ಬಾತ್ ರೂಮ್ ನಲ್ಲೇ ರೀಲ್ಸ್ ಮಾಡ್ಕೊಂಡು ಸದಾ ನೆಟ್ಟಿಗರ ಮನತಣಿಸುವ, ಮೋಹಕ ಅವತಾರದಲ್ಲಿ ಪಡ್ಡೆ ಹುಡುಗರ ಪಾಲಿನ ಪಾರಿಜಾತವಾಗಿರೋ ನಿವೇದಿತಾ ವೆರೈಟಿ ವೆರೈಟಿ ರೀಲ್ಸ್ ಮೂಲಕ ಗಮನಸೆಳೆದಿದ್ದಾರೆ. ಇದೀಗ ಬಿಗ್ ಬಾಸ್ ಖ್ಯಾತಿಯ ರಜತ್ ಜೊತೆ ರೀಲ್ಸ್ ಮಾಡಿದ್ದಾರೆ. ಅದು ಸಖತ್ ಟ್ರೆಂಡ್ ಆಗ್ತಿದೆ. ರಜನಿಕಾಂತ್ ಅಭಿನಯದ ಕೂಲಿ ಸಿನಿಮಾದ ಮೋನಿಕಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ ನಿವೇದಿತಾ ಗೌಡ.
ನಿವೇದಿತಾ ಗೌಡ ಜೊತೆಗೆ ಮಾಜಿ ಬಿಗ್ ಮಾಸ್ ಸ್ಪರ್ಧಿಗಳಾದ ರಜತ್, ಧನರಾಜ್ ಹಾಗೂ ನಟಿ ಅಖಿಲಾ ಪ್ರಕಾಶ್ ಸಖತ್ ಆಗಿಯೇ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಮಚ್ಚು ಹಿಡಿದು ರೀಲ್ಸ್ ಮಾಡಿ ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಿ ಬಂದಿರುವ ರಜತ್ ಇದೀಗ ನಿವೇದಿತಾ ಗೌಡ ಜೊತೆ ಲವ್ ಯು ಮೋನಿಕಾ ಅಂತಾ ಹೆಜ್ಜೆ ಹಾಕಿದ್ದಾರೆ.
ಕೂಲಿ ಸಿನಿಮಾದಲ್ಲಿ ಮೋನಿಕಾ ಆಗಿ ಸೊಂಟ ಬಳುಕಿಸಿದ್ದಾರೆ ಪೂಜಾ ಹೆಗ್ಡೆ. ಅದೇ ಹಾಡಿಗೆ ನಿವೇದಿತಾ ಗೌಡ ಹಾಗೂ ಸ್ನೇಹಿತರು ಮಸ್ತ್ ಮಸ್ತ್ ಸ್ಟೇಪ್ ಹಾಕಿದ್ದಾರೆ. ಈ ಸ್ಟೆಪ್ ನೋಡಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ಸ್ ಮಾತ್ರ ವೆರೈಟಿ ವೆರೈಟಿ ಆಗಿಯೇ ಬರುತ್ತಿವೆ.
ಡ್ರೋನ್ ಪ್ರತಾಪ್ (Drone Pratap) ಅಭಿಮಾನಿಗಳಿಗೆ ಆಘಾತ ಕಾದಿದೆ. ದೊಡ್ಮನೆಯ ಆಟಕ್ಕೆ ಬ್ರೇಕ್ ಬೀಳಲು ಕೆಲವೇ ಕೆಲವು ದಿನಗಳು ಬಾಕಿಯಿದೆ. ಫಿನಾಲೆ ಘಟ್ಟ ತಲುಪುತ್ತಿದ್ದಂತೆ ಸ್ಪರ್ಧಿಗಳ ಅಸಲಿ ಆಟ ಶುರುವಾಗಿದೆ. ಇದೀಗ ಡ್ರೋನ್ ಪ್ರತಾಪ್‌ಗೆ ಕಳಪೆ ಎಂದು ಜೈಲಿಗೆ ಮನೆಮಂದಿ ಅಟ್ಟಿದ್ದಾರೆ.
ಬಿಗ್ ಮನೆಗೆ (Big Boss Kannada) ಕಾಲಿಟ್ಟ ದಿನದಿಂದ ಕೆಲ ಸ್ಪರ್ಧಿಗಳಿಂದ ಪ್ರತಾಪ್ ಟಾರ್ಗೆಟ್ ಆಗುತ್ತಲೇ ಬಂದಿದ್ದರು. ಅನೇಕರ ಕೆಂಗಣ್ಣಿಗೆ ಪ್ರತಾಪ್ ಗುರುಯಾಗಿದ್ದರು. ಆ ನಂತರ ಪ್ರತಾಪ್ ಪರ ಸುದೀಪ್ ನಿಂತು.. ಡ್ರೋನ್‌ನ ಹೀಯಾಳಿಸಿದವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದರಿಂದ ಪ್ರತಾಪ್‌ಗೆ ಬಲಬಂದAತೆ ಆಗಿತ್ತು. ಬಳಿಕ ಆಟದಲ್ಲಿ ಪ್ರತಾಪ್ ಪಿಕ್ ಅಪ್ ಆದರು.
ಇತ್ತೀಚಿನ ಪ್ರತಾಪ್ ಆಟ ಡಲ್ ಆಗಿದೆ. ಫಿನಾಲೆ ಟಿಕೆಟ್ ವೇಳೆ, ಸಂಗೀತಾ ಮತ್ತು ನಮ್ರತಾಗೆ ಡ್ರೋನ್ ಠಕ್ಕರ್ ಕೊಟ್ಟಿದ್ದು ಬಿಟ್ಟರೆ, ಇದೀಗ ಮತ್ತೆ ಮಂಕಾಗಿದ್ದಾರೆ. ಹಾಗಾಗಿಯೇ ೧೫ ವಾರಗಳ ಆಟ ನೋಡಿ, ಸಂಗೀತಾಗೆ ಉತ್ತಮ ಸಿಕ್ಕಿದೆ. ಪ್ರತಾಪ್‌ಗೆ ವಿನಯ್, ತುಕಾಲಿ, ಕಾರ್ತಿಕ್ ಸೇರಿದಂತೆ ಅನೇಕರು ಕಳಪೆ ಹಣೆಪಟ್ಟಿ ಕೊಟ್ಟಿದ್ದಾರೆ.
ಪ್ರತಾಪ್‌ಗೆ ಕಳಪೆ ಸಿಕ್ಕಿದ್ದಕ್ಕೆ ಸಂಗೀತಾ ಭಾವುಕರಾಗಿದ್ದಾರೆ. ನನ್ನ ಪ್ರಕಾರ ಯಾರು ಇಲ್ಲಿ ಕಳಪೆ ಇಲ್ಲ ಎಂದು ಹೇಳಿದ್ದಾರೆ. ಸಂಗೀತಾ ದೀದಿ ಇಷ್ಟು ವಾರಗಳು ನನ್ನ ಪರವಾಗಿ ನಿಂತಿದ್ದರು. ಅದಕ್ಕೆ ಋಣಿಯಾಗಿದ್ದೀನಿ ಎಂದು ಹೇಳುತ್ತಲೇ ಜೈಲಿಗೆ ಪ್ರತಾಪ್ ಕಾಲಿಟ್ಟಿದ್ದಾರೆ. ಆಗ ಸಂಗೀತಾ, ನನ್ನ ಪಕ್ಕ ಯಾರು ನಿಲ್ತಾರೆ ಅವರೆಲ್ಲರೂ ಜೈಲಿಗೆ ಹೋಗುತ್ತಾರೆ ಎಂದು ಸಂಗೀತಾ.. ಸಹಸ್ಪರ್ಧಿಗಳ ಮೇಲೆ ಬೇಸರ ಹೊರಹಾಕಿದ್ದಾರೆ.
ಬಿಗ್ ಬಾಸ್ (Big Boss Kannada) ಮನೆಯಿಂದ ಕಣ್ಣೀರು ಹಾಕುತ್ತಲೇ ಹೊರ ಬಂದ ನಟಿ ತನಿಷಾ ಕುಪ್ಪಂಡ, ಇದೀಗ ತನ್ನ ಬಗ್ಗೆ ಮೂಡಿ ಬಂದಿರುವ ಬೆಂಕಿ (Benki) ಸಾಂಗ್ ಕೇಳಿ ಸಂಭ್ರಮಿಸುತ್ತಿದ್ದಾರೆ. ಸಾಂಗ್ ನೋಡಿದ ಬಳಿಕ ವಿಡಿಯೋವೊಂದನ್ನು ಮಾಡಿರುವ ಅವರು, ತುಂಬಾ ನೋವಿನಿಂದಲೇ ನಾನು ಬಿಗ್ ಬಾಸ್ ಮನೆಯಿಂದ ಆಚೆ ಬಂದೆ. ಆದರೆ, ನನ್ನ ಬಗ್ಗೆ ಸಾಂಗ್ ಮಾಡಿದ್ದು ಕೇಳಿ ತುಂಬಾನೇ ಖುಷಿ ಆಗುತ್ತಿದೆ. ನನಗೂ ಫ್ಯಾನ್ಸ್ ಇದ್ದಾರೆ ಎಂದು ನೋಡಿ ಸಂತಸವಾಯಿತು ಎಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಆಟವಾಡಿದ್ದರು ತನಿಷಾ. ಅವರ ಆಟಕ್ಕೆ ಬೆರಗಾಗಿ ಅವರನ್ನು ಬೆಂಕಿ ಎಂದು ಕರೆಯಲಾಗುತ್ತಿತ್ತು. ಬೆಂಕಿಯಂತೆ ಪರ್ಫಾಮೆನ್ಸ್ ಕೊಡ್ತಿರುವ ಬೋಲ್ಡ್ ಬ್ಯೂಟಿ ತನಿಷಾ ಕುಪ್ಪಂಡ (Tanisha Kuppanda) ಕನ್ನಡ ಬಿಗ್ ಬಾಸ್ ಸೀಸನ್ 10ರ ಪ್ರಬಲ ಸ್ಪರ್ಧಿಯಾಗಿದ್ದರು. ಸಖತ್ ಫೈಟ್ ಕೊಡ್ತಿರುವ ಪೆಂಟಗನ್ ಸುಂದರಿ ಬಗ್ಗೆ ಹಾಡೊಂದನ್ನು ಮಾಡಿ ರಿಲೀಸ್ ಮಾಡಲಾಗಿತ್ತು.
‘ಬೆಂಕಿ ಬಂತೋ’ ಎಂಬ ಹಾಡಿಗೆ ಶಮಂತ್ ನಾಗಾರಾಜ್ ಕ್ಯಾಚಿ ಮ್ಯಾಚಿ ಪದ ಸೇರಿಸಿ ಸಾಹಿತ್ಯ ಬರೆದಿದ್ದರೆ, ಶಶಾಂಕ್ ಶೇಷಗಿರಿ ಈ ಜಬರ್ದಸ್ತ್ ಗಾನಬಜಾನಕ್ಕೆ ಧ್ವನಿಯಾಗುವುದರ ಜೊತೆಗೆ ಮ್ಯೂಸಿಕ್ ಕಿಕ್ ಕೊಟ್ಟಿದ್ದಾರೆ. ತನಿಷಾ ಕುಪ್ಪಂಡ ಎನರ್ಜಿ, ಸ್ಟೈಲ್, ಮಾತಿಗೆ ನಿಂತ್ರೆ ಎದುರಾಳಿಗೆ ಠಕ್ಕರ್ ಕೊಡುವ ಆಕೆಯ ಗುಣವನ್ನು ವರ್ಣಿಸುವ ಹಾಡು ಇದಾಗಿದೆ. ಈಕೆಯೇ ಬಿಗ್ ಬಾಸ್ ಬೆಂಕಿ ಚೆಂಡು ಎಂಬುದೇ ಹಾಡಿನ ಹೈಲೆಟ್ಸ್ ಆಗಿದೆ.
‘ಮಂಗಳಗೌರಿ’ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದ ತನಿಷಾ ಕುಪ್ಪಂಡ, ಆ ನಂತ್ರ ‘ಪೆಂಟಗನ್’ ಸಿನಿಮಾ ಮೂಲಕ ಬೆಳ್ಳಿಪರದೆಗೂ ಎಂಟ್ರಿ ಕೊಟ್ಟರು. ನಂತರ ಕೋಮಲ್ ಅವರ ‘ಉಂಡೆನಾಮ’ ಚಿತ್ರದಲ್ಲೂ ಕಾಣಿಸಿಕೊಂಡರು ತನಿಷಾ ಇನ್ನು ಅನೇಕ ಹೊಸ ಹೊಸ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ಈ ಬೋಲ್ಡ್ ಬ್ಯೂಟಿ ಇದೀಗ ಬಿಗ್ ಬಾಸ್ ಮನೆಯಿಂದ ಮಿಡ್ ವೀಕ್ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ.
ಬಿಗ್ ಬಾಸ್ (Big Boss Kannada) ಮನೆಯಲ್ಲಿ ಫಿನಾಲೆ ಸಮೀಪಿಸುತ್ತಿದ್ದಂತೆಯೇ ಬಿಗ್‌ಬಾಸ್ ಮನೆಯೊಳಗಿನ ಸಂಬಂಧಗಳ ಬಣ್ಣಗಳೆಲ್ಲ ಮಾಸುತ್ತಿವೆ. ಗೆಲುವಿನ ಗುರಿಯೊಂದೇ ಎಲ್ಲರ ಕಣ್ಣಮುಂದೆ ಹೊಳೆಯುತ್ತಿದೆ. ಹಿಂದಿನ ಎಪಿಸೋಡ್‌ನಲ್ಲಿ ನಮ್ರತಾ ಅವರು ವಿನಯ್ ಅವರನ್ನು ಆಟದಿಂದ ಕೈಬಿಟ್ಟಾಗಲೇ ಇಂಥದೊಂದು ಸೂಚನೆ ಕಾಣಿಸಿಕೊಂಡಿತ್ತು. ಈಗ ಅಂಥದ್ದೇ ಇನ್ನೊಂದು ಘಟನೆ ಬಿಗ್‌ಬಾಸ್ ಮನೆಯೊಳಗೆ ನಡೆದಿದೆ. ಅದರ ಸೂಚನೆ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ.
ಅತಿ ಹೆಚ್ಚು ಅಂಕ ಗಳಿಸಿಕೊಂಡವರಲ್ಲಿ ಸಂಗೀತಾ (Sangeetha) ಮತ್ತು ಪ್ರತಾಪ್ (Drone Pratap) ಮಧ್ಯೆ ಪೈಪೋಟಿ ಇತ್ತು. ನಿನ್ನೆ ಒಂದು ಟಾಸ್ಕ್ ನಲ್ಲಿ ಗೆಲುವು ಕಂಡು ನಮ್ರತಾ ಕೂಡ ರೇಸ್‌ಗೆ ಬಂದಿದ್ದರು. ಮೊದಲ ಕೆಲವು ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಡಿದ ವರ್ತೂರು ಸಂತೋಷ್ ಕೂಡ ಇನ್ನೂರರ ಗಡಿ ದಾಟಿದ್ದಾರೆ. ಈ ಹಂತದಲ್ಲಿ ಪ್ರತಾಪ್ ಅವರಿಗೆ ತಮ್ಮ ಎದುರಾಳಿಗಳನ್ನು ಆಯ್ದುಕೊಳ್ಳುವ ಅಧಿಕಾರವನ್ನು ಬಿಗ್‌ಬಾಸ್ ನೀಡಿದ್ದಾರೆ. ಪ್ರತಾಪ್ ಅವರು ಸಂಗೀತಾ ಅವರನ್ನೂ ಆರಿಸಿಕೊಂಡಿದ್ದಾರೆ. ಆದರೆ ಮೊದಲ ಹಂತದಲ್ಲಿ ಯಾರನ್ನಾದರೂ ಹೊರಗಿಡುವ ಸಂದರ್ಭದಲ್ಲಿ ಸಂಗೀತಾ ಅವರನ್ನೇ ಆಟದಿಂದ ಹೊರಗಿಟ್ಟಿದ್ದಾರೆ.
ಸಂಗೀತಾ ದೀದಿ ಎಂದು ಯಾವಾಗಲೂ ಜೊತೆಗಿರುತ್ತಿದ್ದ ಪ್ರತಾಪ್ ಅವರೇ ಅವರನ್ನು ಹೊರಗಿಟ್ಟಿದ್ದು ಸಂಗೀತಾ ಅವರನ್ನು ದಿಗ್ಭ್ರಮೆಗೊಳಿಸಿದೆ. ‘ಇನ್ನೂ ಅವನನ್ನು ಬೆಂಬಲಿಸುತ್ತ ಬಂದೆನಲ್ಲ, ನಾನೆಂಥ ದಡ್ಡಿ’ ಎಂದು ಅವರು ತಮ್ಮನ್ನು ತಾವೇ ಹಳಿದುಕೊಂಡಿದ್ದಾರೆ. ಪ್ರತಾಪ್ ಹೀಗೆ ಮಾಡಬಾರದಿತ್ತು ಎಂದು ಶಪಿಸಿದ್ದಾರೆ. ಡ್ರೋನ್ ಹೀಗೆ ಮಾಡ್ತಾನೆ ಅಂತ ಕಂಡಿತಾ ಅಂದುಕೊಂಡಿರಲಿಲ್ಲ ಎಂದು ಕೋಪಿಸಿಕೊಂಡಿದ್ದಾರೆ.
ಹೌದು, ಬಿಗ್ ಬಾಸ್ ಮನೆ ಫಿನಾಲೆಗೆ ಸಮೀಪಿಸುತ್ತಿದ್ದಂತೆಯೇ ಸಂಬಂಧಗಳು ಹಳಸ ತೊಡಗಿವೆ. ಗೆಲುವು ಒಂದೇ ಕಣ್ಮುಂದೆ ಕುಣಿಯುತ್ತಿದೆ. ಹಾಗಾಗಿ ಕೇವಲ ಸಂಗೀತ ಮತ್ತು ಡ್ರೋನ್ ಪ್ರತಾಪ್ ಬಾಂಧವ್ಯ ಮಾತ್ರವಲ್ಲ, ಕುಚಿಕು ಗೆಳೆಯರಂತಿದ್ದ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತು ನಡುವೆಯೂ ಬಿರುಕು ಕಾಣಿಸಿಕೊಂಡಿದೆ. ಇಬ್ಬರ ಫ‍್ರೆಂಡ್ ಶಿಪ್ ಕಟ್ ಆಗಿದೆ. ಇದೆಲ್ಲ ಮುಂದಿನ ದಿನಗಳಲ್ಲಿ ಇನ್ನ್ಯಾವ ಹಂತಕ್ಕೆ ಹೋಗುತ್ತೋ ಕಾದು ನೋಡಬೇಕು.
ನಿನ್ನೆ ದಿಢೀರ್ ನೆ ದೊಡ್ಮನೆಯಿಂದ ಡ್ರೋನ್ ಪ್ರತಾಪ್ (Drone Pratap) ಮತ್ತು ಸಂಗೀತಾ ಶೃಂಗೇರಿ (Sangeetha Sringeri) ಹೊರ ಬಂದಿದ್ದಾರೆ. ಟಾಸ್ಕ್ ವೊಂದರಲ್ಲಿ ಅವರ ಮುಖಕ್ಕೆ ಕೆಮಿಕಲ್ ನೀರು ಹಾಕಿದ ಕಾರಣದಿಂದಾಗಿ ಅವರು ಅಸ್ವಸ್ಥಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಕಣ್ಣಿಗೆ ಮತ್ತು ಮೂಗು, ಬಾಯಿಗೆ ನೀರು ಬಿದ್ದ ಪರಿಣಾಮದಿಂದ ಡ್ರೋನ್ ಮತ್ತು ಸಂಗೀತಾ ಒದ್ದಾಡಿದ್ದಾರೆ ಎನ್ನುವ ಮಾಹಿತಿ ಇದೆ. ಅವರೀಗ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳಾನ್ನಾಗಿ ಮಾಡಿ, ಹಲವು ಟಾಸ್ಕ್ ಗಳನ್ನು ನೀಡಲಾಗಿದೆ. ಈ ಟಾಸ್ಕ್ ನಲ್ಲಿ ಡ್ರೋನ್ ಮತ್ತು ಸಂಗೀತಾ ಗಾಯ ಮಾಡಿಕೊಂಡಿದ್ದಾರೆ ಎನ್ನುವುದು ಲೇಟೆಸ್ಟ್ ಅಪ್ ಡೇಟ್. ಈ ವಿಷಯದ ಕುರಿತಂತೆ ವಾಹಿನಿಯಾಗಲಿ ಅಥವಾ ಸಂಬಂಧಿಸಿದವರಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ನ್ಯೂಸ್ ಭರ್ಜರಿ ಸೇಲ್ ಆಗುತ್ತಿದೆ.
ರಾಕ್ಷಸರು ಮತ್ತು ಗಂಧರ್ವರ ಗುಂಪುಗಳ ನಡುವೆ ಭಾರೀ ಕದನವೇ ನಡೆಯುತ್ತಿದೆ. ಹಲವರು ಟಾರ್ಗೆಟ್ ಮಾಡಿಕೊಂಡು ಆಡುತ್ತಿದ್ದಾರೆ. ಅದರಲ್ಲೂ ಸಂಗೀತಾ ಮತ್ತು ವಿನಯ್ ಮಧ್ಯ, ಕಾರ್ತಿಕ್ ಮತ್ತು ವಿನಯ್ ಮಧ್ಯ, ಸಂಗೀತಾ ಮತ್ತು ನಮ್ರತಾ ಮಧ್ಯ ಹೀಗೆ ವೈಯಕ್ತಿಕವಾಗಿ ಆಟಗಳನ್ನು ಆಡುತ್ತಿದ್ದಾರೆ. ಒಬ್ಬರಿಗೊಬ್ಬರನ್ನು ಕೆಣಕುತ್ತಿದ್ದಾರೆ. ಇದು ಎಲ್ಲೋ ಒಂದು ಕಡೆ ಅನಾಹುತ ಮಾಡಲಿದೆ ಎಂದೇ ಅಂದಾಜಿಸಲಾಗಿತ್ತು. ಬಹುಶಃ ಅದೇ ಆಗಿರಬಹುದು.
ಕೆಮಿಕಲ್ ನೀರಿನ ಪರಿಣಾಮದಿಂದಾಗಿ ಸದ್ಯಕ್ಕೆ ಡ್ರೋನ್ ಮತ್ತು ಸಂಗೀತಾರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ತನಿಷಾರನ್ನು ಹೀಗೆಯೇ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆನಂತರ ಬಿಗ್ ಬಾಸ್ (Bigg Boss Kannada) ಮನೆಗೆ ಕರೆತರಲಾಗಿತ್ತು. ಈ ಇಬ್ಬರನ್ನೂ ಹಾಗೆಯೇ ಮಾಡುವ ಸಾಧ್ಯತೆ ಇದೆ.
ಕಿಚ್ಚನ (Sudeep) ಮನೆ ಮುಂದೆ ವ್ಯಕ್ತಿಯೊಬ್ಬನು ಅತಿರೇಕದ ವರ್ತನೆ ಮಾಡಿದ್ದಾನೆ. ಈ ವರ್ತನೆ ಕಂಡು ಮನೆಯ ಸೆಕ್ಯೂರಿಟಿ ದಂಗಾಗಿದ್ದಾರೆ. ಬಿಗ್ ಬಾಸ್ (Big Boss Kannada) ಮನೆಗೆ ಚಾನ್ಸ್ ಕೇಳೋಕೆ ಅಂತ ಎತ್ತಿನ ಗಾಡಿಯಲ್ಲಿ ಸುದೀಪ್ ಮನೆಗೆ ಬಂದಿದ್ದ ವ್ಯಕ್ತಿ. ಬಿಗ್ ಬಾಸ್ ಮನೆಗೆ ಹೋಗೋಕೆ ಅವಕಾಶ ಮಾಡಿ ಕೊಡಿ ಅಂತ ಹೈ ಡ್ರಾಮಾ ಶುರುಮಾಡಿದ್ದಾನೆ.
ಮಂಜು (Manju) ಹೆಸರಿನ ವ್ಯಕ್ತಿಯು ನಿನ್ನೆ ಸಂಜೆ ಸುಮಾರು 6 ಗಂಟೆಯಿಂದ 10ಗಂಟೆವರೆಗೂ ಸುದೀಪ್ ಮನೆ ಮುಂದೆ ಕಾದು ನಿಂತಿದ್ದ. ತಾನು ಟಿ ನರಸಿಪುರದಿಂದ ಬಂದಿರುವುದಾಗಿ ತಿಳಿಸಿದ್ದಾನೆ. ನಾವು ಅನಕ್ಷರಸ್ಥರು. ರೈತರು ಬಿಗ್ ಬಾಸ್ ಹೋಗಲು ಅವಕಾಶ ಕೊಡಿ ಅಂತ ಎತ್ತಿನ ಗಾಡಿ ತಂದು ಸುದೀಪ್ ಮನೆ ಮುಂದೆ ನಿಲ್ಲಿಸಿದ್ದ. ನಂತರ ಸುದೀಪ್ ಮನೇಲಿಲ್ಲ. ಚೆನ್ನೈ ಹೋಗಿದ್ದಾರೆ ಅಂತ ಹೇಳಿ ಸೆಕ್ಯುರಿಟಿ ಮನವಿ ಮಾಡಿ ಕಳಿಸಿದ್ದಾರೆ.
ಎತ್ತಿನ ಗಾಡಿಗೆ ಬ್ಯಾನರ್ ಕಟ್ಕೊಂಡ್ ಬಂದು, ಜೆಪಿ ನಗರದ ಸುದೀಪ್ ಮನೆ ಮುಂದೆ ಗಾಡಿ ನಿಲ್ಲಿಸಿದ್ದ. ನಂತರ ಬುದ್ದಿ ಹೇಳಿ ಆತನನ್ನ ಕಳಿಸಲಾಗಿದೆ. ಮಂಜು ಅಂತ ಹೆಸರನ್ನು ಬ್ಯಾನರ್ ನಲ್ಲಿ ಬರೆಯಲಾಗಿತ್ತು. ಕೆಲ ಸಮಯದ ನಂತರ ಅವರನ್ನು ಸಮಾಧಾನಿಸಿ ಕಳುಹಿಸಲಾಗಿದೆ ಎಂದಿದ್ದಾರೆ ಸುದೀಪ್ ಆಪ್ತರು.
ಭಾಗ್ಯಶ್ರೀ (Bhagyashree) ಅವರ ಬಿಗ್‌ಬಾಸ್ (Big Boss Kannada) ಪ್ರಯಾಣ ಈ ವಾರ ಕೊನೆಗೊಂಡಿದೆ. ಕೆಲವೊಮ್ಮೆ ಪರಿಶ್ರಮದಿಂದ, ಇನ್ನು ಕೆಲವೊಮ್ಮೆ ಅದೃಷ್ಟದ ಬಲದಿಂದ ಮಿಂಚುತ್ತ ಉಳಿದುಕೊಂಡಿದ್ದ ಭಾಗ್ಯಶ್ರೀ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಇಷ್ಟು ವಾರಗಳ ಕಾಲ ಅವರ ಬದುಕು ಹೇಗಿತ್ತು, ಮನೆಯಿಂದ ಹೊರಗೆ ಬರಲು ಕಾರಣವಾದ ಸಂಗತಿಗಳು ಯಾವವು, ಅವರ ಪ್ರಕಾರ ಮನೆಯೊಳಗೆ ಯಾರು ಫೇಕ್, ಯಾರು ಜೆನ್ಯೂನ್? ಈ ಎಲ್ಲದರ ಕುರಿತು ಭಾಗ್ಯಶ್ರೀ, ಬಿಗ್‌ಬಾಸ್ ಮನೆಯಿಂದ ಹೊರಬಂದು ಮರುಕ್ಷಣವೇ JioCinemaಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದಾರೆ.
ಈ ವಾರ ಹೊರಗೆ ಬರ್ತೀನಿ ಅಂತ ನಿಮಗೆ ಅನಿಸಿತ್ತಾ?
ಬಿಗ್‌ಬಾಸ್ ಮನೆಯಿಂದ ಈಗ ಜಸ್ಟ್ ಹೊರಗೆ ಬಂದಿದೀನಿ. ಇದು ಕೊನೆ ಅಂತ ಖಂಡಿತವಾಗಲೂ ಹೇಳೋದಿಲ್ಲ. ಅಲ್ಲಿ ತೆಗೆದುಕೊಂಡಿರುವ ಅನುಭವಗಳು ನನ್ನ ಜೀವನದಲ್ಲಿ ಹೊಸ ಪ್ರಾರಂಭ ಅಂತಲೇ ಹೇಳ್ತೀನಿ. ಈವತ್ತು ಮನೆಯಿಂದ ಹೊರಗಡೆ ಬರ್ತೀನಿ ಅಂತ ನಿರೀಕ್ಷೆ ಮಾಡಿದ್ದೆ. ಎಲ್ರೂ ನನ್ನ ನೋಡ್ತಿದ್ದ ರೀತಿ ಹೇಗಿತ್ತು ಅಂದ್ರೆ, ‘ಇವ್ರು ಟಾಸ್ಕ್‌ನಲ್ಲಿ ತುಂಬ ಹಿಂದೆ ಉಳಿಯುತ್ತಾರೆ’ ಎಂದೇ ನೋಡುತ್ತಿದ್ದರು. ಗ್ರೂಪ್‌ಗೆ ನನ್ನ ತೆಗೆದುಕೊಳ್ಳಬೇಕಾದರೆ, ನಾನು ಕೈಯೆತ್ತಿದರು ನನ್ನ ಸೆಲೆಕ್ಟ್ ಮಾಡ್ತಿರ್ಲಿಲ್ಲ. ಯಾಕೆಂದರೆ ಅವರಿಗೆ ಯಾರಿಗೂ ನಾನು ಟಾಸ್ಕ್ ಮಾಡಬಲ್ಲೆ ಎಂಬ ನಂಬಿಕೆಯೂ ಇರ್ತಿರ್ಲಿಲ್ಲ. ಸಿಕ್ಕಿದ ಅವಕಾಶಗಳಲ್ಲಿ ನಾನು ಖಂಡಿತವಾಗಲೂ ನನ್ನ ಎಫರ್ಟ್ ನೂರಕ್ಕೆ ನೂರು ಹಾಕಿದೀನಿ.
ಗುಂಪು ಅಂತ ಬಂದಾಗ, ಯಾರ ಗುಂಪಿನಲ್ಲಿಯೂ ಪರ್ಟಿಕ್ಯೂಲರ್ ಆಗಿ ಸೇರಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ನಾನು ಸೀರೆ ಉಟ್ಕೊಂಡು ಆರಾಮಾಗಿ ದೇವರ ಪೂಜೆ ಮಾಡ್ಕೊಂಡು ಹಾಡು ಹಾಡ್ಕೊಂಡು ಇರ್ತೀನಿ ಅನ್ನೊ ಕಾರಣಕ್ಕೋ ಏನೋ ಗೊತ್ತಿಲ್ಲ. ಅಮ್ಮ ಅಂತ ಕರ್ಕೊಂಡು, ಬೇರೆ ಥರ ಮಾತುಕತೆಗೆ ಅಲ್ಲ ಎಂದು ಅವರೇ ಅವಾಯ್ಡ್ ಮಾಡ್ತಿದ್ರು. ನಾನು ಅವರ ಜೊತೆಗೆ ಸೇರಲು ಯತ್ನಿಸಿದಾಗಲೆಲ್ಲ, ‘ಇವ್ರು ಫೇಕಾ? ಸುಮ್ನೆ ನಮ್ ಜೊತೆ ಮಿಂಗಲ್ ಆಗೋಕೆ ಟ್ರೈ ಮಾಡ್ತಿದ್ದಾರಾ ಅಂತೆಲ್ಲ ಮಾತು ಬರ್ತಿತ್ತು.
ಫೇಕ್ ಅಂತ ಅನಿಸಕೊಂಡು ಫ್ರೆಂಡ್‌ಷಿಪ್ ಮಾಡುವ ಬದಲು, ಆಟವಾಡುವಾಗ ಎಲ್ಲರ ಜೊತೆ ಇದ್ದು, ಉಳಿದ ಟೈಮಲ್ಲಿ ನನ್ನ ಪಾಡಿಗೆ ನಾನು ಇದ್ರಾಯ್ತಲ್ವಾ ಅಂದ್ಕೊಳ್ತಿದ್ದೆ. ಆದರೆ ಗುಂಪಲ್ಲೇ ಇದ್ದು ಆಡಬೇಕು. ಆಗ ಇನ್ನೊಂದಿಷ್ಟು ವಾರ ಇರ್ತಿದ್ದೆ ಅನ್ನೋದು ಖಂಡಿತ ಸುಳ್ಳು. ಆ ಥರ ನನಗೆ ಯಾವಾಗಲೂ ಅನಿಸಿಲ್ಲ.
ಇಲ್ಲಿ ಕೆಲವರು ಇವರು ಫೇಕ್ ಇದ್ದಾರೆ, ಇವರ ಎಮೋಷನ್ಸ್ ಫೇಕ್ ಅಂತ ಹೇಳ್ದಾಗ, ಸಿರಿಯವರು ನನ್ನನ್ನು ತುಂಬ ವರ್ಷಗಳಿಂದ ಹತ್ತಿರದಿಂದ ನೋಡಿದ್ದಾರೆ. ಹಾಗಾಗಿ ಅವರ ಬಳಿ ಹೋಗಿ ಶೇರ್ ಮಾಡ್ತಿದ್ದೆ. ಅವರು ನನಗೆ ಸಮಾಧಾನ ಮಾಡ್ತಿದ್ರು. ನಾನು ಅವರ ಬಳಿ ಆಯುಷ್ ಬಗ್ಗೆ ಮಾತಾಡ್ತಿದ್ದೆ ರಾತ್ರಿ ಹೊತ್ತಲ್ಲಿ. ಅವರು ನನಗೆ ಸಮಾಧಾನ ಮಾಡ್ತಿದ್ರು. ನನಗೆ ನನ್ನ ಮಗನ ತಬ್ಬಿಕೊಂಡು ಮಲಗೋದು ಮಿಸ್ ಮಾಡ್ಕೊಳ್ಳೋವಾಗ ಅವರನ್ನೇ ತಬ್ಬಿಕೊಂಡು ಮಲಗ್ತಿದ್ದೆ.
ಮಗನ ಲೆಟರ್ ನಿರೀಕ್ಷೆ ಇತ್ತಾ?
ದೀಪವಾಳಿ ಹಬ್ಬಕ್ಕೆ ಸರ್ಪೈಸ್ ಲೆಟರ್ ಬರತ್ತೆ ಅಂತ ಹೇಳಿದ್ರು. ಅದು ನನ್ನ ಮಗನ ಲೆಟರೇ ಇರತ್ತೆ ಅಂತ ಗೊತ್ತಿತ್ತು. ಮೊದಲ ಟಾಸ್ಕ್‌ನಲ್ಲಿ ನನಗೆ ಲೆಟರ್ ಬರಲ್ಲ ಅಂತ ಗೊತ್ತಾದಾಗ ನಾನು ತುಂಬ ಡಲ್ ಆಗಿಬಿಟ್ಟೆ. ಮರುದಿನ ನಾನು ಫುಲ್ ಸೈಲೆಂಟ್ ಆಗಿದ್ದಿದ್ದಂತೂ ನಿಜ.
ಆದರೆ ಬಿಗ್‌ಬಾಸ್ ಮನೆಯಲ್ಲಿ ಡಲ್ ಆಗಿ ಕೂತಿರೋದನ್ನೇ ಅಡ್ವಾಂಟೇಜ್ ತಗೋತಾರೆ. ಇವರು ಡಲ್ ಆಗಿದ್ದಾರೆ, ನಾಮಿನೇಟ್ ಮಾಡೋಣ, ಕಳಪೆ ಕೊಡೋಣ ಅಂತ ಶುರುಮಾಡ್ತಾರೆ. ಆಗ ನಾನು ನೋವಿದ್ರೂ ಕೂಡ ಅದರಿಂದ ಹೊರಗೆ ಬರಲು ಟ್ರೈ ಮಾಡ್ತಿದ್ದೆ. ಆ ಥರ ಹೋಗಿ ಟ್ರೈ ಮಾಡಿದ್ದಕ್ಕೇ ಸ್ನೇಹಿತ್ ಡೇಟ್ ವಿಚಾರಕ್ಕೆ ಅಲ್ಲೊಂದು ಕ್ಲಾಶ್ ಆಯ್ತು. ನಾನೇನೋ ಆ ಲೆಟರ್ ಸಿಗಲಿಲ್ಲ ಎನ್ನುವ ನೋವನ್ನು ಮರೆಯೋದಕ್ಕೆ ಅಲ್ಲಿ ಹೋಗಿ ಮಾತಾಡಿದ್ದಕ್ಕೆ, ‘ನೀವೇನು ಇನ್ನೊಬ್ಬರ ಲೈಫನ್ನು ನೋಡಿ ಮಜಾ ತಗೊಳ್ತಿದ್ದೀರಾ ಅಂತ ಮಾತು ಬಂತು. ಅದರಿಂದ ಮತ್ತೆ ಹರ್ಟ್ ಆದೆ. ನನ್ನ ಪರ್ಸನಲ್ ಲೈಪ್‌ನಲ್ಲಿ ನಾನು ಆದಷ್ಟೂ ನೆಗೆಟೀವ್ ಜನರು, ಫೇಕ್ ಜನರು, ಫೇಕ್ ಮಾತುಗಳಿಂದ ದೂರ ಇರ್ತಿದ್ದೆ. ಅದು ಬಿಗ್‌ಬಾಸ್ ಮನೆಯಲ್ಲಿ ತುಂಬ ತೊಂದರೆಯಾಯ್ತು.
ಸುದೀಪ್ ಸರ್, ಥ್ಯಾಂಕ್ಯೂ ಸೋ ಮಚ್. ಎಲಿಮಿನೇಟ್ ಆದೆ ಅಂತ ಹೇಳಿದಾಗ ಎಲ್ಲೋ ಬೇಜಾರಾಗಿತ್ತು. ಆದರೆ ನೀವು ಲೆಟರ್ ಕೊಟ್ಟು, ಬಿಗ್ಬಾಸ್ ಲೀವಿಂಗ್ ಏರಿಯಾನಲ್ಲಿ ಓದಿಸಿದಿರಲ್ಲಾ ಸರ್. ಎಷ್ಟು ಸಂತೋಷ ಆಗೋಯ್ತು ಅಂದ್ರೆ. ಎಲಿಮಿನೇಷನ್ ಅನ್ನೋದನ್ನು ಕೂಡ ಮರ್ತೇ ಹೋಗ್ಬಿಡ್ತು. ಪ್ರತಿಯೊಬ್ಬರ ಭಾವನೆ ಅರ್ಥ ಮಾಡಿಕೊಂಡು ವೀಕೆಂಡ್ ಎಪಿಸೋಡ್‌ಗಳಲ್ಲಿ ಸ್ಪಂದಿಸ್ತೀರಲ್ಲಾ… ಯು ಆರ್ ದಿ ರಿಯಲ್ ಸ್ಟ್ರೆಂಥ್. ಎಲ್ಲ ಸ್ಪರ್ಧಿಗಳಿಗೂ!
ಫೇಕ್ ಯಾರು ಅನಿಸತ್ತೆ?
ಮನೆಯಲ್ಲಿ ನನ್ನ ಪ್ರಕಾರ ನಾನು ಜೆನ್ಯೂನ್ಆಗಿದ್ದೆ. ನನ್ನ ಬಿಟ್ಟರೆ ಇಶಾನಿ. ಅವರು ಎಷ್ಟೋ ಸಲ ಕೈ ಎತ್ತಿ, ಟಾಸ್ಕ್ ಮಾಡ್ತೀನಿ ಅಂತ ಹೇಳಿದಾಗಲೂ ಅವರನ್ನು ಯಾರೂ ಕನ್ಸೀಡರೇ ಮಾಡ್ತಿರ್ಲಿಲ್ಲ. ನಾನಾದ್ರೂ ಧೈರ್ಯ ಮಾಡಿ ಹೇಳುತ್ತಿದ್ದೆ. ಆದರೆ ಅವರು ಗಟ್ಟಿಯಾಗಿ ಹೇಳ್ತಾನೂ ಇರ್ಲಿಲ್ಲ. ಗಟ್ಟಿ ಯಾಗಿ ಹೇಳಿದಾಗಲೂ ಕೂಡ ಅವಳ ಮಾತುಕೇಳುತ್ತಿರಲಿಲ್ಲ.
ಮನೆಯೊಳಗೆ ಫೇಕ್ ಅಂತ ಒಬ್ರಿದ್ದಾರೆ ಅನ್ಸಲ್ಲ. ಕೆಲವು ಸಲ ನನಗೆ ಕಾರ್ತಿಕ್ ನೋಡಿದಾಗ ಫೇಕ್ ಅನಿಸುತ್ತದೆ. ಕೆಲವು ಸಲ ವಿನಯ್ ಫೇಕ್ ಅನಿಸುತ್ತದೆ. ಒಮ್ಮೆ ನನ್ನ ಕಡೆ ಬಂದು, ‘ಏನಾದ್ರೂ ಹೆಲ್ಪ್ ಕೇಳಿ. ನಾನಿರ್ತಿನಿ ಅಂತಿದ್ರು. ಆದರೆ ನಿಜವಾಗಲೂ ಹೆಲ್ಪ್ ಮಾಡುವ ಸಮಯದಲ್ಲಿ ನನಗೆ ಹೆಲ್ಪ್ ಮಾಡಲೇ ಇಲ್ಲ ಅವು. ಟಾಪ್ ಫೈವ್‌ನಲ್ಲಿ ಮೈಕಲ್, ಕಾರ್ತಿಕ್, ವಿನಯ್,ತುಕಾಲಿ ಸಂತೋಷ್, ಪ್ರತಾಪ್ ಇರ್ತಾರೆ ಅನ್ಸತ್ತೆ. ಕಾರ್ತಿಕ್‌ಗೆ ಎಲ್ಲ ಅರ್ಹತೆ ಇವೆ. ಅವರು ಓವರ್ ಸ್ಮಾರ್ಟ್‌ನೆಸ್ ತೋರಿಸುವುದು ಕಡಿಮೆ ಮಾಡಿದರೆ ವಿನ್ ಆಗಬಹುದು. ಮುಂದಿನವಾರ ಎಲಿಮಿನೇಟ್ ಆಗಿರುವವರ ಜಾಗದಲ್ಲಿ ನನ್ನ ಪ್ರಕಾರ ನೀತು ಇರುತ್ತಾರೆ.
ಬಿಗ್‌ಬಾಸ್ ಮನೆಯೊಳಗೆ JioCinemaದ ಫನ್ ಫ್ರೈಡೇ ಟಾಸ್ಕ್‌ನಲ್ಲಿ ‘ಕಥಾಸಂಗಮ’ ಟಾಸ್ಕ್‌ನಲ್ಲಿ ನಾನು ಗೆದ್ದಿದ್ದು ಮರೆಯಲಾಗದ ನೆನಪು. ನನಗೆ ಮಾತಾಡಲು ಎರಡು ನಿಮಿಷ ಟೈಮ್ ಇತ್ತು. ಅಲ್ಲಿ ಒಂದು ಅದ್ಭುತ ಕಥೆ ಮಾಡಿದೀನಿ ಅಂತ ಖುಷಿ ಇದೆ. ಜಿಯೊ ಸಿನಿಮಾ ಫನ್ ಫ್ರೈಡೆಯಲ್ಲಿ ಒಗಟು ಬಿಡಿಸಿದ್ದೂ ಒಂದು ಅದ್ಭುತ ನೆನಪು. ‘ಅಟ್ಟದ ಮೇಲೆ ಪುಟ್ಟಲಕ್ಷ್ಮೀ’ ಅಂದ ತಕ್ಷಣ ಬೊಟ್ಟು ಎಂದು ನೆನಪಾಯ್ತು. ಮನೆಯೊಳಗಿನ ಬೊಟ್ಟು ತರಲು ಓಡಿದೆ. ಮಧ್ಯದಲ್ಲಿಯೇ ಏನೋ ನೆನಪಾಯ್ತು. ನನ್ನ ಹಣೆಯಲ್ಲಿನ ಬೊಟ್ಟನ್ನೇ ತೆಗೆದು ಇಟ್ಟುಬಿಟ್ಟೆ. ಎಲ್ಲರೂ ಅಚ್ಚರಿಪಟ್ಟರು. ಅದೂ ಖುಷಿಕೊಟ್ಟಿತು.
ಬಿಗ್‌ಬಾಸ್ ಅಂದ್ರೆ ಬಿಗ್‌ಬಾಸ್ ಅಷ್ಟೆ. ಅಲ್ಲಿನ ಎಲ್ಲವನ್ನೂ ಮಿಸ್ ಮಾಡಿಕೊಳ್ತೀನಿ. ಬೆಳಗಿನ ಸಾಂಗ್, ಪ್ರತಿಕ್ಷಣ ಧರಿಸಿರುತ್ತಿದ್ದ ಮೈಕ್ ಮಿಸ್ ಮಾಡ್ಕೊತೀನಿ. ಬಿಗ್‌ಬಾಸ್ ಧ್ವನಿಯನ್ನಂತೂ ತುಂಬ ಮಿಸ್ ಮಾಡ್ಕೋತೀನಿ
ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಷಾ ಮೇಲಿನ ಪ್ರಕರಣದ ತನಿಖೆಯನ್ನು ಮಾಗಡಿ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಪ್ರಕರಣದ ಕುರಿತಂತೆ ರಾಮನಗರ ಎಸ್ಪಿ ಮಾತನಾಡಿ, ‘ತನಿಷಾ ಅವರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವನ್ನು ಎಫ್.ಎಸ್.ಎಲ್ (FSL)ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಮಾಗಡಿ ಡಿವೈಎಸ್‍್ಪಿ ಪ್ರವೀಣ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ವರದಿಗಾಗಿ ಕಾಯುತ್ತಿದ್ದಾರೆ.
ಈ ನಡುವೆ ತನಿಷಾ ಕುಪ್ಪಂಡ (Tanisha Kuppanda) ವಿರುದ್ಧ ಮತ್ತೊಂದು ದೂರು (Complaint) ದಾಖಲಾಗಿದೆ. ಸದ್ಯ ಬಿಗ್ ಬಾಸ್ (Big Boss Kannada) ಮನೆಯಲ್ಲಿರುವ ನಟಿ ಮೇಲೆ ಜಾತಿ ನಿಂದನೆ ವಿಚಾರವಾಗಿ ಎಸ್‌ಸಿಎಸ್ಟಿ ಕಾಯ್ದೆಯಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದಾರೆ. ಈ ಹಿಂದೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಟಿ ತನಿಷಾ ಕುಪ್ಪಂಡ ವಿರುದ್ಧ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಎಂಬುವರಿಂದ ನವೆಂಬರ್ 11ರಂದು ದೂರು ದಾಖಲಾಗಿದ್ದು, ನವೆಂಬರ್ 12 ದೂರಿನ ಆಧಾರದ ಮೇಲೆ ಕುಂಬಳಗೋಡು ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿ ಪದ ಬಳಕೆ ಬಗ್ಗೆ ತನಿಷಾ ವಿರುದ್ಧ ಆರೋಪ ಎದುರಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಕುಂಬಳಗೋಡು ಪೊಲೀಸರು (Police) ಬಿಗ್ ಬಾಸ್ ಮನೆಗೆ ತೆರಳಿ, ನಟಿಯ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.
ದೀಪಾವಳಿ ಹಬ್ಬದ ಖುಷಿಗಾಗಿ ಬಿಗ್‌ಬಾಸ್ (Big Boss Kannada) ಸ್ಪರ್ಧಿಗಳಿಗೆ ಮನೆಯಡುಗೆ ಕೊಟ್ಟು ಕಳಿಸಿದ್ದರು. ಇದೀಗ ಮನೆಯವರಿಂದ ಬಂದ ಪತ್ರಗಳನ್ನೂ ಕೊಡುತ್ತಿದ್ದಾರೆ. ಆದರೆ ಮನೆಯಡುಗೆ ತಿಂದಷ್ಟು ಸುಲಭವಾಗಿ ಪತ್ರಗಳು ಸ್ಪರ್ಧಿಗಳ ಕೈಗೆ ಸಿಗುತ್ತಿಲ್ಲ. ಒಂದೊಂದು ಪತ್ರಕ್ಕೂ (Letter) ಒಂದಿಷ್ಟು ಟಾಸ್ಕ್‌ಗಳನ್ನು ಕೊಟ್ಟು ಅದರಲ್ಲಿ ಗೆದ್ದವರಿಗೆ ಮಾತ್ರವೇ ಪತ್ರ ಕೊಡುವುದಾಗಿ ಹೇಳಿದ್ದಾರೆ.
ಈಗಾಗಲೇ ವಿನಯ್ ಗೌಡ ಮತ್ತು ನಮ್ರತಾ ಮನೆಯಿಂದ ಬಂದ ಪತ್ರಗಳನ್ನು ಪಡದುಕೊಳ್ಳಲು ಯಶಸ್ವಿಯಾಗಿದ್ದಾರೆ. ಕೆಲವು ಸದಸ್ಯರು ಪತ್ರಗಳನ್ನು ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಇನ್ನುಳಿದ ಸದಸ್ಯರ ಅದೃಷ್ಟಪರೀಕ್ಷೆ ಇನ್ನಷ್ಟೇ ನಡೆಯಬೇಕಿದೆ.
ಇಂದು ಬಿಗ್‌ಬಾಸ್ ಮನೆಯಲ್ಲಿ ಇನ್ನಷ್ಟು ಜನರಿಗೆ ಪತ್ರ ಪಡೆದುಕೊಳ್ಳಲು ಟಾಸ್ಕ್ (Task) ನೀಡಿದ್ದಾರೆ. ಟಾಸ್ಕ್ ಏನೋ ತುಂಬ ಸಿಂಪಲ್ ಆಗಿ ಕಾಣಿಸುತ್ತಿದೆ. ಕನ್‌ಫೆಷನ್ ರೂಮಲ್ಲಿ ಕೂತ ಇಬ್ಬರು, ಬಿಗ್‌ಬಾಸ್ ಮನೆಯ ಕುರಿತಾಗಿಯೇ ಕೇಳುವ ಸರಳವಾದ ಪ್ರಶ್ನೆಗಳಿಗೆ ಉತ್ತರಿಸಬೇಕು. ಆ ಪ್ರಶ್ನೆಗಳು ಎಷ್ಟು ಸರಳವಾಗಿವೆಯೆಂದರೆ, ಪ್ರತಿದಿನವೂ ಅದನ್ನು ನೋಡುತ್ತ, ಬಳಸುತ್ತಲೇ ಇದ್ದರೂ ಅದು ಸ್ಪರ್ಧಿಗಳ ಗಮನಕ್ಕೆ ಬಂದಿಲ್ಲ. ಹಾಗಾಗಿಯೇ ಉತ್ತರ ಕೊಡುವುದೂ ಕಷ್ಟವಾಗಿದೆ.
ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಯಾರು ಗೆಲ್ಲುತ್ತಾರೆ? ಯಾರ ಮನೆಯಿಂದ ಬಂದ ಪತ್ರ ಸ್ಪರ್ಧಿಗಳ ಕೈಸೇರುತ್ತದೆ? ಯಾರು ನಿರಾಸೆಯಲ್ಲಿ ಮುಳುಗಬೇಕಾಗುತ್ತದೆ? ವೀಕ್ಷಿಸಲು JioCinemaದಲ್ಲಿ ಬಿಗ್‌ಬಾಸ್ ಕನ್ನಡ ವೀಕ್ಷಿಸುತ್ತಿರಿ.
ಕನ್ನಡದ ಸಿನಿಮಾ ಮತ್ತು ಕಿರುತೆರೆ ನಟಿ ತನಿಷಾ ಕುಪ್ಪಂಡಗೆ (Tanisha Kuppunda) ಟೈಮ್ಸ್ ಸ್ಕ್ವೇರ್ (Times Square) ಮೂಲಕ ಶುಭಾಶಯ ಹೇಳಲಾಗಿದೆ. ಬಿಗ್ ಬಾಸ್ (Bigg Boss Kannada) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರಿಗೆ ಈ ಮೂಲಕ ಹಾರೈಸಲಾಗಿದೆ. ಇದು ತನಿಷಾಗೆ ಗೊತ್ತಿಲ್ಲದೇ ಇದ್ದರೂ, ಅವರನ್ನು ಪ್ರೀತಿಸುವ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
‘ಆಲ್ ದಿ ಬೆಸ್ಟ್ ತನಿಷಾ ಕುಪ್ಪಂಡ. ವಿ ಆರ್ ವಿತ್ ಯು’ ಎಂದು ಟೈಮ್ಸ್ ಸ್ಕ್ವೇರ್ ಬೋರ್ಡ್ ನಲ್ಲಿ ಬರೆಯಿಸಲಾಗಿದ್ದು, ಈ ಮೂಲಕ ಬಿಗ್ ಬಾಸ್ ಮನೆಯಿಂದ ಗೆದ್ದು ಬನ್ನಿ ಎಂದು ಹಾರೈಸಲಾಗಿದೆ. ಈ ಹಿಂದೆ ಸಾಕಷ್ಟು ನಟ ನಟಿಯರ ಹಾಗೂ ಸಿನಿಮಾಗಳ ಪ್ರಚಾರವನ್ನು ಈ ಬೋರ್ಡ್ ಮೇಲೆ ಮಾಡಿದ್ದರೂ, ಇದೇ ಮೊದಲ ಬಾರಿಗೆ ಬಿಗ್ ಬಾಸ್ ಸ್ಪರ್ಧಿಗೆ ಅಂಥದ್ದೊಂದು ಅವಕಾಶ ಸಿಕ್ಕಿದೆ.
ಟೈಮ್ಸ್ ಸ್ಕ್ವೇರ್ ಜಗತ್ತಿನ ಅತ್ಯಂತ ಜನಪ್ರಿಯ ಸ್ಥಳ. ಅಂದಾಜಿನ ಪ್ರಕಾರ 39.20 ದಶಲಕ್ಷ ಜನರು ಈ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಭೋಜನ ಪ್ರಿಯರಿಗೆ ಅತ್ಯಂತ ಹೇಳಿ ಮಾಡಿಸಿದ ತಾಣವೂ ಇದಾಗಿದೆ. ನ್ಯೂಯಾರ್ಕ್ ನ ಈ ಟೈಮ್ಸ್ ಸ್ಕ್ವೇರ್ ಕುರಿತಾಗಿ ಸಾಕಷ್ಟು ಪುಸ್ತಕಗಳು ಮತ್ತು ಕಾದಂಬರಿಗಳು ಬಂದಿರುವುದು ಈ ಜಾಗದ ಮತ್ತೊಂದು ವಿಶೇಷ.
ನ್ಯೂಯಾರ್ಕ್‌ನ ಮ್ಯಾನ್ ಹ್ಯಾಟನ್ ನಗರದ ಕೇಂದ್ರ ದ್ವೀಪ. ಇಲ್ಲಿನ 42ನೇ ಸ್ಟ್ರೀಟ್ ನ ಸುತ್ತಮುತ್ತಲಿನ ಪ್ರದೇಶವನ್ನು ಟೈಮ್ಸ್ ಸ್ಕ್ವೇರ್ ಎಂದು ಕರೆಯಲಾಗುತ್ತಿದೆ. ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ಈ ಟೈಮ್ಸ್ ಸ್ಕ್ವೇರ್ ಪ್ರದೇಶದಲ್ಲಿ ಮುನ್ನೂರಕ್ಕೂ ಹೆಚ್ಚು ಭಾರತೀಯ ರೆಸ್ಟೋರೆಂಟ್ ಗಳಿವೆ.