ್ಯಾಕ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ: `ಪುಷ್ಪ 2′ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ರು ರಶ್ಮಿಕಾ ಮಂದಣ್ಣ

     

    View this post on Instagram

     

    A post shared by Aravind K P (@aravind_kp)

    ಇನ್ನೂ ಅರವಿಂದ್ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮೂಲಕ ದಿವ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕೃತಿ ನಡುವೆ ದೀಪಗಳು, ಇಂಪಾದ ಸಂಗೀತ, ಆಹಾರ, ಕುಟುಂಬ ಮತ್ತು ಸ್ನೇಹಿತರು ಇದು ನನ್ನ ಪರಿಪೂರ್ಣವಾದ ಹುಟ್ಟುಹಬ್ಬ ಅವಿ ಎಂದು ನಟಿ ರಿಯಾಕ್ಟ್ ಮಾಡಿದ್ದಾರೆ.

    ಇನ್ನೂ ಇಬ್ಬರು ಪ್ರೀತಿಸುತ್ತಿರುವ ವಿಚಾರವನ್ನು ಇತ್ತೀಚೆಗೆ ಅರವಿಂದ್ ರಿವೀಲ್ ಮಾಡಿದ್ದರು. ಸದ್ಯದಲ್ಲೇ ದಿವ್ಯಾ ಜೊತೆ ಮದುವೆಯಾಗುವುದಾಗಿ (Wedding) ಅರವಿಂದ್ ಸಿಹಿಸುದ್ದಿ ನೀಡಿದ್ದರು. ದಿವ್ಯಾ, ಅರವಿಂದ್ ನಟನೆಯ `ಅರ್ದಂಬರ್ಧ ಪ್ರೇಮ ಕಥೆ’ ಸಿನಿಮಾ ರಿಲೀಸ್ ನಂತರ ಮದುವೆಯ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್‌ಗೆ ಕಾರಣವಾದ್ರಾ ಸಾನ್ಯ ಅಯ್ಯರ್?

    ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್‌ಗೆ ಕಾರಣವಾದ್ರಾ ಸಾನ್ಯ ಅಯ್ಯರ್?

    `ರೋಡಿಸ್’ ಖ್ಯಾತಿಯ ನಂದು (Nandu) ಮತ್ತು ಜಶ್ವಂತ್ (Jashwanth) ಪ್ರೇಮ ಪಕ್ಷಿಗಳಾಗಿ ಬಿಗ್ ಬಾಸ್ ಒಟಿಟಿಗೆ ಕಾಲಿಟ್ಟಿದ್ದರು. ದೊಡ್ಮನೆಯಲ್ಲಿ ಕೂಡ ಲವ್ ಬರ್ಡ್ಸ್ ಆಗಿಯೇ ಹೈಲೈಟ್ ಆಗಿದ್ದರು. ಬಿಗ್ ಬಾಸ್ ಶೋ (Bigg Boss Kannada) ನಂತರ ಇಬ್ಬರ ಲವ್ ಸ್ಟೋರಿಗೆ ಬ್ರೇಕ್ ಬಿದ್ದಿದೆ ಎನ್ನಲಾಗಿತ್ತು. ಈ ಬಗ್ಗೆ ಸ್ವತಃ ಬಿಗ್ ಬಾಸ್ ನಂದು ಉತ್ತರ ಕೊಟ್ಟಿದ್ದಾರೆ.

    ಒಟಿಟಿ ಬಿಗ್ ಬಾಸ್‌ನಲ್ಲಿ ನಂದು ಮತ್ತು ಜಶ್ ಜೋಡಿಗಳಾಗಿ ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ಈ ಶೋ ಬಳಿಕ ನಂದು ಮತ್ತು ಜಶ್ವಂತ್ ನಡುವೆ ಬ್ರೇಕ್ ಅಪ್ ಆಗಿದೆ ಎನ್ನಲಾಗಿತ್ತು. ಈಗ ಈ ಎಲ್ಲಾ ಊಹಾಪೋಹಗಳಿಗೆ ಸ್ಪರ್ಧಿ ನಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ನಾವಿಬ್ಬರು ಒಟ್ಟಿಗೆ ಇದ್ವಿ, ಜೊತೆಗಿದ್ದು, ಇತಿಹಾಸವನ್ನೇ ಸೃಷ್ಟಿಸಿದ್ವಿ. ಜೊತೆಯಲ್ಲಿದ್ದಾಗ ಖುಷಿಯಿಂದ ಜೀವಿಸಿದ್ವಿ. ನಾನು ರಿಲೇಷನ್‌ಶಿಪ್‌ಗೆ ಬರುವಾಗ ಗಿವ್‌ ಅಪ್ ಮಾಡಬಾರದು ಎಂದು ಯೋಚಿಸಿದ್ದೆ, ಆದರೆ ಈ ಸಂಬಂಧ ಅಂತ್ಯಗೊಳಿಸುವ ಸಮಯದಲ್ಲಿ ಹಾಗೇ ಇರಲಿಲ್ಲ. ಜಶ್ವಂತ್, ನನಗೆ ಸ್ವಲ್ಪ ಸಮಯ ಬೇಕು ಅಂತಾ ಹೇಳಿದಾಗ ಅವನ ಖುಷಿ ಕೂಡ ನಾನು ಆಯ್ಕೆ ಮಾಡಬೇಕಾಗುತ್ತದೆ. ಅವನ ನಿರ್ಧಾರಕ್ಕೂ ನಾನು ಗೌರವ ಕೊಡಬೇಕಾಗುತ್ತದೆ. ಹಾಗಾಗಿ ನಾನು ಸಮಯ ಕೊಟ್ಟಿದ್ದೀನಿ. ನಾವು ಡಿಸೈಡ್ ಮಾಡಿದ್ದೀವಿ, ನಮ್ಮ ಲೈಫ್‌ನಲ್ಲಿ ನಾವು ಮೂವ್ ಆನ್ ಆಗಬೇಕು ಅಂತಾ ಎಂದು ಸೋಷಿಯಲ್ ಮೀಡಿಯಾದ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

    ನಾನು ಯಾವಾಗಲೂ ಅವರ ಖುಷಿನಾ ಅವರೇ ಚ್ಯೂಸ್ ಮಾಡಲಿ ಅಂತಾ ಬಿಡ್ತೀನಿ. ಸೋ, ಅವನ ಖುಷಿ ಅವನಿಗೆ ಏನು ಬೇಕು ಅನ್ನೋದನ್ನ ಯೋಚನೆ ಮಾಡಿದ್ದಾನೆ. ನನ್ನ ಖುಷಿ ಅಷ್ಟೇ ಮುಖ್ಯ ಆಗಲ್ಲ. ಅವನ ಖುಷಿ ಕೂಡ ಅಷ್ಟೇ ಮುಖ್ಯ. ಈ ಬಗ್ಗೆ ಜಶ್ವಂತ್‌ಗೆ ಏನು ಹೇಳಬೇಡಿ, ಸಮಯ ಬಂದಾಗ ಅವನ ಏನು ಎಂಬುದನ್ನ ಅವನೇ ಪ್ರೂವ್ ಮಾಡುತ್ತಾನೆ ಎಂದು ಜಶ್ವಂತ್ ಬಗ್ಗೆ ಸಕರಾತ್ಮಕವಾಗಿ ನಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ಆ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲಾ ಅಂತಾ ನಾನು ಬೇಸರ ಪಟ್ಟುಕೊಳ್ಳಲ್ಲ. ನನ್ನ ಜೀವನದಲ್ಲಿ ಈಗ ಏನೆಲ್ಲಾ ಇದೆ ಅದಕ್ಕೆ ನಾನು ಆಭಾರಿಯಾಗಿದ್ದೇನೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ನನ್ನಲ್ಲಿ ಬ್ಯೂಟಿಫುಲ್ ಹಾರ್ಟ್ ಮತ್ತು ನಗು ಇದೆ ಎಂದು ಪಾಸಿಟಿವ್ ಆಗಿ ನಂದು ಬರೆದುಕೊಂಡಿದ್ದಾರೆ. ಜಶ್ವಂತ್ ಜೊತೆಗಿನ ಬ್ರೇಕಪ್ ಆಗಿರುವ ಬಗ್ಗೆ ಅಧಿಕೃತವಾಗಿ ನಂದು ಹೇಳಿಕೊಂಡಿದ್ದಾರೆ. ಈ ಬೆನ್ನಲ್ಲೇ ಸಾನ್ಯ ಅಯ್ಯರ್‌ಗೆ (Sanya Iyer) ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಂದು, ಜಶ್ವಂತ್ ಬ್ರೇಕಪ್‌ಗೆ ಸಾನ್ಯನೇ ಕಾರಣ ಅಂತಾ ನೆಟ್ಟಿಗರು ದೂರುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಆಟಕ್ಕೆ ತೆರೆಬಿದ್ದಿದೆ. ದೊಡ್ಮನೆಯಲ್ಲಿ ಪ್ರೇಮ ಪಕ್ಷಿಗಳಾಗಿ ಹೈಲೈಟ್ ಆಗಿದ್ದ ಸಾನ್ಯ (Sanya Iyer) ಮತ್ತು ರೂಪೇಶ್ ಶೆಟ್ಟಿ (Roopesh shetty) ಇದೀಗ ಶೋ ಬಳಿಕವೂ ತಮ್ಮ ಸ್ನೇಹವನ್ನ ಮುಂದುವರೆಸಿದ್ದಾರೆ. ಸದ್ಯ ಈ ಜೋಡಿಯ ಮೀಟಿಂಗ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ಸಾನ್ಯ ಮತ್ತು ರೂಪೇಶ್ ಶೆಟ್ಟಿ ಒಬ್ಬರಿಗೊಬ್ಬರು ಸಾಥ್ ಕೊಟ್ಟು ಬಂದಿದ್ದರು. ಇಬ್ಬರ ಫ್ರೆಂಡ್‌ಶಿಪ್ ಪ್ರೇಕ್ಷಕರ ಕಣ್ಣಿಗೆ ಹೈಲೈಟ್ ಆಗಿತ್ತು. ಇನ್ನೂ ದೊಡ್ಮನೆಯಲ್ಲಿ ಸಾನ್ಯ ಎಲಿಮಿನೇಷನ್ ಆದಾಗ ರೂಪೇಶ್ ಶೆಟ್ಟಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಸಾನ್ಯ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.  ಈ ಶೋ ಬಳಿಕ ಈ ಜೋಡಿ ಮತ್ತೆ ಜೊತೆಯಾಗಿದ್ದಾರೆ. ಒಟ್ಟಿಗೆ ಸಮಯ ಕಳೆದಿರುವ ಫೋಟೋ ಶೇರ್‌ ಮಾಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಕೊನೆಗೂ ಮುದ್ದಿನ ಶ್ವಾನ ಸಿಕ್ಕ ಖುಷಿಯಲ್ಲಿ ನಟಿ ಸುಧಾರಾಣಿ

    ದೊಡ್ಮನೆಯ ಆಟದ ನಂತರ ಸಾಲು ಸಾಲು ಸಂದರ್ಶನಗಳಲ್ಲಿ ರೂಪೇಶ್ ಬ್ಯುಸಿಯಾಗಿದ್ದರು. ಇದೀಗ ಕೊಂಚ ಬಿಡುವಾಗಿದ್ದು, ಸಾನ್ಯ ಅಯ್ಯರ್ ಅವರನ್ನ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಭೇಟಿಯಾಗಿದ್ದಾರೆ. ಒಟ್ಟಿಗೆ ಕಾಫಿ ಕುಡಿದು, ಸಮಯ ಕಳೆದಿದ್ದಾರೆ.

    ಈ ಶೋನಿಂದ ದಿವ್ಯಾ ಉರುಡುಗ (Divya Uruduga) ಮತ್ತು ಅರವಿಂದ್ ಕೆಪಿ (Aravind Kp) ಜೊತೆಯಾದ್ರು. ದಾಂಪತ್ಯ ಜೀವನಕ್ಕೆ (Wedding) ಕಾಲಿಡುವ ಬಗ್ಗೆ ಅರವಿಂದ್ ಕೆಪಿ ಇತ್ತೀಚೆಗೆ ರಿವೀಲ್ ಮಾಡಿದ್ದರು. ಈಗ ಈ ಜೋಡಿಯ ಹಾದಿಯಲ್ಲಿ ಸಾನ್ಯ ಮತ್ತು ರೂಪೇಶ್ ಶೆಟ್ಟಿ ಸಾಗುತ್ತಿದ್ದಾರಾ ಎಂಬ ಪ್ರಶ್ನೆ ನೆಟ್ಟಿಗರನ್ನ ಕಾಡುತ್ತಿದೆ. ಮದುವೆಯ ಬಗ್ಗೆ ಮುಂದಿನ ದಿನಗಳಲ್ಲಿ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ

    ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ

    ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಶೋಗೆ ತೆರೆಬಿದ್ದಿದೆ. ಈ ಕಾರ್ಯಕ್ರಮ ಮುಗಿದು ಈಗಾಗಲೇ 15 ದಿನಗಳಾಗಿದೆ. ಈ ಬೆನ್ನಲ್ಲೇ ದಿವ್ಯಾ ಉರುಡುಗ (Divya Uruduga) ಮತ್ತು ಅರವಿಂದ್ (Aravind Kp) ಜೋಡಿ ಸೀಸನ್ 8ರ ವೈಷ್ಣವಿ, ರಘು ಗೌಡ ಅವರನ್ನ ಮೀಟ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ದೊಡ್ಮನೆಯ ಆಟ ಸೀಸನ್ 9ರಲ್ಲೂ ದಿವ್ಯಾ ಉರುಡುಗ ಪ್ರವೀಣರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಟಾಪ್ 5 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. 5ನೇ ರನ್ನರ್ ಅಪ್ ಆಗಿ ಹೊರಬಂದಿದ್ದರು. ಇದೀಗ ಬಿಗ್ ಬಾಸ್ ಶೋಗೆ ತೆರೆ ಬಿದ್ದಿದೆ. ದಿವ್ಯಾ ಉರುಡುಗ ಫುಲ್ ರಿಲಾಕ್ಸ್ ಮೂಡ್‌ನಲ್ಲಿದ್ದಾರೆ. ಇದನ್ನೂ ಓದಿ: 15 ದಿನಗಳಿಂದ ಸುಧಾರಾಣಿ ಮನೆ ಶ್ವಾನ ನಾಪತ್ತೆ: ಬಿಬಿಎಂಪಿ ವಿರುದ್ಧ ನಟಿ ಗರಂ

    ಈ ಹಿಂದಿನ ಬಿಗ್ ಬಾಸ್ 8ರಲ್ಲಿ (Bigg Boss Kannada 8) ಪರಿಚಯವಾಗಿ ಸ್ಪರ್ಧಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ವೈಷ್ಣವಿ ಗೌಡ (Vaishnavi Gowda) ಮತ್ತು ರಘು ಗೌಡ (Raghu Gowda)  ಅವರನ್ನ ದಿವ್ಯಾ ಮತ್ತು ಅರವಿಂದ್ ಕೆ.ಪಿ ಜೋಡಿ ಭೇಟಿಯಾಗಿದ್ದಾರೆ. ಒಟ್ಟಿಗೆ ಮೋಜು ಮಸ್ತಿ ಮಾಡಿದ್ದಾರೆ. ಒಟ್ಟಾಗಿ ಒಂದೊಳ್ಳೆಯ ಸಮಯವನ್ನ ಕಳೆದಿದ್ದಾರೆ.

    ಬಿಗ್ ಬಾಸ್ ಶೋ ಮುಗಿದ ಮೇಲೂ ಕೂಡ ಆ ಸ್ನೇಹವನ್ನ ಮುಂದುವರೆಸಿಕೊಂಡು ಹೋಗಿರೋದನ್ನ ನೋಡಿ ವೈಷ್ಣವಿ, ರಘು, ದಿವ್ಯಾ, ಅರವಿಂದ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂತಾರ ಸಿನಿಮಾ ಬಗ್ಗೆ ರೂಪೇಶ್‌ ರಾಜಣ್ಣ ಹೇಳಿದ್ದೇನು?

    ಕಾಂತಾರ ಸಿನಿಮಾ ಬಗ್ಗೆ ರೂಪೇಶ್‌ ರಾಜಣ್ಣ ಹೇಳಿದ್ದೇನು?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೋನುಗೆ ಕೈಕೊಟ್ಟು ಅಮೂಲ್ಯ ಜೊತೆ ರಾಕೇಶ್ ಅಡಿಗ ಸುತ್ತಾಟ

    ಸೋನುಗೆ ಕೈಕೊಟ್ಟು ಅಮೂಲ್ಯ ಜೊತೆ ರಾಕೇಶ್ ಅಡಿಗ ಸುತ್ತಾಟ

    ಬಿಗ್ ಬಾಸ್ ಸೀಸನ್ 9ರ ಆಟಕ್ಕೆ ಈಗಾಗಲೇ ಬ್ರೇಕ್ ಬಿದ್ದಿದೆ. ರೂಪೇಶ್ ಶೆಟ್ಟಿ (Roopesh Shetty) ಈ ಸೀಸನ್‌ನ ವಿನ್ನರ್ ಆಗಿದ್ದು, ರಾಕೇಶ್ ಅಡಿಗ (Rakesh Adiga) ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ (Bigg Boss House) ಲವ್ ಬರ್ಡ್ಸ್ ಆಗಿ ರಾಕೇಶ್, ಅಮೂಲ್ಯ ಗುರುತಿಸಿಕೊಂಡಿದ್ದರು. ಈ ಶೋ ಬಳಿಕವೂ ಇವರಿಬ್ಬರ ಸ್ನೇಹ ಮುಂದುವರೆದಿದೆ. ರಾಕಿ ಮತ್ತು ಅಮ್ಮು ಮೀಟಿಂಗ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ದೊಡ್ಮನೆಯಲ್ಲಿ ರೂಪೇಶ್ ಮತ್ತು ಸಾನ್ಯ, ರಾಕೇಶ್ ಮತ್ತು ಅಮೂಲ್ಯ ಪ್ರೇಮ ಪಕ್ಷಿಗಳಾಗಿ ಹೈಲೈಟ್ ಆಗಿದ್ದಾರೆ. ಒಟಿಟಿಯಲ್ಲಿ ಸೋನು ಗೌಡ (Sonu Srinivas Gowda) ಜೊತೆ ರಾಕೇಶ್ ಹೈಲೈಟ್ ಆಗಿದ್ದರು. ರಾಕೇಶ್ ಕೂಡ ಟಿವಿ ಬಿಗ್ ಬಾಸ್‌ನ (Bigg Boss) ಫೈನಲಿಸ್ಟ್ ಆದಾಗ ಸೋನು ಸಂಭ್ರಮಿಸಿದ್ದರು. ಹೊರಗಿನಿಂದಲೇ ಸೋನು ರಾಕಿಗೆ ಬೆಂಬಲ ನೀಡುತ್ತಲೇ ಬಂದಿದ್ದರು. ಈಗ ಸೋನುನ ಬಿಟ್ಟು ಅಮೂಲ್ಯ ಜೊತೆ ರಾಕೇಶ್ ಸುತ್ತಾಡುತ್ತಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ನಂತರ ಆಧ್ಯಾತ್ಮದತ್ತ ಹೊರಳಿದ್ರಾ ನಟಿ ಸಮಂತಾ

    ಶೋನಲ್ಲಿ ನಮ್ಮಿಬ್ಬರ ನಡುವೆ ಇಂತಹದೇನಿಲ್ಲ ಎಂದು ಹೇಳುತ್ತಲೇ ಇದ್ದರು ಈ ಜೋಡಿ. ಶೋಗೆ ದಿ ಎಂಡ್ ಸಿಗೋಕು ಅಮೂಲ್ಯನ ರಾಕಿ ಭೇಟಿ ಮಾಡಿದ್ದಾರೆ. ಈ ಕುರಿತು ನಟಿ ಅಮೂಲ್ಯ ತಮ್ಮ ಫೋಟೋ ಶೇರ್‌ ಮಾಡಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ರಾಕೇಶ್ ಅಡಿಗ (Rakesh Adiga) ಮತ್ತು ಅಮೂಲ್ಯ ಗೌಡ (Amulya Gowda)  ಅವರ ಮಧ್ಯೆ ಇರೋದು ಸ್ನೇಹಾನಾ ಅಥವಾ ಪ್ರೀತಿನಾ. ಮದುವೆಯ ಬಗ್ಗೆ ಈ ಜೋಡಿ ಮುಂದಿನ ದಿನಗಳಲ್ಲಿ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಗ್‌ ಬಾಸ್‌ ಮನೆಯೊಳಗೆ ಹೋಗಿದ್ದೇಕೆ ರಾಜಣ್ಣ?

    ಬಿಗ್‌ ಬಾಸ್‌ ಮನೆಯೊಳಗೆ ಹೋಗಿದ್ದೇಕೆ ರಾಜಣ್ಣ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾನ್ಯ ಮನೆಯಿಂದ ಮದುವೆ ಪ್ರಪೋಸಲ್‌ ಬಂದ್ರೆ ರೂಪೇಶ್‌ ಶೆಟ್ಟಿ ಉತ್ತರವೇನು?

    ಸಾನ್ಯ ಮನೆಯಿಂದ ಮದುವೆ ಪ್ರಪೋಸಲ್‌ ಬಂದ್ರೆ ರೂಪೇಶ್‌ ಶೆಟ್ಟಿ ಉತ್ತರವೇನು?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಗ್ ಬಾಸ್ ಗೆಲುವಿಗೆ ಕೊರಗಜ್ಜನ ಆಶೀರ್ವಾದವೇ ಕಾರಣ: ರೂಪೇಶ್ ಶೆಟ್ಟಿ

    ಬಿಗ್ ಬಾಸ್ ಗೆಲುವಿಗೆ ಕೊರಗಜ್ಜನ ಆಶೀರ್ವಾದವೇ ಕಾರಣ: ರೂಪೇಶ್ ಶೆಟ್ಟಿ

    ಬಿಗ್ ಬಾಸ್ ಸೀಸನ್ 9ರ ವಿನ್ನರ್ (Bigg Boss Kannada 9) ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ. ರೂಪೇಶ್ ಆಟಕ್ಕೆ ಇಡೀ ಕರ್ನಾಟಕ ಜನತೆಯ ಮೆಚ್ಚುಗೆ ಸೂಚಿಸಿದ್ದಾರೆ. ತಾಯ್ನಾಡು ಮಂಗಳೂರಿಗೆ ಕಾಲಿಟ್ಟಿರುವ ರೂಪೇಶ್, ತಮ್ಮ ಗೆಲುವನ್ನು ಕೊರಗಜ್ಜನ ದೇವರಿಗೆ ಸಮರ್ಪಿಸಿದ್ದಾರೆ. ಕೊರಗಜ್ಜನ (Koragajja) ಸನ್ನಿಧಾನಕ್ಕೆ ರೂಪೇಶ್‌ ಭೇಟಿ ನೀಡಿದ್ದಾರೆ.

    ಒಟಿಟಿಯಿಂದ ಟಿವಿ ಬಿಗ್ ಬಾಸ್ ಶೋನ ವಿನ್ನರ್ ಆಗಿ ರೂಪೇಶ್ ಶೆಟ್ಟಿ (Roopesh Shetty) ಜಯಭೇರಿ ಬಾರಿಸಿದ್ದಾರೆ. ಮಂಗಳೂರಿಗೆ (Mangalore) ಅದ್ದೂರಿಯಾಗಿ ಎಂಟ್ರಿ ಕೂಡ ಪಡೆದಿದ್ದಾರೆ. ಈ ವೇಳೆ ಬಿಗ್ ಬಾಸ್ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ನಾನು ಕೊರಗಜ್ಜ ದೇವರನ್ನು ತುಂಬ ಆರಾಧನೆ ಮಾಡುತ್ತೇನೆ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡುವಾಗ ಕೊರಗಜ್ಜನ ಹೆಸರು ಹೇಳುತ್ತಿದ್ದೆ. ನಾನು ಗೆಲ್ಲುವುದು ಬೇಡ, ಕನಿಷ್ಠ ಪಕ್ಷ ಟಾಪ್ 5ರಲ್ಲಿ ಬಂದರೂ ಕೂಡ ಮೊದಲು ಹೋಗುವುದು ಕೊರಗಜ್ಜ ಕ್ಷೇತ್ರಕ್ಕೆ ಅಂದುಕೊಂಡಿದ್ದೆ. ಆದರೆ ಬಿಗ್ ಬಾಸ್‌ನಲ್ಲಿ ನನ್ನನ್ನು ಅವರೇ ಗೆಲ್ಲಿಸಿದ್ದಾರೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. ಇದನ್ನೂ ಓದಿ: ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ಸುದ್ದಿ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ರು ತಮನ್ನಾ

    ಕರಾವಳಿ ಮಂಗಳೂರಿಗೆ ಬಂದ ರೂಪೇಶ್ ಶೆಟ್ಟಿಗೆ ಹುಲಿ ವೇಷದ ಕಲಾವಿದರು ಸ್ವಾಗತ ಕೋರಿದ್ದಾರೆ. ಅದು ಅವರಿಗೆ ಹೆಚ್ಚು ಸಂತಸ ತಂದಿದೆ. ಆ ಬಗ್ಗೆಯೂ ಅವರು ಮಾತನಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನನಗೆ ಹುಲಿ ವೇಷ ಎಂದರೆ ಇಷ್ಟ. ತುಳುನಾಡಿನ ಈ ಸಂಸ್ಕೃತಿಕ ಕಲೆಯನ್ನು ಬಿಗ್ ಬಾಸ್ ಮನೆಯಲ್ಲಿ ಪ್ರದರ್ಶನ ಮಾಡಲು ಅವಕಾಶ ಸಿಕ್ಕಿತು. ಇಲ್ಲಿಯೂ ಹುಲಿವೇಷವನ್ನು ನನ್ನ ಸ್ನೇಹಿತರು ಪ್ಲ್ಯಾನ್ ಮಾಡಿದ್ದಾರೆ. ನಾನು ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ತಾವು ಗೆದ್ದಿರುವ ಹಣದಲ್ಲಿ ಕೊರಗಜ್ಜ ದೈವಕೋಲ ಮಾಡಿಸುವುದಾಗಿ ಹೇಳಿಕೊಂಡಿದ್ದಾರೆ. ಸದ್ಯದಲ್ಲೇ ದೈವಾರಾಧನೆ ಕಾರ್ಯರೂಪಕ್ಕೆ ಬರಲಿದೆ.

    ಬಿಗ್ ಬಾಸ್‌ನ ಗೆಲುವಿನ ಸಕ್ಸಸ್ ನಂತರ ರೂಪೇಶ್ ಶೆಟ್ಟಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿದೆ. ತುಳು, ಕನ್ನಡ, ತೆಲುಗು ಸಿನಿಮಾಗಳಲ್ಲೂ ರೂಪೇಶ್ ಕಾಣಿಸಿಕೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k