Tag: Bigg Boss Kannada

  • BBK 12 | ಈ ಅವಮಾನ ಯಾವತ್ತೂ ಮರೆಯೋಕಾಗಲ್ಲ; ದೊಡ್ಮನೆಯಲ್ಲಿ ಗಳಗಳನೆ ಅತ್ತ ಅಶ್ವಿನಿ ಗೌಡ

    BBK 12 | ಈ ಅವಮಾನ ಯಾವತ್ತೂ ಮರೆಯೋಕಾಗಲ್ಲ; ದೊಡ್ಮನೆಯಲ್ಲಿ ಗಳಗಳನೆ ಅತ್ತ ಅಶ್ವಿನಿ ಗೌಡ

    ಬಿಗ್‌ಬಾಸ್ ಮನೆಯ ರೆಬೆಲ್ ಕಂಟೆಸ್ಟೆಂಟ್‌ ಅಶ್ವಿನಿ ಗೌಡ (Ashwini Gowda) ಗಳಗಳನೆ ಅತ್ತಿದ್ದಾರೆ. ಬಿಗ್‌ ಬಾಸ್ ಮನೆಯಲ್ಲಿ ಅವಮಾನ ಆಗ್ತಿದೆ. ಅದನ್ನ ಮರೆಯೋಕೆ ಸಾಧ್ಯವಿಲ್ಲ, ಮರೆತು ಮುಂದೆ ಹೋಗೋಕೂ ಸಾಧ್ಯವಿಲ್ಲ ಎಂದು ಬಿಕ್ಕಿದ್ದಾರೆ.

    ಸ್ಟ್ರಾಂಗ್‌ ಕಂಟೆಸ್ಟೆಂಟ್‌ ಎಂದೇ ಗುರುತಿಸಿಕೊಂಡಿದ್ದ ಅಶ್ವಿನಿ ಗೌಡ ತಿರಸ್ಕಾರ ಭಾವನೆ ಅನುಭವಿಸಿದ್ದಕ್ಕೆ ಬೇಸರದಿಂದ ಅತ್ತು ಕರೆದು ಗೋಳಾಡಿದ್ದಾರೆ.

    ಬಿಗ್‌ ಬಾಸ್ ಕನ್ನಡ (Bigg Boss Kannada) ಸೀಸನ್ 12ರ ಮೊದಲ ಕ್ಯಾಪ್ಟನ್ಸಿ ಟಾಸ್ಕ್ ನಡೆಯೋದಕ್ಕೆ ಘೋಷಣೆಯಾಗಿತ್ತು. ಆದರೆ ಈ ಟಾಸ್ಕ್‌ನಿಂದ ಒಬ್ಬ ಕಂಟೆಸ್ಟೆಂಟ್‌ನ್ನು ಕೈಬಿಡಲು ಸೂಚಿಸುವ ಅಧಿಕಾರವನ್ನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದಿರೋ ಕಂಟೆಸ್ಟೆಂಟ್‌ಗಳಿಗೆ ನೀಡಲಾಗಿತ್ತು. ರಿಶಾ ಗೌಡ, ಸೂರಜ್ ಸಿಂಗ್ ಹಾಗೂ ಮ್ಯೂಟಂಟ್ ರಘು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಅಶ್ವಿನಿ ಗೌಡರನ್ನ ಟಾರ್ಗೆಟ್ ಮಾಡಿದ್ದಾರೆ.

    ʻಈಗಲೇ ಸರ್ವಾಧಿಕಾರಿ ಧೋರಣೆ ತೋರಿಸುತ್ತಿರುವ ಅಶ್ವಿನಿ ಗೌಡ ಕ್ಯಾಪ್ಟನ್ ಆಗ್ಬಿಟ್ರೆ ಉಳಿದ ಕಂಟೆಸ್ಟೆಂಟ್‌ಗಳಿಗೆ ಕಷ್ಟ ಆಗಬಹುದುʼ ಎಂಬ ಕಾರಣ ಕೊಟ್ಟು ಕ್ಯಾಪ್ಟೆನ್ಸಿ ಟಾಸ್ಕ್‌ನಕಿಂದ ಹೊರಗಿಟ್ಟಿದ್ದಾರೆ. ಈ ವಿರೋಧದಿಂದ ತೀವ್ರವಾಗಿ ಅಸಮಾಧಾನಗೊಂಡ ಅಶ್ವಿನಿ ನೊಂದು ಬಿಕ್ಕಿದ್ದಾರೆ. ಕ್ಯಾಪ್ಟೆನ್ಸಿ ಟಾಸ್ಕ್‌ನಿಂದ ದೂರ ಉಳಿಯುವಂತೆ ಮಾಡಿದ್ದಕ್ಕೆ ʻಬಿಗ್‌ಬಾಸ್ ಮನೆಯಲ್ಲಿ ತಮಗೆ ಅವಮಾನ ಆಗುತ್ತಿದೆ. ಇದನ್ನ ಯಾವತ್ತೂ ಮರೆಯೋಕಾಗಲ್ಲ. ರೇಸ್‌ಗೆ ಬಿಡದಿದ್ದರೆ ಯಾವ್ ಕುದುರೆ ಸ್ಟ್ರಾಂಗ್‌ ಅಂತ ಹೇಗೆ ಡಿಸೈಡ್ ಮಾಡೋದುʼ ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಅಶ್ವಿನಿ.

    ಇದು ಮೊದಲ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಆಗಿದ್ದು ಇಲ್ಲಿ ಸ್ಪರ್ಧೆ ಮಾಡ್ಬೇಕು ಅನ್ನೋದು ಅಶ್ವಿನಿ ಆಸೆಯಾಗಿತ್ತು. ಇದ್ರಿಂದ ಬೇಸರವಾಗಿ ತಿರಸ್ಕಾರವನ್ನ ಮನಸ್ಸಿಗೆ ತೆಗೆದುಕೊಂಡು ಅಶ್ವಿನಿ ಗೌಡ ಗಳಗಳನೆ ಅತ್ತಿದ್ದಾರೆ.

  • ಲಿವ್‌ಇನ್‌ ರಿಲೇಶನ್‌ಶಿಪ್‌ ಸುತ್ತ ‘ಪ್ರೇಮಿಗಳ ಗಮನಕ್ಕೆ’ – ಟ್ರೈಲರ್ ರಿಲೀಸ್

    ಲಿವ್‌ಇನ್‌ ರಿಲೇಶನ್‌ಶಿಪ್‌ ಸುತ್ತ ‘ಪ್ರೇಮಿಗಳ ಗಮನಕ್ಕೆ’ – ಟ್ರೈಲರ್ ರಿಲೀಸ್

    – ಬಿಗ್ ಬಾಸ್ ಖ್ಯಾತಿಯ ಶಶಿ ನಟನೆಯ ಸಿನಿಮಾ

    ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವ, ಅದರಲ್ಲೂ ಬೇರೆ ಊರುಗಳಿಂದ ಬಂದವರ ನಡುವೆ ಲಿವ್‌ ಇನ್‌ ರಿಲೇಷನ್‌ ಶಿಪ್‌ ಹೆಚ್ಚಾಗುತ್ತಿದೆ. ಬೆಂಗಳೂರಿನಂಥ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಇಂಥ ಸಂಬಂಧಗಳು ಕಂಡುಬರುತ್ತಿದೆ. ವಯಸ್ಸಿಗೆ ಬಂದ ಯುವಕ, ಯುವತಿಯರು ಮದುವೆಯಾಗದೆ ಒಂದೇ ಮನೆಯಲ್ಲಿ ವಾಸಿಸುವ ವ್ಯವಸ್ಥೆಯನ್ನು ಈ ರೀತಿ ಕರೆಯಲಾಗುತ್ತದೆ. ಕೋವಿಡ್ ಲಾಕ್‌ಡೌನ್‌ (Covid Lockdown) ಸಂದರ್ಭದಲ್ಲಿ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಇಬ್ಬರು ಪ್ರೇಮಿಗಳ (Lovers) ಸುತ್ತ ನಡೆಯುವ ಕಥಾಹಂದರ ಒಳಗೊಂಡ ಚಿತ್ರದ ಹೆಸರು ಪ್ರೇಮಿಗಳ ಗಮನಕ್ಕೆ. ಸಿಟಾಡಿಲ್ ಫಿಲಂಸ್ ಹಾಗೂ ಜೊಯಿಟಾ ಎಂಟರ್ಟೈನ್ಮೆಂಟ್ಸ್ ಅಡಿ ಸುಬ್ಬು ಹಾಗೂ ಯಕ್ಕಂಟಿ ರಾಜಶೇಖರ ರೆಡ್ಡಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಬಿಡುಗಡೆಗೆ ಸಿದ್ಧವಾಗಿರುವ `ಪ್ರೇಮಿಗಳ ಗಮನಕ್ಕೆʼ (Premigala Gamanakke) ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು, ಬಿಗ್‌ಬಾಸ್‌ ಖ್ಯಾತಿಯ ಶಶಿ (Bigg Boss Shashi) ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಈಗಾಗಲೇ ಕನ್ನಡ, ತುಳು ಚಿತ್ರಗಳಲ್ಲಿ ನಟಿಸಿರುವ ಚಿರಶ್ರೀ ಅಂಚನ್ (Chirashree Anchan) ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ, ನಿರ್ಮಾಪಕ ಸುಬ್ಬು ಅವರು ಖಳನಾಯಕನಾಗಿ ಚಿಕ್ಕ ಪಾತ್ರ ನಿರ್ವಹಿಸಿದ್ದಾರೆ. ವಿನ್ಸೆಂಟ್ ಇನ್ಬರಾಜ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಅರುಳ್ ಸೆಲ್ವನ್ ಅವರ ಛಾಯಾಗ್ರಹಣ, ಡೆನ್ನಿಸ್ ವಲ್ಲಭನ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಚಿತ್ರದ ಸಹ ನಿರ್ದೇಶಕರಾಗಿ ಕೃಷ್ಣ ಕಾರ್ಯನಿರ್ವಹಿಸಿದ್ದಾರೆ.

    ಕೊರೊನಾ ಸಮಯದಲ್ಲಿ ಇಡೀ ದೇಶವೇ ಲಾಕ್ಡೌನ್ ಆಗಿ ಯಾರೂ ಹೊರಗಡೆ ಹೋಗದ ಸಂದರ್ಭದಲ್ಲಿ ಬೆಂಗಳೂರಿನ ಎಲ್ಲಾ ಐಟಿ, ಬಿಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿಕೊಟ್ಟವು. ಅದರಂತೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಿತ್ರದ ನಾಯಕ, ನಾಯಕಿ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸತೊಡಗುತ್ತಾರೆ. ಆಗ ಆ ಮನೆಯಲ್ಲಿ ಏನೇನು ನಡೆಯುತ್ತದೆ? ಆಗಂತುಕನೊಬ್ಬ ಆ ಮನೆಗೆ ಹೇಗೆ ಎಂಟ್ರಿ ಕೊಡುತ್ತಾನೆ ? ಅವರಿಗೆ ಯಾವರೀತಿ ತೊಂದರೆ ಕೊಡುತ್ತಾನೆ? ಆ ಸಂದರ್ಭವನ್ನು ಅವರು ಹೇಗೆ ಫೇಸ್ ಮಾಡಿದರು? ಎನ್ನುವುದೇ ʻಪ್ರೇಮಿಗಳ ಗಮನಕ್ಕೆʼ ಚಿತ್ರದ ಕಾನ್ಸೆಪ್ಟ್.

    ಐದು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ಒಂದು ನೈಜಘಟನೆ ಈ ಚಿತ್ರಕ್ಕೆ ಪ್ರೇರಣೆ. ಇಡೀ ಚಿತ್ರದ ಕಥೆ ನಡೆಯೋದು ಒಂದೇ ಮನೆಯಲ್ಲಿ, 2 ಪಾತ್ರಗಳ ಸುತ್ತ, ಮತ್ತೊಂದು ಪಾತ್ರ ಕೆಲ ದೃಶ್ಯಗಳಲ್ಲಿ ಮಾತ್ರ ಬಂದುಹೋಗುತ್ತೆ, ಅವೇರ್ನೆಸ್ ಜತೆಗೆ ಮನರಂಜನೆಯ ಅಂಶವನ್ನಿಟ್ಟುಕೊಂಡು ಮಾಡಿರೋ ಚಿತ್ರವಿದು. ಬೆಂಗಳೂರಿನ ಉತ್ತರಹಳ್ಳಿಯ ಮನೆಯೊಂದರಲ್ಲಿ ಬಹುತೇಕ ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ದೇಶಕ ವಿನ್ಸೆಂಟ್ ಇನ್ಬರಾಜ್ ಅವರು ಸುದ್ದಿಗೋಷ್ಠಿಯಲ್ಲಿದ್ದರು.

    ನಿರ್ಮಾಪಕ ಸುಬ್ಬು ಮಾತನಾಡುತ್ತ ನಾನು ಮೂಲತ: ಬಿಲ್ಡರ್, ನಿರ್ದೇಶಕರು ಈ ಕಥೆ ಹೇಳಿದಾಗ ಕಾನ್ಸೆಪ್ಟ್ ತುಂಬಾ ಇಷ್ಟವಾಗಿ ನಿರ್ಮಿಸಲು ಮುಂದಾದೆ. ನಿರ್ಮಾಣದ ಜತೆ ಖಳನಾಯಕನಾಗಿಯೂ ಈ ಚಿತ್ರದಲ್ಲಿ ನಟಿಸಿದ್ದೇನೆ, ಇದೇ ತಿಂಗಳ ಅಂತ್ಯದಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ ಎಂದು ಹೇಳಿದರು. ಮತ್ತೊಬ್ಬ ನಿರ್ಮಾಪಕ ಯಕ್ಕಂಟಿ ರಾಜಶೇಖರ ರೆಡ್ಡಿ ಮಾತನಾಡಿ ಇದೊಂದು ನೈಸ್ ಕಾನ್ಸೆಪ್ಟ್. ಒಂದೊಳ್ಳೇ ಟೀಮ್ವರ್ಕ್ ನಿಂದ ಉತ್ತಮ ಸಿನಿಮಾ ಹೊರಬರುತ್ತೆ ಎಂಬ ನಂಬಿಕೆಯಿದೆ ಎಂದರು. ನಾಯಕ ಶಶಿ ಮಾತಾಡಿ, ಇದು ನನ್ನ ಮೂರನೇ ಚಿತ್ರ. ಈಗಿನ ಕಾಲದ ಯೂಥ್‌ಗೆ ಈ ಕಥೆ ಕನೆಕ್ಟ್ ಆಗುತ್ತೆ ಎಂದರು. ನಾಯಕಿ ಚಿರಶ್ರೀ ಮಾತನಾಡಿ, ಚಿತ್ರದಲ್ಲಿ ನನ್ನದು ಐಟಿ ಕಂಪನಿಯಲ್ಲಿ ಕೆಲಸಮಾಡೋ ದರ್ಶಿನಿ ಎಂಬ ಪಾತ್ರ. ಕನ್ನಡ, ತುಳು ಸೇರಿ ಇದು ನನ್ನ ಹತ್ತನೇ ಚಿತ್ರ ಎಂದು ಹೇಳಿದರು, ವಿತರಕ ನವರತ್ನ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

  • ಬಿಗ್ ಬಾಸ್‌ನಲ್ಲಿ ಈ ವಾರ ಎಲಿಮಿನೇಷನ್ ಇರುತ್ತಾ?

    ಬಿಗ್ ಬಾಸ್‌ನಲ್ಲಿ ಈ ವಾರ ಎಲಿಮಿನೇಷನ್ ಇರುತ್ತಾ?

    ಬಿಗ್ ಬಾಸ್ ಸೀಸನ್ 12 (Bigg Boss 12) ಎರಡನೇ ವಾರಕ್ಕೆ ಬಿಗ್ ಶಾಕ್‌ಗೆ ಒಳಗಾಗಿದೆ. ಬಿಗ್ ಬಾಸ್ ಶೋ ನಡೆಯುತ್ತಿದ್ದ ಜಾಗಕ್ಕೆ ಮಾಲಿನ್ಯ ನಿಯಂತ್ರ ಮಂಡಳಿಯಿಂದ ನೋಟಿಸ್ ನೀಡಿ ಬೀಗ ಜಡಿಯಲಾಗಿತ್ತು. ಹೀಗಾಗಿ ಬಿಗ್ ಬಾಸ್ ಸ್ಪರ್ಧಿಗಳನ್ನ ಎರಡು ದಿನಗಳ ಕಾಲ ಈಗಲ್‌ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿತ್ತು. ನಂತರ ಡಿಸಿಎಂ ಸೂಚನೆ ಮೆರೆಗೆ ಈಗ ಬಿಗ್ ಬಾಸ್ ಓಪನ್ ಆಗಿದೆ. ಆದರೆ ಶೋ ಶೂಟಿಂಗ್ ಪ್ರಾರಂಭ ಮಾಡಿಲ್ಲ.

    ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕಾರಣದಿಂದ ಈ ವಾರದ ವೀಕೆಂಡ್ ಶೋ ಹೇಗಿರುತ್ತೆ? ಎಲಿಮಿನೇಷನ್ (Elimination) ಇರುತ್ತಾ? ಅಥವಾ ಎಲಿಮಿನೇಷನ್ ಪ್ರಕ್ರಿಯೆಯಿಂದ ನಾಮಿನೇಟ್ ಆದ ಸ್ಪರ್ಧಿಗಳು ಬಚಾವ್ ಆಗ್ತಾರಾ ಅನ್ನೋ ಕುತೂಹಲ ಮೂಡಿದೆ.

    ಕಳೆದ ವಾರ ಡಬಲ್ ಎಲಿಮಿನೇಷನ್ ನಡೆದಿತ್ತು. ಕಳೆದ ವಾರ ಬಿಗ್ ಬಾಸ್ ಮನೆಯಿಂದ ಕರಿಬಸಪ್ಪ ಹಾಗೂ ಆರ್‌ಜೆ ಅಮಿತ್ ಹೊರ ಬಂದಿದ್ದರು. ಆದ್ರೆ ಬಿಗ್ ಬಾಸ್ ಮನೆಗೆ ಉಂಟಾದ ಈ ತೊಡಕುಗಳ ಮಧ್ಯೆ ಈ ವಾರ ಎಲಿಮಿನೇಷನ್ ಪ್ರಕ್ರಿಯೆ ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿ ಜಾಸ್ತಿಯಾಗಿದೆ.

    ಆದರೆ ಈವರೆಗೂ ಬಿಗ್ ಬಾಸ್‌ನಿಂದ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಬಿಗ್ ಬಾಸ್ ಮನೆ ಓಪನ್ ಆಗಿದೆ. ಒಳಗಡೆ ಇನ್ನೂ ಶೂಟಿಂಗ್ ಆರಂಭವಾಗಿಲ್ಲದ ಕಾರಣದಿಂದ ವೀಕೆಂಡ್ ಶೋ ಯಾವ ರೀತಿ ಇರುತ್ತೆ ಅನ್ನೋ ಪ್ರಶ್ನೆಗಳು ಎದುರಾಗಿವೆ. ಒಂದು ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಸಿಕ್ಕು ಶೂಟಿಂಗ್ ಶುರುವಾದ್ರೆ, ಈ ವಾರದ ಎಲಿಮಿನೇಷನ್‌ನಲ್ಲಿ ಯಾರು ಆಚೆ ಬರಲಿದ್ದಾರೆ ಕಾದು ನೋಡಬೇಕಿದೆ.

    ಸದ್ಯ ಒಂಟಿಗಳಲ್ಲಿ ಜಾಹ್ನವಿ, ರಕ್ಷಿತಾ ಶೆಟ್ಟಿ, ಧನುಷ್, ಅಶ್ವಿನಿ ಗೌಡ ನಾಮಿನೇಟ್ ಆಗಿದ್ರೆ, ಜಂಟಿಗಳ ಪೈಕಿ, ಸ್ಪಂದನಾ ಸೋಮಣ್ಣ-ಮಾಳು ನಿಪ್ಪನಾಳ, ಅಭಿಷೇಕ್-ಅಶ್ವಿನಿ ಎಸ್, ರಾಶಿಕಾ ಶೆಟ್ಟಿ-ಮಂಜು ಭಾಷಿಣಿ ನಾಮಿನೇಟ್ ಆಗಿದ್ದಾರೆ.

  • `ಬಿಗ್ ಬಾಸ್’ಗೆ ರಿಲೀಫ್ ಕೊಡುತ್ತಾ ಸರ್ಕಾರ? – ಜಿಲ್ಲಾಡಳಿತಕ್ಕೆ ಜಾಲಿವುಡ್ ಕೊಟ್ಟ ಅರ್ಜಿಯಲ್ಲಿ ಏನಿದೆ..?

    `ಬಿಗ್ ಬಾಸ್’ಗೆ ರಿಲೀಫ್ ಕೊಡುತ್ತಾ ಸರ್ಕಾರ? – ಜಿಲ್ಲಾಡಳಿತಕ್ಕೆ ಜಾಲಿವುಡ್ ಕೊಟ್ಟ ಅರ್ಜಿಯಲ್ಲಿ ಏನಿದೆ..?

    – ತಪ್ಪು ಸರಿಪಡಿಸಿಕೊಳ್ಳಲು ಅವಕಾಶಕ್ಕೆ ಡಿಕೆಶಿ ಸೂಚನೆ

    ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಆರೋಪದಿಂದಾಗಿ ಬಂದ್ ಆಗಿರೋ `ಬಿಗ್‌ಬಾಸ್’ (Bigg Boss Kannada) ರಿಯಾಲಿಟಿ ಶೋಗೆ ಕ್ಷಣಕ್ಕೊಂದು ಟ್ವಿಸ್ಟ್ ಸಿಕ್ತಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಮಾದರಿ ಕ್ಷಣಕ್ಕೊಂದು ತಿರುವು ಸಿಗುತ್ತಿದ್ದು, ಇಡೀ ಪ್ರಸಂಗ ಗೊಂದಲಮಯವಾಗಿದೆ. ಇವತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಮಧ್ಯಸ್ಥಿಕೆ ವಹಿಸಿ, ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್ ಸ್ಟುಡಿಯೋಸ್‌ಗೆ ಮತ್ತೊಂದು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೂಡ ಕೊಟ್ಟಿದ್ದರು.

    ಡಿಕೆಶಿ ಸೂಚನೆ ಬೆನ್ನಲ್ಲೇ, ಬೆಂಗಳೂರು ದಕ್ಷಿಣ ಡಿಸಿಯನ್ನು ಭೇಟಿಯಾಗಿದ್ದ ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿ, 10 ದಿನಗಳ ಕಾಲಾವಕಾಶ ನೀಡುವಂತೆ ಪರಿಪರಿಯಾಗಿ ಬೇಡಿಕೊಂಡಿತ್ತು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್, ಕೋರ್ಟ್ ಅಫಿಡವಿಟ್ ಸಲ್ಲಿಕೆ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಪಡೆದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ವರ್ಗಾವಣೆ ಮಾಡಿದ್ದಾರೆ.

    ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಜಾಲಿವುಡ್ ಸ್ಟುಡಿಯೋಸ್ ಮೇಲಿನ ಹಳೆ ಆರೋಪದ ಅರ್ಜಿ ನಾಳೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿಗೂ ನಾಳೆ ಜಾಲಿವುಡ್ ಅರ್ಜಿ ಸಲ್ಲಿಸಲಿದ್ದು, 10ರಿಂದ 15 ದಿನಗಳ ತಾತ್ಕಾಲಿಕ ರಿಲೀಫ್ ನೀಡೋ ಸಾಧ್ಯತೆ ಇದೆ. ಆದ್ರೆ, ಈಗಾಗಲೇ ನಮಗೆ ಜಿಲ್ಲಾಡಳಿತದಿಂದ ರಿಲೀಫ್ ಸಿಕ್ಕಿದೆ ಅಂತ ಜಾಲಿವುಡ್ ಪರ ವಕೀಲರು ಹೇಳಿದ್ದಾರೆ. ಆದ್ರೆ, ಇದನ್ನು ನಿರಾಕರಿಸಿರೋ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ, ಪ್ರಕರಣ ಕೋರ್ಟ್‌ನಲ್ಲಿದೆ. ಮಾನವೀಯತೆ ದೃಷ್ಟಿಯಿಂದ ಏನಾದ್ರೂ ಮಾಡಬಹುದು ಅಂದಿದ್ದಾರೆ.

    ಜಿಲ್ಲಾಡಳಿತಕ್ಕೆ ಜಾಲಿವುಡ್ ಕೊಟ್ಟ ಅರ್ಜಿಯಲ್ಲಿ ಏನಿದೆ..?
    * ಜಾಲಿವುಡ್ ಸ್ಟುಡಿಯೋದಲ್ಲಿ 400ಕ್ಕೂ ಕಾರ್ಮಿಕರಿದ್ದಾರೆ
    * ಬಿಗ್‌ಬಾಸ್ ರಿಯಾಲಿಟಿ ಶೋ ಕೂಡ ನಡೆಯುತ್ತಿದೆ
    * ಏಕಾಏಕಿ ಬಂದ್ ಮಾಡಿದ್ರೆ ಕಾರ್ಮಿಕರಿಗೆ ಕುತ್ತು
    * ತಮ್ಮಿಂದ ತಪ್ಪಾಗಿದೆ.. ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಿ
    * 10 ದಿನಗಳ ಸಮಯಾವಕಾಶ ಕೊಟ್ಟರೆ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ

    ರಾಮನಗರ ಜಿಲ್ಲಾಧಿಕಾರಿಯ ನಿಲುವೇನು..?
    * ಜಾಲಿವುಡ್ ಸ್ಟುಡಿಯೋ 10 ದಿನಗಳ ಕಾಲಾವಕಾಶ ಕೇಳಿದೆ
    * ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೇಳಿದ್ದಾರೆ
    * ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ವರ್ಗಾಯಿಸಿದ್ದೇವೆ
    * ಮಂಡಳಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ

    ಮಾಲಿನ್ಯ ನಿಯಂತ್ರಣ ಮಂಡಳಿ ಹೇಳೋದೇನು…?
    * ಈ ಕೇಸ್ ಕೋರ್ಟಿನಲ್ಲಿದೆ; 10 ದಿನಗಳ ಕಾಲಾವಕಾಶ ನಿರ್ಧರಿಸಿಲ್ಲ
    * ಬಿಗ್‌ಬಾಸ್‌ಗೂ ಸ್ಟುಡಿಯೋಗೆ ಸಂಬAಧವಿಲ್ಲ
    * ಅಮ್ಯೂಸ್‌ಮೆಂಟ್ ಪಾರ್ಕ್‌ನಿಂದ ಸಮಸ್ಯೆ ಉಂಟಾಗಿದೆ
    * ಏಕಾಏಕಿ ಮುಚ್ಚಿಲ್ಲ; 3 ಬಾರಿ ನೋಟಿಸ್ ಕೊಟ್ಟಿದ್ದೇವೆ
    * ಅಫಿಡವಿಟ್ ಜೊತೆ ಮನವಿ ಕೊಟ್ಟರೆ ಪರಿಶೀಲನೆ ನಡೆಸಬಹುದು
    * ಕ್ಲೋಸರ್ ಆದೇಶ ಶಾಶ್ವತ, ತಾತ್ಕಾಲಿಕವೂ ಅಲ್ಲ.
    * ನಿಯಮ ಉಲ್ಲಂಘನಗೆ ದಂಡ ಕಟ್ಟಬೇಕಾಗುತ್ತದೆ.

  • ಬಿಗ್‌ ಬಾಸ್‌ ತಂಡಕ್ಕೆ ಮತ್ತೆ ಶಾಕ್‌ – ಕೆಲವೇ ಹೊತ್ತಲ್ಲಿ ಈಗಲ್‌ಟನ್ ರೆಸಾರ್ಟ್‌ನಿಂದ 17 ಸ್ಪರ್ಧಿಗಳು ಶಿಫ್ಟ್ ಬೇರೆಡೆಗೆ ಶಿಫ್ಟ್‌

    ಬಿಗ್‌ ಬಾಸ್‌ ತಂಡಕ್ಕೆ ಮತ್ತೆ ಶಾಕ್‌ – ಕೆಲವೇ ಹೊತ್ತಲ್ಲಿ ಈಗಲ್‌ಟನ್ ರೆಸಾರ್ಟ್‌ನಿಂದ 17 ಸ್ಪರ್ಧಿಗಳು ಶಿಫ್ಟ್ ಬೇರೆಡೆಗೆ ಶಿಫ್ಟ್‌

    ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್ ನಿರೂಪಣೆಯ, ಕನ್ನಡ ಕಿರುತೆರೆಯ ಅತಿ ದೊಡ್ಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-12ರ (BBK 12) ಆಟ ಆರಂಭವಾಗಿ ಎರಡೇ ವಾರಕ್ಕೆ ಬ್ರೇಕ್ ಬಿದ್ದಿದೆ. ಜಾಲಿವುಡ್ ಸ್ಟುಡಿಯೋಗೆ ಬೀಗ ಬಿದ್ದ ಹಿನ್ನೆಲೆ ಎಲ್ಲ ಸ್ಪರ್ಧಿಗಳನ್ನ ಈಗಲ್‌ಟನ್ ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿತ್ತು. ಇದೀಗ ಈಗಲ್‌ಟನ್‌ ರೆಸಾರ್ಟ್‌ನಿಂದಲೂ (Eagleton Resort) ಸ್ಪರ್ಧಿಗಳನ್ನ ಬೇರೆಗೆಡೆ ಶಿಫ್ಟ್‌ ಮಾಡಲು ತಯಾರಿ ನಡೆದಿದೆ.

    ಮಂಗಳವಾರ ರಾತ್ರಿಯಿಂದಲೇ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ದೊಡ್ಮನೆ ಸ್ಪರ್ಧಿಗಳು (Bigg Boss Contestants) ತಂಗಿದ್ದಾರೆ. ಅದಕ್ಕಾಗಿ 9 ರೂಮ್‌ಗಳನ್ನು ಬಿಗ್‌ ಬಾಸ್‌ ಬುಕ್‌ ಮಾಡಿಕೊಂಡಿತ್ತು. ಆದ್ರೆ ಇದಕ್ಕೂ ಮೊದಲೇ ಬೇರೆ ಕಾರ್ಯಕ್ರಮಕ್ಕೆ ರೆಸಾರ್ಟ್‌ ಬುಕ್‌ ಆಗಿರುವ ಕಾರಣ, ಸಂಜೆ 7 ಗಂಟೆ ಒಳಗೇ ಚೆಕ್‌ ಔಟ್‌ ಮಾಡುವಂತೆ ಸೂಚಿಸಲಾಗಿತ್ತು. ಆದ್ರೆ ಬಿಗ್‌ ಬಾಸ್‌ ಸಮಯಾವಕಾಶ ಕೇಳಿದ್ದು, ಕೆಲವೇ ಹೊತ್ತಿನಲ್ಲೇ 17 ಸ್ಪರ್ಧಿಗಳು ಬೇರೆಡೆಗೆ ಶಿಫ್ಟ್‌ ಮಾಡಲು ತಯಾರಿ ನಡೆದಿದೆ.

    ಮೂಲಗಳ ಪ್ರಕಾರ, ದೇವನಹಳ್ಳಿ ಸಮೀಪದ ಗೋಲ್ಡನ್ ರೆಸಾರ್ಟ್‌ಗೆ ತೆರಳುವ ಸಾಧ್ಯತೆಯಿದೆ. ಅದಕ್ಕಾಗಿ 2 ಟಿಟಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧಿಗಳೂ ಕೂಡ ತಮ್ಮ ಲಗೇಜ್‌ಗಳನ್ನ ಪ್ಯಾಕ್‌ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

    ಬಿಗ್‌ಬಾಸ್ ಶೋ ನಡೆಯುತ್ತಿದ್ದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿಯಲಾಗಿದೆ. ಜಲ ಕಾಯಿದೆ, ವಾಯು ಕಾಯಿದೆಯಡಿ ಅನುಮತಿ ಪಡೆಯದೇ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆ ಮಾಲಿನ್ಯ ಇಲಾಖೆ ಇಲಾಖೆ ನೋಟಿಸ್ ನೀಡಿದ ಬೆನ್ನಲ್ಲೇ ತಾಲ್ಲೂಕು ಆಡಳಿತ ಬೀಗ ಜಡಿದಿದೆ.

    ಹೀಗಾಗಿ ಬಿಗ್‌ಬಾಸ್ ಸ್ಪರ್ಧಿಗಳಾದ ಕಾವ್ಯಾ, ಗಿಲ್ಲಿ ನಟ, ಡಾಗ್ ಸತೀಶ್, ಚಂದ್ರಪ್ರಭ, ಅಭಿಶೇಕ್, ಅಶ್ವಿನಿ, ಮಂಜುಭಾಷಿಣಿ, ರಾಶಿಕಾ, ಕಾಖ್ರೊಚ್ ಸುಧಿ, ಮಲ್ಲಮ್ಮ, ಜಾಹ್ನವಿ, ಧನುಷ್‌ಗೌಡ, ಧೃವಂತ್, ಅಶ್ವಿನಿಗೌಡ, ರಕ್ಷಿತಾ ಶೆಟ್ಟಿ ಸೇರಿ ಎಲ್ಲರೂ ಸ್ಪರ್ಧಿಗಳು ಬಿಗ್ ಮನೆಯಿಂದ ಹೊರಬಂದಿದ್ದಾರೆ.

  • ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ಗರಂ – ಲೀಗಲ್ ಆಕ್ಷನ್ ಬಗ್ಗೆ ಚರ್ಚೆ

    ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ಗರಂ – ಲೀಗಲ್ ಆಕ್ಷನ್ ಬಗ್ಗೆ ಚರ್ಚೆ

    ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಸೀಸನ್ 12 ಕಾರ್ಯಕ್ರಮ ಎರಡನೇ ವಾರಕ್ಕೆ ಕಾಲಿಟ್ಟಿತ್ತು. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಆಟ ಶುರು ಮಾಡುವ ಹೊತ್ತಿಗೆ ಬಿಗ್ ಬಾಸ್‌ಗೆ ಶಾಕ್ ಕೊಟ್ಟಿದ್ದಾರೆ ಅಧಿಕಾರಿಗಳು. ಹೀಗಾಗಿ ಜಾಲಿವುಡ್ ಸ್ಟುಡಿಯೋ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ತಂಡ ಕೆಂಡಾಮಂಡಲವಾಗಿದೆ.

    ಮಾಲಿನ್ಯ ನಿಯಂತ್ರಣ ಮಂಡಳಿ‌ ನೋಟೀಸ್ ಹಾಗೂ ಇತರೆ ವಿಚಾರಗಳನ್ನು ಗೌಪ್ಯವಾಗಿಟ್ಟಿರುವ ಜಾಲಿವುಡ್ ಆಡಳಿತ ಮಂಡಳಿ, ಎಲ್ಲಾ ಅನುಮತಿ ಇದೆ ಅಂತ ಸುಳ್ಳುಗಳನ್ನ ಹೇಳಿತ್ತು. ಇದರಿಂದ ಜಾಲಿವುಡ್ ತಂಡದ ವಿರುದ್ಧ ಬಿಗ್ ಬಾಸ್ ಆಡಳಿತ ಮಂಡಳಿ ಹರಿಹಾಯ್ದಿದೆ. ನಿನ್ನೆ ಜಾಲಿವುಡ್‌ಗೆ ಪೊಲೀಸ್ರು ಬರುವವರೆಗೂ ಗೌಪ್ಯತೆ ಕಾಪಾಡಿದ್ದ ಜಾಲಿವುಡ್, ಜಾಲಿವುಡ್ ಮ್ಯಾನೇಜ್ಮೆಂಟ್ ಎಡವಟ್ಟಿನಿಂದ 2 ದಿನ ಬಿಗ್ ಬಾಸ್ ಚಿತ್ರೀಕರಣ ಸ್ಥಗಿತವಾಗಿದೆ.

    ಈ ಎಲ್ಲಾ ಕಾರಣಗಳಿಂದ ಬಿಗ್ ಬಾಸ್ ಮುಂಬರುವ ಎಪಿಸೋಡ್ ಗಳಿಗೆ ತೊಂದರೆಯಾಗಿದೆ. ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ಗರಂ ಆಗಿದೆ. ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಲೀಗಲ್ ಆಕ್ಷನ್ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಯಿತ್ತಿದೆ. ಸ್ಪರ್ಧಿಗಳನ್ನ ಬಿಗ್ ಬಾಸ್ ಮನೆಯಿಂದ ಹೊರ ತಂದಿರುವ ಕಾರಣ, ಎರಡು ವಾರದ ಪರಿಶ್ರಮ ವ್ಯರ್ಥವೆಂದು ಅಸಮಧಾನ ಹೊರಹಾಕಿದೆ ಬಿಗ್ ಬಾಸ್ ಆಯೋಜನಾ ಮಂಡಳಿ. ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡಬೇಕು.

  • ನಮ್ಮ ಸೀಸನ್‌ನಿಂದ ಬಿಗ್‌ ಬಾಸ್‌ಗೆ ಕಂಟಕ ಬಂದಿದೆ – ಮಾಜಿ ಸ್ಪರ್ಧಿ ಪವಿ ಪೂವಪ್ಪ

    ನಮ್ಮ ಸೀಸನ್‌ನಿಂದ ಬಿಗ್‌ ಬಾಸ್‌ಗೆ ಕಂಟಕ ಬಂದಿದೆ – ಮಾಜಿ ಸ್ಪರ್ಧಿ ಪವಿ ಪೂವಪ್ಪ

    ಪ್ರತಿ ವರ್ಷ ಬಿಗ್‌ ಬಾಸ್‌ನಲ್ಲಿ (Bigg Boss Kannada) ಕಾಂಟ್ರವರ್ಸಿ ಆಗ್ತಾನೆ ಇದೆ. ಆದ್ರೆ ನಮ್ಮ ಸೀಸನ್‌ನಿಂದ ಬಿಗ್‌ ಬಾಸ್‌ಗೆ ಕಂಟಕ ಬಂದುಬಿಟ್ಟಿದೆ. ವರ್ತೂರ್‌ ಸಂತೋಷ್‌, ರಜತ್‌, ವಿನಯ್‌ ಗೌಡ ಅವರ ಕಾಂಟ್ರವರ್ಸಿ ಆಯ್ತು. ಇದೆಲ್ಲಾ ನೋಡಿದಾಗ ಬೇಜಾರ್‌ ಆಗುತ್ತೆ. ಏಕೆಂದ್ರೆ ನಾವೆಲ್ಲ ಒಂದೇ ಫ್ಯಾಮಿಲಿ ತರ ಇದ್ದವರು ಅಂತ ಮಾಜಿ ಬಿಗ್‌ಬಾಸ್‌ ಸ್ಪರ್ಧಿ ಹಾಗೂ ಮಾಡೆಲ್‌ ಪವಿ ಪೂವಯ್ಯ (Pavi Poovappa) ಹೇಳಿದ್ರು.

    ಬಿಗ್‌ಬಾಸ್‌ ಶೂಟಿಂಗ್‌ ನಡೆಯುತ್ತಿರುವ ಜಾಲಿವುಡ್‌ ಸ್ಟುಡಿಯೋಗೆ (Jollywood Studio) ಬೀಗ ಬಿದ್ದ ವಿಚಾರ ಕುರಿತು ʻಪಬ್ಲಿಕ್‌ ಟಿವಿʼ ಜೊತೆಗೆ ಅವರು ಮಾತನಾಡಿದರು. ವಿಷಯ ಗೊತ್ತಾಗಿ ನನಗೂ ಬೇಜಾರಾಯ್ತು. ಇದರಲ್ಲಿ ಬಿಗ್ ಬಾಸ್ ಅವರದ್ದು ಏನೂ ತಪ್ಲಿಲ್ಲ. ತಪ್ಪಾಗಿರೋದು ಜಾಲಿಹುಡ್ ಸ್ಟುಡಿಯೋ ಅವರಿಂದ. ಬಿಗ್ ಬಾಸ್ ಅವರು ಕೂಡ ಜಾಲಿವುಡ್‌ಗೆ ಹೋಗುವ ಮುಂಚೆ ಇದೆಲ್ಲ ಪ್ರೊಸಿಜರ್‌ ನೋಡ್ಕೋಬೇಕಿತ್ತು. ಬಿಗ್‌ ಬಾಸ್‌ಗೆ ಅನುವು ಮಾಡಿಕೊಡುವಂತೆ ಸರ್ಕಾರಕ್ಕೂ ಮನವಿ ಮಾಡ್ತೇವೆ. ಏಕೆಂದರೆ ಅವರಲ್ಲೂ ಬಿಗ್ ಬಾಸ್ ನೋಡುವವರು ಇರ್ತಾರೆ ಎಂದು ತಿಳಿಸಿದ್ರು.

    ಪ್ರತಿ ವರ್ಷ ಬಾರಿ ಕಾಂಟ್ರವರ್ಸಿ ಆಗ್ತಾನೆ ಇದೆ. ನಮ್ಮ ಸೀಸನ್‌ನಿಂದ ಬಿಗ್‌ಬಾಸ್‌ಗೆ ಕಂಟಕ ಬಂದುಬಿಟ್ಟಿದೆ. ಕಳೆದ ಬಾರಿ ವರ್ತೂರು ಸಂತೋಷ್, ವಿನಯ್, ರಜತ್ ಅವರ ವಿಚಾರ ಕಾಂಟ್ರಾವರ್ಸಿ ಆಯ್ತು. ಬಿಗ್ ಬಾಸ್‌ಗೆ ಈ ರೀತಿ ಆಗುತ್ತಲ್ಲ ಅಂತಾ ಅನ್ಸಿಸುತ್ತೆ. ಈ ಥರ ಆದಾಗ ಸ್ಪರ್ಧಿಗಳನ್ನ ಶಿಫ್ಟ್‌ ಮಾಡುವ ವೇಳೆ ನಿಯಮ ಉಲ್ಲಂಘನೆ ಆಗಬಹುದು. ಸ್ಫರ್ಧಿಗಳು ಡೈವರ್ಷನ್ ಕೂಡ ಆಗಬಹುದು. ನಮ್ಮ ಸೀಸನ್‌ ನಡೆಯುವಾಗ ಪರಿಸರ ನಿಯಮ ಉಲ್ಲಂಘನೆ ಆಗಿರಲಿಲ್ಲ. ಬಿಗ್ ಬಾಸ್ ಮನೆ ಒಳಗಡೆ ಕಸ, ನೀರು ಎಲ್ಲಾ ಕ್ಲಿಯರ್ ಆಗುತ್ತಾ ಇತ್ತು ಎಂದು ಹೇಳಿದ್ರು.

    ‘ಬಿಗ್ ಬಾಸ್’ ಕನ್ನಡ 10ರಲ್ಲಿ ಪವಿ ಪೂವಪ್ಪ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಕೆಲವೇ ದಿನ ಇದ್ದರೂ ಜನರ ಮನಗೆದ್ದಿದ್ದರು.

  • BBK 12| ಬಂದ ದಿನವೇ ಔಟಾಗಿದ್ದ ರಕ್ಷಿತಾ ಶೆಟ್ಟಿ ವಾಪಸ್ – ಕಿಚ್ಚಿನೊಂದಿಗೆ ರೀ ಎಂಟ್ರಿ ಕೊಟ್ಟ ಕರಾವಳಿ ಬೆಡಗಿ

    BBK 12| ಬಂದ ದಿನವೇ ಔಟಾಗಿದ್ದ ರಕ್ಷಿತಾ ಶೆಟ್ಟಿ ವಾಪಸ್ – ಕಿಚ್ಚಿನೊಂದಿಗೆ ರೀ ಎಂಟ್ರಿ ಕೊಟ್ಟ ಕರಾವಳಿ ಬೆಡಗಿ

    ಬಿಗ್‌ಬಾಸ್ ಕನ್ನಡ ಸೀಸನ್ (Bigg Boss Kannada) 12 ಆರಂಭಗೊಂಡ ಮೊದಲ ದಿನವೇ ಔಟಾಗಿದ್ದ ಕರಾವಳಿಯ ಯೂಟ್ಯೂಬರ್ ರಕ್ಷಿತಾ ಶೆಟ್ಟಿ  (Rakshita Shetty) ರೀ ಎಂಟ್ರಿ ಕೊಟ್ಟಿದ್ದಾರೆ.

    ರಕ್ಷಿತಾ ಶೆಟ್ಟಿ ರೀ ಎಂಟ್ರಿ ಕೊಟ್ಟಿರುವ ಪ್ರೋಮೋ ಸದ್ಯ ರಿಲೀಸ್‌ ಆಗಿದ್ದು, ವಿಡಿಯೋದಲ್ಲಿ ಕಿಚ್ಚ ಸುದೀಪ್ (Kichcha Sudeep) ರಕ್ಷಿತಾ ಅವರನ್ನು ಮತ್ತೆ ಬಿಗ್‌ಬಾಸ್ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಮತ್ತೆ ಹೋಗಿ ಏನು ಮಾಡ್ತೀರಾ ಎಂದು ಕೇಳಿದ ಸುದೀಪ್‌ಗೆ ರಕ್ಷಿತಾ, ಎಲ್ಲರ ಹತ್ತಿರ ಪ್ರಾಪರ್ ರೀಸನ್ ಕೇಳ್ತಿನಿ. ಆವತ್ತು ಎಲ್ಲರೂ ಸಮಾಧಾನ ಮಾಡಿದ್ದರು. ಆದರೆ ಯಾರು ನನ್ನ ಜೊತೆ ನಿಲ್ಲಲಿಲ್ಲ. ನಾನು ಹೇಗೆ ಅಂತ ಗೊತ್ತಿಲ್ಲದೇ ಕವರ್ ನೋಡಿ ನನ್ನನ್ನು ಜಡ್ಜ್ ಮಾಡಿದರು. ನನಗೆ ಆ ಯೋಗ್ಯತೆ ಇದೆ ಎಂದು ಹೇಳಿ, ಕಿಚ್ಚಿನೊಂದಿಗೆ ಬಿಗ್‌ಬಾಸ್ ಮನೆಗೆ ಮರಳಿದ್ದಾರೆ.

    ಒಂದು ವಾರ ಮನೆಯಿಂದ ಹೊರಗುಳಿದಿದ್ದ ರಕ್ಷಿತಾ ಎಲ್ಲ ಸ್ಪರ್ಧಿಗಳ ನಡವಳಿಕೆ ತಿಳಿದು ಇದೀಗ ಸ್ಟ್ರಾಂಗ್‌ ಸ್ಪರ್ಧಿಯಾಗಿ ರೀ ಎಂಟ್ರಿಕೊಡುವ ಮೂಲಕ ಸ್ಪರ್ಧಿಗಳಿಗೆ ಬಿಗ್‌ಶಾಕ್ ನೀಡಿದ್ದಾರೆ.ಇದನ್ನೂ ಓದಿ: ಮೊದಲ ದಿನವೇ ಮನೆಯಿಂದ ಔಟ್‌ – ಕರಾವಳಿಯ ಯೂಟ್ಯೂಬರ್ ರಕ್ಷಿತಾ ಶೆಟ್ಟಿಗೆ ಗೇಟ್‌ಪಾಸ್‌

    ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-12 ಸೆ.28ರಂದು ಪ್ರಾರಂಭವಾಗಿತ್ತು. ಒಟ್ಟು 19 ಸ್ಪರ್ಧಿಗಳ ಪೈಕಿ 6 ಸ್ಪರ್ಧಿಗಳು ಒಂಟಿಗಳಾಗಿ, 5 ಸ್ಪರ್ಧಿಗಳು ಜಂಟಿಗಳಾಗಿ ಹಾಗೂ 3 ಸ್ಪರ್ಧಿಗಳು ಅತಂತ್ರರಾಗಿ ಬಿಗ್‌ಬಾಸ್ ಮನೆಯನ್ನು ಪ್ರವೇಶಿಸಿದ್ದರು. ರಕ್ಷಿತಾ ಶೆಟ್ಟಿ, ಮಾಳು ನಿಪನಾಳ, ಸ್ಪಂದನಾ ಅತಂತ್ರ ಸ್ಥಿತಿಯಲ್ಲಿ ಇದ್ದರು. ಮನೆಯಲ್ಲಿ ಅತಂತ್ರರಾಗಿದ್ದ ಮೂವರಲ್ಲಿ ಇಬ್ಬರನ್ನು ಉಳಿಸಿ, ಒಬ್ಬರನ್ನು ಹೊರಗೆ ಕಳಿಸುವಂತೆ ಬಿಗ್‌ಬಾಸ್‌ ಸೂಚಿಸಿದ್ದರು. ಹೊರಗೆ ಕಳುಹಿಸುವ ನಿರ್ಧಾರವನ್ನು 6 ಒಂಟಿಗಳಿಗೆ ನೀಡಲಾಗಿತ್ತು. ಅದರಂತೆ ರಕ್ಷಿತಾ ಶೆಟ್ಟಿಯನ್ನು ಎಲಿಮಿನೇಟ್ ಮಾಡಿದ್ದರು.ಇದನ್ನೂ ಓದಿ: ಬಿಗ್‌ಬಾಸ್ 12ರ ಮನೆಗೆ 19 ಸ್ಪರ್ಧಿಗಳ ಎಂಟ್ರಿ – ಒಂಟಿ, ಜಂಟಿ ಆಟಕ್ಕೆ ಕಾದಾಟ ಶುರು

  • ಸ್ಟೇಜ್‌ನಲ್ಲೇ ನಕ್ಕು ನಗಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಲ್ಲಮ್ಮ

    ಸ್ಟೇಜ್‌ನಲ್ಲೇ ನಕ್ಕು ನಗಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಲ್ಲಮ್ಮ

    ಸೋಷಿಯಲ್ ಮೀಡಿಯಾದಲ್ಲಿ ಮಾತಿನಿಂದಲೇ ಎಲ್ಲರ ಮನಕದ್ದಿದ್ದ ಮಲ್ಲಮ್ಮ ಇದೀಗ ಬಿಗ್‌ಬಾಸ್ (BBK 12) ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಲೆಮನ್ ಟೀ ಇಂದಲೇ ಫೇಮಸ್ ಆಗಿದ್ದ ಮಲ್ಲಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಮನರಂಜನೆ ನೀಡಿದ್ದರು. 12 ವರ್ಷಗಳ ಹಿಂದೇ ಬೆಂಗಳೂರಿಗೆ ಬಂದಿದ್ದ ಮಲ್ಲಮ್ಮ ಬಾಟಿಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಇದೀಗ ಮಲ್ಲಮ್ಮ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದಾರೆ.ಇದನ್ನೂ ಓದಿ: ಒಂಟಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟ ನಿರೂಪಕಿ ಜಾನ್ಹವಿ, ಗೀತಾ ಧಾರಾವಾಹಿಯ ಧನುಷ್

    ಈಗಾಗಲೇ ಕಾಕ್ರೋಚ್ ಸುಧಿ, ಕೊತ್ತಲವಾಡಿ ನಟಿ ಕಾವ್ಯ, ಡಾಗ್ ಸತೀಶ್, ಕಾಮಿಡಿ ಕಲಾವಿದ ಗಿಲ್ಲಿ, ಗಿಚ್ಚಿಗಿಲಿಗಿಲಿ ಚಂದ್ರಪ್ರಭ, ಮಂಜು ಭಾಷಿಣಿ, ಮನದ ಕಡಲು ನಟಿ ರಾಶಿಕಾ ಶೆಟ್ಟಿ, ಅಭಿಷೇಕ್, ಲಕ್ಷಣ ಧಾರಾವಾಹಿಯ ಮೌರ್ಯ, ನಟ ಧನುಷ್, ನಿರೂಪಕಿ ಜಾನ್ಹವಿ ಬಿಗ್‌ಬಾಸ್ ಮನೆಗೆ ಕಂಟೆಸ್ಟಂಟ್‌ಗಳಾಗಿ ಹೋಗಿದ್ದಾರೆ.

  • ಒಂಟಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟ ನಿರೂಪಕಿ ಜಾನ್ಹವಿ, ಗೀತಾ ಧಾರಾವಾಹಿಯ ಧನುಷ್

    ಒಂಟಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟ ನಿರೂಪಕಿ ಜಾನ್ಹವಿ, ಗೀತಾ ಧಾರಾವಾಹಿಯ ಧನುಷ್

    ಬಿಗ್‌ಬಾಸ್ ಕನ್ನಡ ಸೀಸನ್ 12 ಇದೀಗ ಶುರುವಾಗಿದ್ದು, ಒಬ್ಬೊಬ್ಬರಾಗಿ ಬಿಗ್ ಹೌಸ್‌ಗೆ ಕಾಲಿಡುತ್ತಿದ್ದಾರೆ. ಇದೀಗ ಕಲರ್ಸ್ ಕನ್ನಡ ಧಾರಾವಾಹಿಯ ನಿರೂಪಕಿ ಜಾನ್ಹವಿ ಹಾಗೂ ಗೀತಾ ಸೀರಿಯಲ್ ನಟ ಧನುಷ್ ಒಂಟಿಯಾಗಿ ಕಾಲಿಟ್ಟಿದ್ದಾರೆ.

    ನಮ್ಮಮ್ಮ ಸೂಪರ್ ಸ್ಟಾರ್ ಶೋ ಮೂಲಕ ಜಾನ್ಹವಿ, ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಶೋವೊಂದರ ನಿರೂಪಕಿಯಾಗಿ ನಂತರ ಸಿನಿಮಾದಲ್ಲಿಯೂ ನಟನೆಗೆ ಅವಕಾಶ ಕೂಡ ಸಿಕ್ಕಿತ್ತು. ಇದೀಗ ಜೀವನದ ಹೊಸ ಅಧ್ಯಾಯಕ್ಕಾಗಿ ನಿರೂಪಕಿ ಜಾನ್ಹವಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಇನ್ನೂ ಗೀತಾ ಧಾರಾವಾಹಿಯಲ್ಲಿ ವಿಜಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಧನುಷ್ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಕಾಕ್ರೋಚ್ ಸುಧಿ, ಕೊತ್ತಲವಾಡಿ ನಟಿ ಕಾವ್ಯ, ಡಾಗ್ ಸತೀಶ್, ಕಾಮಿಡಿ ಕಲಾವಿದ ಗಿಲ್ಲಿ, ಗಿಚ್ಚಿಗಿಲಿಗಿಲಿ ಚಂದ್ರಪ್ರಭ, ಮಂಜು ಭಾಷಿಣಿ, ಮನದ ಕಡಲು ನಟಿ ರಾಶಿಕಾ ಶೆಟ್ಟಿ, ಅಭಿಷೇಕ್‌, ಲಕ್ಷಣ ಧಾರಾವಾಹಿಯ ಮೌರ್ಯ, ಮಲ್ಲಮ್ಮ ಎಂಟ್ರಿ ಕೊಟ್ಟಿದ್ದಾರೆ.