Tag: bigg boss hindi 16

  • ‘ಬಿಗ್ ಬಾಸ್’ ಖ್ಯಾತಿಯ ಅಬ್ದು ರೋಜಿಕ್ ಮದುವೆ ಡೇಟ್ ಫಿಕ್ಸ್- ಹುಡುಗಿ ಯಾರು?

    ‘ಬಿಗ್ ಬಾಸ್’ ಖ್ಯಾತಿಯ ಅಬ್ದು ರೋಜಿಕ್ ಮದುವೆ ಡೇಟ್ ಫಿಕ್ಸ್- ಹುಡುಗಿ ಯಾರು?

    ‘ಬಿಗ್ ಬಾಸ್ ಹಿಂದಿ ಸೀಸನ್ 16’ರ (Bigg Boss Hindi 16) ಖ್ಯಾತಿಯ ಅಬ್ದು ರೋಜಿಕ್ (Abdu Roziq) ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಜಿಕಿಸ್ತಾನ್ ದೇಶದ ಗಾಯಕನಾಗಿರುವ 20 ವರ್ಷದ ಅಬ್ದು ಮದುವೆಯಾಗಿರುತ್ತಿರುವ ಸಿಹಿಸುದ್ದಿ ನೀಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕನ್ನಡ ಕಿರುತೆರೆಯಲ್ಲಿ ಹೊಸ ರಿಯಾಲಿಟಿ ಶೋ

    ನನ್ನನ್ನು ಗೌರವಿಸುವ, ಪ್ರೀತಿಸುವ ಹುಡುಗಿ ಸಿಗುತ್ತಾಳೆ ಎಂದು ನಾನು ಊಹಿಸಿರಲಿಲ್ಲ. ನಾನು ಎಷ್ಟು ಸಂತೋಷವಾಗಿದ್ದೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ ಅಬ್ದು. ಡೈಮಂಡ್ ರಿಂಗ್ ಹಿಡಿದುಕೊಂಡಿರುವ ಫೋಟೋವನ್ನು ಶೇರ್ ಮಾಡಿ ಇದಕ್ಕೆ ಅವರು ಅಡಿಬರಹ ಕೂಡ ನೀಡಿದ್ದಾರೆ.

     

    View this post on Instagram

     

    A post shared by Abduroziq Official (@abdu_rozik)


    ನಿಮಗೆಲ್ಲ ಗೊತ್ತಿರುವಂತೆ ನನಗೆ 20 ವರ್ಷ. ಪ್ರೀತಿಯಲ್ಲಿ ಬೀಳಬೇಕು, ನಾನು ಪ್ರೀತಿಸೋ ಹುಡುಗಿ ನನ್ನನ್ನು ಗೌರವಿಸಬೇಕು, ಅತಿಯಾಗಿ ಪ್ರೀತಿ ಮಾಡಬೇಕು ಎನ್ನುವ ಆಸೆ ಇತ್ತು. ಆಗ ಈ ಹುಡುಗಿ ಸಿಕ್ಕಳು. ಹೇಗೆ ಹೇಳಬೇಕು ಎನ್ನುವುದೇ ತಿಳಿಯುತ್ತಿಲ್ಲ. ನಾನು ಸಖತ್ ಎಗ್ಸೈಟ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಒಂದು ಸರ್ಪ್ರೈಸ್ ಎಂದಿರುವ ಅವರು ರಿಂಗ್ ಓಪನ್ ಮಾಡಿ ತೋರಿಸಿದ್ದಾರೆ.

    ಜೂನ್ 7 ಈ ದಿನಾಂಕ ಸೇವ್ ಮಾಡಿಕೊಳ್ಳಿ ಎಂದಿರುವ ಅಬ್ದು, ನನ್ನ ಈ ಖುಷಿಯನ್ನು ಶಬ್ಧಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೆ, ಶಾರ್ಜಾದ ಅಮಿರಾ ಎಂಬ 19 ವರ್ಷದ ಹುಡುಗಿಯನ್ನು ಅಬ್ದು ರೋಜಿಕ್ ಮದುವೆಯಾಗುತ್ತಿದ್ದಾರೆ ಎಂದು ವರದಿಯಾಗಿದೆ.

  • ಬಂದೂಕಿನೊಂದಿಗೆ ಆಟವಾಡಿದ ‘ಬಿಗ್ ಬಾಸ್’ ಅಬ್ದು ರೋಜಿಕ್‌ ವಿರುದ್ಧ ಪ್ರಕರಣ ದಾಖಲು

    ಬಂದೂಕಿನೊಂದಿಗೆ ಆಟವಾಡಿದ ‘ಬಿಗ್ ಬಾಸ್’ ಅಬ್ದು ರೋಜಿಕ್‌ ವಿರುದ್ಧ ಪ್ರಕರಣ ದಾಖಲು

    ಮಾಜಿ ಬಿಗ್ ಬಾಸ್ ಸ್ಪರ್ಧಿ(Bigg Boss Hindi) ಅಬ್ದು ರೋಜಿಕ್ (Abdu Rozik) ಅವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಬ್ದು ರೋಜಿಕ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ಡೆಯಡಿ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತೀಚಿಗೆ ಹೋಟೆಲ್ ಒಂದರಲ್ಲಿ ಅಬ್ದು ಲೋಡ್ ಆಗಿರುವ ಬಂದೂಕೊಂದನ್ನು ಹಿಡಿದುಕೊಂಡು ಪೋಸ್ ನೀಡುತ್ತಾ ಆಟವಾಡುತ್ತಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ಮುಂಬೈ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಅಬ್ದು ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅಬ್ದು ಅನ್ನು ವಶಕ್ಕೆ ಪಡೆದು ವಿಚಾರಣೆ ಸಹ ನಡೆಸಿದ್ದರು.

    ಅಬ್ದು ಕೈಗೆ ಲೋಡೆಡ್ ಬಂದೂಕು (Loaded Gun) ಸಿಗಲು ಗೋಲ್ಡನ್ ಬ್ರದರ್ಸ್ ಎಂದೇ ಖ್ಯಾತಿಯಾಗಿರುವ ಸನ್ನಿ- ಸಂಜಯ್ ಕಾರಣ. ಸನ್ನಿ-ಸಂಜಯ್ ಅವರುಗಳ ಬಾಡಿಗಾರ್ಡ್‌ಗಳ ಬಂದೂಕು ಹಿಡಿದುಕೊಂಡು ಅಬ್ದು ಪೋಸ್ ನೀಡಿದ್ದರು. ಇದನ್ನ ವಿಡಿಯೋ ಮಾಡಿಕೊಂಡಿದ್ದರು. ಅದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ

    ಶಸ್ತ್ರಾಸ್ತ್ರ ಕಾಯ್ದೆಯನ್ವಯ ಯಾವ ವ್ಯಕ್ತಿಯ ಬಳಿ ಬಂದೂಕಿನ ಪರವಾನಗಿ ಇರುತ್ತದೆಯೋ ಆ ವ್ಯಕ್ತಿಯ ಹೊರತಾಗಿ ಇನ್ಯಾರೂ ಬಂದೂಕು ಮುಟ್ಟುವಂತಿಲ್ಲ. ಹಾಗಾಗಿ ಈಗ ಅಬ್ದು ಹಾಗೂ ಬಂದೂಕಿನ ಪರವಾನಗಿ ಹೊಂದಿದ್ದ ಗೋಲ್ಡನ್ ಬ್ರದರ್ಸ್ರ ಬಾಡಿಗಾರ್ಡ್ ವಿರುದ್ಧ ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಅಬ್ದುಗೆ ಸಂಬಂಧಿಸಿದವರು ಮಾಧ್ಯಮಗಳಿಗೆ ಹೇಳಿರುವಂತೆ, ಅಬ್ದು ಕೇವಲ ಕೆಲವೇ ಸೆಕೆಂಡ್‌ಗಳಿಗಾಗಿ ಬಂದೂಕನ್ನು ಎತ್ತಿಕೊಂಡು ಹಾಗೆಯೇ ವಾಪಸ್ ಇಟ್ಟುಬಿಟ್ಟಿದ್ದರು ಎಂದಿದ್ದಾರೆ.

    ಅಬ್ದು ರೋಜಿಕ್ ತಜಿಕಿಸ್ತಾನದ ಸಿಂಗರ್, ಹಿಂದಿ ಬಿಗ್‌ಬಾಸ್ 16ನಲ್ಲಿ ಪಾಲ್ಗೊಳ್ಳುವ ಮೂಲಕ ಮೋಡಿ ಮಾಡಿದ್ದರು. ಸಲ್ಮಾನ್ ಖಾನ್‌ರ (Salman Khan) ಇತ್ತೀಚೆಗಿನ ಸಿನಿಮಾ ‘ಕಿಸಿ ಕಾ ಭಾಯ್ ಕಿಸಿ ಕೀ ಜಾನ್’ (Kisi Ka Bhai Ki Jaan) ಸಿನಿಮಾದಲ್ಲಿಯೂ ಇವರು ನಟಿಸಿದ್ದಾರೆ. ಇದೀಗ ಗಾಯನದ ಜೊತೆಗೆ ಯೂಟ್ಯೂಬರ್ ಸಹ ಆಗಿರುವ ಅಬ್ದು, ಮುಂಬೈನಲ್ಲಿ ರೆಸ್ಟೊರೆಂಟ್ ಒಂದನ್ನು ಸಹ ತೆರೆದಿದ್ದಾರೆ.

  • ಬಿಗ್ ಬಾಸ್ ನಿರೂಪಣೆಗೆ ಸಲ್ಮಾನ್ ಖಾನ್ ಬ್ರೇಕ್

    ಬಿಗ್ ಬಾಸ್ ನಿರೂಪಣೆಗೆ ಸಲ್ಮಾನ್ ಖಾನ್ ಬ್ರೇಕ್

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್ (Bigg Boss Hindi) ಸೀಸನ್ 16 ಹಿಂದಿ ಸಾಕಷ್ಟು ವಿಚಾರಗಳಿಂದ ಹೈಲೈಟ್ ಆಗುತ್ತಿದೆ. ಸಲ್ಮಾನ್ ಖಾನ್(Salman Khan) ನೇತೃತ್ವದಲ್ಲಿ ಶೋ ಅದ್ಭುತವಾಗಿ ಮೂಡಿ ಬರುತ್ತಿದೆ. ಆದರೆ ಈಗ ದೊಡ್ಮನೆಯಿಂದ ಹೊರಗೆ ಇರಬೇಕಾದ ಪರಿಸ್ಥಿತಿಯನ್ನ ಸಲ್ಮಾನ್ ಎದುರಿಸುತ್ತಿದ್ದಾರೆ. ಅನಾರೋಗ್ಯದ ನಿಮಿತ್ತ ಸಲ್ಲು ಶೋನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

    ಹಿಂದಿ ಬಿಗ್ ಬಾಸ್‌ಗೆ(Bigg Boss) ಅಪಾರ ಅಭಿಮಾನಿಗಳಿದ್ದಾರೆ. ಅದರಲ್ಲೂ ವೀಕೆಂಡ್‌ನಲ್ಲಿ ಸಲ್ಲುನ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಇದೀಗ ಫ್ಯಾನ್ಸ್‌ಗೆ ಸ್ಯಾಡ್ ನ್ಯೂಸ್‌ವೊಂದು ಸಿಕ್ಕಿದೆ. ಸಲ್ಮಾನ್ ಖಾನ್ ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಬಿಗ್ ಬಾಸ್‌ನಿಂದ ಕೊಂಚ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ನಾನು ಸಿಂಗಲ್, ನಂಗೂ ಜೋಡಿ ಬೇಕು ಎಂದು ಬಿಗ್ ಬಾಸ್‌ಗೆ ಕಾವ್ಯಶ್ರೀ ಬೇಡಿಕೆ

    ಸಲ್ಲು ಡೆಂಗ್ಯೂ ಇರುವುದು ಪತ್ತೆಯಾಗಿದೆ. ಹಾಗಾಗಿ ಅವರ ಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ ಬಿಗ್ ಬಾಸ್ ನಿರೂಪಣೆಗೆ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ. ಶುಕ್ರವಾರ ಮತ್ತು ಶನಿವಾರದ ಸಂಚಿಕೆಗಳು ಗುರುವಾರವೇ ಶೂಟ್ ಮಾಡುತ್ತಾರೆ. ಈ ಶೂಟ್‌ಗೆ ನಟ ಗೈರಾಗಿದ್ದಾರೆ. ಇನ್ನೂ ನೆಚ್ಚಿನ ನಟ ಸಲ್ಲು ಶೀಘ್ರದಲ್ಲಿ ಗುಣಮುಖವಾಗಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.

    ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಜನಪ್ರಿಯ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ ೧೬ರ ಮುಂಬರುವ ಮೂರು ಸಂಚಿಕೆಗಳನ್ನು ಹೋಸ್ಟ್ ಮಾಡಲಿದ್ದಾರೆ ಎಂದು ಕಾರ್ಯಕ್ರಮದ ಮೂಲಗಳು ತಿಳಿಸಿವೆ. ಕರಣ್ ಅವರು ಸಲ್ಮಾನ್ ಸ್ಥಾನವನ್ನು ತುಂಬುತ್ತಿದ್ದಾರೆ. ಅವರು ದೀಪಾವಳಿ ವಿಶೇಷ ಸೇರಿದಂತೆ ಬಿಗ್ ಬಾಸ್‌ನ ಮೂರು ಸಂಚಿಕೆಗಳಿಗೆ ಚಿತ್ರೀಕರಣ ಮಾಡಲಿದ್ದಾರೆ. ಇದು ಶನಿವಾರ ಮತ್ತು ಭಾನುವಾರದ ಬದಲಾಗಿ ಸೋಮವಾರ ಪ್ರಸಾರವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]