Tag: big surprise

  • ಏಪ್ರಿಲ್ 15ಕ್ಕೆ ಕಿಚ್ಚ ಸುದೀಪ್ ಕಡೆಯಿಂದ ಬಿಗ್ ಸರ್ಪ್ರೈಸ್

    ಏಪ್ರಿಲ್ 15ಕ್ಕೆ ಕಿಚ್ಚ ಸುದೀಪ್ ಕಡೆಯಿಂದ ಬಿಗ್ ಸರ್ಪ್ರೈಸ್

    ಬೆಂಗಳೂರು: ನಟ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರದ ಕಡೆಯಿಂದ ಶೀಘ್ರವೇ ಬಿಗ್ ಸರ್ಪ್ರೈಸ್ ಒಂದು ಕಾದಿದೆ ಎಂದು ಸ್ವತಃ ಸುದೀಪ್ ಅವರೇ ಸುಳಿವು ನೀಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಕಿಚ್ಚ, ಏಪ್ರಿಲ್ 15ಕ್ಕೆ ಸರ್ಪ್ರೈಸ್ ಕಾದಿದೆ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹುಟ್ಟಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಏಪ್ರಿಲ್ 15ಕ್ಕೆ ಬೆಳಗ್ಗೆ 11ಕ್ಕೆ ಸರ್ಪ್ರೈಸ್ ಕಾದಿದೆ ಎಂದು ಟ್ವೀಟ್ ಮಾಡಿ ವಿಕ್ರಾಂತ್ ರೋಣ ಸಿನಿಮಾದ ಪೋಸ್ಟರ್ ಅನ್ನು ಕಿಚ್ಚ ಟ್ವೀಟ್‍ರ್‍ನಲ್ಲಿ ಹಂಚಿಕೊಂಡಿದ್ದಾರೆ.

    ಕಿಚ್ಚ ಅವರ ಈ ಒಂದು ಟ್ವೀಟ್ ಅಭಿಮಾನಿಗಳಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಮೂಡಿಸಿದೆ. ಸರ್ಪ್ರೈಸ್ ಏನು ಎನ್ನುವ ಕೂತೂಹಲ ಅಭಿಮಾನಿಗಳಲ್ಲಿ ಕಾಡುತ್ತಿದ್ದು, ಆ ದಿನಕ್ಕಾಗಿ ಕಾಯುತ್ತಿದ್ದಾರೆ. ಹಲವರು ಕಾಮೆಂಟ್ ಮಾಡುವ ಮೂಲಕವಾಗಿ ಕೇಳುತ್ತಿದ್ದಾರೆ.

    ವಿಕ್ರಾಂತ್ ರೋಣ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ಮುಖ್ಯ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಚಿತ್ರ ತೆರೆಕಾಣಲಿದೆ. ಈ ಸಿನಿಮಾ ಸಾಕಷ್ಟು ನೀರಿಕ್ಷೆಯನ್ನು ಮೂಡಿಸಿದೆ.

    ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ವಿಕ್ರಾಂತ್ ರೋಣ ಸಿನಿಮಾ ಹೆಸರನ್ನು ಪ್ರದರ್ಶಿಸುವ ಮೂಲಕವಾಗಿ ಕಿಚ್ಚನ ಟೀಂ ಬಹುಡೊಡ್ಡ ಮಟ್ಟದಲ್ಲಿ ಸಂಭ್ರಮಿಸಿತ್ತು. ಇದೀಗ ಯಾವ ಹೊಸ ಸರ್ಪ್ರೈಸ್ ಅನ್ನು ನೀಡಲಿದೆ. ಏನು ಎನ್ನುವುದು ಗೊತ್ತಾಗಬೇಕಾದರೆ ಏಪ್ರಿಲ್ 15ರವರೆಗೆ ಕಾಯಬೇಕಾಗಿದೆ.