Tag: big boss kannada

  • Big Boss Kannada: ನಮ್ರತಾ ಕಾರಣದಿಂದ ಸಂಗೀತಾ-ಕಾರ್ತಿಕ್ ಲವ್ ಬ್ರೇಕಪ್

    Big Boss Kannada: ನಮ್ರತಾ ಕಾರಣದಿಂದ ಸಂಗೀತಾ-ಕಾರ್ತಿಕ್ ಲವ್ ಬ್ರೇಕಪ್

    ನಿನ್ನೆಯ ಹಬ್ಬದ ಸಂಭ್ರಮ, ಇಂದಿನ ಕ್ಯಾಪ್ಟನ್ಸಿ ಟಾಸ್ಕ್‌ನ ಬಿಸಿಗೆ ಕರಗಿದೆ. ಅಗ್ಗಷ್ಟಿಕೆಯೆದುರು ನೋವು ಹಂಚಿಕೊಳ್ಳುತ್ತ ಒಂದಾಗಿದ್ದ ಸ್ಪರ್ಧಿಗಳ ನಡುವೆ ಮತ್ತೀಗ ಕಿಡಿ ಹೊತ್ತಿಕೊಂಡಿದೆ. ಮನೆಯ ಕ್ಯಾಪ್ಟನ್‌ ಆಗಲು ಅರ್ಹರಾದ ಇಬ್ಬರು ಸದಸ್ಯರನ್ನು ಮನೆಯ ಎಲ್ಲ ಸದಸ್ಯರೂ ಆರಿಸಬೇಕು ಎಂದು ಬಿಗ್‌ಬಾಸ್‌ (Bigg Boss Kannada) ಆದೇಶ ನೀಡಿದ್ದಾರೆ. ಸಂಗೀತಾ, ‘ತಾನು ಲೀಡರ್ ಆಗಬೇಕು ಅಂದುಕೊಂಡಿದ್ದೇನೆ’ ಎಂದು ಘೋಷಿಸಿದ್ದಾರೆ. ಆದರೆ ಅವರ ಆಪ್ತಸ್ನೇಹಿತ ಕಾರ್ತಿಕ್ ಅವರೇ ನಮ್ರತಾ ಮತ್ತು ತನಿಷಾ ಅವರನ್ನು ಕ್ಯಾಪ್ಟನ್ ಆಗಲು ಅರ್ಹರು ಎಂದು ಹೇಳಿ ಸೂಚಿಸಿದರು. ಇದು ಸಂಗೀತಾ ಅವರನ್ನು ಕೆರಳಿಸಿದೆ. ಮನಸಲ್ಲಿದ್ದುದನ್ನು ನೇರವಾಗಿ ಹೇಳಿಬಿಡುವ ಅಭ್ಯಾಸ ಇರುವ ಸಂಗೀತಾ ಈ ವಿಷಯವನ್ನೂ ಕಾರ್ತಿಕ್ ಬಳಿ ನೇರವಾಗಿಯೇ ಕೇಳಿದ್ದಾರೆ.

    ಕಾರ್ತಿಕ್ (Karthik) ಮತ್ತು ಸಂಗೀತಾ (Sangeeta) ಮಧ್ಯ ಕಿಡಿ ಹೊತ್ತಿಕೊಂಡ ದೃಶ್ಯವು JioCinema ಬಿಡುಗಡೆ ಮಾಡಿರುವ ಫ್ರೋಮೊದಲ್ಲಿ ಸೆರೆಯಾಗಿದೆ. ಆಯ್ಕೆ ಸೂಚನಾ ಪ್ರಕ್ರಿಯೆ ಮುಗಿದ ಮೇಲೆ ಸಂಗೀತಾ, ‘ನೀನ್ಯಾಕೆ ನನ್ನನ್ನು ಆಯ್ಕೆ ಮಾಡಿಕೊಂಡಿಲ್ಲ’ ಎಂದು ಕಾರ್ತಿಕ್ ಅವರ ಬಳಿ ಕೇಳಿದ್ದಾರೆ. ಹಾಗೆಯೇ, ‘ಯಾಕೆ ನಮ್ರತಾ?’ ಎಂದೂ ಕೇಳಿದ್ದಾರೆ. ಅದಕ್ಕೆ ಕಾರ್ತಿಕ್ ನೇರವಾಗಿ ಉತ್ತರಿಸದೆ, ‘ಕೋಪ ಯಾಕೆ ಮಾಡ್ಕೋತಿಯಾ?’ ಎಂದು ಅನುನಯಿಸಲು ಹೋಗಿದ್ದಾರೆ

    ‘ನಾನು ಯಾರ ಮೇಲೂ ಡಿಫೆಂಡ್ ಆಗಿ ಬಂದಿಲ್ಲ ಇಲ್ಲಿ. ಜೊತೆಗಿದ್ದೋರೇ ಚುಚ್ಚುವುದು’ ಎಂದೆಲ್ಲ ಜರಿದಿದ್ದಾರೆ. ಕೊನೆಗೆ ‘ಯು ಆರ್ ಫೇಕ್‌’ ಎಂಬ ಮಾತು ಸಂಗೀತಾ ಬಾಯಲ್ಲಿ ಹೊರಬೀಳುತ್ತಿದ್ದಂತೆಯೇ ಕಾರ್ತಿಕ್ ಅಲ್ಲಿಂದ ಎದ್ದು ಹೊರಟುಹೋಗಿದ್ದಾರೆ.

    ಬಿಗ್‌ಬಾಸ್‌ ಮನೆಯ ಬೆಸ್ಟ್‌ ಜೋಡಿ ಅಂತಲೇ ಗುರ್ತಿಸಿಕೊಂಡಿದ್ದ, ಸದಾ ಒಬ್ಬರಿಗೊಬ್ಬರು ಸಪೋರ್ಟ್‌ ಮಾಡುತ್ತ, ಒಬ್ಬರ ಸಲಹೆಯನ್ನು ಇನ್ನೊಬ್ಬರು ಕೇಳುತ್ತ ಬಂದಿದ್ದ ಕಾರ್ತಿಕ್ ಮತ್ತು ಸಂಗೀತಾ ಈ ಕಾರಣಕ್ಕಾಗಿಯೇ ಹಲವು ಸಲ ಉಳಿದವರ ಕೆಂಗಣ್ಣಿಗೆ ಗುರಿಯಾಗಿದ್ದಿದೆ. ಆದರೆ ಅವರ ಸಂಬಂಧದ ಮೇಲೆ ಈಗ ಯಾರದೋ ಕಣ್ಣು ಬಿದ್ದಂತಿದೆ.

    ಯಾವಾಗಲೂ ಹ್ಯಾಪಿಯಾಗಿರುತ್ತಿದ್ದ ಕಾರ್ತಿಕ್ ಮತ್ತು ಸಂಗೀತ ಬೇರೆಯಾಗಿದ್ದಾರೆಯೇ? ಅವರ ನಡುವೆ ಒಡಕು ಮೂಡಿದೆಯೇ? ಪರಸ್ಪರ ಹಳೆಯದನ್ನು ಮರೆತು ಒಂದಾಗುತ್ತಾರಾ? ಅಥವಾ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಮುಂದುವರಿದುಕೊಂಡೇ ಹೋಗುತ್ತದಾ? ಗೊತ್ತಿಲ್ಲ. ಆದರೆ, ಸಂಗೀತಾರನ್ನು ಕೆರಳಿಸುವುದಕ್ಕಾಗಿ ಮತ್ತೆ ಮತ್ತೆ ಕಾರ್ತಿಕ್ ಅವರು ನಮ್ರತಾ ಜೊತೆ ಹೋಗುತ್ತಿದ್ದಾರೆ. ಅವರೊಂದಿಗೆ ಡಾನ್ಸ್ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಬಿಗ್ ಬಾಸ್’ ಮನೆಯಲ್ಲಿ ತುಕಾಲಿ ಸಂತುಗೆ ಬೇಸರ ಮಾಡಿದ ಇಶಾನಿ

    ‘ಬಿಗ್ ಬಾಸ್’ ಮನೆಯಲ್ಲಿ ತುಕಾಲಿ ಸಂತುಗೆ ಬೇಸರ ಮಾಡಿದ ಇಶಾನಿ

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಮೊದಲ ದಿನವೇ ಕಾಮಿಡಿ ನಟ ತುಕಾಲಿ ಸಂತುಗೆ (Tukali Santu) ಬೇಸರ ಮೂಡಿಸಿದ್ದಾರೆ ರಾಪರ್ ಇಶಾನಿ (Aishani). ದೊಡ್ಮನೆಗೆ ಬಂದ ಮೊದಲ ದಿನವೇ ಸಂತುಗೆ ‘ಅಣ್ಣ’ ಎಂದು ಕರೆದು ಆಘಾತ ಮೂಡಿಸಿದ್ದಾರೆ. ನೀನು ಪದೇ ಪದೇ ಅಣ್ಣ ಎಂದು ಕರೆಯೋದು ಬೇಡ ಎಂದು ಸಂತು ಹೇಳಿದರೂ, ಇಶಾನಿ ಮಾತ್ರ ಕರೆಯುವುದನ್ನು ನಿಲ್ಲಿಸುತ್ತಿಲ್ಲ. ಈ ನಡೆ ಸಂತುಗೆ ಬೇಸರ ಮೂಡಿಸಿದೆ. ಅದನ್ನು ಅವರು ಬಹಿರಂಗವಾಗಿಯೇ ಎಲ್ಲರ ಮುಂದೂ ಹೇಳಿಕೊಂಡು ಮನೆಯಲ್ಲಿ ಓಡಾಡುತ್ತಿದ್ದಾರೆ.

    ದೊಡ್ಮನೆ ಒಳಗೆ ಕಾಲಿಡುವುದಕ್ಕೂ ಮುನ್ನ ಪತ್ನಿಯ ಜೊತೆ ವೇದಿಕೆಗೆ ಆಗಮಿಸಿದ್ದ ಸಂತು, ‘ಒಂದಷ್ಟು ದಿನ ಹೆಂಡತಿಯಿಂದ ದೂರವಿದ್ದು ಎಂಜಾಯ್ ಮಾಡ್ಕೊಂಡು ಬರ್ತೀನಿ’ ಎಂದು ತಮಾಷೆಯಾಗಿ ಹೇಳಿದ್ದರು. ಸಂತು ಪತ್ನಿ ಕೂಡ ಮತ್ತೊಂದು ರೀತಿಯಲ್ಲಿ ಜೋಕ್ ಕಟ್ ಮಾಡಿದ್ದರು. ಪತ್ನಿಯೊಂದಿಗೆ ತಮಾಷೆಯಾಗಿ ಮಾತನಾಡಿ, ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟವರು ಆ ಮನೆಯಲ್ಲಿ ಹುಡುಗಿಯರ ಜೊತೆ ಹೇಗಿರ್ತಾರೆ ಎನ್ನುವ ಕುತೂಹಲವಿತ್ತು. ನಿನ್ನೆಯ ಎಪಿಸೋಡ್ ನಲ್ಲಿ ಸಂತು, ಇಶಾನಿ ಕೈ ಕೈ ಹಿಡಿದುಕೊಂಡು ಮನೆ ತುಂಬಾ ಓಡಾಡುತ್ತಿದ್ದಾರೆ.

    ಹಾಗಂತ ಇಶಾನಿಯನ್ನು ಒಂದೇ ದಿನಕ್ಕೆ ಸಂತು ಇಷ್ಟಪಟ್ಟರಾ? ಇರಲಿರಕ್ಕಿಲ್ಲ.. ಅವರು ತಮಾಷೆಯಾಗಿಯೇ ಆ ರೀತಿ ಮಾತನಾಡುತ್ತಿರಬಹುದು. ಒಳ್ಳೆಯ ಭಾವನೆಯನ್ನೇ ಇಟ್ಟುಕೊಂಡು ಇಶಾನಿ ಜೊತೆ ಕೈ ಕೈ ಹಿಡಿದುಕೊಂಡು ಓಡಾಡುತ್ತಿರಬಹುದು. ಸಂತು ಹೆಂಡತಿ ಅದನ್ನು ತಮಾಷೆಯಾಗಿಯೇ ತೆಗೆದುಕೊಳ್ಳಬಹುದು. ಆದರೆ, ಇಂದಿನ ಸೀಸನ್ ನಲ್ಲಿ ಹೀಗೆಯೇ ತಮಾಷೆ ಮಾಡ್ತಾ, ಒಬ್ಬರಿಗೊಬ್ಬರು ಅಂಟಿಕೊಂಡೇ ಓಡಾಡ್ತಾ, ಆಮೇಲೆ ಏನೆಲ್ಲ ಆಟವಾಡಿದರು ಎನ್ನುವ ಉದಾಹರಣೆ ಇದೆ.

    ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಬೇರೆ ಭಾಷೆಗಳ ಬಿಗ್ ಬಾಸ್ ನಲ್ಲೂ ಹೀಗೆಯೇ ಅಣ್ಣ-ತಂಗಿ, ಬೆಸ್ಟ್ ಫ್ರೆಂಡ್ ಅಂತೆಲ್ಲ ಹೇಳಿಕೊಂಡವರು ಬಿಗ್ ಬಾಸ್ ಮನೆಯಲ್ಲೇ ಪ್ರೀತಿಸಿ, ಆಚೆ ಬಂದ ನಂತರ ಮದುವೆಯಾದವರೂ ಇದ್ದಾರೆ. ಸಂತು ಮತ್ತು ಇಶಾನಿ ಮಧ್ಯ ಹಾಗೆ ನಡೆಯುವುದಕ್ಕೇ ಸಾಧ್ಯವೇ ಇಲ್ಲ. ಯಾಕೆಂದರೆ ಸಂತು ಮದುವೆ ಆಗಿದೆ. ಈ ವಿಷಯವು ಇಶಾನಿಗೂ ಗೊತ್ತಿದೆ. ಇಬ್ಬರೂ ತಮಾಷೆ ಮಾಡಿಕೊಂಡು ದೊಡ್ಮನೆ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Big Boss Kannada: 9ನೇ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಕಾಲಿಟ್ಟ ನಟಿ ಭಾಗ್ಯಶ್ರೀ

    Big Boss Kannada: 9ನೇ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಕಾಲಿಟ್ಟ ನಟಿ ಭಾಗ್ಯಶ್ರೀ

    ದುಕು ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಭಾಗ್ಯಶ್ರೀ (Bhagyashree) ಬಿಗ್ ಬಾಸ್ ಕನ್ನಡ 10ನೇ ಸೀಸನ್ ನಲ್ಲಿ ದೊಡ್ಮನೆ ಒಳಗೆ ಕಾಲಿಟ್ಟಿದ್ದಾರೆ. ಬರೋಬ್ಬರಿ ಶೇಕಡಾ 81ರಷ್ಟು ಮತವನ್ನು ಪಡೆಯುವ ಮೂಲಕ ಅವರು ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಮಾಡಿದ್ದಾರೆ.

    ದೊಡ್ಮನೆಗೆ ಹೋಗಲು ವಿಫಲ

    ದೇಹದಾರ್ಢ್ಯ ಎಂಬುದು ಪುರುಷರಿಗೆ ಮೀಸಲಾಗಿದ್ದಲ್ಲ ಎಂಬುದಕ್ಕೆ ಪುರಾವೆಯಂತಿರುವ ಚಿತ್ರಾಲ್ (Chitral), ಅದಕ್ಕೂ ಮೊದಲು ನಟಿಯಾಗಿಯೂ ಕಿರುತೆರೆ, ಹಿರಿತೆರೆಯಲ್ಲಿ ಗುರ್ತಿಸಿಕೊಂಡವರು. ದಪ್ಪ ಇದ್ದೀಯಾ ಎನ್ನುವ ಕಾರಣಕ್ಕೆ ಅವಕಾಶಗಳನ್ನು ತಪ್ಪಿಸಿಕೊಳ್ಳತೊಡಗಿದಾಗ ಜಿಮ್‌ಗೆ ಎಡತಾಕಿದ ಚಿತ್ರಾಗೆ ವರ್ಕೌಟ್ ಎನ್ನುವುದು ಅಡಿಕ್ಟ್ ಆಗಿಬಿಟ್ಟಿತು. ಬಾಡಿ ಬಿಲ್ಡಿಂಗ್ ಅನ್ನು ಹವ್ಯಾಸಿಕೊಂಡು ಸ್ಪರ್ಧೆಗಳಲ್ಲಿಯೂ ಪಾಲ್ಗೊಳ್ಳತೊಡಗಿದರು.

    ನಟನೆಯಿಂದ ದೇಹದಾರ್ಢ್ಯ ಕ್ಷೇತ್ರಕ್ಕೆ ಬಂದು ಮಿಂಚುತ್ತಿರುವ ಚಿತ್ರಾ ಅವರಿಗೆ ಜನರು 38% ವೋಟ್ ನೀಡಿದ್ದಾರೆ. ಹೀಗಾಗಿ ಬಿಗ್‌ಬಾಸ್ (Bigg Boss Kannada) ಮನೆಯೊಳಗೆ ಹೋಗುವ ಅವಕಾಶದಿಂದ ಅವರು ವಂಚಿತರಾಗಿದ್ದಾರೆ. ಹಾಗಾಗಿ ಅವರು ಮನೆ ಒಳಗೆ ಹೋಗಲು ವಿಫಲರಾದರು.

    ಬಿಗ್ ಬಾಸ್ ಮನೆಯೊಳಗೆ ಸ್ನೇಕ್ ಶ್ಯಾಮ್

    ಸಾವಿರಾರು ಹಾವುಗಳನ್ನು ರಕ್ಷಣೆ ಮಾಡಿದ ಮೈಸೂರಿನ ಸ್ನೇಕ್ ಶ್ಯಾಮ್ (Snake Shyam) ಬಿಗ್ ಬಾಸ್ (Bigg Boss Kannada) ಪ್ರವೇಶ ಮಾಡಿದ್ದಾರೆ. ಶೇಕಡಾ 84ರಷ್ಟು ಮತವನ್ನು ಪಡೆಯುವುದರ ಮೂಲಕ 8ನೇ ಸ್ಪರ್ಧಿಯಾಗಿ ಶ್ಯಾಮ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಮನೆಯೊಳಗೆ ಶ್ಯಾಮ್ ಪ್ರವೇಶ ಮಾಡುವ ಮುನ್ನ ಹಾವಿನ ಬುಟ್ಟಿಯನ್ನು ಬಿಗ್ ಬಾಸ್ ಅವರಿಗೆ ನೀಡಿದ್ದಾರೆ

     

    ಬುಟ್ಟಿಯನ್ನು ಶ್ಯಾಮ್ ನೋಡದೇ ಮನೆ ಒಳಗೆ ಇರುವ ಒಬ್ಬರು ಹುಡುಗಿಯರಿಗೆ ಆ ಬುಟ್ಟಿಯನ್ನು ಕೊಡುವುದಕ್ಕೆ ಹೇಳಿದ್ದಾರೆ. ಸ್ನೇಕ್ ಶ್ಯಾಮ್ ಮನೆಯೊಳಗೆ ಪ್ರವೇಶ ಮಾಡಿ, ಆ ಬುಟ್ಟಿಯನ್ನು ನಾಗಿಣಿ ಖ್ಯಾತಿಯ ನಮ್ರತಾಗೆ  ನೀಡಿದರು. ಬುಟ್ಟಿ ತೆರೆದಾಗ ಅದೊಂದು ಪ್ಲಾಸ್ಟಿಕ್ ಹಾವು ಒಳಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Big Boss Kannada: ಹೋಲ್ಡ್‌ನಲ್ಲಿ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್

    Big Boss Kannada: ಹೋಲ್ಡ್‌ನಲ್ಲಿ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್

    ‘ನನ್ನ ಮೇಲೆ ನೆಗೆಟಿವ್ ಇಮೇಜ್ ಕಟ್ಟಿದರು ಕೆಲವರು. ನನ್ನ ನಿಜವಾದ ಫೇಸ್ ತೋರಿಸಬೇಕು. ಅದನ್ನು ಮನೆಯೊಳಗೆ ಖಂಡಿತ ತೋರಿಸ್ತೀನಿ. ಬದುಕಿನಲ್ಲಿ ಪಾಸಿಟಿವ್ ನೆಗೆಟಿವ್ ಎರಡೂ ಇರಬೇಕು’ ಎಂದು ವಯಸ್ಸಿಗೂ ಮೀರಿ ಪ್ರಬುದ್ಧವಾಗಿ ಮಾತಾಡುವ ಹುಡುಗ ರಕ್ಷಕ್‌ (Rakshak), ಹಿರಿಯ ಹಾಸ್ಯನಟ ಬುಲೆಟ್ ಪ್ರಕಾಶ್‌ (Bullet Prakash) ಅವರ ಪುತ್ರ.

    ‘ಜನರ ಬಾಯಿ ಮುಚ್ಚಿಸಲಾಗದು. ಟ್ರೋಲ್, ರೋಸ್ಟ್‌ ಮಾಡಿದರು ಜನರು… ಅದಕ್ಕೆಲ್ಲ ಕೇರ್ ಮಾಡಲ್ಲ. ನನ್ನ ಸ್ವಂತ ಐಡೆಂಟಿಟಿಯೊಂದಿಗೆ ಬಿಗ್‌ಬಾಸ್ ಮನೆಯೊಳಗೆ ಹೋಗ್ತೀನಿ’ ಎಂದು ನೇರವಾಗಿ ಮಾತಾಡುವ ರಕ್ಷಕ್‌, ಕೌಟುಂಬಿಕ ಪ್ರೇಕ್ಷಕರ ಮನಸಲ್ಲಿ ಜಾಗ ಕಂಡುಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡು ಬಿಗ್‌ಬಾಸ್ ವೇದಿಕೆಗೆ ಬಂದಿದ್ದರು.

    ‘ರಾಜಕೀಯ ಸಿನಿಮಾ ಎರಡರಲ್ಲಿಯೂ ನೆಗೆಟಿವ್ ಪಾಸಿಟಿವ್ ಎರಡೂ ಇರತ್ತೆ. ಹೋಗುತ್ತಾ ಹೋಗುತ್ತಾ ಈ ನೆಗೆಟಿವೇ ಪಾಸಿಟಿವ್ ಆಗುತ್ತದೆ’ ಎನ್ನುವ ನಂಬಿಕೆಯಲ್ಲಿರುವ ರಕ್ಷಕ್‌ ಅವರು ಮನೆಯೊಳಗೆ ಮಾತುಗಳಿಗೆ ಸೆನ್ಸಾರ್ ಅಳವಡಿಸಿಕೊಂಡೇ ಮನೆಯೊಳಗೆ ಹೋಗಲು ನಿರ್ಧರಿಸಿದ್ದರು. ‘ನನ್ನ ರಿಯಲ್ ಫೇಸ್‌ ನೋಡಲಿಕ್ಕಾಗಿ ನನಗೆ ವೋಟ್ ಮಾಡಿ’ ಎಂಬ ರಕ್ಷಕ್ ಮನವಿಗೆ ಜನರು 53% ವೋಟ್ ಮಾಡಿ ಹೋಲ್ಡ್‌ನಲ್ಲಿ ಇಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Big Boss Kannada 10: ಜಿಯೋ ಸಿನಿಮಾದಲ್ಲೂ ನೋಡಿ ಬಿಗ್ ಬಾಸ್ ಸೀಸನ್ 10

    Big Boss Kannada 10: ಜಿಯೋ ಸಿನಿಮಾದಲ್ಲೂ ನೋಡಿ ಬಿಗ್ ಬಾಸ್ ಸೀಸನ್ 10

    ನ್ನಡಿಗರಿಗೆ ಮಹಾ ಮನರಂಜನೆ ನೀಡುವ ತನ್ನ ಭರವಸೆಯನ್ನು ಮರೆಯದ ಕಲರ್ಸ್‌ ಕನ್ನಡ, ಇದೀಗ ಬಿಗ್ ಬಾಸ್ ನ ಹತ್ತನೇ ಸೀಸನ್ ಅನ್ನು ಹೊತ್ತು ತಂದಿದೆ. ಕನ್ನಡ ಬಿಗ್ ಬಾಸ್ (Big Boss Kannada) ಹೊಸ ಸೀಸನ್ ಅಕ್ಟೋಬರ್ 8 ರಿಂದ  ಆರಂಭಗೊಳ್ಳಲಿದೆ. ಅಕ್ಟೋಬರ್ 8ನೇ ತಾರೀಖಿನ ಸಂಜೆ 6 ಗಂಟೆಗೆ ಸ್ಪರ್ಧಿಗಳನ್ನು ಮನೆಯೊಳಕ್ಕೆ ಕಳಿಸಲಾಗುವುದು. ದೈನಂದಿನ ಸಂಚಿಕೆಗಳು ಮರುದಿನದಿಂದ ಪ್ರತಿ ದಿನ ರಾತ್ರಿ 9.30ರಿಂದ  ಪ್ರಸಾರವಾಗುತ್ತವೆ. ಬಿಗ್‌ಬಾಸ್ ಕನ್ನಡದ ಹತ್ತನೇ ವರ್ಷಾಚರಣೆಯ ಈ ಸೀಸನ್ ಅನ್ನು ವಯಕಾಮ್‌18ರ ಒಟಿಟಿ ಫ್ಲ್ಯಾಟ್‌ಫಾರಂ ಆದ ಜಿಯೋ ಸಿನಿಮಾ (JioCinema) ದಲ್ಲಿ 24 ಗಂಟೆ ಲೈವ್ ಚಾನಲ್‌ನಲ್ಲಿ ಉಚಿತವಾಗಿ ವೀಕ್ಷಿಸುವ ಸೌಲಭ್ಯವನ್ನು ಈ ಬಾರಿ ಕಲ್ಪಿಸಲಾಗಿದೆ.

    ‘ಬಿಗ್‌ಬಾಸ್ ಕನ್ನಡ’ ಹತ್ತನೇ ಆವೃತ್ತಿಯ ಕುರಿತು ಕುತೂಹಲ ಬೆಳೆಯುತ್ತಿರುವ ಹೊತ್ತಿನಲ್ಲಿಯೇ ಹಬ್ಬದ ಮನರಂಜನಾ ಮೆನ್ಯೂ ಜಿಯೋ ಸಿನಿಮಾ ಮೂಲಕ ಇನ್ನಷ್ಟು ವೈವಿಧ್ಯಗೊಂಡಿದೆ. ಇದೇ ಮೊದಲ ಬಾರಿಗೆ ‘ಬಿಗ್‌ಬಾಸ್ ಕನ್ನಡ’ ಜಿಯೋ ಸಿನಿಮಾದಲ್ಲಿಯೂ ಪಸಾರವಾಗಲಿದ್ದು, ದಿನದ ಇಪ್ಪತ್ತನಾಲ್ಕು ಗಂಟೆಯೂ ಮನೆಯಲ್ಲಿ ಏನಾಗುತ್ತಿದೆ ಎಂಬುದರ ನೇರಪ್ರಸಾರವನ್ನು ವೀಕ್ಷಕರು 24 ಗಂಟೆ ಲೈವ್ ಚಾನಲ್‌ನಲ್ಲಿ ನೋಡಬಹುದಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ದಿನದ ಎಪಿಸೋಡಿನ ಹೊರತಾಗಿಯೂ ಹಲವು ವೈವಿಧ್ಯದ ಎಕ್ಸ್‌ ಕ್ಯೂಸಿವ್ ಮತ್ತು ಅನ್‌ಸೀನ್ ಮನರಂಜನಾ ಕಂಟೆಂಟ್‌ಗಳು ಜಿಯೋ ಸಿನಿಮಾದಲ್ಲಿ ಇರಲಿವೆ. ‘ಬಿಗ್ ನ್ಯೂಸ್’, ‘ಅನ್‌ಸೀನ್ ಕಥೆಗಳು’, ‘ ಜಿಯೋ ಸಿನಿಮಾ ಫನ್ ಪ್ರೈಡೇ’, ‘ಡೀಪ್ ಆಗಿ ನೋಡಿ…’ ಹೀಗೆ ಹಲವಾರು ರೂಪದಲ್ಲಿ, ಮನೆಯೊಳಗಿನ ಕುತೂಹಲಕಾರಿ ಘಟನಾವಳಿಗಳನ್ನು ವೀಕ್ಷಕರಿಗೆ ತಲುಪಿಸಲು ವೇದಿಕೆ ಸಜ್ಜುಗೊಂಡಿದೆ. ಬೆಳವಣಿಗೆಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ ‘ಲೈವ್ ಆಕರ್ಷಣೆಯಾಗಿದೆ. ಮನೆಯೊಳಗೆ ನಡೆಯುವ ನಾಟಕೀಯ ಇನ್ನೊಂದು ವಿಶೇಷ.

    ಇದರ ಜೊತೆಜೊತೆಯಲ್ಲಿ ‘ವಾಚ್ ಆಂಡ್ ವಿನ್’, ‘ಮೀಮ್ ದ ಮೊಮೆಂಟ್’, ‘ಹೈಪ್ ಚಾಟ್’, ‘ವಿಡಿಯೊ ವಿಚಾರ್’ಗಳ ಮೂಲಕ ಬಿಗ್‌ಬಾಸ್ ಕನ್ನಡದ ಅಭಿಮಾನಿಗಳಿಗೆ, ಸಂವಾದ ನಡೆಸುವ ಅಪೂರ್ವ ಅವಕಾಶವನ್ನೂ ಕಲ್ಪಿಸಲಾಗಿದೆ. ಇಷ್ಟೇ ಅಲ್ಲ, ಇದೇ ಮೊದಲ ಬಾರಿಗೆ, ಟೀವಿಯಲ್ಲಿ ಷೋ ನೋಡಿ, ಅಲ್ಲಿ ಕೇಳಲಾದ ಪ್ರಶ್ನೆಗಳಿಗೆ ಜಿಯೋ ಸಿನಿಮಾದಲ್ಲಿ ಉತ್ತರಿಸುವ ಮೂಲಕ ಪ್ರತಿದಿನವೂ ರೋಮಾಂಚಕಾರಿ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶವನ್ನೂ ಪರಿಚಯಿಸಲಾಗಿದೆ. ಈ ಎಲ್ಲ ಸಂವಾದ ದಾರಿಗಳು ವೀಕ್ಷಕರ ಅನುಭವವನ್ನು ಇನ್ನಷ್ಟು ರೋಚಕಗೊಳಿಸುವುದರ ಜೊತೆಗೆ, ಮನೆಯೊಳಗೆ ತೆಗೆದುಕೊಳ್ಳಲಾಗುವ ಅತಿಮುಖ್ಯ ನಿರ್ಧಾರಗಳ ಮೇಲೆ ಪ್ರಭಾವ ಬೀರುವ, ತಮ್ಮಿಷ್ಟದ ಅಭ್ಯರ್ಥಿಯನ್ನು ಉಳಿಸುವ ಅಧಿಕಾರವನ್ನೂ ನೀಡಲಿವೆ.

    ಅಂತೂ ಹಲವು ಹೊಸತನಗಳೊಂದಿಗೆ ನಿಮ್ಮ ಮನದಂಗಳಕ್ಕೆ ದಾಳಿಯಿಡಲು ಬಿಗ್ ಬಾಸ್ ಹತ್ತನೇ ಸೀಸನ್ ಸಜ್ಜಾಗಿದೆ. ನೀವೂ ತಯಾರಾಗಿ, ಕಲರ್ಸ್‌ ಕನ್ನಡ ಚಾನೆಲ್ ನಲ್ಲಿ ಲಾಂಚ್ ಎಪಿಸೋಡ್ ಅಕ್ಟೋಬರ್ 8 ರ ಸಂಜೆ ಆರು ಗಂಟೆಗೆ ಮತ್ತು ನಂತರ ಪ್ರತಿದಿನ ರಾತ್ರಿ 9.30ಕ್ಕೆ. ಜೊತೆಗೆ ಬಿಗ್‌ಬಾಸ್ ಕನ್ನಡ 10ನೇ ಸೀಸನ್‌ನ ಅನಿಯಮಿತ ಮನರಂಜನೆಯನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ಆನಂದಿಸಿ. ಹತ್ತನೇ ಸೀಸನ್ ಕನ್ನಡ ಬಿಗ್ ಬಾಸ್ ನ ವಿಶೇಷಗಳು ಹಲವು. ಇದೇ ಮೊದಲ ಬಾರಿಗೆ ‘ಹ್ಯಾಪಿ ಬಿಗ್ ಬಾಸ್’ ಎಂಬ ಥೀಮ್ ಹೊಂದಿರುವುದು ಮೊದಲನೇ ವಿಶೇಷ. ಹದಿನಾರು ಸ್ಪರ್ಧಿಗಳು ಭಾಗವಹಿಸಲಿರುವ ಈ ಸೀಸನ್ ನ ಮನೆಯನ್ನು ಕಾಯಲು 73 ಕ್ಯಾಮರಾಗಳು ಸಜ್ಜಾಗಿವೆ.

     

    ಹತ್ತನೇ ಆವೃತ್ತಿಗಾಗಿ ಕಲರ್ಸ್ ಕನ್ನಡವು ಹೊಸ ಬಿಗ್ ಬಾಸ್ ಮನೆಯನ್ನೇ ಕಟ್ಟಿರುವುದು ಮತ್ತೊಂದು ವಿಶೇಷ. ಬೆಂಗಳೂರಿನ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಈ ಹೊಸ ಮನೆ ಹೆಚ್ಚು ವಿಶಾಲವಾಗಿದ್ದು, ಬೇರೆಲ್ಲ ಭಾಷೆಯ ಬಿಗ್ ಬಾಸ್ ಮನೆಗಳಿಗಿಂತ ದೊಡ್ಡದಾಗಿದೆ. 12 ಸಾವಿರ ಚದರಡಿಗಳ ಈ ಮಹಾಮನೆಯಲ್ಲಿ ಮೊದಲಿಗಿಂತ ದೊಡ್ಡ ಆಟಗಳನ್ನು ಆಡುವುದು ಹಾಗೂ ಟಾಸ್ಕ್ ಗಳನ್ನು ಮಾಡುವುದು ಸಾಧ್ಯವಿದೆ. ಹಾಗಾಗಿ ಭಾವನೆಗಳ ಆಟವೂ ಈ ಸಲ ದೊಡ್ಡದಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೂಪೇಶ್ ಗೆ ಬಿಗ್ ಬಾಸ್ ಕೊಟ್ಟಿದ್ದು 60 ಲಕ್ಷ: ನಿಜವಾಗಿಯೂ ಅವರ ಕೈಗೆ ಬರೋದೆಷ್ಟು?

    ರೂಪೇಶ್ ಗೆ ಬಿಗ್ ಬಾಸ್ ಕೊಟ್ಟಿದ್ದು 60 ಲಕ್ಷ: ನಿಜವಾಗಿಯೂ ಅವರ ಕೈಗೆ ಬರೋದೆಷ್ಟು?

    ಬಿಗ್ ಬಾಸ್ ಸೀಸನ್ 9ರ ಟೈಟಲ್ ಗೆದ್ದಿರುವ ರೂಪೇಶ್ ಶೆಟ್ಟಿಗೆ ವಾಹಿನಿಯಿಂದ ಬಂದ ಬಹುಮಾನ ಮೊತ್ತ ಬರೋಬ್ಬರಿ 60 ಲಕ್ಷ. ಇಷ್ಟೊಂದು ಮೊತ್ತದ ಹಣವು ರೂಪೇಶ್ ಪಾಲಾಗಿದ್ದಕ್ಕೆ ಹಲವರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಈ ಪ್ರಮಾಣದ ಹಣವನ್ನು ಅವರು ಏನು ಮಾಡುತ್ತಾರೆ ಎಂದೂ ಪ್ರಶ್ನಿಸಿದ್ದಾರೆ. ಬಿಗ್ ಬಾಸ್ ವೇದಿಕೆಯ ಮೇಲೆ ಕಿಚ್ಚ ಸುದೀಪ್ 60 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ. ಆದರೆ, ಅಸಲಿಯಾಗಿ ರೂಪೇಶ್ ಕೈಗೆ ಅಷ್ಟೊಂದು ಮೊತ್ತ ಬರುವುದಿಲ್ಲ.

    ಹೌದು, ಆ ಪ್ರಮಾಣದ ಹಣವನ್ನು ಘೋಷಣೆ ಮಾಡಿದ್ದರೂ, ಅಂದಾಜು ಶೇ.30ರಷ್ಟು ತೆರಿಗೆ ಕಡಿತವಾಗಲಿದ್ದು, ಆ ನಂತರ ಅವರ ಕೈಗೆ ಅಂದಾಜು 42 ಲಕ್ಷ ರೂಪಾಯಿಯಷ್ಟು ಬರಬಹುದು. ಈ ಹಣದಲ್ಲಿ ಅವರು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರಂತೆ. ಅಲ್ಲದೇ, ಸಾಲ ಇರುವುದರಿಂದ ಸ್ವಲ್ಪ ಮೊತ್ತವನ್ನು ಸಾಲಕ್ಕಾಗಿ ಮೀಸಲಿಡಲಿದ್ದಾರೆ. ಸಿನಿಮಾ, ಸಾಲ, ದೇವರ ಹರಕೆ ಮತ್ತು ಒಂದಷ್ಟು ಸಮಾಜಸೇವೆಗೂ ಅದರಲ್ಲಿ ಮೀಸಲಾಗಿಡುವುದಾಗಿ ಅವರು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಇದನ್ನೂ ಓದಿ:ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ರೂಪೇಶ್ ಶೆಟ್ಟಿ ಅವರಿಗೆ 60 ಲಕ್ಷ ರೂಪಾಯಿಗಳ ಬಹುಮಾನ ನೀಡಿದ್ದರೆ, ರನ್ನರ್ ಅಪ್ ಆಗಿರುವ ರಾಕೇಶ್ ಅಡಿಗಗೆ ವಾಹಿನಿಯಿಂದ ಏಳು ಲಕ್ಷ ರೂಪಾಯಿ ಹಾಗೂ ಪ್ರಾಯೋಜಕರ ಅತ್ಯುತ್ತಮ ನಾಯಕ ಬಹುಮಾನವಾಗಿ ಐದು ಲಕ್ಷ ರೂಪಾಯಿ ಒಟ್ಟು 12 ಲಕ್ಷ ರೂಪಾಯಿಯನ್ನು ಬಹುಮಾನವಾಗಿ ರಾಕೇಶ್ ಅಡಿಗ ಪಡೆದುಕೊಂಡಿದ್ದಾರೆ.

    ಈ ಸೀಸನ್ ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವರು ದೀಪಿಕಾ ದಾಸ್. ಅವರಿಗೂ ಕೂಡ ಐದು ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗಿದೆ. ನಾಲ್ಕನೇ ಸ್ಥಾನದಲ್ಲಿದ್ದ ರೂಪೇಶ್ ರಾಜಣ್ಣ ಅವರಿಗೆ ಮೂರು ಲಕ್ಷ ರೂಪಾಯಿಗಳು ಬಹುಮಾನ ಬಂದಿದೆ. ಹೀಗೆ ಫಿನಾಲೆ ವೇದಿಕೆಯ ಮೇಲಿದ್ದ ದಿವ್ಯಾ ಉರುಡುಗ ಹೊರತುಪಡಿಸಿ ಬಹುತೇಕರಿಗೆ ಲಕ್ಷ ಲಕ್ಷ ರೂಪಾಯಿ ಬಹುಮಾನ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರಶಾಂತ್ ಸಂಬರಗಿ ಹೊಸ ಗೆಟಪ್: ಫ್ರಾಕಿನಲ್ಲಿ ಪಿಂಕಿ ಪಿಂಕಿ

    ಪ್ರಶಾಂತ್ ಸಂಬರಗಿ ಹೊಸ ಗೆಟಪ್: ಫ್ರಾಕಿನಲ್ಲಿ ಪಿಂಕಿ ಪಿಂಕಿ

    ಬಿಗ್ ಬಾಸ್ ಮನೆಯಲ್ಲಿ ಈವರೆಗೂ ನಾನಾ ಅವತಾರಗಳಲ್ಲಿ ಕಾಣಿಸಿಕೊಂಡಿದ್ದು ಅರುಣ್ ಸಾಗರ್. ಅವರನ್ನೂ ಮೀರಿಸುವಂತಹ ಪ್ರಯತ್ನ ನಿನ್ನೆ ನಡೆದಿದೆ. ಸದಾ ಜಗಳ ಮಾಡುತ್ತಲೇ ಏರುಧ್ವನಿಯಲ್ಲಿ ಮಾತಾಡುವ ಮೂಲಕ ಫೇಮಸ್ ಆಗಿದ್ದ ಪ್ರಶಾಂತ್ ಸಂಬರಗಿ, ಫ್ರಾಕ್ ಹಾಕಿಕೊಂಡು ಡಾನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಪಿಂಕ್ ಫ್ರಾಕಿನಲ್ಲಿ ಅವರು ಸಖತ್ ಆಗಿ ಕಾಣಿಸಿಕೊಂಡು ಮನರಂಜನೆ ನೀಡಿದ್ದಾರೆ.

    ಪ್ರಶಾಂತ್ ಸಂಬರಗಿ ಈ ಅವತಾರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಒಂದು ಕಾರಣವೂ ಇದೆ. ಸಹಸ್ಪರ್ಧಿ ಅನುಪಮಾ ಗೌಡ ಮನೆಯಲ್ಲಿದ್ದ ಗ್ಲಾಸು ಒಡೆದು ಹಾಕಿದರು. ಹಾಗಾಗಿ ಬಿಗ್ ಬಾಸ್ ಅವರಿಗೆ ಶಿಕ್ಷೆಯೊಂದನ್ನು ನೀಡಿದರು. ಅನುಪಮಾ ನೀರು ಕುಡಿಯಬೇಕು ಅಂದರೆ, ಪುರುಷ ಸ್ಪರ್ಧಿಗಳಿಗೆ ಡಾನ್ಸ್ ಹೇಳಿಕೊಡಬೇಕು ಎನ್ನುವುದು ಟಾಸ್ಕ್ ಆಗಿತ್ತು. ಹಾಗಾಗಿ ಅವರು ಡಾನ್ಸ್ ಕಲಿಸಲು ಪ್ರಶಾಂತ್ ಸಂಬರಗಿ ಮತ್ತು ರೂಪೇಶ್ ರಾಜಣ್ಣ ಅವರನ್ನು ಆಯ್ಕೆ ಮಾಡಿಕೊಂಡರು. ಇದನ್ನೂ ಓದಿ: ಸ್ಯಾಂಡಲ್‌ವುಡ್‌ ನಟ ಮನದೀಪ್ ರಾಯ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    ಈ ಡಾನ್ಸ್ ಕಲಿಯುವುದಕ್ಕಾಗಿಯೇ ಪ್ರಶಾಂತ್ ಸಂಬರಗಿ ಫ್ರಾಕ್ ಹಾಕಿಕೊಳ್ಳಬೇಕಾದ ಸನ್ನಿವೇಶ ಎದುರಾಯಿತು. ಅನುಪಮಾ ಗೌಡರಿಗೆ ನೀರು ಕುಡಿಸಲೆಂದೇ ಅವರು ಫ್ರಾಕ್ ಹಾಕಿಕೊಂಡು ಅವರಿಂದ ನೃತ್ಯ ಕಲಿತರು. ಪ್ರಶಾಂತ್ ಪಾಶ್ಚಾತ್ಯ ಸಂಗೀತ ಕಲಿತರೆ, ರೂಪೇಶ್ ರಾಜಣ್ಣಗೆ ಬೆಲ್ಲಿ ಡಾನ್ಸ್ ಹೇಳಿಕೊಟ್ಟಿದ್ದಾರೆ. ಇಬ್ಬರ ಡಾನ್ಸ್ ನೋಡಿದ ಬಿಗ್ ಬಾಸ್ ಮನೆಯ ಸದಸ್ಯರು ನಕ್ಕು ನಕ್ಕು ಸುಸ್ತಾಗಿದ್ದು ಮಾತ್ರ ಸುಳ್ಳಲ್ಲ.

    Live Tv
    [brid partner=56869869 player=32851 video=960834 autoplay=true]

  • ರಾಕ್‌ಸ್ಟಾರ್ ರೂಪೇಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ನೀಡಿದ ಸಾನ್ಯ ಅಯ್ಯರ್

    ರಾಕ್‌ಸ್ಟಾರ್ ರೂಪೇಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ನೀಡಿದ ಸಾನ್ಯ ಅಯ್ಯರ್

    ಕಿರುತೆರೆಯ ಬಿಗ್ ಶೋ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಪ್ರೇಮ ವಿಚಾರಗಳು ಸಖತ್ ಸದ್ದು ಮಾಡುತ್ತಿದೆ. ಒಂದ್ ಕಡೆ ರಾಕೇಶ್ ಅಡಿಗ ಮತ್ತು ಸೋನು ಹಾಗೂ ಸ್ಪೂರ್ತಿ ಲವ್ವಿ ಡವ್ವಿ ವಿಷ್ಯ ಭಾರೀ ಸದ್ದು ಮಾಡ್ತಿದ್ರೆ, ಇನ್ನೊಂದ್ ಕಡೆ ಸಾನ್ಯ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ವಿಚಾರ ಸಖತ್ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ರಾಕ್‌ಸ್ಟಾರ್ ರೂಪೇಶ್ ಹುಟ್ಟುಹಬ್ಬಕ್ಕೆ ಸಾನ್ಯ ಮಸ್ತ್ ಆಗಿ ಸಾಂಗ್ ಹಾಡಿದ್ದಾರೆ.

    ಬಿಗ್ ಬಾಸ್ ಕನ್ನಡ ಓಟಿಟಿ ಶೋನಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯುತ್ತಿದೆ. ಈಚೆಗಷ್ಟೇ ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್ ನಡುವೆ ಗುಟ್ಟಾಗಿ ಒಂದಿಷ್ಟು ಮಾತುಕತೆ ನಡೆದಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಈಗಾಗಲೇ ಮನೆಯಲ್ಲಿರುವವರು ಕೂಡ ಇವರಿಬ್ಬರ ಬಗ್ಗೆ ಮಾತನಾಡುತ್ತಿದ್ದಾರೆ. ಇದೆಲ್ಲದಕ್ಕೂ ಪುಷ್ಠಿ ನೀಡುವಂತೆ ಈಗ ರೂಪೇಶ್ ಶೆಟ್ಟಿ ಜನ್ಮದಿನಕ್ಕೆ ಸಾನ್ಯ ಅಯ್ಯರ್ ಕಡೆಯಿಂದ ಸ್ಪೆಷಲ್ ಉಡುಗೊರೆ ಸಿಕ್ಕಿದೆ.

    ದರ್ಬಾರಲ್ಲಿ ದಿಲ್ದಾರ್ ಇವನು, ಒಂಚೂರ್ ಕೊಟ್ರೆ ಡಬ್ಬಲ್ ಕೊಡುವನು ಬಿಗ್ ಬಾಸ್ ಮನೆಯಲ್ಲಿ ನಗುಮೊಗದವನು, ಸ್ಮೈಲ್ ಅಲ್ಲೇ ಎಲ್ಲರನ್ನು ಸೋಲಿಸುವವನು, ನಿಜವಾಗಿ ಬದುಕಿದವನು ಮುಖವಾಡ ಕಳಚಿದನಿವನು, ಮಜಾ ಮಾಡಿ ಹೇಳಿದನು ಮೂರ್ ದಿನದ ಬಾಳು ಗುರು ಕೇಳು, ನನ್ನ ಮಾತು ಚೂರು. ಹೀಗೆ ರ‍್ಯಾಪ್‌ನಲ್ಲಿ ರೂಪೇಶ್ ಅವರ ಗುಣಗಾನವನ್ನು ಸಾನ್ಯಾ ಮಾಡಿದರು. ಸಾನ್ಯ ಹೀಗೆ ಹಾಡುತ್ತಿದ್ದರೆ ರೂಪೇಶ್ ಶೆಟ್ಟಿ ಮೊಗದಲ್ಲಿ ಮಂದಹಾಸದ ಚಿಮ್ಮುತಿತ್ತು. ಇದೆಲ್ಲಾ ವಿಚಾರ ಪ್ರೇಕ್ಷಕರ ಗಮನ ಸೆಳೆದಿದೆ. ಇದನ್ನೂ ಓದಿ:ಗೋಲ್ಡನ್ ಲೆಗ್ ಕೃತಿ ಶೆಟ್ಟಿಗೆ ಸೋಲಿನ ಬಗ್ಗೆ ಟೀಕೆ

    ನಮ್ಮಿಬ್ಬರ ನಡುವೆ ಏನಿಲ್ಲ ಎಂದು ಹೇಳುತ್ತಲ್ಲೇ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿರುವ ಜೋಡಿಯ ಸ್ನೇಹ ನೋಡಿ ಫ್ಯಾನ್ಸ್ ಕೂಡ ಇಷ್ಟಪಟ್ಟಿದ್ದಾರೆ. ಒಟ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ರಾಕ್ ಸ್ಟಾರ್ ಹುಟ್ಟುಹಬ್ಬಕ್ಕೆ ಸಾನ್ಯ ಹುಟ್ಟುಹಬ್ಬದ ಮಸ್ತ್ ಸಾಂಗ್ ಕೇಳಿ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೋನು ಶ್ರೀನಿವಾಸ್ ಗೌಡಗೆ ಟ್ರೋಲ್ ಆಗಿ ಫೇಮಸ್ ಆಗುವ ಆಸೆ: ಉದಯ್ ಸೂರ್ಯ

    ಸೋನು ಶ್ರೀನಿವಾಸ್ ಗೌಡಗೆ ಟ್ರೋಲ್ ಆಗಿ ಫೇಮಸ್ ಆಗುವ ಆಸೆ: ಉದಯ್ ಸೂರ್ಯ

    ನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ ಓಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಸಾಮಾಜಿ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ರೀಲ್ಸ್, ಟಿಕ್ ಟಾಕ್‌ನಿಂದ ನೆಟ್ಟಿಗರ ಗಮನ ಸೆಳೆದಿದ್ದ ಸೋನು ಶ್ರೀನಿವಾಸ್ ಗೌಡ ಈಗ ಬಿಗ್ ಬಾಸ್ ಅಂಗಳದಲ್ಲಿ ಸೌಂಡ್ ಮಾಡ್ತಿದ್ದಾರೆ. ದೊಡ್ಮನೆಗೆ ಬಂದ ಮೇಲೆ ಮತ್ತಷ್ಟು ಸೋನು ಚಾಲ್ತಿಯಲ್ಲಿದ್ದಾರೆ.

    ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮುಂಚೆಯೇ ಸೋನು ಶ್ರೀನಿವಾಸ್ ಗೌಡ, ರೀಲ್ಸ್, ಟಿಕ್ ಟಾಕ್ ಮತ್ತು ಸಾಕಷ್ಟು ಟ್ರೋಲ್‌ಗಳಿಂದಲೇ ಸುದ್ದಿಯಾದವರು. ಇನ್ನು ಸೋನು ಕೂಡ ತಮ್ಮ ವೀಡಿಯೋ ಲೀಕ್ ಬಗ್ಗೆ ಮಾತನಾಡಿದ್ದರು. ಈ ಬಗ್ಗೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಈಗ ಸೋನು ಅವರ ಟ್ರೋಲ್ ಮತ್ತು ವೀಡಿಯೋ ಬಗ್ಗೆ  ಮನೆಯ ಸ್ಪರ್ಧಿಗಳು ಇದೀಗ ಚರ್ಚೆ ಮಾಡಿದ್ದಾರೆ. ಇದನ್ನೂ ಓದಿ:ಖ್ಯಾತ ಕೊರಿಯೋಗ್ರಾಫರ್ ಜೊತೆ ಶೆಹನಾಜ್ ಗಿಲ್ ಡೇಟಿಂಗ್

    ಸೋನು ಫೇಮಸ್ ಆಗಿದ್ದೆ ಟ್ರೋಲ್‌ನಿಂದ. ಆಕೆ ನೆಗೆಟಿವ್ ಟ್ರೋಲ್ ಬಗ್ಗೆ ಎಂದೂ ತಲೆಕೆಡಿಸಿಕೊಂಡಿಲ್ಲ. ಟ್ರೋಲ್‌ನಿಂದ ಅವರಿಗೆ ಉಪಯೋಗವೇ ಆಗಿದೆ. ಫೇಮಸ್ ಆದ್ರೆ ಸಾಕು ಎಂಬ ಭಾವನೆ ಅವರಿಗಿದೆ. ಕೆಟ್ಟದ್ದೋ ಒಳ್ಳೇದೋ ಗೊತ್ತಿಲ್ಲ. ನ್ಯೂಸ್‌ನಲ್ಲಿರಬೇಕು ಎಂದು ಅಂದುಕೊಂಡಿದ್ದಾರೆ ಎಂದು ಉದಯ್ ಸೂರ್ಯ ಸೋನು ಅವರ ಬಗ್ಗೆ ಅಭಿಪ್ರಾಯ ಹೇಳಿದ್ದಾರೆ. ಅವರ ಮಾತಿಗೆ ಉಳಿದ ಸ್ಪರ್ಧಿಗಳು ಧ್ವನಿಗೂಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಿಂದ ನಾಪತ್ತೆಯಾದ ಲೋಕೇಶ್

    ಬಿಗ್ ಬಾಸ್ ಮನೆಯಿಂದ ನಾಪತ್ತೆಯಾದ ಲೋಕೇಶ್

    ಪ್ರೇಕ್ಷಕರ ಬಾಯಲ್ಲಿ ಸದ್ಯ ಸೌಂಡ್ ಮಾಡುತ್ತಿರುವ ಶೋ ಅಂದ್ರೆ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ. ಸಾಕಷ್ಟು ವಿಚಾರಗಳಿಂದ ಬಿಗ್ ಬಾಸ್ ಕಾರ್ಯಕ್ರಮ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದೀಗ ಬಿಗ್ ಬಾಸ್ ಮನೆ ಅಂಗಳದ ಬ್ರೇಕಿಂಗ್ ಸುದ್ದಿ ಅಂದ್ರೆ ಸ್ಪರ್ಧಿ ಲೋಕೇಶ್ ಕಾಣೆಯಾಗಿದ್ದಾರೆ.

    ಬಿಗ್ ಬಾಸ್ ಓಟಿಟಿ ಶುರುವಾಗಿ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ. 16 ಜನ ಸ್ಪರ್ಧಿಗಳಿರುವ ಮನೆಯಲ್ಲಿ ಈಗ ಲೋಕೇಶ್ ಕಾಣೆಯಾಗಿದ್ದಾರೆ. ಇಂದಿನ (ಆಗಸ್ಟ್ 12) ಎಪಿಸೋಡ್‌ನಲ್ಲಿ ಲೋಕೇಶ್ ಕಾಣೆಯಾಗಿರುವುದು ಯಾಕೆ ಎಂಬ ಪ್ರಶ್ನೆ ಮೂಡಿದೆ. ನಿನ್ನೆ ಎಪಿಸೋಡ್‌ನಲ್ಲಿ ಲೋಕೇಶ್ ಅವರಿಗೆ ಕಾಲಿಗೆ ಏಟಾಗಿತ್ತು. ಹಾಗೆಯೇ ಕಾಲು ಕೂಡ ಊದಿಕೊಂಡಿತ್ತು. ಈ ಬೆನ್ನಲ್ಲೇ ಲೋಕೇಶ್ ಬಿಗ್ ಬಾಸ್ ಮನೆಯಿಂದ ಸೀದಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಪುನೀತ್ ರಾಜ್‌ಕುಮಾರ್ ಮಾಡಬೇಕಿದ್ದ ಪಾತ್ರಕ್ಕೆ `ಪುಷ್ಪ’ ಸ್ಟಾರ್ ಫೈನಲ್

    ಹಾಗೆಯೇ ಸೋನು ಗೌಡ ಕೂಡ ಲೋಕೇಶ್ ಅವರಿಗೆ ಕಾಲು ಊದಿಕೊಂಡಿರುವುದನ್ನ ಗಮನಿಸಿದ್ದರು. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಹೇಳಿದ್ದರು. ಇಂದಿನ ಎಪಿಸೋಡ್‌ನಲ್ಲಿ ಬೆಳಿಗ್ಗೆಯಿಂದ ಲೋಕೇಶ್ ಅವರು ಬಿಗ್ ಬಾಸ್ ಮನೆಯಿಂದ ಕಾಣೆಯಾಗಿದ್ದಾರೆ.

    ಟಾಸ್ಕ್ ಮಾಡುವಾಗ ತೀವ್ರವಾಗಿ ಏಟಾಗಿರುವ ಹಿನ್ನೆಲೆ ನಟ ಲೋಕೇಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿನ ಲೋಕೇಶ್ ಅನುಪಸ್ಥಿತಿ ನೆಟ್ಟಿಗರ ಗಮನಕ್ಕೂ ಬಂದಿದೆ. ಸೂಕ್ತ ಚಿಕಿತ್ಸೆಗಾಗಿ ಲೋಕೇಶ್ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ. ಒಮ್ಮೆ ಮನೆಯೊಳಗೆ ಹೋದರೆ ಏಲಿಮೀನೇಟ್ ಆಗುವವರೆಗೂ ಬರುವ ಹಾಗಿಲ್ಲ. ಇದೀಗ ಆರೋಗ್ಯದ ದೃಷ್ಟಿಯಿಂದ ಲೋಕೇಶ್ ಹೊರಬಂದಿದ್ದರು ಕೂಡ ಗುಣಮುಖರಾದ ನಂತರ ಮತ್ತೆ ದೊಡ್ಮನೆಗೆ ಎಂಟ್ರಿ ಕೊಡುತ್ತಾರಾ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]