ಬಿಗ್‌ಬಾಸ್ ಮನೆ (Bigg Boss Kannada 9) ಇದೀಗ 60 ದಿನಗಳನ್ನ ಪೂರೈಸಿ, ಮುನ್ನುಗ್ಗುತ್ತಿದೆ. ಸಾಕಷ್ಟು ತಿರುವುಗಳನ್ನ ಪಡೆದುಕೊಳ್ಳುತ್ತಿರುವ ಈ ಮನೆಯಲ್ಲಿ ಇತ್ತೀಚೆಗೆ ದೊಡ್ಮನೆಯ ಏಳನೇ ಸ್ಪರ್ಧಿಯಾಗಿ ದೀಪಿಕಾ ದಾಸ್ (Deepika Das) ಔಟ್ ಆಗಿದ್ದರು. ಆದರೆ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಮತ್ತೆ ದೀಪಿಕಾ ದಾಸ್ ಅವರ ರೀ ಎಂಟ್ರಿಯಾಗಿದೆ.

ದೊಡ್ಮನೆಯ ಆಟದಲ್ಲಿ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿಗ್ ಮನೆಯಲ್ಲಿ ಪ್ರತಿ ಸೀಸನ್‌ನಲ್ಲೂ ಅರ್ಧ ಆಟ ಆಗುತ್ತಿದ್ದಂತೆ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯನ್ನ ಕಳುಹಿಸಲಾಗುತ್ತದೆ. ಹಾಗಾಗಿ ಸಾನ್ಯ ಅಯ್ಯರ್, ಸೋನು, ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ ಕೊಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ದೀಪಿಕಾ ದಾಸ್ ಅವರೇ ರೀ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ದೀಪಿಕಾ ದಾಸ್ ವೈಲ್ಡ್ ಕಾರ್ಡ್ ಎಂಟ್ರಿ
ದೀಪಿಕಾ ದಾಸ್ ಎಲಿಮಿನೇಷನ್ ನಂತರ ತನ್ನ ಮನೆಗೂ ಹೋಗಿರಲಿಲ್ಲ. ಮಾಧ್ಯಮದ ಕಣ್ಣಿಗೂ ಬಿದ್ದಿರಲಿಲ್ಲ. ಸೀಕ್ರೆಟ್ ರೂಮ್‌ನಲ್ಲಿ ಇರಿಸಿದ್ದರು. ಇದೀಗ ದೊಡ್ಮನೆಗೆ ಮತ್ತೆ ದೀಪಿಕಾ ಬಂದಿದ್ದಾರೆ. ಬರುತ್ತಲ್ಲೇ ಟಾಸ್ಕ್ ಗೆದ್ದು, ಮನೆಗೆ ತರಕಾರಿ ತಂದುಕೊಟ್ಟಿದ್ದಾರೆ. ದೀಪಿಕಾ ಚಿಂದಿ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿಕ್ಕ ಅವಕಾಶವನ್ನ ಸರಿಯಾಗಿ ಸದುಪಯೋಗಪಡಿಕೊಂಡು ಗೆಲ್ಲಲಿ ಎಂಬುದೇ ಅಭಿಮಾನಿಗಳ ಆಶಯ.



ಈ ಹಿಂದಿನ 8 ಸೀಸನ್‌ಗಳ ಕೆಲವು ಪ್ರವೀಣರ ಜೊತೆ ಹೊಸಬರು ಕೂಡ ಟಿವಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಸೀಸನ್ ಬಿಗ್ ಬಾಸ್ ಈ ಹಿಂದಿನ ಸೀಸನ್‌ಗಿಂತ ವಿಭಿನ್ನವಾಗಿರಲಿದೆ. ಸೆ.25ರಿಂದ ರಾತ್ರಿ 9.30ಕ್ಕೆ ಬಿಗ್ ಬಾಸ್ ಪ್ರಸಾರವಾಗಲಿದೆ.