Tag: big boss 16 hindi

  • ಬಿಗ್ ಬಾಸ್ ನಿರೂಪಣೆಗಾಗಿ ಸಲ್ಮಾನ್ ಖಾನ್ ಪಡೆದ ಸಂಭಾವನೆ ಕೇಳಿದ್ರೆ ನೀವು ಶಾಕ್ ಆಗುತ್ತೀರಾ

    ಬಿಗ್ ಬಾಸ್ ನಿರೂಪಣೆಗಾಗಿ ಸಲ್ಮಾನ್ ಖಾನ್ ಪಡೆದ ಸಂಭಾವನೆ ಕೇಳಿದ್ರೆ ನೀವು ಶಾಕ್ ಆಗುತ್ತೀರಾ

    ಬಾಲಿವುಡ್‌ನ ಬಿಗ್ ಶೋ ಅಂದ್ರೆ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಕಾರ್ಯಕ್ರಮವಾಗಿದ್ದು, ಬಿಗ್ ಬಾಸ್ ಸೀಸನ್ 16ಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಮುಂದಿನ ಬಿಗ್ ಬಾಸ್ ನಿರೂಪಣೆಗೆ ಸಲ್ಮಾನ್ ಖಾನ್ ಮೂರು ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ದಾರಂತೆ. ಈಗ ಸಲ್ಮಾನ್ ಖಾನ್ ತಮ್ಮ ಸಂಭಾವನೆ ವಿಚಾರವಾಗಿ ಸಖತ್ ಸುದ್ದಿ ಮಾಡುತ್ತಿದ್ದಾರೆ.

    ಹಿಂದಿ ಕಿರುತೆರೆಯ ದೊಡ್ಮನೆ ಕಾಳಗಕ್ಕೂ ಸಕಲ ಸಿದ್ಧತೆ ನಡೆಯುತ್ತಿದೆ. ಬಿಗ್ ಬಾಸ್ ಸೀಸನ್ 16ಕ್ಕೆ ವೇದಿಕೆ ಸಜ್ಜಾಗಿರುವ ಬೆನ್ನಲ್ಲೇ ಸಲ್ಮಾನ್ ಖಾನ್ ತಮ್ಮ ಸಂಭಾವನೆಯ ವಿಚಾರದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಈ ಹೊಸ ಸೀಸನ್ ನಿರೂಪಣೆಗಾಗಿ ಮೂರು ಪಟ್ಟು ಜಾಸ್ತಿ ಸಂಭಾವನೆಯನ್ನ ನಟ ಡಿಮ್ಯಾಂಡ್ ಮಾಡಿದ್ದಾರೆ. ಕಳೆದ ಸೀಸನ್‌ಗೆ ಸಲ್ಮಾನ್ 350 ಕೋಟಿ ರೂಪಾಯಿ ಜಾರ್ಜ್ ಮಾಡಿದ್ದರು. ಈಗ 1050 ಕೋಟಿ ರೂಪಾಯಿ ಜಾರ್ಜ್ ಮಾಡಿದ್ದಾರಂತೆ. ಇದನ್ನೂ ಓದಿ:ನಾಳೆಗೆ ಎಂಟು ಸಿನಿಮಾ ರಿಲೀಸ್ : ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಿದ ಸಂಭ್ರಮ

    ಈ ಹೊಸ ಸೀಸನ್ ಯಾರೆಲ್ಲಾ ಸ್ಟರ‍್ಸ್ ಭಾಗವಹಿಸುತ್ತಾರೆ ಎಂಬ ಕುತೂಹಲ ಸೃಷ್ಟಿಯಾಗಿರುವ ಬೆನ್ನಲ್ಲೇ ಸಲ್ಮಾನ್ ಖಾನ್ ತಮ್ಮ ಸಂಭಾವನೆ ವಿಚಾರದಲ್ಲಿ 1000 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿರುವುದು ಸಖತ್ ಸೌಂಡ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]