Tag: bigg boss kannada 5

  • ನಿವೇದಿತಾ ಕೋಟ್ಯಂತರ ರೂಪಾಯಿ ಜೀವನಾಂಶಕ್ಕೆ ಬೇಡಿಕೆಯಿಟ್ಟಿಲ್ಲ: ಚಂದನ್‌ ಶೆಟ್ಟಿ

    ನಿವೇದಿತಾ ಕೋಟ್ಯಂತರ ರೂಪಾಯಿ ಜೀವನಾಂಶಕ್ಕೆ ಬೇಡಿಕೆಯಿಟ್ಟಿಲ್ಲ: ಚಂದನ್‌ ಶೆಟ್ಟಿ

    ರ್ಯಾಪರ್ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಜೂನ್ 7ರಂದು ಡಿವೋರ್ಸ್ ಪಡೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಡಿವೋರ್ಸ್ ಬಗ್ಗೆ ಹಲವು ವದಂತಿಗಳು ಹಬ್ಬಿತ್ತು. ಈ ಬೆನ್ನಲ್ಲೇ ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಚಂದನ್ ಮತ್ತು ನಿವೇದಿತಾ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ನಿವೇದಿತಾ ಗೌಡ ಜೀವನಾಂಶ ಕೇಳಿದ್ರಾ ಹಬ್ಬಿರುವ ವದಂತಿಗೆ ಸ್ಪಷ್ಟನೆ ನೀಡಿದ್ದರು ಚಂದನ್ ಶೆಟ್ಟಿ.

    ನಮ್ಮ ನಡುವೆ ಮಗುವಿನ ವಿಚಾರಕ್ಕೆ ಕಿತ್ತಾಟ ಆಗಿಲ್ಲ. ಮಗುವಿನ ವಿಚಾರಕ್ಕೆ ನಾವಿಬ್ಬರೂ ಬೇರೇ ಆಗಿಲ್ಲ. ಇದು ಸುಳ್ಳು ಸುದ್ದಿ ಎಂದಿದ್ದಾರೆ. ನಿವೇದಿತಾ ನನ್ನ ಕಡೆಯಿಂದ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ ಅಂತ ವದಂತಿ ಹಬ್ಬಿದೆ. ಅವರು ಕೋಟ್ಯಂತರ ರೂಪಾಯಿ ಬೇಡಿಕೆ ಇಟ್ಟಿದ್ರೂ ಅಂತ ವದಂತಿ ಆಗಿತ್ತು. ಖಂಡಿತವಾಗಿಯೂ ಈ ವಿಚಾರ ಸುಳ್ಳು. ನಿವೇದಿತಾ ನನಗೆ ಜೀವನಾಂಶ ಕೇಳಿಯೂ ಇಲ್ಲ ಪಡೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ನಮ್ಮ ಇಬ್ಬರ ಜೀವನ ಶೈಲಿ ಕೂಡ ಬೇರೆ ಬೇರೆ ಇದೆ. ಇಬ್ಬರ ನಡುವೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಅದನ್ನು ಸರಿ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಆದರೆ ಆಗಲಿಲ್ಲ. ಇಬ್ಬರೂ ಒಮ್ಮತದಿಂದ ನಿರ್ಧರಿಸಿ ಡಿವೋರ್ಸ್‌ ಪಡೆದಿದ್ದೇವೆ ಎಂದು ಚಂದನ್ ಶೆಟ್ಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಮಗು ಮಾಡಿಕೊಳ್ಳುವ ವಿಚಾರಕ್ಕೆ ಕಿತ್ತಾಟ ಆಯ್ತಾ? ಸ್ಪಷ್ಟನೆ ನೀಡಿದ ಚಂದನ್ ಶೆಟ್ಟಿ

    ನಾವಿಬ್ಬರೂ ಬೇರೆ ಬೇರೇ ಆದರೆನೇ ಚೆನ್ನಾಗಿ ಇರುತ್ತೇವೆ ಎಂದು ನಿರ್ಧಾರ ಮಾಡಿದ್ದೇವು. ಹಾಗಂತ ನಮ್ಮ ಇಬ್ಬರ ನಡುವೆ ದ್ವೇಷ, ಭಿನ್ನಾಭಿಪ್ರಾಯ ಏನಿಲ್ಲ ಎಂದಿದ್ದಾರೆ ಚಂದನ್. ನಿವೇದಿತಾ ಇಂದು ಚಿತ್ರರಂಗದಲ್ಲಿ ಬೆಳೆದಿರುವ ರೀತಿ ಬಗ್ಗೆ ಖುಷಿಯಿದೆ. ನನ್ನ ಕೆಲಸ ಬಗ್ಗೆಯೂ ಅವರಿಗೆ ಗೌರವವಿದೆ. ಇಬ್ಬರೂ ಗೌರವಯುತವಾಗಿಯೇ ಬೇರೆಯಾಗಿದ್ದೇವೆ ಎಂದು ಚಂದನ್ ಸ್ಪಷ್ಟನೆ ನೀಡಿದ್ದಾರೆ.

    ಅಂದಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಇಬ್ಬರೂ ಪರಿಚಿತರಾದರು. ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದರು. ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

  • ಡಿವೋರ್ಸ್ ಬಳಿಕ ಗೂಗಲ್ ಟಾಪ್ ಟ್ರೆಂಡಿಂಗ್‌ನಲ್ಲಿ ಚಂದನ್ ಶೆಟ್ಟಿ, ನಿವೇದಿತಾ

    ಡಿವೋರ್ಸ್ ಬಳಿಕ ಗೂಗಲ್ ಟಾಪ್ ಟ್ರೆಂಡಿಂಗ್‌ನಲ್ಲಿ ಚಂದನ್ ಶೆಟ್ಟಿ, ನಿವೇದಿತಾ

    ಸ್ಯಾಂಡಲ್‌ವುಡ್‌ನ ಜೋಡಿಹಕ್ಕಿಗಳಾಗಿದ್ದ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಜೂನ್ 7ರಂದು ಕಾನೂನು ಬದ್ಧವಾಗಿ (Divorce) ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗಿದ್ದಾರೆ. ಈ ವಿಚಾರ ಫ್ಯಾನ್ಸ್‌ಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಚಂದನ್‌ ಮತ್ತು ನಿವೇದಿತಾ ದಿಢೀರ್ ಡಿವೋರ್ಸ್ ಬಳಿಕ ಗೂಗಲ್‌ನಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ನಂತರ ‘ಕ್ಯಾಂಡಿ ಕ್ರಶ್’ ಸಿನಿಮಾದಲ್ಲಿ ಚಂದನ್, ನಿವೇದಿತಾ ನಟಿಸುತ್ತಾರಾ?

    ಪ್ರೀತಿಸಿ ಮದುವೆಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಜೋಡಿಯು ಯಾವ ವಿಚಾರಕ್ಕೆ ಡಿವೋರ್ಸ್ ಪಡೆದಿದ್ದಾರೆ ಎಂಬುದು ಅನೇಕರಿಗೆ ಚಿಂತೆ ಶುರುವಾಗಿದೆ. ಅದಕ್ಕೆ ಕಾರಣವಾದ ಅಂಶಗಳು ಏನು ಎಂದು ತಿಳಿದುಕೊಳ್ಳುವ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಹೀಗಾಗಿ ಇಂಟರ್‌ನೆಟ್‌ನಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಟ್ರೆಂಡಿಂಗ್‌ನಲ್ಲಿದ್ದಾರೆ.

    ಡಿವೋರ್ಸ್‌ ಘೋಷಣೆಯ ಬಳಿಕ ಜೂನ್ 7ರಿಂದ ಗೂಗಲ್‌ನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda) ಅವರನ್ನ ಇಂಟರ್‌ನೆಟ್‌ನಲ್ಲಿ ಜನ ಹೆಚ್ಚು ಹುಡುಕುತ್ತಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಕನ್ನಡಿಗರು, ಕರ್ನಾಟಕದವರು. ಹೀಗಾಗಿ, ಕರ್ನಾಟಕದಲ್ಲೇ ಇಬ್ಬರೂ ಟಾಪ್ ಟ್ರೆಂಡಿಂಗ್‌ನಲ್ಲಿದ್ದಾರೆ. ಕರ್ನಾಟಕದಲ್ಲಿ ಶೇ.100ರಷ್ಟು ಇಂಟರ್‌ನೆಟ್ ಬಳಸುವ ಮಂದಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಬಗ್ಗೆ ಹುಡುಕಾಡಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ನಿವೇದಿತಾ ಗೌಡ, ಚಂದನ್ ಶೆಟ್ಟಿ, ಲವ್, ಡಿವೋರ್ಸ್, ಮದುವೆ ಬಗ್ಗೆ ಹೆಚ್ಚು ಸರ್ಚ್ ಆಗಿದೆ. ಈ ಮೂಲಕ ಇಬ್ಬರೂ ಟ್ರೆಂಡಿಂಗ್‌ನಲ್ಲಿದ್ದಾರೆ.


    ಅಂದಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ (Bigg Boss Kannada 5) ಇಬ್ಬರೂ ಪರಿಚಿತರಾದರು. ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ (Niveditha Gowda) ಚಂದನ್ ಪ್ರಪೋಸ್ ಮಾಡಿದ್ದರು. ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

  • ಡಿವೋರ್ಸ್ ನಂತರ ‘ಕ್ಯಾಂಡಿ ಕ್ರಶ್’ ಸಿನಿಮಾದಲ್ಲಿ ಚಂದನ್, ನಿವೇದಿತಾ ನಟಿಸುತ್ತಾರಾ?

    ಡಿವೋರ್ಸ್ ನಂತರ ‘ಕ್ಯಾಂಡಿ ಕ್ರಶ್’ ಸಿನಿಮಾದಲ್ಲಿ ಚಂದನ್, ನಿವೇದಿತಾ ನಟಿಸುತ್ತಾರಾ?

    ಸ್ಯಾಂಡಲ್‌ವುಡ್ ನಟ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ (Niveditha Gowda) ಡಿವೋರ್ಸ್ ವಿಚಾರ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದೆ. ಮೊನ್ನೆ ಮೊನ್ನೆಯಷ್ಟೇ ರೀಲ್ಸ್ ಮಾಡಿಕೊಂಡು ಚೆನ್ನಾಗಿದ್ದ ಈ ಜೋಡಿ ಡಿವೋರ್ಸ್ (Divorce) ಪಡೆದುಕೊಂಡಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇದರ ಜೊತೆಗೆ ಒಪ್ಪಿಕೊಂಡಿದ್ದ ಪ್ರಾಜೆಕ್ಟ್‌ ಕಥೆಯೇನು? ಎಂಬು ಚಿತ್ರತಂಡಕ್ಕೆ ಕೂಡ ಚಿಂತೆ ಶುರುವಾಗಿದೆ. ಕ್ಯಾಂಡಿ ಕ್ರಶ್ ಸಿನಿಮಾದಲ್ಲಿಯೂ ಚಂದನ್ ಮತ್ತು ನಿವೇದಿತಾ ಜೋಡಿಯಾಗಿ ಕಾಣಿಸಿಕೊಂಡಿದ್ದರು. 8 ದಿನಗಳ ಶೂಟಿಂಗ್ ಬಾಕಿಯಿರುವಾಗಲೇ ಈ ಜೋಡಿ ಡಿವೋರ್ಸ್ ಅನೌನ್ಸ್ ಮಾಡಿರೋದು ಚಿತ್ರತಂಡಕ್ಕೂ ಶಾಕ್‌ ಆಗಿದೆ. ಇದನ್ನೂ ಓದಿ:‘ಉತ್ತರಕಾಂಡ’ದ ವೀರವ್ವನಾಗಿ ನಟಿ ಭಾವನಾ ಮೆನನ್

    ಯುವ ನಿರ್ದೇಶಕ ಪುನೀತ್ ನಿರ್ದೇಶನದ ‘ಕ್ಯಾಂಡಿ ಕ್ರಶ್’ (Candy Crush) ಎಂಬ ಸಿನಿಮಾದಲ್ಲಿ ಹೀರೋ, ಹೀರೋಯಿನ್ ಆಗಿ ಚಂದನ್ ಮತ್ತು ನಿವೇದಿತಾ ನಟಿಸುತ್ತಿದ್ದರು. ಮುಂದಿನ ವಾರದಿಂದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಕೂಡ ಇತ್ತು. ಅಷ್ಟರಲ್ಲಿ ಈ ಜೋಡಿ ಬೇರೆ ಆಗಿರುವ ಸುದ್ದಿ ಅನೌನ್ಸ್ ಮಾಡಿರೋದು ಅಕ್ಷರಶಃ ಚಿತ್ರತಂಡಕ್ಕೂ ಶಾಕ್ ಕೊಟ್ಟಿದೆ. ಮುಂದೇನು? ಎಂಬ ಚಿಂತೆ ಕೂಡ ಶುರುವಾಗಿದೆ. ಆದರೆ ಈ ಸಂದರ್ಭದಲ್ಲಿಯೂ ಚಂದನ್ ಮತ್ತು ನಿವೇದಿತಾ ವೃತ್ತಿಪರತೆಯನ್ನು ಮೆರೆದಿದ್ದಾರೆ. ನಿವೇದಿತಾ ಗೌಡ ಸಿನಿಮಾದ ನಿರ್ದೇಶಕ ಪುನೀತ್‌ಗೆ ಕರೆ ಮಾಡಿ ಸಿನಿಮಾದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ. ನಿಮ್ಮ ಪ್ಲ್ಯಾನ್ ಪ್ರಕಾರವೇ, ಶೂಟಿಂಗ್‌ನಲ್ಲಿ ಭಾಗವಹಿಸುತ್ತೇವೆ ಎಂದಿದ್ದಾರಂತೆ.

    ಮುಂದಿನ ವಾರದಲ್ಲಿ ‘ಕ್ಯಾಂಡಿ ಕ್ರಶ್’ ಶೂಟಿಂಗ್ ಇದೆ. ಅದರ ಬಗ್ಗೆ ಮಾತಾನಾಡುವುದಕ್ಕೆ ಕಾಲ್ ಮಾಡಿದ್ದೆ. ಏನೂ ತಲೆ ಕೆಡಿಸಿಕೊಳ್ಳಬೇಡಿ. ಶೂಟಿಂಗ್‌ಗೆ ಬರುತ್ತೇವೆ. ಪ್ಲ್ಯಾನ್ ಮಾಡಿಕೊಳ್ಳಿ ಅಂತ ಹೇಳಿದ್ದಾರೆ. ಅಷ್ಟು ಬಿಟ್ಟರೆ, ಇದರ ಬಗ್ಗೆ ಏನಾಗಿದೆ ಅನ್ನೋದು ನಮಗೆ ಗೊತ್ತಿಲ್ಲ. ಎಂದು ‘ಕ್ಯಾಂಡಿ ಕ್ರಶ್’ ನಿರ್ದೇಶಕ ಹೇಳಿದ್ದಾರೆ.

    ‘ಕ್ಯಾಂಡಿ ಕ್ರಶ್’ ಸಿನಿಮಾದ ಒಟ್ಟು 8 ದಿನದ ಶೂಟಿಂಗ್ ಬಾಕಿ ಇದೆ. ಅದರಲ್ಲಿ ಇವರಿಬ್ಬರ ಕಾಂಬಿನೇಷನ್‌ನಲ್ಲಿ 4 ದಿನಗಳಿವೆ. ಹೀಗಾಗಿ ಶೂಟಿಂಗ್ ಮುಗಿಸಿಕೊಡುತ್ತೇವೆ ಎಂದು ಹೇಳಿದ್ದಾರಂತೆ. ಇದೇ ತಿಂಗಳು ಜೂನ್ 14ರಿಂದ ಶೂಟಿಂಗ್ ಆರಂಭಿಸಲಿದೆ ಚಿತ್ರತಂಡ. ನಿವೇದಿತಾ ಗೌಡ ಅವರೇ ಫೋನ್ ಮಾಡಿದ್ದರು. ಟೆನ್ಷನ್ ಆಗುವಂತಹದ್ದು ಏನಿಲ್ಲ. ಚೆನ್ನಾಗಿಯೇ ಇದ್ದೇವೆ. ಇಬ್ಬರ ಒಪ್ಪಿಗೆಯ ಮೇರೆಗೆ ಈ ನಿರ್ಧಾರಕ್ಕೆ ಬಂದಿದ್ದೇವೆ. ಶೂಟಿಂಗ್‌ನಲ್ಲಿ ಏನೂ ಸಮಸ್ಯೆ ಆಗಲ್ಲ. ನೀವು ಶೆಡ್ಯೂಲ್ ಪ್ಲ್ಯಾನ್ ಮಾಡಿಕೊಳ್ಳಿ ಅಂತ ಹೇಳಿದ್ದಾರೆ. ಅವರಿಗೆ ಮೊದಲೇ ಗೊತ್ತಿತ್ತು ಶೆಡ್ಯೂಲ್ ಪ್ಲ್ಯಾನ್ ಮಾಡಿದ್ದು, ಆ ವಿಚಾರವಾಗಿ ಹೇಳುವುದಕ್ಕಂತಲೇ ಕಾಲ್ ಮಾಡಿದ್ದರು. ಸುದ್ದಿ ತಿಳಿದ ಬಳಿಕ ನಾವು ಸಿನಿಮಾ ಬಗ್ಗೆ ಟೆನ್ಷನ್ ಆಗುತ್ತೇವೆ ಎಂದು ಅವರು ತಿಳಿಸಿದ್ದಾರೆ ಎಂದು ನಿರ್ದೇಶಕ ಪುನೀತ್ ಸ್ಪಷ್ಟನೆ ನೀಡಿದ್ದಾರೆ.

    ಅಂದಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಇಬ್ಬರೂ ಪರಿಚಿತರಾದರು. ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದರು. ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.