Tag: Bigg bass

  • ಕಬ್ಬು ಬೆಳೆಯೋದು ಹೇಗೆ? – ಬಿಗ್ ಮನೆ ಮಂದಿಗೆ ಸಂಬರಗಿ ಪಾಠ

    ಕಬ್ಬು ಬೆಳೆಯೋದು ಹೇಗೆ? – ಬಿಗ್ ಮನೆ ಮಂದಿಗೆ ಸಂಬರಗಿ ಪಾಠ

    ಬಿಗ್‍ಬಾಸ್‍ಮನೆಯ ಅನ್‍ಸೀನ್‍ಗಳಲ್ಲಿ ಇರುವ ಕೆಲವು ವಿಚಾರಗಳು ಸಖತ್ ಇಂಟ್ರಸ್ಟಿಂಗ್ ಆಗಿರುತ್ತವೆ ಎಂದು ಹೇಳಿದರೆ ತಪ್ಪಾಗಲಾರದು. ಬಿಗ್‍ಬಾಸ್ ಪ್ರಸಾರ ಮಾಡವು ಖಾಸಗಿ ವಾಹಿನಿ ತನ್ನ ಇನ್‍ಸ್ಟ್ರಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಸ್ಪರ್ಧಿಗಳು ಬಿಗ್‍ಬಾಸ್ ನೀಡುವ ಟಾಸ್ಕ್ ಕುರಿತಾಗಿ ಯೋಚನೆ ಮಾಡದೇ ಬೇರೆಯದ್ದೇ ವಿಚಾರವನ್ನು ಮಾತನಾಡಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ಟಿ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದ ಪ್ರಶಾಂತ್ ಸಂಬರಗಿ ಇದೀಗ ಕಬ್ಬು ಬೆಳೆಯುವ ವಿಚಾರಕ್ಕಾಗಿ ಬಿಗ್‍ಬಾಸ್ ಮನೆಯಲ್ಲಿ ಸುದ್ದಿಯಾಗುತ್ತಿದ್ದಾರೆ. ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ಒಂಡು ಕಡೆ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಸಂಬರ್ಗಿ ಕೃಷಿಕ ಹೌದಾ ಇಲ್ಲವಾ ಎನ್ನುವುದು ಸಾಬೀತು ಮಾಡು ಎಂದು ಹೇಳಿದ್ದಾರೆ.

    ಕಬ್ಬು ಬೆಳೆಯುವುದು ಹೇಗೆ ಎಂದು 2ನಿಮಿಷದಲ್ಲಿ ಹೇಳು ಎಂದು ಚಕ್ರವರ್ತಿ, ಸಂಬರಗಿಗೆ ಹೇಳಿದ್ದಾರೆ. ಈ ವೇಳೆ ಪ್ರಶಾಂತ್ ಸಂಬರಗಿ ಕಬ್ಬು ಕಟಾವ್ ಮಾಡುವ ವೇಳೆ ಕಾಂಡವನ್ನು ಇಟ್ಟಿರಬೇಕು ಎಂದಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿ ಕಾಂಡವನ್ನು ಎಲ್ಲಿ ಇಟ್ಟಿರಬೇಕು, ಹೇಗೆ ಇಟ್ಟಿರಬೇಕು ಹಾಗೇ ಹೀಗೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಏ.. ನೀನು ಸುಮ್ನೆ ಇರು ನಾನು ಶಮಂತ್‍ಗೆ ಹೇಳುಕೊಡುತ್ತನೆ ಎಂದು ಹೇಳಿದ್ದಾರೆ. ಈ ವೇಳೆ ಚಕ್ರವರ್ತಿ ಮಾತ್ರ ಬಿಡದೇ ಅವರ ಪ್ರಶ್ನೆಗೆಗಳನ್ನು ಕೇಳುತ್ತಾ ಸಂಬರಗಿಗೆ ಫುಲ್ ಕಂಪ್ಯೂಸ್ ಮಾಡಿದ್ದಾರೆ.

    ಕಬ್ಬು ಕಟಾವ್ ಆದ ಬಳಿಕ ಕಾಂಡವನ್ನು ಇಟ್ಟುಕೊಂಡಿರ ಬೇಕು ಎಂದು ಹೇಳುತ್ತಾ ಸಂಬರಗಿ ಮೊದಲಿನಿಂದ ಪ್ರಾರಂಭಿಸುತ್ತಾರೆ. ಮತ್ತೇ ಮಧ್ಯಪ್ರವೇಶಿದ ಚಕ್ರವರ್ತಿ ಎಷ್ಟು ದಿನ ಇಡುತ್ತೀರಾ ನಮಗೆ ಗೊತ್ತಾಗಬೇಕು ಅಲ್ಲವಾ ಎಂದು ಹೇಳುತ್ತಾ ತಮಾಷೆ ಮಾಡಿದ್ದಾರೆ. ಸಂಬರಗಿಗೆ ನಗು ಜೊತೆಗೆ ಕೋಪವು ಬಂದಿದೆ. ಕಬ್ಬು ಬೆಳೆಯುವುದು ಹೇಗೆ ಎಂದು ಸೀರಿಯಸ್ ಆಗಿ ಕೇಳುತ್ತಾ ಕುಳಿತಿದ್ದ ಮನೆ ಮಂದಿ ಚಕ್ರವರ್ತಿ ಅವರ ತರ್ಲೆ ಪ್ರಶ್ನೆಗೆಗಳಿಗೆ ಬಿದ್ದು ಬಿದ್ದು ನಕ್ಕಿದ್ದಾರೆ.

    ಕೊನೆಗೂ ಸಂಬರಗಿಗೆ ಮಾತ್ರ ಕಬ್ಬು ಬೆಳೆಸಯುವುದನ್ನು ಪೂರ್ತಿಯಾಗಿ ಹೇಳಲು ಮಾತ್ರ ಚಕ್ರವರ್ತಿ ಬಿಟ್ಟಿಲ್ಲ. ಈ ದೃಶ್ಯ ಮಾತ್ರ ಸಖತ್ ಮಜವಾಗಿತ್ತು. ಸಂಬರಗಿಗೆ ಬಾಯಿ ಮುಚ್ಚಿಸುವ ಸ್ಪರ್ಧಿ ಮನೆಯಲ್ಲಿ ಒಬ್ಬರಾದರೂ ಇದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

  • ವಾಂಗಿಬಾತ್, ಚಿತ್ರಾನ್ನಕ್ಕಾಗಿ ಚಂದನ್-ದೀಪಿಕಾ ನಡ್ವೆ ಗಲಾಟೆ

    ವಾಂಗಿಬಾತ್, ಚಿತ್ರಾನ್ನಕ್ಕಾಗಿ ಚಂದನ್-ದೀಪಿಕಾ ನಡ್ವೆ ಗಲಾಟೆ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರಲ್ಲಿ ವಾಂಗಿಬಾತ್ ಮತ್ತು ಚಿತ್ರಾನ್ನಕ್ಕಾಗಿ ಚಂದನ್ ಆಚಾರ್ ಮತ್ತು ದೀಪಿಕಾ ದಾಸ್ ಮಧ್ಯೆ ಗಲಾಟೆ ನಡೆದಿದೆ.

    ದೀಪಿಕಾ ಮತ್ತು ಚಂದನ್ ಸೇರಿದಂತೆ  ಮನೆಯ ಸದಸ್ಯರು ಸೇರಿಕೊಂಡು ಅಡುಗೆ ಮಾಡುತ್ತಿದ್ದರು. ಈ ವೇಳೆ ದೀಪಿಕಾ ದಾಸ್ ಮತ್ತು ಚಂದನ್ ಆಚಾರ್ ಮಧ್ಯೆ ಅಡುಗೆ ಮಾಡುವ ವಿಚಾರಕ್ಕೆ ವಾಗ್ವಾದ ನಡೆದಿದೆ. ಚಂದನ್, ನಾಳೆ ನೀವು ಮಾಡಿ, ನಾಳಿದ್ದು ನಾನು ಅಡುಗೆ ಮಾಡುತ್ತೀನಿ ಎಂದು ಹೇಳಿದ್ದಾರೆ. ಆಗ ದೀಪಿಕಾ ನಾಳೆ ವಾಂಗಿಬಾತ್ ಮಾಡುತ್ತೀನಿ ಎಂದರು. ಚಂದನ್ ನಾಳಿದ್ದು ನಾನು ಚಿತ್ರಾನ್ನ ಮಾಡುತ್ತೇನೆ ಎಂದು ಇಬ್ಬರು ಚರ್ಚಿಸುತ್ತಿದ್ದರು. ಕೊನೆಗೆ ಚಿತ್ರಾನ್ನ ಮಾಡೋದಾ, ವಾಂಗಿಬಾತ್ ಮಾಡೋದಾ ಎಂಬ ಕಾರಣಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.

    ಆಗ ಕೋಪಗೊಂಡು ದೀಪಿಕಾ, ಚಂದನ್ ನೀವು ನನಗೆ ತುಂಬಾ ಇರಿಟೇಟ್ ಮಾಡುತ್ತಿದ್ದೀರಾ. ಎಲ್ಲರೂ ಇಲ್ಲಿ ಬೇರೆ ಬೇರೆ ಮನಸ್ಥಿತಿಯಲ್ಲಿ ಇದ್ದಾರೆ. ನಿಮ್ಮ ತರ ಯಾರೂ ಇಲ್ಲ, ಬೇರೆಯವರ ಬಗ್ಗೆ ಮಾತನಾಡಿಬೇಡಿ. ನಿಮ್ಮ ಮನಸ್ಥಿತಿ ಬಗ್ಗೆ ತಿಳಿದುಕೊಳ್ಳಿ ಎಂದು ಗರಂ ಆದರು. ಆಗ ಚಂದನ್, ನಾವೇನು ಇಲ್ಲಿ ಸುಮ್ಮನೆ ತಿಂದುಕೊಂಡು ಹೋಗಬೇಕಾ. ನನ್ನದೇ ನಡಿಯಬೇಕು, ನನ್ನದೇ ಆಗಬೇಕು. ನಿಮ್ಮ ತರಹದ ಮನಸ್ಥಿತಿ ನನ್ನಲಿಲ್ಲ ಎಂದು ವಾದ ಮಾಡಿದರು.

    ಬೇರೆಯವರ ಬಗ್ಗೆ ಬೆರಳು ತೋರಿಸಬೇಡಿ. ಸಣ್ಣ ಮನಸ್ಥಿತಿ ಬಿಡಿ, ನನ್ನ ಹತ್ತಿರ ವಾದ ಮಾಡಕ್ಕೆ ಬರಬೇಡಿ ಎಂದು ದೀಪಿಕಾ ಹೇಳಿದರೆ, ಚಂದನ್, ಡಬಲ್ ಗೇಮ್ ಆಡಬೇಡಿ, ನನ್ನ ಮನಸ್ಥಿತಿ ನನಗೆ ಗೊತ್ತು, ನಾಲಿಗೆ ಮೇಲೆ ಒಂದು ವಿಚಾರ ಇರಲಿ ಎಂದು ಒಬ್ಬರಿಗೊಬ್ಬರು ಕಿತ್ತಾಡಿದರು. ಕೊನೆಗೆ ದೀಪಿಕಾ ಬೇಸರಗೊಂಡು ಅಡುಗೆ ಮನೆಯಿಂದ ಹೊರ ಹೋದರು.

    ಇತ್ತ ಚಂದನ್, ಕ್ಯಾಪ್ಟನ್ ಕಿಶನ್ ಜೊತೆಯೂ ವಾದ ಮಾಡಿದ್ದಾರೆ. ನನ್ನದೇ ನಡಿಯಬೇಕು ಅಂತಿದೆಯಲ್ಲಾ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಲಿ ಎಂದು ದೀಪಿಕಾ ಬಗ್ಗೆ ಹೇಳಿದ್ದಾರೆ. ಏನಾದರೂ ಆದರೆ ಚಂದನ್ ಎಂದು ಮನೆಯವರೆಲ್ಲಾ ಹೇಳುತ್ತಾರೆ. ಇದೊಂದು ಸಣ್ಣ ವಿಚಾರ, ಇದನ್ನೂ ಇಷ್ಟೊಂದು ಕಾಂಪ್ಲಿಕೇಟ್ ಮಾಡಬಾರದಿತ್ತು. ನಮ್ಮನ್ನು ಮಾತಾಡಕ್ಕೂ ಬಿಡಲ್ಲ, ಅಡುಗೆ ಮಾಡಕ್ಕೂ ಬಿಡಲ್ಲ, ಮೇಲೊಂದು ಹಿಂದೊಂದು ಮಾತನಾಡಕ್ಕೆ ಬರಲ್ಲ ಎಂದು ಚಂದನ್ ವಾದ ಮಾಡಿದರು.