Tag: bigg b

  • ಈ ನಟನ ಜೊತೆ ಆನ್‌ಸ್ಕ್ರೀನ್ ರೊಮ್ಯಾನ್ಸ್ ಮಾಡಲು ಇಷ್ಟ: ಖುಷ್ಬೂ ಸುಂದರ್

    ಈ ನಟನ ಜೊತೆ ಆನ್‌ಸ್ಕ್ರೀನ್ ರೊಮ್ಯಾನ್ಸ್ ಮಾಡಲು ಇಷ್ಟ: ಖುಷ್ಬೂ ಸುಂದರ್

    ಟಿ ಖುಷ್ಬೂ (Kushboo Sundar) ಅವರು ಸಿನಿಮಾ (Film)- ರಾಜಕೀಯ (Politics) ಎರಡು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ಖುಷ್ಬೂ ಸಂದರ್ಶನವೊಂದರಲ್ಲಿ ನೆಚ್ಚಿನ ನಟನ ಬಗ್ಗೆ ಅಚ್ಚರಿಯ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    ಕನ್ನಡದ ರಣಧೀರ, ಅಂಜದ ಗಂಡು, ಯುಗಪುರುಷ, ಸೇರಿದಂತೆ ಪರಭಾಷೆಗಳಲ್ಲೂ ನಟಿಸಿರುವ ಖುಷ್ಬೂ ಸುಂದರ್, ಬಿಗ್ ಮೇಲಿನ ಕ್ರೇಜ್ ಬಗ್ಗೆ ಮಾತನಾಡಿದ್ದಾರೆ. ತನ್ನ ಬೆಡ್‌ರೂಮ್‌ನಲ್ಲಿ ಬಿಗ್ ಬಿ ಫೋಟೋ ಅಂಟಿಸಿರೋದನ್ನ ನಟಿ ಖುಷ್ಬೂ ರಿವೀಲ್ ಮಾಡಿದ್ದಾರೆ.

    ‘ಸ್ಟಾಲಿನ್’ ಎಂಬ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಹೋದರಿಯ ಪಾತ್ರದಲ್ಲಿ ಖುಷ್ಬೂ ನಟಿಸಿದ್ದರು. ಬಾಲಯ್ಯ ಜೊತೆ ನಟಿಸುವ ಅವಕಾಶ ಒಲಿದು ಬರಲಿಲ್ಲ ಎಂಬ ಕೊರಗಿದೆ. ಈ ವಿಚಾರವನ್ನು ಸ್ವತಃ ಖುಷ್ಬೂ ಸಂದರ್ಶನದಲ್ಲಿ ಹೇಳಿದ್ದಾರೆ. ಇವರ ಜೊತೆ ನಟಿಸೋಕೆ ಇವತ್ತಿಗೂ ಇಷ್ಟಪಡ್ತೀನಿ. ಅಂತಹ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ನಟ ಅಮಿತಾಬ್ ಬಚ್ಚನ್ ಅಂದ್ರೆ ಬಹಳ ಇಷ್ಟ. ಅವರ ದೊಡ್ಡ ಅಭಿಮಾನಿ ನಾನು ಎಂದು ನಟಿ ವಿವರಿಸಿದ್ದಾರೆ.

    ಅಮಿತಾಬ್ ಬಚ್ಚನ್ (Amitabh Bachchan) ಫೋಟೊಗಳನ್ನು ಇವತ್ತಿಗೂ ನನ್ನ ಬೆಡ್ ರೂಮ್‌ನಲ್ಲಿ ಅಂಟಿಸಿಕೊಂಡಿದ್ದೇನೆ. ಅವರೊಟ್ಟಿಗೆ ಬಾಲನಟಿಯಾಗಿ ನಟಿಸಿದ್ದೇನೆ. ಆದರೆ ಹೀರೊಯಿನ್ ಆಗಿ ನಟಿಸೋ ಅವಕಾಶ ಸಿಗಲಿಲ್ಲ. ಅವರ ಜೊತೆ ರೊಮ್ಯಾನ್ಸ್ ಮಾಡೋ ಆಸೆ ಇದೆ.‌ ಸಾಕಷ್ಟು ವರ್ಷಗಳ ಹಿಂದೆ  ‘ಚೀನಿ ಕಮ್’ ಚಿತ್ರದಲ್ಲಿ ಅಮಿತಾಬ್ ಜೊತೆ ಟಬು ನಟಿಸಿದ್ದರು. ಈ ವಿಚಾರ ಗೊತ್ತಾಗಿ ಆಕೆಗೆ ಫೋನ್ ಮಾಡಿ ಬೈದಿದ್ದೆ, ಅವರೊಟ್ಟಿಗೆ ಹೇಗೆ ನಟಿಸಿದೆ ಎಂದು ಸರಿಯಾಗಿ ಕ್ಲಾಸ್ ತಗೊಂಡೆ ಎಂದು ನಗುತ್ತಾ ಮಾತನಾಡಿದ್ದಾರೆ. ಈ ಮೂಲಕ ಬಿಗ್ ಬಿ ನನ್ನ ನೆಚ್ಚಿನ ನಟ ಎಂದು ಖುಷ್ಬೂ ಮಾತನಾಡಿದ್ದಾರೆ.

  • ಅಮಿತಾಭ್‌ಗೆ `ಭಾರತ ರತ್ನ ಪ್ರಶಸ್ತಿ’ ನೀಡಿ ಗೌರವಿಸಿ ಎಂದು ದೀದಿ ಮನವಿ

    ಅಮಿತಾಭ್‌ಗೆ `ಭಾರತ ರತ್ನ ಪ್ರಶಸ್ತಿ’ ನೀಡಿ ಗೌರವಿಸಿ ಎಂದು ದೀದಿ ಮನವಿ

    ಬಾಲಿವುಡ್‌ನಲ್ಲಿ (Bollywood) ಹಲವಾರು ವರ್ಷಗಳಿಂದ ಅಮಿತಾಭ್ ಬಚ್ಚನ್ (Amitabh Bachchan) ಸಾಕಷ್ಟು ಸಿನಿಮಾಗಳಲ್ಲಿ ಮನರಂಜನೆ ನೀಡುತ್ತಲೇ ಬಂದಿದ್ದಾರೆ. ಹಿರಿಯ ನಟ ಬಿಗ್ ಬಿ ಕಲಾಸೇವೆಯನ್ನ ಗುರುತಿಸಿ ಅವರಿಗೆ `ಭಾರತ ರತ್ನ ಪ್ರಶಸ್ತಿ’ (Bharatha Ratna Award) ನೀಡಿ ಎಂದು ಮಮತಾ ಬ್ಯಾನರ್ಜಿ (Mamatha Benerjee) ಮನವಿ ಮಾಡಿದ್ದಾರೆ.

    ಹಿಂದಿ ಚಿತ್ರರಂಗಕ್ಕೆ ಅಮಿತಾಭ್ ಅವರ ಕಲಾಸೇವೆಯ ಕೊಡುಗೆ ಅಪಾರ. ಪಾತ್ರಗಳೇ ತಾವಾಗಿ ಜೀವ ತುಂಬಿ ನಟಿಸುವ ಮಹಾನ್ ನಟನಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕು ಎಂಬುದು ಕೆಲವು ವರ್ಷಗಳಿಂದ ಕೇಳಿ ಬರುತ್ತಿರುವ ಬಹುದೊಡ್ಡ ಬೇಡಿಕೆ. ಇದೀಗ ಮತ್ತೆ ಈ ವಿಷಯ ಮುನ್ನಲೆಗೆ ಬಂದಿದೆ. ಬಿಗ್ ಬಿ ಕಲಾಸೇವೆಯನ್ನ ಗುರುತಿಸಿ, ಭಾರತ ರತ್ನ ಪ್ರಶಸ್ತಿ ಕೊಡಿ ಎಂದು ಕೊಲ್ಕತ್ತಾ ಚಿತ್ರೋತ್ಸವದಲ್ಲಿ ದೀದಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ: ಗುರೂಜಿಗೆ ಕಳಪೆ ಎಂದ ಅಮೂಲ್ಯ

    ಈ ಸಂದರ್ಭದಲ್ಲಿ ಬಿಗ್ ಬಿ (Bigg B) ಕೂಡ ಮಾತನಾಡಿ, ಇಷ್ಟು ವರ್ಷಗಳಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಪೌರಾಣಿಕ ಚಿತ್ರದಿಂದ ಹಿಡಿದು ಐತಿಹಾಸಿಕ ಚಿತ್ರದವರೆಗೂ ಚಿತ್ರರಂಗದಲ್ಲಿ ಹಲವು ಶೈಲಿಯ ಸಿನಿಮಾಗಳು ಬಂದು ಹೋಗಿದೆ. ಈ ಬದಲಾವಣೆ ಪ್ರೇಕ್ಷಕರನ್ನು ಸೆಳೆಯುವಂತೆ ಮಾಡಿದೆ. ಈ ಬದಲಾವಣೆ ಸಿನಿಪ್ರೇಕ್ಷಕರನ್ನ ರಾಜಕೀಯ ಮತ್ತು ಸಾಮಾಜಿಕ ಕಾಳಜಿಯನ್ನು ಪ್ರತಿಬಿಂಬಿಸುವಂತೆ ಮಾಡಿದೆ ಎಂದು ಮಾತನಾಡಿದ್ದಾರೆ.

    ಒಟ್ಟಿನಲ್ಲಿ ಅಮಿತಾಭ್‌ಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]