Tag: Bigbas

  • ದಿವ್ಯಾ ಸುರೇಶ್‍ರನ್ನೇ ಮದ್ವೆಯಾಗ್ತೀರಾ…?- ಅಭಿಮಾನಿಗಳ ಪ್ರಶ್ನೆಗೆ ಮಂಜು ಖಡಕ್ ಉತ್ತರ

    ದಿವ್ಯಾ ಸುರೇಶ್‍ರನ್ನೇ ಮದ್ವೆಯಾಗ್ತೀರಾ…?- ಅಭಿಮಾನಿಗಳ ಪ್ರಶ್ನೆಗೆ ಮಂಜು ಖಡಕ್ ಉತ್ತರ

    ಬಿಗ್‍ಬಾಸ್ ಸ್ಪರ್ಧಿಮಂಜು ಪಾವಗಡ ಅವರು ತಮ್ಮ ಅಧಿಕೃತ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬಂದಿದ್ದರು. ಆಗ ದಿವ್ಯಾ ಸುರೇಶ್ ಮತ್ತು ಮಂಜು ಮದುವೆ ಕುರಿತಾಗಿ ಇಂಟ್ರೆಸ್ಟಿಂಗ್ ಮಹಿತಿಯನ್ನು ಬಿಚ್ಚಿಟ್ಟಿದ್ದಾರೆ.

    ನಿಮ್ಮ ನೆಚ್ಚಿನ ಕಾಮಿಡಿಯನ್, ನಿಮ್ಮ ಮುಂದಿನ ಪ್ರಾಜೆಕ್ಟ್ ಯಾವುದು, ಬಿಗ್‍ಬಾಸ್ ಕುರಿತಾಗಿ ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ ಅಭಿಮಾನಿಗಳು ಬಿಗ್‍ಬಾಸ್ ಮನೆಯಲ್ಲಿ ಜೊತೆಗೆ ಇರುತ್ತಿದ್ದ ದಿವ್ಯಾ ಸುರೇಶ್ ಕುರಿತಾಗಿ ಕೇಳಿದ್ದಾರೆ. ಆದರೆ ಮಂಜು ಮಾತ್ರ ದಿವ್ಯಾ ಸುರೇಶ್ ಕುರಿತಾಗಿ ಕೊಂಚ ಡಿಫರೆಂಟ್ ಆಗಿ ಏರು ಧ್ವನಿಯಲ್ಲಿ ಉತ್ತರಿಸಿದ್ದಾರೆ.

    ಮಂಜು ಅವರ ಮದುವೆಯ ಕುರಿತಾಗಿ ಅಭಿಮಾನಿಗಳು ಸಾಕಷ್ಟು ಪ್ರಶ್ನೆಯನ್ನು ಕೇಳಿದ್ದಾರೆ. ನಿಮ್ಮ ಮದುವೆ ಯಾವಾಗ? ಹುಡುಗಿ ಯಾರು? ನೀವು ಯಾಕೆ ದಿವ್ಯಾ ಸುರೇಶ್ ಅವರನ್ನು ಮದುವೆಯಾಗಬಾರದು ಎಂದು ಪ್ರಶ್ನಿಸಿದಾಗ ಮಂಜು ಅವರು ನಾನು ಯಾಕೆ ದಿವ್ಯಾಳನ್ನು ಮದುವೆಯಾಗಬೇಕು? ನಾನು ಅವಳು ಒಳ್ಳೆಯ ಸ್ನೇಹಿತರು ಅಷ್ಟೆ ಬೇರೆ ಏನೂ ಇಲ್ಲ. ನಾನು ತಮಾಷೆ ಮಾಡುತ್ತಿದ್ದೆ ಅಷ್ಟೆ ಎಂದು ಹೇಳಿದ್ದಾರೆ. ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ ಆದರೆ ದಿವ್ಯಾ ಸುರೇಶ್ ಅವರನ್ನು ಅಲ್ಲ… ಬೇರೆ ಹುಡುಗಿಯನ್ನು ನೋಡುತ್ತಿದ್ದೇನೆ ಎಂದು ಹೇಳುವ ಮೂಲಕವಾಗಿ ದಿವ್ಯಾ ಸುರೇಶ್ ಮತ್ತು ಅವರ ಮಧ್ಯೆ ಇರುವ ಗಾಸಿಪ್ ಕುರಿತಾಗಿ ತೆರೆ ಎಳೆದಿದ್ದಾರೆ.

    ಲೈವ್‍ನಲ್ಲಿ ಮಂಜು ಅವರು ಅಭಿಮಾನಿಗಳ ಪ್ರಶ್ನೆಗೆ ಸಖತ್ ಮಜವಾಗಿ ಉತ್ತರ ಕೊಟ್ಟಿದ್ದಾರೆ. ಮಂಜು ಲೈವ್‍ನಲ್ಲಿಯೇ ಸಾಕಷ್ಟು ಕಾಮಿಡಿಯನ್ನು ಮಾಡಿದ್ದಾರೆ. ಬಿಗ್‍ಬಾಸ್ ಜರ್ನಿ ಕುರಿತಾಗಿ ಕೆಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ. 10 ವಾರಗಳು ನನ್ನ ಸಪೋರ್ಟ್ ಮಾಡಿದ ಎಲ್ಲರಿಗೂ ಧನ್ಯವಾದ ಹೀಗೆ ಸಪೋರ್ಟ್ ಮಾಡಿ ಮುಂದಿನ ದಿನಗಳಲ್ಲಿ ಎಂದು ಹೇಳಿದ್ದಾರೆ.

  • ತಾಯಿ ಪುಣ್ಯಾತಗಿತ್ತಿ ಸುಮ್ಮನಿರು: ಸಂಬರಗಿ

    ತಾಯಿ ಪುಣ್ಯಾತಗಿತ್ತಿ ಸುಮ್ಮನಿರು: ಸಂಬರಗಿ

    ಪ್ರಶಾಂತ್ ಸಂಬರಗಿ ಮತ್ತೆ ಮೊದಲಿನಂತೆ ಎಲ್ಲರ ಜೊತೆ ಜಗಳ ಮಾಡಲು ಪ್ರಾರಂಭಿಸಿದ್ದಾರೆ. ಮೊಟ್ಟೆ ತಿಂದಿದ್ದಾರೆ ಎಂದು ಆರೋಪ ಮಾಡಿದ್ದಕ್ಕೆ ನಿಧಿ ಸುಬ್ಬಯ್ಯ ಅವರ ಚರಿತ್ರೆ ಹೇಳ್ತೀನಿ ಎಂದು ಸಂಬರಗಿ ನಿಧಿಗೆ ಕಣ್ಣೀರು ಹಾಕಿಸಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ನಿಧಿ ಮತ್ತೆ ಪ್ರಶಾಂತ್ ಸಂಬರಗಿ ನಡುವೆ ಜಗಳ ವೈಯಕ್ತಿಕ ವಿಚಾರಗಳನ್ನು ತೆಗೆದುಕೊಂಡು ಪ್ರಶಾಂತ್ ಮಾತನಾಡುತ್ತಿದ್ದಾರೆ.

     ಪ್ರಶಾಂತ್ ಸಂಬರಗಿ ಅವರು ಎರಡು ಮೊಟ್ಟೆ ತಿಂದರು ಎಂದು ಜಗಳ ಶುರುವಾಗಿದೆ. ನಿಧಿ ಸುಬ್ಬಯ್ಯ ಅವರು ಪ್ರಶಾಂತ್ ಸಂಬರಗಿ ಮೊಟ್ಟೆ ತಿನ್ನೋದನ್ನು ನೋಡಿ ಪ್ರಶ್ನೆ ಮಾಡಿದ್ದಾರೆ. ಆಗ ಅರವಿಂದ್, ದಿವ್ಯಾ ಉರುಡುಗ ಕೂಡ ನಿಧಿಗೆ ಬೆಂಬಲ ಸೂಚಿಸಿದ್ದಾರೆ. ನಾನು ಹೆಚ್ಚು ಮೊಟ್ಟೆ ತಿಂದಿಲ್ಲ ಎಂದು ಪ್ರಶಾಂತ್ ಸಂಬರಗಿ ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಪುಣ್ಯಾತಗಿತ್ತಿ, ಸುಮ್ಮನಿರಮ್ಮ, ನಿನ್ನ ಚರಿತ್ರೆ ಗೊತ್ತಿದೆ, ನಿನ್ನ ಸಂಸ್ಕøತಿ ಗೊತ್ತಿದೆ, ಹೇಳಬೇಕಾ ಹೇಳು ಹೇಳುತ್ತೇನೆ ಎಂದು ಪ್ರಶಾಂತ್ ಅವರು ನಿಧಿ ಸುಬ್ಬಯ್ಯಗೆ ಬೆದರಿಕೆ ಹಾಕಿದ್ದಾರೆ.

    ಮೊಟ್ಟೆ ಕಳ್ಳ ಅಂತ ಮಾಡಬೇಡಿ, ನೀವೆಲ್ಲ ಹಾಲಿನಲ್ಲಿ ಸ್ನಾನ ಮಾಡಿಕೊಂಡು ಬಂದವರು ಪರಿಶುದ್ಧರು ಅಂತ ಪ್ರಶಾಂತ್ಅವರು ನಿಧಿ ಸುಬ್ಬಯ್ಯ, ದಿವ್ಯಾ ಉರುಡುಗ ಅವರನ್ನು ವ್ಯಂಗ್ಯ ಮಾಡಿಕೊಂಡಿದ್ದಾರೆ. ಸಣ್ಣತನವನ್ನು ತೋರಿಸುತ್ತಿದ್ದೀರಾ. ಮನೆಮಂದಿಗೆ ಜೊತೆಗೆ ವಾಗ್ವಾದ ಮಾಡಿದ್ದಾರೆ. ಒಟ್ಟಿನಲ್ಲಿ ಒಂದು ವಾರಗಳ ಕಾಲ ಸೈಲೆಂಟ್ ಆಗಿದ್ದ ಪ್ರಶಾಂತ್ ಸಂಬರಗಿ ಮತ್ತೆ ಮಾತಿನ ವರಸೆಯನ್ನು ಶುರು ಮಾಡಿಕೊಂಡಿದ್ದಾರೆ.

     ಮೊಟ್ಟೆ ತಿಂದರು ಎಂಬ ಆರೋಪ ಬಂದಿದ್ದಕ್ಕೆ ಪ್ರಶಾಂತ್ ಸಂಬರಗಿ ಅವರು ಎಲ್ಲ ಹೆಸರನ್ನು ತಗೊಂಡು ಜಗಳ ಆಡಿದ್ದಾರೆ. ರಾಜೀವ್, ನಿಧಿ ಸುಬ್ಬಯ್ಯ, ಮಂಜು ಪಾವಗಡ, ರಘು ಅವರ ಹತ್ತಿರ ಕೂಡ ಸಂಬರಗಿ ಜಗಳ ಆಡಿಕೊಂಡಿದ್ದರು. ಇನ್ನು ವೈಯಕ್ತಿಕ ವಿಷಯ ತಗೊಂಡು ಜಗಳ ಆಡಿದ್ದರು. ನಿಧಿ ಅವರು ಪ್ರಶಾಂತ್‍ಗೆ ಚೀಪ್ ಎಂದಿದ್ದಾರೆ, ಅದಕ್ಕೆ ಸಂಬರಗಿ ಅವರು ನಿಧಿಗೆ ನಿನ್ನ ಚರಿತ್ರೆ ಹೇಳಲಾ? ಅಂತ ಕೇಳಿದ್ದಾರೆ. ಆಗ ಮನೆ ಮಂದಿ ಪ್ರಶಾಂತ್ ಅವರಿಗೆ ಸಮಾಧಾನ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಪ್ರಶಾಂತ್ ಮಾತ್ರ ತಮ್ಮದೇ ಆಗಿರುವ ವಾದವನ್ನು ಮಾಡಿದ್ದಾರೆ. ಪ್ರಶಾಂತ್ ವೈಯಕ್ತಿಕ ವಿಚಾರ ತೆಗೆದರು ಎಂದು ಉಳಿದ ಸ್ಪರ್ಧಿಗಳು ಅವರ ಮೇಲೆ ಬೇಸರ ಮಾಡಿಕೊಂಡಿದ್ದಾರೆ.

    ದಿನನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಜಗಳ ಆಡುತ್ತಿರುತ್ತಾರೆ. ಊಟ-ತಿಂಡಿ ವಿಚಾರದಲ್ಲಿಯೂ ವಾದ ವಿವಾದ ಆಗುತ್ತಿದೆ. ಯಾರು ಹೆಚ್ಚು ತಿಂದರು ಯಾರು ಕಡಿಮೆ ತಿಂದರು ಎಂಬುದಕ್ಕೂ ಜಗಳ, ಮನಸ್ತಾಪ, ಕೋಪ. ಈಗ ಮೊಟ್ಟೆ ತಿಂದ ವಿಚಾರಕ್ಕೆ ಪ್ರಶಾಂತ್ ಸಂಬರಗಿ ಜಗಳ ಮಾಡಿ ಸುದ್ದಿಯಾಗಿದ್ದಾರೆ.

  • ಮಾವನ ವಿರುದ್ಧ ತಿರುಗಿ ಬಿದ್ದ ಅಳಿಯ

    ಮಾವನ ವಿರುದ್ಧ ತಿರುಗಿ ಬಿದ್ದ ಅಳಿಯ

    ಬಿಗ್‍ಬಾಸ್ ಮನೆಯಲ್ಲಿ ಇಷ್ಟು ದಿನಗಳ ಚೆನ್ನಾಗಿದ್ದ ಮಾವ-ಅಳಿಯನ ಮಧ್ಯೆ ಜಗಳ ಶುರುವಾಗಿದೆ. ಮಾವ, ಅಳಿಯ ಎಂದು ಕರೆದುಕೊಳ್ಳುತ್ತಿದ್ದ ಅವರು ಏನು.. ಏನು ಎಂದು ಮಾತಿಗೆ ಮಾತು ಬೆಳಸುವಷ್ಟರಮಟ್ಟಿಗೆ ಕಿತ್ತಾಡಿಕೊಂಡಿದ್ದಾರೆ.

    ಚದುರಂಗದ ಆಟದಲ್ಲಿ ಬಿಗ್‍ಬಾಸ್ ಕೆಲವು ನಿಯಮಗಳನ್ನು ಹಾಕಿದ್ದಾರೆ. ಈ ನಿಯಮವನ್ನು 2 ಗುಂಪಿನ ತಂಡದ ಸದಸ್ಯರು ಪಾಲಿಸಬೇಕು. ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವ ಕುರಿತಾಗಿ ಮಂಜು ಪಾವಗಡ ಮತ್ತು ಪ್ರಶಾಂತ್ ಸಂಬರ್ಗಿಯ ಮಧ್ಯೆ ಜಗಳವಾಗಿದೆ.

     ಮನೆಯಲ್ಲಿ ಚದುರಂಗದ ಆಟ ನಡೆಯುತ್ತಿದೆ. ಈ ಆಟದಲ್ಲಿ ಕೆಲವು ನಿಯಮಗಳನ್ನು ಬಿಗ್‍ಬಾಸ್ ಹಾಕಿದ್ದಾರೆ. ಒಬ್ಬ ಸ್ಪರ್ಧಿ ತಮ್ಮ ಆಟವನ್ನು ಮಗಿಸಿ ಬಿಗ್‍ಬಾಸ್ ಹೇಳುವವರೆಗೂ ಮನೆಯಿಂದ ಸ್ಪರ್ಧಿಗಳು ಹೊರಗೆ ಬರುವಂತಿಲ್ಲ. ಆದರೆ ಸಂಬರ್ಗಿ ಹೊರಗೆ ಬಂದಿದ್ದಾರೆ. ಮಾವ ನೀನು ಅವರು ಹೇಳುವ ಮೊದಲೆ ಯಾಕೆ ಹೊರಗೆ ಬರುತ್ತಿಯಾ ಪೌಲ್ ಎಂದು ಹೇಳಿದ್ದರೆ ಏನು ಮಾಡುತ್ತಿದ್ದೆ? ಎಂದ ಮಂಜು ಅವರದ್ದೇ ಗುಂಪಿನ ಸದಸ್ಯನಾಗಿರುವ ಸಬಂರ್ಗಿಗೆ ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

    ಚದುರಂಗದ ಆಟದಲ್ಲಿ ಸೋತು ಸಂಬರ್ಗಿ ಆಟದಿಂದ ಹೊರೆ ಇದ್ದಾರೆ. ಚಂದ್ರಕಲಾ ಮೋಹನ್ ನೀಡಿದ್ದ ಸವಾಲನ್ನು ಸ್ವೀಕರಿಸಿದ ಅರವಿಂದ್ ಆಟವನ್ನು ಪೂರ್ತಿ ಮಾಡಿದ್ದಾರೆ. ಈ ವೇಳೆ ಪ್ರಶಾಂತ್ ಅರವಿಂದ್ ಅವರಿಗೆ ಶುಭಕೋರಲು ಹೊರಗೆ ಬಂದಿದ್ದಾರೆ. ಈ ವೇಳೆ ರೂಲ್ಸ್ ಬ್ರೇಕ್ ಮಾಡಿರುವ ಕುರಿತಾಗಿ ಮನೆಯಲ್ಲಿ ಜಗಳವಾಗಿದೆ.

    ನಿನಗೆ ಮಾತ್ರ ಅಲ್ಲ ನನಗೂ ಜವಾಬ್ದಾರಿ ಇದೆ. ನಿನಗೆ ಒಬ್ಬನಿಗೆ ಬುದ್ದಿವಂತಿಕೆ ಇಲ್ಲ. ನೀನು ಯಾಕೆ ಆಚೆ ಬಂದೆ. ಸರಿ ಇರಲ್ಲ ಹೇಳುತ್ತಿದ್ದೇನೆ ಎಂದು ಸಂಬರ್ಗಿ ಮಂಜುಗೆ ಅವಾಜ್ ಹಾಕಿದ್ದಾರೆ. ಮಂಜು ಮಾತ್ರ ರೂಲ್ಸ್ ವಿಚಾರವಾಗಿ ಮೊದಲು ನಿಧಾನವಾಗಿ ಹೇಳಿದ್ದರು ಆದರೆ ಇಬ್ಬರ ನಡುವೆ ಮಾತಿಗೆ ಮಾತು ಬೆಳದಿದೆ. ಈ ವೇಳೆ ಮನೆಯ ಕ್ಯಾಪ್ಟನ್ ಅರವಿಂದ್ ಮಧ್ಯ ಪ್ರವೇಶಿಸಿ ಇಬ್ಬರ ಜಗಳವನ್ನು ತಡೆದಿದ್ದಾರೆ. ಇಂದು ಪ್ರಸಾರವಾಗಲಿರುವ ಎಪಿಸೋಡ್‍ನಲ್ಲಿ ಈ ಕುರಿತಾಗಿ ಎನೆಲ್ಲಾ ಡ್ರಾಮಾ ನಡೆಯಲಿದೆ ಎಂಬುದನ್ನು ಕಾದು ನೋಡ ಬೇಕಿದೆ.

  • ತರಕಾರಿ ಮಂಡಿ ತೆರೆದ ರಘು

    ತರಕಾರಿ ಮಂಡಿ ತೆರೆದ ರಘು

    ಬಿಗ್‍ಬಾಸ್ ಮನೆಯಲ್ಲಿ ರಘು ತರಕಾರಿ ಮಂಡಿಯನ್ನು ತೆರೆದಿದ್ದಾರೆ. ಈ ವಿಚಾರವಾಗಿ ಸುದೀಪ್ ಇಂದು ಸೂಪರ್ ಸಂಡೆ ವಿತ್ ಸುದೀಪದಲ್ಲಿ ಮಾತನಾಡಲಿದ್ದಾರೆ.

    ಹೌದು ಕಳೆದವಾರ ನೀಡಲಾದ ಜೋಡಿ ಟಾಸ್ಕ್‍ನಲ್ಲಿ ಮನೆಯ ಸದಸ್ಯರನ್ನು ಜೋಡಿ ಮಾಡಲಾಗಿತ್ತು. ಈ ವೇಳೆ ವೈಷ್ಣವಿ, ರಘು ಒಂದು ಜೋಡಿಯಾಗಿ ಆಟ ಆಡುತ್ತಿದ್ದರು. ರಿಚಾರ್ಜ್ ಸ್ಟಿಕ್ ಎಲ್ಲಿದೆ ಅಂತ ತಿಳಿದುಕೊಳ್ಳಲು ವೈಷ್ಣವಿಯನ್ನ ಮಂಜು ನಿಧಾನವಾಗಿ ಪಕ್ಕಕ್ಕೆ ಕರೆತಂದು ವಿಚಾರಿಸುತ್ತಿದ್ದರು. ವೈಷ್ಣವಿ ಮಾಹಿತಿ ನೀಡಿದ್ರೆ ಹೇಗೆ ಅಂತ ರಘು ಇಬ್ಬರನ್ನ ಹಿಂಬಾಲಿಸುತ್ತಿದ್ದರು.ಇದನ್ನು ಗಮನಿಸಿದ ಲ್ಯಾಗ್ ಮಂಜು ನೋಡಪ್ಪಾ.. ಬೆಳ್ಳುಳ್ಳಿ ಹಿಂದೆ ಈರುಳ್ಳಿ ಬರುತ್ತಿದೆ ಎಂದು ತಮಾಷೆ ಮಾಡಿದ್ದರು.

    ಈ ವಿಚಾರವನ್ನು ಸುದೀಪ್ ವಾರದ ಕಥೆಯ ಕಿಚ್ಚನ ಪಂಚಾಯ್ತಿ ಕಟ್ಟೆಯಲ್ಲಿ ಮಾತನಾಡಿದ್ದಾರೆ. ಈರುಳ್ಳಿ, ಬೆಳ್ಳಿಯ ಕಥೆಯನ್ನು ಹೇಳಿದ್ದಾರೆ. ಈ ವೇಳೆ ರಘು ಅವರಿಗೆ ಈ ಮನೆಯಲ್ಲಿರುವ ಸದಸ್ಯರನ್ನು ಯಾವ ಯಾವ ತರಕಾರಿಗೆ ಹೋಲಿಸುತ್ತಿರಾ ಎಂದು ರಘು ಅವರನ್ನು ಕೇಳಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿದೆ ವೆರೈಟಿ ವೆರೈಟಿ ತರಕಾರಿ!

    ದಿವ್ಯ ಸುರೇಶ್ ಮೆಣಸಿನ ಕಾಯಿ, ಶಂಕರ್ ಅವರು ಹಾಗಲಕಾಯಿ ಅವರಿಗೆ ಏನ್ ಆದರೂ ಉಲ್ಟಾ ಹೊಡೆದರೆ ಅವರು ತುಂಬಾ ಕಹಿಯಾಗುತ್ತಾರೆ. ನಿಧಿ ಅವರು ಕ್ಯಾಪ್ಸಿಕಂ ಅವರನ್ನು ಬಜ್ಜಿ ಮಾಡಕೊಂಡು ತಿನ್ನಬಹುದು ಎಂದು ಹೇಳುತ್ತಾ ರಘು ಅವರದ್ದೆ ಶೈಲಿಯಲ್ಲಿ ಜೋಕ್ ಮಾಡಿದ್ದಾರೆ. ರಘು ಅವರ ತರಕಾರಿ ಮಳಿಗೆ ವಿಚಾರವನ್ನು ಕೇಳಿದ ಮನೆ ಮಂದಿ ನಕ್ಕಿದ್ದಾರೆ.

    ಶಮಂತ್ ಅವರನ್ನು ಯಾವ ತರಕಾರಿ ಹೋಲಿಸ್ತೀರಾ ಎಂದು ಸುದೀಪ್ ಕೇಳಿದಾಗ ರಘು ಸೆಪ್ಪೆ ಮೊರೆ ಹಾಕಿ ಕೊಂಡು ಬದನೆಕಾಯಿ ಸರ್ ಎಂದಿದ್ದಾರೆ. ಆಗ ಸುದೀಪ್ ಅಂದರೆ ವಿಷಯ ಇಲ್ಲಾ ಅಂತನಾ ಎಂದು ಜೋಕ್ ಮಾಡಿದ್ದಾರೆ. ಈ ವೇಳೆ ಮನೆಯ ಮಂದಿ ನಗೆಗಡಿಲಿನಲ್ಲಿ ತೇಲಾಡಿದ್ರು.

  • ಬಿಗ್ ಮನೆಯಲ್ಲಿ ಸುದ್ದಿಯಾದ ಟೀ

    ಬಿಗ್ ಮನೆಯಲ್ಲಿ ಸುದ್ದಿಯಾದ ಟೀ

    ಬೆಂಗಳೂರು: ಬಿಗ್‍ಮನೆಯ ವಾರಾಂತ್ಯದ ಕಟ್ಟಾ ಪಂಚಾಯತಿಯಲ್ಲಿ ಮನೆಯ ಸರಿ ತಪ್ಪುಗಳನ್ನು ತಿಳಿಹೇಳುವ ಕೆಲಸವನ್ನು ಸುದೀಪ್ ಮಾಡುತ್ತಾರೆ. ಕಟ್ಟೆ ಪಂಚಾಯ್ತಿಯಲ್ಲಿ ಹೆಚ್ಚು ಚರ್ಚೆಯಾಗಿದ್ದು ಟೀ. ಮನೆಯವರಿಂದ ಕೇಳಿ ವಿಭಿನ್ನವಾದ ಟೀ ಮಾಡುವುದನ್ನು ಕಿಚ್ಚಾ ಕಲಿತುಕೊಂಡಿದ್ದಾರೆ.

    ಇಲ್ಲಿಯವರೆಗೆ ಬೇರೆ ತರಹದ ಪಾತ್ರಗಳನ್ನು ಬಿಗ್ ಮನೆಯಲ್ಲಿ ನೋಡಿದ್ದೇನೆ. ಆದರೆ ಈ ಭಾರೀ ಭಯಂಕರವಾಗಿದ್ದಾರೆ. ಯೋಗ ಮಾಡ್ತಾ ಟೀ ಕುಡಿಯೋದು, ಅರ್ಧರಾತ್ರಿಯಲ್ಲಿ ಮೇಕಪ್ ಹಾಕಿ ಕ್ಯಾಮೆರಾ ಮುಂದೆ ಮಾತನಾಡುತ್ತಾರೆ, ಮೇಕಪ್ ಹಾಕಿ ಸ್ನಾನಕ್ಕೆ ಹೋಗುತ್ತಾರೆ. ವಿಭಿನ್ನವಾಗಿ ಟೀ ಮಾಡುತ್ತಾರೆ ನಾನು ಉಳಿದ ಸೀಸನ್‍ಗಳಲ್ಲಿ ನೋಡಿದ್ದಕ್ಕಿಂತ ವಿಭಿನ್ನವಾಗಿದ್ದಿರಾ ನೀವೆಲ್ಲಾ ಮಾವ ಹೇಳಿ ಟೀ ಮಾಡೋದು ಎಂದಿದ್ದಾರೆ.

    ಒಳ್ಳೆ ಟೀ ಮಾಡೋದು ಹೇಗೆ..?
    ಪ್ರಶಾಂತ್ ಸಂಬರ್ಗಿ ಅವರದ್ದೇ ಆಗಿರುವ ಹೊಸ ರೀತಿಯಲ್ಲಿ ಟೀ ಮಾಡುವ ರೀತಿಯನ್ನು ಹೇಳಿದ್ದಾರೆ. ಈ ವೇಳೆ ಪ್ರಶಾಂತ್ ಅವರ ಮಾತಿನ ಮಧ್ಯೆ ಪ್ರವೇಶಿಸಿದ ಕಿಚ್ಚ ಸುದೀಪ್ ಹಾಲು ನೀರು ಮಿಕ್ಸ್ ಮಾಡಿದರೆ ವಿಷ ಆಗುತ್ತೆ ಅಲ್ಲವಾ.. ನಾನು ಮಧ್ಯಪ್ರೇಶ ಮಾಡಿ ಅಧಿಕ ಪ್ರಸಂಗ ಮಾಡುತ್ತೇನೆ ಎಂದು ಹೇಳುತ್ತಾ ಸಂಬರ್ಗಿ ಅವರಿಗೆ ಚಮಕ್ ಕೊಟ್ಟಿದ್ದಾರೆ.

    ಲ್ಯಾಗ್ ಮಂಜು ಟೀಗೆ ನನ್ನ ಕರಿಬೇಡಿ..!
    ಲ್ಯಾಗ್ ಮಂಜು ತಂದೂರಿ ಟೀ ಮಾಡುವ ವಿಧಾನವನ್ನು ಕೇಳಿದ ಸುದೀಪ್ ಈ ಟೀ ಇವತ್ತೆ ಕುಡಿಯೋದಾ ಅಥವಾ ನಾಳೆ ಕುಡಿಯೋದಾ? ದಯವಿಟ್ಟು ನಿಮ್ಮ ಮನೆಗೆ ಟೀಗೆ ಮಾತ್ರ ನನ್ನ ಕರೆಯಬೇಡಿ ಎಂದು ಹೇಳಿ ಜೋಕ್ ಮಾಡಿದ್ದಾರೆ.

    ಶುಭ ಪೂಂಜಾ ಹೇಳಿದ್ರೂ ಕ್ಯೂಟ್ ಟೀ:
    ಶುಭ ನೀವು ಹೇಗೆ ಟೀ ಮಾಡುತ್ತಿರಾ ಎಂದು ಕಿಚ್ಚಾ ಕೆಳಿದ್ದಾರೆ. ಆಗ ಶುಭ ಅವರು ಅವರದ್ದೇ ಆಗಿರುವ ಮಗುವಿನ ವಾಯ್ಸ್‍ನಲ್ಲಿ ನಿವೇದಿತಾ ಗೌಡ ಅವರನ್ನು ನೆನೆಪಿಸುವ ಹಾಗೇ ಟೀ ಮಾಡುವ ವಿಧಾನವನ್ನು ಹೇಳಿದ್ದಾರೆ.

    ಚಂದ್ರಕಲಾ ಮೋಹನ್ ಅವರು ಮಾಡುವ ಟೀ ಬಿರಿಯಾನಿನಾ ಅಥವಾ ಟೀ ನಾ ಎಂದು ಸುದೀಪ್ ಅವರಿಗೆ ಅನುಮಾನ ಬರುವ ಹಾಗೇ ಟೀ ಮಾಡೋದು ಹೇಳಿದ್ದಾರೆ. ರಘು ಅವರಿಗೆ ಇಲ್ಲಿವರೆಗೂ ಟೀ ಮಾಡೋದೆ ಗೊತ್ತಿಲ್ಲ ಆದರೂ ಟೀ ಕುಡಿಯುತ್ತಾರೆ. ಹೀಗೆ ಒಂಟಿ ಮನೆಯಲ್ಲಿ ವೈರಟಿ ವೈರಟಿ ಮಾಡುವ ವಿಧಾನವನ್ನು ಕೇಳಿ ಕಲಿತಿದ್ದಾರೆ.

  • ಫಾರೀನ್ ಹುಡ್ಗನ ಜೊತೆ ಇದೇ ತಿಂಗ್ಳು ಮದ್ವೆಯಾಗಲಿದ್ದಾರೆ ಬಿಗ್‍ಬಾಸ್ ಸ್ಪರ್ಧಿ

    ಫಾರೀನ್ ಹುಡ್ಗನ ಜೊತೆ ಇದೇ ತಿಂಗ್ಳು ಮದ್ವೆಯಾಗಲಿದ್ದಾರೆ ಬಿಗ್‍ಬಾಸ್ ಸ್ಪರ್ಧಿ

    -ಲವ್ ಆದ ಬಗ್ಗೆ ಸ್ನೇಹಾ ಆಚಾರ್ಯ ಮಾತು

    ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯ ಸ್ಪರ್ಧಿ ಸ್ನೇಹಾ ಆಚಾರ್ಯ ಮೂರೇ ವಾರಕ್ಕೆ ಮನೆಯಿಂದ ಹೊರಬಂದಿದ್ದು, ಈಗ ತಮ್ಮ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಸ್ನೇಹ ಆಚಾರ್ಯ ಬಿಗ್‍ಬಾಸ್ ಮನೆಗೆ ಹೋಗುವುದಕ್ಕೂ ಮುಂಚೆಯೇ ಮದುವೆ ಬಗ್ಗೆ ಖಚಿತಪಡಿಸಿದ್ದರು. ಸ್ನೇಹ ವಿದೇಶಿ ಹುಡುಗನ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ತಮಗೆ ವಿದೇಶಿ ಹುಡುಗನ ಜೊತೆ ಪ್ರೀತಿ ಆದ ಸಂದರ್ಭವನ್ನು ಮಾಧ್ಯಮ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

    ಪ್ರೀತಿ ಹುಟ್ಟಿದ್ದು ಹೇಗೆ..?
    ನನ್ನ ಭಾವಿ ಪತಿ ಹೆಸರು ರಾಯನ್ ಕೊಪ್ಕೊ. ಮೂಲತಃ ನ್ಯೂಯಾರ್ಕ್ ಅವರು, ತಮ್ಮ ಕಂಪನಿಯ ಅಭಿವೃದ್ಧಿಗಾಗಿ ಎರಡು ವರ್ಷ ಬೆಂಗಳೂರಿನಲ್ಲಿ ಇರಲು ನಿರ್ಧರಿಸಿ ಬಂದಿದ್ದರು. ಅದೇ ರೀತಿ ಅವರ ಕಂಪನಿಯ ಕೆಲಸವನ್ನು ಮುಗಿಸುತ್ತಿದ್ದರು. ಕೊನೆಯ ಎರಡು ತಿಂಗಳಲ್ಲಿ ನಾನು ಸಾಲ್ಸಾ ಡ್ಯಾನ್ಸ್ ಮಾಡಬೇಕಾದರೆ ಅವರು ನೋಡಿ ನನ್ನ ಬಳಿ ಬಂದು ‘ನಾನು ನಿಮ್ಮ ಜೊತೆ ಡ್ಯಾನ್ಸ್ ಮಾಡಬಹುದಾ’ ಎಂದು ಕೇಳಿದ್ದರು. ನಾನು ಓಕೆ ಎಂದೆ. ನಂತರ ಅವರಿಗೆ ಡ್ಯಾನ್ಸ್ ಬರಲ್ಲ ಎಂದು ನನಗೆ ಗೊತ್ತಾಯಿತು. ಆಗ ಅವರ ಸೀನಿಯರ್ ಒಬ್ಬರನ್ನ ತೋರಿಸಿ, ‘ನೀವು ಅವರ ಬಳಿ ಡ್ಯಾನ್ಸ್ ಕಲಿತು ಬನ್ನಿ, ಆಮೇಲೆ ನನ್ನ ಜೊತೆ ಡ್ಯಾನ್ಸ್ ಮಾಡಬಹುದು’ ಎಂದಿದ್ದೆ.

    ಸಿಕ್ಕಾಗ ಹಾಯ್, ಬಾಯ್ ಎಂದು ಮಾತನಾಡುತ್ತಿದ್ವಿ. ಅವರೇ ನನ್ನ ಬಳಿ ಬಂದು ಕಾಫಿ, ಟೀ, ತಿಂಡಿಗೆ ಕರೆಯುತ್ತಿದ್ದರು. ಆದರೆ ನಾನು ಹೋಗುತ್ತಿರಲಿಲ್ಲ. ಒಮ್ಮೆ ನಾನು ಮಕ್ಕಳಿಗೆ ನಾಟಕ ಹೇಳಿಕೊಡುವಾಗ ಒಂದು ಪಾತ್ರ ಬೇಕಿತ್ತು. ಇಂಗ್ಲೀಷ್ ಕಲಿಸುವ ವ್ಯಕ್ತಿ ಬೇಕಿತ್ತು. ಆಗ ನನಗೆ ಇವರು ನೆನಪಾಗಿ ಅವರನ್ನು ಕೇಳಿದೆ. ಅದಕ್ಕೆ ಅವರು ಒಪ್ಪಿಕೊಂಡು ಅಲ್ಲಿಂದ ಪರಸ್ಪರ ಇಬ್ಬರು ಸಮಯ ಕಳೆಯಲು ಅವಕಾಶ ಸಿಕ್ಕಿತ್ತು ಎಂದು ತಮ್ಮ ಮೊದಲ ಪರಿಚಯದ ಬಗ್ಗೆ ಹೇಳಿಕೊಂಡಿದ್ದಾರೆ.

    ಡೈರಿ ಬರೆಯುವ ಅವ್ಯಾಸ ಇತ್ತು:
    ರಾಯನ್ ಗೆ ಡೈರಿ ಬರೆಯುವ ಅಭ್ಯಾಸವಿತ್ತು. ಅವರು ಡೈರಿಯನ್ನು ಯಾವಾಗಲೂ ಜೊತೆಯಲ್ಲೇ ಇಟ್ಟುಕೊಳ್ಳುತ್ತಿದ್ದರು. ಆದರೆ ಒಮ್ಮೆ ನನ್ನ ಕೈಗೆ ಸಿಕ್ಕಿತ್ತು. ಅದನ್ನ ನಾನು ಮನೆಗೆ ತೆಗೆದುಕೊಂಡು ಹೋಗಿ ಓದಿದೆ. ಆದರೆ ಡೈರಿಯಲ್ಲಿ ನನ್ನ ಬಗ್ಗೆನೇ ಬರೆದಿದ್ದರು. ಆಗ ಗೊತ್ತಾಯ್ತು ಅವರು ನನ್ನನ್ನು ಪ್ರೀತಿ ಮಾಡುತ್ತಾರೆ ಅಂತ. ಬಳಿಕ ಅವರು ನನಗಾಗಿ ಇನ್ನು ಒಂದು ವರ್ಷ ಬೆಂಗಳೂರಿನಲ್ಲಿ ಇರಬೇಕು ಎಂದು ನಿರ್ಧಾರ ಮಾಡಿದ್ದರು.

    ಇಂದಿನ ವಾಟ್ಸಪ್, ಫೇಸ್‍ಬುಕ್, ಮೆಸೇಜ್ ನಡುವೆ ಪತ್ರ ಬರೆದು, ಅದನ್ನು ಹೇಳೋಕು ಕಷ್ಟ ಪಡುತ್ತಿದ್ದನ್ನು ನೋಡಿ ನನಗೂ ಇಷ್ಟ ಆಯಿತು. ಮೊದಲಿಗೆ ಅವರು ನನ್ನ ಡೈರಿ ಓದಬೇಡಿ ಎಂದು ಹೇಳಿದ್ದರು. ಬಳಿಕ ನಾನು ಓದಿರುವ ಬಗ್ಗೆ ಅವರಿಗೆ ತಿಳಿಯಿತು. ಬಂದು ಅವರೇ ಪ್ರಪೋಸ್ ಮಾಡಿದರು. ನಾನು ಒಪ್ಪಿಕೊಂಡೆ. ಆದರೆ ಮನೆಯಲ್ಲಿ ಒಪ್ಪಿಕೊಳ್ಳಲ್ಲ ಅಂತ ಭಯವಾಗಿತ್ತು. ಬಳಿಕ ಮನೆಯವರಿಗೂ ಅವರು ಇಷ್ಟವಾದರು ಎಂದು ತನ್ನ ಪ್ರೀತಿಯ ಗುಟ್ಟು ಬಿಚ್ಚಿಟ್ಟಿದ್ದಾರೆ.

    ಇದೇ ನವೆಂಬರ್ 25 ರಂದು ಬೆಂಗಳೂರಿನಲ್ಲಿ ಮದುವೆ ನಡೆಯಲಿದೆ. ಮೈಸೂರು ರಸ್ತೆಯಲ್ಲಿರುವ ‘ಎಂಸಿರಿ ಕನ್ವೆನ್ಷನ್ ಹಾಲ್’ನಲ್ಲಿ ವಿವಾಹ ನಡೆಯಲಿದೆ. ಸದ್ಯಕ್ಕೆ ಮದುವೆ ನಂತರ ಪ್ಲಾನ್ ಏನು ಇಲ್ಲ. ಆದರೆ ನಾವಿಬ್ಬರೂ ಟ್ರಾವೆಲ್ ಮಾಡೋಣ ಅಂದುಕೊಂಡಿದ್ದೇವೆ ಎಂದು ಸ್ನೇಹ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews