Tag: Bigg boss-8

  • ಬೈದ್ರೋ, ಮೆಟ್ಟಲ್ಲಿ ಹೊಡೆದ್ರೋ ಕನ್ಫ್ಯೂಸ್ ಆಯ್ತು

    ಬೈದ್ರೋ, ಮೆಟ್ಟಲ್ಲಿ ಹೊಡೆದ್ರೋ ಕನ್ಫ್ಯೂಸ್ ಆಯ್ತು

    ಬಿಗ್ ಬಾಸ್‍ನ ವೀಕೆಂಡ್ ಎಪಿಸೋಡ್‍ಗಳಲ್ಲಿ ಸುದೀಪ್ ಭಾಗವಹಿಸುತ್ತಿಲ್ಲ. ಅನಾರೋಗ್ಯದ ಕಾರಣ ಅವರು ವೀಕೆಂಡ್ ಪಂಚಾಯಿತಿಗೆ ಹಾಜರಾಗಿಲ್ಲ. ಇದರಿಂದ ವೀಕ್ಷಕರಿಗಿಂತ ಹೆಚ್ಚು ಮನೆ ಮಂದಿಗೆ ಬೇಸರವಾಗಿದೆ. ಹೀಗಿರುವಾಗಲೇ ವಾಯ್ಸ್ ನೋಟ್ ಮೂಲಕ ಕಿಚ್ಚ ಸ್ಪರ್ಧಿಗಳಿಗೆ ಸರ್ಪೈಸ್ ಹಾಗೂ ಶಾಕ್ ನೀಡಿದ್ದಾರೆ. ಸ್ಪರ್ಧಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ ವೀಕ್ನೆಸ್ ಬಗ್ಗೆ ಸಹ ತಿಳಿಸಿದ್ದಾರೆ.

    ಎಲ್ಲ ಸ್ಪರ್ಧಿಗಳ ಬಗ್ಗೆ ಕಿಚ್ಚ ಮಾತನಾಡಿದ್ದು, ಮನೆಯ ಬುದ್ಧಿವಂತರೆಂದೇ ಕರೆಸಿಕೊಳ್ಳುವ ಚಕ್ರವರ್ತಿ ಅವರ ಬಗ್ಗೆ ಸಹ ಹೇಳಿದ್ದಾರೆ. ಚಕ್ರವರ್ತಿಯವರು ನಂತರದಲ್ಲಿ ಈ ಬಗ್ಗೆ ಮಾರ್ಮಿಕವಾಗಿ ಹೇಳಿದ್ದಾರೆ. ತುಂಬಾ ತಿಳುವಳಿಕೆ ಇರುವವರು ನೀವು, ಆದರೂ ಒಂದು ಕಿವಿ ಮಾತು, ನಿಮ್ಮ ಮಾತು ಹಾಗೂ ತಿಳುವಳಿಕೆ ನಿಜವಾಗಿಯೂ ಚೆನ್ನಾಗಿದೆ. ಕೆಲವು ಸಲ ಬುದ್ಧಿ ಹೆಚ್ಚಾದಾಗಲೂ ಲೈಫ್ ದಾರಿ ತಪ್ಪಬಹುದು ಎನ್ನುವುದು ಗೊತ್ತಿರಲಿ ಎಂದು ಸುದೀಪ್ ಎಚ್ಚರಿಸಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿ ಚಕ್ರವರ್ತಿ, ಥ್ಯಾಂಕ್ಯೂ ಸರ್ ಅಳವಡಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಇಷ್ಟಾದ ಬಳಿಕ ಮನೆಯಲ್ಲಿನ ತಮ್ಮ ಸ್ನೇಹಿತ ಪ್ರಶಾಂತ್ ಸಂಬರಿಗಿಯವರೊಂದಿಗೆ ಮಾತನಾಡುವ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಥ್ಯಾಂಕ್ಯೂ ಸರ್ ತಿದ್ದಿಕೊಳ್ಳುವೆ ಎನ್ನುವುದರ ಜೊತೆಗೆ ಬೈದ್ರೋ ಮೆಟ್ಟಲ್ಲಿ ಹೊಡೆದರೋ ಕನ್ಫ್ಯೂಶನ್ ಆಯ್ತು, ಒಂದು ಕಡೆಯಿಂದ ಕ್ಲಿಯರ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಎಲ್ಲರಿಗೂ ಎರಡು ಲೈನ್ ಹೊಗಳಿಕೆ, ಎರಡು ಲೈನ್ ಒದೆ. ನನಗೆ ಮಾತ್ರ ಪರ್ಫೆಕ್ಟ್ ಆಗಿ ಹೇಳಿದರು ಎಂದು ಸಂಬರಗಿ ಜೊತೆ ಮಾತನಾಡಿಕೊಂಡಿದ್ದಾರೆ.

    ಹೀಗೆ ಸುದೀಪ್ ಅವರು ಮನೆಯವರೆಲ್ಲರನ್ನೂ ಸುದೀಪ್ ಹೊಗಳುವುದರ ಜೊತೆಗೆ ಅವರ ವೀಕ್ನೆಸ್ ಬಗ್ಗೆ ಸಹ ತಿಳಿಸಿದ್ದಾರೆ. ಪ್ರಶಾಂತ್ ಸಂಬರಗಿ ಬಗ್ಗೆ ಸಹ ಮಾತನಾಡಿರುವ ಕಿಚ್ಚ, ಅಳೋ ಮಗುಗೆ ಹಾಲು ಜಾಸ್ತಿ ಸಿಗುತ್ತೆ, ಹಾಗಂತ ಅಳೋದು ಜಾಸ್ತಿ ಆದರೆ, ನೋಡುವವರಿಗೆ ಎರಡು ತಟ್ಟೋಣ ಅನ್ಸುತ್ತೆ ಎಂದು ಹೇಳುವ ಮೂಲಕ ಪ್ರಶಾಂತ್ ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ಚಾಟಿ ಬೀಸಿದ್ದಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್ ಸಂಬರಗಿ ಜಾಸ್ತಿ ಮಾಡಿಲ್ಲ ಸರ್, ಜಾಸ್ತಿ ಆಗಿದ್ರೆ ಸರಿಪಡಿಸಿಕೊಳ್ಳುತ್ತೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

  • ಹೆಣ್ ಹಿಂದೆ ನಾವ್ ಹೋದ್ರೆ ಚೀಪ್, ಅವರು ನಮ್ ಹಿಂದೆ ಬರ್ಬೇಕು- ಶಮಂತ್‍ಗೆ ಸಂಬರಗಿ ಬುದ್ಧಿವಾದ

    ಹೆಣ್ ಹಿಂದೆ ನಾವ್ ಹೋದ್ರೆ ಚೀಪ್, ಅವರು ನಮ್ ಹಿಂದೆ ಬರ್ಬೇಕು- ಶಮಂತ್‍ಗೆ ಸಂಬರಗಿ ಬುದ್ಧಿವಾದ

    ಬಿಗ್ ಬಾಸ್ ಮನೆಯಲ್ಲಿ ಜೋಡಿಗಳ ಕಲರವ ಹೆಚ್ಚಾಗಿದೆ. ಆದರೆ ಕೆಲವರಿಗೆ ಮಾತ್ರ ಒಂಟಿತನ ಕಾಡುತ್ತಿದೆ. ಅದರಲ್ಲಿ ಶಮಂತ್ ಸಹ ಒಬ್ಬರು. ಈ ಬಗ್ಗೆ ಅವರೇ ಹಲವು ಬಾರಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಜಂಟಿಯಾಗುವ ಬಗ್ಗೆ ಆಗಾಗ ಮಾತನಾಡುತ್ತಿರುತ್ತಾರೆ. ಅದೇ ರೀತಿ ಇಂದು ಪ್ರಶಾಂತ್ ಸಂಬರಗಿ ಅವರ ಬಳಿ ಈ ವಿಚಾರದ ಕುರಿತು ಹೇಳಿದ್ದು, ಇದಕ್ಕೆ ಸಂಬರಗಿ ಬುದ್ಧಿವಾದ ಹೇಳಿದ್ದಾರೆ.

    ಈ ಬಾರಿ ಮುಂದಿನ ವಾರ ಸುದೀಪ್ ಸರ್ ಶಮಂತ್ ಬಿಟ್ಟರೆ ನೀವು ಯಾರ ಹತ್ತಿರವೂ ಕಾಣಿಸಿಕೊಳ್ಳುವುದಿಲ್ಲವಲ್ಲ ಎಂದು ಹೇಳಬೇಕು, ಹಂಗ್ ಮಾಡ್ತೀನಿ ಎಂದು ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಅವರು ಕುಳಿತಾಗ ಶಮಂತ್ ಹೇಳುತ್ತಾರೆ. ಆಗ ಪ್ರತಿಕ್ರಿಯಿಸಿದ ಸಂಬರಗಿ, ಸುಮ್ನಿರು ನೀನು ಏನೂ ಮಾಡಬೇಡ. ಅವಾಗ್ಲೆ ಹೇಳಿದಿನಿ, ಹುಡ್ಗೀರನ್ನ ನೀನು ಚೇಸ್ ಮಾಡಬೇಡ, ಅವರು ನಿನ್ನನ್ನು ಚೇಸ್ ಮಾಡಬೇಕು. ಲೈಫ್‍ನಲ್ಲಿ ಪಾಠ ಹೇಳಿಕೊಟ್ಟಿದ್ದೇನೆ ನಿನಗೆ ಎಂದು ಹೇಳಿದ್ದಾರೆ.

    ಹೆಣ್ ಹಿಂದೆ ನಾವು ಹೋದರೆ ಚೀಪ್, ಅವರು ನಮ್ಮ ಹಿಂದೆ ಬರಬೇಕು ಎಂದು ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶಮಂತ್, ನಾನು ಯಾರ ಹಿಂದೆ ಹೋದೆ ಇವಾಗ ಎಂದು ಪ್ರಶ್ನಿಸಿದ್ದಾರೆ. ಹೋಗ್ತಿದಿಯಲ್ಲ, ಈಗ ಹೇಳಿದೆಯಲ್ಲ ಎಂದಿದ್ದಾರೆ ಪ್ರಶಾಂತ್. ಈ ಮೂಲಕ ಶಮಂತ್‍ಗೆ ತಿವಿದಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಜೋಡಿಯಾಗಿರುವುದು ಹೆಚ್ಚು ಕಂಡುಬರುತ್ತಿದೆ. ಒಂದೆಡೆ ಅರವಿಂದ್, ದಿವ್ಯಾ ಉರುಡುಗ ಮತ್ತೊಂದೆಡೆ ಮಂಜು, ದಿವ್ಯಾ ಸುರೇಶ್ ಜೋಡಿಯಾಗಿದ್ದಾರೆ. ಆದರೆ ಶಮಂತ್‍ಗೆ ಮಾತ್ರ ಒಂಟಿತನ ಕಾಡುತ್ತಿರುತ್ತದೆ. ಈ ಬಗ್ಗೆ ಶಮಂತ್ ದಿವ್ಯಾ ಉರುಡುಗ ಬಳಿ ಮಾತನಾಡಿದ್ದು, ಕಷ್ಟ- ಸುಖ ಹಂಚಿಕೊಳ್ಳಲು ನೀವು ಜೋಡಿಯಾಗಿದ್ದೀರಿ, ನನಗೆ ಯಾರೂ ಇಲ್ಲ ಎಂದು ಹೇಳಿಕೊಂಡಿದ್ದರು. ಆಗ ಯಾವುದೇ ವಿಚಾರ ಇದ್ದರೂ ನನ್ನ ಬಳಿ ಹಂಚಿಕೋ ಎಂದು ದಿವ್ಯಾ ಉರುಡುಗ ಹೇಳಿದ್ದರು.

    ಇದೀಗ ಕಿಚ್ಚ ಸುದೀಪ್ ಸಹ ವಾರದ ಪಂಚಾಯಿತಿಯಲ್ಲಿ ಭಾಗವಹಿಸದಿದ್ದರೂ, ವಾಯ್ಸ್ ನೋಟ್ ಮೂಲಕ ಸ್ಪರ್ಧಿಗಳಿಗೆ ತಿವಿದಿದ್ದಾರೆ. ಇದರಲ್ಲಿ ಜೋಡಿ ಬಗ್ಗೆ ಸಹ ಮಾತನಾಡಿದ್ದು, ಬೇರೆ ಯಾರೊಂದಿಗೂ ಬೆರೆಯುತ್ತಿಲ್ಲ ಎಂದು ಹೇಳಿದ್ದಾರೆ. ಇದೇ ಹೊತ್ತಲ್ಲಿ ಹುಡ್ಗೀರಿಗೆ ಹತ್ತಿರವಾಗಲು ಶಮಂತ್ ಪ್ರಯತ್ನಿಸುತ್ತಿದ್ದು, ಇದಕ್ಕೆ ಸಂಬರಗಿಯವರು ಬುದ್ಧಿವಾದ ಹೇಳಿದ್ದಾರೆ.

  • ಅಳೋದು ಜಾಸ್ತಿ ಆದ್ರೆ ನೋಡೋರಿಗೆ ಎರಡು ತಟ್ಟೋಣ ಅನ್ಸುತ್ತೆ- ಸಂಬರಗಿಗೆ ಸುದೀಪ್ ಕಾಲ್

    ಅಳೋದು ಜಾಸ್ತಿ ಆದ್ರೆ ನೋಡೋರಿಗೆ ಎರಡು ತಟ್ಟೋಣ ಅನ್ಸುತ್ತೆ- ಸಂಬರಗಿಗೆ ಸುದೀಪ್ ಕಾಲ್

    ಕಿಚ್ಚನ ವೀಕೆಂಡ್ ಪಂಚಾಯಿತಿ ನಡೆಯದ ಹಿನ್ನೆಲೆ ವೀಕ್ಷಕರಿಗೆ ಮಾತ್ರವಲ್ಲ ಸ್ಪರ್ಧಿಗಳಿಗೂ ತುಂಬಾ ಬೇಸರವಾಗಿದೆ. ಅಲ್ಲದೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಸಹ. ಆದರೆ ಇದ್ದಕ್ಕಿದ್ದಂತೆ ಸುದೀಪ್ ಅವರ ಅಶರಿರವಾಣಿ ಕೇಳಿಸಿದ್ದು, ಸ್ಪರ್ಧಿಗಳ ಒಳ್ಳೆಯ ಗುಣ ಹಾಗೂ ಸರಿಪಡಿಸಿಕೊಳ್ಳಬೇಕಾದ ವೀಕ್ನೆಸ್‍ಗಳನ್ನು ಕಿಚ್ಚ ತಿಳಿಸಿದ್ದಾರೆ. ಈ ಮೂಲಕ ಸರ್ಪೈಸ್ ಜೊತೆಗೆ ಶಾಕ್ ನೀಡಿದ್ದಾರೆ.

    ಅನಾರೋಗ್ಯದ ಕಾರಣ ಕಳೆದ ಮೂರು ವಾರಗಳಿಂದ ಕಿಚ್ಚ ವಾರದ ಪಂಚಾಯಿತಿಗೆ ಆಗಮಿಸಿಲ್ಲ. ಹೀಗಾಗಿ ವೀಕ್ಷಕರು ಭಾರೀ ಬೇಸರಗೊಂಡಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಸ್ಪರ್ಧಿಗಳೂ ಸಹ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಂದು ಇದ್ದಕ್ಕಿದ್ದಂತೆ ಅವರ ಅಶರೀರ ವಾಣಿ ಕೇಳಿಸಿದ್ದು, ಸ್ಪರ್ಧಿಗಳಿಗೆ ತಮ್ಮದೇಯಾದ ಉತ್ತಮ ಗುಣ ಹಾಗೂ ಅವರ ವೀಕ್ನೆಸ್ ಹೇಳಿದ್ದಾರೆ. ಈ ಮೂಲಕ ಎಚ್ಚರಿಸಿದ್ದಾರೆ. ಒಂದೆಡೆ ಸುದೀಪ್ ಅವರ ವಾಯ್ಸ್ ಕೇಳಿ ಖುಷಿಪಟ್ಟ ಸ್ಪರ್ಧಿಗಳು, ಅವರ ಮಾತು ಕೇಳಿ ಶಾಕ್ ಸಹ ಆಗಿದ್ದಾರೆ.

    ವೈಷ್ಣವಿ ಅವರ ಬಗ್ಗೆ ಮಾತನಾಡುವ ಮೂಲಕ ಆರಂಭಿಸಿದ ಕಿಚ್ಚ, ಕೊನೆಗೆ ದಿವ್ಯಾ ಉರುಡುಗ ಬಗ್ಗೆ ಮಾತನಾಡುವ ಮೂಲಕ ಕೊನೆಗೊಳಿಸಿದ್ದಾರೆ. ಕೊನೆಗೆ ಸ್ಪರ್ಧಿಗಳು ಸಹ ತಾವು ಸುದೀಪ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಹೇಳಿದ್ದಾರೆ.

    ಹೀಟೆಡ್ ಚರ್ಚೆ ನಡೆಯುವಾಗ ಒಳಗಿರುವುದನ್ನು ಆಚೆ ಹಾಕಿ, ಇಲ್ಲವಾದಲ್ಲಿ ಇದೆಲ್ಲ ಹೆಪ್ಪುಗಟ್ಟಿ ಸರ್ಜರಿ ಮಾಡಬೇಕಾಗುತ್ತದೆ ಎಂದು ವೈಷ್ಣವಿಗೆ ಹೇಳಿದರೆ, ಸ್ವಲ್ಪ ಬುದ್ಧಿ ಹೆಚ್ಚಾದರೂ ಲೈಫ್ ದಾರಿ ತಪ್ಪಬಹುದು ಎಂದು ಚಕ್ರವರ್ತಿ ಚಂದ್ರಚೂಡ್ ಅವರಿಗೆ ಕಿವಿಮಾತು ಹೇಳಿದ್ದಾರೆ. ಮಂಜು ಜೊತೆ ಬಿಟ್ರೆ ನೀವೆಲ್ಲೂ ಕಾಣಿಸುತ್ತಿಲ್ಲ ಎಂದು ದಿವ್ಯಾ ಸುರೇಶ್‍ಗೆ ತಿವಿದಿದ್ದಾರೆ.

    ಅಲ್ಲದೆ ಶಮಂತ್ ಅವರಿಗೆ ಇನ್ನೂ ಟಾಪ್ ಗೇರ್ ಗೆ ಬರಬೇಕಿದೆ ಎಂದು ತಿಳಿಸಿದರೆ, ಮಂಜುಗೆ ನೀವು ಎಂಟರ್‍ಟೈನರ್ ಆಗಿ ಒಳಗೆ ಹೋಗಿದ್ದೀರಿ ಎಂದು ನೆನಪಿಸಿದ್ದಾರೆ. ಅಳೋ ಮಗುಗೆ ಹಾಲು ಜಾಸ್ತಿ ಸಿಗುತ್ತೆ, ಹಾಗಂತ ಅಳೋದು ಜಾಸ್ತಿ ಆದರೆ, ನೋಡುವವರಿಗೆ ಎರಡು ತಟ್ಟೋಣ ಅನ್ಸುತ್ತೆ ಎಂದು ಹೇಳುವ ಮೂಲಕ ಪ್ರಶಾಂತ್ ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ಚಾಟಿ ಬೀಸಿದ್ದಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್ ಸಂಬರಗಿ ಜಾಸ್ತಿ ಮಾಡಿಲ್ಲ ಸರ್, ಜಾಸ್ತಿ ಆಗಿದ್ರೆ ಸರಿಪಡಿಸಿಕೊಳ್ಳುತ್ತೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ನಿಮ್ಮ ಗ್ರಾಫ್ ಚೆನ್ನಾಗಿದೆ, ಕಾನ್ಫಿಡೆನ್ಸ್ ಜಾಸ್ತಿ ಆಗ್ತಾ ಇನೋಸೆನ್ಸ್ ಕಡಿಮೆ ಆಗಬಹುದು ಎಂಬುದು ನೆನಪಿನಲ್ಲಿರಲಿ ಎಂದು ಅರವಿಂದ್‍ಗೆ ತಿವಿದ್ದಾರೆ. ಆಟದ ಮೇಲೆ ಹೆಚ್ಚು ಗಮನವಿರಲಿ ಎಂದು ದಿವ್ಯಾ ಉರುಡುಗ ಅವರನ್ನು ಎಚ್ಚರಿಸಿದ್ದಾರೆ. ಕೊನೆಯದಾಗಿ ಎಲ್ಲ ಸ್ಪರ್ಧಿಗಳಿಗೆ ತಿವಿದಿದ್ದು, ಕೆಲವರಿಗೆ ಕೆಲವೆಡೆ ಗಮನ ಹೆಚ್ಚಾಗಿ, ಕೆಲವದರ ಮೇಲೆ ಗಮನ ಕಡಿಮೆಯಾಗುತ್ತಿದೆ. ಕೆಲವರಿಗೆ ಹೋಗಿರುವ ಉದ್ದೇಶವೇ ಮರೆತು ಹೋಗಿ, ಉಳಿದಿದ್ದರ ಮೇಲೆ ಗಮನ ಹೆಚ್ಚಾಗುತ್ತಿದೆ ಎಂದಿದ್ದಾರೆ. ಕೊನೆಗೆ ನಿಮ್ಮೆಲ್ಲರನ್ನು ನೋಡುವ ಆಸೆ ನನಗೂ ಇದೆ ಆದಷ್ಟು ಬೇಗ ಬರುತ್ತೇನೆ ಎಂದು ಹೇಳಿದ್ದಾರೆ.

    ಲವ್ ಯೂ ಟೂ ಸುದೀಪ್ ಸರ್, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಂಡೆವು. ನಿಮ್ಮ ಆರೋಗ್ಯ ಚೆನ್ನಾಗಿದೆ ಎಂದು ಗೊತ್ತಾಗಿ ಜೀವ ಬಂದಂಗಾಗಿದೆ, ನಿಮ್ಮ ಧ್ವನಿ ಕೇಳಿ ಹೊಸ ಶಕ್ತಿ ಬಂದಹಾಗಾಗಿದೆ. ನಿಮಗೋಸ್ಕರ 12 ಮಕ್ಕಳು ಕಾಯುತ್ತಿದ್ದೇವೆ ಬೇಗ ಬನ್ನಿ ಎಂದು ಸ್ಪರ್ಧಿಗಳಲೆಲ್ಲರೂ ಕೇಳಿಕೊಂಡಿದ್ದಾರೆ.

  • ನಂಗೆ ಇಲ್ಲಿ ಯಾರೂ ಇಲ್ಲಾ – ದಿವ್ಯಾ ಬಳಿ ಶಮಂತ್ ಅಳಲು

    ನಂಗೆ ಇಲ್ಲಿ ಯಾರೂ ಇಲ್ಲಾ – ದಿವ್ಯಾ ಬಳಿ ಶಮಂತ್ ಅಳಲು

    ಬಿಗ್ ಮನೆಯಲ್ಲಿ ಮೋಸ್ಟ್ ಟ್ರ್ಯಾಕ್ಟಿವ್ ಜೋಡಿ ಎಂದರೆ ಅದು ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರದ್ದು, ಇರಿಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಮಟ್ಟಿಗೆ ಸಹ ಚರ್ಚೆಯಾಗಿದೆ. ಇದೇ ವಿಚಾರದ ಕುರಿತು ಇದೀಗ ಶಮಂತ್ ದಿವ್ಯಾ ಉರುಡುಗ ಅವರ ಕಾಲೆಳೆದಿದ್ದಾರೆ.

    ಶಮಂತ್ ಆ್ಯಕ್ಚುಲಿ ನಿಂಗ್ ಏನೋ ಆಗಿದೆ ಕಣೋ ಎಂದು ದಿವ್ಯಾ ಹೇಳುತ್ತಾರೆ ಆಗ ದಿವ್ಯಾ ಉರುಡುಗಗೆ ಶಮಂತ್ ಟಾಂಗ್ ನೀಡಿದ್ದು, ಏನ್ ಗೊತ್ತಾ, ಈ ಲವರ್ ಸಾರಿ, ಒಂದು ಇದು ಇರುತ್ತಲ್ಲಾ, ಅದು….ಎಂದು ಗುಣುಗುತ್ತಾರೆ. ಆಗ ದಿವ್ಯಾ ಮಧ್ಯ ಪ್ರವೇಶಿಸಿ ಕನೆಕ್ಷನ್ ಎಂದು ಹೇಳುತ್ತಾರೆ. ಹಾ ಅದು ಇದ್ದವರಿಗೆ ಜಗತ್ತು ಉಲ್ಟಾ ಕಾಣಿಸುತ್ತಂತೆ ನಿನಗೆ ಅದೇ ಆಗಿರುವುದು ಇವತ್ತು ಎಂದು ಶಮಂತ್ ಕಿಚಾಯಿಸಿದ್ದಾರೆ.

    ಶಮಂತ್ ಹಾಗೂ ದಿವ್ಯಾ ಉರುಡುಗ ಮಾತನಾಡುತ್ತಿರುವಾಗ ಪರೋಕ್ಷವಾಗಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಸ್ನೇಹ, ಸಲಿಗೆಯ ಬಗ್ಗೆ ಮಾತನಾಡಿದ್ದಾರೆ. ಶಮಂತ್ ಟಾಂಗ್ ನೀಡಿದ ತಕ್ಷಣ ದಿವ್ಯಾ ಪ್ರತಿಕ್ರಿಯಿಸಿ, ನಾನು ನಿಂಗ್ ಹೇಳಿದ್ರೆ, ನೀನು ನನ್ನ ಮೇಲೆ ಹಾಕುತ್ತಿದ್ದಿಯಾ ಅಲಾ, ಎಂಥಾ ಭಂಡ್ ನನ್ ಮಗಾ ನೀನು ಎನ್ನುತ್ತಾರೆ. ಆಗ ಶಮಂತ್, ಫ್ಲವರ್ ಫ್ಲವರ್ ಡ್ರೆಸ್‍ಗಳು ಎನ್ನುತ್ತಾರೆ, ಆಗ ದಿವ್ಯಾ ಮಧ್ಯೆ ಪ್ರವೇಶಿಸಿ, ಇಲ್ಲಾ ನನ್ನ ಬಳಿ ನಿಜವಾಗಿಯೂ ಬಟ್ಟೆ ಖಾಲಿಯಾಗಿದೆ ಕಳಿಸಿ ಎಂದು ಹೇಳಬೇಕು ಎನ್ನುತ್ತಾರೆ.

    ಅಷ್ಟರಲ್ಲೇ ಅರವಿಂದ್ ಕಿಚನ್‍ನಲ್ಲಿ ಇರುವುದನ್ನು ಕಂಡ ಶಮಂತ್, ಅದಕ್ಕೆ ಅವರು ನಿನಗಾಗಿ ಅಲ್ಲಿ ಕಾಯುತ್ತಿದ್ದಾರೆ ಎನ್ನುತ್ತಾರೆ. ಆಗ ದಿವ್ಯಾ ಏ ಸುಮ್ನಿರೋ, ನಿಂಗ್ ಏನೋ ಆಗಿದೆ ಶಮಾ ಎನ್ನುತ್ತಾರೆ. ಆಗ ನಂಗ್ ಬೇಜಾರಾದರೆ ಇನ್ನೇನ್ ಮಾಡ್ಲಿ ಎನ್ನುತ್ತಾರೆ ಶಮಂತ್. ನಿಂಗ್ ಬೇಜಾರಾದ್ರೆ ನಂಗೆ ತಲೆ ತಿನ್ನೋದಾ ಎಂದು ದಿವ್ಯಾ ಹೇಳುತ್ತಾರೆ.

    ನಿಮಗಾದರೆ ಒಬ್ಬರಿಗೊಬ್ಬರು ಇದೀರಾ ಬೇಜಾರಾಗಲ್ಲ, ನಂಗೇ ಯಾರೂ ಇಲ್ಲ ಎಂದು ಶಮಂತ್ ಸಪ್ಪೆ ಮುಖ ಹೊತ್ತು ಹೇಳುತ್ತಾರೆ. ಆಗ ದಿವ್ಯಾ ನಾವೆಲ್ಲಾ ಇದೀವಲ್ಲೋ ಎನ್ನುತ್ತಾರೆ. ಆಗ ನೀನು ನನ್ ಹತ್ರಾನೇ ಇರು ಅಂತಲ್ಲ, ನಾನೇ ಎಲ್ಲರ ಹತ್ತಿರ ಇರುತ್ತೇನೆ ಅಷ್ಟೇ. ನಾನೇ ಈಗ ಉಲ್ಟಾ ಆಗುತ್ತೇನೆ ಎಂದು ಶಮಂತ್ ಹೇಳುತ್ತಾರೆ. ಹೋಗ್ಲಿ ನೀನು ಮಾತನಾಡುವುದು ನಿಗಾದರೂ ಅರ್ಥವಾಗುತ್ತಿದೆಯೇ ಎಂದು ದಿವ್ಯಾ ಪ್ರಶ್ನಿಸುತ್ತಾರೆ. ಆಗ ಶಮಂತ್, ನಾನ್ ಹೇಳಿದ್ದು ಏನಂದ್ರೆ ಒಬ್ಬಬ್ಬರು ಇನ್ನೊಬ್ಬರ ಬಳಿ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ನನಗೆ ಆ ರೀತಿಯ ವ್ಯಕ್ತಿ ಯಾರೂ ಇಲ್ಲ ಎನ್ನುತ್ತಾರೆ.

    ನೀನು ಯಾವ ರೀತಿ ಹೇಳುತ್ತಿದ್ದೀಯಾ ಅದನ್ ಬಿಡು, ನಾನು ಅವತ್ತು ಹೇಳಿದ್ದೆ, ಈಗಲೂ ಹೇಳುತ್ತೇನೆ. ಏನಾದರೂ ಬೇಜಾರಾದರೆ, ಹೇಳಿಕೊಳ್ಳಬೇಕು ಅನ್ನಿಸಿದರೆ ಹೇಳಿಕೊಳ್ಳಬಹುದು ಎನ್ನುತ್ತಾರೆ. ಆಗ ಶಮಂತ್ ನಾನು ಅದಕ್ಕೆ ಇಲ್ಲಿ ಕುಳಿತಿರುವುದು ಇಷ್ಟೊತ್ತಾದರೂ ಎನ್ನುತ್ತಾರೆ.

  • ಇಬ್ಬರು ಜೊತೆಗಿದ್ದರೆ ಸಂಬಂಧ ಇದೆಯಂತಲ್ಲ ಅಂದಿದ್ಯಾಕೆ ವೈಷ್ಣವಿ..?

    ಇಬ್ಬರು ಜೊತೆಗಿದ್ದರೆ ಸಂಬಂಧ ಇದೆಯಂತಲ್ಲ ಅಂದಿದ್ಯಾಕೆ ವೈಷ್ಣವಿ..?

    ದಿನಗಳು ಕಳೆಯುತ್ತಿದ್ದಂತೆ ದೊಡ್ಮನೆಯಲ್ಲಿ ಗುಂಪುಗಾರಿಕೆ ಕುರಿತು ಚರ್ಚೆ ಶುರುವಾಗಿದ್ದು, ಇದಕ್ಕೆ ವೈಷ್ಣವಿ ಮನೆಯಲ್ಲಿ ಗುಂಪುಗಾರಿಕೆ ಇಲ್ಲ ಎಂದೇ ಹೇಳಿದ್ದಾರೆ. ಅಷ್ಟಕ್ಕೂ ಯಾವ ಆಧಾರದ ಮೇಲೆ ವೈಷ್ಣವಿ ಹಾಗೆ ಹೇಳಿದ್ರು ಅಂತೀರಾ ಈ ವೀಡಿಯೋ ನೋಡಿ.

    ಗುಂಪುಗಾರಿಕೆ ಕುರಿತು ಬಿಗ್ ಮನೆಯಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಈ ಕುರಿತ ಚರ್ಚೆಗೆ ಪ್ರಶಾಂತ್ ಸಂಬರಗಿ ಅವರು ಆರಂಭ ಹಾಡಿದ್ದು, ಕಿಚನ್‍ನಲ್ಲಿ ವೈಷ್ಣವಿ, ಅರವಿಂದ್ ಹಾಗೂ ಚಕ್ರವರ್ತಿ ಅವರು ಇರುವಾಗ ಮಾತನಾಡಿದ್ದಾರೆ. ಇದಕ್ಕೆ ವೈಷ್ಣವಿ ತಕ್ಕ ಉತ್ತರವನ್ನೇ ನೀಡಿದ್ದು, ಆ ಮೆಂಟಾಲಿಟಿಯಿಂದ ಹೊರಗೆ ಬನ್ನಿ ಎಂದಿದ್ದಾರೆ.

    ಕಿಚನ್‍ನಲ್ಲಿ ಇರುವಾಗ ಅರವಿಂದ್ ನೆಕ್ಸ್ಟ್ ಫೈಟ್ ನಿಮ್ಮ ಜೊತೆಗೆ ಎಂದು ವೈಷ್ಣವಿಗೆ ಇದಕ್ಕೆ ಉತ್ತರಿಸಿದ ವೈಷ್ಣವಿ ನನ್ನ ಪ್ರಕಾರ ಅದು ಅವರ ಟೈಮ್ ಹಾಗೂ ಎನರ್ಜಿ ವೇಸ್ಟ್ ಎಂದು ಹೇಳಿದ್ದಾರೆ. ಆಗ ಅರವಿಂದ್ ವೈಷ್ಣವಿ ಕಿಚನ್ ರಾಜಕೀಯ ಮಾಡುತ್ತಿದ್ದಾರೆ ಎಂದು ಅರವಿಂದ್ ಹೇಳುತ್ತಾರೆ. ಆಗ ಚಕ್ರವರ್ತಿ ಅವರು ನನ್ನೇ ಚೈಲ್ಡ್ ಅಂತೀರಾ ನೀವು ಎಂದು ಶುರು ಮಾಡುತ್ತಾನೆ ಎಂದು ಪ್ರಶಾಂತ್ ಸಂಬರಗಿ ಇರುವಾಗಲೇ ವೈಷ್ಣವಿಗೆ ಹೇಳುತ್ತಾರೆ.

    ಹೀಗೆ ಮಾತನಾಡುವಾಗ ಮಧ್ಯೆ ಪ್ರವೇಶಿಸಿದ ಪ್ರಶಾಂತ್ ಸಂಬರಗಿ, ಅಧರ್ಮ, ಗುಂಪುಗಾರಿಕೆ ಹೆಚ್ಚಾಗುತ್ತಿದೆ ಎನ್ನುತ್ತಾರೆ. ಆಗ ವೈಷ್ಣವಿ ನಾನು ಈಗಲೇ ತೋರಿಸುತ್ತೇನೆ ನಿಮಗೆ ಗುಂಪುಗಾರಿಕೆ ಇಲ್ಲ ಅಂತ ಎನ್ನುತ್ತಾರೆ. ಆಗ ಚಕ್ರವರ್ತಿ ಯಾವುದರಲ್ಲಿ ಎಂದು ಹೇಳುವ ಮೂಲಕ ನಗೆ ಚಟಾಕಿ ಹಾರಿಸುತ್ತಾರೆ. ಆಗ ಎಲ್ಲರೂ ಭರ್ಜರಿ ನಗುತ್ತಾರೆ.

    ಆಗ ವೈಷ್ಣವಿ ಗುಂಪುಗಾರಿಕೆ ಬಗ್ಗೆ ವಿವರವಾಗಿ ಹೇಳುತ್ತಾ, ಇಬ್ಬರು ಮಾತನಾಡುತ್ತಿದ್ದರೆ ಅದು ಗುಂಪು ಅಲ್ಲ, ಇಬ್ಬರು ಮಾತನಾಡುತ್ತಿದ್ದರೆ ಅವರಲ್ಲಿ ಸಂಬಂಧ ಇದೆ ಅಂತಲ್ಲ. ಮನೆ ಎಲ್ಲ ಬಿಟ್ಟು ಬಂದಿದ್ದೇವೆ, ಒಂದು ಕಂಫರ್ಟ್ ಝೋನ್ ಕಂಡುಕೊಳ್ಳುವುದು ತಪ್ಪಲ್ಲ ಎಂದಿದ್ದಾರೆ.

    ಆಗ ಚಕ್ರವರ್ತಿಯವರು ಮಧ್ಯ ಪ್ರವೇಶಿಸಿ ನನಗೆ ಹೇಳೋ ಅದೇನು ಎಂದು ಸಂಬರಗಿಗೆ ಕೇಳುತ್ತಾರೆ, ಆಗ ಹೇಳುತ್ತೇನೆ ಬಾ ವೇದಿಕೆ ಇದಕ್ಕಲ್ಲ. ಅದಕ್ಕೊಂದು ಪ್ರೈವೇಟ್ ವೇದಿಕೆ ಇದೆ ಬಾ ಎಂದು ಕರೆದುಕೊಂಡು ಹೊರಗೆ ಹೋಗುತ್ತಾರೆ.

  • ಅಯ್ಯಯ್ಯೋ ನಾನು ತಿಳ್ಕೊಂಡು ನಿಧಿ ಸುಬ್ಬಯ್ಯ ಅಲ್ಲ ಅವ್ರು: ಲ್ಯಾಗ್ ಮಂಜು

    ಅಯ್ಯಯ್ಯೋ ನಾನು ತಿಳ್ಕೊಂಡು ನಿಧಿ ಸುಬ್ಬಯ್ಯ ಅಲ್ಲ ಅವ್ರು: ಲ್ಯಾಗ್ ಮಂಜು

    – ಸುದೀಪ್ ಮುಂದೆ ಮಂಜು ಕಂಪ್ಲೇಂಟ್
    – ನಿಧಿ ಸುಬ್ಬಯ್ಯ ಕೊಳಕಾಗಿ ಬೈತಾರೆ ಸರ್!

    ಬೆಂಗಳೂರು: ಬಿಗ್‍ಬಾಸ್ ಸೀಸನ್ ಎಂಟರ ಆವೃತ್ತಿಯ ಮೊದಲ ವೀಕೆಂಡ್ ನಲ್ಲಿ ಒಂಟಿ ಮನೆಯ ಮಂದಿ ತಮ್ಮ ಅನುಭವಗಳನ್ನ ಅಭಿನಯ ಚಕ್ರವರ್ತಿ ಸುದೀಪ್ ಜೊತೆ ಹಂಚಿಕೊಂಡರು. ಮೊದಲ ವಾರ ಯಶಸ್ವಿಯಾಗಿ ಪೂರೈಸಿದ ಸೆಲೆಬ್ರಿಟಿಗಳ ತಮ್ಮಲ್ಲಾದ ಸಣ್ಣ ಪುಟ್ಟ ಗೊಂದಲಗಳನ್ನ ಪೈಲ್ವಾನ ಮುಂದೆ ಹೇಳಿ ಬಗೆಹರಿಸಿಕೊಂಡರು. ಇನ್ನು ಸುದೀಪ್ ಸಹ ಎಂದಿನಂತೆ ಎಲ್ಲರ ಜೊತೆ ಫ್ರೆಂಡ್ಲಿಯಾಗಿ ಮಾತನಾಡುತ್ತಾ ತಮಾಷೆಗೆ ಕೆಲವರ ಕಾಲೆಳೆದು ಟಿವಿ ಮುಂದೆ ಕುಳಿತ ವೀಕ್ಷಕರನ್ನ ನೆಗೆಗಡಿಲಿನಲ್ಲಿ ತೇಲಿಸಿದರು. ಸುದೀಪ್ ಜೊತೆ ಮಾತನಾಡುತ್ತಾ ಕಾಮಿಡಿ ಆ್ಯಕ್ಟರ್ ಪಾವಗಡದ ಮಂಜು, ನಾನು ತಿಳಿದ ನಿಧಿ ಸುಬ್ಬಯ್ಯ ಇವರು ಅಲ್ಲವೇ ಅಲ್ಲ ಎಂದು ಹೇಳಿದರು.

    ವೀಕೆಂಡ್‍ನಲ್ಲಿ ಸುದೀಪ್ ಮುಂದೆ ಮಂಜು ಹೇಳಿದ ಕಂಪ್ಲೇಂಟ್ ಇದು. ನಿಧಿ ಸುಬ್ಬಯ್ಯ ನಾವ್ ತಿಳ್ಕೊಂಡೆ ಇಲ್ಲ ಸರ್.. ತುಂಬಾನೇ ಕೆಟ್ಟದಾಗಿ ಕೊಳಕಾಗಿ ಬೈತಾರೆ ಸರ್. ಚುಚ್ಚಿ ಬಿಡ್ತೀನಿ, ಸಾಯಿಸಿ ಬಿಡ್ತೀನಿ ಅಂತ ಪಕ್ಕದಲ್ಲಿ ಇರೋರಿಗೂ ಗೊತ್ತಾಗದಂತೆ ಬೈತಾರೆ. ಏನೇನು ಮಾತಾಡ್ತಾರೆ ಅವರು. ನನ್ನ ದುರಾದೃಷ್ಟಕ್ಕೆ ನನಗೊಬ್ಬನಿಗೆ ಕೇಳಿಸುತ್ತೆ. ಯಾರು ಹೇಳಿದ್ರೂ ನಂಬಲ್ಲ ಸರ್ ಅಂತ ಸುದೀಪ್ ಮುಂದೆ ಬಡ ಬಡ ಅಂತ ವರದಿ ಒಪ್ಪಿಸಿದ್ರು ಮಂಜು.

    ಅರೇ ಇಷ್ಟಕ್ಕೂ ಮಂಜು ಯಾಕೆ ಹೀಗೆ ಹೇಳಿದ್ರೂ ಅಂತ ನೀವು ಯೋಚಿಸ್ತಿದ್ದಾರೆ ಅಲ್ವಾ.. ನಾವ್ ಹೇಳ್ತೀವಿ ನೋಡಿ. ವೀಕೆಂಡ್ ಚರ್ಚೆ ವೇಳೆ ಸುದೀಪ್, ಮನೆಯಲ್ಲಿರೋರ ಪಾಸಿಟಿವ್ ಮತ್ತು ನೆಗೆಟಿವ್ ಗುಣ ಹೇಳುವಂತೆ ಮಂಜುಗೆ ಹೇಳಿದ್ರು. ಮೊದಲು ದಿವ್ಯಾ ಹೆಸರು ಹೇಳಿದಾಗ ಎಲ್ಲರ ಜೊತೆ ಬೆರಿತಾಳೆ ಅಂತ ಅಂದುಕೊಳ್ಳೋ ರೀತಿ ಇರ್ತಾಳೆ. ಆದ್ರೆ ಹಾಗೆ ಇರಲ್ಲ. ದಿವ್ಯಾ ತುಂಬಾ ಕನ್ನಿಂಗ್ ಇರ್ತಾರೆ ಹಾಗಾಗಿ ಅವರ ಹತ್ರ ಹುಷಾರಾಗಿ ಇರಬೇಕು ಅಂತ ಮಂಜು ಹೇಳಿದಾಗ ಇಡೀ ಮನೆಯ ಮಂದಿಯೆಲ್ಲ ನಗೆಗಡಿಲಿನಲ್ಲಿ ತೇಲಾಡಿದ್ರು. ಅದೇ ರೀತಿ ನಿಧಿ ಸುಬ್ಬಯ್ಯ ಹೆಸ್ರು ಹೇಳಿದಾಗಲೂ ಮಂಜು ಫನ್ನಿಯಾಗಿ ಆನ್ಸರ್ ಮಾಡಿ ಎಲ್ಲರನ್ನ ನಗಿಸಿದ್ರು.

  • 7 ಬಾರಿ ಆಫರ್ ತಿರಸ್ಕರಿಸಿದ್ದ ಶುಭಾ ಬಿಗ್ ಮನೆಗೆ ಹೋಗಿದ್ಯಾಕೆ?

    7 ಬಾರಿ ಆಫರ್ ತಿರಸ್ಕರಿಸಿದ್ದ ಶುಭಾ ಬಿಗ್ ಮನೆಗೆ ಹೋಗಿದ್ಯಾಕೆ?

    ಬೆಂಗಳೂರು: ಎಂಟನೇ ಆವೃತ್ತಿಯ ಕನ್ನಡ ಬಿಗ್‍ಬಾಸ್ ಭಾನುವಾರ ಆರಂಭವಾಗಿದ್ದು, ಒಂಟಿ ಮನೆ ಸೇರಿರುವ ಸೆಲೆಬ್ರಿಟಿಗಳು ಏನ್ ಮಾಡ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. ಮೊಗ್ಗಿನ ಮನಸ್ಸಿನ ಚೆಲುವೆ ಶುಭಾ ಪೂಂಜಾ ಈ ಬಾರಿ ಬಿಗ್‍ಬಾಸ್ ಸ್ಪರ್ಧಿ. ಈ ಹಿಂದೆ ಏಳು ಬಾರಿ ಆಫರ್ ಬಂದಿದ್ದರೂ ಮನೆಗೆ ಹೋಗಲು ಹಿಂದೇಟು ಹಾಕಿದ್ದ ಶುಭಾ ವಿಶೇಷ ವ್ಯಕ್ತಿಯ ಸಲಹೆ ಮೇರೆಗೆ ಬಿಗ್‍ಬಾಸ್‍ಗೆ ಬಂದಿರೋದಾಗಿ ಸುದೀಪ್ ಮುಂದೆ ಹೇಳಿದ್ದಾರೆ.

    ಬಿಗ್‍ಬಾಸ್ ವೇದಿಕೆ ಮೇಲೆ ಸುದೀಪ್ ಈ ಹಿಂದೆ ಆಫರ್ ರಿಜೆಕ್ಟ್ ಮಾಡಿದ್ದ ನೀವು ಈ ಬಾರಿ ಒಪ್ಪಿಕೊಂಡಿದ್ಯಾಕೆ ಅಂತ ಕೇಳಿದರು. ನೀನು ಸದಾ ಒಂದೇ ರೀತಿಯ ಪಾತ್ರಗಳನ್ನ ಮಾಡೋದೇಕೆ?. ಹೊಸತನವನ್ನ ಬರಮಾಡಿಕೊಳ್ಳಬೇಕು. ಕಂಫರ್ಟ್ ಝೋನ್ ನಿಂದ ಹೊರ ಬರಬೇಕು. ಇವಾಗ ಬಿಗ್‍ಬಾಸ್ ಹೋಗಿಲ್ಲ ಅಂದ್ರೆ ಹೇಗೆ? ಮದುವೆ ಆದ್ಮೇಲೆ ಸಾಧ್ಯ ಆಗಲ್ಲ. ಹಾಗಾಗಿ ಬಿಗ್‍ಬಾಸ್‍ಗೆ ಹೋಗುವಂತೆ ಭಾವಿ ಪತಿ ಸುಮಂತ್ ಬಿಲ್ಲವ ಹೇಳಿದ್ದರಿಂದ ಹೋಗ್ತಿದ್ದೀನಿ ಅಂತ ಶುಭಾ ಹೇಳಿದರು. ಇದನ್ನೂ ಓದಿ: ಪೊರಕೆಯಲ್ಲಿ ಏಟು ತಿನ್ನೋದು ಅಭ್ಯಾಸ ಆಗಿತ್ತು: ವೈಷ್ಣವಿ

    ನನ್ನ ಎಲ್ಲ ಕಾಂಟರ್‍ವರ್ಸಿಗಳ ಬಗ್ಗೆ ಹೇಳಿ ಯಾರೋ ಜನ ಜಡ್ಜ್ ಮಾಡಿದ್ರೆ ಬೇಜಾರು ಆಗುತ್ತೆ. ಆದ್ರೆ ಈ ಎಲ್ಲದರಿಂದಲೂ ನಾನು ಪಾಠ ಕಲಿತಿದ್ದೇನೆ. ನನಗೆ ಮೂಗಿನ ಮೇಲೆ ಕೋಪ. ಬಹಳ ವರ್ಷಗಳ ನಂತರ ನಾನೇ ಚಾಲೆಂಜ್ ತೆಗೆದುಕೊಂಡು ಬಿಗ್‍ಬಾಸ್ ಮನೆಗೆ ಹೋಗ್ತಿದ್ದೇನೆ ಎಂದರು. ಇದನ್ನೂ ಓದಿ: ವಾರಕ್ಕೆ 10ರೂ.ನಂತೆ ಇನ್‍ಸ್ಟಾಲ್ಮೆಂಟ್‍ನಲ್ಲಿ ಸೀರೆ ಖರೀದಿಸ್ತಿದ್ದ ಅಜ್ಜಮ್ಮ!

    ನಟಿ ನಿಧಿ ಸುಬ್ಬಯ್ಯ, ಹಿರಿಯ ನಟ ಶಂಕರ್ ಅಶ್ವಥ್, ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ, ಟಿಕ್‍ಟಾಕ್ ಸ್ಟಾರ್ ಧನುಶ್ರೀ, ಉತ್ತರ ಕನ್ನಡದ ಹಾಡುಗಾರ ವಿಶ್ವನಾಥ್, ಬೈಕ್ ರೈಡರ್ ಅರವಿಂದ್ ಪ್ರವೇಶಿಸಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಮೋಟಿವೇಷನ್ ಮಾತುಗಳನ್ನಾಡುವ ಬ್ರೊ ಗೌಡ, ಬ್ರಹ್ಮಗಂಟು ಧಾರವಾಹಿಯ ನಟಿ ಗೀತಾ ಭಾರತಿ ಭಟ್, ಹಾಸ್ಯ ಕಲಾವಿದ ಮಂಜುಪಾವಗಡ, ಪುಟ್ಟಗೌರಿ ಮದುವೆಯ ಅಜ್ಜಮ್ಮ ಚಂದ್ರಕಲಾ ಮೋಹನ್, ನಟಿ ದಿವ್ಯ, ಯೂಟ್ಯೂಬ್ ನಲ್ಲಿ ಕಾಮಿಡಿ ವಿಡಿಯೋ ಮಾಡುವ ರಘು, ಸ್ಯಾಂಡಲ್ ವುಡ್ ಡ್ರಗ್ಸ್ ಆರೋಪ ಮಾಡಿದ್ದ ಪ್ರಶಾಂತ್ ಸಂಬರ್ಗಿ, ಸೀರಿಯಲ್ ನಟಿ ದಿವ್ಯ ಉರುಡುಗ, ನಟ ರಾಜೀವ್, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಿರ್ಮಿಲಾ ಚನ್ನಪ್ಪ ಎಂಟ್ರಿ ಕೊಟ್ಟಿದ್ದಾರೆ.

    ಕನ್ನಡ ಬಿಗ್‍ಬಾಸ್ ಪ್ರಾರಂಭವಾಗುತ್ತೆ ಎನ್ನುವ ಸುದ್ದಿಯನ್ನು ಕೇಳಿದ ಬಿಗ್‍ಬಾಸ್ ಅಭಿಮಾನಿಗಳು ನಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಒಂಟಿಮನೆಗೆ ಯಾರು ಹೋಗುತ್ತಾರೆ ಎಂದು ಚರ್ಚೆ ಮಾಡುತ್ತಿದ್ದರು.