Tag: Bigg Boss 11

  • Exclusive | ಲಕ್ಷ ಲಕ್ಷ ಹಣ ವಂಚನೆ ಆರೋಪ – ನನ್ನ ಹೆಸರು ಹಾಳು ಮಾಡುವ ಉದ್ದೇಶ ಬಿಟ್ಟು ಬೇರೆನಿಲ್ಲ: ಗೋಲ್ಡ್‌ ಸುರೇಶ್‌

    Exclusive | ಲಕ್ಷ ಲಕ್ಷ ಹಣ ವಂಚನೆ ಆರೋಪ – ನನ್ನ ಹೆಸರು ಹಾಳು ಮಾಡುವ ಉದ್ದೇಶ ಬಿಟ್ಟು ಬೇರೆನಿಲ್ಲ: ಗೋಲ್ಡ್‌ ಸುರೇಶ್‌

    ಕನ್ನಡದ ಬಿಗ್‌ಬಾಸ್‌ ಸೀಸನ್ 11ರ (Bigg Boss 11) ಸ್ಪರ್ಧಿ ಗೋಲ್ಡ್ ಸುರೇಶ್ (Gold Suresh) ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ ಕೇಳಿಬಂದಿದೆ. ಕೇಬಲ್‌ ಚಾನೆಲ್‌ ಸೆಟ್‌ಅಪ್‌ ಮಾಡಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.

    ಯಾರಿಗೂ ಹಣ ಕೊಡಬೇಕಿಲ್ಲ:
    ವಂಚನೆ ಆರೋಪ ಕುರಿತು ಗೋಲ್ಡ್ ಸುರೇಶ್‌ ಮೊದಲ ಬಾರಿಗೆ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ. ಇದು ಊಹಾಪೋಹದ ಆರೋಪ. ಅಧಿಕೃತವಾಗಿ ನನ್ನ ಮೇಲೆ‌ ಎಲ್ಲೂ ಎಫ್‌ಐಆರ್ (FIR) ಆಗಿಲ್ಲ. 2018ರಲ್ಲಿ ನನ್ನ ಸ್ನೇಹಿತನ ಮೂಲಕ ಆ ವ್ಯಕ್ತಿ ಪರಿಚಯ ಆಗಿದ್ರು. ಅವರ ಕೆಲಸ ಮಾಡಿಕೊಟ್ಟಿದ್ದೀನಿ. ನಾನು ಯಾರಿಗೂ ಯಾವುದೇ ಹಣ ಕೊಡಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ

     ದಾಖಲೆ ಇದ್ರೆ ದೂರು ಕೊಡಲಿ:
    ನಾನೊಬ್ಬ ಸಿವಿಲ್ ಕಂಟ್ರ್ಯಾಕ್ಟರ್‌, ಬ್ಯುಸಿನೆಸ್ ಮೆನ್, ಬೇರೆ ಬೇರೆ ವ್ಯವಹಾರ ಮಾಡ್ತಿನಿ. ಅವರ ಹತ್ರ ದಾಖಲೆ ಇದ್ದಿದ್ರೆ, ಈ ಆರೋಪ ಮೊದಲೇ ಮಾಡಬೇಕಿತ್ತು. ಬಿಗ್ ಬಾಸ್‌ನಿಂದ ಹೊರಗೆ ಬಂದಮೇಲೆ ಈಗ್ಯಾಕೆ ಮಾಡ್ತಿದ್ದಾರೆ? ಇದು ನಡೆದಿರೋದು 2018 ರಲ್ಲಿ ಇಷ್ಟು ದಿನ ಏನ್ ಮಾಡ್ತಿದ್ರು? ಅವರ ಹತ್ರ ದಾಖಲೆ ಇದ್ರೆ ಹೋಗಿ ದೂರು ಕೊಡಲಿ, ಕೇಸ್ ಹಾಕಲಿ, ಇದು ದುಡ್ಡಿಗಾಗಿ ಮಾಡಿರೋ ಕೆಲಸ ಅಷ್ಟೇ. ನಾನ್ ಕದ್ದು ಮುಚ್ಚಿ ಓಡಾಡ್ತಿಲ್ಲ, ಎಲ್ಲರಿಗೂ ಪರಿಚಿತ ಎಂದು ಹೇಳಿದ್ದಾರೆ. ಇದನ್ನೂ ಓದಿ: 6 ಲಕ್ಷ ಹಣ ನೀಡುವಂತೆ ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್‌ಗೆ ಬೆದರಿಕೆ – ಎನ್‌ಸಿಆರ್ ದಾಖಲು

    ನಾನು ಸಮಾಜ ಸೇವಕ
    ನಿನ್ನೆ ಬೆಳಗ್ಗೆ ಕಾಲ್ ಮಾಡಿ ದುಡ್ಡು ಕೊಟ್ಟಿಲ್ಲ ಅಂದರೆ ಮಾಧ್ಯಮಕ್ಕೆ ಹೋಗ್ತಿನಿ ಅಂತಾರೆ. ಇದರಿಂದಲೇ ಗೊತ್ತಾಗುತ್ತೆ ಇಂತಹ ಬೆದರಿಕೆಗೆಲ್ಲಾ ನಾನು ಜಗ್ಗಲ್ಲ, ತಲೆನೂ ಕೆಡಿಸಿಕೊಳ್ಳಲ್ಲ. ನಾನು ಸಮಾಜ ಸೇವಕ, ಹಾಗಾಗಿ ತುಂಬಾ ಕೇಳಿಕೊಂಡ್ರು ಅಂತಾ 50 ಸಾವಿರ ಸಹಾಯ ಮಾಡಿದ್ದೀನಿ ಅಷ್ಟೇ. ನಾನ್ ಏನು ಅಂತಾ ನಂಗೆ ಮಾತ್ರ ಗೊತ್ತು, ಕಾಮೆಂಟ್ ಮಾಡೋರಿಗೆಲ್ಲಾ ಉತ್ತರ ಕೊಡಲ್ಲ. ಇದರಲ್ಲಿ ನನ್ನ ಹೆಸರು ಹಾಳು ಮಾಡುವ ಉದ್ದೇಶ ಬಿಟ್ಟು ಬೇರೆನಿಲ್ಲ. ನಾನು ಈಗಾಗಲೇ ದೂರು ಕೊಟ್ಟಿದ್ದೀನಿ, ಕ್ರಮ ಆಗುತ್ತೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ ಶಂಕೆ – ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ

  • ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ

    ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ

    ರಾಯಚೂರು: ಕನ್ನಡದ ಬಿಗ್‌ಬಾಸ್‌ ಸೀಸನ್ 11ರ (Bigg Boss 11) ಸ್ಪರ್ಧಿ ಗೋಲ್ಡ್ ಸುರೇಶ್ (Gold Suresh) ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ ಕೇಳಿಬಂದಿದೆ. ಕೇಬಲ್‌ ಚಾನೆಲ್‌ ಸೆಟ್‌ಅಪ್‌ ಮಾಡಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.

    14 ಲಕ್ಷ ರೂ. ಅಗ್ರೀಮೆಂಟ್, ಹಣ ವಾಪಸ್ ಮಾಡದ ಆರೋಪ
    ಮಾನ್ವಿ ಪಟ್ಟಣದ ಮೈನುದ್ದಿನ್, ಸುರೇಶ್ ಅವರು ಕೇಬಲ್ ಚಾನೆಲ್​ನ ಸೆಟಅಪ್ (Cable Chanel Setup )ಮಾಡಿಕೊಡುವುದಾಗಿ ಹೇಳಿದ್ದರು. ಬರೋಬ್ಬರಿ 14 ಲಕ್ಷಕ್ಕೆ ಒಪ್ಪಂದ ಆಗಿತ್ತು. ಅಲ್ಲದೆ ಸುರೇಶ್ 4 ಲಕ್ಷ ರೂಪಾಯಿ ಮುಂಗಡ ಪಡೆದಿದ್ದರು. ಆ ಬಳಿಕ ಹಂತ ಹಂತವಾಗಿ 7 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. 2017ರಲ್ಲಿ ಇಬ್ಬರ ಮಧ್ಯೆ ಒಪ್ಪಂದ ನಡೆದಿತ್ತು. ಆದರೆ, ಆ ಬಳಿಕ ಅರೆಬರೆ ಕೆಲಸ ಮಾಡಿ ಸುರೇಶ್ ಅರ್ಧಕ್ಕೆ ಬಿಟ್ಟರು. ಇದಾದ ಬಳಿಕ 2017ರಲ್ಲೇ 1 ಲಕ್ಷ ರೂ. ಹಣ ವಾಪಸ್‌ ಪಡೆಯಲಾಗಿತ್ತು. ಆ ನಂತರ ಸುರೇಶ್ ನನ್ನ ಮತ್ತು ಸ್ನೇಹಿತನ ಸಂಪರ್ಕಕ್ಕೇ ಸಿಕ್ಕಿರಲಿಲ್ಲ ಎಂದು ಮೈನುದ್ದೀನ್ ಆರೋಪಿಸಿದ್ದಾರೆ. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಜುಲೈ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿಕೆ

    ಬಿಗ್‌ಬಾಸ್‌ ಬಳಿಕ ಸುರೇಶ್‌ನನ್ನ ಮೈನುದ್ದಿನ್ ಪತ್ತೆ ಹಚ್ಚಿದ್ದ, ಅದಾದಮೇಲೆ ಮೈನುದ್ದೀನ್‌ ಸ್ನೇಹಿತ ಬಸವರಾಜ್‌ಗೆ ಸುರೇಶ್‌ 50 ಸಾವಿರ ರೂ. ಹಣ ಹಾಕಿದ್ದ. ಆಗಾಗ್ಗೆ ಅಲ್ಪಸ್ವಲ್ಪ ಹಣ ಕೊಟ್ಟಿದ್ದಾರೆ, ಉಳಿದ 4 ಲಕ್ಷ ಹಣ ಕೊಡಿ ಅಂತ ಕೇಳ್ತಿದ್ದೀವಿ. ಕೆಲ ದಿನಗಳ ಹಿಂದೆಯೂ ಮುಂಬೈಗೆ ಬನ್ನಿ ಕೊಡ್ತಿನಿ ಅಂತ ಗೋಲ್ಡ್ ಸುರೇಶ್ ಮುಂಬೈ ಲೊಕೇಶನ್ ಹಾಕಿದ್ದರು ಎಂದು ದೂರಿದ್ದಾರೆ. ಇದನ್ನೂ ಓದಿ: ಬೈಕ್‌ಗೆ ಕ್ಯಾಂಟರ್ ಡಿಕ್ಕಿ – ಕೆಲಸಕ್ಕೆ ತೆರಳುತ್ತಿದ್ದ ಸ್ನೇಹಿತರು ಬೈಕ್ ಅಪಘಾತದಲ್ಲಿ ದುರ್ಮರಣ

    ಕಾನೂನು ಹೋರಾಟ ಮಾಡ್ತೀನಿ: ಗೋಲ್ಡ್‌ ಸುರೇಶ್‌
    ಇನ್ನೂ ಮೈನುದ್ದೀನ್‌ ಆರೋಪ ತಳ್ಳಿಹಾಕಿರುವ ಗೋಲ್ಡ್‌ ಸುರೇಶ್‌, 2017ರಲ್ಲೇ ಕೇಬಲ್ ಚಾನಲ್ ಮಾಡಿಕೊಟ್ಟಿದ್ದೀನಿ, ಈಗ ಯಾಕೆ ಆರೋಪ ಮಾಡ್ತಿದಾರೆ ಗೊತ್ತಿಲ್ಲ? ಅವರು ಕೇಬಲ್ ಚಾನೆಲ್‌ರನ್ನ ಮಾಡುತ್ತಿದ್ದಾರೆ. ಅವರು ನಮ್ಮ ಜೊತೆ ವ್ಯವಹಾರ ಸರಿಯಾಗಿ ಮಾಡದ ಹಿನ್ನೆಲೆ ಅವರಿಗೆ ಬಾಕಿ ಹಣ ಮರಳಿಸಿದ್ದೇನೆ. 2017ರ ಬಳಿಕ ನಾನು ಮೈನುದ್ದಿನ್‌ನ ಭೇಟಿಯಾಗಿಲ್ಲ. ಬಿಗ್‌ಬಾಸ್ ಮುಗಿದು ಎಷ್ಟು ದಿನ ಆಯ್ತು? ಈಗ ನನ್ನ ಮೇಲೆ ಆರೋಪ ಮಾಡ್ತಿದ್ದಾನೆ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ಮುಂದುವರಿದ ಮಳೆ – ಕರಾವಳಿಗೆ ಆರೆಂಜ್, ಉತ್ತರ ಒಳನಾಡಿನ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ನಾವು 1 ವರ್ಷದ ಅಗ್ರಿಮೆಂಟ್ ಮಾಡಿಕೊಂಡಿದ್ವಿ ಅದು ಮುಗಿದೇ ಹೋಗಿದೆ. ರಾಯಚೂರಿನ ಬಸವರಾಜ್ ಎನ್ನುವವರ ಮೂಲಕ ಪರಿಚಯ ಆಗಿದ್ದ. ಬೇರೆಯವರು ನಡೆಸುತ್ತಿದ್ದ ಚಾನಲ್ ಇವರಿಗೆ ಕೊಡಿಸಿದ್ದೆವು. ಆ ಚಾನಲ್ ಸಹ ಬೇರೆಯವರ ಹೆಸರಿನಲ್ಲಿದೆ. ಅವರು ಸಹ ಈಗ ಮುಂದೆ ಬರ್ತಾರೆ. ನಮ್ಮದು 6 ವರೆ ಲಕ್ಷದ ವ್ಯವಹಾರ, ಹಣಕ್ಕೆ ತಕ್ಕಂತೆ ಸ್ಟೂಡಿಯೋ ಎಲ್ಲಾ ಸೆಟ್ ಮಾಡಿಕೊಟ್ಟಿದ್ದೇನೆ. ಸುಮ್ಮನೆ ಆರೋಪ ಮಾಡುತ್ತಿರುವುದರಿಂದ ನಾನು ಕಾನೂನು ಮೊರೆ ಹೋಗ್ತಿನಿ, ಹೋರಾಟ ಮಾಡ್ತಿನಿ ಎಂದು ಸುರೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಮೊಬೈಲ್‌ನಲ್ಲಿ 13,500 ಅಶ್ಲೀಲ ಚಿತ್ರ – ಫೇಕ್ ಅಕೌಂಟ್‌ನಿಂದ ಮಹಿಳೆಯರ ಮಾನಹಾನಿ ಮಾಡ್ತಿದ್ದ ಕಾಮುಕ ಅರೆಸ್ಟ್

  • ಇಂದು ಸ್ವಗ್ರಾಮಕ್ಕೆ ಬಿಗ್ ಬಾಸ್ ವಿನ್ನರ್ ಹನುಮಂತ – ಅದ್ಧೂರಿ ಸ್ವಾಗತಕ್ಕೆ ಸ್ನೇಹಿತರು, ಗ್ರಾಮಸ್ಥರ ಸಿದ್ಧತೆ

    ಇಂದು ಸ್ವಗ್ರಾಮಕ್ಕೆ ಬಿಗ್ ಬಾಸ್ ವಿನ್ನರ್ ಹನುಮಂತ – ಅದ್ಧೂರಿ ಸ್ವಾಗತಕ್ಕೆ ಸ್ನೇಹಿತರು, ಗ್ರಾಮಸ್ಥರ ಸಿದ್ಧತೆ

    ಹಾವೇರಿ: ಭಜನೆ ಮತ್ತು ಶಿಶುನಾಳ ಶರೀಫ ತತ್ವಗಳನ್ನ ಹೇಳುತ್ತಾ, ಸರಿಗಮಪ ವೇದಿಕೆಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದ ಹಳ್ಳಿಹೈದ ಹನುಮಂತ (Hanumantha Lamani) ಬಿಗ್ ಬಾಸ್ ಸೀಸನ್ 11ರಲ್ಲಿ (Bigg Boss 11) ವಿನ್ನರ್ ಆಗಿ ಕರುನಾಡಿನ ಜನರ ಮನಸ್ಸು ಗೆದ್ದಿದ್ದಾರೆ. ಈ ಹಿನ್ನೆಲೆ ಗ್ರಾಮದ ಸ್ನೇಹಿತರು ಹಾಗೂ ಅಭಿಮಾನಿಗಳು ಹನುಮಂತ ಅವರಿಗೆ ಅದ್ಧೂರಿ ಸ್ವಾಗತ ಮಾಡುವ ಪ್ಯ್ಲಾನ್ ಮಾಡುತ್ತಿದ್ದಾರೆ. ಹನುಮಂತ ಅವರ ತಂದೆ ತಾಯಿ ಕೂಡಾ ಇಂದು ಬೆಂಗಳೂರಿನಿಂದ ಆಗಮಿಸಲಿದ್ದಾರೆ.

    ಬಿಗ್ ಬಾಸ್ 11ರಲ್ಲಿ ಹಾವೇರಿ (Haveri) ಜಿಲ್ಲೆ ಸವಣೂರು (Savanur) ತಾಲೂಕಿನ ಚಿಲ್ಲೂರುಬಡ್ನಿಯ (Chillur Badni) ಹನುಮಂತ ಲಮಾಣಿ ವಿನ್ನರ್ ಆಗಿ ಕರುನಾಡ ಜನರ ಮನಗೆದ್ದಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಇಂದು ಸ್ವಗ್ರಾಮಕ್ಕೆ ಹನುಮಂತ ಆಗಮಿಸಲಿದ್ದು, ಗ್ರಾಮದ ಜನರು ಅದ್ಧೂರಿ ಸ್ವಾಗತ ಸಿದ್ಧತೆ ನಡೆಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆಯಲ್ಲಿ ಡೊಳ್ಳು, ಭಜನೆ ಹಾಗೂ ಜಾಂಜ್ ಮೇಳೆ ಸೇರಿದಂತೆ ವಿವಿಧ ಕಲಾತಂಡಗಳ ಮೂಲಕ ಸ್ವಾಗತ ಮಾಡಲಿದ್ದಾರೆ. ಅಲ್ಲದೆ ಕೆಲವು ಅಭಿಮಾನಿಗಳು ಈಗಾಗಲೇ ಹನುಮಂತ ಅವರನ್ನು ನೋಡಲು ಮನೆಗೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: My Dear Friend – ಟ್ರಂಪ್‌ ಜೊತೆಗೆ ಮೋದಿ ದೂರವಾಣಿ ಸಂಭಾಷಣೆ

    ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಕುರಿಗಾಹಿ ಹನುಮಂತ ಈಗ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಹನುಮಂತ ಅವರು ಬಹಳ ಏನೂ ಕಲಿತಿಲ್ಲ. ಕಡುಬಡತನದ ಕುಟುಂಬದಲ್ಲಿ ಬೆಳೆದ ಹನುಮಂತ, ಕುರಿ ಕಾಯುವ ಕೆಲಸ ಮಾಡುತ್ತಿದ್ದರು. ಕುರಿ ಕಾಯುತ್ತಾ ಕಾಯುತ್ತಾ ಶಿಶುನಾಳ ಶರೀಫರ ನಿನ್ನೊಳಗ ನೀನು ತಿಳದ ನೋಡಣ್ಣ ಹಾಗೂ ಕೇಳ ಜಾಣ ಶಿವ ಧ್ಯಾನ ಮಾಡಣ್ಣ ಎಂಬ ಹಾಡುಗಳನ್ನು ಹಾಡುತ್ತಿದ್ದರು. ಕೋಗಿಲೆ ಕಂಠದ ಹನುಮಂತ ಅವರ ಹಾಡುಗಳು ಖಾಸಗಿ ವಾಹಿನಿಯ ಸರಿಗಮಪ ವೇದಿಕೆಗೆ ಪ್ರವೇಶಿಸಿದವು. ಕುರಿಗಾಹಿ ಹನುಮಂತ ಅವರ ಹಾಡು ಹೇಳಿದ ತೀರ್ಪುಗಾರರು ಅವರ ಕೋಗಿಲೆ ಕಂಠಕ್ಕೆ ಫುಲ್‌ಫಿದಾ ಆಗಿಬಿಟ್ಟರು. ಸರಿಗಮಪ ವೇದಿಕೆಯಲ್ಲೂ ಹನುಮಂತ ಅವರು ಭರ್ಜರಿಯಾಗಿ ಮಿಂಚಿ ಸಖತ್ ಫೇಮಸ್ ಆಗಿದ್ದಾರೆ. ಇದೀಗ ಬಿಗ್ ಬಾಸ್‌ನಲ್ಲಿ ಸರಳ ವ್ಯಕ್ತಿತ್ವ, ತನ್ನ ಜಾನಪದ ಶೈಲಿಯ ಹಾಡುಗಳ ಮೂಲಕ ಹನುಮಂತ ಜನರ ಮನಸ್ಸು ಗೆದ್ದು, ಬಿಗ್ ಬಾಸ್‌ನಲ್ಲಿ ಜಯಶಾಲಿಯಾಗಿದ್ದಾರೆ. ಇದನ್ನೂ ಓದಿ: ತುಮಕೂರಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ವೇಳೆ ಬಂಡೆ ಸ್ಫೋಟ – ಓರ್ವ ಕಾರ್ಮಿಕ ಸಾವು

  • BBK11: ಮಾನಸಾ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್

    BBK11: ಮಾನಸಾ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Season 11) ಮನೆಯಿಂದ ಮಾನಸಾ ಎಲಿಮಿನೇಟ್ ಆಗಿದ್ದಾರೆ. ಸದಾ ಕಿರಿಕ್‌ನಿಂದಲೇ ಸದ್ದು ಮಾಡುತ್ತಿದ್ದ ತುಕಾಲಿ ಸಂತೋಷ್ ಪತ್ನಿಗೆ ದೊಡ್ಮನೆಯ ಆಟ ಅಂತ್ಯವಾಗಿದೆ.

    ಈ ಬಾರಿ ಬಿಗ್ ಬಾಸ್‌ಗೆ ಸಂತೋಷ್ ಪತ್ನಿ ಮಾನಸಾ (Manasa) ಬಂದಿದ್ದಾರೆ ಎಂದರೆ ಹಾಸ್ಯಕ್ಕೆ ಕೊರತೆ ಇಲ್ಲ ಎಂದು ಫ್ಯಾನ್ಸ್ ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ, ದೊಡ್ಮನೆಯಲ್ಲಿ ಒಂದಲ್ಲಾ ಒಂದು ಜಗಳದಿಂದಲೇ ಮಾನಸಾ ಹೈಲೆಟ್ ಆಗಿದ್ದರು. ಮನರಂಜನೆಗಿಂತ ಕಿರಿಕ್ ಮಾಡೋದ್ರಲ್ಲಿ ಮುಂದು ಎಂದು ಫ್ಯಾನ್ಸ್ ದೂರಿದ್ದರು. ಈಗ ನಟಿಯ ಆಟಕ್ಕೆ ಬಿಗ್ ಬಾಸ್ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ: ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗುರುಪ್ರಸಾದ್ ಅಂತ್ಯಕ್ರಿಯೆ

    ಕಳೆದ ವಾರ ಸುದೀಪ್ ಅನುಪಸ್ಥಿತಿಯಲ್ಲಿ ಯೋಗರಾಜ್ ಭಟ್ ಅತಿಥಿಯಾಗಿ ಬಂದಾಗ ಅವರು ಕೂಡ ಮಾನಸಾಗೆ ಬುದ್ಧಿ ಹೇಳಿದ್ದರು. ಮಾತನಾಡುವ ವೈಖರಿ ಬದಲಿಸಿಕೊಳ್ಳಿ ಎಂದು ತಿಳಿಹೇಳಿದ್ದರು. ಹನುಮಂತ ಕೂಡ ಗಂಡಸರ ಮೇಲೆ ರೇಗೋ ಹಾಗೆ ಬಂದು ಬಿಡುತ್ತಾರೆ ಅಂತ ಕಾರಣ ಕೊಟ್ಟು ನಾಮಿನೇಟ್ ಮಾಡಿದ್ದರು.

    ಹಂಸ ಎಲಿಮಿನೇಷನ್ ನಂತರ ಬಿಗ್ ಬಾಸ್‌ನಿಂದ ಮಾನಸಾ ಹೊರಬಂದಿದ್ದು, ಒಂದಿಷ್ಟು ನೋಡುಗರಿಗೆ ಖುಷಿ ಕೊಟ್ಟಿದ್ದರೆ, ಮತ್ತೊಂದಿಷ್ಟು ಮಂದಿಗೆ ಬೇಸರ ಮೂಡಿಸಿದೆ. ಇದನ್ನೂ ಓದಿ: ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ

  • BB Season 11 | ಬೇರೆಯವರನ್ನು ನೋಡ್ಬೇಕು ಅಂತಾ ನಾನು ವೇಟ್ ಮಾಡ್ತಾ ಇದೀನಿ: ಸುದೀಪ್

    BB Season 11 | ಬೇರೆಯವರನ್ನು ನೋಡ್ಬೇಕು ಅಂತಾ ನಾನು ವೇಟ್ ಮಾಡ್ತಾ ಇದೀನಿ: ಸುದೀಪ್

    ಬೆಂಗಳೂರು: ಈ ಬಾರಿಯ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ನಿರೂಪಣೆಯನ್ನು ಸುದೀಪ್ ಮಾಡಲ್ವಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಸುದೀಪ್ ಅವರು ನೀಡಿದ ಹೇಳಿಕೆಯಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.

    ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಕೆಲವು ದಿನಗಳಲ್ಲೇ ಸೀಸನ್ 11 (Season 11) ಆರಂಭವಾಗಲಿದೆ. ಇಲ್ಲಿಯವರೆಗೂ ನಡೆದ 10 ಸೀಸನ್‌ಗಳನ್ನು ನಟ ಅಭಿನಯ ಚಕ್ರವರ್ತಿ ಸುದೀಪ್ (Abhinaya Chakravarty Sudeep) ನಿರೂಪಕರಾಗಿ ನಡೆಸಿಕೊಂಡು ಬಂದಿದ್ದರು.ಇದನ್ನೂ ಓದಿ: ಕೋರ್ಟ್ ಆದೇಶ ಪಾಲಿಸದ ಮಸ್ಕ್ – ಬ್ರೆಜಿಲ್‍ನಲ್ಲಿ ಎಕ್ಸ್ ಸೇವೆ ಸ್ಥಗಿತ

    ಕಳೆದ ಕೆಲವು ದಿನಗಳಿಂದ ಬಿಗ್ ಬಾಸ್ ಸೀಸನ್ 11ರ ನಿರೂಪಕ ಬದಲಾಗುವ ಕುರಿತು ಸುದ್ದಿ ಎಲ್ಲೆಡೆ ಹಬ್ಬಿತ್ತು ಆದರೆ ಇದಕ್ಕೆ ಸಂಬಂಧಿಸಿದಂತೆ ವಾಹಿನಿಯಾಗಲಿ, ನಟ ಸುದೀಪ್ ಆಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿರಲಿಲ್ಲ.

    ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಬಿಗ್ ಬಾಸ್ ಸೀಸನ್ -11 ಕ್ಕೆ ಬೇರೆಯವರೂ ಬರಲಿ ಅಂತಾ ಕಾಯ್ತಾ ಇದೀನಿ. ಬಿಗ್ ಬಾಸ್‌ನ 10 ಸೀಸನ್‌ಗಳನ್ನು ನಾನು ಡೆಡಿಕೇಟ್ ಮಾಡಿದ್ದೀನಿ. ಕಳೆದ 10 ಸೀಸನ್‌ಗಳನ್ನು ನಾನು ನಡೆಸಿಕೊಂಡು ಬಂದಿದ್ದೀನಿ. ನಾನು ಬಿಗ್ ಬಾಸ್ ನಡೆಸಿಕೊಡ್ತೀನಿ ಅಂತಾ ಎಲ್ಲರಿಗೂ ಗೊತ್ತಿದೆ. ಆದರೆ ನಾನು ಹೇಗೆ ನಡೆಸಿಕೊಡುತ್ತಿದ್ದೆ ಅಂತಾ ಯಾರಿಗಾದರೂ ಗೊತ್ತಿದ್ಯಾ? ಬಿಗ್ ಬಾಸ್‌ಗಾಗಿ ನಾನು ಎಲ್ಲಿದ್ದರೂ ಬರಬೇಕಾಗುತ್ತದೆ. ಬಿಗ್ ಬಾಸ್ ನಡೆಸಬೇಕಾದರೆ ಅದರ ಹಿಂದಿನ ಸ್ಥಿತಿ ಹೇಗಿರುತ್ತದೆ ಅಂತಾ ನನಗೆ ಗೊತ್ತಿದೆ ಎಂದು ಬಿಚ್ಚಿಟ್ಟರು.ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ನರ್ಸ್‌ ಮೇಲೆ ಅತ್ಯಾಚಾರ – 59ರ ವ್ಯಕ್ತಿ ಬಂಧನ

    ಈ ಸಂದರ್ಭದಲ್ಲಿ ಸಿನಿಮಾಗೆ ನ್ಯಾಯ ಕೊಡಬೇಕಾ? ಅಥವಾ ಬಿಗ್ ಬಾಸ್ ಶೋಗೆ ನ್ಯಾಯ ಕೊಡಬೇಕಾ? ಎಂದು ಪ್ರಶ್ನಿಸಿದರು. ಸುದೀಪ್ ಅವರು ಈ ಮಾತನ್ನು ಆಡಿದ ಬೆನ್ನಲ್ಲೇ ಈ ಬಾರಿಯ ಶೋನದಲ್ಲಿ ನಿರೂಪಣೆ ಮಾಡ್ತಾರೋ ಇಲ್ವೋ ಪ್ರಶ್ನೆ ಎದುರಾಗಿದೆ. ಮಾಧ್ಯಮಗೋಷ್ಠಿಯಲ್ಲಿ ನಾನು ಶೋ ನಡೆಸಿಕೊಡುತ್ತೇನೆ ಅಥವಾ ನಡೆಸಿಕೊಡುವುದಿಲ್ಲ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟವಾದ ಉತ್ತರ ನೀಡಿಲ್ಲ. ವಾಹಿನಿ ಸಹ ಈ ವಿಚಾರದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಹೀಗಾಗಿ ಬಿಗ್ ಬಾಸ್ ಆರಂಭವಾಗುವವರೆಗೂ ಕುತೂಹಲ ಮುಂದುವರಿಯಲಿದೆ.