Tag: bigg boos kannada

  • ವಿನ್ನರ್‌ ಘೋಷಣೆಗೆ ಕೌಂಟ್‌ಡೌನ್‌, ಯಾರ ಕೈ ಸೇರಲಿದೆ ಬಿಗ್ ಬಾಸ್ ಟ್ರೋಫಿ?

    ವಿನ್ನರ್‌ ಘೋಷಣೆಗೆ ಕೌಂಟ್‌ಡೌನ್‌, ಯಾರ ಕೈ ಸೇರಲಿದೆ ಬಿಗ್ ಬಾಸ್ ಟ್ರೋಫಿ?

    ಬಿಗ್ ಬಾಸ್ ಸೀಸನ್ 9 (Bigg Boss Kannada 9) ಮುಗಿಯಲು ಕ್ಷಣಗಣನೆ ಶುರುವಾಗಿದೆ. ಬಿಗ್ ಬಾಸ್ ವಿನ್ನರ್ ಕಿರೀಟ ಯಾರ ಕೈ ಸೇರಲಿದೆ ಎಂಬುದನ್ನ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

    ದೊಡ್ಮನೆಯ ಆಟಕ್ಕೆ ಬ್ರೇಕ್ ಬೀಳಲು ಕೆಲವೇ ಗಂಟೆಗಳು ಬಾಕಿಯಿದೆ. ಸದ್ಯ ಬಿಗ್ ಬಾಸ್ ಮನೆಯಿಂದ ದಿವ್ಯಾ ಉರುಡುಗ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಈ ಬಾರಿಯೂ ಕೂಡ ದಿವ್ಯಾ ಉರುಡುಗಗೆ (Divya Uruduga) ಅದೃಷ್ಟ ಕೈಕೊಟ್ಟಿದೆ. ಇದನ್ನೂ ಓದಿ:BREAKING: ಕೊನೆಗೂ ಗುಡ್ ನ್ಯೂಸ್ ಕೊಟ್ರು ನರೇಶ್, ಪವಿತ್ರಾ: ಮದುವೆ ಡೇಟ್ ಫಿಕ್ಸ್

    ಸದ್ಯ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರಾಜಣ್ಣ, ದೀಪಿಕಾ ದಾಸ್ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ನಡುವೆ ಸಖತ್ ಫೈಟ್ ಇದೆ.

    ಬಿಗ್ ಬಾಸ್ ಸೀಸನ್ ೯ರ ವಿನ್ನರ್ ಯಾರು ಎಂದು ಡಿ.31ರಂದು ಅನೌನ್ಸ್ ಆಗಲಿದೆ. ಯಾರಿಗೆ ಒಲಿಯಲಿದೆ ವಿಜಯಲಕ್ಷಿö್ಮ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಮೂರನೇ ವಾರ ನಾಮಿನೇಷನ್‌ ಸ್ಟಾರ್ಟ್‌: ಉದಯ್‌ ಸೂರ್ಯಗೆ ಮನೆಯಿಂದ ಗೇಟ್‌ ಪಾಸ್?

    ಮೂರನೇ ವಾರ ನಾಮಿನೇಷನ್‌ ಸ್ಟಾರ್ಟ್‌: ಉದಯ್‌ ಸೂರ್ಯಗೆ ಮನೆಯಿಂದ ಗೇಟ್‌ ಪಾಸ್?

    ಬಿಗ್ ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಒಬ್ಬಬ್ಬರೇ ಮನೆಯಿಂದ ಸ್ಪರ್ಧಿಗಳು ಹೊರನಡೆಯುತ್ತಿದ್ದಾರೆ. ಇದೀಗ 12 ಜನ ಸ್ಪರ್ಧಿಗಳ ಮಧ್ಯೆ ಪೈಪೋಟಿ ನಡೆಯುತ್ತಿದ್ದು, ಮೂರನೇ ವಾರದ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದ್ದು, ಈ ಬಾರಿ ನಾಮಿನೇಷನ್ ರೇಸ್ ನಲ್ಲಿ ಸೋನು ಶ್ರೀನಿವಾಸ್ ಗೌಡ ಸೇಫ್ ಆಗಿದ್ದಾರೆ.

    ದೊಡ್ಮನೆಯ ಆಟ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಸದ್ಯ ನಾಮಿನೇಷನ್ ವಿಚಾರವಾಗಿ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಕಡೆಯಿಂದ ಎಲ್ಲರಿಗೂ ಒಂದು ಬಾಕ್ಸ್ ಕಳಿಸಲಾಗಿತ್ತು. ಆ ಬಾಕ್ಸ್‌ನಲ್ಲಿ ಎರಡು ವಸ್ತು ಇತ್ತು. ಒಂದರಲ್ಲಿ ಕಣ್ಣಿನ ಚಿತ್ರ ಇತ್ತು, ಮತ್ತೊಂದು ಬಾಕ್ಸ್‌ನಲ್ಲಿ ಕನ್ಫೆಷನ್ ರೂಮ್ ಎಂದು ಇತ್ತು. ಕಣ್ಣಿನ ಚಿತ್ರ ಇದ್ದವರು ಎಲ್ಲರ ಎದುರು ಸ್ಪರ್ಧಿಗಳನ್ನು ನಾಮಿನೇಟ್‌ಗೆ ಮಾಡಬೇಕು. ಕನ್ಫೆಷನ್ ರೂಮ್ ಎಂದು ಬರೆದುಕೊಂಡಿದ್ದವರು ಕನ್ಫೆಷನ್ ರೂಮ್‌ಗೆ ತೆರಳಿ ನಾಮಿನೇಟ್ ಮಾಡಬೇಕು.

    ಮೂರನೇ ವಾರದ ಆಟದಲ್ಲಿ ಉದಯ್, ರೂಪೇಶ್, ನಂದಿನಿ, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀಗೆ ಹೆಚ್ಚು ವೋಟ್ ಬಿದ್ದಿದ್ದರಿಂದ ಅವರು ನಾಮಿನೇಟ್ ಆದರು. ಸೋಮಣ್ಣ ಅವರನ್ನು ಕ್ಯಾಪ್ಟನ್ ಜಶ್ವಂತ್ ಅವರು ನೇರವಾಗಿ ನಾಮಿನೇಟ್ ಮಾಡಿದರು. ಎರಡು ಹಂತದಲ್ಲಿ ನಾಮಿನೇಟ್ ಪ್ರಕ್ರಿಯೆ ನಡೆಯಿತು. ಮೂರನೇ ಹಂತದಲ್ಲಿ ನಾಮಿನೇಷ್‌ನಿಂದ ಒಬ್ಬರನ್ನು ಸೇವ್ ಮಾಡುವ ಪ್ರಕ್ರಿಯೆ ನಡೆಯಿತು. ಈ ಪ್ರಕ್ರಿಯೆಯಲ್ಲಿ ನಂದಿನಿ ಸೇವ್ ಆದರು. ಈ ಮೂಲಕ ಉದಯ್, ರೂಪೇಶ್, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀ, ಸೊಮಣ್ಣ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ. ಇವರಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರವನ್ನು ಮಾಜಿ ಸಚಿವ ಸಿ.ಟಿ. ರವಿಗೆ ಕೊಡಿ: ನೆಟ್ಟಿಗರ ಆಗ್ರಹ

    ಬಿಗ್ ಬಾಸ್ ಮನೆಯಲ್ಲಿ ಉದಯ್‌ಗೆ ಅತಿ ಹೆಚ್ಚು ವೋಟ್ ಬಿದ್ದಿದ್ದು ,ಅವರು ಡಬಲ್ ಗೇಮ್ ಆಡುತ್ತಾರೆ, ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಬಹುತೇಕರು ಅವರನ್ನು ನಾಮಿನೇಟ್ ಮಾಡಿದರು. ಈಗ ವೀಕ್ಷಕರಿಂದ ಯಾರು ಕಡಿಮೆ ವೋಟ್ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಸೋನು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ದಿನವೇ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಇಷ್ಟೆಲ್ಲಾ ನಾಮಿನೇಷನ್ ಜಟಾಪಟಿ ನಡುವೆ ಸೋನು ಗೌಡ ಸೇಫ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]