Tag: Bigg Boss-7

  • ಬಿಗ್ ಬಾಸ್ ಪ್ರೋಮೋ ಔಟ್- ದೊಡ್ಮನೆ ಆಟಕ್ಕೆ ಆ್ಯಂಕರ್ ಫಿಕ್ಸ್

    ಬಿಗ್ ಬಾಸ್ ಪ್ರೋಮೋ ಔಟ್- ದೊಡ್ಮನೆ ಆಟಕ್ಕೆ ಆ್ಯಂಕರ್ ಫಿಕ್ಸ್

    ಟಿವಿ ಪ್ರೇಕ್ಷಕರಿಗೆ ಇಲ್ಲಿದೆ ಸಿಹಿಸುದ್ದಿ. ಅಭಿಮಾನಿ ಪ್ರಭುಗಳ ನೆಚ್ಚಿನ ಶೋ ಆಗಿರುವ ಬಿಗ್ ಬಾಸ್‌ಗೆ (Bigg Boss) ಮುಹೂರ್ತ ಫಿಕ್ಸ್ ಆಗಿದೆ. ಬಿಗ್ ಬಾಸ್‌ಗಾಗಿಯೇ ಕಾದು ಕೂರುವ ಫ್ಯಾನ್ಸ್‌ಗೆ ಪ್ರೋಮೋ ರಿವೀಲ್ ಮಾಡುವ ಮೂಲಕ ಅಧಿಕೃತ ಅಪ್‌ಡೇಟ್ ಸಿಕ್ಕಿದೆ. ತೆಲುಗು ಬಿಗ ಬಾಸ್‌ಗೆ ನಾಗಾರ್ಜುನ್ ಅವರೇ ನಿರೂಪಕರಾಗಿ ಫಿಕ್ಸ್ ಆಗಿದ್ದಾರೆ. ಇದನ್ನೂ ಓದಿ:ಟೊಮ್ಯಾಟೋ ವಿಚಾರದಲ್ಲಿ ಕ್ಷಮೆ ಕೇಳಿದ ನಟ ಸುನೀಲ್ ಶೆಟ್ಟಿ

    ತೆಲುಗು ‘ಬಿಗ್ ಬಾಸ್ 6’ ಸಕ್ಸಸ್‌ಫುಲ್ ಸೀಸನ್ ಆಗಿ ಗೆದ್ದಿತ್ತು. ಈಗ ಬಿಗ್ ಬಾಸ್ 7ʼಕ್ಕೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸೀಸನ್ 7 ಬರೋದರ ಬಗ್ಗೆ ವಾಹಿನಿ ಅಧಿಕೃತ ಅಪ್‌ಡೇಟ್‌ ಕೊಟ್ಟಿದೆ. ಇದರ ಬೆನ್ನಲ್ಲೇ ಯಾರೆಲ್ಲಾ ಕಲಾವಿದರು ಬರಬಹುದು ಎಂಬ ಚರ್ಚೆ ಶುರುವಾಗಿದೆ. ಕನ್ನಡದ ‘ಅಗ್ನಿಸಾಕ್ಷಿ’ (Agnisakshi) ನಟಿ ಶೋಭಾ ಶೆಟ್ಟಿ (Shobha Shetty) ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಇದೆ ಎಂಬ ಸುದ್ದಿಯಿದೆ. ಟಿಕ್‌ ಟಾಕ್‌ ಸ್ಟಾರ್ಸ್‌, ವಿವಾದದಲ್ಲಿ ಸುದ್ದಿಯಾದವರಿಗೆ ದೊಡ್ಮನೆ ಆಟಕ್ಕೆ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ.

    ಈ ಸೀಸನ್‌ನಲ್ಲೂ ಟಾಲಿವುಡ್ ಸ್ಟಾರ್ ನಟ ನಾಗಾರ್ಜುನ (Nagarjuna) ಅವರೇ ನಿರೂಪಕರಾಗಿ ಬಂದಿರೋದು ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. 7ನೇ ಸೀಸನ್‌ನ ನೋಡೋಕೆ ಕಾತರದಿಂದ ಬಿಗ್ ಬಾಸ್ ಫ್ಯಾನ್ಸ್ ಕಾಯ್ತಿದ್ದಾರೆ. ಹೊಸ ಸೀಸನ್‌ಗಾಗಿ ಮನೆಯ ವಿನ್ಯಾಸ, ಹೊಸ ನಿಯಮಗಳನ್ನು ತರಲು ಪ್ಲ್ಯಾನ್ ಮಾಡಲಾಗಿದೆ. ಈ ಹಿಂದಿನ ಟಾಸ್ಕ್‌ಗಳ ಬದಲು ಹೊಸ ಬಗೆಯ ಟಾಸ್ಕ್‌ಗಳನ್ನ ಸೀಸನ್ 7ರಲ್ಲಿ ನೋಡಬಹುದು.

    ಬಹುಭಾಷೆಗಳಲ್ಲಿ ಬಿಗ್ ಬಾಸ್ ಮೂಡಿ ಬರುತ್ತಿದೆ. ಈ ವರ್ಷದ ಆರಂಭದಲ್ಲಿ ಕನ್ನಡದ ಬಿಗ್ ಬಾಸ್ ಸೀಸನ್ ಮುಗಿದಿತ್ತು. ಸುದೀಪ್(Sudeep) ನಿರೂಪಣೆಯಲ್ಲಿ ಅದ್ಭುತವಾಗಿ ಮೂಡಿ ಬಂದಿತ್ತು. ಈಗ ಕನ್ನಡದ ಒಟಿಟಿ ಬಿಗ್ ಬಾಸ್‌ಗೆ ಸಕಲ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಸತ್ತು ಹುಟ್ಟಿದ್ದವಳು: ಕಷ್ಟಪಟ್ಟಿದ್ದನ್ನು ನೆನೆದು ದುನಿಯಾ ರಶ್ಮಿ ಕಣ್ಣೀರು

    ನಾನು ಸತ್ತು ಹುಟ್ಟಿದ್ದವಳು: ಕಷ್ಟಪಟ್ಟಿದ್ದನ್ನು ನೆನೆದು ದುನಿಯಾ ರಶ್ಮಿ ಕಣ್ಣೀರು

    ಬೆಂಗಳೂರು: ಬಿಗ್ ಬಾಸ್ ಸೀಸನ್ -7 ಸ್ಪರ್ಧಿ ದುನಿಯಾ ರಶ್ಮಿ ಅವರು ನಾನು ಸತ್ತು ಹುಟ್ಟಿದ್ದವಳು ಎಂಬ ವಿಷಯವನ್ನು ಹೇಳಿದ್ದಾರೆ.

    ಗುರುವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದ್ದರು. ಈ ವೇಳೆ ಸ್ಪರ್ಧಿಗಳ ತಮ್ಮ ತಂದೆ-ತಾಯಿ ಬಗ್ಗೆ ಮಾತನಾಡಬೇಕಿತ್ತು. ಈ ಟಾಸ್ಕ್ ನಲ್ಲಿ ಮೊದಲು ಚಂದನಾ ಹಾಗೂ ಕಿಶನ್ ಶುರು ಮಾಡಿದ್ದರು. ಬಳಿಕ ಸ್ಪರ್ಧಿಗಳು ತಮ್ಮ ತಂದೆ-ತಾಯಿ ಜೊತೆ ಆಗಿರುವ ಅನುಭವವನ್ನು ಹಂಚಿಕೊಂಡರು.

    ಈ ಟಾಸ್ಕ್ ನಲ್ಲಿ ಮಾತನಾಡಿದ ದುನಿಯಾ ರಶ್ಮಿ, ನಮ್ಮ ತಂದೆ-ತಾಯಿಗೆ ಮೂರು ಜನ ಮಕ್ಕಳಿದ್ದರು. ಮೊದಲು ನನ್ನ ಅಣ್ಣ ಹುಟ್ಟಿದ್ದ. ಬಳಿಕ ನಾನು ಹುಟ್ಟಿದೆ. ಆದರೆ ನನ್ನ ತಂದೆಗೆ ಹೆಣ್ಣು ಮಕ್ಕಳೆಂದರೆ ಇಷ್ಟವಿರಲಿಲ್ಲ. ನನ್ನ ತಾಯಿ ಹಾಗೂ ದೊಡ್ಡಮ್ಮ ನನ್ನ ತಂದೆಗೆ ಸಮಾಧಾನ ಮಾಡಿದ್ದರು. ಬಳಿಕ ನಮ್ಮ ಫ್ಯಾಮಿಲಿ ಚೆನ್ನಾಗಿಯೇ ಇತ್ತು. ನನ್ನ ತಂದೆ ಕೂಡ ನನಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದರು.

    ಈ ನಡುವೆ ನನ್ನ ತಾಯಿ ರಾಜಕೀಯಕ್ಕೆ ಪ್ರವೇಶಿದ್ದರು. ನನ್ನ ತಂದೆಯೇ ಅಮ್ಮನಿಗೆ ಬಲವಂತ ಮಾಡಿ ರಾಜಕೀಯದಲ್ಲಿ ಕೆಲಸ ಮಾಡುವಂತೆ ಹೇಳಿದ್ದರು. ಅಮ್ಮ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ನಂತರ ನನ್ನ ತಾಯಿ ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದನು. ಆಗ ನನ್ನ ತಂದೆ ನನ್ನ ತಾಯಿ ಮೇಲೆ ಅನುಮಾನಪಡಲು ಶುರು ಮಾಡಿದ್ದರು. ನನ್ನ ತಾಯಿ ವೀಝಿಂಗ್ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಮಲಗಲು ತುಂಬಾ ಕಷ್ಟಪಡುತ್ತಿದ್ದರು ಎಂದು ಹೇಳುತ್ತಾ ಭಾವುಕರಾದರು.

    ಒಂದು ದಿನ ಅಪ್ಪ-ಅಮ್ಮನ ನಡುವೆ ಜಗಳವಾಗುತ್ತಿತ್ತು. ಶಬ್ದ ಕೇಳಿ ನಾನು ಒಳಗಡೆ ಹೋಗಿ ನೋಡಿದೆ. ಆಗ ನನ್ನ ತಂದೆ ತಾಯಿಯ ತಾಳಿ ಎಳೆಯುತ್ತಿದ್ದರು. ಇದಾದ ಬಳಿಕ ನನ್ನ ತಾಯಿ, ನನ್ನ ಜೊತೆ ಬರುತ್ತೀರಾ. ಈ ಮನೆಯಲ್ಲಿ ಇರುವುದು ಬೇಡ. ಬೇರೆ ಎಲ್ಲಿಯಾದರೂ ದೂರ ಹೋಗೋಣ ಎಂದರು. ಬಳಿಕ ಆ ರಾತ್ರಿಯೇ ನಾವು ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದೇವು. ಆ ಸಂದರ್ಭದಲ್ಲಿ ನಮ್ಮ ಬಳಿ ಹಣವಿರಲಿಲ್ಲ, ಕೇವಲ ಚಿನ್ನವಿತ್ತು. ಮನೆ ಬಿಟ್ಟು ಬಂದ ನಂತರ ನನ್ನ ತಂದೆಗೆ ಕರೆ ಮಾಡಿದಾಗ ನೀನು ಯಾರು ಎಂದು ಪ್ರಶ್ನಿಸಿದರು ಎಂದರು.

    ನೀನು ಯಾರು ಎಂದು ನನ್ನ ತಂದೆ ಪ್ರಶ್ನಿಸಿದಾಗ ನಾವು ಮತ್ತೆ ಅವರನ್ನು ಕರೆ ಮಾಡಲು ಹೋಗಲಿಲ್ಲ. ಬಳಿಕ ದೊಡಮ್ಮನಿಗೆ ಕರೆ ಮಾಡಿದಾಗ ಅವರು ನಮಗೆ ಮಡಿಕೇರಿಗೆ ಕರೆದುಕೊಂಡು ಹೋದರು. ನನ್ನ ತಾಯಿಗೆ ವೀಝಿಂಗ್ ಇದ್ದ ಕಾರಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದೆ. ಆದರೆ ನನ್ನ ಬಳಿ ಹಣವಿರಲಿಲ್ಲ. ಹೀಗೆ ರಸ್ತೆಯಲ್ಲಿ ಹೋಗುವಾಗ ಕಾಲ್ಗೆಜ್ಜೆ ಬಿದ್ದಿತ್ತು. ಅದನ್ನು ಮಾರಿ ನನ್ನ ತಾಯಿಗೆ ಚಿಕಿತ್ಸೆ ಕೊಡಿಸಿದ್ದೇನೆ. ಇದುವರೆಗೂ ನನ್ನ ತಾಯಿಗೆ ಕೊರತೆ ಆಗದಂತೆ ನೋಡಿಕೊಂಡಿದ್ದೇನೆ ಎಂದು ರಶ್ಮಿ ಟಾಸ್ಕ್ ನಲ್ಲಿ ತಿಳಿಸಿದರು.