Tag: Bigg Boss-12

  • ರೆಸಾರ್ಟ್‌ನಲ್ಲಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ ಬಿಗ್ ಬಾಸ್ ಸ್ಪರ್ಧಿಗಳು

    ರೆಸಾರ್ಟ್‌ನಲ್ಲಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ ಬಿಗ್ ಬಾಸ್ ಸ್ಪರ್ಧಿಗಳು

    ಬಿಗ್ ಬಾಸ್ ಸೀಸನ್ -12 (Bigg Boss Season 12) ಆರಂಭದಲ್ಲಿ ಆತಂಕ ಶುರುವಾಗಿದೆ. ಯಶಸ್ವಿಯಾಗಿ 11 ಸೀಸನ್ ಗಳನ್ನ ನಡೆಸಿಕೊಂಡು ಬರುತ್ತಿದ್ದ ರಿಯಾಲಿಟಿ ಶೋಗೆ ಬಿಗ್ ಶಾಕ್ ನೀಡಿದ್ದಾರೆ ಅಧಿಕಾರಿಗಳು. ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಉಲ್ಲಂಘನೆ ಆಗಿರುವ ಹಿನ್ನೆಲೆ ಬಿಗ್ ಬಾಸ್ ನಡೆಯುತ್ತಿದ್ದ ಜಾಗ ಅಂದರೆ ಜಾಲಿವುಡ್ ಸ್ಟುಡಿಯೋಗೆ (Jollywood Studio) ಬೀಗ ಜಡಿಯಲಾಗಿದೆ.

    ಬಿಗ್ ಬಾಸ್ ಮನೆಗೆ ಬೀಗ ಜಡಿದ ಬಳಿಕ ಅಲ್ಲಿದ್ದ ಸ್ಪರ್ಧಿಗಳನ್ನ ಈಗಲ್ ಟನ್ ರೆಸಾರ್ಟ್ ಗೆ ಸ್ಥಳಾಂತರ ಮಾಡಲಾಯಿತು. ರಾತ್ರಿಯಿಂದಲೇ ವಾಸ್ತವ್ಯ ಹೂಡಿರುವ ಸ್ಪರ್ಧಿಗಳು ಬೆಳಗ್ಗೆ ರೆಸಾರ್ಟ್ ಬಾಲ್ಕನಿಯಲ್ಲಿ ನಿಂತು ಮಾತಾಡಿಕೊಳ್ಳುತ್ತಿದ್ದರು. ಈ ಘಟನೆಯ ಅರಿವಿಲ್ಲದೇ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ. ಜೊತೆಗೆ ಬಿಗ್ ಬಾಸ್ ಸ್ಪರ್ಧಿಗಳಾದ ಧನುಷ್ ಗೌಡ (Dhanush Gowda) ಹಾಗೂ ಅಭಿಷೇಕ್ (Abhishek) ಧೂಮಪಾನ ಮಾಡುತ್ತಾ ಮಾತ್ನಾಡುತ್ತಾ ನಿಂತಿರುವ ವಿಡಿಯೋ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಅಂದಹಾಗೆ ಜಾಲಿವುಡ್ ಸ್ಟುಡಿಯೋಗೆ ಬೆಂಗಳೂರು ದಕ್ಷಿಣ ಡಿಸಿ 10ದಿನಗಳ ಕಾಲಾವಕಾಶ ನೀಡಿದ್ದಾರೆ. 10 ದಿನಗಳಲ್ಲಿ ಒಳಗಡೆ ಆದ ಲೋಪ-ದೋಷಗಳನ್ನ ಸರಿಪಡಿಸಿಕೊಳ್ಳುವಂತೆ ಸೂಚಿಸಿ 10ದಿನ ತಾತ್ಕಾಲಿಕ ರಿಲೀಫ್ ನೀಡಲಾಗಿದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಯಾವುದೇ ಅನುಮತಿ ದೊರೆಯದ ಕಾರಣ ಬಿಗ್ ಬಾಸ್ ಮನೆಗೆ ಬಹುತೇಕ ಇಂದು (ಅ.8) ಶಿಫ್ಟ್ ಆಗೋದು ಡೌಟ್ ಎನ್ನಲಾಗ್ತಿದೆ.

  • ಬಿಗ್ ಬಾಸ್‌ಗೆ 10 ದಿನ ಕಾಲಾವಕಾಶ; ನಮಗೆ ಯಾವುದೇ ರೀತಿ ಮನವಿ ಬಂದಿಲ್ಲ: ನರೇಂದ್ರಸ್ವಾಮಿ

    ಬಿಗ್ ಬಾಸ್‌ಗೆ 10 ದಿನ ಕಾಲಾವಕಾಶ; ನಮಗೆ ಯಾವುದೇ ರೀತಿ ಮನವಿ ಬಂದಿಲ್ಲ: ನರೇಂದ್ರಸ್ವಾಮಿ

    – ನಾವು ಯಾವುದೇ ರೀತಿ ಅವಕಾಶ ನೀಡಿಲ್ಲ

    ಬೆಂಗಳೂರು: ಬಿಗ್ ಬಾಸ್‌ಗೆ (Bigg Boss) 10 ದಿನ ಕಾಲಾವಕಾಶ ಕೊಟ್ಟಿರುವ ಸಂಬಂಧ ನಮಗೆ ಯಾವುದೇ ಮನವಿ ಬಂದಿಲ್ಲ. ನಾವು ಯಾವುದೇ ರೀತಿ ಅವಕಾಶ ನೀಡಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ (PM Narendraswamy) ಹೇಳಿದ್ದಾರೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಬಿಗ್ ಬಾಸ್ ಈವೆಂಟ್ ಬಗ್ಗೆ ಗೊತ್ತಿಲ್ಲ. ನಾವು ಜಾಲಿವುಡ್ (Jollywood) ಸಂಸ್ಥೆಗೆ ನೋಟಿಸ್ ಕೊಟ್ಟಿರೋದು. ಸುಮಾರು 152 ಯೂನಿಟ್‌ಗಳನ್ನು ಈಗಾಗಲೇ ರೂಲ್ಸ್ ಬ್ರೇಕ್ ಮಾಡಿದ ಕಾರಣಕ್ಕೆ ನಾವು ಕ್ಲೋಸ್ ಮಾಡುವ ಆದೇಶವನ್ನು ನೀಡಿದ್ದೇವೆ. ಹತ್ತು ದಿನದ ಕಾಲಾವಕಾಶ ಕೊಡುವ ಬಗ್ಗೆ ನಾವು ತೀರ್ಮಾನ ಮಾಡಿಲ್ಲ. ಈ ಪ್ರಕರಣ ಕೋರ್ಟ್‌ನಲ್ಲಿ ಇದೆ ಎಂದರು. ಇದನ್ನೂ ಓದಿ: ಬಿಗ್‌ಬಾಸ್‌ಗೆ ಬಿಗ್‌ ರಿಲೀಫ್‌ – ಸಮಸ್ಯೆ ಇತ್ಯರ್ಥಕ್ಕೆ 10 ದಿನ ಕಾಲಾವಕಾಶ

    ನೋಟಿಸ್ ಕೊಟ್ಟಾಗಲು ಸ್ಪಂದಿಸಿಲ್ಲ. ಜಿಲ್ಲಾಡಳಿತ ನಮ್ಮ ಆದೇಶವನ್ನು ಪಾಲಿಸುತ್ತಿದೆ. ಮುಂದಿನ ನಿರ್ಧಾರ ನಾವೇ ತೆಗೆದುಕೊಳ್ಳಬೇಕು. ಅಮ್ಯೂಸ್‌ಮೆಂಟ್ ಪಾರ್ಕ್ ಸಮಸ್ಯೆಯಾಗಿದ್ದು. ಬಿಗ್ ಬಾಸ್ ಸ್ಟುಡಿಯೋಗೂ ಇದಕ್ಕೂ ಸಂಬಂಧ ಇರಲಿಲ್ಲ. ಜಾಲಿವುಡ್ ಬಂದ್ ಮಾಡಿರೋದು ದಿಢೀರ್ ಅಲ್ಲ. ಬಿಗ್ ಬಾಸ್‌ಗೆ ಅವರು ಮೋಸ ಮಾಡಿದ್ದಾರಾ ಗೊತ್ತಿಲ್ಲ. ನಮಗೆ ಇನ್ನೂ ಮನವಿ ಬಂದಿಲ್ಲ. ಜಿಲ್ಲಾಧಿಕಾರಿ ಗಳಿಂದ ಬಂದ ಮೇಲೆ ನೋಡೋಣ ಎಂದು ಹೇಳಿದರು. ಇದನ್ನೂ ಓದಿ: `ನಟ್ಟು ಬೋಲ್ಟು’ ಹೇಳಿಕೆಗೂ ಬಿಗ್‌ಬಾಸ್ ಬಂದ್‌ಗೂ ಸಂಬಂಧವಿಲ್ಲ – ಈಶ್ವರ್ ಖಂಡ್ರೆ 

    ಜಾಲಿವುಡ್ ಮೂವತ್ತು ಎಕ್ರೆ ಪ್ರದೇಶದಲ್ಲಿದೆ. ಬಿಗ್ ಬಾಸ್ ನಡೆಯುತ್ತಿರೋದು ಒಂದು ಎಕ್ರೆ. ಅಮ್ಯೂಸ್‌ಮೆಂಟ್ ಪಾರ್ಕ್ ದೂರನ್ನು ಆಧರಿಸಿ ನೋಟಿಸ್ ಕೊಟ್ಟಿರೋದು. ಅವರು ಕನಿಷ್ಟ ಅರ್ಜಿ ಸಲ್ಲಿಕೆ ಮಾಡಿಲ್ಲ. ಇಷ್ಟು ದಿನ ಮುಚ್ಚಲು ಸಮಯಾವಕಾಶ ಯಾಕೆ? ಏಕಾಏಕಿ ಮುಚ್ಚಲು ಆಗಲ್ಲ. ಕೋರ್ಟ್ ತಪರಾಕಿ ಹಾಕಬಹುದು. ಈ ಫೈಲ್ ಪೆಂಡಿಂಗ್ ಇರೋದು ಆಗಸ್ಟ್‌ನಲ್ಲಿ ನಾನು ಅಧಿಕಾರ ವಹಿಸಿಕೊಂಡಾಗ ಗೊತ್ತಾಗಿದೆ. ನಾನು ಅಧಿಕಾರಕ್ಕೆ ಬಂದ ತಕ್ಷಣ ಕ್ರಮ ಕೈಗೊಂಡಿದ್ದೇನೆ. ಮೂರು ನೋಟಿಸ್ ಕೊಟ್ಟಿದ್ದೇವೆ. ಸ್ಪಾಟ್ ಮಹಜರು ಆಗಿದೆ. ಹತ್ತು ದಿನಗಳ ಕಾಲವಕಾಶವನ್ನು ಕೊಡಬಹುದು. ಅಫಿಡವಿಟ್ ಜೊತೆಗೆ ಮನವಿ ಪತ್ರ ಕೊಟ್ಟರೆ ಕಾಲಾವಕಾಶವನ್ನು ಕೊಡಬಹುದು. ಅಂದರೆ ಕಾನೂನಿನಲ್ಲಿ ಅವಕಾಶ ಇದೆ ಆದರೆ ಇದುವರೆಗೆ ತೀರ್ಮಾನ ಆಗಿಲ್ಲ. ರೆಡ್ ಕೆಟಗರಿ ಆಗಿರೋದ್ರಿಂದ 90 ದಿನ ಅವಕಾಶ ನೀಡಬಹುದು. ಈ ವಿಚಾರ ಈಗಾಗಲೇ ಕೋರ್ಟ್‌ನಲ್ಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಗ್‌ಬಾಸ್‌ಗೆ ಇಂದೇ ಬಿಗ್‌ ರಿಲೀಫ್‌? – ಮತ್ತೆ ಶೋ ಆರಂಭ ಸಾಧ್ಯತೆ

    ನಾನು ರಾಜಕೀಯ ಪಕ್ಷಕ್ಕೆ ಈಗ ಸೇರಿದವನು ಅಲ್ಲ. ನಾನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ. ಇದರಲ್ಲಿ ರಾಜಕೀಯ ಬೆರೆಸೋದು ಬೇಡ. ಕಾಯ್ದೆಯಡಿ ಕ್ಲೋಸರ್ ಆದೇಶ ಕೊಟ್ಟಿದ್ದೇವೆ. ದಂಡವನ್ನು ಕಟ್ಟಬೇಕಾಗುತ್ತೆ. ಈ ಕ್ಲೋಸರ್ ಆದೇಶ ಶಾಶ್ವತ, ತಾತ್ಕಾಲಿಕವೂ ಅಲ್ಲ. ಅವರು ದಂಡವನ್ನು ಕಟ್ಟಬೇಕಾಗುತ್ತದೆ. ಕೋರ್ಟ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಏಕಕಾಲಕ್ಕೆ ಮನವಿ ಕೊಟ್ಟರೆ ಕಷ್ಟ. ಜಾಲಿವುಡ್‌ನವರು ಕೂಡ ಕರೆ ಮಾಡಿದ್ದಾರೆ. ಅವರಿಗೂ ಅದನ್ನೇ ಹೇಳಿದ್ದೇನೆ. ಮಾನವೀಯತೆ ದೃಷ್ಟಿಯಿಂದ ಏನಾದರೂ ಮಾಡಬಹುದು, ನೋಡೋಣ ಎಂದರು. ಇದನ್ನೂ ಓದಿ: ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ: ಜಾಲಿವುಡ್ ಆಡಳಿತ ಮಂಡಳಿ

  • ಬಿಗ್‍ಬಾಸ್ 12- ಸಂಚಿಕೆಗೆ 14 ಕೋಟಿ ಸಂಭಾವನೆಗೆ ಸಲ್ಮಾನ್ ಫಿಕ್ಸ್

    ಬಿಗ್‍ಬಾಸ್ 12- ಸಂಚಿಕೆಗೆ 14 ಕೋಟಿ ಸಂಭಾವನೆಗೆ ಸಲ್ಮಾನ್ ಫಿಕ್ಸ್

    ಮುಂಬೈ: ರಿಯಾಲಿಟಿ ಶೋಗಳಲ್ಲಿ ರಾಜ ಅಂತಾ ಕರೆಸಿಕೊಳ್ಳುವ ಬಿಗ್ ಬಾಸ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹಿಂದಿಯ ಬಿಗ್‍ಬಾಸ್-12 ಗೋವಾದಲ್ಲಿ ನಡೆಯುತ್ತಿದ್ದು, ಈ ಬಾರಿಯೂ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ನಿರೂಪಣೆ ಮಾಡಲಿದ್ದಾರೆ. ಈ ಬಾರಿ ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವ ಸಲ್ಮಾನ್ ಒಂದು ಸಂಚಿಕೆಗೆ 14 ಕೋಟಿ ರೂಪಾಯಿ ಪಡೆಯಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಈ ಬಾರಿಯ ಬಿಗ್‍ಬಾಸ್ ಒಟ್ಟು 13 ವಾರಗಳ ಕಾಲ ನಡೆಯಲಿದೆ. ಅಂದರೆ ಶನಿವಾರ ಮತ್ತು ಭಾನುವಾರ ಸಲ್ಮಾನ್ ನಿರೂಪಣೆಯಲ್ಲಿ ಶೋ ಮೂಡಿ ಬರಲಿದ್ದು, ಒಟ್ಟು 26 ಸಂಚಿಕೆ ಪ್ರಸಾರಗೊಳ್ಳಲಿವೆ. ಬಿಗ್‍ಬಾಸ್ ಸೀಸನ್ 12ರಲ್ಲಿ ಸಲ್ಮಾನ್ 364 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಪ್ರೋಮೋಗಳು ಪ್ರಸಾರಗೊಳ್ಳುತ್ತಿದ್ದು, 12ನೇ ಆವೃತ್ತಿಯಲ್ಲಿ 12 ಜೋಡಿಗಳು ಬಿಗ್ ಮನೆಯನ್ನು ಪ್ರವೇಶಿಸಲಿವೆ ಎನ್ನಲಾಗುತ್ತಿದೆ.

    ಸೀಸನ್ 11ರಲ್ಲಿ ಸಲ್ಮಾನ್ ಒಂದು ಸಂಚಿಕೆಗೆ 12 ಕೋಟಿ ಪಡೆದಿದ್ದರು. ಈ ವರ್ಷ 2 ಕೋಟಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ 3 ಕೋಟಿ ರೂ. ಹೆಚ್ಚು ಸಿಗಲಿದೆ. ಸೀಸನ್ 4ರಿಂದ 6ರವರೆಗೆ ಸಂಚಿಕೆಗೆ ಎರಡೂವರೆ ಕೋಟಿ ರೂ. ಪಡೆದಿದ್ದರು. ಸೀಸನ್ 8ರಲ್ಲಿ ಸಲ್ಮಾನ್ ತಮ್ಮ ಸಂಭಾವನೆಯನ್ನು ದ್ವಿಗುಣ ಮಾಡಿ ಸಂಚಿಕೆಗೆ 5 ಕೋಟಿ ಪಡೆದ್ರು. ಸೀಸನ್-9ಕ್ಕೆ 7 ಕೋಟಿ, ಸೀಸನ್ 10ಕ್ಕೆ 8 ಕೋಟಿ ಮತ್ತು ಸೀಸನ್ 11ಕ್ಕೆ 12 ಕೋಟಿ ರೂ. ಪಡೆದಿದ್ದಾರೆ.

    ಈಗಾಗಲೇ ಯಶಸ್ವಿಯಾಗಿ 11 ಸೀಸನ್ ಗಳನ್ನು ಮುಗಿಸಿರುವ ಬಿಗ್‍ಬಾಸ್ ಈ ಬಾರಿ ತನ್ನ ವಿಭಿನ್ನ ಪ್ರೋಮೋಗಳ ಮೂಲಕ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಬಾರಿಯ ಬಿಗ್ ಬಾಸ್‍ನಲ್ಲಿ ಯಾವೆಲ್ಲಾ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಎಂಬುದನ್ನು ಇದೂವರೆಗೂ ಚಾನೆಲ್ ಹೇಳಿಕೊಂಡಿಲ್ಲ. ಇದೇ ಸೆಪ್ಟೆಂಬರ್ 16ರಿಂದ ಬಿಗ್‍ಬಾಸ್ ರಿಯಾಲಿಟಿ ಶೋ ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv