Tag: bidar

  • ಬ್ಯಾಂಕ್‌ಗೆ ನುಗ್ಗಿದ ಮುಸುಕುಧಾರಿಗಳು-ಚೇಸಿಂಗ್ ಮಾಡಿದ್ರೂ ರಾಬರಿ ಗ್ಯಾಂಗ್ ಎಸ್ಕೇಪ್

    ಬ್ಯಾಂಕ್‌ಗೆ ನುಗ್ಗಿದ ಮುಸುಕುಧಾರಿಗಳು-ಚೇಸಿಂಗ್ ಮಾಡಿದ್ರೂ ರಾಬರಿ ಗ್ಯಾಂಗ್ ಎಸ್ಕೇಪ್

    -ಗ್ಯಾಂಗ್ ಪ್ಲಾನ್ ಫೇಲ್ ಆಗಿದ್ದು ಹೇಗೆ?

    ಬೀದರ್: ಸಿನಿಮೀಯ ರೀತಿಯಲ್ಲಿ ಹಾಡಹಗಲೇ ಬ್ಯಾಂಕ್ ದರೋಡೆ ಯತ್ನಿಸಿರುವ ಘಟನೆ ನಗರದ ಮಡಿವಾಳ ವೃತ್ತದ ಬಳಿಯ ಮುತ್ತೂಟ್ ಬ್ಯಾಂಕ್ ಬಳಿ ನಡೆದಿದೆ.

    ಮುಖಕ್ಕೆ ಮಾಸ್ಕ್ ಧರಿಸಿ ಬಂದ 6 ಮಂದಿ ದುಷ್ಕರ್ಮಿಗಳು ಬ್ಯಾಂಕ್ ಒಳಗೆ ಏಕಾಏಕಿ ನುಗ್ಗಿ ಸಿಬ್ಬಂದಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿ ಹಣ ದೋಚಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಬ್ಯಾಂಕ್ ಸಿಬ್ಬಂದಿಯೊಬ್ಬರು ಸದ್ದಿಲ್ಲದೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಕುರಿತು ಮಾಹಿತಿ ಪಡೆದ ಕ್ಷಣ ಮಾತ್ರದಲ್ಲಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆದರೆ ದರೋಡೆ ಮಾಡುವ ವೇಳೆ ಗುಂಪಿನ ಆರೋಪಿ ಬ್ಯಾಂಕ್ ಮುಂದೇ ನಿಂತು ಪರಿಶೀಲನೆ ನಡೆಸಿದ್ದು, ಪೊಲೀಸ್ ವಾಹನ ಕಂಡು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

    ನಡೆದಿದ್ದೇನು?
    6 ಮಂದಿಯ ದರೋಡೆ ಗುಂಪು ಮುಖಕ್ಕೆ ಮಾಸ್ಕ್ ಧರಿಸಿ ಬೆಳಗ್ಗೆ 9 ಗಂಟೆ ಸಮಯದಲ್ಲಿ ಆಗಮಿಸಿದ್ದರು. ಮೊದಲೇ ಪ್ಲಾನ್ ರೂಪಿಸಿದಂತೆ ಕಂಡು ಬಂದ ಗುಂಪು ಏಕಾಏಕಿ ಬ್ಯಾಂಕ್ ಪ್ರವೇಶ ಮಾಡಿತ್ತು. ಇದಾದ ಬಳಿಕ ಕೆಲ ಸಮಯದಲ್ಲೇ ಬ್ಯಾಂಕ್ ನಿಂದ ಹೊರ ಬಂದ ಆರೋಪಿಗಳು ಕಾರು ಹತ್ತಿ ಪರಾರಿಯಾಗಲು ಸಿದ್ಧರಿದ್ದರು. ಆದರೆ ಆ ವೇಳೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರ ತಂಡ ಬ್ಯಾಂಕ್ ಮುಂದೇ ಕಾರ್ಯಾಚರಣೆ ನಡೆಲು ಸಿದ್ಧತೆ ನಡೆಸಿತ್ತು.

    ಕ್ಷಣ ಮಾತ್ರದಲ್ಲಿ ಪೊಲೀಸರನ್ನು ಕಣ್ಣು ತಪ್ಪಿಸಿದ ಖದೀಮರು ಕಾರಿನ ಸಮೇತ ಪರಾರಿಯಾದರು. ಕೂಡಲೇ ಪೊಲೀಸರು ದರೋಡೆಕೋರರ ಕಾರು ಹಿಂಬಾಲಿಸಿದರು. ಪೊಲೀಸರು ತಮ್ಮನ್ನ ಫಾಲೋ ಮಾಡುತ್ತಿದ್ದಾರೆ ಎಂಬ ವಿಷಯ ಅರಿತ ದರೋಡೆಕೋರರು ಕಾರು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

    ಘಟನೆ ವೇಳೆ ಬ್ಯಾಂಕಿನಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಿಬ್ಬಂದಿ ಕಾರಣ ದರೋಡೆ ಯತ್ನ ನಡೆದಿದೆ. ಈ ಎಲ್ಲಾ ದೃಶ್ಯಗಳು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳ ಆಧಾರ ಮೇಲೆ ದರೋಡೆಗೆ ಯತ್ನಿಸಿದ ಆರೋಪಿಗಳನ್ನ ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಂಗೋಲಿಯಲ್ಲಿ ಅರಳಿದ ಕೆಜಿಎಫ್ ಯಶ್

    ರಂಗೋಲಿಯಲ್ಲಿ ಅರಳಿದ ಕೆಜಿಎಫ್ ಯಶ್

    ಬೀದರ್: ಕೆಜಿಎಫ್ ಚಿತ್ರ ಬಿಡುಗಡೆ ಆಗಿರುವ ಖುಷಿಯಲ್ಲಿ ಯಶ್ ಅಭಿಮಾನಿ ಬಳಗದವರು ರಾಕಿಂಗ್ ಸ್ಟಾರ್ ಯಶ್ ಅವರ ರಗಡ್ ಲುಕ್‍ನಲ್ಲಿರುವ ಭಾವಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿ ಅವರ ಸಿನಿಮಾಕ್ಕೆ ಶುಭ ಕೋರಿದ್ದಾರೆ.

    ಇಂದು ದೇಶಾದ್ಯಂತ ಅದ್ಧೂರಿಯಾಗಿ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರ ಬಿಡುಗಡೆ ಆಗಿದೆ. ಆದ್ದರಿಂದ ಯಶ್ ಅಭಿಮಾನಿಗಳ ಬಳಗದವರು ಸ್ವಪ್ನಾ ಮಲ್ಟಿಪ್ಲೆಕ್ಸ್ ಥಿಯೇಟರ್‌ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿ ಅವರ ಸಿನಿಮಾಕ್ಕೆ ಶುಭ ಕೋರಿದ್ದಾರೆ. ಮಹೇಶ್ವರಿ ಪಾಂಚಾಲ ಎಂಬವರು ರಂಗೋಲಿಯಲ್ಲಿ ಯಶ್ ಅವರ ಈ ಚಿತ್ರ ಬಿಡಿಸಿದ್ದು ಜಿಲ್ಲೆಯ ಅಭಿಮಾನಿಗಳ ಗಮನ ಸೆಳೆಯತ್ತಿದ್ದಾರೆ.

    ಪಂಚ ಭಾಷೆಗಳಲ್ಲಿ ತೆರೆ ಕಂಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕನ್ನಡದ ಬಹು ನಿರೀಕ್ಷಿತ ಕೆಜಿಎಫ್ ಚಿತ್ರ ಎಲ್ಲೆಡೆ ಸಕ್ಕತ್ ಸೌಂಡ್ ಮಾಡುತ್ತಿದೆ. ಗಡಿ ಜಿಲ್ಲೆ ಬೀದರ್ನಲ್ಲಿ ಮೊದಲ ಶೋ ಪ್ರಾರಂಭವಾಗಿದ್ದು, ಸಿನಿಪ್ರಿಯರಲ್ಲಿ ಕೆಜಿಎಫ್ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ.

    ಈಗಾಗಲೇ ದೇಶಾದ್ಯಂತ ಕೆಜಿಎಫ್ ಮೊದಲ ಶೋ ಪ್ರಾರಂಭವಾಗಿದ್ದು ಯಶ್ ಅಭಿಮಾನಿಗಳು ಕೇಕ್ ಕಟ್ ಮಾಡಿ, ಪಟಾಕಿ ಸಿಡಿಸಿ, ಕುಂಬಳಕಾಯಿ ಒಡೆದು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸದ್ಯ ಯಶ್ ಅವರ ಕೆಜಿಎಫ್ ಸಿನಿಮಾಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಚಿತ್ರ ಸೂಪರ್ ಆಗಿದೆ ಎಂದು ಸಿನಿಮಾ ನೋಡಿದವರು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲದೆ ಕೆಜಿಎಫ್ ಚಿತ್ರದ ಅಬ್ಬರಕ್ಕೆ ಕನ್ನಡ ಸಿನಿಪ್ರಿಯರು ಮನಸೋತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೂಲಭೂತ ಸೌಲಭ್ಯ ವಂಚಿತ ಗ್ರಾಮಕ್ಕೆ ಬೇಕಿದೆ ರಸ್ತೆ!

    ಮೂಲಭೂತ ಸೌಲಭ್ಯ ವಂಚಿತ ಗ್ರಾಮಕ್ಕೆ ಬೇಕಿದೆ ರಸ್ತೆ!

    ಬೀದರ್: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 60 ವರ್ಷ ಕಳೆದರೂ ಇನ್ನೂ ಗ್ರಾಮೀಣ ಪ್ರದೇಶಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎನ್ನುವ ಸುದ್ದಿಗೆ ಹಳ್ಳಿ ಸಾಕ್ಷಿಯಾಗಿದೆ. ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ನೀಲಂಹಳ್ಳಿ ಗ್ರಾಮದಲ್ಲಿ 1,300 ಮಂದಿ ವಾಸವಾಗಿದ್ದು, ಸರಿಯಾದ ರಸ್ತೆ ಇಲ್ಲದೇ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿದಿದ್ದಾರೆ.

    ಗ್ರಾಮದ ಜನರಿಗೆ ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲ. ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿಗೆ ಹೋಗಬೇಕಾದರೆ ನಡೆದುಕೊಂಡೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಗ್ರಾಮದ ಮಕ್ಕಳು ಶಾಲೆಗೆ ಹೋಗಬೇಕಾದರೆ 4 ರಿಂದ 5 ಕಿಲೋ ಮೀಟರ್ ದೂರ ಕಡಿದಾದ ಕಾಲುದಾರಿಯಲ್ಲಿ ನಡೆದು ಸಾಗಬೇಕಿದೆ.

    ಈ ಹಿಂದೆ ಕುಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ್ದರೂ ಸದ್ಯ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿ ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿದೆ. ರಸ್ತೆ ದುರಸ್ಥಿಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳ ಬಳಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಧನ್ನೂರು – ರುದ್ಧನೂರ್ – ನೀಲಂಹಳ್ಳಿ ಮೂಲಕ ಮುಖ್ಯ ರಸ್ತೆಗೆ ಸಂಪರ್ಕವಾಗುವ ರಸ್ತೆಯನ್ನು ರಾಜಕೀಯ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಿದ್ದಾರೆ.

    ಇತ್ತ ಗ್ರಾಮದಲ್ಲಿ ಸಮಸ್ಯೆಗಳಿದ್ದರೂ ರಸ್ತೆ ಒತ್ತುವರಿ ತೆರವುಗೊಳಿಸಿ ಗ್ರಾಮಸ್ಥರ ನೆರವಿಗೆ ಬರಬೇಕಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಸ್ಥಳೀಯ ಶಾಸಕರೂ ಆದ ಈಶ್ವರ್ ಖಂಡ್ರೆ ಮೌನಕ್ಕೆ ಶರಣಾಗಿದ್ದಾರೆ. ಜನಪ್ರತಿನಿಧಿಗಳ ಹಾಗು ಅಧಿಕಾರಿಗಳಿಗೆ ನಿರ್ಲಕ್ಷ್ಯಕ್ಕೆ ಈ ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸದ್ಯ ಇಲ್ಲಿನ ಗ್ರಾಮಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ರಸ್ತೆ ಮಾಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

    https://www.youtube.com/watch?v=QorJplaN5-w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಬಸ್ ಸಿಗದೇ ಕಣ್ಣೀರಿಡುತ್ತಿದ್ದ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸಿಕ್ತು ಪರಿಹಾರ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಬಸ್ ಸಿಗದೇ ಕಣ್ಣೀರಿಡುತ್ತಿದ್ದ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸಿಕ್ತು ಪರಿಹಾರ

    ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ಡಿಗ್ಗಿ ಗ್ರಾಮದ ಶಾಲೆಗೆ ಬರೋ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ. ಈ ಗ್ರಾಮದ ಶಾಲೆಗೆ ಬರೋ ಸುತ್ತಮುತ್ತಲಿನ ಊರಿನ ನೂರಾರು ವಿದ್ಯಾರ್ಥಿಗಳು ಬಸ್ ಸಿಗದೇ ಪರದಾಡುತ್ತಿದ್ದರು.

    ಮಕ್ಕಳ ಪ್ರತಿದಿನ ಪರದಾಡೋದನ್ನು ನೋಡಿ ಪೋಷಕರು ಕೂಡ ಕಂಗಾಲಾಗಿದ್ದರು. ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ಎಕ್ಸ್ ಕ್ಲೂಸಿವ್ ಸುದ್ದಿ ಪ್ರಸಾರ ಮಾಡಿತ್ತು. ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆಯ ಅಧಿಕಾರಿಗಳು ದಿಡೀರನೆ ಗ್ರಾಮಕ್ಕೆ ಭೇಟಿ ನೀಡಿ,  ಗ್ರಾಮಸ್ಥರ ಸಮಸ್ಯೆ ಆಲಿಸಿ, ಬಸ್ ನಿಲ್ಲಿಸೊಕೆ ಸಿಬ್ಬಂದಿಗೆ ಡಿಪೋ ಮ್ಯಾನೇಜರ್ ಖಡಕ್ ಸೂಚನೆ ನೀಡಿದ್ದಾರೆ. ನಿಮ್ಮ ಪಬ್ಲಿಕ್ ಟಿವಿ ಸಾಮಾಜಿಕ ಕಳಕಳಿಯಿಂದ “ಬಸ್ ನಿಲ್ಲಿಸಿ ಪ್ಲೀಸ್” ಎಂಬ ಶೀರ್ಷಿಕೆಯಲ್ಲಿ ಮಾಡಿದ್ದ ಎಕ್ಸ್ ಕ್ಲೂಸಿವ್ ಸುದ್ದಿಗೆ ಕೊನೆಗೂ ವಿದ್ಯಾರ್ಥಿಗಳ ಕಣ್ಣೀರಿಗೆ ನ್ಯಾಯ ಸಿಕ್ಕಿದೆ.

    ಸೋಮವಾರದಿಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸಕಾಲಕ್ಕೆ ಬಸ್‍ನಲ್ಲಿ ಪ್ರಯಾಣ ಮಾಡಬಹುದಾಗಿದ್ದು ಕುಗ್ರಾಮದ ವಿದ್ಯಾರ್ಥಿಗಳಿಗೆ ನ್ಯಾಯ ಸಿಕ್ಕಂತ್ತಾಗಿದೆ. ಈಗಾಗಲೇ ನಾನು ಗ್ರಾಮಕ್ಕೆ ಭೇಟಿ ನೀಡಿದ್ದು ಬಸ್ ನಿಲ್ಲಿಸದೆ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವುದು ಗಮನಕ್ಕೆ ಬಂದಿದೆ. ಈಗಿನಿಂದಲೇ ಬಸ್ ನಿಲ್ಲಿಸಲು ಕೆಎಸ್.ಆರ್.ಟಿಸಿ ಸಿಬ್ಬಂದಿಗೆ ಆದೇಶ ನೀಡಿದ್ದೇವೆ ಅಂತ ಔರಾದ್ ಡಿಪೋ ಮ್ಯಾನೇಜರ್ ಅಶೋಕ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

    https://www.youtube.com/watch?v=aQxF7N7ovys

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಲ್ದಾಣವಿದ್ರೂ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸಲ್ಲ- ಮನೆಗೆ ಹೋಗಲಾಗದೇ ಬಾಲಕಿಯರು ಕಣ್ಣೀರು

    ನಿಲ್ದಾಣವಿದ್ರೂ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸಲ್ಲ- ಮನೆಗೆ ಹೋಗಲಾಗದೇ ಬಾಲಕಿಯರು ಕಣ್ಣೀರು

    – ಸರ್ಕಾರ ಫ್ರೀ ಪಾಸ್ ಕೊಟ್ರೂ ಉಪಯೋಗವಿಲ್ಲ

    ಬೀದರ್: ಸರ್ಕಾರಿ ಶಾಲೆಯ ಮಕ್ಕಳಿಗೆ ಸರ್ಕಾರ ಬಸ್ ಪಾಸ್ ನೀಡಿದೆ. ಆದರೆ ಬಸ್ ಚಾಲಕರು ಹಾಗೂ ನಿರ್ವಾಹಕರು ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿ ಬಸ್ ನಿಲ್ದಾಣಗಳಲ್ಲಿ ನಿಲ್ಲಿಸದೆ ಹೋಗುತ್ತಿದ್ದಾರೆ. ಇದರಿಂದ ಪ್ರತಿದಿನ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳು ರಾತ್ರಿಯಾಗುತ್ತಿದಂತೆ ಬಸ್ ನಿಲ್ದಾಣದಲ್ಲಿ ಅಳುತ್ತಾ ನಿಲ್ಲುವ ಘಟನೆ ಜಿಲ್ಲೆ ಔರಾದ್ ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಅಕ್ಕಪಕ್ಕ ಊರಿನಿಂದ ಸುಮಾರು 120 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಸರ್ಕಾರ ವಿದ್ಯಾರ್ಥಿಗಳಿಗೆ ಎಂದೇ ಉಚಿತ ಬಸ್ ಪಾಸ್ ನೀಡಿದೆ. ಆದರೆ ಇದರ ಉಪಯೋಗ ಮಾತ್ರ ಇಲ್ಲಿನ ವಿದ್ಯಾರ್ಥಿಗಳಿಗೆ ಇದ್ದೂ ಇಲ್ಲದಂತಾಗಿದೆ. ಪ್ರತಿದಿನ ಶಾಲೆ 4.30ಕ್ಕೆ ಬಿಟ್ಟರು ಸಂಜೆ 7 ಗಂಟೆವರೆಗೂ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಇದ್ದು, ಸಂಜೆಯ ವೇಳೆ ಕತ್ತಲು ಆಗುತ್ತಿದ್ದಂತೆಯೇ ಭಯದಿಂದ ಕಣ್ಣೀರು ಹಾಕುತ್ತಿದ್ದಾರೆ. ಇತ್ತ ಮನೆಯಲ್ಲಿ ಪೋಷಕರು ಮಕ್ಕಳು ರಾತ್ರಿಯಾದ್ರೂ ಮನೆಗೆ ಬರಲಿಲ್ಲ ಎಂದು ಭಯ ಭೀತರಾಗುತ್ತಿದ್ದಾರೆ.

    ಸದ್ಯ ಬಸ್ ಚಾಲಕರ, ನಿರ್ವಾಹಕರ ಈ ನಿರ್ಲಕ್ಷ್ಯ ವರ್ತನೆಯಿಂದ ಬಸ್ ಇಲ್ಲದೆ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಈ ಕುರಿತು ಪಬ್ಲಿಕ್ ಟಿವಿ ವಿಸ್ತøತ ವರದಿ ಪ್ರಸಾರ ಮಾಡಿದ್ದು, ಈ ಬಗ್ಗೆ ಕೆಎಸ್‍ಆರ್ ಟಿಸಿ ವಿಭಾಗಿಯ ಅಧಿಕಾರಿಯನ್ನು ಪಬ್ಲಿಕ್ ಟಿವಿ ಸಂಪರ್ಕ ಮಾಡಿದ್ದು, ಆದರೆ ಇಂತಹ ಘಟನೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಉತ್ತರ ನೀಡಿದ್ದಾರೆ.

    ಪಬ್ಲಿಕ್ ಟಿವಿ ವರದಿಯಿಂದ ವಿದ್ಯಾರ್ಥಿಗಳ ಸಮಸ್ಯೆ ನಮ್ಮ ಗಮನಕ್ಕೆ ಬಂದಿದ್ದು, ಈ ಕುರಿತು ನಮಗೆ ದೂರು ಲಭಿಸಿದರೆ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇನೆ. ವಿದ್ಯಾರ್ಥಿಗಳಿಗೆ ಇಂತಹ ಸಮಸ್ಯೆ ಆಗದಂತೆ ತಾಲೂಕು ಡಿಪೋ ಮ್ಯಾನೇಜರ್ ಗೆ ಸೂಚನೆ ನೀಡುತ್ತೇನೆ. ಪ್ರತಿ ದಿನ ಬಸ್ ನಿಲ್ಲಿಸಿ ವಿದ್ಯಾರ್ಥಿಗಳನ್ನು ಕರೆದುಕೊಂಡಿ ಹೋಗಬೇಕು ಅಂತ ಸೂಚನೆ ನೀಡಲಾಗುವುದು. ಬೇರೆ ಯಾವುದೇ ಗ್ರಾಮಕ್ಕೆ ಬಸ್ ಸಮಸ್ಯೆ ಇದ್ದರು ಅದಕ್ಕೆ ಪರಿಹಾರ ನೀಡುವುದಾಗಿ ಕೆಎಸ್‍ಆರ್ ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ ಕೋಟ್ರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆಯರ ಡಬಲ್ ಮರ್ಡರ್ ಪ್ರಕರಣಕ್ಕೆ ಸಿಕ್ತು ಹೊಸ ಟ್ವಿಸ್ಟ್

    ಮಹಿಳೆಯರ ಡಬಲ್ ಮರ್ಡರ್ ಪ್ರಕರಣಕ್ಕೆ ಸಿಕ್ತು ಹೊಸ ಟ್ವಿಸ್ಟ್

    ಬೀದರ್: ಇಂದು ಜಿಲ್ಲೆಯ ಶಾಹಗಂಜ್ ಪ್ರದೇಶದ ಹನುಮಾನ್ ಮಂದಿರದ ಬಳಿ ನಡೆದ ಮಹಿಳೆಯರ ಡಬಲ್ ಮರ್ಡರ್ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.

    ಕೊಲೆ ಮಾಡಿದ ಆರೋಪಿಯನ್ನು ದೇವಪ್ಪ ಎಂದು ಗುರುತಿಸಲಾಗಿದೆ. ಲಲಿತಮ್ಮ (45), ದುರ್ಗಮ್ಮ(60) ಎಂಬ ಇಬ್ಬರನ್ನು ಆರೋಪಿ ದೊಣ್ಣೆಯಿಂದ ಹೊಡದು ಕೊಲೆ ಮಾಡಿದ್ದಾನೆ. ದೇವಪ್ಪ ಹನುಮಾನ್ ದೇವಸ್ಥಾನದ ಕಳ್ಳತನಕ್ಕೆ ಸಂಚು ರೂಪಿಸಿದ್ದನಂತೆ. ಈ ವೇಳೆ ಬೆಳಗ್ಗೆ ವಾಕ್ ಬಂದ ಲಲಿತಮ್ಮ ಮತ್ತು ದುರ್ಗಮ್ಮ, ಯಾರು ನೀನು? ಇಲ್ಲಿ ಏನ್ ಮಾಡ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಭಯಗೊಂಡ ಆರೋಪಿ ಕಲ್ಲು ಮತ್ತು ದೊಣ್ಣೆಯಿಂದ ಇಬ್ಬರನ್ನು ಹೊಡೆದು ಕೊಲೆ ಮಾಡಿದ್ದಾನೆ.

    ದೇವಸ್ಥಾನದ ಕಳ್ಳತನಕ್ಕೆ ಬಂದ ಆರೋಪಿ ಎಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಮಹಿಳೆಯರನ್ನು ಕೊಲೆ ಮಾಡಿದ್ದಾನೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆಯ ಬಳಿಕ ಪ್ರಕರಣದ ಸತ್ಯ ತಿಳಿಯಲಿದೆ ಎಂದು ಎಸ್‍ಪಿ ರವೀಂದ್ರ ಹೇಳಿದ್ದಾರೆ.

    ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಯಲಾಯ್ತು ಪ್ರಹ್ಲಾದ್ ಜೋಷಿ ಆಪ್ತರ ಆಟ

    ಬಯಲಾಯ್ತು ಪ್ರಹ್ಲಾದ್ ಜೋಷಿ ಆಪ್ತರ ಆಟ

    – ನಕಲಿ ದಾಖಲೆ ಸೃಷ್ಟಿಸಿ ವಿವಿಯಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದ ಪರಮಾಪ್ತರು

    ಬೆಂಗಳೂರು: ಬೀದರ್ ನಲ್ಲಿರುವ ಕರ್ನಾಟಕ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಸಂಸದ ಪ್ರಹ್ಲಾದ್ ಜೋಶಿಯವರ ಪರಮಾಪ್ತರು ನಕಲಿ ದಾಖಲೆ ಸೃಷ್ಟಿಸಿ ಹುದ್ದೆ ಪಡೆದುಕೊಂಡಿದ್ದ ವಿಷಯ ಈಗ ಬಯಲಾಗಿದೆ.

    ಧಾರವಾಡದ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿರುವ ಈರೇಶ್ ಅಂಚಟಗೇರಿ ಹಾಗೂ ಟಿ ಮುಕುಂದ ವರ್ಮ ಸುಳ್ಳು ಪ್ರಮಾಣ ಪತ್ರ ಕೊಟ್ಟು ವಿವಿಯಲ್ಲಿ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದರು. ಇವರಿಬ್ಬರೂ ಸಹ ಪ್ರಹ್ಲಾದ್ ಜೋಷಿಯವರ ಬಲಗೈ ಬಂಟರಾಗಿದ್ದಾರೆ.

    ವಿವಿಯಲ್ಲಿ ಪ್ರಗತಿಪರ ಮೀನುಗಾರರು, ರೈತರು ಹಾಗೂ ಶಿಕ್ಷಣ ತಜ್ಞರು ಸದಸ್ಯರಾಗಲು ಅವಕಾಶ ಇದೆ. ಆದರೆ ಇಬ್ಬರೂ ಒಂದು ಬಾರಿ ಪ್ರಗತಿಪರ ರೈತ ಹಾಗೂ ಇನ್ನೊಂದು ಬಾರಿ ಶಿಕ್ಷಣ ತಜ್ಞ ಎಂದು ಹೇಳಿ ಎರಡು ಬಾರಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೇ ಪ್ರಹ್ಲಾದ್ ಜೋಷಿಯವರ ಪ್ರಭಾವದ ಮೂಲಕ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಇದಕ್ಕೆ ರಾಜ್ಯಪಾಲರೂ ಅಂಕಿತ ಹಾಕಿದ್ದರೆನ್ನುವ ಆರೋಪವು ಕೇಳಿ ಬರುತ್ತಿದೆ.

    ವಿವಿ ನಿಯಮಗಳ ಪ್ರಕಾರ ಒಂದು ಬಾರಿ ಮಾತ್ರ ಬೋರ್ಡ್ ಮೆಂಬರ್ ಆಗಿ ಆಯ್ಕೆಯಾಗಬಹುದು. ಆದರೆ ಜೋಷಿ ಆಪ್ತರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ವಿವಿಯ ಬೋರ್ಡ್ ಸದಸ್ಯ ಸ್ಥಾನಗಳು ಕೇವಲ ಪ್ರಗತಿಪರ ರೈತರು, ಮೀನುಗಾರರು ಹಾಗೂ ಶಿಕ್ಷಣ ತಜ್ಞರಿಗೆ ಮೀಸಲಿದೆ. ಆದರೆ ಇವರಿಬ್ಬರೂ ರಾಜಕೀಯ ಪ್ರಭಾರ ಬೀರಿ ತಮ್ಮ ವಶ ಮಾಡಿಕೊಂಡಿದ್ದಾರೆ. ಸದ್ಯ ಜೋಷಿ ಆಪ್ತರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ವಿವಿಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಎಸ್.ಈಶ್ವರಪ್ಪ, ಅರ್ಹರಿಗೆ ಸಿಗಬೇಕಾದ ಹುದ್ದೆಗಳು ಪುಡಾರಿಗಳು, ರಾಜಕೀಯ ಪ್ರಭಾವಿಗಳಿಗೆ ಸಿಗುತ್ತಿವೆ. ರಾಜಕೀಯ ಪ್ರಭಾವ ಬೀರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಎರಡೆರಡು ಬಾರಿ ಸದಸ್ಯರಾಗುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೀದರ್‌ನಲ್ಲಿ ಡಬಲ್ ಮರ್ಡರ್- ವಾಕಿಂಗ್ ಬಂದಿದ್ದ ಮಹಿಳೆಯರ ಭೀಕರ ಹತ್ಯೆ

    ಬೀದರ್‌ನಲ್ಲಿ ಡಬಲ್ ಮರ್ಡರ್- ವಾಕಿಂಗ್ ಬಂದಿದ್ದ ಮಹಿಳೆಯರ ಭೀಕರ ಹತ್ಯೆ

    ಬೀದರ್: ಬೆಳ್ಳಂಬೆಳಗ್ಗೆ ವಾಕಿಂಗ್‍ಗೆಂದು ಬಂದಿದ್ದ ಇಬ್ಬರು ಮಹಿಳೆಯರನ್ನು ದುಷ್ಕರ್ಮಿಯೊಬ್ಬ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಶಾಹಗಂಜ್ ಪ್ರದೇಶದ ಹನುಮಾನ್ ಮಂದಿರ ಬಳಿ ನಡೆದಿದೆ.

    ಲಲಿತಮ್ಮ (60) ಹಾಗೂ ದುರ್ಗಮ್ಮ (50) ಹತ್ಯೆಯಾದ ದುರ್ದೈವಿಗಳು. ಇಂದು ಬೆಳ್ಳಗ್ಗೆ ಎಂದಿನಂತೆ ಲಲಿತಮ್ಮ ಹಾಗೂ ದುರ್ಗಮ್ಮ ಜೊತೆಗೂಡಿ ವಾಕಿಂಗ್‍ಗೆಂದು ಶಾಹಗಂಜ್ ಬಳಿ ಬಂದಿದ್ದರು. ಈ ವೇಳೆ ಹನುಮಾನ್ ಮಂದಿರದ ಬಳಿ ಇದ್ದ ದುಷ್ಕರ್ಮಿಯೊಬ್ಬ ಇಬ್ಬರು ಮಹಿಳೆಯರಿಗೂ ದೊಣ್ಣೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾನೆ.

    ಬೆಳಗಿನ ಜಾವ ಸುಮಾರು 4 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ನೋಡಲು ಮಾನಸಿಕ ಅಸ್ವಸ್ಥನಂತೆ ಕಾಣುವ ಆರೋಪಿಯು ಶನಿವಾರದಿಂದಲು ಹನುಮಾನ್ ಮಂದಿರದ ಬಳಿಯೆ ಇದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಹಿಳೆಯರನ್ನು ಕೊಲೆ ಮಾಡಲು ಕಾರಣವೇನು ಎಂದು ತಿಳಿದುಬಂದಿಲ್ಲ. ಮಹಿಳೆಯರ ಮೇಲೆ ಆರೋಪಿಗೆ ಹಳೇ ದ್ವೇಷವೇನಾದರು ಇರಬಹುದು ಅಥವಾ ಮಹಿಳೆಯರ ಬಳಿ ಧರಿಸಿದ್ದ ಚಿನ್ನಾಭರಣಕ್ಕಾಗಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯ ಹತ್ಯೆ ಆರೋಪಿಯನ್ನು ನ್ಯೂಟೌನ್ ಪೊಲೀಸರು ಬಂಧಿಸಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೀಮ್ಸ್ ವೈದ್ಯರ ನಿರ್ಲಕ್ಷ್ಯ- ಹೊಟ್ಟೆಯಲ್ಲೇ ಮಗು ಸಮೇತ ಗರ್ಭಿಣಿ ಸಾವು

    ಬೀಮ್ಸ್ ವೈದ್ಯರ ನಿರ್ಲಕ್ಷ್ಯ- ಹೊಟ್ಟೆಯಲ್ಲೇ ಮಗು ಸಮೇತ ಗರ್ಭಿಣಿ ಸಾವು

    ಬೀದರ್: ಬೀಮ್ಸ್ ವೈದ್ಯರ ನಿರ್ಲಕ್ಷ್ಯದಿಂದಾಗಿ ಹೊಟ್ಟೆಯಲ್ಲೇ ಮಗು ಸಮೇತ ಗರ್ಭಿಣಿ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದರು.

    ಕಮಲಮ್ಮ (32) ಮೃತ ಗರ್ಭಿಣಿ. ಮೂಲತಃ ಹುಮನಾಬಾದ್ ತಾಲೂಕಿನ ಸಿಂದನಕೇರಾ ಗ್ರಾಮದರಾಗಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಕಮಲಮ್ಮರನ್ನು ಕುಟುಂಬದವರು ಬೀಮ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ವೈದ್ಯರು ಹೆರಿಗೆ ಬಂದಿದ್ದ ಗರ್ಭಿಣಿಗೆ ಚಿಕಿತ್ಸೆ ನೀಡದ್ದರಿಂದ, ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಗರ್ಭಿಣಿ ಸಾವಿಗೆ ಬೀಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಸ್ಪತ್ರೆಯ ಬಳಿ ಮೃತ ಕಮಲಮ್ಮರ ಶವವನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಶವದ ಮುಂದೆ ಪತಿ ಹಾಗೂ ಕುಟುಂಬಸ್ಥರು ಕಣ್ಣೀರಿಡುತ್ತಿರುವ ದೃಶ್ಯ ಮನಕಲಕುವಂತಿದೆ. ಪ್ರತಿಭಟನೆ ನಡೆಸುತ್ತಿರುವ ಕುಟುಂಬಸ್ಥರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವೈದ್ಯಾಧಿಕಾರಿಗಳ ವಿರುದ್ಧ ಘೋಷಣೆಯನ್ನು ಕೂಗುತ್ತಿದ್ದಾರೆ.

    ಸ್ಥಳಕ್ಕೆ ಕೂಡಲೇ ಜಿಲ್ಲಾಧಿಕಾರಿಗಳು ಬರುವಂತೆ ಆಗ್ರಹಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಹರಸಾಹಸ ಪಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೀದರಲ್ಲಿ 200 ಕೋಟಿ ರೂ. ವಂಚನೆ- 4 ಏಜೆಂಟ್‍ಗಳೇ ಆತ್ಮಹತ್ಯೆ

    ಬೀದರಲ್ಲಿ 200 ಕೋಟಿ ರೂ. ವಂಚನೆ- 4 ಏಜೆಂಟ್‍ಗಳೇ ಆತ್ಮಹತ್ಯೆ

    – ಹಣಕ್ಕಾಗಿ ಪರದಾಡ್ತಿದ್ದಾರೆ ಗ್ರಾಹಕರು

    ಬೀದರ್: ಆಂಬಿಡೆಂಟ್ ಪ್ರಕರಣ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ ಬೀದರ್‍ನಲ್ಲಿ ಕಮಿಷನ್ ಆಸೆಗೆ 200 ಕೋಟಿ ಜಮೆ ಮಾಡಿಸಿ ಏಜೆಂಟರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಾರು ಯಾವಾಗ ಬಂದು ಹಲ್ಲೆ ಮಾಡ್ತಾರೆ ಎಂಬ ಭಯಕ್ಕೆ ಈಗಾಗಲೇ 4 ಜನ ಎಜೆಂಟರ್‍ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಹೌದು. ಪಿಎಸಿಎಲ್ ಇಂಡಿಯನ್ ಲಿಮಿಟೆಡ್ ಅನ್ನೋ ಕಂಪನಿ ಕೋಟ್ಯಂತರ ಜನಕ್ಕೆ ಮೋಸ ಮಾಡಿದೆ. ರಿಯಲ್ ಎಸ್ಟೇಟ್ ಇನ್ಸುರೆನ್ಸ್ ಪಾಲಿಸಿ ಮಾಡಿಸಿದ್ರೆ ನಿಮ್ಮ ಹಣ ಡಬಲ್ ಮಾಡಿಕೊಡ್ತೀವಿ. ಕಡಿಮೆ ರೇಟ್‍ಗೆ ಸೈಟ್ ಪಡೆಯಬಹುದು ಹಂಗೆ ಹಿಂಗೆ ಅಂತ ರೀಲ್ ಬಿಟ್ಟು ಜನರಿಗೆ ವಂಚಿಸಿದೆ.

    ಬೀದರ್‍ನಲ್ಲಿ ಕೂಡ 10 ಸಾವಿರ ಏಜೆಂಟರುಗಳು ಜನರಿಂದ ಕೋಟ್ಯಂತರ ರೂ. ಹಣ ಜಮೆ ಮಾಡಿಸಿದ್ದಾರೆ. ಆದ್ರೆ ಕಂಪನಿ ರಾತ್ರೋರಾತ್ರಿ ಜಾಗ ಖಾಲಿ ಮಾಡಿಕೊಂಡು ಹೋಗಿದ್ರಿಂದ ಈಗ ಜನ ನಮ್ ಕಾಸು ವಾಪಸ್ ಕೊಡಿ ಅಂತ ಏಜೆಂಟರುಗಳ ಬೆನ್ನು ಬಿದ್ದಿದ್ದಾರೆ. ಇದ್ರಿಂದ ಭಯಗೊಂಡಿರೋ 4 ಮಂದಿ ಏಜೆಂಟರುಗಳು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳಿದ ಏಜೆಂಟರುಗಳಿಗೂ ಜೀವಭಯ ಶುರುವಾಗಿದೆ ಅಂತ ಏಜೆಂಟ್ ರಮೇಶ್ ಬಚಾರೆ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಸರ್ಕಾರದಿಂದ ಪರವಾನಗಿ ಪಡೆದು ಕಮಿಷನ್ ಆಸೆಗೆ ಕಂಪನಿಗೆ ಸೇರಿಕೊಂಡು ಸರಿಯಾಗಿ ಕೆಲಸ ಮಾಡಿದ್ರೂ ಏಜೆಂಟರುಗಳಿಗೆ ಇದೀಗ ಈ ಗತಿ ಬಂದಿದೆ. ಈಗಾಗಲೇ ಸುಪ್ರೀಂಕೋರ್ಟ್ ಲೋಧಾ ಕಮಿಟಿ ಪಿಎಸಿಎಲ್ ಕಂಪನಿ ಮಾಲೀಕ ನಿರ್ಮಲ್ ಸಿಂಗ್ ಭಂಗು ಆಸ್ತಿಯನ್ನು ಮಾರಾಟ ಮಾಡಿ ಫಲಾನುಭವಿಗಳಿಗೆ ಹಣ ಹಂಚಿಕೆಯಾಗ್ಬೇಕು ಅಂತ ಆದೇಶಿಸಿದೆ. ಆದ್ರೂ ಫಲಾನುಭವಿಗಳಿಗೆ ಹಣ ಕೊಟ್ಟಿಲ್ಲ. ಹಾಗಾಗಿ ಜನರು ಏಜೆಂಟರ ಮನೆ ಬಾಗಿಲಿಗೆ ಬಂದಿದ್ದಾರೆ ಅಂತ ಮತ್ತೊಬ್ಬ ಏಜೆಂಟ್ ಸುನೀಲ್ ಪೂಜಾರಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಒಟ್ಟಿನಲ್ಲಿ ರಾತ್ರೋರಾತ್ರಿ ಜಾಗ ಖಾಲಿ ಮಾಡಿ ಏಜೆಂಟರ್‍ಗಳ ಸಂಕಷ್ಟಕ್ಕೆ ಕಾರಣವಾದ ಕಂಪನಿಯಿಂದ ಆದಷ್ಟು ಬೇಗ ಪರಿಹಾರ ಕೊಡಿಸಿ ಏಜೆಂಟರ್‍ಗಳಿಗೆ ಮುಕ್ತಿ ನೀಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv