Tag: Bigg Boss-6

  • ಬಿಗ್ ಬಾಸ್ ಹೋಸ್ಟ್ ಸ್ಥಾನಕ್ಕೆ ವಿದಾಯ ಹೇಳಿದ ನಟ ನಾಗಾರ್ಜುನ್

    ಬಿಗ್ ಬಾಸ್ ಹೋಸ್ಟ್ ಸ್ಥಾನಕ್ಕೆ ವಿದಾಯ ಹೇಳಿದ ನಟ ನಾಗಾರ್ಜುನ್

    ತೆಲುಗು ಬಿಗ್ ಬಾಸ್ (Bigg Boss) ಸೀಸನ್ 6 ಇತ್ತೀಚೆಗಷ್ಟೇ ಅಂತ್ಯವಾಯಿತು. ನಟ ನಾಗಾರ್ಜುನ್ ನಿರೂಪಣೆಯಲ್ಲಿ ಬಿಗ್ ಬಾಸ್ ಅದ್ಭುತವಾಗಿ ಮೂಡಿ ಬಂದಿತ್ತು. ಇದೀಗ ಈ ಬೆನ್ನಲ್ಲೇ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ಸೀಸನ್ 7ಕ್ಕೆ ಸಿದ್ಧತೆ ನಡೆಯುತ್ತಿರುವ ವೇಳೆಯಲ್ಲಿ ನಾಗಾರ್ಜುನ್ (Nagarjuna) ಬಿಗ್ ಬಾಸ್ ಶೋನಿಂದ ಹಿಂದೆ (Exit) ಸರಿದಿದ್ದಾರೆ ಎನ್ನಲಾಗುತ್ತಿದೆ.

    ತೆಲುಗು ಕಿರುತೆರೆಯ ಜನಪ್ರಿಯ ಶೋ ಬಿಗ್ ಬಾಸ್ ಹೋಸ್ಟ್ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ. ಆದರೆ ಈ ಸುದ್ದಿಯ ಬಗ್ಗೆ ಪ್ರಾಯೋಜಕರು ಅಥವಾ ನಾಗಾರ್ಜುನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೆಲವು ವೈಯಕ್ತಿಕ ಕಾರಣಗಳಿಂದ ಶೋಗೆ ನಾಗಾರ್ಜುನ್ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ

    ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಾಗಾರ್ಜುನ್ ಅವರ ಸ್ಥಾನಕ್ಕೆ ಯಾರನ್ನ ಕರೆತರುತ್ತಾರೆ ಎಂಬುದರ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ. ಮೂಲಗಳ ಪ್ರಕಾರ, ರಾಣಾ ದಗ್ಗುಭಾಟಿ(Rana Daggubati) , ಅಥವಾ ವಿಜಯ್ ದೇವರಕೊಂಡ (Vijay Devarakonda) ಅವರನ್ನ ಕರೆತರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಹಿಂದೆ ಜ್ಯೂ.ಎನ್‌ಟಿಆರ್ ಮತ್ತು ನಾನಿ ಕೂಡ ಬಿಗ್ ಬಾಸ್ ಶೋನ ನಿರೂಪಣೆ ಮಾಡಿದ್ದರು.

    ಇನ್ನೂ ಬಿಗ್ ಬಾಸ್ ಸೀಸನ್ 6ರಲ್ಲಿ ಎಲ್.ವಿ ರೇವಂತ್ (L.v Revanth) ವಿನ್ನರ್ ಆಗಿ ಹೊರಹೊಮ್ಮಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಿಗ್‍ಬಾಸ್ ಸೆಲೆಬ್ರಿಟಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್!

    ಬಿಗ್‍ಬಾಸ್ ಸೆಲೆಬ್ರಿಟಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್!

    ಬೆಂಗಳೂರು: ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೆಲೆಬ್ರಿಟಿಗಳು ಭಾಗವಹಿಸಬೇಕೆಂದು ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ.

    ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್-6 ಇದೇ ತಿಂಗಳಿನಿಂದ ಶುರುವಾಗುತ್ತಿದೆ. ಕಳೆದ ಸೀಸನ್‍ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಅರ್ಧ ಸೆಲೆಬ್ರಿಟಿ ಹಾಗೂ ಅರ್ಧ ಕಾಮನ್ ಮ್ಯಾನ್ ಇದ್ದರು. ಆದರೆ ಈ ಸೀಸನ್‍ನಲ್ಲಿ ಹೆಚ್ಚು ಕಾಮನ್ ಮ್ಯಾನ್ ಇರಲಿದ್ದಾರೆ ಎಂಬುದನ್ನು ಬಿಗ್ ಬಾಸ್ ಆಯೋಜಕರು ಸುಳಿವು ನೀಡಿದ್ದಾರೆ.

    ಆರಂಭದ ಆವೃತ್ತಿಯಲ್ಲಿ 15 ಮಂದಿ ಬಿಗ್ ಬಾಸ್ ಮನೆಗೆ ಹೋಗಿದ್ದರು. ನಂತರ ಕಳೆದ ಸೀಸನ್‍ನಲ್ಲಿ 19 ಮಂದಿ ಬಿಗ್ ಬಾಸ್ ಮನೆಯನ್ನು ಪ್ರವೇಶೀಸಿದ್ದರು. ಆದರೆ ಈ ಬಾರಿ ಒಟ್ಟು 18 ಮಂದಿ ಬಿಗ್ ಮನೆಗೆ ಹೋಗುವ ಅವಕಾಶ ಪಡೆಯಲಿದ್ದಾರೆ.

    ಕಳೆದ ಸೀಸನ್‍ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಅರ್ಧ ಮಂದಿ ಸೆಲೆಬ್ರಿಟಿ ಹಾಗೂ ಅರ್ಧ ಮಂದಿ ಕಾಮನ್ ಮ್ಯಾನ್ ಇದ್ದರು. ಆದರೆ ಸೀಸನ್-6ನಲ್ಲಿ ಕಾಮನ್ ಮ್ಯಾನ್ ಹೆಚ್ಚು ಇರಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಎಷ್ಟು ಮಂದಿ ಇರಲಿದ್ದಾರೆ ಎಂಬುದನ್ನು ಆಯೋಜಕರು ಸುಳಿವು ನೀಡಲಿಲ್ಲ.

    ಬಿಗ್ ಬಾಸ್ ಶುರುವಾಗಲು ಕೆಲವೇ ದಿನಗಳು ಬಾಕಿ ಇದೆ. ಆದರೆ ಯಾರೆಲ್ಲ ಒಳಗಡೆ ಹೋಗಲಿದ್ದಾರೆ ಎನ್ನುವುದು ಇನ್ನೂ ಅಂತಿಮವಾಗಿಲ್ಲವಂತೆ. ಈ ಬಾರಿ ಬಿಗ್ ಬಾಸ್ ಮನೆಗೆ ಸಾಧಾರಣ ವ್ಯಕ್ತಿಗಳನ್ನು ಆಯ್ಕೆ ಮಾಡುವುದರ ಬದಲು ವಿಭಿನ್ನವಾಗಿರುವ ವ್ಯಕ್ತಿಗಳನ್ನು ಆಯ್ಕೆ ಮಾಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.

    ಸದ್ಯ ಈ ಬಾರಿ ಬಿಗ್‍ಬಾಸ್ ಮನೆಯಲ್ಲಿ ಕಾಮನ್ ಮ್ಯಾನ್ ಹೆಚ್ಚು ಇರಲಿದ್ದು, ಕಾಮನ್ ಮ್ಯಾನ್ ಶೋ ಎಂದು ಆಗಲಿದೆ. ಅಲ್ಲದೇ ಕಳೆದ ಸೀಸನ್‍ನಲ್ಲಿ ಪ್ರತಿ ವಾರಾಂತ್ಯದಲ್ಲಿದ್ದ ಕಿಚನ್ ಟೈಂ ಈ ಬಾರಿ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv