Tag: Big Bash League

  • ವಿವಾದಗಳಿಂದ ಸದ್ದು ಮಾಡಿದ BBL

    ವಿವಾದಗಳಿಂದ ಸದ್ದು ಮಾಡಿದ BBL

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಂಕಡ್‌ ಮೂಲಕ ರನೌಟ್ ಮಾಡಿದ ಜಂಪಾ – ನಾಟೌಟ್‌ ಎಂದ ಅಂಪೈರ್!

    ಮಂಕಡ್‌ ಮೂಲಕ ರನೌಟ್ ಮಾಡಿದ ಜಂಪಾ – ನಾಟೌಟ್‌ ಎಂದ ಅಂಪೈರ್!

    ಸಿಡ್ನಿ: ಬಿಗ್‍ಬಾಶ್ ಲೀಗ್‍ನಲ್ಲಿ (Big Bash league) ಮೆಲ್ಬರ್ನ್ ಸ್ಟಾರ್ ತಂಡ ಬೌಲರ್ ಆ್ಯಡಂ ಜಂಪಾ (Adam Zampa) ಮಾಡಿದ ಮಂಕಡ್‌ ರನೌಟ್‌ನ್ನು (Mankad Run Out) ಅಂಪೈರ್ ನಾಟೌಟ್‌ ನೀಡಿರುವುದು ವಿವಾದಕ್ಕಿಡಾಗಿದೆ.

    ಮೆಲ್ಬರ್ನ್‌ ರೆನೆಗೇಡ್ಸ್ ತಂಡದ ಪರ ನಾನ್‍ಸ್ಟ್ರೈಕ್‍ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಟಾಮ್ ರೋಜರ್ಸ್ ಇತ್ತ ಬೌಲಿಂಗ್ ಆರಂಭಿಸುತ್ತಿದ್ದ ಜಂಪಾರನ್ನು ನೋಡಿ ಕ್ರಿಸ್ ಬಿಟ್ಟು ಮುಂದೆ ಓಡಿದ್ದಾರೆ. ಈ ವೇಳೆ ಜಂಪಾ ಮಂಕಡ್‌ ರನೌಟ್ ಮಾಡಿದ್ದಾರೆ. ಇದನ್ನೂ ಓದಿ: ಬುಮ್ರಾ ಈಸ್ ಬ್ಯಾಕ್ – ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ

    ಈ ವೇಳೆ ಅನ್‍ಫೀಲ್ಡ್ ಅಂಪೈರ್ ಥರ್ಡ್‌ ಅಂಪೈರ್ ನಿರ್ಧರಿಸುವಂತೆ ತಿಳಿಸಿದ್ದಾರೆ. ಥರ್ಡ್‌ ಅಂಪೈರ್ ನಾಟೌಟ್‌ ಎಂದು ತೀರ್ಪು ನೀಡಿದರು. ಈ ವೇಳೆ ಪ್ರಶ್ನಿಸಿದಾಗ ಜಾಂಪ ಬೌಲಿಂಗ್ ಆಕ್ಷನ್ ಮಾಡಿ ಕ್ರಿಸ್‍ನಲ್ಲಿ ಕೈ ಇದ್ದ ಕಾರಣ ಈ ನಿರ್ಧಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ಗಿಲ್ಲ ಪಂತ್ – ವಿಕೆಟ್ ಕೀಪರ್ ರೇಸ್‍ನಲ್ಲಿ ಉಪೇಂದ್ರ ಯಾದವ್

    ಕ್ರಿಕೆಟ್ ನಿಯಮದ ಪ್ರಕಾರ ಇದೀಗ ಮಂಕಡ್ ರನ್ ಔಟ್ ಅಧಿಕೃತವೆಂದು ಘೋಷಿಸಲಾಗಿದೆ. ಹಲವು ಮಂಕಡ್ ರನೌಟ್ ಕೂಡ ಮಾಡಿ ಅಂಪೈರ್‌ಗಳು ಔಟ್ ಎಂಬ ತೀರ್ಮಾನ ನೀಡಿದ್ದಾರೆ. ಆದರೆ ಇಲ್ಲಿ ಅಂಪೈರ್ ನಾಟೌಟ್‌ ನೀಡಿ ಚರ್ಚೆಗೆ ಗ್ರಾಸವಾಗಿದೆ.

    ಮಂಕಡ್‌ ಔಟ್:
    ನಾನ್‍ಸ್ಟ್ರೈಕ್‍ನಲ್ಲಿದ್ದ ಆಟಗಾರ ಬೌಲರ್ ಬಾಲ್ ಎಸೆಯುವ ಮುನ್ನ ಕ್ರಿಸ್‌ ಬಿಟ್ಟರೆ ಅವನನ್ನು ಔಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಮೊದಲು ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಹೇಳಲಾಗುತ್ತಿತ್ತು. ಇದೀಗ ಇದನ್ನು ರನೌಟ್‌ ಎಂದೇ ಪರಿಗಣಿಸಲಾಗುವುದಾಗಿ ಐಸಿಸಿ ನಿಯಮ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಫ್ರೀ ಹಿಟ್ ರೀತಿ, ಫ್ರೀ ಬಾಲ್ – ಔಟ್ ಆದ್ರೆ 5 ರನ್ ಕಡಿತಗೊಳಿಸಿ ಎಂದ ಅಶ್ವಿನ್

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ಆಟಗಾರರನ್ನು ಖರೀದಿಸುವಷ್ಟ ಹಣ ನಮ್ಮಲ್ಲಿಲ್ಲ: ಮ್ಯಾಕ್ಸ್‌ವೆಲ್‌ 

    ಭಾರತೀಯ ಆಟಗಾರರನ್ನು ಖರೀದಿಸುವಷ್ಟ ಹಣ ನಮ್ಮಲ್ಲಿಲ್ಲ: ಮ್ಯಾಕ್ಸ್‌ವೆಲ್‌ 

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುವ ಪ್ರತಿಷ್ಠಿತ ಟಿ20 ಲೀಗ್ ಬಿಗ್‍ಬಾಶ್‌ ಲೀಗ್‌ನಲ್ಲಿ (BBL) ಭಾರತೀಯ ಆಟಗಾರರನ್ನು ಖರೀದಿಸಿ ಆಡಿಸುವಷ್ಟು ಹಣ ನಮ್ಮಲ್ಲಿಲ್ಲ ಎಂದು ಆಸ್ಟ್ರೇಲಿಯಾ ಸ್ಟಾರ್ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್‌  (Glenn Maxwell) ಹೇಳಿದ್ದಾರೆ.

    ಟಿ20 ಕ್ರಿಕೆಟ್‍ನಲ್ಲಿ ವಿಶ್ವ ರ್‍ಯಾಕಿಂಗ್‌ನಲ್ಲಿ ನ.1 ಸ್ಥಾನದಲ್ಲಿರುವ ಸೂರ್ಯ ಕುಮಾರ್ ಯಾದವ್ (Suryakumar Yadav) ಕುರಿತಾಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮ್ಯಾಕ್ಸ್‌ವೆಲ್‌ಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಮ್ಯಾಕ್ಸ್‌ವೆಲ್‌ ಸೂರ್ಯ ಕುಮಾರ್ ಯಾದವ್ ಉತ್ತಮ ಆಟಗಾರ ಆದರೆ ನಮ್ಮಲ್ಲಿ ನಡೆಯುವ ಬಿಬಿಎಲ್ ಟೂರ್ನಿಯಲ್ಲಿ ಅವರನ್ನು ಕರೆತಂದು ಆಡಿಸುವಷ್ಟು ದುಡ್ಡು ನಮ್ಮಲ್ಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಕೆ.ಎಲ್.ರಾಹುಲ್

    ಸೂರ್ಯ ಕುಮಾರ್ ಯಾದವ್ ಭವಿಷ್ಯದಲ್ಲಿ ಬಿಬಿಎಲ್ ಟೂರ್ನಿಯಲ್ಲಿ ಆಡಬಹುದಾ ಎಂದು ಕೇಳಿದಾಗ ಮ್ಯಾಕ್ಸ್‌ವೆಲ್‌ ಇದು ಅಸಾಧ್ಯ. ನಾವು ದೊಡ್ಡ ಮೊತ್ತ ಪಾವತಿಸಿ ಆಟಗಾರರನ್ನು ತಂಡಕ್ಕೆ ಸೇರಿಸುವುದಿಲ್ಲ. ಹಾಗಾಗಿ ಬಿಬಿಎಲ್‍ನಲ್ಲಿ ಸೂರ್ಯ ಕುಮಾರ್ ಯಾದವ್ ಅವರಂತಹ ಭಾರತೀಯ ಆಟಗಾರರನ್ನು ನಿರೀಕ್ಷಿಸುವುದು ಕಷ್ಟ ಎಂದಿದ್ದಾರೆ. ಇದನ್ನೂ ಓದಿ: ICC ಮಾಸ್ಟರ್ ಪ್ಲ್ಯಾನ್‌ – ಹೊಸ ಮಾದರಿಯಲ್ಲಿ 2024ರ T20 ವಿಶ್ವಕಪ್

    ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಭಾರತೀಯ ಆಟಗಾರರನ್ನು ವಿದೇಶಿ ಟಿ20 ಲೀಗ್‍ನಲ್ಲಿ ಆಡಲು ಅವಕಾಶ ನೀಡಬೇಕೆಂಬ ಮಾತು ಕೇಳಿ ಬರುತ್ತಿದೆ. ಈವರೆಗೆ ಬಿಸಿಸಿಐ (BCCI) ಭಾರತೀಯ ಆಟಗಾರರಿಗೆ ಐಪಿಎಲ್ (IPL) ಬಿಟ್ಟು ಬೇರೆ ಯಾವುದೇ ವಿದೇಶಿ ಲೀಗ್‍ನಲ್ಲಿ ಆಡಲು ಅವಕಾಶ ನೀಡಿಲ್ಲ. ಬಿಸಿಸಿಐ ಈ ಬಗ್ಗೆ ಚಿಂತಿಸಿ ಆಟಗಾರರಿಗೆ ಅವಕಾಶ ನೀಡಿದರೆ, ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ವಿದೇಶಿ ಲೀಗ್‍ನಲ್ಲಿ ದೊಡ್ಡ ಮೊತ್ತಕ್ಕೆ ಸ್ಟಾರ್ ಆಟಗಾರರನ್ನು ಖರೀದಿಸಲು ಫ್ರಾಂಚೈಸ್‍ಗಳು ಮುಂದಾಗಬಹುದು. ಆದರೆ ಈ ಬಗ್ಗೆ ಬಿಸಿಸಿಐ ಒಲವು ತೋರಿದಂತೆ ಕಾಣಿಸುತ್ತಿಲ್ಲ.

    Live Tv
    [brid partner=56869869 player=32851 video=960834 autoplay=true]

  • 2023ರಲ್ಲಿ ಆರಂಭಗೊಳ್ಳಲಿದೆ 6 ತಂಡಗಳ ನಡುವಿನ ಮಹಿಳಾ ಐಪಿಎಲ್

    2023ರಲ್ಲಿ ಆರಂಭಗೊಳ್ಳಲಿದೆ 6 ತಂಡಗಳ ನಡುವಿನ ಮಹಿಳಾ ಐಪಿಎಲ್

    ಮುಂಬೈ: ಪುರುಷರ ಐಪಿಎಲ್ ಟೂರ್ನಿ 14 ಆವೃತ್ತಿ ಯಶಸ್ವಿ ಕಂಡು 15ನೇ ಆವೃತ್ತಿ ನಡೆಯುತ್ತಿರುವಂತೆ ಇದೀಗ 2023ರಲ್ಲಿ 6 ತಂಡಗಳೊಂದಿಗೆ ಮಹಿಳಾ ಐಪಿಎಲ್ ಟೂರ್ನಿ ನಡೆಸಲು ಬಿಸಿಸಿಐ ಪ್ಲಾನ್ ಮಾಡುತ್ತಿದೆ ಎಂದು ವರದಿಯಾಗಿದೆ.

    ಈ ಹಿಂದೆ 3 ತಂಡಗಳ ನಡುವೆ ಮಹಿಳಾ ಟಿ20 ಚಾಲೆಂಜ್ ಹೆಸರಿನಡಿ ಐಪಿಎಲ್ ವೇಳೆ ಮಹಿಳಾ ತಂಡಗಳನ್ನು ಬಿಸಿಸಿಐ ಆಡಿಸಿತ್ತು. ಆ ಬಳಿಕ 2021ರಲ್ಲಿ ಕೊರೊನಾದಿಂದಾಗಿ ಇದು ರದ್ದುಗೊಂಡಿತ್ತು. ಇದೀಗ ನಡೆಯುತ್ತಿರುವ 15ನೇ ಆವೃತ್ತಿ ಐಪಿಎಲ್‍ನಲ್ಲೂ ಈ ಮಹಿಳಾ ಟಿ20 ಚಾಲೆಂಜ್ ನಡೆಯುತ್ತಿಲ್ಲ. ಆದರೆ 2023ರಲ್ಲಿ ಆರಂಭವಾಗುವ ಐಪಿಎಲ್ ವೇಳೆ 6 ಮಹಿಳಾ ತಂಡಗಳನ್ನು ರಚಿಸಿ ಮಹಿಳಾ ಐಪಿಎಲ್ ಆರಂಭಿಸಲು ಸಿದ್ಧತೆ ಆರಂಭಗೊಂಡಿದೆ ಎಂದು ಬಿಸಿಸಿಐ ಮೂಲಗಳು ಖಚಿತ ಪಡಿಸಿದೆ. ಇದನ್ನೂ ಓದಿ: 6 ಸಿಕ್ಸ್, 8 ಫೋರ್ ಚಚ್ಚಿ ಮಿಲ್ಲರ್ ಮಿಂಚಿಂಗ್ – ಗುಜರಾತ್‍ಗೆ ರೋಚಕ ಜಯ

    ಈಗಾಗಲೇ ಮಹಿಳಾ ಐಪಿಎಲ್ ಟೂರ್ನಿ ಬಗ್ಗೆ ಮಾತುಕತೆ ನಡೆದಿದ್ದು 6 ತಂಡಗಳ ರಚನೆಗೆ ರೂಪುರೇಷೆ ಸಿದ್ಧಗೊಂಡಿದೆ. ಜೊತೆಗೆ ಇದೀಗ ಪುರುಷರ ಐಪಿಎಲ್‍ನಲ್ಲಿರುವ ಕೆಲ ಫ್ರಾಂಚೈಸ್‍ಗಳು ಮಹಿಳಾ ಐಪಿಎಲ್ ತಂಡ ಕಟ್ಟಲು ತಯಾರಾಗಿದೆ. ಹಾಗಾಗಿ ಮುಂದಿನ ವರ್ಷದಿಂದ ಮಹಿಳಾ ಐಪಿಎಲ್ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಪರ ಟಿ20 ವಿಶ್ವಕಪ್ ಆಡುವರೇ ದಿನೇಶ್ ಕಾರ್ತಿಕ್?

    ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ಆಯೋಜಿಸುವ ಬಿಗ್‍ಬಾಶ್ ಲೀಗ್ ವೇಳೆ ಮಹಿಳಾ ಬಿಗ್‍ಬಾಶ್ ಲೀಗ್ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಐಪಿಎಲ್‍ನಲ್ಲೂ ಮಹಿಳಾ ತಂಡಗಳನ್ನು ಆಡಿಸುವ ಲೆಕ್ಕಾಚಾರದಲ್ಲಿ ಬಿಸಿಸಿಸಿ ಇದೆ. ಬಿಗ್‍ಬಾಶ್‍ನಲ್ಲಿ ಭಾರತೀಯ ಮಹಿಳಾ ಆಟಗಾರರು ಕೂಡ ಭಾಗವಹಿಸಿದ್ದಾರೆ. ಅದೇ ರೀತಿ 2023ರಲ್ಲಿ ವಿದೇಶಿ ಆಟಗಾರರನ್ನು ಬರಮಾಡಿಕೊಂಡು ಮಹಿಳಾ ಐಪಿಎಲ್ ನಡೆಸಲು ಸಿದ್ಧತೆ ಆರಂಭಗೊಂಡಿದೆ ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.

     

  • ಒಂದೇ ಕೈಯಲ್ಲಿ ರಾಧಾ ಯಾದವ್ ಸ್ಟನ್ನಿಂಗ್ ಕ್ಯಾಚ್

    ಒಂದೇ ಕೈಯಲ್ಲಿ ರಾಧಾ ಯಾದವ್ ಸ್ಟನ್ನಿಂಗ್ ಕ್ಯಾಚ್

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳಾ ಬಿಗ್‍ಬಾಶ್ ಲೀಗ್‍ನಲ್ಲಿ ಭಾರತದ ರಾಧಾ ಯಾದವ್ ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿಯುವ ಮೂಲಕ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿದ್ದಾರೆ.

    ಸಿಡ್ನಿ ಸಿಕ್ಸರ್ಸ್ ಮತ್ತು ಬ್ರಿಸ್ಬೇನ್ ನಡುವಿನ ಪಂದ್ಯದಲ್ಲಿ ಮಿಲನ್ ಡು ಪ್ರೀಜ್ ಪಾಯಿಂಟ್ ಮೇಲೆ ಬಾಲ್‍ನ್ನು ಬೌಂಡರಿ ಗಟ್ಟಲು ಪ್ರಯತ್ನಿಸಿದರು. ಈ ವೇಳೆ ಪಾಯಿಂಟ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಾಧಾ ಯಾದವ್ ಚಂಗನೆ ಹಾರಿ ಒಂದೇ ಕೈಯಲ್ಲಿ ಅದ್ಭುತವಾದ ಕ್ಯಾಚ್ ಹಿಡಿದರು. ಇದನ್ನು ಕಂಡ ಅಭಿಮಾನಿಗಳು ಆಶ್ಚರ್ಯಚಕಿತರಾದರು. ತಂಡ ಸಹ ಆಟಗಾರ್ತಿಯರು ಯಾದವ್ ಕ್ಯಾಚ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಟಿ20 ವಿಶ್ವಕಪ್ #BoycottPakistan ಬಿಸಿಬಿಸಿ ಚರ್ಚೆ

    ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್‍ಬಾಶ್ ಲೀಗ್‍ನಲ್ಲಿ ಭಾರತದ 8 ಮಂದಿ ಆಟಗಾರ್ತಿಯರು ಆಡುತ್ತಿದ್ದು, ಅವರು ಪ್ರತಿನಿಧಿಸುತ್ತಿರುವ ತಂಡದ ಪರವಾಗಿ ಭರ್ಜರಿ ಪ್ರದರ್ಶನ ಕೊಡುವ ಮೂಲಕ ವಿಶ್ವ ಕ್ರಿಕೆಟ್‍ನ ಗಮನಸೆಳೆಯುತ್ತಿದ್ದಾರೆ. ಇದನ್ನೂ ಓದಿ: ಚಾಂಪಿಯನ್ ಆಟಗಾರರಿಗಿಲ್ಲ T20 ವಿಶ್ವಕಪ್ ಆಡುವ ಅದೃಷ್ಟ

  • ಅಂಪೈರ್ ಔಟ್ ನೀಡಿದ್ರು ಬ್ಯಾಟ್ಸ್‌ಮನ್‌ಗೆ ಮತ್ತೆ ಆಡಲು ಅವಕಾಶ ಕೊಟ್ಟ ಫೀಲ್ಡಿಂಗ್ ಟೀಂ – ವಿಡಿಯೋ

    ಅಂಪೈರ್ ಔಟ್ ನೀಡಿದ್ರು ಬ್ಯಾಟ್ಸ್‌ಮನ್‌ಗೆ ಮತ್ತೆ ಆಡಲು ಅವಕಾಶ ಕೊಟ್ಟ ಫೀಲ್ಡಿಂಗ್ ಟೀಂ – ವಿಡಿಯೋ

    ಸಿಡ್ನಿ: ಪಂದ್ಯದ ವೇಳೆ ರನ್ ಕದಿಯಲು ಯತ್ನಿಸಿದ ಆಟಗಾರ ರನೌಟ್ ಎಂದು 3ನೇ ಅಂಪೈರ್ ತೀರ್ಪು ನೀಡಿದ್ರು ಎದುರಾಳಿ ತಂಡದ ಆಟಗಾರರು ಮತ್ತೆ ಬ್ಯಾಟಿಂಗ್ ನಡೆಸಲು ಅವಕಾಶ ನೀಡಿದ ಘಟನೆ ಆಸೀಸ್ ಬಿಗ್ ಬ್ಯಾಶ್ ಲೀಗ್ ಆರಂಭಿಕ ಪಂದ್ಯದಲ್ಲಿ ನಡೆದಿದೆ.

    ಲೀಗ್‍ನ ಆರಂಭಿಕವಾಗಿ ಇಂದು ಆಡಿಲೇಡ್ ಸ್ಟ್ರೇಕರ್ಸ್ ಹಾಗೂ ಬ್ರಿಸ್ಬೇನ್ ಹೀಟ್ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಬ್ರಿಸ್ಬೇನ್ ಹೀಟ್ ತಂಡದ ಬ್ಯಾಟಿಂಗ್ ನಡೆಸುತ್ತಿದ್ದ 13 ನೇ ಓವರ್ 3ನೇ ಎಸೆತದಲ್ಲಿ ಜೇಮ್ಸ್ ಪ್ಯಾಟಿನ್‍ಸನ್ ರನ್ ಕದಿಯಲು ಯತ್ನಿಸಿದರು. ಈ ವೇಳೆ ರನೌಟ್ ಮಾಡಲು ಯತ್ನಿಸಿದ ಆಡಿಲೇಡ್ ತಂಡದ ಆಟಗಾರರು ಅಂಪೈರ್ ಗೆ ಮನವಿ ಸಲ್ಲಿಸಿದರು.

    ಆಡಿಲೇಡ್ ತಂಡದ ಆಟಗಾರರ ಮನವಿ ಸ್ವೀಕರಿಸಿದ ಆನ್‍ಫೀಲ್ಡ್ ಅಂಪೈರ್ 3ನೇ ಅಂಪೈರ್ ಗೆ ಮನವಿ ಸಲ್ಲಿಸಿದರು. ಈ ವೇಳೆ ದೃಶ್ಯಗಳನ್ನ ಪರಿಶೀಲನೆ ನಡೆಸಿದ 3ನೇ ಅಂಪೈರ್ ರನೌಟ್ ಆಗದಿದ್ದರು ಔಟ್ ಎಂದು ತೀರ್ಪು ನೀಡಿದರು. ಇದನ್ನು ಕಂಡ ಜೇಮ್ಸ್ ಪ್ಯಾಟಿನ್‍ಸನ್ ಕ್ಷಣ ಕಾಲ ಶಾಕ್ ಆಗಿ ಮೈದಾನದಲ್ಲೇ ನಿಂತರು. ದೃಶ್ಯಗಳಲ್ಲಿ ಬ್ಯಾಟ್ಸ್ ಮನ್ ಔಟಾದಿದ್ದನ್ನು ಗಮನಿಸಿದ ಆಡಿಲೇಡ್ ಸ್ಟ್ರೇಕರ್ಸ್ ತಂಡದ ಆಟಗಾರು ತಮ್ಮ ಔಟ್ ಮನವಿಯನ್ನು ವಾಪಸ್ ಪಡೆದು ಮತ್ತೆ ಜೇಮ್ಸ್ ಪ್ಯಾಟಿನ್‍ಸನ್‍ಗೆ ಆಡಲು ಅವಕಾಶ ನೀಡಿ ಕ್ರೀಡಾ ಸ್ಫೂರ್ತಿ ಮೆರೆದರು.

    ಅಂಪೈರ್ ತೀರ್ಪು ಕಂಡ ಆನ್ ಫೀಲ್ಡ್ ಅಂಪೈರ್ ಗಳಾದ ಸೈಮನ್ ಫ್ರೈ, ಪಾಲ್ ವಿಲ್ಸನ್ ಸೇರಿದಂತೆ ಪಂದ್ಯದ ವೀಕ್ಷಕ ವಿವರಣೆಕಾರರು ಕೂಡ ಒಂದು ಕ್ಷಣ ಶಾಕ್ ಒಳಗಾಗಿದ್ದರು. ಸದ್ಯ ಪಂದ್ಯ 3ನೇ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗ್ರೇಗ್ ಡೇವಿಡ್‍ಸನ್ ತೀರ್ಪಿನ ವಿರುದ್ಧ ಕ್ರಿಕೆಟ್ ವಿಶ್ಲೇಷಕರು ಟೀಕೆ ಮಾಡಿದ್ದಾರೆ.

    ಅಂಪೈರ್ ತೀರ್ಪಿನ ವಿರುದ್ಧ ಬಳಿಕ ಏನು ಮಾಡಲಾದ ಜೇಮ್ಸ್ ಪ್ಯಾಟಿನ್‍ಸನ್ ಪೆವಿಲಿಯನ್ ನತ್ತ ನಡೆಯುತ್ತಿದ್ದರು, ಆದರೆ ಆಡಿಲೇಡ್ ಸ್ಟ್ರೇಕರ್ಸ್ ಆಟಗಾರರು ಅಂಪೈರ್ ತಪ್ಪಿನ ಅರಿವಾಗಿ ಮತ್ತೆ ಆಡಲು ಅವಕಾಶ ನೀಡಿದರು. ಆಟಗಾರರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್ ಬ್ಯಾಶ್ ಲೀಗ್‍ನಲ್ಲೂ ಹರ್ಮನ್‍ಪ್ರೀತ್ ಸಿಕ್ಸರ್, ಬೌಂಡರಿಗಳ ಸುರಿಮಳೆ!

    ಬಿಗ್ ಬ್ಯಾಶ್ ಲೀಗ್‍ನಲ್ಲೂ ಹರ್ಮನ್‍ಪ್ರೀತ್ ಸಿಕ್ಸರ್, ಬೌಂಡರಿಗಳ ಸುರಿಮಳೆ!

    ಸಿಡ್ನಿ: ಟೀಂ ಇಂಡಿಯಾ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ ಕ್ರಿಕೆಟ್ ನಲ್ಲೂ ಅಬ್ಬರಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ 26 ಎಸೆತದಲ್ಲಿ 56 ರನ್ ಚಚ್ಚಿದ್ದು ಮಾತ್ರವಲ್ಲದೆ 1 ವಿಕೆಟ್ ಪಡೆದು ಸಿಡ್ನಿ ಥಂಡರ್ ತಂಡವನ್ನು ಗೆಲ್ಲಿಸಿದ್ದಾರೆ.

    ಒನ್‍ಡೌನ್ ಆಟಗಾರ್ತಿಯಾಗಿ 10.2ನೇ ಓವರ್ ನಲ್ಲಿ ಕ್ರೀಸಿಗೆ ಇಳಿದ ಕೌರ್ 19.3 ಓವರ್ ವರೆಗೂ ಕ್ರೀಸ್‍ನಲ್ಲಿದ್ದರು. ತಂಡ 89 ರನ್ ಗಳಿಸಿದ್ದಾಗ ಬ್ಯಾಟಿಂಗ್ ಗೆ ಇಳಿದ ಕೌರ್ 183 ರನ್ ಗಳಿಸಿ ನಾಲ್ಕನೇಯ ಮತ್ತು ಕೊನೆಯವರಾಗಿ ಔಟಾದರು.

    23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಕೌರ್ ಅಂತಿಮವಾಗಿ 56 ರನ್(26 ಎಸೆತ, 6 ಬೌಂಡರಿ, 3 ಸಿಕ್ಸರ್, 215 ಸ್ಟ್ರೈಕ್ ರೇಟ್) ಸಿಡಿಸಿ ಔಟಾದರು. ತಂಡದ ಪರವಾಗಿ ಪ್ರೀಸ್ಟ್ 49 ರನ್, ಹೇನ್ಸ್ 36 ರನ್, ಬ್ಲಾಕ್‍ವೆಲ್ 33 ರನ್ ಸಿಡಿಸಿದ ಪರಿಣಾಮ 20 ಓವರ್ ಗಳಲ್ಲಿ ಸಿಡ್ನಿ ಥಂಡರ್ ತಂಡ 9 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು.

    ಭಾರೀ ಮೊತ್ತವನ್ನು ಬೆನ್ನಟ್ಟಿದ್ದ ಬ್ರಿಸ್ಬೇನ್ ಹೀಟ್ ವುಮೆನ್ 18.5 ಓವರ್ ಗಳಲ್ಲಿ 164 ರನ್ ಗಳಿಸಿ ಆಲೌಟ್ ಆಗಿ, ಸಿಡ್ನಿ ತಂಡ 28 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. 3 ಓವರ್ ಎಸೆದು 26 ರನ್ ನೀಡಿ 1 ವಿಕೆಟ್ ಪಡೆದ ಹರ್ಮನ್ ಪ್ರೀತ್ ಕೌರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಟಿ 20 ವಿಶ್ವಕಪ್‍ನ ನ್ಯೂಜಿಲೆಂಡ್ ವಿರುದ್ಧದ ಉದ್ಘಟನಾ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಕೇವಲ 51 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸ್ ಸಿಡಿಸಿ 103 ರನ್ ಚಚ್ಚಿದ್ದರು. ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ವೇಗದ ಶತಕ ಸಿಡಿಸಿದ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಕೌರ್ ಪಾತ್ರರಾಗಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv