Tag: big bazar

  • ಮಾಲ್‌ನಲ್ಲಿ ಕದ್ದು ಸಿಕ್ಕಿಬಿದ್ದ ತುಳಸಿಪ್ರಸಾದ್!

    ಮಾಲ್‌ನಲ್ಲಿ ಕದ್ದು ಸಿಕ್ಕಿಬಿದ್ದ ತುಳಸಿಪ್ರಸಾದ್!

    ಬೆಂಗಳೂರು: ತನ್ನ ವಿಶಿಷ್ಟ ಧ್ವನಿಯಲ್ಲಿ ಗಾಯನ ಹಾಗೂ ಡಬ್ ಸ್ಮ್ಯಾಶ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಗಳನ್ನು ಹೊಂದಿರುವ ತುಳಸಿ ಪ್ರಸಾದ್ ವಿರುದ್ಧ ಕಳ್ಳತನದ ಆರೋಪವೊಂದು ಕೇಳಿಬಂದಿದೆ.

    ಬೆಂಗಳೂರಿನ ಬಿಗ್ ಬಜಾರ್ ವೊಂದರಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಹೇಳಲಾಗಿದ್ದು, ಈ ಕುರಿತು ಆತನಿಗೆ ಬಿಗ್ ಬಜಾರ್ ಸಿಬ್ಬಂದಿ ಆತನನ್ನು ಬೆವರಿಳಿಸಿದ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ವಿಡಿಯೋದಲ್ಲೇನಿದೆ?:
    ವಸ್ತುಗಳನ್ನು ಯಾಕೆ ಕದ್ರಿ. ಫೇಸ್ ಬುಕ್ ನಲ್ಲಿ ಫ್ಯಾನ್ಸ್ ಆಗಿದ್ದಾರೆ. ತುಂಬಾ ಜನ ಲೈವ್ ನೋಡ್ತಿದ್ದಾರೆ. ಕಳ್ಳತನ ಮಾಡೋಕೆ ನಾಚಿಕೆ ಆಗಲ್ವ ಅಂತ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದ್ರೆ ಈ ವೇಳೆ ತುಳಸಿಪ್ರಸಾದ್ ಬಿಗ್ ಬಜಾರ್ ನಲ್ಲಿ ಅಮಾಯಕನಂತೆ ನಿಂತಿದ್ದಾನೆ.

    ಬಿಗ್ ಬಜಾರ್ ಗೆ ಎಂಟ್ರಿ ಕೊಟ್ಟಿರುವ ತುಳಸಿಪ್ರಸಾದ್, ಅಲ್ಲಿ ಹಲವು ವಸ್ತುಗಳನ್ನು ಜೇಬಿಗಿಳಿಸಿಕೊಂಡಿದ್ದಾನೆ. ಬಳಿಕ ಮಾಲ್ ನಿಂದ ಹೊರಗೆ ಹೋಗುವಾಗ ಸೆಕ್ಯೂರಿಟಿ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಈ ಘಟನೆ ಯಾವಾಗ ನಡೆದಿದೆ ಎಂಬುದಾಗಿ ತಿಳಿದುಬಂದಿಲ್ಲ. ಅಲ್ಲದೇ ಘಟನೆ ಬಗ್ಗೆ ತುಳಸಿಪ್ರಸಾದ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರಿನ ಜಿಟಿ ಮಾಲ್‍ನಲ್ಲಿ ಲಿಫ್ಟ್ ನಲ್ಲಿ ಸಿಲುಕಿ ಕಾರ್ಮಿಕ ದುರ್ಮರಣ

    ಬೆಂಗ್ಳೂರಿನ ಜಿಟಿ ಮಾಲ್‍ನಲ್ಲಿ ಲಿಫ್ಟ್ ನಲ್ಲಿ ಸಿಲುಕಿ ಕಾರ್ಮಿಕ ದುರ್ಮರಣ

    ಬೆಂಗಳೂರು: ಲಿಫ್ಟ್ ನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಇಂದು ನಗರದಲ್ಲಿ ನಡೆದಿದೆ.

    ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಈ ದುರಂತ ಸಂಭವಿಸಿದ್ದು, ಮೃತ ದುರ್ದೈವಿಯನ್ನು 40 ವರ್ಷದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಇವರು ಕೆಪಿ ಅಗ್ರಹಾರದ ನಿವಾಸಿಯಾಗಿದ್ದು ಜಿಟಿ ಮಾಲ್ ನ ಬಿಗ್ ಬಜಾರ್ ನಲ್ಲಿ ಕೆಲಸ ಮಾಡುತ್ತಿದ್ದರು.

    ಶ್ರೀನಿವಾಸ್ ಇಂದು ಲಿಫ್ಟ್ ನಲ್ಲಿ ಗೂಡ್ಸ್ ಹಾಕಿಕೊಂಡು ಹೋಗುವಾಗ ಲಿಫ್ಟ್ ಆಫ್ ಆಗಿತ್ತು. ಈ ವೇಳೆ ಲಿಫ್ಟ್ ನಲ್ಲಿ ಸಿಲುಕಿದ್ದ ಶ್ರೀನಿವಾಸ್ ಬಗ್ಗಿದಾಗ ಲಿಫ್ಟ್ ತಲೆಗೆ ಬಡಿದಿದೆ. ಪರಿಣಾಮ ಶ್ರೀನಿವಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    https://www.youtube.com/watch?v=NT4mgAvc1yc

     

  • ಮಾಲ್‍ಗಳ ಬಿಲ್ ಮೇಲೆ ಜಿಎಸ್‍ಟಿ ಟ್ಯಾಕ್ಸ್: ಈ ಸಂದೇಶವನ್ನು ಕಳಿಸೋ ಮುನ್ನ ಈ ಸುದ್ದಿ ಓದಿ

    ಮಾಲ್‍ಗಳ ಬಿಲ್ ಮೇಲೆ ಜಿಎಸ್‍ಟಿ ಟ್ಯಾಕ್ಸ್: ಈ ಸಂದೇಶವನ್ನು ಕಳಿಸೋ ಮುನ್ನ ಈ ಸುದ್ದಿ ಓದಿ

    ಬೆಂಗಳೂರು: “ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದ ಬಳಿಕ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಬಿಲ್‍ಗಳ ಮೇಲೆ ಹೆಚ್ಚುವರಿ ತೆರಿಗೆ ಹಾಕಲಾಗುತ್ತಿದೆ”

    ಹೀಗೊಂದು ಸಂದೇಶ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಆದರೆ ದಯವಿಟ್ಟು ಈ ರೀತಿಯ ಸಂದೇಶವನ್ನು ಯಾರು ಕಳುಹಿಸಬೇಡಿ. ಇದು ಸುಳ್ಳು ಸುದ್ದಿಯಾಗಿದ್ದು ನಿಮ್ಮಲ್ಲಿ ಗೊಂದಲ ಮೂಡಿಸಿಲು ಯಾರೋ ಈ ಮಸೇಜ್ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

    ಜಿಎಸ್‍ಟಿ ಬಂದ ಮೇಲೆ ದೇಶದಲ್ಲಿರುವ ಉತ್ಪನ್ನಗಳನ್ನು 5 ವರ್ಗದಲ್ಲಿ ವಿಂಗಡಿಸಿ ಅವುಗಳ ಮೇಲೆ ಶೂನ್ಯ ತೆರಿಗೆ, ಶೇ.5 ತೆರಿಗೆ, ಶೇ.12 ತೆರಿಗೆ, ಶೇ.18 ತೆರಿಗೆ, ಶೇ.28 ತೆರಿಗೆಯನ್ನು ಹಾಕಲಾಗುತ್ತದೆ. ಈ ತೆರಿಗೆ ಮಾಲ್ ಗಳಲ್ಲಿ  ನೀವು ಖರೀದಿ ಮಾಡಿದ ವಸ್ತುಗಳಿಗೆ ಮಾತ್ರ ಅನ್ವಯವಾಗುತ್ತದೆ ಹೊರತು ಬಿಲ್‍ಗಳಿಗೆ ಅನ್ವಯವಾಗುವುದಿಲ್ಲ.

    ಜಿಎಸ್‍ಟಿ ತೆರಿಗೆ ಸೇರಿ ಉತ್ಪನ್ನದ ಎಂಆರ್‍ಪಿ ನಿಗದಿಯಾಗುತ್ತದೆ. ಹೀಗಾಗಿ ಬಿಲ್‍ನಲ್ಲಿ ಮತ್ತೊಮ್ಮೆ ಜಿಎಸ್‍ಟಿ ತೆರಿಗೆ ಹಾಕುವುದಿಲ್ಲ.

    ಹೀಗಾಗಿ ಯಾರಾದರೂ ನಿಮಗೆ ಈ ರೀತಿಯ ಮೆಸೇಜ್ ಕಳುಹಿಸಿದದರೆ ಅವರಿಗೆ ಇದು ಸುಳ್ಳು ಮೆಸೇಜ್. ಈ ರೀತಿ ಬಿಲ್ ಮೇಲೆ ತೆರಿಗೆ ಹಾಕಲು ಸಾಧ್ಯವಿಲ್ಲ ಎಂದು ತಿಳಿಸಿಬಿಡಿ.

    ವಾಟ್ಸಪ್ ಸಂದೇಶದಲ್ಲಿ ಏನಿದೆ?
    ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದ ಬಳಿಕ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಬಿಲ್‍ಗಳ ಮೇಲೆ ತೆರಿಗೆ ಹಾಕಲಾಗುತ್ತಿದೆ. 0 ಯಿಂದ 1 ಸಾವಿರ ರೂ. ವರೆಗಿನ ಬಿಲ್‍ಗಳಿಗೆ ಯಾವುದೇ ತೆರಿಗೆ ಇಲ್ಲ. 1000 ರೂ. ನಿಂದ 1500 ರೂ. ವರೆಗಿನ ಬಿಲ್ ಗಳಿಗೆ ಶೇ.2.5 ತೆರಿಗೆ, 1500 ರೂ. ನಿಂದ 2500 ರೂ.ವರೆಗಿನ ಬಿಲ್‍ಗಳಿಗೆ ಶೇ.6, 2500 ರೂ. ನಿಂದ 4500 ರೂ.ವರೆಗಿನ ಬಿಲ್‍ಗಳಿಗೆ ಶೇ.18 ತೆರಿಗೆ ವಿಧಿಸಲಾಗುತ್ತಿದೆ. ದಯವಿಟ್ಟು ಈ ವಿಚಾರವನ್ನು ಎಲ್ಲರಿಗೆ ತಿಳಿಸಿ ಎನ್ನುವ ಸಂದೇಶ ಹರಿದಾಡುತ್ತಿದೆ.

    ಇದನ್ನೂ ಓದಿ: ಆನ್‍ಲೈನ್ ಮೂಲಕ ಶಾಪಿಂಗ್ ಮಾಡೋ ಮಂದಿಗೆ ಗುಡ್‍ನ್ಯೂಸ್