Tag: Bigg boss-8

  • ಪುಕ್ಸಟ್ಟೆ ಸಲಹೆಗೆ ದಿವ್ಯಾ ಸುರೇಶ್ ಗರಂ

    ಪುಕ್ಸಟ್ಟೆ ಸಲಹೆಗೆ ದಿವ್ಯಾ ಸುರೇಶ್ ಗರಂ

    ಬಿಗ್‍ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿ ಎರಡು ದಿನ ಕಳೆದಿದೆ. ಆಗಲೇ ಮನೆಯಲ್ಲಿ ಪ್ರತಿಸ್ಪರ್ಧಿಗಳ ನಡುವೆ ಜಗಳ, ವಾದ-ವಿವಾದ ಹಾಗೂ ಅಸಮಾಧಾನ ಕಾಣಿಸಿಕೊಳ್ಳುತ್ತಿದೆ. ದಿವ್ಯಾ ಸುರೇಶ್ ಪುಕ್ಸಟ್ಟೆ ಸಲಹೆ ಕೊಟ್ಟಿರುವ ಸಂಬರಗಿಯನ್ನು ತರಾಟೆಗೆ ತೆಗೆದೊಕೊಂಡಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ಒಂದು ಕಡೆ ತಳ್ಳು ಬಂಡಿ ಟಾಸ್ಕ್ ಮತ್ತೊಂದು ಕಡೆ ಕುರ್ಚಿ ಪಾಲಿಟಿಕ್ಸ್ ಟಾಸ್ಕ್ ಆರಂಭವಾಗಿ 24 ಗಂಟೆ ಕಳೆದಿದೆ. ಈ ಆಟ ಆಡುವ ವೇಳೆ ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಸುರೇಶ್ ಅವರ ನಡುವೆ ಮಾತುಕತೆ ಆರಂಭವಾಗಿತ್ತು. ಈ ಮಾತು ಕಥೆ ದೊಡ್ಡ ಜಗಳವಾಗಿದೆ. ಇದನ್ನೂ ಓದಿ: ಅನುಷ್ಕಾ ಶರ್ಮಾಗೆ ಕಾಡುತ್ತಿದೆ ಕೂದಲುದುರುವ ಸಮಸ್ಯೆ

    ಪ್ರಶಾಂತ್ ಸಂಬರಗಿ ಮೊದಲ ಇನ್ನಿಂಗ್ಸ್ ಮುಗಿಸಿ ಮನೆಗೆ ಹೋದಾಗ ನಿಮ್ಮ ಅಮ್ಮ ಖುಷಿಯಾಗಿರಬೇಕಲ್ಲವಾ ಎಂದು ದಿವ್ಯಾ ಸುರೇಶ್ ಅವರ ಬಳಿ ಕೇಳುತ್ತಾರೆ. ಜೊತೆಗೆ ನಿಮ್ಮ ಅಮ್ಮ ನನ್ನ ಬಗ್ಗೆ ಏನು ಹೇಳಿದರು ಅಂತ ಮಾತು ಆರಂಭಿಸಿದ ಪ್ರಶಾಂತ್ ಸಂಬರಗಿ, ನಾನು ನಿಮ್ಮ ಬಗ್ಗೆ ಈ ಬಿಗ್‍ಬಾಸ್ ಮನೆಯಲ್ಲಿ ಒಂದು ಸಲವೂ ನೆಗೆಟಿವ್ ಆಗಿ ಮಾತನಾಡಿಲ್ಲ ಎನ್ನುತ್ತಾರೆ.

    ನನಗೆ ಸುಮಾರು ಜನ ಹೇಳಿದ್ದಾರೆ. ನೀವು ಪ್ರತಿ ವಾರ ನನ್ನನ್ನು ಟಾರ್ಗೆಟ್ ಮಾಡುತ್ತಿದ್ರಿ ಅಂತ. ನಿಮ್ಮ ಜತೆ ಶಮಂತ್ ಹಾಗೂ ಚಕ್ರವರ್ತಿ ಚಂದ್ರಚೂಡ್  ಅವರೂ ಇರುತ್ತಿದ್ದರು ಅಂತ ಹೇಳುತ್ತಾರೆ ಎಂದು ದಿವ್ಯಾ ಸುರೇಶ್ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಂಬರಗಿ ಅದು ಕೇವಲ ನಾಮಿನೇಶನ್ ಸಮಯದಲ್ಲಿ ಮಾತ್ರ ಎಂದಿದ್ದಾರೆ.

    ಮಾತು ಮುಂದುವರೆಸಿದ ದಿವ್ಯಾ ಸುರೇಶ್, ನೀವು ಪ್ರತಿ ಸಲ ಬಂದು ನನ್ನ ಬಳಿ ನಾನು ಮಂಜು ಜೊತೆ ಇದ್ದಿದ್ದು ತಪ್ಪು, ನೀನು ಮಂಜು ಬಾಲದಂತೆ, ಹಾಗೆ-ಹೀಗೆ ಎಂದಾಗ ನಾನು ನನ್ನ ಸ್ಟ್ಯಾಂಡ್ ತೆಗೆದುಕೊಳ್ಳಲಿಲ್ಲ. ಅದು ನಾನು ಮಾಡಿದ ತಪ್ಪು. ಅದರಿಂದಲೇ ವೀಕ್ಷಕರ ಎದುರು ನಾನು ತಪ್ಪಿತಸ್ಥೆಯಂತೆ ಕಾಣಿಸಿಕೊಂಡಿದ್ದೀನಿ ಎಂದು ಖಾರವಾಗಿ ಉತ್ತರಿಸಿದ್ದಾರೆ. ಅದಕ್ಕೆ ಪ್ರಶಾಂತ್ ಪುಕ್ಸಟ್ಟೆ ಸಲಹೆ ಕೊಟ್ಟಿದ್ದು ನನ್ನ ತಪ್ಪು ಎಂದಿದ್ದಾರೆ. ಹೀಗೆ ಇಬ್ಬರ ನಡುವೆ ಕೆಲವು ಸಮಯ ಮಾತಿನ ಚಕಮಕಿ ನಡೆದಿದೆ.

    ತಳ್ಳು ಬಂಡಿ ಟಾಸ್ಕ್ ಆಡುವಾಗ ದಿವ್ಯಾ ಸುರೇಶ್ ತಮ್ಮ ಪಾದಕ್ಕೆ ಗಾಯ ಮಾಡಿಕೊಂಡಿದ್ದು, ಅಲ್ಲೇ ಚಿಕಿತ್ಸೆ ನೀಡಲಾಗಿದೆ. ಮನೆಯಲ್ಲಿ ಹೊಸ ಹೊಸ ಟಾಸ್ಕ್​ಗಳ ಮೂಲಕ ಸ್ಪರ್ಧಿಗಳಿಗೆ ಸವಾಲೆಸೆಯಲಾಗುತ್ತಿದೆ. ಸ್ಪರ್ಧಿಗಳು ಪೈಪೋಟಿಗೆ ಬಿದ್ದು ಟಾಸ್ಕ್​ಗಳ ಉತ್ತಮ ಪ್ರದರ್ಶನ ನೀಡಲು ಮುಂದಾಗುತ್ತಿದ್ದಾರೆ.

  • ನನ್ನ ಜೀವನದಲ್ಲಿ ನೀನು ಸ್ಪೆಷಲ್, ಬೇರೆ ಸ್ಥಾನವನ್ನೇ ಇಟ್ಟಿದ್ದೇನೆ: ದಿವ್ಯಾ ಸುರೇಶ್

    ನನ್ನ ಜೀವನದಲ್ಲಿ ನೀನು ಸ್ಪೆಷಲ್, ಬೇರೆ ಸ್ಥಾನವನ್ನೇ ಇಟ್ಟಿದ್ದೇನೆ: ದಿವ್ಯಾ ಸುರೇಶ್

    ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕೊನೆಯ ದಿನವನ್ನು ತುಂಬಾ ಭಾವನಾತ್ಮಕವಾಗಿ ಕಳೆದಿದ್ದು, ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಜೋಡಿ ಸಹ ಪರಸ್ಪರ ಮಾತನಾಡಿಕೊಂಡಿದ್ದಾರೆ. ನನ್ನ ಜೀವನದಲ್ಲಿ ನೀನು ಸ್ಪೆಷಲ್, ಬೇರೆ ಸ್ಥಾನವನ್ನೇ ಇಟ್ಟಿದ್ದೇನೆ ಎಂದೆಲ್ಲ ಹೇಳಿ ದಿವ್ಯಾ ಭಾವುಕರಾಗಿದ್ದಾರೆ.

    ಗಾರ್ಡನ್ ಏರಿಯಾದಲ್ಲಿ ಕುಳಿತು ಇಬ್ಬರೂ ಮಾತನಾಡಿದ್ದು, ಲಾಕ್‍ಡೌನ್ ಆದ್ಮೇಲೆ ಸಿಗೋಣ, ಮನೆಗೆ ಬಾ, ಮನೆಯವರನ್ನೆಲ್ಲ ಪರಿಚಯ ಮಾಡಿಸುತ್ತೇನೆ, ಒಳ್ಳೆಯ ಸ್ನೇಹಿತರಾಗಿರೋಣ. ಮದುವೆಗೆಲ್ಲ ಕರಿ, ನಿನ್ನಂತಹ ಒಬ್ಬ ದಡ್ಡ ಶಿಖಾಮಣಿ ನನಗೆ ಫ್ರೆಂಡ್ ಆಗಿದ್ದಾನೆ ಎಂದು ನನಗೆ ಖುಷಿಯಾಗಿದೆ ಎಂದು ದಿವ್ಯಾ ಸುರೇಶ್ ಹೇಳುತ್ತಾರೆ. ಆಗ ಮಂಜು ಪಾವಗಡ ದಡ್ಡ ಅಂದುಬಿಟ್ಟಿಯಲ್ಲಾ ಕೊನೆಗೂ, ಎನ್ನುತ್ತಾರೆ. ದಿವ್ಯಾ ಕೋತಿ ಎಂದು ರೇಗಿಸುತ್ತಾರೆ.

    ನೀನು ಇಷ್ಟು ದಿನ ನನ್ನನ್ನು ಸಹಿಸಿಕೊಂಡಿದ್ದಕ್ಕೆ ಥ್ಯಾಂಕ್ಯೂ, ಕೆಲವೊಂದು ಸಲ ಬೇರೆಯವರ ಮೇಲಿನ ಸಿಟ್ಟನ್ನು ನಿನ್ನ ಮೇಲೆ ಹಾಕುತ್ತಿದ್ದೆ. ನೀನ್ ಸ್ಪೆಷಲ್ ನನ್ನ ಜೀವನದಲ್ಲಿ, ನಿನಗೆ ಬೇರೆ ಸ್ಥಾನನೇ ಇಟ್ಟಿದ್ದೇನೆ. ಯಾವುದೇ ಸಂದರ್ಭದಲ್ಲಿ, ಯಾವುದೇ ದಿನ ಒಂದು ಕಾಲ್ ಮಾಡು ನಾನು ಇರುತ್ತೇನೆ, ಥ್ಯಾಂಕ್ಯೂ ಸೋ ಮಚ್ ಎಂದು ದಿವ್ಯಾ ಮಂಜುಗೆ ಹೇಳಿ ಭಾವುಕರಾಗಿದ್ದಾರೆ. ಆಗ ಮಂಜು ಸಹ ಮುಖ ಸಣ್ಣಗೆ ಮಾಡಿದ್ದಾರೆ.

    ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿ ಬಳಿಕ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಜೋಡಿ ಬಿಗ್ ಬಾಸ್ ಮನೆಯಲ್ಲಿ ಭಾರೀ ಗಮನ ಸೆಳೆದಿತ್ತು. ಇಬ್ಬರೂ ಒಟ್ಟಿಗೆ ಇರುತ್ತಿದ್ದರು. ಪರಸ್ಪರ ಕಷ್ಟ, ಸುಖಗಳನ್ನು ಹಂಚಿಕೊಳ್ಳುತ್ತಿದ್ದರು. ಯಾವುದೇ ಜಗಳ, ಖುಷಿ ವಿಚಾರ ಇದ್ದರೂ ಇಬ್ಬರೂ ಒಟ್ಟಿಗೇ ಕೂತು ಮಾತನಾಡುತ್ತಿದ್ದರು. ಹೀಗಾಗಿ ಇವರಿಬ್ಬರ ಕೆಮಿಸ್ಟ್ರಿ ಸಹ ಬಿಗ್ ಮನೆಯಲ್ಲಿ ಗಮನ ಸೆಳೆದಿತ್ತು. ಹೀಗಾಗಿ ಇದೀಗ ಮನೆಯಿಂದ ಹೊರ ಹೋಗುವ ಮುನ್ನ ಇಬ್ಬರೂ ಭಾವುಕರಾಗಿದ್ದಾರೆ. ದಿವ್ಯಾ ಸುರೇಶ್ ಮಂಜು ಅವರನ್ನು ಮನೆಗೆ ಕರೆದಿದ್ದಾರೆ.

    ದಿವ್ಯಾ ಸುರೇಶ್ ಟಾಸ್ಕ್ ಸೇರಿದಂತೆ ಮನೆಯಲ್ಲಿ ಏನೇ ತಪ್ಪು ಮಾಡಿದರೂ ಮಂಜು ಸಮಾಧಾನ ಪಡಿಸುತ್ತಿದ್ದರು. ಟಾಸ್ಕ್ ಸಂದರ್ಭದಲ್ಲಿ ದಿವ್ಯಾ ಬಿಸ್ಕೆಟ್ ತಿಂದಿದ್ದಕ್ಕೆ ಬಿಗ್ ಬಾಸ್ ಶಿಕ್ಷೆ ನೀಡಿದ್ದರು. ದಿವ್ಯಾ ಜೊತೆಗೆ ಆಟದ ಉಸ್ತುವಾರಿ ಹೊತ್ತಿದ್ದ ಮಂಜು ಹಾಗೂ ಕ್ಯಾಪ್ಟನ್ ಪಾಯಿಂಟ್ಸ್ ಗಳನ್ನು ಸಹ ಕಡಿತಗೊಳಿಸಿದ್ದರು. ಈ ವೇಳೆ ದಿವ್ಯಾ ಕಣ್ಣೀರು ಹಾಕಿದ್ದರು. ಆಗಲೂ ಮಂಜು ದಿವ್ಯಾಗೆ ಸಮಾಧಾನ ಹೇಳಿದ್ದರು.

  • ಒಬ್ಬಳನ್ನೇ ಬಿಟ್ಟು ಸ್ಪರ್ಧಿಗಳನ್ನು ಮನೆಗೆ ಕಳಿಸಿದ ಬಿಗ್‍ಬಾಸ್- ಶುಭಾ ಕಂಗಾಲು

    ಒಬ್ಬಳನ್ನೇ ಬಿಟ್ಟು ಸ್ಪರ್ಧಿಗಳನ್ನು ಮನೆಗೆ ಕಳಿಸಿದ ಬಿಗ್‍ಬಾಸ್- ಶುಭಾ ಕಂಗಾಲು

    ಬಿಗ್ ಬಾಸ್ ನಿರ್ಧಾರದಿಂದಾಗಿ ಶುಭಾ ಪೂಂಜಾಗೆ ದಿಗ್ಭ್ರಮೆಯಾಗಿದ್ದು, ನಾನೊಬ್ಳೆ ಇರೋದು ಹೇಗೆ ಎಂದು ಕೆಲವು ಕಾಲ ಚಿಂತೆಗೀಡಾಗಿದ್ದರು. ಶುಭಾ ಒಬ್ಬರನ್ನೇ ಬಿಟ್ಟು ಮನೆ ಮಂದಿ ಎಲ್ಲ ಹೊರಗಡೆ ಹೋಗಿದ್ದಾರೆ.

    ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ಮೊಟಕುಗೊಳ್ಳುತ್ತಿರುವ ಹಿನ್ನೆಲೆ ಮನೆಯ ಮಂದಿ ಎಲ್ಲ ಇಂದು ವಿದಾಯ ಹೇಳಿದ್ದಾರೆ. ಆದರೆ ಶುಭಾ ಪೂಂಜಾ ಅವರನ್ನು ಮಾತ್ರ ಮನೆಯಲ್ಲಿ ಇರಿಸಿಕೊಳ್ಳುವ ಮೂಲಕ ಬಿಗ್ ಬಾಸ್ ಶಾಕ್ ನೀಡಿದರು. ಮನೆಗೆ ಮೊದಲು ಪ್ರವೇಶ ಪಡೆದವರನ್ನು ಕೊನೆಗೆ ಕಳುಹಿಸುವುದು ಹಾಗೂ ಕೊನೆಗೆ ಬಂದವರನ್ನು ಮೊದಲು ಮನೆಯಿಂದ ಆಚೆ ಹೋಗುವಂತೆ ಬಿಗ್ ಬಾಸ್ ಹೇಳಿದರು. ಅದರಂತೆ ಒಬ್ಬೊಬ್ಬರಾಗಿ ಮನೆಗೆ ವಿದಾಯ ಹೇಳಿದರು. ಆದರೆ ಕೊನೆಗೆ ಶುಭಾ ಪೂಂಜಾ ಮಾತ್ರ ಉಳಿದರು.

    ಈ ವೇಳೆ ಸಹ ಶುಭಾ ಪೂಂಜಾಗೆ ಬಿಗ್ ಬಾಸ್ ಶಾಕ್ ನೀಡಿದರು. ಎಲ್ಲರೂ ಮನೆಯಿಂದ ಆಚೆ ಹೋಗುತ್ತಿದ್ದಂತೆ ಶುಭಾ ಮಾತನಾಡಿ, ನನಗೆ ಬೈ ಹೇಳಲು ಯಾರೂ ಇಲ್ಲ, ನೀವೆ ನನಗೆ ಬೈ ಹೇಳಬೇಕು. ಇದರಷ್ಟು ಒಳ್ಳೆಯದು ನನ್ನ ಜೀವನದಲ್ಲಿ ಬೇರೆ ಏನೂ ಆಗಿಲ್ಲ. ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ, ರಾತ್ರಿ ಪೂರ್ತಿ ಅಳುತ್ತೇನೆ, ಅದು ನಿಮಗೂ ಗೊತ್ತು. ನೀವೂ ನನ್ನನ್ನು ಮಿಸ್ ಮಾಡಿಕೊಳ್ಳುತ್ತೀರಿ ಎಂದು ಬಿಗ್ ಬಾಸ್‍ಗೆ ಹೇಳಿದ್ದಾರೆ.

    ಹೀಗೆ ಹೇಳಿದ ಬಳಿಕ ಶಾಕ್ ನೀಡಿದ ಬಿಗ್ ಬಾಸ್, ಸ್ಟೋರ್ ರೂಂನಲ್ಲಿ ನಿಮ್ಮ ಮತ್ತೊಂದು ಸೂಟ್‍ಕೇಸ್ ಇರಿಸಲಾಗಿದೆ. ಶುಕ್ರವಾರದ ವರೆಗೆ ನೀವು ಇಲ್ಲಿಯೇ ಇರಲಿದ್ದೀರಿ. ಬಟ್ಟೆ ಮಡಚುವುದು ಸೇರಿದಂತೆ ಅಡುಗೆಯನ್ನೂ ನೀವೇ ಮಾಡಿಕೊಳ್ಳಬೇಕು. ಅಲ್ಲದೆ ಕಾಲ ಕಾಲಕ್ಕೆ ನೀಡುವ ಟಾಸ್ಕ್ ಗಳನ್ನು ನೀವು ಮಾಡಬೇಕು. ನೀವು ಶುಕ್ರವಾರ ನಿರ್ಗಮಿಸಲಿದ್ದೀರಿ. ಬಿಗ್ ಬಾಸ್ ಒಬ್ಬಳೇ ಇರಬೇಕಾ, ಬೋರ್ ಆಗುತ್ತೆ. ಎಲ್ಲರನ್ನೂ ವಾಪಸ್ ಕರೆಸಿ, ಇರುತ್ತೇನೆ. ಚಿನ್ನಿ ಬಾಂಬ್‍ನಾದ್ರೂ ಕಳುಹಿಸಿ, ಇಲ್ಲವಾದರೆ ಹುಚ್ಚು ಹಿಡಿಯುತ್ತೆ ನನಗೆ ಎಂದು ಕೇಳಿಕೊಂಡಿದ್ದಾರೆ.

    ಅಲ್ಲದೆ ನನ್ನನ್ನು ಅಷ್ಟು ಮಿಸ್ ಮಾಡಿಕೊಳ್ಳುತ್ತೀರಾ, ಕಳುಹಿಸುತ್ತಿಲ್ಲ. ನನಗೊಬ್ಬಳಿಗೆ ಭಯವಾಗುತ್ತೆ ಬಿಗ್ ಬಾಸ್ ಎಂದು ಹೇಳಿಕೊಂಡಿದ್ದಾರೆ. ಅಷ್ಟರಲ್ಲೇ ಬಿಗ್ ಬಾಸ್ ಧ್ವನಿ ಕೇಳಿಸಿದ್ದು, ನೀವು ಮುಂದಿನ ಬಾರಿ ಮೈಕ್ ಸರಿಯಾಗಿ ಧರಿಸುವುದಾದರೆ ಹಾಗೂ ಒಂದು ಕೆ.ಜಿ.ಮಾವಿನ ಹಣ್ಣು ಕೊಡುವುದಾದರೆ ನಿಮ್ಮನ್ನು ಮನೆಯಿಂದ ಹೊರಗೆ ಕಳುಹಿಸಲಾಗುವುದು ಎನ್ನುತ್ತಾರೆ. ಆಗ ನಿಮಗೂ ನಾನಿಲ್ಲದೆ ಬೋರ್ ಆಗುತ್ತೆ ಎನ್ನುತ್ತಾರೆ. ಅಷ್ಟರಲ್ಲೇ ಶುಭಾ ನೀವು ಈಗ ಈ ಮನೆಗೆ ವಿದಾಯ ಹೇಳುವ ಸಮಯ ಎನ್ನುತ್ತಾರೆ. ಬಳಿಕ ಮನೆಯಿಂದ ಹೊರ ನಡೆಯುತ್ತಾರೆ. ಹೀಗೆ ಬಿಗ್ ಬಾಸ್ ಶುಭಾಗೆ ಶಾಕ್ ನೀಡಿದ್ದಾರೆ.

  • ದಿವ್ಯಾ ಪಕ್ಕಕ್ಕೆ ಇರುತ್ತಿದ್ದದ್ದು ನೆನೆದು ಮತ್ತೆ ಕಣ್ಣೀರು ಹಾಕಿದ ಅರವಿಂದ್

    ದಿವ್ಯಾ ಪಕ್ಕಕ್ಕೆ ಇರುತ್ತಿದ್ದದ್ದು ನೆನೆದು ಮತ್ತೆ ಕಣ್ಣೀರು ಹಾಕಿದ ಅರವಿಂದ್

    ರವಿಂದ್ ಅವರಿಗೆ ದಿವ್ಯಾ ಉರುಡುಗ ಪದೇ ಪದೇ ನೆನಪಾಗುತ್ತಿದ್ದು, ಪ್ರತಿಯೊಂದು ವಿಚಾರದಲ್ಲೂ ಅವರನ್ನು ಊಹಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಇಂದು ಬಿಗ್ ಬಾಸ್ ಮನೆಯಲ್ಲಿ ಕೊನೇಯದಾಗಿ ಮಾತನಾಡುವಾಗ ಸಹ ಅವರ ಸ್ನೇಹ, ಬಾಂಧವ್ಯದ ಕುರಿತು ಹೇಳಿ ಕಣ್ಣೀರು ಹಾಕಿದ್ದಾರೆ.

    ಬಿಗ್ ಬಾಸ್ ಸೀಸನ್ 8 ಮೊಟಕುಗೊಳ್ಳುತ್ತಿರುವ ಹಿನ್ನೆಲೆ ಇಂದು ಕೊನೆಯ ದಿನವಾಗಿದ್ದು, ಬಿಗ್ ಮನೆಯ ಅನುಭವದ ಕುರಿತು ಕೊನೆಯ ಮಾತು ಹೇಳುವಂತೆ ಸ್ಪರ್ಧಿಗಳಲ್ಲಿ ಕಣ್ಮಣಿ ಕೇಳಿದ್ದಾರೆ. ಎಲ್ಲರೂ ತಮ್ಮ ಅನಿಸಕೆಯನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಅರವಿಂದ ಮಾತನಾಡುತ್ತಲೇ ಭಾವುಕರಾದರು. ಅಲ್ಲದೆ ದಿವ್ಯಾ ಉರುಡುಗ ಅವರನ್ನು ನೆನೆದು ಕಣ್ಣೀರನ್ನು ಸಹ ಹಾಕಿದ್ದಾರೆ.

    ನಾನು ಕ್ರೀಡಾ ವಲಯದಿಂದ ಬಂದವನು, ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಮನರಂಜನಾ ಕ್ಷೇತ್ರದವರಾಗಿದ್ದಾರೆ. ಹೇಗೆ ಬೆರೆಯುವುದು, ಕನೆಕ್ಟ್ ಆಗುತ್ತಾರಾ ಎಂಬ ಚಿಂತೆ ಮನೆಗೆ ಬರುವುದಕ್ಕೂ ಮುನ್ನ ಕಾಡಿತ್ತು. ತುಂಬಾ ಡೌಟ್‍ಫುಲ್ ಆಗೇ ಬಂದೆ. ಆದರೆ ದಿನ ಕಳೆದಂತೆ ತಿಳಿಯಿತು, ಯಾರೀಗೂ ಆ ರೀತಿಯ ಆಟಿಟ್ಯೂಡ್ ಇರಲ್ಲ, ಎಲ್ಲರೂ ನಮ್ಮ ರೀತಿಯೇ ಸ್ವಲ್ಪ ಜೀವನ ನೋಡಿರುತ್ತಾರೆ ಎನ್ನುವುದು.

    ಈ ರೀತಿಯ ಅನುಭವ ನೋಡಿ ಸುಮಾರು 15 ವರ್ಷಗಳೇ ಕಳೆಯಿತು. ಬೈಕ್ ರೇಸ್‍ನಲ್ಲಿ ಭಾಗವಹಿಸುವುದರಿಂದ ಕುಟುಂಬಸ್ಥರಿಂದ ದೂರ ಇರುತ್ತೇನೆ. ಟ್ರಾವೆಲ್ ಮಾಡುತ್ತಲೇ ಇರುತ್ತೇನೆ. ಹೀಗಾಗಿ ಸ್ನೇಹಿತರಿಗೂ ಸಿಗುವುದು ಅಪರೂಪ. ಆದರೆ 15 ವರ್ಷಗಳ ಬಳಿಕ ಈ ರೀತಿ 17 ಸ್ನೇಹಿತರು, ದಿನ ನಿತ್ಯ ಅವರೊಟಿಗೆ ಕಾಲ ಕಳೆಯುವುದು, ಟಾಸ್ಕ್ ಮಾಡುವುದು, ಅವರ ಜೊತೆಗೆ ಗುದ್ದಾಡುವುದು, ಮಾತನಾಡುವುದು, ಮತ್ತೆ ಅವರಿಂದಲೇ ಮೆಚ್ಚುಗೆ ಪಡೆಯುವುದು, ತಪ್ಪಾದಲ್ಲಿ ಸರಿ ಮಾಡಿಕೊಳ್ಳುವುದು ತುಂಬಾ ಖುಷಿ ಆಯಿತು ಎಂದು ಭಾವುಕರಾದರು.

    ನನ್ನ ಫೀಲ್ಡ್ ಅವರಿಗೆ ಅರ್ಥವಾಗದಿದ್ದರೂ, ಮಾನವೀಯತೆಯ ದೃಷ್ಟಿಯಿಂದ ನನ್ನ ಮಟ್ಟಕ್ಕೆ ಇಳಿದು ನನ್ನನ್ನು ಒಪ್ಪಿಕೊಂಡರು. ಒಳ್ಳೆಯ ಸ್ನೇಹಿತನನ್ನಾಗಿ ತೆಗೆದುಕೊಂಡು, ಎಲ್ಲದರಲ್ಲೂ ಸರಿಸಮಾನವಾಗಿ ತೆಗೆದುಕೊಂಡರು. ಡೌಟ್ ಇದ್ದಾಗ ನನ್ನ ಬಳಿ ಬಂದಿದ್ದಾರೆ, ನನಗೆ ಡೌಟ್ ಇದ್ದಾಗ ಅವರ ಬಳಿ ಹೋಗಿದ್ದೇನೆ. ಇದೇ ಗ್ಯಾಪ್‍ನಲ್ಲಿ ದಿವ್ಯಾ ಉರುಡುಗ ಕ್ಲೋಸ್ ಆದರು, ಇಂದು ಅವಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಯಾವಾಗಲೂ ನನ್ನ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದಳು. ಒಳ್ಳೆ ಫ್ರಂಡ್ ಸಿಕ್ಕಿದಾರೆ ಇಲ್ಲಿ, ಅಲ್ಲದೆ ಎಕ್ಸ್ಟೆಂಡೆಡ್ ಫ್ಯಾಮಿಲಿ, ಒಳ್ಳೆಯ ಅನುಭವ ನನ್ನ ಜೀವನದಲ್ಲಿ ಇಷ್ಟು ಸಿಲ್ಲಿಯಾಗಿರೋಕೆ, ಇಷ್ಟು ನಗಲು ಆಗಿರಲಿಲ್ಲ. ಆರಂಭದಲ್ಲಿ ಮನೆಗೆ ಬಂದಾಗ ಎರಡು ವಾರ ನಕ್ಕು, ನಕ್ಕು ನನ್ನ ಧ್ವನಿಯೇ ಹೋಗಿತ್ತು. ಮಾತನಾಡಲು ಆಗುತ್ತಕಲೇ ಇರಲಿಲ್ಲ, ಅಷ್ಟು ನಕ್ಕಿದ್ದೇನೆ. ನನ್ನ ಜೀವನದ ಅದ್ಭುತ ಭಾಗ ಇದು. ಇಲ್ಲಿಂದ ದೊಡ್ಡ ಎಕ್ಸ್ಟೆಂಡೆಟ್ ಫ್ಯಾಮಿಲಿ ಕೊಂಡೊಯ್ಯುತ್ತೇನೆ. ಇದೊಂದು ರಿಲೇಶನ್‍ಶಿಪ್ ಫಾರ್ ಲೈಫ್ ಎಂದು ಭಾವಿಸುತ್ತೇನೆ ಎಂದಿದ್ದಾರೆ.

  • ವಿನ್ನರ್ ಯಾರೆಂದು ತಿಳಿಯದೇ ಬಿಗ್ ಬಾಸ್ ಕ್ಲೋಸ್ ಆಗಲ್ಲ- ಪುನರಾರಂಭದ ಸುಳಿವು ನೀಡಿದ ಕಿಚ್ಚ

    ವಿನ್ನರ್ ಯಾರೆಂದು ತಿಳಿಯದೇ ಬಿಗ್ ಬಾಸ್ ಕ್ಲೋಸ್ ಆಗಲ್ಲ- ಪುನರಾರಂಭದ ಸುಳಿವು ನೀಡಿದ ಕಿಚ್ಚ

    ಬಿಗ್ ಬಾಸ್ ಕನ್ನಡ ಸೀಸನ್ 8 ಕೊರೊನಾ ಕಾರಣದಿಂದ ಕ್ಲೋಸ್ ಆಗುತ್ತಿದೆ. ಇದರ ಬೆನ್ನಲ್ಲೇ ಕೊನೇಯ ದಿನವಾದ ಇಂದು ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ವೀಡಿಯೋ ಸಂದೇಶ ಕಳುಹಿಸಿದ್ದಾರೆ. ಈ ಹೇಳಿಕೆಯಲ್ಲಿ ಬಿಗ್ ಪುನರಾರಂಭದ ಸುಳಿವು ನೀಡಿದ್ದಾರೆ.

    ಬಿಗ್ ಕೊನೆಯ ಎಪಿಸೋಡ್‍ನಲ್ಲಿ ಬಟೆಗಳನ್ನು ಪ್ಯಾಕ್ ಮಾಡಿಕೊಂಡು ತಮ್ಮ ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಕಿಚ್ಚ ಸುದೀಪ್ ಮನೆ ಮಂದಿಗೆಲ್ಲ ವೀಡಿಯೋ ಮೂಲಕ ಸಂದೇಶ ಕಳುಹಿಸಿದ್ದಾರೆ. ನಿಮಗಾಗಲೇ ವಿಷಯ ತಲುಪಿದೆ, ಸದ್ಯಕ್ಕೆ ಶೋ ಸ್ಟಾಪ್ ಆಗುತ್ತಿದೆ. ನೀವೆಲ್ಲರೂ ನಿಮ್ಮ ಮನೆಗಳಿಗೆ ವಾಪಸ್ ಹೋಗುತ್ತಿದ್ದೀರಿ, ಇದು ತುಂಬಾ ಕಷ್ಟದ ವಿಚಾರ ಎಂಬುದು ತಿಳಿದಿದೆ. ಇಷ್ಟು ವಾರಗಳ ಬಳಿಕ, ಇಷ್ಟೊಂದು ಶ್ರಮ, ಭರವಸೆ, ನಂಬಿಕೆ ಇದೆಲ್ಲದ ಮಧ್ಯೆ ಈ ರೀತಿ ಒಂದು ವಿಚಾರ ನಿಮ್ಮ ಕಿವಿಗೆ ಬಿದ್ದಾಗ ಹೇಗೆ ಸ್ವೀಕರಿಸಿದ್ದೀರಿ ಎಂಬುದು ಗೊತ್ತಿಲ್ಲ. ಆದರೆ ಹೊರಗಡೆಯ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿರ್ಧಾರವನ್ನು ತಂಡ ತೆಗೆದುಕೊಳ್ಳಬೇಕಿದೆ. ಆದರೆ ಇದೇ ಅಂತ್ಯ ಅಲ್ಲ ಎಂದು ಹೇಳಿದ್ದಾರೆ.

    ನಿಮಗೆ ಸಿಕ್ಕಿರುವ ಜನಪ್ರಿಯತೆಯನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಹಾಗೂ ಎಲ್ಲ ಟೆಕ್ನಿಶಿಯನ್ಸ್ ಗಳ ಸುರಕ್ಷತೆ ದೃಷ್ಟಿಯಿಂದ ಈ ರೀತಿಯ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಇಲ್ಲಿಂದ ನೀವು ಮನೆಗೆ ಹೊರಡಿ, ಇದರ ಭವಿಷ್ಯ ಏನು, ಬಿಗ್ ಬಾಸ್ ಮುಂದೆ ಏನು? ಗೊತ್ತಿಲ್ಲ. ಈ ಬಗ್ಗೆ ಮುಂದೆ ನಿರ್ಧಾರ ಆಗುತ್ತದೆ, ಬಳಿಕ ನಿಮಗೂ ಹಾಗೂ ವೀಕ್ಷಕರಿಗೆ ತಲುಪುತ್ತದೆ. ಇದು ಮುಗಿಯುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ವೀಕ್ಷಕರು ತುಂಬಾ ನೊಂದಿದ್ದಾರೆ. ಬಹಳಷ್ಟು ಮೇಲ್, ಮೆಸೇಜ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಹ ಚರ್ಚೆ ನಡೆಯುತ್ತಿದೆ. ಹೀಗಾಗಿ ನೀವು ಆಗಲೇ ಜನರ ಮನಸ್ಸು ಗೆದ್ದಿದ್ದೀರಿ ಎಂದಿದ್ದಾರೆ.

    ವಿನ್ನರ್ ಯಾರೆಂದು ತಿಳಿಯದೆ ಬಿಗ್ ಬಾಸ್‍ಗೆ ಅಂತ್ಯ ಎನ್ನುವುದು ಇರುವುದಿಲ್ಲ. ಹೀಗಾಗಿ ಮತ್ತೆ ಏನಾದರೂ ಬಂದೇ ಬರುತ್ತೆ ಎಂಬ ನಂಬಿಕೆ ಖಂಡಿತ ನನಗಿದೆ. ಆದರೆ ಇಂತಹ ಸಂದರ್ಭದಲ್ಲಿ ನನಗೂ ತುಂಬಾ ದುಃಖವಾಗುತ್ತಿದೆ. ಎರಡ್ಮೂರು ವಾರಗಳ ಕಾಲ ನಾನು ಬರಲು ಆಗಲಿಲ್ಲ, ಬಳಿಕ ಮಾರ್ಗಸೂಚಿಗಳ ಕಾರಣ ವೀಕೆಂಡ್ ಶೋ ನಡೆಸಲು ಆಗುತ್ತಿರಲಿಲ್ಲ. ಹೀಗಾಗಿ ಈಗ ನಿಮಗೆ ಆಲ್ ದಿ ಬೆಸ್ಟ್ ಹೇಳುತ್ತಿದ್ದೇನೆ. ಇಷ್ಟು ದಿನ ನೀವು ಆಡಿದ್ದು, ಟಾಸ್ಕ್‍ಗಳಲ್ಲಿ ಪಾಲ್ಗೊಂಡಿದ್ದು, ಇದೆಲ್ಲದರ ಮಧ್ಯೆ ಮನುಷ್ಯ ಎಂದಮೇಲೆ ಗಲಾಟೆ, ಜಗಳಗಳು ಸಹಜ. ಇವನ್ನೆಲ್ಲ ಹೊರತುಪಡಿಸಿ ನೀವೆಲ್ಲ ತುಂಬಾ ಅದ್ಭುತವಾಗಿ ಮನೆಯಲ್ಲಿದ್ದಿರಿ. ನೀವೆಲ್ಲರೂ ವಿನ್ನರ್ಸ್ ಎಂದು ಸ್ಪರ್ಧಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇನ್ನು ಮುಂದೆ ಬಿಗ್ ಬಾಸ್ ಭವಿಷ್ಯ ಏನು ಎನ್ನುವುದನ್ನು ತಂಡ ತೀರ್ಮಾನ ಮಾಡುವ ವರೆಗೆ ಈ ನಿಮ್ಮ ಕಿಚ್ಚನಿಂದ ಧನ್ಯವಾದಗಳು. ವಿಶ್ ಯು ಆಲ್ ದಿ ಬೆಸ್ಟ್ ಆಲ್ವೇಸ್ ಲವ್ ಯು, ಹೋಪ್ ಫಾರ್ ದಿ ಬೆಸ್ಟ್ ಎಂದು ಹೇಳಿದ್ದಾರೆ. ಕಿಚ್ಚನ ಸಂದೇಶ ಕೇಳಿದ ಮನೆಯವರೆಲ್ಲರೂ ಭಾವುಕರಾಗಿದ್ದಾರೆ.

  • ಕಪ್ ಗೆಲ್ಲದೆ ಮನೆಗೆ ಬರಬೇಡ- ಅರವಿಂದ್‍ಗೆ ಮನೆಯವರಿಂದ ಭಾವನಾತ್ಮಕ ಪತ್ರ

    ಕಪ್ ಗೆಲ್ಲದೆ ಮನೆಗೆ ಬರಬೇಡ- ಅರವಿಂದ್‍ಗೆ ಮನೆಯವರಿಂದ ಭಾವನಾತ್ಮಕ ಪತ್ರ

    ನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕೊನೇಯ ಹಂತ ತಲುಪಿದ್ದು, ಇನ್ನೇನು ಲಾಸ್ಟ್ ಎಪಿಸೋಡ್, ಮನೆಗೆ ಹೊರಡಬೇಕು ಎನ್ನುವಾಗಲೇ ಸ್ಪರ್ಧಿಗಳಿಗೆ ಅವರ ಮನೆಯಿಂದ ಪತ್ರಗಳು ಬಂದಿವೆ. ಅದೇ ರೀತಿ ಅರವಿಂದ್ ತಂದೆ ಸಹ ಪ್ರೀತಿಯ ಮಗನಿಗೆ ಪತ್ರ ಬರೆದಿದ್ದು, ಕ್ಯಾಪ್ಟೆನ್ಸಿ ಚೆನ್ನಾಗಿ ನಿಭಾಯಿಸಿದ್ದೀಯಾ ಎಂದು ಹಾಡಿ ಹೊಗಳಿದ್ದಾರೆ.

    ಪ್ರೀತಿಯ ಅರವಿಂದ್ ನಿನ್ನ ತಂದೆ, ತಾಯಿ ಹಾಗೂ ಪ್ರಶಾಂತುನು ಮಾಡುವ ಆಶೀರ್ವಾದಗಳು. ನಾವೆಲ್ಲರೂ ಕ್ಷೇಮವಾಗಿದ್ದೇವೆ, ನಿನ್ನ ಆರೋಗ್ಯವನ್ನೂ ಚೆನ್ನಾಗಿ ನೋಡಿಕೊ. ಬಿಗ್ ಬಾಸ್ ವೇದಿಕೆಯಲ್ಲಿ ನಿನ್ನ ಆಟಗಳನ್ನು ನೋಡಿ ನಮಗೆಲ್ಲ ಬಹಳ ಸಂತೋಷವಾಗುತ್ತಿದೆ. ನಿನಗೆ ನೀಡಿದ ಕ್ಯಾಪ್ಟನ್ಸಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೀಯಾ ಎಂದು ಹಾಡಿ ಹೊಗಳಿದ್ದಾರೆ.

    ಮನೆಯ ಹತ್ತಿರದವರು, ಕುಟುಂಬಸ್ಥರು, ಗೆಳೆಯರು, ಊರಿನವರು ಹಾಗೂ ಪರ ಊರಿನವರು ಬಿಗ್ ಬಾಸ್ ಮನೆಯಲ್ಲಿ ನಿನ್ನ ಚಟುವಟಿಕೆಗಳನ್ನು ನೋಡಿ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಿಂದ ನಿನಗೆ ಶುಭವಾಗಲಿ, ದೇವರು ನಿನಗೆ ಒಳ್ಳೆಯದು ಮಾಡಲಿ ನಿನ್ನ ಪ್ರೀತಿಯ ತಂದೆ ಪ್ರಭಾಕರ್ ಪಾಥ್ಯ ಎಂದು ಹೇಳಿ ಕೊನೇಯದಾಗಿ ಕಪ್ ತೆಗೆದುಕೊಳ್ಳದೆ ಮನೆಗೆ ಬರಬೇಡ ಎಂದು ಬ್ರಾಕೆಟ್‍ನಲ್ಲಿ ಬರೆದಿದ್ದಾರೆ.

    ಅರವಿಂದ್ ಬಗ್ಗೆ ತಂದೆ ಹಾಗೂ ಮನೆಯವರು ಪತ್ರದ ಮೂಲಕ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಕಪ್ ಗೆಲ್ಲದೆ ಮನೆಗೆ ಬರಬೇಡ ಎಂದು ಹೇಳುವ ಮೂಲಕ ಆತ್ಮಸ್ಥೈರ್ಯ ತುಂಬಿದ್ದಾರೆ. ಕಪ್ ಗೆಲ್ಲುವ ಕುರಿತು ಹೇಳಿದ್ದಕ್ಕೆ ಅರವಿಂದ್ ನಕ್ಕು, ಹೇ ಇಲ್ಲ…ಇಲ್ಲ… ಅಂದಿದ್ದಾರೆ. ಅಲ್ಲದೆ ಮನೆಯವರೆಲ್ಲ ಪತ್ರ ಚೆನ್ನಾಗಿದೆ ಎಂದು ಹೇಳಿದ್ದಕ್ಕೆ, ನನಗೆ ಮನೆಯಲ್ಲಿ ಬೈಯುವುದು ಒಂದೇ ವಿಚಾರಕ್ಕೆ ಗಲಾಟೆ ಮಾಡಿರುವುದಕ್ಕೆ ಮಾತ್ರ ಬೈಯ್ಯುತ್ತಾರೆ. ಬೇರೆ ಯಾವುದಕ್ಕೂ ತೊಂದರೆ ಇಲ್ಲ. ಗಲಾಟೆ ಮಾತ್ರ ಆಗುವುದೇ ಇಲ್ಲ ಮನೆಯಲ್ಲಿ ಎಂದಿದ್ದಾರೆ.

  • ವೈಷ್ಣವಿ ಧರಿಸೋದು ಮಾತ್ರ ಬಿಟ್ಟಿ ಬಟ್ಟೆ- ಹೇಗೆಂದು ವಿವರಿಸಿದ ಕಣ್ಮಣಿ

    ವೈಷ್ಣವಿ ಧರಿಸೋದು ಮಾತ್ರ ಬಿಟ್ಟಿ ಬಟ್ಟೆ- ಹೇಗೆಂದು ವಿವರಿಸಿದ ಕಣ್ಮಣಿ

    ಟ, ನಟಿಯರು ಬಟ್ಟೆಗಳನ್ನು ಹೇಗೆ ನಿರ್ವಹಿಸುತ್ತಾರೆ. ಎಲ್ಲವನ್ನೂ ಅವರೇ ಕೊಳ್ಳುತ್ತಾರಾ, ಇಲ್ಲವೇ ಸ್ಪಾನ್ಸರ್ ಮಾಡುತ್ತಾರೋ ಅಥವಾ ಯಾರಾದರೂ ಡಿಸೈನರ್ಸ್ ಕೊಲ್ಯಾಬರೇಶನ್ ಮಾಡುತ್ತಾರೋ ಎಂಬ ಹಲವು ಪ್ರಶ್ನೆಗಳು ಜನಸಾಮಾನ್ಯರಿಗೆ ಕಾಡುತ್ತಿರುತ್ತವೆ. ಇದಕ್ಕೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಉತ್ತರ ಸಿಕ್ಕಿದೆ. ಹೌದು ವೈಷ್ಣವಿ ಅವರ ಬಟ್ಟೆ ಕುರಿತು ಕೇಳಿದಾಗ ಹಲವು ವಿಚಾರಗಳನ್ನು ಕಣ್ಮಣಿ ತೆರೆದಿಟ್ಟಿದ್ದಾರೆ.

    ಸ್ಪರ್ಧಿಗಳನ್ನು ಶೂಟಿಂಗ್‍ಗೆ ಕರೆದು ಇಂದೂ ಸಹ ಕಣ್ಮಣಿ ಹಲವು ವಿಚಾರದ ಕುರಿತು ಚರ್ಚಿಸಿದ್ದಾರೆ. ಅಲ್ಲದೆ ಇದು ಕೊನೇಯ ದಿನದ ಎಪಿಸೋಡ್ ಆಗಿದ್ದರಿಂದ ವೀಕ್ಷಕರು ಸಹ ಅಷ್ಟೇ ಕುತೂಹಲದಿಂದ ಬಿಗ್ ಬಾಸ್ ಶೋ ವೀಕ್ಷಿಸಿದ್ದಾರೆ. ಇದೆಲ್ಲದರ ಮಧ್ಯೆ ಕಣ್ಮಣಿ ಹಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮಾತು ಆರಂಭಿಸುತ್ತಿದ್ದಂತೆ ಸ್ಪರ್ಧಿಗಳ ಬಟ್ಟೆ ಬಗ್ಗೆ ಮಾತನಾಡಿದ್ದಾರೆ. ಎಲ್ಲ ಹೆಣ್ಣು ಮಕ್ಕಳು ತುಂಬಾ ಮುದ್ದಾಗಿ ಕಾಣಿಸುತ್ತಿದ್ದೀರಿ. ಗಂಡು ಮಕ್ಕಳಲ್ಲಿ ಪ್ರಶಾಂತ್ ಹಾಗೂ ಅರವಿಂದ್ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ. ಚಕ್ರವರ್ತಿಯವರು ಯಾಕೋ ಮೂಡಲ್ಲೇ ಇಲ್ಲ ಎಂದು ಕಾಲೆಳೆದಿದ್ದಾರೆ.

    ಬಳಿಕ ವೈಷ್ಣವಿ ಬಟ್ಟೆ ಬಗ್ಗೆ ಕಣ್ಮಣಿ ಮಾತನಾಡಿದ್ದಾರೆ. ನಿಮಗೆ ಹಳದಿ ಬಣ್ಣ ಇಷ್ಟಾನಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವೈಷ್ಣವಿ ಹಾ ಇಷ್ಟ, ಆದರೆ ಬ್ಲ್ಯಾಕ್ ತುಂಬಾ ಇಷ್ಟ ಎಂದಿದ್ದಾರೆ. ತಕ್ಷಣವೇ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ, ಎಲ್ಲಿ ತಗೋಂಡಿದ್ದು ಎಂದು ಕಣ್ಮಣಿ ಪ್ರಶ್ನಿಸಿದ ತಕ್ಷಣ ಕೊಲ್ಯಾಬರೇಶನ್ ಎಂದು ಸ್ಪರ್ಧಿಗಳು ಹೇಳುತ್ತಾರೆ. ಈ ಕೊಲ್ಯಾಬರೇಶನ್ ಬಗ್ಗೆ ನಮ್ಮ ವೀಕ್ಷಕರಿಗೆ ಗೊತ್ತಿಲ್ಲ ಸ್ವಲ್ಪ ವಿವರಿಸುತ್ತೀರಾ ಎಂದು ಕಣ್ಮಣಿ ಪ್ರಶ್ನಿಸಿದ್ದಾರೆ.

    ಇದಕ್ಕೆ ಉತ್ತರಿಸಿದ ವೈಷ್ಣವಿ, ತುಂಬಾ ಪ್ರೀತಿಯಿಂದ ನನ್ನ ಡಿಸೈನರ್ಸ್, ಸ್ಟೈಲಿಸ್ಟ್ ನನಗೆ ಬಟ್ಟೆಗಳನ್ನು ಕಳುಹಿಸಿಕೊಡುತ್ತಾರೆ. ಯಾವುದೇ ರೀತಿಯ ಹಣವನ್ನು ಅಪೇಕ್ಷಿಸದ್ದಕ್ಕೆ ಕೊಲಾಬರೇಶನ್ ಇಂದು ಇವರು ಕರೆಯುತ್ತಾರೆ. ಆದರೆ ಅವರು ನನಗೋಸ್ಕರ ಪ್ರೀತಿಯಿಂದ ಮಾಡಿಕೊಡುತ್ತಾರೆ ಎಂದು ಹೇಳುತ್ತಾರೆ. ಮಧ್ಯ ಪ್ರವೇಶಿಸಿದ ಮಂಜು ಪಾವಗಡ, ಅಂದರೆ ಇದಕ್ಕೆ ದುಡ್ಡು ಏನೂ ಇಲ್ಲ, ಸುಮ್ಮನೇ ಕೊಟ್ಟು ಮತ್ತೆ ವಾಪಸ್ ಅವರೇ ತೆಗೆದುಕೊಂಡು ಹೋಗುತ್ತಾರೆ ಎನ್ನುತಾರೆ. ಇದಕ್ಕೆ ಧ್ವನಿಗೂಡಿಸಿದ ಪ್ರಶಾಂತ್ ಸಂಬರಗಿ ಸೆಲೆಬ್ರಿಟಿ, ಅಗ್ನಿಸಾಕ್ಷಿ ಹಿರೋಯಿನ್ ಅಲ್ವಾ ಎಂದು ಹೇಳುತ್ತಾರೆ. ಚಕ್ರವರ್ತಿ ಸಹ ಮಾತನಾಡಿ, ಅಂಗಡಿಗಳಲ್ಲಿ ಗೊಂಬೆಗೆ ಹಾಕುವ ಬದಲು ಇಲ್ಲಿ ಹಾಕಿ, ವಾಪಸ್ ಕೊಂಡೊಯ್ಯುತ್ತಾರೆ. ಇವರು ಗೊಂಬೆ ಥರ ಇದ್ದಾರಲ್ಲಾ ಅದಕ್ಕೆ ಇವರಿಗೆ ಕೊಡುತ್ತಾರೆ ಎನ್ನುತ್ತಾರೆ.

    ಬಳಿಕ ಕಣ್ಮಣಿ ಎಷ್ಟು ಜನ ಕೊಲಾಬರೇಶನ್ ಇಲ್ಲಿ ಎಂದು ಪ್ರಶ್ನಿಸಿದ್ದಾರೆ, ಆಗ ವೈಷ್ಣವಿ ಮಾತ್ರ ಕೈ ಎತ್ತಿದ್ದಾರೆ. ತಕ್ಷಣವೇ ಮಾತನಾಡಿದ ಕಣ್ಮಣಿ ಹಾಗಾದ್ರೆ ಬಿಟ್ಟಿ ಬಟ್ಟೆ ಸಿಗುತ್ತಿರುವುದು ವೈಷ್ಣವಿಗೆ ಮಾತ್ರ ಎಂದು ಕಣ್ಮಣಿ ಕಾಲೆಳೆದಿದ್ದಾರೆ.

  • ವಯಸ್ಸಾಗಿದೆ ಫ್ಲರ್ಟ್ ಮಾಡ್ಬಾರ್ದು- ಸಂಬರಗಿ, ಅರವಿಂದ್ ಗುಸುಗುಸು

    ವಯಸ್ಸಾಗಿದೆ ಫ್ಲರ್ಟ್ ಮಾಡ್ಬಾರ್ದು- ಸಂಬರಗಿ, ಅರವಿಂದ್ ಗುಸುಗುಸು

    ಯಾವಾಗಲೂ ಒಬ್ಬರಿಗೊಬ್ಬರು ಜಗಳವಾಡುತ್ತಿದ್ದ ಅರವಿಂದ್ ಹಾಗೂ ಪ್ರಶಾಂತ್ ಸಂಬರಗಿ ಇದೀಗ ಒಟ್ಟಿಗೆ ಕೂತು ಗುಸು ಗುಸು ಮಾತನಾಡಿದ್ದು, ಅದೂ ಸಹ ಹುಡುಗಿಯರ ಜೊತೆ ಫ್ಲರ್ಟ್ ಮಾಡುವ ವಿಚಾರದ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ.

    ಚಕ್ರವರ್ತಿಯವರು ಪ್ರಿಯಾಂಕಾ ಜೊತೆ ಹೆಚ್ಚು ಮಾತನಾಡುವುದು ತಿಳಿದೇ ಇದೆ. ಆದರೆ ಪ್ರಿಯಾಂಕಾ ಚಕ್ರವರ್ತಿ ಅವರ ಜೊತೆ ಮಾತನಾಡಲು ಹಿಂಜರಿಗೆ ಇರುವುದು ಸಹ ಗೊತ್ತಿರುವ ವಿಚಾರ. ಈ ಬಗ್ಗೆ ಇದೀಗ ಗಾರ್ಡನ್ ಏರಿಯಾದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಅರವಿಂದ್ ಒಟ್ಟಿಗೆ ಕೂತು ಮಾತನಾಡಿದ್ದಾರೆ. ಹುಡುಗಿಯರಿಗೆ ನೀವು ದೇವತೆ, ಹಾಗೇ ಹೀಗೆ ಎಂದು ಮಾತನಾಡುತ್ತಾರೆ. ಆ ರೀತಿ ಮಾತನಾಡಬೇಡ ನಾಟಕೀಯವಾಗುತ್ತೆ ಎಂದು ಹಲವು ಬಾರಿ ಅವರಿಗೆ ತಿಳಿ ಹೇಳಿದ್ದೇನೆ. ತುಂಬಾ ನಾಟಕೀಯ ಎಂದು ಚಕ್ರವರ್ತಿ ಹೆಸರು ಪ್ರಸ್ತಾಪಿಸದೇ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

    ನಾನು ಊಟ ಬಡಿಸುವವರೆಗೆ ಊಟ ಮಾಡಬೇಡಿ, ನೀನು ಕಾಫಿ ಮಾಡಿಕೊಟ್ಟರೆ ದೇವತೆ ಮಾಡಿ ಕೊಟ್ಟಂಗಿರುತ್ತೆ ಮಾಡಿಕೊಡು ಎನ್ನುವುದು, ದೇವಲೋಕದಲ್ಲಿ ಯಾರಾದರೂ ತಂಗಿ ಇದ್ದರೆ ನಿನ್ನಂತೆ ಇರಲಿ ಎಂದು ವೈಷ್ಣವಿಗೆ ಹೇಳುವುದು ಸರಿಯಲ್ಲ. ಒಂದು ಸಾರಿ ಆದರೆ ಓಕೆ ಪ್ರತಿ ಬಾರಿ ಹೀಗೆ ಹೇಳಿದೆ ಒಳ್ಳೆಯದಲ್ಲ, ಹೀಗೆ ಮಾಡಬೇಡ, ಅತಿಯಾಗಿ ಕಾಣುತ್ತೆ, ಫೇಕ್ ಆಗಿ ಕಾಣುತ್ತೆ, ನಮ್ಮ ವಯಸ್ಸಿಗೆ ಅದು ಸರಿ ಕಾಣುವುದಿಲ್ಲ ಎಂದು ಪಬ್ಲಿಕ್‍ನಲ್ಲೂ ಹೇಳಿದ್ದೇನೆ, ಪ್ರೈವೇಟ್ ಆಗಿಯೂ ಹೇಳಿದ್ದೇನೆ ಎಂದು ಸಂಬರಗಿ ಹೇಳಿದ್ದಾರೆ.

    ಪ್ರಿಯಾಂಕಾ ಜೊತೆ ಫ್ಲರ್ಟ್ ಮಾಡಬೇಡ, ಸರಿ ಕಾಣುವುದಿಲ್ಲ, ಆ ಕಡೆಯಿಂದ ಅವಳು ಫ್ಲರ್ಟ್ ಮಾಡಿದರೆ ನೀನು ಫ್ಲರ್ಟ್ ಮಾಡು, ಫೋರ್ಸ್ ಮಾಡಬಾರದು. ಹಾಗೆ ಫ್ಲರ್ಟ್ ಮಾಡುವ ಅವಶ್ಯಕತೆ ಇಲ್ಲ ಬಾಸ್ ಎಂದು ಅರವಿಂದ್ ಬಳಿ ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅರವಿಂದ್, ಅವಶ್ಯಕತೆ ಅಂತಲ್ಲ, ಮಾಡಬಾರದು ಎಂದಿದ್ದಾರೆ.

  • ಚಕ್ರವರ್ತಿಗೆ ಬ್ಲೇಡ್ ರಾಜ ಎಂದು ಡೈರೆಕ್ಟಾಗಿ ಹೇಳಿದ್ಯಾಕೆ ಮನೆ ಮಂದಿ?

    ಚಕ್ರವರ್ತಿಗೆ ಬ್ಲೇಡ್ ರಾಜ ಎಂದು ಡೈರೆಕ್ಟಾಗಿ ಹೇಳಿದ್ಯಾಕೆ ಮನೆ ಮಂದಿ?

    ಬಿಗ್ ಬಾಸ್ ಮನೆಯಲ್ಲಿ ಈಗ ಬೇಗುದಿ ಆರಂಭವಾಗುತ್ತಿದ್ದು, ಒಬ್ಬರನ್ನೊಬ್ಬರು ದೂಷಿಸುವ ಸಂದರ್ಭ ಶುರುವಾಗಿದೆ. ಬ್ಲೇಡ್ ರಾಜ ಎಂದು ಮನೆ ಮಂದಿ ಹೇಳಿದ್ದಕ್ಕೆ ಚಕ್ರವರ್ತಿ ಚಂದ್ರಚೂಡ್ ಸಿಕ್ಕಾಪಟ್ಟೆ ಬೇಜಾರಾಗಿದ್ದಾರೆ. ಯಾಕೆ ನನ್ನನ್ನು ಎಲ್ಲರೂ ಬ್ಲೇಡ್ ರಾಜ ಎಂದರು? ಇದ್ದಿದ್ದನ್ನ ಇದ್ದಂಗೆ ಹೇಳಿದ್ಕಾ? ಏನು, ಎತ್ತ ಎಂದು ವೈಷ್ಣವಿ ಅವರನ್ನು ಪ್ರಶ್ನಿಸಿದ್ದಾರೆ.

    ಕಣ್ಮಣಿ ಬ್ಲೇಡ್ ರಾಜ ಅವಾರ್ಡ್ ಯಾರಿಗೆ ನೀಡಬೇಕು ಎಂದು ಕೇಳಿದಾಗ ಮನೆಯ ಸದಸ್ಯರು ಚಕ್ರವರ್ತಿ ಚಂದ್ರಚೂಡ್ ಹೆಸರು ಹೇಳಿದ್ದಾರೆ. ಅಲ್ಲದೆ ಕಣ್ಮಣಿ ಸಹ ಬ್ಲೇಡ್ ರಾಜ ಅವಾರ್ಡ್‍ನ್ನು ಚಕ್ರವರ್ತಿ ಚಂದ್ರಚೂಡ್ ಅವರಿಗೆ ನೀಡಿದ್ದಾರೆ. ಹೇಳಿದ್ದನ್ನೇ ಹೇಳ್ತಾರೆ, ಜಾಸ್ತಿ ಹೊತ್ತು ತಲೆ ತಿಂತಾರೆ ಎನ್ನುವ ಉದ್ದೇಶದಿಂದ ಮನೆ ಮಂದಿ ಚಕ್ರವರ್ತಿ ಹೆಸರನ್ನೇ ಪ್ರಸ್ತಾಪಿಸಿದ್ದಾರೆ. ಇದೀಗ ಈ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದ್ದು, ಯಾಕೆ ನನಗೆ ಎಲ್ಲರೂ ಬ್ಲೇಡ್ ರಾಜ ಎಂದರು ಎಂದು ಚಕ್ರವರ್ತಿ ವೈಷ್ಣವಿ ಬಳಿ ಕೇಳಿದ್ದಾರೆ. ಆಗ ವೈಷ್ಣವಿ ಸಮಾಧಾನಪಡಿಸಲು ಯತ್ನಿಸಿದ್ದಾರೆ.

    ಆರಂಭದಲ್ಲಿ ಈ ಬಗ್ಗೆ ಮಂಜು ಹಾಗೂ ದಿವ್ಯಾ ಸುರೇಶ್ ಮಾತನಾಡಿಕೊಂಡಿದ್ದು, ಚಕ್ರವರ್ತಿ ನನ್ನ ಮೇಲೆ ತುಂಬಾ ಬೇಜಾರಾಗಿದ್ದಾರೆ, ಹೆಚ್ಚು ಮಾತನಾಡಿದ್ದು ನೀನಲ್ಲವೇ ಎಂದು ನನ್ನನ್ನು ಪ್ರಶ್ನಿಸಿದರು. ತುಂಬಾ ಮಾತನಾಡಿದ್ದು ನಾನೇ ಆದರೆ ಕಣ್ಮಣಿ ಬ್ಲೇಡ್ ರಾಜ ಎಂದು ಕೇಳಿರುವುದು ಎಂದು ಹೇಳಿದೆ ಎಂದು ಮಂಜು ದಿವ್ಯಾಗೆ ಹೇಳಿದ್ದಾರೆ. ಮನಸ್ಸಲ್ಲಿ ಇನ್ನೊಬ್ಬರಿಗೆ ಕೆಟ್ಟದ್ದು ಬಯಸಿ, ಮುಂದೆ ಚೆನ್ನಾಗಿರುವುದು ಅಸಾಧ್ಯ, ಚಕ್ರವರ್ತಿ ತುಂಬಾ ಬೇಸರವಾದರು, ಆದರೆ ಅವರು ಬ್ಲೇಡ್ ರಾಜ ಎನ್ನುವುದರಲ್ಲಿ ಸತ್ಯ ಇದೆ. ಬೇರೆಯವರ ಜೊತೆ ಮಾತನಾಡುತ್ತಿದ್ದಾಗ ನಾನು ಹೋದ ತಕ್ಷಣ ಹೊಗಳಲು ಆರಂಭಿಸುತ್ತಾರೆ ಎಂದು ಚಕ್ರವರ್ತಿ ಬಗ್ಗೆ ಮಂಜು ಬಳಿ ದಿವ್ಯಾ ಸುರೇಶ್ ಹೇಳಿದ್ದಾರೆ.

    ಅಲ್ಲದೆ ಇಂದು ಸಹ ಒಬ್ಬೊಬ್ಬ ಸ್ಪರ್ಧಿ ಬಗ್ಗೆ ಹೇಳಲು ಕಣ್ಮಣಿ ಕೇಳಿದಾಗ, ಅದೇ ವಿಚಾರವನ್ನು ಮಂಜು ಪ್ರಸ್ತಾಪಿಸುತ್ತಾರೆ. ನನ್ನ ಜೊತೆಗೇ ಸಿಗರೇಟ್ ಸೇದಲು ಬಂದು, ನನಗೇ ಬ್ಲೇಡ್ ರಾಜ ಅಂತಾರಲ್ಲ ಎಂದು ಚಕ್ರವರ್ತಿ ಯೋಚಿಸುತ್ತಿದ್ದಾರೆ ಎಂದು ಮಂಜು ನೇರವಾಗಿ ಹೇಳಿದ್ದಾರೆ.

    ಬ್ಲೇಡ್ ರಾಜ ಎಂದು ಅವಾರ್ಡ್ ಕೊಟ್ಟಿದ್ದಕ್ಕೆ ಬೇಜಾರಾಗಿಲ್ಲ, ಈ ಮೈಂಡ್ ಸೆಟ್‍ಗಳು ಇನ್ನೂ ಇಂಡಿಪೆಂಡೆಂಟ್ ಆಗಿಲ್ಲವಲ್ಲ. ಕೆಟ್ಟದ್ದು ಬಂದಾಗ ಒಬ್ಬರ ತಲೆ ಮೇಲೆ ಹಾಕಲು ತಯಾರಿರುತ್ತಾರೆ, ಯಾರಿಗೂ ಮಾತನಾಡಲು ಸ್ವಾತಂತ್ರ್ಯವೇ ಇಲ್ಲ. ಏನೋ ಹೇಳಿದರೆ, ಇನ್ನೇನೋ ಅರ್ಥ ಮಾಡಿಕೊಳ್ಳುವುದು. ಒಟ್ಟಿನಲ್ಲಿ ನೆಗೆಟಿವ್‍ನ್ನು ಒಬ್ಬನ ಮೇಲೆ ಹಾಕಿ ಸುಮ್ಮನಾಗಿಬಿಡುತ್ತಾರೆ. ಅವನ ಮಾತನ್ನು ಕೇಳಿಸಿಕೊಂಡರೆ ಸ್ಟೋರೇಜ್‍ಗೆ ಜಾಗ ಇರಲ್ಲ, ಅಂತಹವನು ನನಗೆ ಬ್ಲೇಡ್ ರಾಜ ಎನ್ನುತ್ತಾನೆ ಎಂದು ಚಕ್ರವರ್ತಿ ಅವರು ಮಂಜು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ನೀವು ಪ್ರತಿ ವಿಚಾರವನ್ನು ವಿವರವಾಗಿ ಹೇಳುವುದರಿಂದ ಅವರಿಗೆ ಆ ರೀತಿ ಅನ್ನಿಸಿರುತ್ತದೆ. ಹೆಚ್ಚು ಮಾತನಾಡುತ್ತಾರೆ ಅನ್ನಿಸುತ್ತದೆ. ಬ್ಲೇಡ್ ರಾಜ ಎನ್ನುವುದು ಕೆಟ್ಟ ಶಬ್ದ ಏನಲ್ಲ ಎಂದು ವೈಷ್ಣವಿ ಸಮಾಧಾನ ಪಡಿಸಲು ಮುಂದಾಗುತ್ತಾರೆ. ಆಗ ಅರ್ಥವಿಲ್ಲದೆ ಮಾತನಾಡುವವರಿಗೆ ಬ್ಲೇಡ್ ರಾಜ ಎನ್ನುತ್ತಾರೆ. ಹೀಗಾಗಿ ನಾನು ಇನ್ಮೆಲೆ ಹೆಚ್ಚು ಮಾತಾಡಲ್ಲ ಎಂದು ಚಕ್ರವರ್ತಿ ಹೇಳಿದ್ದಾರೆ. ಈ ಮೂಲಕ ಮನೆ ಮಂದಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

  • ಬಿಗ್ ಬಾಸ್‍ನ್ನು ಕೋರ್ಟಿಗೆ ಅಲೆಸಬೇಕು ಅಂದುಕೊಂಡಿದ್ದೀರಾ- ಕಣ್ಮಣಿ ಪ್ರಶ್ನೆ

    ಬಿಗ್ ಬಾಸ್‍ನ್ನು ಕೋರ್ಟಿಗೆ ಅಲೆಸಬೇಕು ಅಂದುಕೊಂಡಿದ್ದೀರಾ- ಕಣ್ಮಣಿ ಪ್ರಶ್ನೆ

    ಲಾವಿದರಲ್ಲಿನ ಟ್ಯಾಲೆಂಟ್ ಹೊರ ಹಾಕಲು ಬಿಗ್ ಬಾಸ್ ಮನೆ ಅತ್ಯತ್ತಮ ವೇದಿಕೆ. ಇದನ್ನು ಅರಿತುಕೊಂಡೇ ಹಲವು ಕಲಾವಿದರು ಬಿಗ್ ಬಾಸ್ ಮನೆಗೆ ಹೋಗಲು ಕಾಯುತ್ತಿರುತ್ತಾರೆ. ಹಾಸ್ಯ, ಸಂಗೀತ, ಸಾಹಿತ್ಯ ಹೀಗೆ ಹಲವು ಕ್ಷೇತ್ರದ ಕಲಾವಿದರು ತಮ್ಮ ಟ್ಯಾಲೆಂಟ್‍ನ್ನು ಇಡೀ ಕರ್ನಾಟಕಕ್ಕೆ ಪರಿಚಯಿಸಲು ಉತ್ತಮ ವೇದಿಕೆ. ಇದೀಗ ಶಮಂತ್ ಸಹ ಸಾಹಿತ್ಯ ರಚಿಸಿ, ಹಾಡು ಹೇಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಬಿಗ್ ಬಾಸ್ ಸಹ ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ ಶಮಂತ್ ಡೀಲ್ ಬೇಸರ ಮೂಡಿಸಿದೆ.

    ಬಿಗ್ ಬಾಸ್ ಹಾಗೂ ಶಮಂತ್ ನಡುವೆ 5 ಹಾಡುಗಳನ್ನು ಮಾಡುವ ಡೀಲ್ ಆಗಿತ್ತು. ಅದರಂತೆ ಶಮಂತ್ 5 ಹಾಡುಗಳನ್ನು ಮಾಡಿದ್ದರು. ಬಳಿಕ ಬಾ ಗುರು ವೇಕ್ ಅಪ್ ಆಗೋಣ ಎಂದು ಶಮಂತ್ ಹೇಳಿದ್ದರು. ಆದರೆ ಬಿಗ್ ಬಾಸ್ ಬೆಳಗ್ಗೆ ವೇಕ್ ಅಪ್ ಸಾಂಗ್ ಪ್ಲೇ ಮಾಡಿರಲಿಲ್ಲ. ಹೀಗಾಗಿ ಯಾಕೆ ಪ್ಲೇ ಮಾಡಿಲ್ಲ ಎಂದು ಶಮಂತ್ ಬೇಸರಗೊಂಡಿದ್ದರು. ಹೀಗಾಗಿ ಕಣ್ಮಣಿ ಮೂಲಕ ಬಿಗ್ ಬಾಸ್ ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಹೇಳಿರುವ ಕಣ್ಮಣಿ, ನೀವು 5 ಹಾಡು ಮಾಡಬೇಕೆಂದು ನಮ್ಮ ನಡುವೆ ಡೀಲ್ ಆಗಿತ್ತು. ನೀವು 5 ಹಾಡು ಮಾಡಿ, ಬಾ ಗುರು ವೇಕ್ ಅಪ್ ಆಗಬೇಕು ಎಂದು ಕೇಳಿದ್ದಿರಿ. ನೀವು ಹೇಳಿದಂತೆ ನಾವು ಸಾಂಗ್ ಡೌನ್‍ಲೋಡ್ ಮಾಡಿಕೊಂಡು, ಕೇಳ್ರಪ್ಪೋ ಕೇಳಿಯಿಂದ ಶುರು ಮಾಡಿ ಎಲ್ಲ ತಯಾರಿ ಮಾಡಿಕೊಂಡಿದ್ದೆವು. ಆದರೆ ನೀವು ಹೇಳಿದವರ ಬಳಿ ಈ ಹಾಡಿನ ರೈಟ್ಸ್ ಇಲ್ಲ. ಬಿಗ್ ಬಾಸ್‍ನ್ನು ಕೋರ್ಟ್‍ಗೆ ಅಲೆಸಬೇಕೆಂದು ಪ್ರಶಾಂತ್ ಅವರ ಬಳಿ ಸಲಹೆ ಪಡೆದು ಹೀಗೆ ಹೇಳಿದಿರಾ ಎಂದು ಕಿಚಾಯಿಸಿದ್ದಾರೆ.

    ಮುಂದುವರಿದು, ಅಷ್ಟು ಸುಲಭವಾಗಿ ಬಿಗ್ ಬಾಸ್‍ನ ಬಕ್ರಾ ಮಾಡಲು ಆಗಲ್ಲ, ಆದರೂ ಕೊಟ್ಟಿರುವ ಕೆಲಸವನ್ನು ಸರಿಯಾಗಿ ಮಾಡಿದ್ದಕ್ಕೆ ಬಿಗ್ ಬಾಸ್ ಏನೋ ಟ್ರೈ ಮಾಡುತ್ತಿದ್ದಾರೆ, ಆಗಬಹುದು ನೋಡೋಣ ಎಂದು ಕಣ್ಮಣಿ ಹೇಳಿದ್ದಾರೆ. ಅಲ್ಲದೆ ಎಲ್ಲ ಹಾಡುಗಳು ಚೆನ್ನಾಗಿದ್ದವು ಎಂದು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.