Tag: bidar

  • ವಸತಿ ಶಾಲೆಯಲ್ಲಿ ತಿನ್ನಲು ಅನ್ನ ಸಿಗದೆ ವಿದ್ಯಾರ್ಥಿಗಳ ಕಣ್ಣೀರು

    ವಸತಿ ಶಾಲೆಯಲ್ಲಿ ತಿನ್ನಲು ಅನ್ನ ಸಿಗದೆ ವಿದ್ಯಾರ್ಥಿಗಳ ಕಣ್ಣೀರು

    ಬೀದರ್: ವಸತಿ ಶಾಲೆಯ ಮಕ್ಕಳು ತಿನ್ನಲು ಅನ್ನ ಸಿಗದೆ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದ್ದು, ಪ್ರಾಂಶುಪಾಲರು ಹಾಗೂ ಡಿ ಗ್ರೂಪ್ ನೌಕರರು ವಿದ್ಯಾರ್ಥಿಗಳಿಗೆ ಊಟ ಹಾಕದೆ ದರ್ಬಾರ್ ನಡೆಸುತ್ತಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪಳ್ಳಿ ಗ್ರಾಮದಲ್ಲಿರುವ ವಸತಿ ಶಾಲೆಯಲ್ಲಿ ನಡೆದಿದೆ.

    ವನಮಾರಪಳ್ಳಿ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯ 450ಕ್ಕೂ ಹೆಚ್ಚು ಮಕ್ಕಳಿಗೆ ತಿನ್ನಲು ಅನ್ನ ಸಿಗದೆ ಪ್ರತಿದಿನ ನರಕಯಾತನೆ ಪಡುತ್ತಿದ್ದಾರೆ. ಸರ್ಕಾರದಿಂದ ಲಕ್ಷಾಂತರ ರೂ. ಅನುದಾನ ಬಂದರೂ ಮಕ್ಕಳಿಗೆ ಮಾತ್ರ ಊಟ, ಆಸನಗಳು ಸೇರಿದಂತೆ ಮೂಲಭೂತ ಸೌಕರ್ಯ ನೀಡದೆ ಮಹಾ ದೋಖಾ ಮಾಡುತ್ತಿದ್ದಾರೆ. ಅನ್ನ ನೀಡಿದರೂ ಅದರಲ್ಲಿ ಹುಳಗಳು ಇಲ್ಲಾ ಕೆಟ್ಟು ಹೋಗಿರುವ ಅನ್ನ ನೀಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪ ಮಾಡುತ್ತಿದ್ದಾರೆ. ಜೊತೆಗೆ ಮಕ್ಕಳಿಗೆ ಆಸನದ ವ್ಯವಸ್ಥೆ ಕೂಡ ಇಲ್ಲದೆ ನೆಲದ ಮೇಲೆ ನಿದ್ದೆ ಮಾಡಬೇಕಾಗಿದೆ.

    ವಸತಿ ಶಾಲೆಯ ಮುಖ್ಯಸ್ಥ ಪ್ರಕಾರ, ಪ್ರತಿದಿನ ಒಂದೊಂದು ವಿವಿಧ ಆಹಾರವನ್ನು ಮಕ್ಕಳಿಗೆ ನೀಡಬೇಕು. ಆದರೆ ಇಲ್ಲಿಯ ಮಕ್ಕಳಿಗೆ ಅನ್ನವನ್ನೇ ಸರಿಯಾಗಿ ನೀಡುತ್ತಿಲ್ಲ. ಪ್ರತಿ ವರ್ಷ ವಸತಿ ಶಾಲೆಗೆ ಲಕ್ಷಾಂತರ ರೂ. ಅನುದಾನ ಬಂದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತ್ರ ಭ್ರಷ್ಟಾಚಾರಕ್ಕೆ ಆಹುತಿಯಾಗಿ ಬಿಟ್ಟಿದ್ದಾರೆ.

    ಪ್ರತಿದಿನ ವಸತಿ ಶಾಲೆಯ ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದರೂ ಸ್ವಕ್ಷೇತ್ರದ ಸಚಿವರಾದ ಪ್ರಭು ಚವ್ಹಾಣ್ ಮಾತ್ರ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಸಚಿವರ ಗ್ರಾಮದಿಂದ ಕೂಗಳತೆ ದೂರದಲ್ಲಿರುವ ಈ ವಸತಿ ನಿಲಯದ ಮಕ್ಕಳ ಗೋಳು ಕೇಳದ ಸಚಿವರು ಏಕೆ ಸಚಿವ ಸ್ಥಾನದಲ್ಲಿ ಮುಂದುವರೆಯುತ್ತಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ಪ್ರಾಂಶುಪಾಲರನ್ನು ಪ್ರಶ್ನಿಸಿದರೆ, ಇದೆಲ್ಲಾ ಡಿ ಗ್ರೂಪ್ ನೌಕರರ ಸಮಸ್ಯೆಯಿಂದ ಆಗಿದೆ ನನ್ನ ದರ್ಬಾರ್ ಏನು ಇಲ್ಲಾ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

  • ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಫೈನಲಿಗೆ ಬೀದರ್ ಬೆಡಗಿ ಆಯ್ಕೆ

    ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಫೈನಲಿಗೆ ಬೀದರ್ ಬೆಡಗಿ ಆಯ್ಕೆ

    ಬೀದರ್: ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಫೈನಲ್ ಗೆ ಗಡಿ ಜಿಲ್ಲೆಯ ಕುಗ್ರಾಮದ ಬೆಡಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮಿಸ್ ಇಂಡಿಯಾ ಪಿಸ್ತಾ ಫೈನಲಿಗೆ ಜಿಲ್ಲೆಯ ಹಾಗೂ ರಾಜ್ಯದ ಏಕೈಕ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಗಡಿ ಜಿಲ್ಲೆ ಬೀದರಿನ ದುಮ್ಮಸ್ನೂರು ಎಂಬ ಕುಗ್ರಾಮ ನಿವಾಸಿಯಾಗಿರೋ ನಿಶಾ ತಾಳಂಪಳ್ಳಿ, 2019 ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಫೈನಲ್ ಗೆ ಆಯ್ಕೆಯಾಗಿದ್ದಾರೆ. ಪಿಯುಸಿ ವರೆಗೆ ಜಿಲ್ಲೆಯಲ್ಲೇ ಶಿಕ್ಷಣ ಮುಗಿಸಿರುವ ನಿಶಾ, ನಂತರ ಹೈದರಾಬಾದ್ ನಲ್ಲಿ ಡಿಪ್ಲೊಮಾ ಇನ್ ಎವಿಎಷನ್ ಮಾಡಿದ್ದಾರೆ. ಹೈದರಾಬಾದ್ ನಲ್ಲಿ ಒಂದು ತಿಂಗಳ ಕಾಲ ನಡೆದ ಇಂಡಿಯನ್ ಫ್ಯಾಷನ್ ಪಿಸ್ತಾ ಆಡಿಷನ್ ನಲ್ಲಿ ಭಾಗಿಯಾಗಿ ಕೊನೆಗೂ ಮಿಸ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.

    ಈ ಸ್ಪರ್ಧೆಗೆ ಆಯ್ಕೆಯಾದ ಬೀದರ್ ನ ಮೊದಲಿಗರು ಹಾಗೂ ರಾಜ್ಯದ ಏಕೈಕ ಯುವತಿಯಾಗಿದ್ದಾರೆ. ಮುಂದಿನ ತಿಂಗಳು ನವೆಂಬರ್ 18 ರಂದು ಫೈನಲ್ ಹಣಾಹಣಿ ನಡೆಯಲಿದ್ದು, 30 ಸ್ಪರ್ಧಿಗಳ ಪೈಕಿ ಒಬ್ಬರನ್ನು ಮಿಸ್ ಇಂಡಿಯಾ ಎಂದು ಘೋಷಣೆ ಮಾಡಲಿದ್ದಾರೆ.

    ನಿಶಾ ಈ ಸ್ಪರ್ಧೆಗೆ ಆಯ್ಕೆಯಾಗಿದ್ದು, ಇದೀಗ ಬೀದರ್ ರಾಜ್ಯ ಹಾಗೂ ದೇಶದ ಜನ ಹೆಮ್ಮೆ ಪಡುವಂತಾಗಿದೆ. ಫೈನಲ್ ಸ್ಪರ್ಧೆಯಲ್ಲಿ ನಿಶಾ ಗೆದ್ದು ಬರಲಿ ಎಂದು ಎಲ್ಲರೂ ಹರಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುವ ಮೂಲಕ ನನಗೆ ಸಪೋರ್ಟ್ ಮಾಡಿ ಎಂದು ನಿಶಾ ಮನವಿ ಮಾಡಿಕೊಳ್ಳುತ್ತಿದ್ದಾರೆ.

  • ವಾರದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಇಂದು ಅಸ್ಥಿಪಂಜರವಾಗಿ ಪತ್ತೆ

    ವಾರದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಇಂದು ಅಸ್ಥಿಪಂಜರವಾಗಿ ಪತ್ತೆ

    ಬೀದರ್: ಹಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಕೊಲೆಯಾಗಿ ಪತ್ತೆಯಾಗಿದ್ದು, ಅಸ್ಥಿಪಂಜರ ಔರಾದ್ ತಾಲೂಕಿನ ಆಲೂರು ಬಳಿಯ ಶಿವಾರ ದಟ್ಟ ಅರಣ್ಯ ಪ್ರದೇಶದಲ್ಲಿ ವಾಗಿ ಪತ್ತೆಯಾಗಿದೆ.

    ವಾರದ ಹಿಂದಷ್ಟೇ ನಾಪತ್ತೆಯಾಗಿದ್ದ ಕಲ್ಲಪ್ಪ ವಿಠಲ (23) ಇಂದು ಅಸ್ಥಿಪಂಜರವಾಗಿ ಪತ್ತೆಯಾಗಿದ್ದಾರೆ. ವಾರದ ಹಿಂದೆ ಮನೆಯಿಂದ ಹೋದ ಕಲ್ಲಪ್ಪ ಮನೆಗೆ ವಾಪಸ್ ಬಂದ್ದಿರಲಿಲ್ಲ. ಎಲ್ಲೋ ಹೋಗಿರಬಹುದು ಎಂದು ಕುಟುಂಬದವರು ಸುಮ್ಮನೇ ಇದ್ದರು. ಆದರೆ ವಾರದ ಬಳಿಕ ಬಾರದ ಗಂಡನನ್ನು ಹುಡುಕಿ ಕೊಡುವಂತೆ ಎರಡು ದಿನಗಳ ಹಿಂದೆ ಕಲ್ಲಪ್ಪನ ಪತ್ನಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

    ಪತ್ನಿಯ ದೂರಿನ ಆಧಾರದ ಮೇಲೆ ತನಿಖೆ ಆರಂಭ ಮಾಡಿದ ಪೊಲೀಸರಿಗೆ ಸ್ಥಳೀಯರು ಅರಣ್ಯದಲ್ಲಿ ಅಸ್ಥಿಪಂಜರ ಸಿಕ್ಕಿದೆ ಎಂದು ಹೇಳಿದ್ದಾರೆ. ಅದ್ದರಿಂದ ಸ್ಥಳಕ್ಕೆ ಹೋದ ಪೊಲೀಸರು ಕಲ್ಲಪ್ಪ ಅವರ ಪತ್ನಿಯನ್ನು ಕರೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಸಿಕ್ಕ ಚಪ್ಪಲಿ ಮತ್ತು ಬಟ್ಟೆಯನ್ನು ನೋಡಿದ ಪತ್ನಿ ಇದು ನನ್ನ ಪತಿಯದ್ದೆ ಎಂದು ಗುರುತಿಸಿದ್ದಾರೆ

    ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಸಂತಪೂರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೇವಿನ ಮರದಿಂದ ನಿರಂತರವಾಗಿ ಸುರಿಯುತ್ತಿರುವ ಹಾಲು- ಸ್ಥಳೀಯರಿಂದ ಪೂಜೆ

    ಬೇವಿನ ಮರದಿಂದ ನಿರಂತರವಾಗಿ ಸುರಿಯುತ್ತಿರುವ ಹಾಲು- ಸ್ಥಳೀಯರಿಂದ ಪೂಜೆ

    ಬೀದರ್: ಭೀಕರ ಬರಗಾಲದಿಂದ ಬೆಂದು ಹೋಗಿರುವ ಬಿಸಿಲುನಾಡು ಬೀದರ್ ನಲ್ಲಿ ಪ್ರಕೃತಿ ವಿಸ್ಮಯ ತೊರಿಸಿದೆ. ಬೇವಿನ ಮರದಿಂದ ಹಾಲು ನಿರಂತರವಾಗಿ ಹರಿಯುತ್ತಿದ್ದು ಸ್ಥಳೀಯರು ಇದು ದೈವಲೀಲೆ ಎಂದು ದೇವಾರಾಧನೆ ಮಾಡುತ್ತಿದ್ದಾರೆ.

    ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದ ಹೊಲವೊಂದರ ಬೇವಿನ ಮರದಿಂದ ಕಳೆದ ಒಂದು ವಾರದಿಂದ ಬಿಳಿ ಬಣ್ಣದ ಹಾಲಿನ ರೂಪದ ದ್ರವ ನಿರಂತರವಾಗಿ ಹೊರ ಹರಿಯುತ್ತಿದೆ. ಇದನ್ನು ಕಂಡ ಸ್ಥಳೀಯರು ದೈವಲೀಲೆ ಎಂದು ಭಕ್ತಿಯಿಂದ ಮರಕ್ಕೆ ಪೂಜೆ ಪುನಸ್ಕಾರ ಮಾಡಿ ಆರಾಧನೆ ಮಾಡುತ್ತಿದ್ದಾರೆ.

    ನಿರಂತರವಾಗಿ ಹಾಲಿನ ಮಾದರಿಯ ದ್ರವ ಹೊರ ಸೂಸುವ ಮರದ ಈ ನೋಟ ನೋಡಲು ಸುತ್ತ ಮುತ್ತಲಿನ ಗ್ರಾಮಗಳ ಜನರು ತಂಡೊಪತಂಡವಾಗಿ ಮದಕಟ್ಟಿ ಗ್ರಾಮಕ್ಕೆ ಬರುತ್ತಿದ್ದಾರೆ. ಮರದಿಂದ ಬರುತ್ತಿರುವ ಹಾಲು ಸಿಹಿಯಾಗಿದ್ದು, ಜನರು ಅದನ್ನು ಕುಡಿದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಮರದಿಂದ ದ್ರವ ಹೊರ ಹರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ಬಗ್ಗೆ ವಿಜ್ಞಾನಿಗಳು ಹೇಳೋದು ಏನು?
    ಸಾಮಾನ್ಯವಾಗಿ ಎಲ್ಲ ಮರಗಳ ಬೇರು ಕೆಳಗಿನಿಂದ ಮೇಲಕ್ಕೆ ನೀರು ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತದೆ. ಇದರಲ್ಲಿ ಕೋಶಗಳಿದ್ದು, ಮರದ ಎಲ್ಲ ಕೊಂಬೆಗಳಿಗೆ ನೀರನ್ನು ರವಾನಿಸುತ್ತದೆ. ನೀರು ಪೂರೈಸುವ ಕೋಶಗಳು ನಾಶವಾದಾಗ ಈ ರೀತಿಯ ಘಟನೆಗಳು ನಡೆಯುತ್ತದೆ. ಕೋಶಗಳು ತನ್ನ ಕೆಲಸವನ್ನು ಕಡಿಮೆ ಮಾಡಿದಾಗ ಮರದೊಳಗೆ ಇರುವ ನೀರು ಹೊರಬರುತ್ತದೆ. ಮರದಲ್ಲಿ ಸಹಜವಾಗಿ ನೊರೆ ಇರುವುದರಿಂದ ನೊರೆ ಮಿಶ್ರಿತ ನೀರು ಹಾಲಾಗಿ ಕಾಣುತ್ತದೆ. ಕೋಶಗಳು ನಾಶವಾದರೆ ನೀರು ಮೇಲಕ್ಕೆ ಬಂದು ಹಾಲಿನಂತೆ ಸುರಿಯಲು ಶುರುವಾಗುತ್ತದೆ. ಇದರಲ್ಲಿ ನೀರಿನ ಅಂಶ ಹೆಚ್ಚಾಗಿರಿವುದರಿಂದ ಹಾಲಿನಂತಿರುವ ನೀರು ಸಿಹಿ ಅನುಭವ ನೀಡುತ್ತದೆ.

  • ಸಿಡಿಲಿಗೆ ಗೋಪುರ, ಗೋಡೆ ಮುರಿದು ಹೋದರೂ ಭಕ್ತರಿಗೆ ಏನು ಆಗಿಲ್ಲ

    ಸಿಡಿಲಿಗೆ ಗೋಪುರ, ಗೋಡೆ ಮುರಿದು ಹೋದರೂ ಭಕ್ತರಿಗೆ ಏನು ಆಗಿಲ್ಲ

    ಬೀದರ್: ಸಿಡಿಲು ಬಡಿದರೂ ಭಕ್ತರು ಅಪಾಯದಿಂದ ಪಾರಾದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಉಪ್ಪಳ ಗ್ರಾಮದ ಬಳಿ ಇರುವ ಗುತ್ತಿ ಭವಾನಿ ಮಾತಾ ದೇವಸ್ಥಾನದಲ್ಲಿ ನಡೆದಿದೆ.

    ವಿಜಯದಶಮಿ ಹಿನ್ನೆಲೆಯಲ್ಲಿ ತಡರಾತ್ರಿಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಇಂದು ಬೆಳಗ್ಗೆ ದೇವಾಲಯಕ್ಕೆ ಸಿಡಿಲು ಬಡಿದಿದೆ. ಸಿಡಿಲ ಬಡಿತಕ್ಕೆ ದೇವಸ್ಥಾನದ ಗೋಪುರ, ಗೋಡೆ ಮುರಿದು ಹೋದರೂ ದೇವಸ್ಥಾನದ ಒಳಗಡೆ ಇದ್ದ ಭಕ್ತರು ಪವಾಡ ಎಂಬಂತೆ ಅಪಾಯದಿಂದ ಪಾರಾಗಿದ್ದಾರೆ.

    ಭಕ್ತರೊಬ್ಬರು ಪ್ರತಿಕ್ರಿಯಿಸಿ, ಬಡಿದ ಸಿಡಿಲು ದೇವಾಲಯ ಒಳಗಡೆ ಹೋದ ಅನುಭವವಾಗಿದೆ. ನಂತರ ಈ ಸಿಡಿಲು ಕಾಣೆ ಆಗಿದ್ದು ಹೇಗೆ ಎನ್ನುವುದೇ ಆಶ್ಚರ್ಯ ಎಂದು ಹೇಳಿದ್ದಾರೆ.

    ಈಗ ಸಿಡಿಲನ್ನೇ ತಡೆದು ಭಕ್ತರನ್ನು ಕಾಪಾಡಿದ ಭಾವಾನಿ ಮಾತಾ ದೇವಸ್ಥಾನ ನೋಡಲು ಸುತ್ತಮುತ್ತಲಿನ ಗ್ರಾಮಗಳ ಭಕ್ತರ ದಂಡು ಹರಿದು ಬರುತ್ತಿದೆ.

  • ಬುದ್ಧಿ ಮಾತು ಹೇಳಿದ್ದೇ ತಪ್ಪಾಯ್ತು- ನೇಣಿಗೆ ಕೊರಳೊಡ್ಡಿದ ಯುವಕ

    ಬುದ್ಧಿ ಮಾತು ಹೇಳಿದ್ದೇ ತಪ್ಪಾಯ್ತು- ನೇಣಿಗೆ ಕೊರಳೊಡ್ಡಿದ ಯುವಕ

    ಬೀದರ್: ಮನೆಗೆ ತಡವಾಗಿ ಬಂದ ಮಗನಿಗೆ ಪೋಷಕರು ಬುದ್ಧಿ ಮಾತು ಹೇಳಿದ್ದು, ಇದರಿಂದ ಮನನೊಂದ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ನ ವಿದ್ಯಾನಗರದಲ್ಲಿ ನಡೆಸಿದೆ.

    21 ವರ್ಷದ ಅಜಯ್ ಗಾಯಕವಾಡ್ ಆತ್ಮಹತ್ಯೆಗೆ ಶರಣಾಗಿದ್ದ ಯುವಕನಾಗಿದ್ದು, ಖಾಸಗಿ ಕಾಲೇಜಿನಲ್ಲಿ ಐಟಿಐ ಓದುತ್ತಿದ್ದ. ಇಂದು ಬೀದರ್ ನ ಚಿದ್ರಿ ರಿಂಗ್ ರೋಡ್ ಬಳಿಯ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ನಿನ್ನೆ ಮನೆಯಿಂದ ಹೊರ ತೆರಳಿದ್ದ ಅಜಯ್ ಗಾಯಕವಾಡ್ ರಾತ್ರಿ ತಡವಾಗಿ ಆಗಮಿಸಿದ್ದ. ಯಾವಾಗಲೂ ಮನೆಗೆ ತಡವಾಗಿ ಆಗಮಿಸುತ್ತಿದ್ದ ಕಾರಣ ಪೋಷಕರು ಅಸಮಾಧಾನಗೊಂಡು ಬುದ್ಧಿ ಮಾತು ಹೇಳಿದ್ದರು ಎಂಬ ಮಾಹಿತಿ ಲಭಿಸಿದೆ. ಪೋಷಕರ ಮಾತಿನಿಂದ ನೊಂದ ಅಜಯ್ ಮನೆ ಬಿಟ್ಟು ತೆರಳಿ ಸಾವಿಗೆ ಶರಣಾಗಿದ್ದಾನೆ. ಈ ಕುರಿತು ಮಾಹಿತಿ ಪಡೆದ ಗಾಂಧಿಗಂಜ್ ಪೋಲಿಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

  • ನೋಟಲ್ಲೇ ನೀವಾಳಿಸಿ ಖೇಣಿ ದೃಷ್ಟಿ ತೆಗೆದು ದರ್ಬಾರ್ – ಬೀದರ್‌ನಲ್ಲಿ ನೈಸ್ ಮಾಲೀಕನ ಬರ್ತ್ ಡೇ

    ನೋಟಲ್ಲೇ ನೀವಾಳಿಸಿ ಖೇಣಿ ದೃಷ್ಟಿ ತೆಗೆದು ದರ್ಬಾರ್ – ಬೀದರ್‌ನಲ್ಲಿ ನೈಸ್ ಮಾಲೀಕನ ಬರ್ತ್ ಡೇ

    ಬೀದರ್: ಒಂದೆಡೆ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಜನರು ಕಂಗಾಲಾಗಿದ್ದರೆ, ಇತ್ತ ಕಾಂಗ್ರೆಸ್ ಮುಖಂಡ, ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಭರ್ಜರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಶನಿವಾರ ಖೇಣಿ ತಮ್ಮ ಹುಟ್ಟೂರು ಬೀದರ್ ತಾಲೂಕಿನ ಖೇಣಿ ರಂಜೋಳದಲ್ಲಿ ತಮ್ಮ ಬರ್ತ್ ಡೇಯನ್ನು ಆಚರಣೆ ಮಾಡಿಕೊಂಡರು. ಈ ವೇಳೆ ಬೆಂಬಲಿಗರು 100ರೂ. ನೋಟುಗಳಿಂದ ಖೇಣಿಯವರ ದೃಷ್ಟಿ ತೆಗೆದು ಜನರಿಗೆ ಹಂಚಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

    ವಿಡಿಯೋದಲ್ಲಿ ಕೂಡ ಅಶೋಕ್ ಖೇಣಿಯನ್ನ ನಿಲ್ಲಿಸಿಕೊಂಡು ದುಡ್ಡಿನಿಂದ ದೃಷ್ಟಿ ತೆಗೆದಿರೋದು ಸ್ಪಷ್ಟವಾಗಿ ಕಾಣುತ್ತದೆ. ಆದರೆ ಮೂಲಗಳ ಪ್ರಕಾರ ದುಡ್ಡನ್ನು ತೂರಿದ್ದಾರೆ ಎನ್ನಲಾಗಿದೆ.

    ಒಟ್ಟಿನಲ್ಲಿ ಒಂದು ಕಡೆ ನೆರೆ ಸಂತ್ರಸ್ತರು ತುತ್ತು ಅನ್ನಕ್ಕೆ ಪರದಾಡುತ್ತಿದ್ದರೆ, ಇತ್ತ ಖೇಣಿ ಹುಟ್ಟು ಹಬ್ಬದ ಆಚರಣೆಗೆ ನಡು ಬೀದಿಯಲ್ಲೇ ಹಣದಿಂದ ದೃಷ್ಟಿ ತೆಗೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  • ಬರ ಇದ್ರೂ ಅಧಿಕಾರಿಗಳ ನಿರ್ಲಕ್ಷ್ಯ – ಚರಂಡಿ ಪಾಲಾಗುತ್ತಿದೆ ಕುಡಿಯುವ ನೀರು

    ಬರ ಇದ್ರೂ ಅಧಿಕಾರಿಗಳ ನಿರ್ಲಕ್ಷ್ಯ – ಚರಂಡಿ ಪಾಲಾಗುತ್ತಿದೆ ಕುಡಿಯುವ ನೀರು

    ಬೀದರ್: ಗಡಿ ಜಿಲ್ಲೆಯಲ್ಲಿ ಹನಿ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಈ ಮಧ್ಯೆ ಗ್ರಾಮ ಪಂಚಾಯ್ತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.

    ಬೀದರ್ ತಾಲೂಕಿನ ಮರಕಲ್ ಗ್ರಾಮದ ಪಾಟೀಲ್ ಗಲ್ಲಿಯಲ್ಲಿ ಸತತ ಎರಡು ದಿನಗಳಿಂದ ಕುಡಿಯುವ ನೀರು ಚರಂಡಿ ಸೇರುತ್ತಿದೆ. ಪಂಚಾಯ್ತಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯಕ್ಕೆ ನಲ್ಲಿಯ ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ. ಕುಡಿಯುವ ನೀರು ಸತತವಾಗಿ ಎರಡು ದಿನಗಳಿಂದ ಚರಂಡಿ ಪಾಲಾಗುತ್ತಿದ್ದರೂ ಯಾವ ಅಧಿಕಾರಿಗಳು ಕೂಡ ಈ ಬಗ್ಗೆ ಗಮನ ಹರಿಸಿಲ್ಲ. ನೀರನ್ನು ಪೋಲಾಗದಂತೆ ನಿಲ್ಲಿಸುವ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಈ ನೀರು ಈಗ ರಸ್ತೆಯನ್ನು ಆವರಿಸಿಕೊಂಡಿದೆ.

    ಈ ಕ್ಷೇತ್ರದ ಶಾಸಕರು ಮಾಜಿ ಸಚಿವರಾದ ರಹೀಂ ಖಾನ್ ಮಾತ್ರ ಇದಕ್ಕೂ ನಮಗೂ ಸಂಭಂದವಿಲ್ಲವೆಂದು ಎಂದು ಕಣ್ಮರೆಯಾಗಿದ್ದಾರೆ. ಅತೀ ಭೀಕರ ಬರಗಾಲಕ್ಕೆ ಗಡಿ ಜಿಲ್ಲೆ ತತ್ತರಿಸಿ ಹೋಗಿರುವಾಗ ಈ ರೀತಿ ನಿರ್ಲಕ್ಷ್ಯದಿಂದ ಜನರ ಸಮಸ್ಯೆಗಳು ದುಪ್ಪಟ್ಟಾಗುತ್ತಿದೆ. ಆದ್ದರಿಂದ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಿಡಿ ಶಾಪ ಹಾಕುತ್ತಿದ್ದಾರೆ.

  • ಕಾಣೆಯಾಗಿದ್ದ ಅವಳಿ ಮಕ್ಕಳ ದುರಂತ ಸಾವು

    ಕಾಣೆಯಾಗಿದ್ದ ಅವಳಿ ಮಕ್ಕಳ ದುರಂತ ಸಾವು

    ಬೀದರ್: ಶನಿವಾರ ಕಾಣೆಯಾಗಿದ್ದ ಅವಳಿ ಜವಳಿ ಮಕ್ಕಳ ಮೃತ ದೇಹಗಳು ಇಂದು ಮನೆ ಪಕ್ಕದಲ್ಲೇ ಇರುವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಶಿವಾಜಿ ಗಲ್ಲಿಯಲ್ಲಿ ನಡೆದಿದೆ.

    4 ವರ್ಷದ ದರ್ಶನ್ ಮತ್ತು ಆರ್ಯನ್ ಮೃತ ಅವಳಿ ಮಕ್ಕಳು. ಇಬ್ಬರು ಶನಿವಾರ ಮನೆಯ ಮುಂದೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದರು. ಮಕ್ಕಳು ಕಾಣುತ್ತಿಲ್ಲವೆಂದು ಪೋಷಕರು, ಸಂಬಂಧಿಕರು ಹುಡುಕಾಟ ಮಾಡಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ದೂರು ಕೊಟ್ಟಿದ್ದರು.

    ಇಂದು ಬೆಳಗ್ಗೆ ಬಾವಿ ಪಕ್ಕದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ನೋಡಿ ಮನೆಯವರಿಗೆ ತಿಳಿಸಿದ್ದಾರೆ. ತಕ್ಷಣ ಮನೆಯವರು ಬಂದು ತಮ್ಮ ಮಕ್ಕಳೆಂದು ಗುರುತಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಬಾವಿಯಿಂದ ಮಕ್ಕಳ ಮೃತದೇವನ್ನು ಹೊರತೆಗೆದಿದ್ದಾರೆ. ಸ್ಥಳದಲ್ಲಿ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಕುರಿತು ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೌಡಿ ಮೋದಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಕನ್ನಡಿಗ ಕಿಶೋರ್ ಮಲಾನಿ

    ಹೌಡಿ ಮೋದಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಕನ್ನಡಿಗ ಕಿಶೋರ್ ಮಲಾನಿ

    ಬೀದರ್: ಅಮೆರಿಕದ ಹ್ಯೂಸ್ಟನ್ ನಗರದಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ ಯಶಸ್ಸಿನ ಹಿಂದೆ ಬೀದರ್ ನ ಕನ್ನಡಿಗರೊಬ್ಬರು ಮಹತ್ವದ ಪಾತ್ರವವಹಿಸಿದ್ದಾರೆ.

    ಬೀದರ್ ನ ಜುಗಲ್ ಕಿಶೋರ್ ಮಲಾನಿ ಅವರು ಈ ಕಾರ್ಯಕ್ರಮ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿ 600 ಸಂಘಟನೆಯ ಸದಸ್ಯರುಗಳನ್ನು ಒಂದೆಡೆ ಸೇರಿಸಿದ್ದರು. ಮಲಾನಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಮಲಾನಿ ಫ್ಯಾಮಿಲಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

    ಬೀದರ್ ನ ಉಸ್ಮಾನ್ ಗಂಜ್‍ನಲ್ಲಿ ಕಿಶೋರ್ ಮಲಾನಿಯ ನಿವಾಸವಿದ್ದು ಸಹೋದರ, ಸಹೋದರಿ ಸೇರಿದಂತೆ ಸಂಬಂಧಿಕರು ಇಲ್ಲೇ ವಾಸವಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಬೀದರ್ ನಲ್ಲಿ ಮುಗಿಸಿರುವ ಮಲಾನಿ 23 ವರ್ಷಗಳ ಹಿಂದೆ ಅಮೆರಿಕಾಗೆ ಹೋಗಿ ಅಲ್ಲೇ ವಾಸವಾಗಿದ್ದಾರೆ. ವರ್ಷಕ್ಕೆ ಎರಡು ಬಾರಿ ಬೀದರ್ ಗೆ ಬಂದು ಹೋಗುತ್ತಾರೆ.

    “ಹೌಡಿ ಮೋದಿ” ಕಾರ್ಯಕ್ರಮ ಯಶಸ್ವಿಯಾಗಲು ಮಲಾನಿ ಪ್ರಮಖ ಪಾತ್ರ ವಹಿಸಿದ್ದು, ಜಿಲ್ಲೆಯಲ್ಲಿ ಜನರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹೌಡಿ ಮೋದಿ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದಕ್ಕೆ ಮಲಾನಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.