Tag: bidar

  • ಮತದಾರರನ್ನು ಸೆಳೆಯಲು ಕೈ, ಕಮಲ ಡ್ಯಾನ್ಸ್ ವಾರ್

    ಮತದಾರರನ್ನು ಸೆಳೆಯಲು ಕೈ, ಕಮಲ ಡ್ಯಾನ್ಸ್ ವಾರ್

    ಬೀದರ್: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕೈ ಕಮಲ ಅಭ್ಯರ್ಥಿಗಳು ಮತ ಸೆಳೆಯಲು ವಿನೂತನ ಪ್ಲಾನ್ ಮಾಡಿದ್ದು, ಗಡಿ ಜಿಲ್ಲೆ ಬೀದರ್ ನಲ್ಲಿ ಮತಬೇಟೆ ನಡೆಸಿರುವ ಉಭಯ ಪಕ್ಷದ ಅಭ್ಯರ್ಥಿಗಳು ಡ್ಯಾನ್ಸ್ ವಾರ್ ಶುರುಮಾಡಿದ್ದಾರೆ.

    ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ಗುರುವಾರದಂದು ನಡೆದಿದೆ. ಇನ್ನೂ ಎರಡನೇ ಹಂತದ ಮತದಾನವೂ ಏ.23ರಂದು ನಡೆಯಲಿದ್ದು, ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಬೀದರ್ ನಲ್ಲಿ ನೃತ್ಯ ತಂಡದಿಂದ ಡ್ಯಾನ್ಸ್ ಮಾಡಿಸಿ ಮತಬೇಟೆ ಮಾಡುತ್ತಿದ್ದಾರೆ. ಜಿಲ್ಲೆಯ ಪ್ರಮುಖ ವೃತ್ತಗಳಲ್ಲಿ ಡ್ಯಾನ್ಸ್ ಮೂಲಕ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

    ಒಂದೆಡೆ ಬಿಜೆಪಿ ಅವರು ನೃತ್ಯತಂಡವನ್ನು ಕರೆಸಿ ತಮ್ಮ ಪರ ಪ್ರಚಾರ ಮಾಡಿಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆ ತವರು ಕ್ಷೇತ್ರದಲ್ಲೂ ಡ್ಯಾನ್ಸ್ ಮೂಲಕ ಮತಬೇಟೆ ಮಾಡಲಾಗುತ್ತಿದೆ. ರಾಹುಲ್ ಗಾಂಧಿಯ ಟಿಶರ್ಟ್ ತೊಟ್ಟು ನೃತ್ಯತಂಡ ಡಾನ್ಸ್ ಮಾಡಿ ಪ್ರಚಾರದಲ್ಲಿ ತೊಡಗಿದ್ದಾರೆ. ಒಟ್ಟಿನಲ್ಲಿ ಎರಡೂ ಪಕ್ಷದವರೂ ಡಾನ್ಸ್ ವಾರ್ ಮಾಡಿ ಜನರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

  • ರಾಜಕೀಯ ವೈರತ್ವ ಮರೆತು ಜೊತೆಗೆ ಕುಣಿದ ಖೂಬಾ, ಖಂಡ್ರೆ – ವಿಡಿಯೋ ನೋಡಿ

    ರಾಜಕೀಯ ವೈರತ್ವ ಮರೆತು ಜೊತೆಗೆ ಕುಣಿದ ಖೂಬಾ, ಖಂಡ್ರೆ – ವಿಡಿಯೋ ನೋಡಿ

    ಬೀದರ್: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಹಿನ್ನೆಲೆ ಬೀದರ್ ನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪಕ್ಷಬೇದ ಮರೆತು ಸಖತ್ ಸ್ಟೆಪ್ಸ್ ಹಾಕಿದ್ದಾರೆ.

    ಲೊಕಸಭಾ ಚುನಾವಣಾ ಗುಂಗು ಮರೆತು ಅಭ್ಯರ್ಥಿಗಳು ಹಾಗೂ ರಾಜಕೀಯ ಮುಖಂಡರು ಖುಷಿಯಿಂದ ಹೆಜ್ಜೆ ಹಾಕಿದ್ದಾರೆ. ಪರಸ್ಪರ ಎದುರಾಳಿಯಾಗಿದ್ದರೂ ಕಾಂಗ್ರೆಸ್ ನಾಯಕ ಈಶ್ವರ ಖಂಡ್ರೆ ಹಾಗೂ ಬಿಜೆಪಿಯ ಭಗವಂತ ಖೂಬಾ ವೈರತ್ವವನ್ನು ಮರೆತು ಕುಣಿದು ಸಂತೋಷ ಪಟ್ಟಿದ್ದಾರೆ. ಅವರಿಗೆ ಸಚಿವ ಬಂಡೆಪ್ಪ ಕಾಶೆಂಪೂರ್, ಎಂಎಲ್‍ಸಿ ವಿಜಯ ಸಿಂಗ್, ಸೇರಿದಂತೆ ಅನೇಕ ರಾಜಕೀಯ ಮುಖಂಡರು ಸಾಥ್ ನೀಡಿದರು.

    ಇಂದು ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ ಹಿನ್ನೆಲೆ ಬೀದರ್ ನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭಾಗಿಯಾಗಿದ್ದರು. ಈ ವೇಳೆ ಎಲ್ಲಾ ಪಕ್ಷದ ನಾಯಕರು ಒಟ್ಟಾಗಿ ಕುಣಿದು ಲೋಕಸಭಾ ಚುನಾವಣಾ ಪ್ರಚಾರದಿಂದ ಕೊಂಚ ರಿಲೀಫ್ ಪಡೆದಿದ್ದಾರೆ.

  • ಬೀದರ್ ಜನರಿಗೆ ತಂಪೆರೆದ ವರುಣ – ಸಿಡಿಲಿಗೆ ಯುವಕ ಬಲಿ

    ಬೀದರ್ ಜನರಿಗೆ ತಂಪೆರೆದ ವರುಣ – ಸಿಡಿಲಿಗೆ ಯುವಕ ಬಲಿ

    ಬೀದರ್: ಸುಡು ಬಿಸಿಲಿನಿಂದ ಬಸವಳಿದಿದ್ದ ಗಡಿ ಜಿಲ್ಲೆ ಬೀದರ್‍ನ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.

    ಬಿಸಿಲ ಬೇಗೆಯಿಂದ ಬೀದರ್ ಜನತೆ ತತ್ತರಿಸಿ ಹೋಗಿದ್ದರು. ಈಗ ಆಕಾಲಿಕ ಮಳೆಯಿಂದ ಜನ ಫುಲ್ ಖುಷ್ ಆಗಿದ್ದಾರೆ. ಹಲವು ನಿಮಿಷಗಳ ಕಾಲ ಗುಡುಗು, ಸಿಡಿಲು ಸಹಿತ ಅಕಾಲಿಕ ಮಳೆ ಆಗಿದೆ.

    ಬೀದರ್ ತಾಲೂಕಿನ ಚಿರ್ಲಗಿ ಗ್ರಾಮದಲ್ಲಿ ಸಿಡಿಲಿಗೆ ಯುವಕನೊಬ್ಬ ಮೃತಪಟ್ಟಿದ್ದಾನೆ. 26 ವರ್ಷದ ರಾಮು ಸಿಡಿಲಿಗೆ ಬಲಿಯಾದ ಯುವಕ. ರಾಮು ಜಮೀನಿಗೆ ಹೋದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಈ ಬಗ್ಗೆ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು, ಸಿಡಿಲು ಸಹಿತ ಅಕಾಲಿಕ ಮಳೆಯಾಗಿದೆ.

  • ಬೀದರ್ ಅಬಕಾರಿ ಪೊಲೀಸರ ಕಾರ್ಯಾಚರಣೆ – 4.13 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿ

    ಬೀದರ್ ಅಬಕಾರಿ ಪೊಲೀಸರ ಕಾರ್ಯಾಚರಣೆ – 4.13 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿ

    ಬೀದರ್: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು ಇಲ್ಲಿಯವರೆಗೆ ಒಟ್ಟು 4.13 ಕೋಟಿ ರೂ. ಮೌಲ್ಯದ ಮದ್ಯವನ್ನು ಬೀದರ್‍ನ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದಿದ್ದಾರೆ.

    29 ಚೆಕ್ ಪೋಸ್ಟ್‍ಗಳಲ್ಲಿ ತಪಾಸಣೆ ಸೇರಿದಂತೆ ಮೂರು ದಿನಗಳಲ್ಲಿ 83 ದಾಳಿ ಮಾಡಿದ್ದಾರೆ. ದಾಳಿ ಮಾಡಿ 31 ಪ್ರಕರಣ ದಾಖಲಿಸಿಕೊಂಡು, 27 ಆರೋಪಿಗಳನ್ನು ಬಂಧಿಸಿದ್ದಾರೆ.

    ಒಟ್ಟು 255 ಲೀಟರ್ ಮದ್ಯ, 900 ಲೀಟರ್ ಶೆಂದಿ ಹಾಗೂ 5 ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 4.75 ಲಕ್ಷ ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಚುನಾವಣಾಧಿಕಾರಿ ಎಚ್.ಆರ್ ಮಹಾದೇವ್ ಮಾರ್ಗದರ್ಶನ ಹಾಗೂ ಅಬಕಾರಿ ಡಿಸಿ ಶಿವಪ್ರಸಾದ್ ನೇತೃತ್ವದಲ್ಲಿ ದಾಳಿಗಳನ್ನು ಮಾಡಲಾಗಿದೆ.

  • ಸುಡು ಬಿಸಿಲು ಲೆಕ್ಕಿಸದೇ ಪತಿರಾಯರ ಪರ ಪ್ರಚಾರ ಆರಂಭಿಸಿದ ಪತ್ನಿಯರು

    ಸುಡು ಬಿಸಿಲು ಲೆಕ್ಕಿಸದೇ ಪತಿರಾಯರ ಪರ ಪ್ರಚಾರ ಆರಂಭಿಸಿದ ಪತ್ನಿಯರು

    ಬೀದರ್: ಸುಡು ಬಿಸಿಲನ್ನೂ ಲೆಕ್ಕಿಸದೇ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪತ್ನಿಯರು ಪ್ರಚಾರ ಆರಂಭಿಸಿದ್ದಾರೆ.

    ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬೀದರ್ ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದ್ದು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪರ ಅವರ ಪತ್ನಿಯರು ಫೀಲ್ಡಿಗೆ ಇಳಿದು ಮತ ಬೇಟೆಯಲ್ಲಿ ತೊಡಗಿದ್ದಾರೆ.

    ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪತ್ನಿ ಡಾ. ಗೀತಾ ಖಂಡ್ರೆ ಪ್ರತಿ ಮನೆ-ಮನೆಗೆ ತೆರಳಿ ಪತಿ ಪರ ಮತ ಹಾಕುವಂತೆ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.

    ಈ ಕಡೆ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಪತ್ನಿ ಶೀಲಾ ಖೂಬಾ ಕೂಡ ಮಹಿಳಾ ತಂಡದ ಜೊತೆ ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ಮಾಡುತ್ತಿದ್ದಾರೆ. ಪತಿ ಭಗವಂತ್ ಖೂಬಾ ಪರ ಮತ ಹಾಕಿ ಎಂದು ಶೀಲಾ ಖೂಬಾ ಪ್ರಚಾರ ನಡೆಸುತ್ತಿದ್ದಾರೆ.

  • ಸಚಿವ ರಹೀಂಖಾನ್‍ಗೆ ‘ಕೈ’ ಕಾರ್ಯಕರ್ತನಿಂದ್ಲೇ ಫುಲ್ ಕ್ಲಾಸ್!

    ಸಚಿವ ರಹೀಂಖಾನ್‍ಗೆ ‘ಕೈ’ ಕಾರ್ಯಕರ್ತನಿಂದ್ಲೇ ಫುಲ್ ಕ್ಲಾಸ್!

    ಬೀದರ್: ಈಶ್ವರ್ ಖಂಡ್ರೆಗೆ ಮತ ಹಾಕಿ ಎಂದ ಸಚಿವ ರಹೀಂಖಾನ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರೇ ಕ್ಲಾಸ್ ತೆಗೆದುಕೊಂಡಿರುವ ಘಟನೆ ನಡೆದಿದೆ.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆಗೆ ಮತ ಹಾಕಿ ಎಂದು ಸಚಿವ ರಹೀಂಖಾನ್ ಕಾರ್ಯಕರ್ತರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಸಚಿವರ ವಿರುದ್ಧ ಅಸಮಾಧಾನ ಸ್ಫೋಟಗೊಂಡಿದ್ದು, ಅಭಿವೃದ್ಧಿ ವಿಷಯಕ್ಕೆ ಕಾರ್ಯಕರ್ತರು ತರಾಟೆ ತೆಗೆದುಕೊಂಡಿದ್ದರು. ಕೊನೆಗೆ ಕಾರ್ಯಕರ್ತ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಸಚಿವರು ತಡವರಿಸಿದ್ದಾರೆ.

    ನೀವು ಒಂದು ರೂಪಾಯಿ ಕೆಲಸವನ್ನ ನಮ್ಮ ಗಲ್ಲಿಗೆ ಮಾಡಿದ್ದೀರಾ? ನೀವು ಕಾರ್ಯಕರ್ತರಿಗೆ ಒಂದು ರೂಪಾಯಿ ಮರ್ಯಾದೆ ಕೊಟ್ರೆ ನಾವು ಕೊಡುತ್ತೀವಿ, ಮೊದಲು ನಮ್ಮ ವಾರ್ಡ್ ಗಳಲ್ಲಿ ಕಾಂಗ್ರೆಸ್ 70 ಮತಗಳನ್ನ ಕಾಂಗ್ರೆಸ್ ಪಡಿಯುತ್ತಿತ್ತು. ಆದರೆ ಈಗ 500ಕ್ಕೂ ಹೆಚ್ಚು ಮತಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ನೀವು ಮಾಡಿದ ಅಭಿವೃದ್ಧಿ ಕೆಲಸ ಏನು ಅಂತ ಕಾರ್ಯಕರ್ತನೊಬ್ಬ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  • ಬೀದರ್‌ನಲ್ಲಿ ಮೈತ್ರಿ ಜೋಡೆತ್ತುಗಳ ಶಕ್ತಿ ಪ್ರದರ್ಶನ

    ಬೀದರ್‌ನಲ್ಲಿ ಮೈತ್ರಿ ಜೋಡೆತ್ತುಗಳ ಶಕ್ತಿ ಪ್ರದರ್ಶನ

    ಬೀದರ್: ಬೆಂಗಳೂರಲ್ಲಿ ಬೃಹತ್ ಶಕ್ತಿ ಪ್ರದರ್ಶನದ ಬಳಿಕ ಈಗ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬೀದರ್ ನಲ್ಲಿ ಜೊತೆಯಾಗಲಿದ್ದಾರೆ.

    ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ಜೊತೆ ಮೆರವಣಿಗೆ ಮೂಲಕ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮ್ಯ ಇಬ್ಬರೂ ಪಾಲ್ಗೊಳ್ಳಲಿದ್ದಾರೆ.

    ನ್ಯಾಷನಲ್ ಕಾಲೇಜ್ ಆವರಣದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಏರ್ಪಡಿಸಲಾಗಿದೆ. ಉಮೇದುವಾರಿಕೆ ಬಳಿಕ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆಯುವ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಜಂಟಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ರಾಜಶೇಖರ ಪಾಟೀಲ್, ರಹಿಮ್ ಖಾನ್ ಮತ್ತು ಬಂಡೆಪ್ಪ ಕಾಶೆಂಪೂರ್ ಕೂಡಾ ಸಾಥ್ ನೀಡಲಿದ್ದಾರೆ. ಈಶ್ವರ ಖಂಡ್ರೆ ನಾಮಪತ್ರ ಸಲ್ಲಿಸುವ ವೇಳೆ ಸಮ್ಮಿಶ್ರ ಸರ್ಕಾರದ ಶಕ್ತಿ ಪ್ರದರ್ಶನ ತೋರಿಸಲು ಮುಂದಾಗಿದ್ದು, ಮೆರವಣಿಗೆಯಲ್ಲಿ 50 ಸಾವಿರ ಜನರು ಭಾಗಿಯಾಗುವ ನಿರೀಕ್ಷೆ ಇದೆ.

  • ಬೀದರ್‌ನಲ್ಲಿ ಕಾಂಗ್ರೆಸ್‍ಗಿಲ್ಲ ಮುಸ್ಲಿಂ ಸಮುದಾಯದ ವೋಟ್!

    ಬೀದರ್‌ನಲ್ಲಿ ಕಾಂಗ್ರೆಸ್‍ಗಿಲ್ಲ ಮುಸ್ಲಿಂ ಸಮುದಾಯದ ವೋಟ್!

    – ನೋಟಾ ಆಂದೋಲನಕ್ಕೆ ಅಲ್ಪಸಂಖ್ಯಾತರ ನಿರ್ಧಾರ!

    ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಅಲ್ಪಸಂಖ್ಯಾತ ವೋಟ್ ಬೀಳುವುದಿಲ್ಲ ಎನ್ನುವುದು ಭಾರೀ ಚರ್ಚೆಯಾಗುತ್ತಿದೆ.

    ಹೌದು. ಬೀದರ್ ಲೋಕಸಭಾ ಕ್ಷೇತ್ರದಿಂದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕೆಂದು ಜಿಲ್ಲೆಯ ಮುಸ್ಲಿಂ ಸಮುದಾಯದವರು ಕಾಂಗ್ರೆಸ್ ನಾಯಕರಿಗೆ ಒತ್ತಾಯಿಸಿದ್ದರು. ಆದರೆ ಲಿಂಗಾಯತ ಸಮುದಾಯದ ಈಶ್ವರ್ ಖಂಡ್ರೆ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಬೀದರ್ ಜಿಲ್ಲೆಯ 3 ಲಕ್ಷಕ್ಕೂ ಅಧಿಕ ಮುಸ್ಲಿಮರು ಕಾಂಗ್ರೆಸ್‍ಗೆ ಮತ ಹಾಕದಿರಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಅಲ್ಪಸಂಖ್ಯಾತ ಕೋಟಾದಲ್ಲಿ ಮನ್ನಾನ್ ಸೇಠ್, ಅಯಾಜ್ ಖಾನ್, ಸಿಎಂ ಇಬ್ರಾಹಿಂ ಸೇರಿದಂತೆ ಹಲವು ಮುಸ್ಲಿಂ ನಾಯಕರ ಹೆಸರುಗಳು ಕೇಳಿ ಬಂದಿದ್ದವು. ಆದರೆ ಅವರನ್ನು ಕಡೆಗಣಿಸಿ ಈಶ್ವರ್ ಖಂಡ್ರೆ ಅವರ ಹೆಸರನ್ನು ಈಗಾಗಲೇ ಫೈನಲ್ ಮಾಡಲಾಗಿದೆ. ಇದರಿಂದಾಗಿ ಅಲ್ಪಸಂಖ್ಯಾತ ಮುಖಂಡರು ಸಭೆ ನಡೆಸಿ ಕಾಂಗ್ರೆಸ್ ಪಕ್ಷ ಸೇರಿದಂತೆ ಯಾವುದೇ ಪಕ್ಷಕ್ಕೂ ಮತ ಹಾಕದಿರಲು ತೀರ್ಮಾನಿಸಿದ್ದು, ನೋಟಾ ಅಭಿಯಾನ ಆರಂಭಿಸಿದ್ದಾರೆ.

    ಬೀದರ್ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿವಂತೆ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್, ಸಚಿವರಾದ ಬಂಡೆಪ್ಪ ಖಾಶೆಂಪೂರ್, ಜಮ್ಮಿರ್ ಅಹಮ್ಮದ್ ಸೇರಿದಂತೆ ಅನೇಕರಿಗೆ ಮನವಿ ಸಲ್ಲಿಸಿದ್ದೇವು. ಆದರೆ ಯಾವುದೇ ನಾಯಕರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎಂದು ಮುಸ್ಲಿಂ ಮುಖಂಡರು ಮಿರ್ಜಾ ಶೆಫಿ ಬೇಸರ ವ್ಯಕ್ತಪಡಿಸಿದರು.

    ಬೀದರ್ ಕ್ಷೇತ್ರದಲ್ಲಿ ಪ್ರಚಾರಕ್ಕೆ ಸಿಎಂ ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾವುದೇ ನಾಯಕರು ಬಂದರೂ ನಾವು ಬೆಂಬಲ ನೀಡುವುದಿಲ್ಲ. ಪ್ರಚಾರವನ್ನು ನಿಲ್ಲಿಸುತ್ತೇವೆ. ಬಿಜೆಪಿ ಸೇರಿದಂತೆ ಯಾವುದೇ ಪಕ್ಷ, ಅಭ್ಯರ್ಥಿಗೆ ಬೆಂಬಲ ನೀಡುವುದಿಲ್ಲ ಎಂದು ಮಿರ್ಜಾ ಶೆಫಿ ಅಸಮಾಧಾನ ಹೊರ ಹಾಕಿದರು.

    ಕಾಂಗ್ರೆಸ್‍ಗೆ ನಮ್ಮ ವೋಟ್ ಬೇಕು. ಆದರೆ ನಮ್ಮ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಲ್ಲ. ಇದು ಯಾವ ಪ್ರಜಾಪ್ರಭುತ್ವ? ಹೆಚ್ಚು ಅಲ್ಪಸಂಖ್ಯಾತರು ಇರುವುದು ಬೀದರ್ ನಲ್ಲಿ. ಆದರೆ ಕಾಂಗ್ರೆಸ್ ಇದನ್ನು ಪರಿಗಣಿಸಲಿಲ್ಲ ಎಂದು ನಗರಸಭೆ ಸದಸ್ಯ ಅಬ್ದುಲ್ ಅಜೀಜ್ ಕಿಡಿಕಾರಿದ್ದಾರೆ.

  • ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿ

    ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿ

    ಬೀದರ್: ವೈದ್ಯರ ನಿರ್ಲಕ್ಷ್ಯದಿಂದ ಹಸಗೂಸು ಸಾವನ್ನಪ್ಪಿದೆ ಎಂದು ಬ್ರಿಮ್ಸ್ ಆಸ್ಪತ್ರೆ ವೈದ್ಯರ ವಿರುದ್ಧ ಮಗುವಿನ ಪೋಷಕರು ಆರೋಪಿಸಿದ್ದಾರೆ.

    ಎರಡು ದಿನಗಳ ಹಿಂದೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಮಗುವನ್ನು ಹೆತ್ತವರು ದಾಖಲಿಸಿದ್ದರು. ಆಗ ಆಸ್ಪತ್ರೆಯ ವೈದ್ಯರು ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದರು. ಬುಧವಾರ ನಿಮ್ಮ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಆದ್ರೆ ಇಂದು ಮಗು ಸಾವನ್ನಪ್ಪಿದೆ ಎಂದಿದ್ದಾರೆ. ಮಗು ಮೃತಪಡಲು ವೈದ್ಯರ ನಿರ್ಲಕ್ಷ್ಯವೇ ಕಾರಣ. ನಿನ್ನೆ ಆರೋಗ್ಯವಾಗಿದ್ದ ಮಗು ಇಂದು ಸಾವನ್ನಪ್ಪಿದೆ ಎಂದರೇ ಏನರ್ಥ ಎಂದು ಹೆತ್ತವರು ಕಣ್ಣೀರಿಡುತ್ತಿದ್ದಾರೆ.

    ಸದ್ಯ ಬ್ರೀಮ್ಸ್ ಆಸ್ಪತ್ರೆ ಮುಂದೆ ಮಗುವಿನ ಹೆತ್ತವರು ಹಾಗೂ ಸಂಬಂಧಿಕರು ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿಯಾಗಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಾವನ್ನೇ ಗೆದ್ದು ಬಂದ ವೀರಯೋಧನಿಗೆ ಬೀದರ್‌ನಲ್ಲಿ ಅದ್ಧೂರಿ ಸ್ವಾಗತ

    ಸಾವನ್ನೇ ಗೆದ್ದು ಬಂದ ವೀರಯೋಧನಿಗೆ ಬೀದರ್‌ನಲ್ಲಿ ಅದ್ಧೂರಿ ಸ್ವಾಗತ

    ಬೀದರ್: ಜಮ್ಮು-ಕಾಶ್ಮೀರದ ಪುಲ್ವಾಮಾ ಬಳಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಸಾವನ್ನೇ ಗೆದ್ದು ಬಂದ ಯೋಧನಿಗೆ ಗಡಿ ಜಿಲ್ಲೆ ಬೀದರ್ ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ಮನೋಹರ್ ರಾಥೋಡ್ ಸಾವನ್ನೇ ಗೆದ್ದು ಬಂದ ಯೋಧ. ಮನೋಹರ್ ರಾಥೋಡ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾಲಾಲ್ ತಾಂಡ ನಿವಾಸಿ. ಪುಲ್ವಾಮಾ ಬಳಿ ಉಗ್ರರು ಮಾಡಿದ ದಾಳಿಯಲ್ಲಿ ಮನೋಹರ್ ಹಿಂಬದಿ ಬಸ್ಸಿನಲ್ಲಿ ಬರುತ್ತಿದ್ದರು.

    ಉಗ್ರರ ದಾಳಿಯಿಂದ ಮನೋಹರ್ ರಾಥೋಡ್ ಬಚಾವ್ ಆಗಿದ್ದಾರೆ. ಹಾಗಾಗಿ ಮನೋಹರ್ ಅವರನ್ನು ನಗರದ ನೌಬಾದ್ ವೃತ್ತ ದವರೆಗೆ ಯುವಕರು ಬೈಕ್ ರ‍್ಯಾಲಿ ನಡೆಸಿ ಸಾರ್ವಜನಿಕವಾಗಿ ಗೌರವ ನೀಡಿದರು. ಅಲ್ಲದೆ ಬಸವೇಶ್ವರ ವೃತ್ತದಲ್ಲಿ ಬಸವಣ್ಣನ ಪ್ರತಿಮೆಗೆ ಹಾರ ಹಾಕುವ ಮೂಲಕ ಯೋಧ ಮನೋಹರ್ ನಗರಕ್ಕೆ ಎಂಟ್ರಿ ಕೊಟ್ಟರು.

    ಫೆ.14 ರಂದು ಉಗ್ರ ಆದಿಲ್ ದಾರ್ ಸ್ಫೋಟಕ ತುಂಬಿದ್ದ ಮಾರುತಿ ಇಕೋ ಕಾರನ್ನು ಸಿಆರ್ ಪಿಎಫ್ ಯೋಧರಿದ್ದ ಬಸ್ಸಿಗೆ ಗುದ್ದಿದ್ದಾನೆ. ಪರಿಣಾಮ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಬಳಿಕ ಭಾರತೀಯ ವಾಯುಪಡೆ ಪುಲ್ವಾಮ ದಾಳಿಯ ಪ್ರತಿಕಾರ ತೀರಿಸಿಕೊಳ್ಳಲು ಏರ್ ಸ್ಟ್ರೈಕ್ ನಡೆಸಿ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv