Tag: bigg boss kannada 9

  • ಮಹಾ ಕುಂಭಮೇಳದಲ್ಲಿ ಭಾಗಿಯಾದ ಬಿಗ್ ಬಾಸ್ ಸಾನ್ಯ ಅಯ್ಯರ್

    ಮಹಾ ಕುಂಭಮೇಳದಲ್ಲಿ ಭಾಗಿಯಾದ ಬಿಗ್ ಬಾಸ್ ಸಾನ್ಯ ಅಯ್ಯರ್

    ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ (Maha Kumbh Mela 2025) ದಿನದಿಂದ ದಿನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಕುಂಭ ಮೇಳದಲ್ಲಿ ಜನ ಭಾಗಿಯಾಗುತ್ತಿದ್ದಾರೆ. ಹೀಗಿರುವಾಗ ‘ಬಿಗ್ ಬಾಸ್’ ಖ್ಯಾತಿಯ ಸಾನ್ಯ ಅಯ್ಯರ್ (Saanya Iyer) ಕೂಡ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ನಟಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಸಾನ್ಯ ಪೋಸ್ಟ್‌ನಲ್ಲಿ, ಸಂಗಮದಲ್ಲಿ ಮೌನಿ ಅಮಾವಾಸ್ಯೆಯ ಶಾಹಿ ಸ್ನಾನವು ನನ್ನ ಅಂತರಂಗದಲ್ಲಿ ಹಲವು ವಿಷಯಗಳನ್ನು ಕಲಿಸಿದೆ. ನನಗೆ ಪುನರ್ಜನ್ಮವಲ್ಲದೆ ಬೇರೇನೂ ಅಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಮುಂದಿನ ಹೊಸ ಪ್ರಯಾಣಕ್ಕಾಗಿ ನನ್ನ ಎಲ್ಲಾ ಪಿತೃಗಳು, ಪೂರ್ವಜರಿಂದ ಆಶೀರ್ವಾದವನ್ನು ಪಡೆದಿದ್ದೇನೆ.

    ನಾವೆಲ್ಲರೂ ಮಾನವ ಜೀವನವನ್ನು ಅನುಭವಿಸುತ್ತಿರುವ ಆಧ್ಯಾತ್ಮಿಕ ಜೀವಿಗಳು, ನೀವೆಲ್ಲರೂ ಉನ್ನತ ಕ್ಷೇತ್ರಗಳಿಗೆ ಏರಬಹುದು.ನೀವು ನಿಜವಾಗಿಯೂ ಯಾರೆಂದು ನೋಡಬಹುದು ಎಂದು ನಾನು ಭಾವಿಸುತ್ತೇನೆ. ಭೂಮಿಯ ಮೇಲಿನ ನಿಮ್ಮ ಉದ್ದೇಶವು ಈಡೇರಲಿ. ಲೋಕ ಸಮಸ್ತಃ ಸುಖಿನೋ ಭವತು ಎಂದು ಬರೆದುಕೊಂಡಿದ್ದಾರೆ.

    ಅಂದಹಾಗೆ, ‘ಬಿಗ್ ಬಾಸ್ ಕನ್ನಡ 9’ರ ಸ್ಪರ್ಧಿಯಾಗಿ ಸಾನ್ಯ ಗುರುತಿಸಿಕೊಂಡಿದ್ದಾರೆ. ‘ಗೌರಿ’ (Gowri) ಎಂಬ ಸಿನಿಮಾದ ಮೂಲಕ ಸಮರ್ಜಿತ್ ಲಂಕೇಶ್‌ಗೆ ಅವರು ನಾಯಕಿಯಾಗಿ ನಟಿಸಿದ್ದರು.

  • ಹಾಟ್ ಅವತಾರ ತಾಳಿದ ಸಾನ್ಯ ಅಯ್ಯರ್

    ಹಾಟ್ ಅವತಾರ ತಾಳಿದ ಸಾನ್ಯ ಅಯ್ಯರ್

    ‘ಬಿಗ್ ಬಾಸ್’ ಬೆಡಗಿ (Bigg Boss Kannada 9) ಸಾನ್ಯ ಅಯ್ಯರ್ (Saanya Iyer) ಸದಾ ಒಂದಲ್ಲಾ ಒಂದು ಗ್ಲ್ಯಾಮರಸ್‌ ಫೋಟೋಶೂಟ್‌ನಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಇದನ್ನೂ ಓದಿ:ಸದ್ಯದಲ್ಲೇ ನನ್ನ ನಿಶ್ಚಿತಾರ್ಥ: ಮದುವೆಯಾಗಲಿರುವ ಹುಡುಗನ ಬಗ್ಗೆ ಸೋನು ಓಪನ್‌ ಟಾಕ್

    ಗುರುತೇ ಸಿಗದಷ್ಟು ಹೊಸ ಲುಕ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಮಿನಿ ಸ್ಕರ್ಟ್- ಶಾರ್ಟ್ಸ್ ಧರಿಸಿ, ಅದರ ಮೇಲೋಂದು ನ್ಯೂಡ್ ಕಲರ್ ಕ್ರಾಪ್ ಟಾಪ್ ಧರಿಸಿದ್ದಾರೆ. ಅದಕ್ಕೆ ಮ್ಯಾಚ್ ಆಗುವಂತೆ ಫ್ರಂಟ್ ಕಟ್ ಮಾಡಿರೋ ಹೇರ್ ಸ್ಟೈಲ್ ಮಾಡಿಸಿಕೊಂಡು, ಹೈ ಪಾನಿಟೇಲ್ ಕಟ್ಟಿ, ಕಣ್ಣಿಗೊಂದು ದೊಡ್ಡದಾದ ಕನ್ನಡಕ ಹಾಕಿದ್ದಾರೆ.

    ಈ ಫೋಟೋಶೂಟ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಸಾನ್ಯ ಲುಕ್‌ಗೆ ‘ಬಿಗ್ ಬಾಸ್ ಕನ್ನಡ 9’ರ (Bigg Boss Kannada 9) ವಿನ್ನರ್ ರೂಪೇಶ್ ಶೆಟ್ಟಿ ಹಾರ್ಟ್ ಇಮೋಜಿ ಹಾಕಿದ್ದಾರೆ. ಇನ್ನೂ ಕೆಲ ನೆಟ್ಟಿಗರು ನಟಿಯನ್ನು ಮಾಜಿ ನೀಲಿ ತಾರೆ ಮಿಯಾ ಖಲೀಫಾರನ್ನು ಹೊಲಿಸಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:10 ದಿನಗಳಲ್ಲಿ 300 ಕೋಟಿ ರೂ. ಕ್ಲಬ್ ಸೇರಿದ ‘ಸಿಂಗಂ ಅಗೇನ್’ ಸಿನಿಮಾ

    ಅಂದಹಾಗೆ, ‘ಪುಟ್ಟಗೌರಿ ಮದುವೆ’ ಸೀರಿಯಲ್ ಸೇರಿದಂತೆ ಅನೇಕ ಪ್ರಾಜೆಕ್ಟ್‌ಗಳಲ್ಲಿ ಬಾಲನಟಿಯಾಗಿ ಸಾನ್ಯ ಕೆಲಸ ಮಾಡಿದರು. ಆ ನಂತರ ‘ಬಿಗ್ ಬಾಸ್ ಕನ್ನಡ 9’ರಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು.

    ಈ ವರ್ಷ ಸಮರ್ಜಿತ್ ಲಂಕೇಶ್‌ಗೆ ನಾಯಕಿಯಾಗಿ ಗೌರಿ ಸಿನಿಮಾದಲ್ಲಿ ಸಾನ್ಯ ಅಯ್ಯರ್ ನಟಿಸಿದರು. ಈ ಚಿತ್ರವನ್ನು ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದರು. ಈ ಚಿತ್ರಕ್ಕೆ ಅಭಿಮಾನಿಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  • ಬ್ರೈಡಲ್ ಲುಕ್‌ನಲ್ಲಿ ಮಿಂಚಿದ ಸಾನ್ಯ ಅಯ್ಯರ್

    ಬ್ರೈಡಲ್ ಲುಕ್‌ನಲ್ಲಿ ಮಿಂಚಿದ ಸಾನ್ಯ ಅಯ್ಯರ್

    ಸ್ಯಾಂಡಲ್‌ವುಡ್ (Sandalwood) ನಟಿ ಸಾನ್ಯ ಅಯ್ಯರ್ (Saanya Iyer) ವಧುವಿನಂತೆ ಬ್ರೇಡಲ್ ಲುಕ್‌ನಲ್ಲಿ ಮಿಂಚಿದ್ದಾರೆ. ರಾಯಲ್ ಲುಕ್‌ನಲ್ಲಿ ಕಂಗೊಳಿಸುತ್ತಿರುವ ಸಾನ್ಯರನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟಿಯ ಸುಂದರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

    ಕೆಂಪು ಬಣ್ಣದ ಧಿರಿಸಿನಲ್ಲಿ ಸಾನ್ಯ ವಧುವಿನಂತೆಯೇ ಕಂಗೊಳಿಸಿದ್ದಾರೆ. ಕ್ಯಾಮೆರಾಗೆ ಮಸ್ತ್ ಆಗಿ ಪೋಸ್ ಕೊಟ್ಟಿದ್ದು, ‘ರಾಣಿ ರಾಣಿ ನಿನ್ನ ಕಂಡಾಗ ನನ್ನ ಮರೆತೇ ನಾನೀಗ’ ಎಂದು ಸಾನ್ಯ ಸೌಂದರ್ಯವನ್ನು ನೆಟ್ಟಿಗನೊಬ್ಬ ಬಣ್ಣಿಸಿದ್ದಾರೆ. ಸಾನ್ಯ ಲುಕ್‌ಗೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಇದನ್ನೂ ಓದಿ:ಸೆಲೆಬ್ರಿಟಿಯ ಬದುಕನ್ನು ಜೈಲುವಾಸಕ್ಕೆ ಹೋಲಿಸಿದ ನಟ ಜಗ್ಗೇಶ್

    ‘ಬಿಗ್ ಬಾಸ್’ (Bigg Boss Kannada 9) ಶೋ ನಂತರ ‘ಗೌರಿ’ ಚಿತ್ರದ ಮೂಲಕ ಸಾನ್ಯ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಸಮರ್ಜಿತ್ ಲಂಕೇಶ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಇಂದ್ರಜಿತ್ ಲಂಕೇಶ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

    ಇತ್ತೀಚೆಗೆ ‘ಗೌರಿ’ (Gowri Film) ಸಿನಿಮಾದ ಮೊದಲ ಟೀಸರ್ ಆಗಿ ಧೂಳೆಬ್ಬಿಸಿತ್ತು. ಹೊಸ ಪ್ರತಿಭೆ ಸಮರ್ಜಿತ್ ಮಾಸ್ ಎಂಟ್ರಿಗೆ ಫಿದಾ ಆಗಿದ್ದರು. ಇದನ್ನೂ ಓದಿ:ನಿರ್ಮಾಣ ಸಂಸ್ಥೆ ಆರಂಭಿಸಿದ ‘ಜೈಲರ್’ ಡೈರೆಕ್ಟರ್

    ಈ ಸಿನಿಮಾ ಜೊತೆಗೆ ಹೊಸ ಬಗೆಯ ಕಥೆಗಳನ್ನು ಕೇಳ್ತಿದ್ದಾರೆ. ಸದ್ಯದಲ್ಲೇ ಹೊಸ ಚಿತ್ರದ ಬಗ್ಗೆ ಮಾಹಿತಿ ಹೊರಬೀಳಲಿದೆ.

  • ದೀಪಿಕಾಗೆ ಜಸ್ಟ್‌ 28 ವರ್ಷ- ಗೂಗಲ್‌ಗೆ ನಟಿ ಕ್ಲಾಸ್

    ದೀಪಿಕಾಗೆ ಜಸ್ಟ್‌ 28 ವರ್ಷ- ಗೂಗಲ್‌ಗೆ ನಟಿ ಕ್ಲಾಸ್

    ‘ಬಿಗ್ ಬಾಸ್’ (Bigg Boss Kannda 9) ಖ್ಯಾತಿಯ ದೀಪಿಕಾ ದಾಸ್ (Deepika Das) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದರ ನಡುವೆ ಗೂಗಲ್‌ಗೆ ನಟಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಗೂಗಲ್‌ನಲ್ಲಿ ವಯಸ್ಸನ್ನು ತಪ್ಪಾಗಿ ಉಲ್ಲೇಖಿಸಿದ್ದಕ್ಕೆ ನಟಿ ಲೆಕ್ಕದ ಪಾಠ ಮಾಡಿದ್ದಾರೆ.

    ನಾಗಿಣಿ (Nagini), ಬಿಗ್ ಬಾಸ್ ಶೋ ಮೂಲಕ ಸಂಚಲನ ಮೂಡಿಸಿದ್ದ ನಟಿ ದೀಪಿಕಾ ದಾಸ್ ಹುಟ್ಟುಹಬ್ಬದ ದಿನದಂದು ಮಾಡ್ರನ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಕೈಯಲ್ಲಿ ಬೊಕ್ಕೆ ಮತ್ತು ಕೇಕ್ ಹಿಡಿದು ಮುದ್ದಿನ ಶ್ವಾನದ ಜೊತೆ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ಇದೀಗ ದೀಪಿಕಾ ಪೋಸ್ಟ್‌ನಲ್ಲಿ ಬರೆದಿರುವ ಕ್ಯಾಪ್ಷನ್ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:ಮದುವೆ ನಂತರ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ರಕುಲ್ ದಂಪತಿ

    ತಮ್ಮ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡಿರುವ ಗೂಗಲ್ ಪ್ರಭುಗೆ ದೀಪಿಕಾ ಪಾಠ ಮಾಡಿದ್ದಾರೆ. ಗೂಗಲ್‌ನಲ್ಲಿ ದೀಪಿಕಾ ದಾಸ್ ಬರ್ತ್‌ಡೇಯನ್ನು ಫೆ.23, 1993 ಎಂದು ಹಾಕಿ 31 ವರ್ಷ ಎಂದು ಬರೆಯಲಾಗಿದೆ. ಅದಕ್ಕೆ ನಟಿ, ನನ್ನ ವಯಸ್ಸು 31 ವರ್ಷ ಅಂತ ಹೇಳೋದನ್ನು ನಿಲ್ಲಿಸು. 28 ವರ್ಷ ವಯಸ್ಸಾಗಿದೆ ಅಷ್ಟೇ. ಆದರೂ 82 ವರ್ಷ ಆಗಿರುವಂತೆ ಫೀಲ್ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Deepika Das (@deepika__das)

    ನನ್ನ ಜೀವನದಲ್ಲಿ ಆಗಿರುವ ಎಲ್ಲಾ ವಿಷಯಕ್ಕೂ ಥ್ಯಾಂಕ್ಸ್ ಎಂದು ಹೇಳುತ್ತಾ, ತಮಗೆ ತಾವೇ ಬರ್ತ್‌ಡೇ ವಿಶ್ ಮಾಡಿದ್ದಾರೆ. ಹ್ಯಾಪಿ ಬರ್ತ್‌ಡೇ ಮೈ ಸೆಲ್ಫ್ ಎಂದು ನಟಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ನಟ ದರ್ಶನ್ ವಿರುದ್ಧ ಮತ್ತೆರಡು ದೂರು ದಾಖಲು

    ಇದೀಗ ‘ಪಾಯಲ್’ ಎಂಬ ಸಿನಿಮಾ ಮೂಲಕ ಮಹಿಳಾ ಪ್ರಧಾನ ಸಿನಿಮಾದಲ್ಲಿ ದೀಪಿಕಾ ದಾಸ್ ನಟಿಸುತ್ತಿದ್ದಾರೆ. ಲೀಡ್ ರೋಲ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

  • ಸ್ಟೈಲೀಶ್‌ ಆಗಿ ಫೋಟೋಶೂಟ್‌ನಲ್ಲಿ ಕಂಗೊಳಿಸಿದ ಸಾನ್ಯ ಅಯ್ಯರ್

    ಸ್ಟೈಲೀಶ್‌ ಆಗಿ ಫೋಟೋಶೂಟ್‌ನಲ್ಲಿ ಕಂಗೊಳಿಸಿದ ಸಾನ್ಯ ಅಯ್ಯರ್

    ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿ ಸಾನ್ಯ ಅಯ್ಯರ್ (Saanya Iyer) ಅವರು ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಸ್ಟೈಲೀಶ್‌ ಆಗಿ ಸಾನ್ಯ ಕಂಗೊಳಿಸಿದ್ದಾರೆ. ಹೊಸ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ಹಸಿರು ಬಣ್ಣದ ಗೌನ್‌ನಲ್ಲಿ ಸಾನ್ಯ ಅಯ್ಯರ್ ಮಿಂಚಿದ್ದಾರೆ. ಫಿಶ್ ಕಟ್‌ನಂತಿರೋ ಡ್ರೆಸ್‌ ಧರಿಸಿ ಸಾನ್ಯ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸಾನ್ಯ ಡ್ರೆಸ್ ಅದಕ್ಕೆ ತಕ್ಕಂತಹ ಮೇಕಪ್ ಇವೆಲ್ಲವೂ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಾನ್ಯರ ನ್ಯೂ ಲುಕ್‌ ನೋಡಿ ಕನ್ನಡ ಚಿತ್ರರಂಗದಲ್ಲಿ ಮುಂದೆ ಮೆರೆಯುವ ನಟಿ ಎಂದು ಫ್ಯಾನ್ಸ್ ಹಾಡಿ ಹೊಗಳಿದ್ದಾರೆ.

    ಕಳೆದ ವರ್ಷ ಸಾನ್ಯ, ಬಿಗ್ ಬಾಸ್ ಒಟಿಟಿ ಸೀಸನ್ 1 ಮತ್ತು ಟಿವಿ ಬಿಗ್ ಬಾಸ್‌ನಲ್ಲಿ (Bigg Boss Kannada 9) ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಸಿನಿಮಾ ನಾಯಕಿಯಾಗಬೇಕು ಎಂದು ಕನಸು ಕಂಡಿದ್ದ ನಟಿ ಇದೀಗ ಅದೇ ಹಾದಿಯಲ್ಲಿ ಹೆಜ್ಜೆ ಇಡ್ತಿದ್ದಾರೆ. ಇದನ್ನೂ ಓದಿ:ಏಳಿಗೆ ಸಹಿಸಲಾರದವರಿಗೆ ದರ್ಶನ್ ಹೇಳಿದ್ದೇನು?

    ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ (Gowri) ಸಿನಿಮಾದಲ್ಲಿ ಸಾನ್ಯ ಅಯ್ಯರ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.

  • ರಿವೀಲ್‌ ಆಯ್ತು ‘ಅಧಿಪತ್ರ’ ಸಿನಿಮಾದಲ್ಲಿನ ರೂಪೇಶ್‌ ಶೆಟ್ಟಿ ಲುಕ್‌

    ರಿವೀಲ್‌ ಆಯ್ತು ‘ಅಧಿಪತ್ರ’ ಸಿನಿಮಾದಲ್ಲಿನ ರೂಪೇಶ್‌ ಶೆಟ್ಟಿ ಲುಕ್‌

    ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ (Roopesh Shetty) ವಿನ್ನರ್ ಆಗಿ ಗೆದ್ದು ಬೀಗಿದ್ದರು. ಇದೀಗ ತುಳು, ಕನ್ನಡ ಸಿನಿಮಾಗಳಲ್ಲಿ ರೂಪೇಶ್ ಬ್ಯುಸಿಯಾಗಿದ್ದಾರೆ. ‘ಅಧಿಪತ್ರ’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿನ ರೂಪೇಶ್ ಲುಕ್ ಹೇಗಿದೆ. ಇದೀಗ ರಿವೀಲ್ ಆಗಿದೆ.

    ಬಿಗ್ ಬಾಸ್ ಗೆದ್ದ ಮೇಲೆ ಹಲವು ಸಿನಿಮಾಗಳನ್ನ ರೂಪೇಶ್ ಶೆಟ್ಟಿ ಒಪ್ಪಿಕೊಂಡಿದ್ದಾರೆ. ‘ಅಧಿಪತ್ರ’ ಚಿತ್ರದಲ್ಲಿ ರೂಪೇಶ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೂಲಿಂಗ್ ಗ್ಲಾಸ್ ಧರಿಸಿ ಬೈಕ್ ಮೇಲೆ ಕುಳಿತು ಖಡಕ್ ಆಗಿ ಕ್ಯಾಮೆರಾ ಕಣ್ಣಿಗೆ ರೂಪೇಶ್ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಬಾತ್‌ರೂಂ ಬಿಟ್ಟು ಕೊಡದೇ ಡ್ರೋನ್‌ಗೆ ಕಾಡಿಸಿದ ಸ್ನೇಹಿತ್‌ಗೆ ಸುದೀಪ್‌ ಕ್ಲಾಸ್‌

    ಚಹನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಅಧಿಪತ್ರ ಚಿತ್ರದಲ್ಲಿ ಹೀರೋ ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ಜಾಹ್ನವಿ ನಟಿಸುತ್ತಿದ್ದಾರೆ. ಬೃಹತಿ ಎಂಬ ಪಾತ್ರಕ್ಕೆ ಗಿಚ್ಚಿ ಗಿಲಿ ಗಿಲಿ ನಟಿ ಬಣ್ಣ ಹಚ್ಚಿದ್ದಾರೆ.‌ ಸದ್ಯ ಚಿತ್ರದ ಶೂಟಿಂಗ್‌ ಭರದಿಂದ ಸಾಗುತ್ತಿದೆ.

    ಇನ್ನೂ ನಿರ್ದೇಶಕ ಚಹನ್ ಶೆಟ್ಟಿ ಮೊದಲು ಈ ಸಿನಿಮಾದ ಕಥೆ ಹೇಳಿದಾಗ ಬಹಳ ಆಸಕ್ತಿ ಮೂಡಿಸಿತು. ಬಹಳ ಸಿದ್ಧತೆಯೊಂದಿಗೆ ಅವರು ಈ ಸಿನಿಮಾದ ಸ್ಕ್ರಿಪ್ಟ್ ಮಾಡಿಕೊಂಡು ಬಂದಿದ್ದಾರೆ. ಅವರ ಸಿದ್ಧತೆ ನೋಡಿ ನನಗೆ ಧೈರ್ಯ ಬಂತು. ಅವರಲ್ಲಿ ಒಳ್ಳೆಯ ವಿಷನ್ ಇದೆ. ಆ ಕಾರಣಕ್ಕಾಗಿಯೇ ನಾನು ಈ ‘ಅಧಿಪತ್ರ’ ಸಿನಿಮಾ ಒಪ್ಪಿಕೊಂಡಿದ್ದೇನೆ. ಇದರಲ್ಲಿ ನನ್ನ ಲುಕ್ ಕೂಡ ಬೇರೆ ಥರ ಇರಲಿದೆ ಎಂದು ರೂಪೇಶ್ ಶೆಟ್ಟಿ ತಿಳಿಸಿದ್ದರು. ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದರು.

  • ಅಪ್ಪನ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರೂಪೇಶ್ ಶೆಟ್ಟಿ

    ಅಪ್ಪನ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರೂಪೇಶ್ ಶೆಟ್ಟಿ

    ಬಿಗ್ ಬಾಸ್ ವಿನ್ನರ್ (Bigg Boss Kannada) ರೂಪೇಶ್ ಶೆಟ್ಟಿ ಅವರ ಹುಟ್ಟುಹಬ್ಬವನ್ನು ಅಪ್ಪನ ಜೊತೆ ಸಂಭ್ರಮದಿಂದ ಸೆಲೆಬ್ರೇಟ್‌ ಮಾಡಿದ್ದಾರೆ. ಆಗಸ್ಟ್‌ 14ರಂದು ರೂಪೇಶ್‌ ಬರ್ತ್‌ಡೇಯಾಗಿದ್ದು, ಅಂದು ಸರ್ಕಸ್‌ ಚಿತ್ರದ ಪ್ರಚಾರಕ್ಕಾಗಿ ವಿದೇಶದಲ್ಲಿದ್ದರು. ಇದೀಗ ಮಂಗಳೂರಿಗೆ ಬರುತ್ತಿದ್ದಂತೆ ಅಪ್ಪನ ಜೊತೆ ಹುಟ್ಟುಹಬ್ಬವನ್ನ ಖುಷಿಯಿಂದ ಆಚರಿಸಿಕೊಂಡಿದ್ದಾರೆ.

    ರೂಪೇಶ್ ಶೆಟ್ಟಿ (Roopesh Shetty) ಅವರಿಗೆ ಈ ವರ್ಷ ತುಂಬಾನೇ ಸ್ಪೆಷಲ್ ಬಿಗ್ ಬಾಸ್ ವಿನ್ನರ್ ಪಟ್ಟದ ಜೊತೆ ಸರ್ಕಸ್ ಸಿನಿಮಾ ಕೂಡ ಸಕ್ಸಸ್ ಕಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಾಣ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿದ್ದ ಕಾರಣ, ತಮ್ಮ ಹುಟ್ಟುಹಬ್ಬವನ್ನ(Birthday)  ಅವರು ಸೆಲೆಬ್ರೇಟ್ ಮಾಡಲು ಆಗಿರಲಿಲ್ಲ. ಇದೀಗ ಅಪ್ಪನ ಜೊತೆ ಕೇಕ್ ಕತ್ತರಿಸುವ ಮೂಲಕ ಬರ್ತ್‌ಡೇ ಖುಷಿಯನ್ನ ಸೆಲೆಬ್ರೇಟ್ ಮಾಡಿದ್ದಾರೆ. ಅಪ್ಪನ ಜೊತೆಗಿನ ಸಂಭ್ರಮ ಫೋಟೋಗಳನ್ನ ನಟ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:Bigg Boss Kannada 10: ಬಿಗ್‌ ಬಾಸ್‌ ಶೋನಲ್ಲಿ ಯಾರೆಲ್ಲಾ ಇದ್ದಾರೆ?

    ಮಂಗಳೂರು, ಉಡುಪಿ ಭಾಗಗಳಲ್ಲಿ ‘ಸರ್ಕಸ್’ (Circus) ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಅನೌನ್ಸ್ ಮಾಡಿದ್ದರು. ಅಧಿಪತ್ರ ಚಿತ್ರದ ಭಿನ್ನ ಕಥೆಯನ್ನ ಹೇಳಲು ರೂಪೇಶ್ ಶೆಟ್ಟಿ ಸಜ್ಜಾಗಿದ್ದಾರೆ.

    ಡಾರ್ಲಿಂಗ್ ಕೃಷ್ಣ- ರಚಿತಾ ರಾಮ್ (Rachita Ram) ನಟನೆಯ ‘ಲವ್ ಮಿ ಔರ್ ಹೇಟ್ ಮಿ’ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಮಾಹಿತಿ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೋನು ಜೊತೆ ರಾಕಿ ಲವ್ವಿ ಡವ್ವಿ- ಟಿಕ್ ಟಾಕ್ ಚೆಲುವೆ ಜೊತೆ ರಾಕೇಶ್ ಮಸ್ತ್ ಪಾರ್ಟಿ

    ಸೋನು ಜೊತೆ ರಾಕಿ ಲವ್ವಿ ಡವ್ವಿ- ಟಿಕ್ ಟಾಕ್ ಚೆಲುವೆ ಜೊತೆ ರಾಕೇಶ್ ಮಸ್ತ್ ಪಾರ್ಟಿ

    ಬಿಗ್ ಬಾಸ್ (Bigg Boss) ಖ್ಯಾತಿಯ ರಾಕೇಶ್ ಅಡಿಗ- ಸೋನು ಗೌಡ (Sonu Gowda) ಅವರು ಸದ್ಯ ಪಾರ್ಟಿ ಮೂಡ್‌ನಲ್ಲಿದ್ದಾರೆ. ದೊಡ್ಮನೆಯಲ್ಲಿ ರಾಕೇಶ್- ಸೋನು ಪ್ರೇಮ ಪಕ್ಷಿಗಳು ಎಂದೂ ಬಿಂಬಿಸಲಾಗಿತ್ತು. ಆದರೆ ನಮ್ಮ ನಡುವೆ ಏನಿಲ್ಲ ಅಂತಾ ಹೇಳುತ್ತಲೇ ಗಾಸಿಪ್‌ಗೆ ಫುಲ್ ಸ್ಟಾಪ್ ಹಾಕಿದ್ರು. ಈಗ ರಾಕಿ -ಸೋನು ಮಸ್ತ್ ಆಗಿ ಪಾರ್ಟಿ ಮಾಡಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ವರುಣ್, ಲಾವಣ್ಯ ನಿಶ್ಚಿತಾರ್ಥದಲ್ಲಿ ನಿಹಾರಿಕಾ ಪತಿ ಗೈರು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

    ‘ಜೋಶ್’ ಸಿನಿಮಾದ ಮೂಲಕ ಗಮನ ಸೆಳೆದ ಪ್ರತಿಭಾನ್ವಿತ ನಟ ರಾಕೇಶ್ ಅಡಿಗ (Rakesh Adiga) ಅವರು ಬಿಗ್ ಬಾಸ್ ಒಟಿಟಿ, ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಟ್ಟರು. ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿಗೆ ಸಖತ್ ಫೈಟ್ ಕೊಟ್ಟರು. ಆದರೆ ಕೊನೆ ಹಂತದಲ್ಲಿ ರನ್ನರ್ ಅಪ್ ಆಗಿ ರಾಕೇಶ್ ಗುರುತಿಸಿಕೊಂಡರು. ಒಟಿಟಿ ಬಿಗ್ ಬಾಸ್‌ನಲ್ಲಿ ಸೋನು ಶ್ರೀನಿವಾಸ್ ಗೌಡ- ರಾಕೇಶ್ ಅಡಿಗ ಜೋಡಿಯಾಗಿ ಹೈಲೆಟ್ ಆಗಿದ್ದರು. ಈ ಲವ್‌ ಬರ್ಡ್ಸ್ ಪ್ರೀತಿಯಲ್ಲಿದ್ದಾರಾ ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.

    ಇದೀಗ ಕೆಲ ಸಮಯದ ನಂತರ‌ ರಾಕೇಶ್ ಅವರನ್ನ ಟಿಕ್ ಟಾಕ್ ಚೆಲುವೆ ಸೋನು ಮೀಟ್ ಆಗಿದ್ದಾರೆ. ಒಟ್ಟಿಗೆ ಪಾರ್ಟಿ ಮಾಡಿ ಮಸ್ತ್ ಮಜಾ ಮಾಡಿದ್ದಾರೆ. ಈ ಕುರಿತ ವೀಡಿಯೋವೊಂದನ್ನ ಸೋನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನಮ್ಮದು ಒಂದು ಇರಲಿ ಅಂತಾ ಅಡಿಬರಹ ನೀಡಿ, ರಾಕಿ-ಸೋನು ಜೊತೆಯಾಗಿ ರೀಲ್ಸ್ ಮಾಡಿದ್ದಾರೆ.

    ಸದ್ಯ ಸೋನು-ರಾಕಿ ಮಸ್ತ್ ಡ್ಯಾನ್ಸ್ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡ್ತಿದ್ದಂತೆ ಲಡ್ಡು ಬಂದು ಬಾಯಿಗೆ ಬಿತ್ತಾ.? ಸೂಪರ್ ಜೋಡಿ, ಮದುವೆ ಯಾವಾಗಾ ಅಂತಾ ಬಗೆ ಬಗೆಯ ರೀತಿಯಲ್ಲಿ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

  • ಪಿಂಕ್ ಕಲರ್ ಡ್ರೆಸ್‌ನಲ್ಲಿ ದೀಪಿಕಾ ದಾಸ್ ಮಿಂಚಿಂಗ್

    ಪಿಂಕ್ ಕಲರ್ ಡ್ರೆಸ್‌ನಲ್ಲಿ ದೀಪಿಕಾ ದಾಸ್ ಮಿಂಚಿಂಗ್

    ಬಿಗ್ ಬಾಸ್ (Bigg Boss) ಬೆಡಗಿ ದೀಪಿಕಾ ದಾಸ್ (Deepika Das) ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಮೋಡಿ ಮಾಡುತ್ತಲೇ ಇರುತ್ತಾರೆ. ಇದೀಗ ಚೆಂದದ ಫೋಟೋಶೂಟ್‌ನಿಂದ ನಟಿ ದೀಪಿಕಾ ಕಂಗೊಳಿಸಿದ್ದಾರೆ. ಇದನ್ನೂ ಓದಿ: ಗೌಡ್ರು ಎಂಬ ಕಾರಣಕ್ಕೆ ʻಎಕ್ಸ್‌ಕ್ಯೂಸ್‌ ಮಿʼ ಸಿನಿಮಾ ಒಪ್ಪಿಕೊಂಡೆ: ರಮ್ಯಾ

    ಕಿರುತೆರೆಯ `ನಾಗಿಣಿ’ (Nagini) ಸೀರಿಯಲ್ ಮೂಲಕ ಟಿವಿ ಪ್ರೇಕ್ಷಕರಿಗೆ ಹತ್ತಿರವಾದ ನಟಿ ದೀಪಿಕಾ ದಾಸ್ ಬಳಿಕ ಬಿಗ್ ಬಾಸ್ (Bigg Boss Kannada) ಮನೆಗೆ ಕಾಲಿಟ್ಟರು. ಶೈನ್ ಶೆಟ್ಟಿ ಜೊತೆಗಿನ ಸ್ನೇಹ ವಿಚಾರವಾಗಿ ಸಖತ್ ಹೈಲೈಟ್ ಆಗಿದ್ದ ನಟಿ, ಟಾಪ್ ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. ಇತ್ತೀಚಿನ ಸೀಸನ್ 9 ಬಿಗ್ ಬಾಸ್‌ನಲ್ಲೂ ದೀಪಿಕಾ ದಾಸ್ ಮಿಂಚಿದ್ದರು.

     

    View this post on Instagram

     

    A post shared by Deepika Das (@deepika__das)

    ಇದೀಗ ಪಿಂಕ್ ಬಣ್ಣದ ಡ್ರೆಸ್ ಧರಿಸಿ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ನಗು ಬೀರಿದ್ದಾರೆ. ಸದ್ಯ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by Deepika Das (@deepika__das)

    ಮಹಿಳಾ ಪ್ರಧಾನದ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಡ್ತಿದ್ದಾರೆ. ಪಾಯಲ್ ಎಂಬ ಪಾತ್ರದಲ್ಲಿ ದೀಪಿಕಾ ನಟಿಸಿದ್ದಾರೆ.

  • ಶೈನ್ ಶೆಟ್ಟಿ ಜೊತೆಗಿನ ಫೋಟೋ ಹಂಚಿಕೊಂಡ ದೀಪಿಕಾ ದಾಸ್

    ಶೈನ್ ಶೆಟ್ಟಿ ಜೊತೆಗಿನ ಫೋಟೋ ಹಂಚಿಕೊಂಡ ದೀಪಿಕಾ ದಾಸ್

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಶೈನ್ ಶೆಟ್ಟಿ (Shine Shetty) ಮತ್ತು ದೀಪಿಕಾ ದಾಸ್ (Deepika Das) ಭೇಟಿಯಾಗಿದ್ದಾರೆ. ಬಿಗ್ ಬಾಸ್ ಸೀಸನ್ 7ರ ವಿನ್ನರ್ ಶೈನ್‌ನ ಭೇಟಿಯಾಗಿರೋದರ ಬಗ್ಗೆ ದೀಪಿಕಾ ದಾಸ್ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಚಂದ್ರಮುಖಿ – 2 ಡ್ಯಾನ್ಸ್ ಪ್ರಾಕ್ಟಿಸ್ ಶುರು ಮಾಡಿದ ಕಂಗನಾ ರಣಾವತ್

    ಸೀಸನ್ 7ರ ಬಿಗ್ ಬಾಸ್‌ನಲ್ಲಿ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ಅವರನ್ನ ಅಭಿಮಾನಿಗಳು ಇಷ್ಟಪಟ್ಟಿದ್ದರು. ದೊಡ್ಮನೆಯಲ್ಲಿ ಜೋಡಿಯಾಗಿ ಹೈಲೈಟ್ ಆಗಿದ್ದರು. ಮೊದಲ ಭೇಟಿಯಿಂದ ಇಂದಿನವರೆಗೂ ಇವರಿಬ್ಬರ ನಡುವೆ ಒಳ್ಳೆಯ ಗೆಳೆತನವಿದೆ.

     

    View this post on Instagram

     

    A post shared by Deepika Das (@deepika__das)

    ಈಗ ಶೈನ್ ಶೆಟ್ಟಿಯನ್ನ ಭೇಟಿಯಾಗಿರುವುದರ ಬಗ್ಗೆ ದೀಪಿಕಾ ದಾಸ್ ಪೋಸ್ಟ್ ಹಂಚಿಕೊಂಡಿದ್ದಾರೆ. ಯಾರಿದು ಗೆಸ್ ಮಾಡಿ ಎಂದು ಹೇಳಿ, ಶೈನ್ ಜೊತೆಗಿನ ಚೆಂದದ ಫೋಟೋ ಶೇರ್ ಮಾಡಿದ್ದಾರೆ. ಸಾಕಷ್ಟು ಸಮಯದ ನಂತರ ಇದೀಗ ದೀಪಿಕಾ -ಶೈನ್‌ ಭೇಟಿಯಾಗಿದ್ದು, ಒಟ್ಟಿಗೆ ಸಮಯ ಕಳೆದಿದ್ದಾರೆ.

    ಇನ್ನೂ ಶೈನ್ ಮತ್ತು ದೀಪಿಕಾ ದಾಸ್ ಇಬ್ಬರು ಒಳ್ಳೆಯ ಸ್ನೇಹಿತರು ಸೀಸನ್ 7ರಿಂದ ಶುರುವಾದ ಈ ಗೆಳೆತನ ಒಂದೊಳ್ಳೆಯ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಈ ಫೋಟೋ ಮಾಡುತ್ತಿದ್ದಂತೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಇನ್ನೂ ಕೆಲವರು ನಿಮ್ಮಿಬ್ಬರ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k