Tag: Bigboss Kannada-8

  • ಬಿಗ್‍ಬಾಸ್ ಮನೆಗೆ ಬಂತು ಅರವಿಂದ್ ಬೈಕ್

    ಬಿಗ್‍ಬಾಸ್ ಮನೆಗೆ ಬಂತು ಅರವಿಂದ್ ಬೈಕ್

    ಬಿಗ್‍ಬಾಸ್ ಫಿನಾಲೆ ವಾರ ಮನೆಯ ಸ್ಪರ್ಧಿಗಳು ತಮ್ಮ ತಮ್ಮ ಆಸೆಗಳನ್ನು ಬಿಗ್‍ಬಾಸ್ ಮುಂದೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕೆ.ಪಿ ಅರವಿಂದ್ ತಾವು ಎಂಟ್ರಿಗೆ ಬಂದ ಬೈಕ್‍ನನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದರು.

    ಬಿಗ್‍ಬಾಸ್ ನನಗೆ ಈಡೇರಿಸದಂತ ಒಂದು ಆಸೆ ಇದೆ. ನಾನು ಎಂಟ್ರಿಗೆ ಬಂದ ಬೈಕ್‍ನನ್ನು ಗಾರ್ಡನ್ ಏರಿಯಾದಲ್ಲಿ ನೋಡಬೇಕು ಅಂತ ಅಂದುಕೊಂಡಿದ್ದೇನೆ. ಅದಕ್ಕೆ ಎಂದಾದರೂ ಅವಕಾಶ ಸಿಗಬಹುದು ಎಂದುಕೊಂಡಿದ್ದೆ. ಆದರೆ ಆಗಲಿಲ್ಲ. ನಿಮ್ಮ ಕೈಯಲ್ಲಿ ಸಾಧ್ಯ ಆದ್ರೆ ಆ ಬೈಕ್‍ನನ್ನು ಇಲ್ಲಿ ನೋಡಲು ಇಷ್ಟ ಪಡುತ್ತೇನೆ ಎಂದಿದ್ದರು.

    ಅದರಂತೆ ಬಿಗ್‍ಬಾಸ್ ದೊಡ್ಮನೆಯ ಗಾರ್ಡನ್ ಏರಿಯಾಕ್ಕೆ ಅರವಿಂದ್‍ರವರ ಬೈಕ್‍ನನ್ನು ಕಳುಹಿಸಿಕೊಟ್ಟಿದ್ದಾರೆ. ಈ ವೇಳೆ ಜಗಮಗಿಸುವ ಲೈಟ್‍ಗಳ ಮಧ್ಯೆ ಅರವಿಂದ್ ಬೈಕ್ ನೋಡಿ ಮನೆಮಂದಿಯೆಲ್ಲಾ ಸಖತ್ ಖುಷಿ ಆಗಿದ್ದಾರೆ. ಜೊತೆಗೆ ಬೈಕ್ ನೋಡಿ ಅರವಿಂದ್ ಕೂಡ ಸಂತಸಗೊಂಡು ಬಿಗ್‍ಬಾಸ್‍ಗೆ ಧನ್ಯವಾದ ತಿಳಿಸಿದ್ದಾರೆ.

    ಜೊತೆಗೆ ಬೈಕ್ ಬಗ್ಗೆ ವಿವರಿಸಿದ ಅರವಿಂದ್ ಇದು ಎನ್‍ಡ್ಯೂರೋ ಗಾಡಿ ಎಂದು ಸ್ಟಾರ್ಟ್ ಮಾಡಿ ತೋರಿಸುತ್ತಾರೆ. ನಂತರ ಇದರಲ್ಲಿಯೇ ನಾನು ಬಿಗ್‍ಬಾಸ್ ಎಂಟ್ರಿ ಸ್ಟೇಜ್ ತನಕ ಬಂದಿದ್ದು, ಆದರೆ ನಾನು ಎಷ್ಟೋ ಬಾರಿ ಅಂದುಕೊಳ್ಳುತ್ತಿದ್ದೆ. ಗಾರ್ಡನ್ ಏರಿಯಾದಲ್ಲಿ ಎಲ್ಲದರೂ ಬೈಕ್ ಇದ್ದಿದ್ರೆ ಚೆನ್ನಾಗಿರುತ್ತಿತ್ತು ಅಂತ. ಹಾಗಾಗಿ ಬಿಗ್‍ಬಾಸ್‍ರನ್ನು ಕೇಳಿಕೊಂಡಿದ್ದೆ. ನನ್ನ ಕನಸು ನಿಜ ಆಯಿತು ಎನ್ನುತ್ತಾ ಮತ್ತೊಮ್ಮೆ ಬಿಗ್‍ಬಾಸ್‍ಗೆ ಧನ್ಯವಾದ ಸಲ್ಲಿಸಿದ್ದಾರೆ. ಇದನ್ನೂ ಓದಿ:ಅರವಿಂದ್‍ಗೆ ಹೇರ್ ಕಟ್ ಚಾಲೆಂಜ್ ಕೊಟ್ಟ ಸುದೀಪ್ – ಡಿಯು ಕೂದಲ ಗತಿಯೇನು?

    ಒಟ್ಟಾರೆ ಬಿಗ್‍ಬಾಸ್ ಮನೆಗೆ ಬೈಕ್‍ನನ್ನು ಕಳುಹಿಸಿಕೊಡುವ ಮೂಲಕ ಅರವಿಂದ್ ಆಸೆಯನ್ನು ಈಡೇರಿಸಿದ್ದಾರೆ. ಇದನ್ನೂ ಓದಿ:ಹಾರ್ಟ್ ಶೇಪ್ ಕೇಕ್ ಕಳುಹಿಸಿ ಬಿಗ್‍ಬಾಸ್: ದಿವ್ಯಾ ಸುರೇಶ್