Tag: Bigg Boss Kannada 7

  • ಯಶಸ್ಸಿಗಾಗಿ ‘ವಿಲನ್’ ಆದ ‘ಬಿಗ್ ಬಾಸ್’ ಶೈನ್ ಶೆಟ್ಟಿ

    ಯಶಸ್ಸಿಗಾಗಿ ‘ವಿಲನ್’ ಆದ ‘ಬಿಗ್ ಬಾಸ್’ ಶೈನ್ ಶೆಟ್ಟಿ

    ‘ಬಿಗ್ ಬಾಸ್’ ಖ್ಯಾತಿಯ ಶೈನ್ ಶೆಟ್ಟಿ (Shine Shetty) ಬಳಿ ಈಗ ಕೈತುಂಬಾ ಸಿನಿಮಾಗಳಿವೆ. ಯಶಸ್ಸಿಗಾಗಿ ಶೈನ್ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಮಂತ್ರಾಲಯದಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿದ ನಟ ವಿನೋದ್ ಪ್ರಭಾಕರ್

    ಕಲಾವಿದ ಅಂದ್ಮೇಲೆ ಹೀರೋ ಆಗಿಯೇ ಮಿಂಚಬೇಕು ಅನ್ನೋದಕ್ಕಿಂತ ಸವಾಲಿನ ರೋಲ್‌ನಲ್ಲಿ ನಟಿಸಬೇಕು ಎಂದು ಇದೀಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ‘ನಿದ್ರಾದೇವಿ ನೆಕ್ಸ್ಟ್‌ ಡೋರ್’ (Nidradevi Next Door) ಸಿನಿಮಾದಲ್ಲಿ ಖಳನಾಯಕನ ಪಾತ್ರಕ್ಕೆ ಶೈನ್ ಶೆಟ್ಟಿ ಜೀವತುಂಬಿದ್ದಾರೆ. ಹೀರೋ ಆಗಿ ನಟಿಸಲು ಅವಕಾಶಗಳು ಅರಸಿ ಬರುತ್ತಿದ್ದರೂ ಕೂಡ ಅವರೀಗ ಖಳನಾಯಕ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಪವರ್‌ಫುಲ್ ಪಾತ್ರವೇ ಸಿಕ್ಕಿದೆ. ಇದನ್ನೂ ಓದಿ:ಗೆಳತಿಯ ಮದ್ವೆಯಲ್ಲಿ ಆಲಿಯಾ ಭಟ್ ಫುಲ್ ಶೈನ್ – ವಿಡಿಯೋ ವೈರಲ್

    ‘ಜಸ್ಟ್ ಮ್ಯಾರೀಡ್’ ಚಿತ್ರದಲ್ಲಿ ಅಂಕಿತಾ ಅಮರ್‌ಗೆ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲೂ ಅವರ ಪಾತ್ರ ವಿಭಿನ್ನವಾಗಿದೆ. ಸದ್ಯದಲ್ಲೇ ಈ ಚಿತ್ರದ ರಿಲೀಸ್ ಬಗ್ಗೆ ಮಾಹಿತಿ ಸಿಕ್ಕಿದೆ.

    ಅಂದಹಾಗೆ, ಶೈನ್ ಶೆಟ್ಟಿ ಅವರು ಅವರ ಹೆಸರನ್ನು ಬದಲಿಸಿಕೊಂಡಿದ್ದಾರೆ. ನಟನ ತಂದೆಯ ಹೆಸರು ಶರಶ್ಚಂದ್ರ ಶೆಟ್ಟಿ. ಇದನ್ನೇ ಅವರು ‘ಶೈನ್ ಶರಶ್ ಶೆಟ್ಟಿ’ ಎಂದು ಬದಲಿಸಿದ್ದಾರೆ.

  • ಉದ್ಯಮಿ ಪ್ರತ್ಯಕ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನಾ ಅನಂತಕೃಷ್ಣ

    ಉದ್ಯಮಿ ಪ್ರತ್ಯಕ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನಾ ಅನಂತಕೃಷ್ಣ

    ‘ಲಕ್ಷ್ಮಿ ನಿವಾಸ’ (Lakshmi Nivasa) ನಟಿ ಚಂದನಾ ಅನಂತಕೃಷ್ಣ (Chandana Ananthakrishna) ಅವರು ಇಂದು (ನ.28) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಟಿಯ ಮದುವೆ (Wedding) ಜರುಗಿದೆ. ಈ ಸಂಭ್ರಮದಲ್ಲಿ ಕಿರುತೆರೆಯ ಕಲಾವಿದರು ಭಾಗಿಯಾಗಿ ಹೊಸ ಜೋಡಿಗೆ ಶುಭಹಾರೈಸಿದ್ದಾರೆ.

    ಗುರುಹಿರಿಯರು ನಿಶ್ಚಿಯಿಸಿದ ಮದುವೆ ಇದಾಗಿದ್ದು, ಇತ್ತೀಚೆಗೆ ಕುಟುಂಬಸ್ಥರು ಸಮ್ಮುಖದಲ್ಲಿ ನಟಿಯ ನಿಶ್ಚಿತಾರ್ಥ ಸರಳವಾಗಿ ನಡೆದಿತ್ತು. ಇಂದು ಅದ್ಧೂರಿಯಾಗಿ ಚಂದನಾ ಮತ್ತು ಪ್ರತ್ಯಕ್ಷ್ ಮದುವೆ ನಡೆದಿದೆ. ಇದನ್ನೂ ಓದಿ:ನಿಮ್ಮ ಪ್ರೀತಿಯನ್ನು ಹೃದಯದಲ್ಲಿ ಬಚ್ಚಿಟ್ಟುಕೊಳ್ಳುತ್ತೀನಿ- ರಶ್ಮಿಕಾರನ್ನು ಹೊಗಳಿದ ಅಲ್ಲು ಅರ್ಜುನ್

    ಪ್ರತ್ಯಕ್ಷ್ ಅವರು ಉದ್ಯಮಿಯಾಗಿದ್ದಾರೆ. ವಿಶೇಷ ಅಂದರೆ, ಪ್ರತ್ಯಕ್ಷ್ ಪೋಷಕರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿವಂಗತ ಉದಯ್ ಹುತ್ತಿನಗದ್ದೆ ಅವರು ಡಾ.ರಾಜ್‌ಕುಮಾರ್ ಜೊತೆ ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದರು. ಆರಂಭ, ಅಗ್ನಿಪರ್ವ, ಶುಭ ಮಿಲನ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ಅವರ ಪತ್ನಿ ಲಲಿತಾಂಜಲಿ ಉದಯ್ ಕೂಡ ಹಿರಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

    ಇನ್ನೂ ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ ಕನ್ನಡ ಸೀಸನ್ 7 ಶೋ ಸೇರಿದಂತೆ ಹಲವು ಪ್ರಾಜೆಕ್ಟ್ಗಳಲ್ಲಿ ಚಂದನಾ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಲಕ್ಷ್ಮಿ ನಿವಾಸ’ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಜೊತೆಗೆ ‘ಭಾವ ತೀರ ಯಾನ’ ಸಿನಿಮಾದಲ್ಲಿ ಧೃತಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ.

  • ನಿಮ್ಮ ಹೆಸರಿಗೆ ಕಳಂಕ ತರ್ತೀನಿ- ನಟಿ ದೀಪಿಕಾ ದಾಸ್, ತಾಯಿಗೆ ಬೆದರಿಕೆ

    ನಿಮ್ಮ ಹೆಸರಿಗೆ ಕಳಂಕ ತರ್ತೀನಿ- ನಟಿ ದೀಪಿಕಾ ದಾಸ್, ತಾಯಿಗೆ ಬೆದರಿಕೆ

    ಕಿರುತೆರೆ ನಟಿ ದೀಪಿಕಾ ದಾಸ್ (Deepika Das) ತಾಯಿಗೆ ವ್ಯಕ್ತಿಯೋರ್ವನಿಂದ ಬೆದರಿಕೆ ಕರೆ ಬಂದಿದೆ. ಮಗಳು ಮತ್ತು ಅಳಿಯನ ಬಗ್ಗೆ ಅಪಪ್ರಚಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯ ಮೇಲೆ ದೀಪಿಕಾ ದಾಸ್ ತಾಯಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:BBK 11: ನಿನ್ನದು ನರಿ ಕಣ್ಣೀರು- ಯುವರಾಣಿ ಮೋಕ್ಷಿತಾಗೆ ತಿವಿದ ಉಗ್ರಂ ಮಂಜು

    ದೀಪಿಕಾ ದಾಸ್ ಮದುವೆಯ ಬಳಿಕ ಪತಿ ಜೊತೆ ವಿದೇಶಕ್ಕೆ ತೆರಳಿದ್ದಾರೆ. ಈ ವೇಳೆ, ಯಶವಂತ ಎಂಬವನು ದೀಪಿಕಾ ತಾಯಿಗೆ ಕರೆ ಮಾಡಿ, ಯಾಕೆ ನಿಮ್ಮ ಮಗಳಿಗೆ ಮದುವೆ ಮಾಡಿದ್ದೀರಿ? ಆತ ಒಬ್ಬ ಮೋಸಗಾರ ರಿಯಲ್ ಎಸ್ಟೇಟ್ ಹೆಸರಲ್ಲಿ ಜನರಿಗೆ ಮೋಸ ಮಾಡಿದ್ದಾನೆ ಎಂದು ಹೇಳಿದ್ದನಂತೆ. ನನ್ನ ಅಳಿಯ ಹಾಗೆ ಮಾಡಿದ್ದರೆ ನೀವು ಕಾನೂನು ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ರಂತೆ.

    ಅಷ್ಟಕ್ಕೂ ಸುಮ್ಮನಾಗದ ಯಶವಂತ ದೀಪಿಕಾಗೂ ಕರೆ ಮಾಡಿ, ನಿಮ್ಮ ಗಂಡ ಹಲವರಿಗೆ ಮೋಸ ಮಾಡಿದ್ದಾನೆಂದು ಹೇಳಿದ್ದಾನೆ. ಇದಕ್ಕೆ ದೀಪಕಾ, ನನ್ನ ಗಂಡ ಯಾರಿಗೂ ವಂಚನೆ ಮಾಡಿಲ್ಲ ಮಾಡಿದ್ದರೆ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲು ಹೇಳಿದ್ದಾರೆ ಎಂದಿದ್ದಾರೆ. ಇದರಿಂದ ಕೋಪಕೊಂಡ ಯಶವಂತ ನಿಮ್ಮ ಹೆಸರಿಗೆ ಕಳಂಕ ತರುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೇ ಅಪಪ್ರಚಾರ ಮಾಡದೇ ಇರೋದಕ್ಕೆ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

    ಈ ಹಿನ್ನೆಲೆ ದೀಪಿಕಾ ದಾಸ್ ತಾಯಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ನ.28ಕ್ಕೆ ಚಂದನಾ ಅನಂತಕೃಷ್ಣ ಮದುವೆ- ಭಾವಿ ಪತಿ ಜೊತೆಗಿನ ಫೋಟೋ ರಿವೀಲ್

    ನ.28ಕ್ಕೆ ಚಂದನಾ ಅನಂತಕೃಷ್ಣ ಮದುವೆ- ಭಾವಿ ಪತಿ ಜೊತೆಗಿನ ಫೋಟೋ ರಿವೀಲ್

    ‘ಬಿಗ್ ಬಾಸ್’, ‘ಲಕ್ಷ್ಮಿ ನಿವಾಸ’ (Lakshmi Nivasa) ಖ್ಯಾತಿಯ ಚಂದನಾ ಅನಂತಕೃಷ್ಣ (Chandana Ananthakrishna) ಅವರು ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟಿದ್ದಾರೆ. ಉದ್ಯಮಿ ಪ್ರತ್ಯಕ್ಷ್ ಎಂಬುವವರ ಜೊತೆ ಇದೇ ನ.28ಕ್ಕೆ ಹಸೆಮಣೆ ಏರಲು ನಟಿ ಸಜ್ಜಾಗಿದ್ದಾರೆ. ಇದೀಗ ಭಾವಿ ಪತಿ ಪ್ರತ್ಯಕ್ಷ್ ಜೊತೆಗಿನ ಚಂದನಾ ಫೋಟೋ ರಿವೀಲ್ ಆಗಿದೆ. ಈ ಜೋಡಿಯನ್ನು ನೋಡಿ ನಟಿಯ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ಬಿಹಾರದಲ್ಲಿ ನಡೆಯಲಿದೆ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಟ್ರೈಲರ್ ಲಾಂಚ್

    ಕಿರುತೆರೆಯಲ್ಲಿ ಚಿನ್ನುಮರಿ ಅಲಿಯಾಸ್ ಜಾಹ್ನವಿ ಪಾತ್ರದಲ್ಲಿ ಮೋಡಿ ಮಾಡುತ್ತಿರುವ ಚಂದನಾ ಇದೀಗ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಕುಟುಂಬಸ್ಥರು ನಿಶ್ಚಯಿಸಿದ ಮದುವೆ ಇದಾಗಿದ್ದು, ಉದ್ಯಮಿ ಪ್ರತ್ಯಕ್ಷ್ ಜೊತೆ ಇದೇ ನವೆಂಬರ್ 28ಕ್ಕೆ ಬೆಂಗಳೂರಿನಲ್ಲಿ ಚಂದನಾ ಮದುವೆ ಜರುಗಲಿದೆ. ಈ ಮದುವೆಯಲ್ಲಿ ಕುಟುಂಬಸ್ಥರು, ಆಪ್ತರು, ಕಿರುತೆರೆಯ ಕಲಾವಿದರು ಭಾಗಿಯಾಗಲಿದ್ದಾರೆ. ಈ ಕುರಿತು ನಟಿ ಚಂದನಾ ‘ಪಬ್ಲಿಕ್ ಟಿವಿ’ ಡಿಜಿಟಲ್‌ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

    ಇನ್ನೂ ಪ್ರತ್ಯಕ್ಷ್ ಅವರು ಉದ್ಯಮಿಯಾಗಿದ್ದಾರೆ. ವಿಶೇಷ ಅಂದರೆ, ಪ್ರತ್ಯಕ್ಷ್ ಪೋಷಕರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿವಂಗತ ಉದಯ್ ಹುತ್ತಿನಗದ್ದೆ ಅವರು ಡಾ.ರಾಜ್‌ಕುಮಾರ್ ಜೊತೆ ‘ದೇವತಾ ಮನುಷ್ಯ’ ಚಿತ್ರದಲ್ಲಿ ನಟಿಸಿದ್ದರು. ‘ಆರಂಭ’, ‘ಅಗ್ನಿಪರ್ವ’, ‘ಶುಭ ಮಿಲನ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ಅವರ ಪತ್ನಿ ಲಲಿತಾಂಜಲಿ ಉದಯ್ ಕೂಡ ಹಿರಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

     

    View this post on Instagram

     

    A post shared by Lalithanjali Uday (@lalithanjali)

    ಇನ್ನೂ ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ ಕನ್ನಡ ಸೀಸನ್ 7 ಶೋ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಚಂದನಾ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಲಕ್ಷ್ಮಿ ನಿವಾಸ’ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಜೊತೆಗೆ ‘ಭಾವ ತೀರ ಯಾನ’ ಸಿನಿಮಾದಲ್ಲಿ ಧೃತಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ.

  • ಉದ್ಯಮಿ ಪ್ರತ್ಯಕ್ಷ್ ಜೊತೆ ಚಂದನಾ ಅನಂತಕೃಷ್ಣ ಮದುವೆ ಡೇಟ್ ಫಿಕ್ಸ್

    ಉದ್ಯಮಿ ಪ್ರತ್ಯಕ್ಷ್ ಜೊತೆ ಚಂದನಾ ಅನಂತಕೃಷ್ಣ ಮದುವೆ ಡೇಟ್ ಫಿಕ್ಸ್

    ‘ಬಿಗ್ ಬಾಸ್ ಕನ್ನಡ ಸೀಸನ್ 7′, ‘ಲಕ್ಷ್ಮಿ ನಿವಾಸ’ ಖ್ಯಾತಿಯ ಚಂದನಾ ಅನಂತಕೃಷ್ಣ (Chandana Ananthakrishna) ಅವರು ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟಿದ್ದಾರೆ. ಉದ್ಯಮಿ ಪ್ರತ್ಯಕ್ಷ್ (Prathyaksh) ಎಂಬುವವರ ಜೊತೆ ಹಸೆಮಣೆ (Wedding) ಏರಲು ನಟಿ ಸಜ್ಜಾಗಿದ್ದಾರೆ. ಇದನ್ನೂ ಓದಿ:ಯಶ್ ಬೇಗ ಸಿನಿಮಾ ಮಾಡಿ: ‘ಟಾಕ್ಸಿಕ್’ ನೋಡುವ ನಿರೀಕ್ಷೆ ವ್ಯಕ್ತಪಡಿಸಿದ ಶಾರುಖ್ ಖಾನ್

    ಕಿರುತೆರೆಯಲ್ಲಿ ಚಿನ್ನುಮರಿ ಅಲಿಯಾಸ್ ಜಾಹ್ನವಿ ಪಾತ್ರದಲ್ಲಿ ಮೋಡಿ ಮಾಡುತ್ತಿರುವ ಚಂದನಾ ಇದೀಗ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಕುಟುಂಬಸ್ಥರು ನಿಶ್ಚಯಿಸಿದ ಮದುವೆ ಇದಾಗಿದ್ದು, ಉದ್ಯಮಿ ಪ್ರತ್ಯಕ್ಷ್ ಜೊತೆ ಇದೇ ನವೆಂಬರ್ 28ಕ್ಕೆ ಬೆಂಗಳೂರಿನಲ್ಲಿ ಚಂದನಾ ಮದುವೆ ಜರುಗಲಿದೆ. ಈ ಮದುವೆಯಲ್ಲಿ ಕುಟುಂಬಸ್ಥರು, ಆಪ್ತರು, ಕಿರುತೆರೆಯ ಕಲಾವಿದರು ಭಾಗಿಯಾಗಲಿದ್ದಾರೆ. ಈ ಕುರಿತು ನಟಿ ಚಂದನಾ ‘ಪಬ್ಲಿಕ್‌ ಟಿವಿ’ ಡಿಜಿಟಲ್‌ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

    ಇನ್ನೂ ಪ್ರತ್ಯಕ್ಷ್ ಅವರು ಉದ್ಯಮಿಯಾಗಿದ್ದಾರೆ. ವಿಶೇಷ ಅಂದರೆ, ಪ್ರತ್ಯಕ್ಷ್ ಪೋಷಕರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿವಂಗತ ಉದಯ್ ಹುತ್ತಿನಗದ್ದೆ ಅವರು ಡಾ.ರಾಜ್‌ಕುಮಾರ್ ಜೊತೆ ‘ದೇವತಾ ಮನುಷ್ಯ’ ಚಿತ್ರದಲ್ಲಿ ನಟಿಸಿದ್ದರು. ‘ಆರಂಭ’, ‘ಅಗ್ನಿಪರ್ವ’, ‘ಶುಭ ಮಿಲನ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ಅವರ ಪತ್ನಿ ಲಲಿತಾಂಜಲಿ ಉದಯ್ ಕೂಡ ಹಿರಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

    ಇನ್ನೂ ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ ಕನ್ನಡ ಸೀಸನ್ 7 ಶೋ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಚಂದನಾ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಲಕ್ಷ್ಮಿ ನಿವಾಸ’ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಜೊತೆಗೆ ‘ಭಾವ ತೀರ ಯಾನ’ ಸಿನಿಮಾದಲ್ಲಿ ಧೃತಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ.

  • ಫಾಲ್ಸ್‌ನಲ್ಲಿ ಮುಗ್ಗರಿಸಿ ಬಿದ್ದ ದೀಪಿಕಾ ದಾಸ್- ಭಯ ಬೇಡ ಎಂದು ಸ್ಪಷ್ಟನೆ ನೀಡಿದ ನಟಿ

    ಫಾಲ್ಸ್‌ನಲ್ಲಿ ಮುಗ್ಗರಿಸಿ ಬಿದ್ದ ದೀಪಿಕಾ ದಾಸ್- ಭಯ ಬೇಡ ಎಂದು ಸ್ಪಷ್ಟನೆ ನೀಡಿದ ನಟಿ

    ಟಿ ದೀಪಿಕಾ ದಾಸ್ (Deepika Das) ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಇದೀಗ ರೀಲ್ಸ್ ಮಾಡುವಾಗ ಫಾಲ್ಸ್‌ನಲ್ಲಿ ನಟಿ ಮುಗ್ಗರಿಸಿ ಬಿದ್ದಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಖತ್ ವೈರಲ್ ಆಗಿದೆ. ಈ ಬೆನ್ನಲ್ಲೇ, ನನಗೇನು ಆಗಿಲ್ಲ ಭಯ ಬೇಡ ಅಂತ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸಿನಿ ನಿರ್ದೇಶಕ ಗಜೇಂದ್ರ ಕೊಲೆ ಕೇಸ್‌ನಲ್ಲಿ ಅರೆಸ್ಟ್!

    ದೀಪಿಕಾ ದಾಸ್‌ಗೆ ಟ್ರಾವೆಲ್ ಮಾಡೋದು ತುಂಬಾ ಇಷ್ಟ ಸದಾ ಒಂದಲ್ಲಾ ಒಂದು ವಿದೇಶದ ಪ್ರವಾಸ ಮಾಡುತ್ತಾ ಇರುತ್ತಾರೆ. ಇತ್ತೀಚೆಗೆ ಪ್ರವಾಸ ಹೋಗಿದ್ದ ವೇಳೆ, ರೀಲ್ಸ್ ಮಾಡುತ್ತಿದ್ದಾಗ ನಟಿ ಮುಗ್ಗರಿಸಿ ಬಿದ್ದಿದ್ದಾರೆ. ಈ ವಿಡಿಯೋ ಸ್ವತಃ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ ಆತಂಕಕ್ಕೆ ಒಳಗಾಗಿದ್ದ ಫ್ಯಾನ್ಸ್‌ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.

     

    View this post on Instagram

     

    A post shared by Deepika Das (@deepika__das)

    ಫಾಲ್ಸ್‌ನಲ್ಲಿ ಆಕಸ್ಮಿಕವಾಗಿ ಬಿದ್ದಿರೋದು ನಿಜ. ಆದರೆ ಈ ವಿಡಿಯೋ 3 ತಿಂಗಳು ಹಿಂದಿನದ್ದು ಆಗಿದೆ. ಈಗಿನ ಟ್ರೆಂಡ್ ಚೆಕ್ ಮಾಡಲು ಹಳೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದೆ. ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದಾಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದೇನೆ. ಆದರೆ ಈಗ ಚೆನ್ನಾಗಿದ್ದೇನೆ. ಆತಂಕ ಬೇಡ. ಇಷ್ಟೊಂದು ಪ್ರೀತಿ ತೋರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಎಂದು ದೀಪಿಕಾ ದಾಸ್ ತಿಳಿಸಿದ್ದಾರೆ.

    ಅಂದಹಾಗೆ, ನಾಗಿಣಿ ಸೀರಿಯಲ್, ಬಿಗ್ ಬಾಸ್ ಕನ್ನಡ 7 (Bigg Boss Kannada 7)  ಶೋನಿಂದ ದೀಪಿಕಾ ಮನೆ ಮಾತಾಗಿದ್ದಾರೆ. ಸದ್ಯ ‘ಚೌಕಟ್ಟು’ ಎಂಬ ಸಿನಿಮಾ ಮೂಲಕ ಮತ್ತೆ ಬೆಳ್ಳಿಪರದೆಯಲ್ಲಿ ಸದ್ದು ಮಾಡಲು ರೆಡಿಯಾಗಿದ್ದಾರೆ.

  • ‘ನಿನಗಾಗಿ’ ಎನ್ನುತ್ತಾ ದಿವ್ಯಾ ಉರುಡುಗ ಹಿಂದೆ ಬಿದ್ದ ಕಿಶನ್ ಬಿಳಗಲಿ

    ‘ನಿನಗಾಗಿ’ ಎನ್ನುತ್ತಾ ದಿವ್ಯಾ ಉರುಡುಗ ಹಿಂದೆ ಬಿದ್ದ ಕಿಶನ್ ಬಿಳಗಲಿ

    ನ್ನಡ ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 7’ರ (Bigg Boss Kannada 7) ಮೂಲಕ ಗಮನ ಸೆಳೆದ ಕಿಶನ್ ಬಿಳಗಲಿ (Kishen Bilagali) ಮತ್ತೆ ಟಿವಿ ಪರದೆಗೆ ಮರಳಿದ್ದಾರೆ. ‘ನಿನಗಾಗಿ’ ಎನ್ನುತ್ತಾ ದಿವ್ಯಾ ಉರುಡುಗ ಹಿಂದೆ ಬಿದ್ದಿದ್ದಾರೆ ಕಿಶನ್.‌ ಇದನ್ನೂ ಓದಿ:ನಮ್ಮ ಚಟ ಚಟ್ಟ ಹತ್ತಿಸುವವರೆಗೂ ಇರಬಾರದು- ದರ್ಶನ್‌ಗೆ ಉಮಾಪತಿ ಟಾಂಗ್

    ದಿವ್ಯಾ ಉರುಡುಗ (Divya Uruduga) ಪ್ರಸ್ತುತ ‘ನಿನಗಾಗಿ’ ಸೀರಿಯಲ್‌ನಲ್ಲಿ ಸೂಪರ್ ಸ್ಟಾರ್ ನಾಯಕಿ ಆಗಿ ರಚನಾ ಎಂಬ ಪಾತ್ರ ಮಾಡುತ್ತಿದ್ದಾರೆ. ಈ ಸೀರಿಯಲ್‌ಗೆ ಕಿಶನ್ ಎಂಟ್ರಿ ಕೊಟ್ಟಿದ್ದಾರೆ. ಬಹುಮುಖ್ಯ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ‘ನಿನಗಾಗಿ’ ಎನ್ನತ್ತಾ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.

    ಸದಾ ಒಂದಲ್ಲಾ ಒಂದು ವಿಭಿನ್ನವಾಗಿ ರೀಲ್ಸ್ ಮಾಡುವ ಮೂಲಕ ಗಮನ ಸೆಳೆದಿರುವ ಕಿಶನ್ ಈಗ ಕಿರುತೆರೆ ಎಂಟ್ರಿ ಕೊಟ್ಟಿರೋದು ಸಹಜವಾಗಿ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಕಥೆಯಲ್ಲಿ ಮುಂದೆ ಏನೆಲ್ಲಾ ತಿರುವು ಸಿಗಲಿದೆ ಎಂದು ನೋಡೋದಕ್ಕೆ ಕಾತರದಿಂದ ಪ್ರೇಕ್ಷಕರು ಕಾಯ್ತಿದ್ದಾರೆ. ಇದನ್ನೂ ಓದಿ:ಸಮರ್ಜಿತ್‌ ಲಂಕೇಶ್‌, ಸಾನ್ಯಾ ನಟನೆಯ ‘ಗೌರಿ’ ಸಿನಿಮಾ ರಿಲೀಸ್‌ ಆಗೋದು ಯಾವಾಗ?

    ಕನ್ನಡ ಕಿರುತೆರೆ ಮಾತ್ರವಲ್ಲ, ಹಿಂದಿ ರಿಯಾಲಿಟಿ ಶೋ ಮತ್ತು ಆಲ್ಬಂ ಸಾಂಗ್‌ಗಳ ಮೂಲಕ ಕಿಶನ್ ಸೈ ಎನಿಸಿಕೊಂಡಿದ್ದಾರೆ.

  • ಟರ್ಕಿಯಲ್ಲಿ ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್

    ಟರ್ಕಿಯಲ್ಲಿ ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್

    ‘ಬಿಗ್ ಬಾಸ್ ಕನ್ನಡ 7’ರ (Bigg Boss Kannada 7) ಸ್ಪರ್ಧಿ ದೀಪಿಕಾ ದಾಸ್ (Deepika Das) ಟರ್ಕಿಗೆ ಹಾರಿದ್ದಾರೆ. ಪತಿ ದೀಪಕ್ ಜೊತೆ ವೆಕೇಷನ್‌ನಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದೀಗ ಟರ್ಕಿಯಲ್ಲಿ (Turkey) ತೆಗೆದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

    ದೀಪಿಕಾ ದಾಸ್ ಇದೀಗ ಟರ್ಕಿಯ ಫೇರಿ ಚಿಮ್ನೀಸ್ ವ್ಯಾಲಿಯಲ್ಲಿ ವೆಕೇಷನ್ ಮಾಡುತ್ತಿದ್ದಾರೆ. ಮಾಡ್ರರ್ನ್ ಡ್ರೆಸ್ ಧರಿಸಿ ಕಣ್ಣಿಗೆ ಕೂಲಿಂಗ್‌ ಗ್ಲ್ಯಾಸ್ ಹಾಕಿಕೊಂಡು ಮಸ್ತ್ ಆಗಿ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ಪತಿಯ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಕೂಡ ನಟಿ ಶೇರ್ ಮಾಡಿದ್ದಾರೆ.

    ಅಂದಹಾಗೆ, ದೀಪಿಕಾ ದಾಸ್‌ಗೆ ಗೋವಾದಲ್ಲೇ ಮದುವೆಯಾಗುವ ಕನಸು ಇತ್ತಂತೆ. ಹೀಗಾಗಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಟಿ ದೀಪಿಕಾ ದಾಸ್ ಉದ್ಯಮಿ ದೀಪಕ್ ಎಂಬುವವರ ಜೊತೆ ಮಾರ್ಚ್ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದನ್ನೂ ಓದಿ:ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಸಿಕ್ತು ಗುಡ್‌ ನ್ಯೂಸ್‌

    ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ನಟಿ ಮಾತನಾಡಿ, ದೀಪಕ್ ಅವರ ಮೇಲೆ ನಿಮಗೆ ಲವ್ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ ನಟಿ ದೀಪಿಕಾ ದಾಸ್ ಮನಬಿಚ್ಚಿ ಮಾತನಾಡಿದ್ದರು. ದೀಪಕ್ ಮತ್ತು ನಾನು ನಾಲ್ಕು ವರ್ಷದಿಂದ ಸ್ನೇಹಿತರು. 4 ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭೇಟಿಯಾದೆವು. ಕಳೆದ ಒಂದು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ವಿ. ಕುಟುಂಬಸ್ಥರು ಕೂಡ ನಮ್ಮ ಪ್ರೀತಿಗೆ ಓಕೆ ಎಂದರು.

    ದೀಪಕ್ ಅವರಿಗೆ ಚಿತ್ರರಂಗಕ್ಕೂ ನಂಟಿಲ್ಲ. ಅವರು ಉದ್ಯಮಿ. ಮುಂದಿನ ದಿನಗಳಲ್ಲಿ ಪ್ರೊಡಕ್ಷನ್ ಹೌಸ್ ಮಾಡುವ ಮೂಲಕ ಚಿತ್ರರಂಗಕ್ಕೆ ಕರೆತರುವ ಯೋಜನೆ ಇದೆ. ಅವರು ಜಾಸ್ತಿ ಮಾತಾಡೋದಿಲ್ಲ. ನಾನೇ ಕಮ್ಮಿ ಮಾತಾಡುತ್ತೇನೆ ಅಂದುಕೊಂಡಿದ್ದೆ, ಆದರೆ ನನಗಿಂತ ಕಮ್ಮಿ ಮಾತಾಡುವ ಹುಡುಗ ನನಗೆ ಸಿಕ್ಕಿದ್ದಾರೆ. ನಾನು ಮದುವೆಯಾಗುವ ಹುಡುಗ ಹೀಗೆ ಇರಬೇಕು, ಹಾಗೇ ಇರಬೇಕು ಎಂದು ಅಂದುಕೊಂಡಿರಲಿಲ್ಲ. ಆದರೆ ನಾನು ಪ್ರೀತಿ ಅಂತಾ ಹುಡುಕಿಕೊಂಡು ಹೋಗಿಲ್ಲ. ನನ್ನ ಮದುವೆಯಾಗುವ ಹುಡುಗ ಮನಸ್ಸು ಚೆನ್ನಾಗಿರಬೇಕು. ನನ್ನ ಚೆನ್ನಾಗಿ ನೋಡಿಕೊಳ್ಳುವವನಾಗಿರಬೇಕು. ನನಗೆ ಟೈಮ್ ಕೊಡುವವನಾಗಿರಬೇಕು ಜೊತೆಗೆ ದೇಶ ಸುತ್ತುವವನಾಗಿರಬೇಕು ಅಂತಾ ಈ ಹಿಂದೆ ಹೇಳಿದ್ದೆ. ನಾನು ಅಂದುಕೊಂಡ ಹಾಗೇ ನನಗೆ ನನ್ನ ಸಂಗಾತಿ ಸಿಕ್ಕಿದ್ದಾರೆ ಅಂತ ಮಾತನಾಡಿದ್ದರು.

  • ಕೊಂಬೆ ಮೇಲೆ ನಾಗಿಣಿಯಂತೆ ಮಲಗಿದ ದೀಪಿಕಾ ದಾಸ್

    ಕೊಂಬೆ ಮೇಲೆ ನಾಗಿಣಿಯಂತೆ ಮಲಗಿದ ದೀಪಿಕಾ ದಾಸ್

    ನಾಗಿಣಿ ಬ್ಯೂಟಿ, ಬಿಗ್ ಬಾಸ್ ಕನ್ನಡ ಸೀಸನ್ 7ರ (Bigg Boss Kannada 7) ಸ್ಪರ್ಧಿ ದೀಪಿಕಾ ದಾಸ್ (Deepika Das) ಸದ್ಯ ಪತಿ ಜೊತೆ ವೆಕೇಷನ್ ಮೂಡ್‌ನಲ್ಲಿದ್ದಾರೆ. ಟರ್ಕಿಯಲ್ಲಿ ಚಿಟ್ಟೆಯಾಗಿ ಮಿಂಚಿದ್ದ ನಟಿ, ಈಗ ಕೊಂಬೆ ಮೇಲೆ ನಾಗಿಣಿಯಂತೆ ಮಲಗಿಕೊಂಡಿದ್ದಾರೆ. ಈ ಫೋಟೋ ನೋಡಿ ನಿಜವಾದ ನಾಗಿಣಿ ನೀವೇ ಅಂತಾ ಕಾಮೆಂಟ್ ಮಾಡಿದ್ದಾರೆ.

    ಪತಿ ಜೊತೆ ದೀಪಿಕಾ ಟರ್ಕಿಯಲ್ಲಿ ಬೀಡು ಬಿಟ್ಟಿದ್ದಾರೆ. ರೆಕ್ಕೆಯನ್ನು ಬೆನ್ನಿಗೆ ಸಿಕ್ಕಿಸಿ, ಕಲರ್‌ಫುಲ್ ಡ್ರೆಸ್‌ನಲ್ಲಿ ನಟಿ ಕಂಗೊಳಿಸಿದ್ದಾರೆ. ಯಾವಾಗಲೂ ಸೂರ್ಯನ ಕಿರಣಕ್ಕೆ ಮುಖ ಒಡ್ಡಿಕೊಳ್ಳಿ, ಆಗ ನೆರಳು ನಿಮ್ಮ ಹಿಂದೆಯೇ ಉಳಿಯುತ್ತದೆ ಎಂದು ಕ್ಯಾಪ್ಷನ್ ನೀಡಿದ್ದರು. ನಟಿಯ ಆಕರ್ಷಕ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿತ್ತು. ಈಗ ಹಸಿರು ಬಣ್ಣದ ಡ್ರೆಸ್‌ನಲ್ಲಿ ಕೊಂಬೆ ಮೇಲೆ ನಾಗಿಣಿಯಂತೆ ಮಲಗಿ ನಟಿ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಸಮಂತಾ ಬಗ್ಗೆ ‘ಪುಷ್ಪ 2’ ಡೈರೆಕ್ಟರ್ ಶಾಕಿಂಗ್ ಕಾಮೆಂಟ್

    ದೀಪಿಕಾ ದಾಸ್‌ಗೆ ಗೋವಾದಲ್ಲೇ ಮದುವೆಯಾಗುವ ಕನಸು ಇತ್ತಂತೆ. ಹೀಗಾಗಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಟಿ ದೀಪಿಕಾ ದಾಸ್ ಉದ್ಯಮಿ ದೀಪಕ್ ಎಂಬುವವರ ಜೊತೆ ಮಾರ್ಚ್ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ದೀಪಕ್ ಅವರ ಮೇಲೆ ನಿಮಗೆ ಲವ್ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ ನಟಿ ದೀಪಿಕಾ ದಾಸ್ ಮನಬಿಚ್ಚಿ ಮಾತನಾಡಿದ್ದರು. ದೀಪಕ್ ಮತ್ತು ನಾನು ನಾಲ್ಕು ವರ್ಷದ ಸ್ನೇಹಿತರು. 4 ವರ್ಷಗಳ ಕಾರ್ಯಕ್ರಮವೊಂದರಲ್ಲಿ ಭೇಟಿಯಾದೆವು. ಕಳೆದ ಒಂದು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ವಿ. ಕುಟುಂಬಸ್ಥರು ಕೂಡ ನಮ್ಮ ಪ್ರೀತಿಗೆ ಓಕೆ ಎಂದರು.

    ದೀಪಕ್ ಅವರಿಗೆ ಚಿತ್ರರಂಗಕ್ಕೂ ನಂಟಿಲ್ಲ. ಅವರು ಉದ್ಯಮಿ. ಮುಂದಿನ ದಿನಗಳಲ್ಲಿ ಪ್ರೊಡಕ್ಷನ್ ಹೌಸ್ ಮಾಡುವ ಮೂಲಕ ಚಿತ್ರರಂಗಕ್ಕೆ ಕರೆತರುವ ಯೋಜನೆ ಇದೆ. ಅವರು ಜಾಸ್ತಿ ಮಾತಾಡೋದಿಲ್ಲ. ನಾನೇ ಕಮ್ಮಿ ಮಾತಾಡುತ್ತೇನೆ ಅಂದುಕೊಂಡಿದ್ದೆ, ಆದರೆ ನನಗಿಂತ ಕಮ್ಮಿ ಮಾತಾಡುವ ಹುಡುಗ ನನಗೆ ಸಿಕ್ಕಿದ್ದಾರೆ. ನಾನು ಮದುವೆಯಾಗುವ ಹುಡುಗ ಹೀಗೆ ಇರಬೇಕು, ಹಾಗೇ ಇರಬೇಕು ಅಂತಾ ಅಂದುಕೊಂಡಿರಲಿಲ್ಲ. ಆದರೆ ನಾನು ಪ್ರೀತಿ ಅಂತಾ ಹುಡುಕಿಕೊಂಡು ಹೋಗಿಲ್ಲ. ನನ್ನ ಮದುವೆಯಾಗುವ ಹುಡುಗ ಮನಸ್ಸು ಚೆನ್ನಾಗಿರಬೇಕು. ನನ್ನ ಚೆನ್ನಾಗಿ ನೋಡಿಕೊಳ್ಳುವವನಾಗಿರಬೇಕು. ನನಗೆ ಟೈಮ್ ಕೊಡುವವನಾಗಿರಬೇಕು ಜೊತೆಗೆ ದೇಶ ಸುತ್ತುವವನಾಗಿರಬೇಕು ಅಂತಾ ಈ ಹಿಂದೆ ಹೇಳಿದ್ದೆ. ಅದೇ ರೀತಿ ನಾನು ಅಂದುಕೊಂಡ ಹಾಗೇ ನನಗೆ ನನ್ನ ಸಂಗಾತಿ ಸಿಕ್ಕಿದ್ದಾರೆ ಅಂತ ಮಾತನಾಡಿದ್ದರು.

    ಬಳಿಕ ದೀಪಿಕಾ ದಾಸ್ ಪತಿ ದೀಪಕ್ ಮಾತನಾಡಿ, ನಾನು ದುಬೈ ಮೂಲದವನು ಅಲ್ಲ. ಇದೆ ಬೆಂಗಳೂರಿನ ಆರ್‌ಆರ್ ನಗರದವನು. ರಿಯಲ್ ಎಸ್ಟೇಟ್ ಜೊತೆ ದುಬೈನಲ್ಲಿ ಒಂದು ಐಟಿ ಕಂಪನಿ ಇದೆ. ದೀಪಿಕಾ ನನಗೆ ನಾಲ್ಕು ವರ್ಷಗಳಿಂದ ಗೊತ್ತು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ಇಷ್ಟು ದಿನ ಹೇಗೆಲ್ಲಾ ದೀಪಿಕಾಗೆ ಬೆಂಬಲಿಸಿದ್ರೋ ಮುಂದಿನ ದಿನಗಳಲ್ಲಿ ಕೂಡ ಅವಳಿಗೆ ಸಪೋರ್ಟ್ ಮಾಡಿ ಎಂದು ದೀಪಕ್ ಮನವಿ ಮಾಡಿದ್ದರು.

  • ಟರ್ಕಿಯಲ್ಲಿ ಚಿಟ್ಟೆಯಾದ ದೀಪಿಕಾ ದಾಸ್

    ಟರ್ಕಿಯಲ್ಲಿ ಚಿಟ್ಟೆಯಾದ ದೀಪಿಕಾ ದಾಸ್

    ಸ್ಯಾಂಡಲ್‌ವುಡ್ ನಟಿ, ಬಿಗ್‌ ಬಾಸ್‌ ಕನ್ನಡ 7ರ ಸ್ಪರ್ಧಿ(Bigg Boss Kannada 7) ದೀಪಿಕಾ ದಾಸ್ (Deepika Das) ಇತ್ತೀಚೆಗೆ ಮದುವೆಯಾಗುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದರು. ಇದೀಗ ಪತಿ ಜೊತೆ ದೀಪಿಕಾ ದಾಸ್ ವೆಕೇಷನ್ ಮೂಡ್‌ನಲ್ಲಿದ್ದಾರೆ. ಟರ್ಕಿಯಲ್ಲಿ ಚಿಟ್ಟೆಯಾಗಿ ದೀಪಿಕಾ ಮಿಂಚಿದ್ದಾರೆ. ನಟಿಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಪತಿ ಜೊತೆ ದೀಪಿಕಾ ಟರ್ಕಿಯಲ್ಲಿ ಬೀಡು ಬಿಟ್ಟಿದ್ದಾರೆ. ರೆಕ್ಕೆಯನ್ನು ಬೆನ್ನಿಗೆ ಸಿಕ್ಕಿಸಿ, ಕಲರ್‌ಫುಲ್ ಡ್ರೆಸ್‌ನಲ್ಲಿ ನಟಿ ಕಂಗೊಳಿಸಿದ್ದಾರೆ. ಯಾವಾಗಲೂ ಸೂರ್ಯನ ಕಿರಣಕ್ಕೆ ಮುಖ ಒಡ್ಡಿಕೊಳ್ಳಿ, ಆಗ ನೆರಳು ನಿಮ್ಮ ಹಿಂದೆಯೇ ಉಳಿಯುತ್ತದೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ನಟಿಯ ಆಕರ್ಷಕ ಫೋಟೋಗಳು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ.

     

    View this post on Instagram

     

    A post shared by Deepika Das (@deepika__das)

    ದೀಪಿಕಾ ದಾಸ್‌ಗೆ ಗೋವಾದಲ್ಲೇ (Goa) ಮದುವೆಯಾಗುವ ಕನಸು ಇತ್ತಂತೆ. ಹೀಗಾಗಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಟಿ ದೀಪಿಕಾ ದಾಸ್ ಉದ್ಯಮಿ ದೀಪಕ್ ಎಂಬುವವರ ಜೊತೆ ಮಾರ್ಚ್ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದನ್ನೂ ಓದಿ:ಪ್ರಭಾಸ್ ಜೊತೆ ಕೀರ್ತಿ ಸುರೇಶ್ ಡ್ಯುಯೇಟ್‌

    ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ದೀಪಕ್ (Deepak) ಅವರ ಮೇಲೆ ನಿಮಗೆ ಲವ್ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ ನಟಿ ದೀಪಿಕಾ ದಾಸ್ ಮನಬಿಚ್ಚಿ ಮಾತನಾಡಿದ್ದರು. ದೀಪಕ್ ಮತ್ತು ನಾನು ನಾಲ್ಕು ವರ್ಷದ ಸ್ನೇಹಿತರು. 4 ವರ್ಷಗಳ ಕಾರ್ಯಕ್ರಮವೊಂದರಲ್ಲಿ ಭೇಟಿಯಾದೆವು. ಕಳೆದ ಒಂದು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ವಿ. ಕುಟುಂಬಸ್ಥರು ಕೂಡ ನಮ್ಮ ಪ್ರೀತಿಗೆ ಓಕೆ ಎಂದರು.

    ದೀಪಕ್ ಅವರಿಗೆ ಚಿತ್ರರಂಗಕ್ಕೂ ನಂಟಿಲ್ಲ. ಅವರು ಉದ್ಯಮಿ. ಮುಂದಿನ ದಿನಗಳಲ್ಲಿ ಪ್ರೊಡಕ್ಷನ್ ಹೌಸ್ ಮಾಡುವ ಮೂಲಕ ಚಿತ್ರರಂಗಕ್ಕೆ ಕರೆತರುವ ಯೋಜನೆ ಇದೆ. ಅವರು ಜಾಸ್ತಿ ಮಾತಾಡೋದಿಲ್ಲ. ನಾನೇ ಕಮ್ಮಿ ಮಾತಾಡುತ್ತೇನೆ ಅಂದುಕೊಂಡಿದ್ದೆ, ಆದರೆ ನನಗಿಂತ ಕಮ್ಮಿ ಮಾತಾಡುವ ಹುಡುಗ ನನಗೆ ಸಿಕ್ಕಿದ್ದಾರೆ. ನಾನು ಮದುವೆಯಾಗುವ ಹುಡುಗ ಹೀಗೆ ಇರಬೇಕು, ಹಾಗೇ ಇರಬೇಕು ಅಂತಾ ಅಂದುಕೊಂಡಿರಲಿಲ್ಲ. ಆದರೆ ನಾನು ಪ್ರೀತಿ ಅಂತಾ ಹುಡುಕಿಕೊಂಡು ಹೋಗಿಲ್ಲ. ನನ್ನ ಮದುವೆಯಾಗುವ ಹುಡುಗ ಮನಸ್ಸು ಚೆನ್ನಾಗಿರಬೇಕು. ನನ್ನ ಚೆನ್ನಾಗಿ ನೋಡಿಕೊಳ್ಳುವವನಾಗಿರಬೇಕು. ನನಗೆ ಟೈಮ್ ಕೊಡುವವನಾಗಿರಬೇಕು ಜೊತೆಗೆ ದೇಶ ಸುತ್ತುವವನಾಗಿರಬೇಕು ಅಂತಾ ಈ ಹಿಂದೆ ಹೇಳಿದ್ದೆ. ಅದೇ ರೀತಿ ನಾನು ಅಂದುಕೊಂಡ ಹಾಗೇ ನನಗೆ ನನ್ನ ಸಂಗಾತಿ ಸಿಕ್ಕಿದ್ದಾರೆ ಅಂತ ಮಾತನಾಡಿದ್ದರು.

    ಬಳಿಕ ದೀಪಿಕಾ ದಾಸ್ ಪತಿ ದೀಪಕ್ ಮಾತನಾಡಿ, ನಾನು ದುಬೈ ಮೂಲದವನು ಅಲ್ಲ. ಇದೆ ಬೆಂಗಳೂರಿನ ಆರ್‌ಆರ್ ನಗರದವನು. ರಿಯಲ್ ಎಸ್ಟೇಟ್ ಜೊತೆ ದುಬೈನಲ್ಲಿ ಒಂದು ಐಟಿ ಕಂಪನಿ ಇದೆ. ದೀಪಿಕಾ ನನಗೆ ನಾಲ್ಕು ವರ್ಷಗಳಿಂದ ಗೊತ್ತು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ಇಷ್ಟು ದಿನ ಹೇಗೆಲ್ಲಾ ದೀಪಿಕಾಗೆ ಬೆಂಬಲಿಸಿದ್ರೋ ಮುಂದಿನ ದಿನಗಳಲ್ಲಿ ಕೂಡ ಅವಳಿಗೆ ಸಪೋರ್ಟ್ ಮಾಡಿ ಎಂದು ದೀಪಕ್ ಮನವಿ ಮಾಡಿದ್ದರು.