Tag: bidar

  • ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ – ಗಡಿ ಜಿಲ್ಲೆ ಬೀದರ್‌ನಲ್ಲಿ ತುಂತುರು ಮಳೆ

    ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ – ಗಡಿ ಜಿಲ್ಲೆ ಬೀದರ್‌ನಲ್ಲಿ ತುಂತುರು ಮಳೆ

    ಬೀದರ್: ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಭಾಗದಲ್ಲಿ ಮಳೆ ಪ್ರಾರಂಭವಾಗಿದ್ದು, ಈ ಎಫೆಕ್ಟ್ ಗಡಿ ಜಿಲ್ಲೆ ಬೀದರ್‌ಗೂ ತಟ್ಟಿದೆ.

    ಜಿಲ್ಲೆಯಲ್ಲಿ ಬೆಳಗ್ಗಿನಿಂದಲೂ ತುಂತುರು ಮಳೆ ಪ್ರಾರಂಭವಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಒಂದು ಕಡೆ ತುಂತುರು ಮಳೆ ಮೊತ್ತೊಂದು ಕಡೆ ಅತಿ ಚಳಿಗೆ ಜಿಲ್ಲೆಯ ಜನರು ಕಂಗಾಲಾಗಿದ್ದು, ಮನೆಯಿಂದ ಹೊರಗೆ ಬರಲು ಜನರು ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ವಾಯುಭಾರ ಕುಸಿತ ಎಫೆಕ್ಟ್ ನಿಂದಾಗಿ ಜಿಲ್ಲೆಯ ಜನರು ಸರ್ಕಾರಿ ಕೆಲಸಕ್ಕೆ ಹಾಗೂ ಯಾವುದೇ ಖಾಸಗಿ ಕೆಲಸಕ್ಕೂ ಹೊರಗಡೆ ಹೋಗಬೇಕಾದರೂ ಹಿಂದೇಟು ಹಾಕುತ್ತಿದ್ದಾರೆ.

    ವಾಯುಭಾರ ಕುಸಿತದಿಂದಾಗಿ ಇನ್ನು ಎರಡು ಮೂರು ಮೂರು ದಿನಗಳ ಕಾಲ ಸತತವಾಗಿ ತುಂತುರು ಮಳೆ ಜಿಲ್ಲೆಯಲ್ಲಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜನರು ಇನ್ನು ಮೂರು ದಿನಗಳ ಕಾಲ ಮನೆಯಿಂದ ಹೊರಗೆ ಬರುವುದು ಕಷ್ಟ ಸಾಧ್ಯವಾಗಿದೆ.

  • 5 ವರ್ಷದಲ್ಲಿ ಹಣ ಡಬಲ್ – 150 ಜನರಿಗೆ ಪಂಗನಾಮ ಹಾಕಿದ ಕಂಪನಿ

    5 ವರ್ಷದಲ್ಲಿ ಹಣ ಡಬಲ್ – 150 ಜನರಿಗೆ ಪಂಗನಾಮ ಹಾಕಿದ ಕಂಪನಿ

    ಬೀದರ್: ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ದುಡ್ಡು ಕಟ್ಟಿಸಿಕೊಂಡು “ಗ್ರೀಮ್ ಹೋಮ್ ಅಂಡ್ ಫಾಮ್9 ಹೌಸ್” ಎಂಬ ಖಾಸಗಿ ಕಂಪನಿ ಗಡಿ ಜಿಲ್ಲೆಯ 100 ರಿಂದ 150 ಜನರಿಗೆ ಮಹಾದೋಖಾ ಮಾಡಿದೆ. ಪಾಲಿಸಿ ಕಟ್ಟಿದ ಜನರು ಏಜೆಂಟ್ ಮನೆಗೆ ಹೋಗಿ ಇಂದು ಚಳಿ ಬಿಡಿಸಿದ ಘಟನೆ ನಗರದ ಕುಂಭಾರವಾಡ ಕಾಲೋನಿಯಲ್ಲಿ ನಡೆದಿದೆ.

    ಹೆಂಡತಿ ಕೃಷಿ ಇಲಾಖೆ ಹಾಗೂ ಪತಿ ರಾಮಪ್ಪ ಪಶು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಗ್ರೀಮ್ ಹೋಮ್ ಅಂಡ್ ಫಾಮ್9 ಹೌಸ್ ಎಂಬ ಕಂಪನಿಯಲ್ಲಿ ಹಲವು ತಿಂಗಳ ಹಿಂದೆ ದಂಪತಿ ಏಜೆಂಟಾಗಿ ಕೆಲಸ ಮಾಡುತ್ತಿದ್ದರು. ಇವರa ಮನೆಯ ಬಳಿ ಹಣ ಕಳೆದುಕೊಂಡವರು ಮುತ್ತಿಗೆ ಹಾಕಿದ್ದಾರೆ.

    5 ವರ್ಷದಲ್ಲಿ ಹಣ ಡಬಲ್ ಆಗುವ ಆಸೆಯಿಂದ ನೂರಾರು ಜನರು ಪ್ರತಿ ತಿಂಗಳು 500 ರಿಂದ 2000 ವರೆಗೆ ದುಡ್ಡು ಕಟ್ಟಿದ್ದರು. ಈಹ ಖಾಸಗಿ ಕಂಪನಿ ಮುಚ್ಚಿಕೊಂಡು ಹೋದ ನಂತರ ಇದು ಬೋಗಸ್ ಅಂಥಾ ಗೊತ್ತಾಗಿ ಜನರು ಕಂಗಾಲಾಗಿದ್ದಾರೆ. ಇಂದು ಏಜೆಂಟ್ ರಾಮಪ್ಪ ಮನೆ ಖಾಲಿ ಮಾಡುವ ವಿಷಯ ತಿಳಿದು ಆಕ್ರೋಶಗೊಂಡ ಜನರು, ಮನೆ ಬಳಿ ಹೋಗಿ ನಮ್ಮ ಹಣ ನಮಗೆ ವಾಪಸ್ ಕೊಡಿಸಿ ಎಂದು ಎಜೆಂಟ್ ಗೆ ಚಳಿ ಬಿಡಿಸಿದ್ದಾರೆ.

    ಜನರು ಮನೆ ಮುಂದೆ ಬಂದು ಎಜೆಂಟ್ ರಾಮಪ್ಪ ವಿರುದ್ಧ ದಿಕ್ಕಾರ ಕೂಗಿದ್ದಾರೆ. ಹಣ ಡಬಲ್ ಮಾಡಿಕೊಡುವ ಆಸೆ ಹೇಳಿ ಇಂದು ರಾಮಪ್ಪ ಮನೆ ಖಾಲಿ ಮಾಡುತ್ತಿದ್ದಾನೆ ಎಂದು ಹಣ ಕಟ್ಟಿದವರು ಹೇಳುತ್ತಿದ್ದಾರೆ. ಇತ್ತ ಎಲ್ಲರು ನಮ್ಮ ಜೊತೆ ಕೈ ಜೋಡಿಸಿ ನಾನು ಕೂಡಾ ಕಂಪನಿ ಜೊತೆ ಮಾತನಾಡಿ ಹಣ ವಾಪಸ್ ಕೊಡಿಸುತ್ತೆನೆ ಎಂದು ಎಜೆಂಟ್ ಪುತ್ರ ಹಣ ಕಟ್ಟಿದವರಿಗೆ ಭರವಸೆ ನೀಡುತ್ತಿದ್ದಾನೆ.

  • ಬರಡು ಭೂಮಿಯಲ್ಲಿ ಬಂಗಾರದ ಬೆಳೆ-15 ವರ್ಷಗಳಿಂದ ನೀರು ಹೊತ್ತ ರೈತ

    ಬರಡು ಭೂಮಿಯಲ್ಲಿ ಬಂಗಾರದ ಬೆಳೆ-15 ವರ್ಷಗಳಿಂದ ನೀರು ಹೊತ್ತ ರೈತ

    -ಔರಾದ್‍ನ ವಿಲಾಸ್ ಹೂಗಾರ್ ಚಮತ್ಕಾರ

    ಬೀದರ: ಬಿಸಿಲ ನಾಡು ಬೀದರ್ ನ ಔರಾದ್ ತಾಲೂಕಿನ ವಿಲಾಸ್‍ರಾವ್ ಹೂಗಾರ್ ಅವರು ಬರಡು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದಿದ್ದಾರೆ. ಇದಕ್ಕಾಗಿ 15 ವರ್ಷಗಳಿಂದ ಹೆಗಲ ಮೇಲೆ ನೀರು ಹೊತ್ತಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಗುಡಪಳ್ಳಿ ಗ್ರಾಮದ ವಿಲಾಸ್‍ರಾವ್ ಹೂಗಾರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಭೀಕರ ಬರಗಾಲದಿಂದ ನಲುಗಿ ಹೋಗಿರುವ ಜಿಲ್ಲೆಯಲ್ಲಿ ರೈತರು ತತ್ತರಿಸಿ ಹೋಗಿದ್ದಾರೆ. ಆದರೆ 15 ವರ್ಷಗಳ ಹಿಂದೆ ವಿಲಾಸ್‍ರಾವ್ ಬರಡು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.

    ಅಂತರ್ಜಲ ಮಟ್ಟ ಕುಸಿದಿದ್ದಿರೂ, 1 ಕಿ.ಮೀ. ದೂರದ ಮನೆಯಿಂದ ಹೆಗಲಮೇಲೆ ಬಿಂದಿಗೆಯಿಂದ ನೀರು ತಂದು ಬೆಳೆ ಬೆಳೆಯುತ್ತಿದ್ದಾರೆ. 3 ಎಕರೆಯ ಜಮೀನಿನಲ್ಲಿ 3 ಗುಂಟೆ ಜಾಗದಲ್ಲಿ ಮಿಶ್ರಬೆಳೆ ಪದ್ಧತಿಯಡಿ ಟೊಮಾಟೋ, ಮೆಣಸಿನಕಾಯಿ, ಚವಳೆಕಾಯಿ, ಬದನೆ, ಬೆಂಡೆಕಾಯಿ, ಕೊತ್ತಂಬರಿ ಸೇರಿದಂತೆ ತರಹೇವಾರಿ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ.

    ಹೆಂಡತಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆ, ಮಗ ವಿಕಲಚೇತನನಾಗಿದ್ದು ಜೊತೆಗೆ ಪುಟ್ಟ ಹೆಣ್ಣು ಮಗುವನ್ನು ಸಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಮಾನಸಿಕವಾಗಿ ಕುಗ್ಗದೇ ವಿಲಾಸ್ ರಾವ್ ಮುಂದೆ ಸಾಗುತ್ತಿದ್ದಾರೆ.

    ಗ್ರಾಮದಲ್ಲಿ ಬೀಳುವ ಸಗಣಿಯನ್ನು ಸಂಗ್ರಹಿಸಿ, ಬೆಳೆಗೆ ಹಾಕಿ ಸಾವಯವ ಕೃಷಿ ಮಾಡುತ್ತಿದ್ದಾರೆ. ವಿಲಾಸ್ ಅವರ ಸಾಹಸಿ ಜೀವನ ನೋಡಿದ ಸ್ಥಳೀಯ ಅಧಿಕಾರಿಗಳು ಈಗ ಬೋರ್‍ವೆಲ್ ಕೊರೆಸಿಕೊಟ್ಟಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ವಿಲಾಸ್ ಹೂಗಾರ್ ಅವರ ಈ ಕಾರ್ಯ, ಆತ್ಮಹತ್ಯೆಗೆ ಶರಣಾಗುವ ರೈತರು, ಗುಳೆ ಹೋಗುವ ಜನರಿಗೆ ಸ್ಫೂರ್ತಿಯಾಗಲಿ.

  • ಮಧ್ಯಾಹ್ನವಾದ್ರೂ ಶಾಲೆಗೆ ಹಾಜರಾಗದ ಶಿಕ್ಷಕರು – ವಿಡಿಯೋ ಮಾಡಿ ಗ್ರಾಮಸ್ಥರ ಆಕ್ರೋಶ

    ಮಧ್ಯಾಹ್ನವಾದ್ರೂ ಶಾಲೆಗೆ ಹಾಜರಾಗದ ಶಿಕ್ಷಕರು – ವಿಡಿಯೋ ಮಾಡಿ ಗ್ರಾಮಸ್ಥರ ಆಕ್ರೋಶ

    ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ತೆಗಂಪೂರ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನವಾದರೂ ಶಾಲೆಗೆ ಶಿಕ್ಷಕರು ಹಾಜರಾಗಿಲ್ಲ. ಹಾಗಾಗಿ ಬೆಳಗ್ಗೆಯಿಂದ ಶಿಕ್ಷಕರಿಗಾಗಿ ಕಾದು ಕುಳಿತ ಮಕ್ಕಳು ಗೇಟ್ ಏರಿ ಶಾಲೆಯೊಳಗೆ ಹೋಗಿರುವ ಘಟನೆ ನಡೆದಿದೆ.

    ಮಕ್ಕಳು ಗೇಟ್ ಏರಿ ಶಾಲೆಯೊಳಗೆ ಹೋಗಿರುವ ದೃಶ್ಯವನ್ನು ಸ್ಥಳೀಯರು ಚಿತ್ರೀಕರಿಸಿ ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟು 3 ಜನ ಶಿಕ್ಷಕರು ಇರುವ ಈ ಶಾಲೆಯಲ್ಲಿ 50ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

    ಗ್ರಾಮದಲ್ಲಿ ಬಹುತೇಕ ಮಕ್ಕಳು ಶಾಲೆಯ ದುರಾವಸ್ಥೆಯಿಂದ ಬೇಸತ್ತು ಸಮೀಪದ ಔರಾದ್ ಪಟ್ಟಣದ ಶಾಲೆಗೆ ತೆರಳುತ್ತಿದ್ದಾರೆ. ಆದರೂ ತಮ್ಮ ವರಸೆ ಬಿಡದ ಶಿಕ್ಷಕರು ಕಳೆದ 10 ವರ್ಷಗಳಿಂದ ಇದೇ ಚಾಳಿ ಮುಂದುವರಿಸಿದ್ದಾರೆ. ಇದರಿಂದ ಬಡವರ ಮಕ್ಕಳ ಭವಿಷ್ಯದ ಜೊತೆ ಶಿಕ್ಷಕರು ಆಟವಾಡುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಗಡಿ ಜಿಲ್ಲೆಯಲ್ಲಿ ಕನ್ನಡದ ಕಂಪು- 1 ಕಿ.ಮೀ ಉದ್ದದ ನಾಡ ಧ್ವಜದ ಝೇಂಕಾರ

    ಗಡಿ ಜಿಲ್ಲೆಯಲ್ಲಿ ಕನ್ನಡದ ಕಂಪು- 1 ಕಿ.ಮೀ ಉದ್ದದ ನಾಡ ಧ್ವಜದ ಝೇಂಕಾರ

    ಬೀದರ್: 1 ಕಿ.ಮೀ ಉದ್ದದ ನಾಡ ಧ್ವಜ ಮೆರವಣಿಗೆ ಮಾಡುವ ಮೂಲಕ ಇಂದು ಗಡಿ ಜಿಲ್ಲೆ ಬೀದರ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಕಲ್ಯಾಣ ಕರ್ನಾಟಕ ಉತ್ಸವವನ್ನು ಆಚರಿಸಲಾಯಿತು.

    ಜೈ ಕರ್ನಾಟಕ ಸಂಘಟನೆ ವತಿಯಿಂದ ಇಂದು ಬೀದರ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ಕಲ್ಯಾಣ ಕರ್ನಾಟಕ ಉತ್ಸವವನ್ನು ಆಯೋಜಿಸಲಾಗಿತ್ತು. ಜೈ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಶ್ರೀಮಂತ ಸಪಾಟೆಯವರ ನೇತೃತ್ವದಲ್ಲಿ ಈ ಉತ್ಸವ ನಡೆಯುತ್ತಿದ್ದು, ಉತ್ಸವದ ನಿಮಿತ್ಯ ಕಾರ್ಯಕ್ರಮದಲ್ಲಿ 1 ಕಿ.ಮೀ ಉದ್ದದ ನಾಡ ಧ್ವಜದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

    ಬೀದರ್‍ನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾದ ಧ್ವಜ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕನ್ನಡದ ಕಂಪನ್ನು ಪಸರಿಸಿತು. ಶಾಲಾ ವಿದ್ಯಾರ್ಥಿಗಳು ನಾಡ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ರಸ್ತೆ ಉದ್ದಕ್ಕೂ ಮಕ್ಕಳು ಹಿಡಿದು ಹಾಗುತ್ತಿದ್ದ ನಾಡ ಧ್ವಜ, ಅದರ ಜೊತೆಗೆ ಕೋಲಾಟ, ಡೊಳ್ಳು ಕುಣಿತ, ಕನ್ನಡದ ಕುರಿತು ಗೀತೆಗಳು ಜನರ ಗಮನ ಸೆಳೆದವು.

  • ಸ್ಟ್ರೆಚರ್ ನೀಡದ ಬ್ರಿಮ್ಸ್ ಸಿಬ್ಬಂದಿ- ನಡ್ಕೊಂಡೇ ಆಸ್ಪತ್ರೆಗೆ ದಾಖಲಾದ ತುಂಬು ಗರ್ಭಿಣಿ

    ಸ್ಟ್ರೆಚರ್ ನೀಡದ ಬ್ರಿಮ್ಸ್ ಸಿಬ್ಬಂದಿ- ನಡ್ಕೊಂಡೇ ಆಸ್ಪತ್ರೆಗೆ ದಾಖಲಾದ ತುಂಬು ಗರ್ಭಿಣಿ

    ಬೀದರ್: ನಗರದ ಬ್ರಿಮ್ಸ್ ಜಿಲ್ಲಾಸ್ಪತ್ರೆಯ ಸಿಬ್ಬಂದಿ ತುಂಬು ಗರ್ಭಿಣಿಯನ್ನು ನಿರ್ಲಕ್ಷಿಸಿದ ಘಟನೆ ಇಂದು ನಡೆದಿದೆ.

    ಮಹಿಳೆ ತಾಂಡದಿಂದ ಅಂಬುಲೆನ್ಸ್ ನಲ್ಲಿ ಹೆರಿಗೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ಬಂದಿದ್ದರು. ಆದರೆ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸ್ಟ್ರೆಚರ್ ನೀಡದೆ ಬ್ರಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವುದು ಇದೀಗ ಆಸ್ಪತ್ರೆ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ.

    ಇಂದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಮ್ಮೆಗಾಂವ್ ತಾಂಡದಿಂದ ಹೆರಿಗೆಗಾಗಿ ಬಂದಿದ್ದ ತುಂಬು ಗರ್ಭಿಣಿಗೆ ಸ್ಟ್ರೆಚರ್ ನೀಡಿ ಸಿಬ್ಬಂದಿ ವಾರ್ಡಿಗೆ ಕರೆದುಕೊಂಡು ಹೋಗಬೇಕಿತ್ತು. ಆದರೆ ಗರ್ಭಿಣಿ ಗಂಟೆಗಟ್ಟಲೆ ಕಾದು ಕಾದು ಸುಸ್ತಾದರೂ ಬ್ರಿಮ್ಸ್ ಸಿಬ್ಬಂದಿ ಸ್ಟ್ರೆಚರ್ ನೀಡದ ಕಾರಣ ನಡೆದುಕೊಂಡೇ ಹೋಗಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಸಿಬ್ಬಂದಿ ಸ್ಟ್ರೆಚರ್ ನೀಡದಿರುವುದರಿಂದ ಹೈರಾಣಾದ ಗರ್ಭಿಣಿ ಭಾಗ್ಯಶಿರಾ ಅಕ್ಷರಃ ನರಕಯಾತನೆ ಅನುಭವಿಸಿದ್ದು ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಪ್ರಶಸ್ತಿ ಗೆದ್ದ ಬೀದರ್ ಬೆಡಗಿ

    ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಪ್ರಶಸ್ತಿ ಗೆದ್ದ ಬೀದರ್ ಬೆಡಗಿ

    ಬೀದರ್: ಗಡಿ ಜಿಲ್ಲೆಯ ಕುಗ್ರಾಮದ ಬೆಡಗಿ ನಿಶಾ ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌-2019 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಮಿಸ್ ಇಂಡಿಯಾ ಪ್ರಶಸ್ತಿ ಗೆದ್ದ ಜಿಲ್ಲೆಯ ಹಾಗೂ ರಾಜ್ಯದ ಏಕೈಕ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಗಡಿ ಜಿಲ್ಲೆ ಬೀದರಿನ ದುಮ್ಮಸ್ನೂರು ಎಂಬ ಕುಗ್ರಾಮ ನಿವಾಸಿಯಾಗಿರುವ ನಿಶಾ ತಾಳಂಪಳ್ಳಿ, 2019 ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಪಿಯುಸಿವರೆಗೆ ಜಿಲ್ಲೆಯಲ್ಲೇ ಶಿಕ್ಷಣ ಮುಗಿಸಿರುವ ನಿಶಾ, ನಂತರ ಹೈದರಾಬಾದ್ ನಲ್ಲಿ ಡಿಪ್ಲೊಮಾ ಇನ್ ಏವಿಎಷನ್ ಮಾಡಿದ್ದಾರೆ. ಹೈದರಾಬಾದ್ ನಲ್ಲಿ ಒಂದು ತಿಂಗಳ ಕಾಲ ನಡೆದ ಇಂಡಿಯನ್ ಫ್ಯಾಷನ್ ಪಿಸ್ತಾ ಆಡಿಷನ್ ನಲ್ಲಿ ಭಾಗಿಯಾಗಿ ಕೊನೆಗೂ ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಪ್ರಶಸ್ತಿಯನ್ನು ಗೆದ್ದಿದ್ದಾರೆ.

    ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಈ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆ ನವೆಂಬರ್ 14ರಿಂದ 18ರವರೆಗೆ ನಡೆದಿದೆ. ಅಂತಿಮ ಸುತ್ತಿನಲ್ಲಿ ನಿಶಾ 30 ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

    ನಿಶಾ ಈ ಸ್ಪರ್ಧೆಗೆ ಆಯ್ಕೆಯಾಗಿದ್ದಾಗ ಬೀದರ್ ರಾಜ್ಯ ಹಾಗೂ ದೇಶದ ಜನ ಹೆಮ್ಮೆ ಪಟ್ಟಿದ್ದರು. ಆದರೆ ಈಗ ನಿಶಾ ಪ್ರಶಸ್ತಿ ಗೆದ್ದಿದ್ದು ರಾಜ್ಯದ ಜನತೆ ಖುಷಿಪಡುತ್ತಿದ್ದಾರೆ. ಸ್ಪರ್ಧೆಗೆ ಆಯ್ಕೆ ಆಗಿದ್ದಾಗ ನಿಶಾ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುವ ಮೂಲಕ ನನಗೆ ಸಪೋರ್ಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.

     

  • ‘ನಮ್ಮನ್ನು ಬಿಟ್ಟು ಹೋಗ್ಬೇಡಿ ಸಾರ್ ಪ್ಲೀಸ್’ – ಶಿಕ್ಷಕನನ್ನು ಬಿಗಿದಪ್ಪಿ ಅತ್ತ ವಿದ್ಯಾರ್ಥಿಗಳು

    ‘ನಮ್ಮನ್ನು ಬಿಟ್ಟು ಹೋಗ್ಬೇಡಿ ಸಾರ್ ಪ್ಲೀಸ್’ – ಶಿಕ್ಷಕನನ್ನು ಬಿಗಿದಪ್ಪಿ ಅತ್ತ ವಿದ್ಯಾರ್ಥಿಗಳು

    ಬೀದರ್: ಶಿಕ್ಷಕರನ್ನು ವಿದ್ಯಾರ್ಥಿಗಳು ಹೆಚ್ಚು ಹಚ್ಚಿಕೊಂಡಿರುತ್ತಾರೆ. ಅದರಲ್ಲೂ ತಮ್ಮ ಅಚ್ಚುಮೆಚ್ಚಿನ ಶಿಕ್ಷಕರು ಶಾಲೆ ಬಿಟ್ಟುಹೋಗುತ್ತಾರೆ ಎಂದರೆ ಮಕ್ಕಳಿಗೆ ಬೇಸರವಾಗುತ್ತೆ. ಆದರೆ ಬೀದರ್‌ನಲ್ಲಿ ವರ್ಗಾವಣೆಯಾಗಿ ಶಾಲೆ ಬಿಟ್ಟು ಹೋಗುತ್ತಿದ್ದ ಶಿಕ್ಷಕರಿಗಾಗಿ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಿಟ್ಟು ಹೋಗ್ಬೇಡಿ ಸಾರ್ ಎಂದು ಶಿಕ್ಷಕನನ್ನು ಬಿಗಿದಪ್ಪಿ ಮಕ್ಕಳು ಕಣ್ಣೀರಿಟ್ಟಿದ್ದಾರೆ.

    ಹೌದು. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಕುಮಾರ ಚಿಂಚೋಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಅತ್ತಿದ್ದಾರೆ. ಈ ಶಾಲೆಯ ಕನ್ನಡ ಮಾಧ್ಯಮ ಶಿಕ್ಷಕ ಅನಿಲ್ ರಾಠೋಡ್ ಅವರ ಮೇಲೆ ಮಕ್ಕಳು ತೋರಿದ ಪ್ರೀತಿ ನೋಡಿ ಇತರೆ ಶಿಕ್ಷಕರೂ ಕೂಡ ಭಾವುಕರಾಗಿದ್ದಾರೆ. ಶಾಲೆಯಿಂದ ವರ್ಗಾವಣೆಗೊಂಡು ತೆರಳುತ್ತಿದ್ದ ಅನಿಲ್ ಅವರಿಗೆ ಬೀಳ್ಕೊಡುವಾಗ ವಿದ್ಯಾರ್ಥಿಗಳು ಸಾಮೂಹಿಕವಾಗಿ ಬಿಕ್ಕಿ, ಬಿಕ್ಕಿ ಅಳುವ ದೃಶ್ಯ ಗುರು ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ:ಶಿಕ್ಷಕಿಯರ ವರ್ಗಾವಣೆ- ಬಿಕ್ಕಿಬಿಕ್ಕಿ ಅತ್ತ ವಿದ್ಯಾರ್ಥಿಗಳು

    ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗುಲ್ಲಳ್ಳಿ ತಾಂಡಾದವರಾದ ಶಿಕ್ಷಕ ಅನಿಲ್ ರಾಠೋಡ್ ಕಳೆದ 9 ವರ್ಷದಿಂದ ಇದೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಇಲ್ಲಿನ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ಆದರೆ ಈಗ ತಮ್ಮೂರಿನ ಸಮೀಪವೇ ಇರುವ ಆಳಂದ ತಾಲೂಕಿನ ರುದ್ರವಾಡಿ ಗ್ರಾಮಕ್ಕೆ ಅನಿಲ್ ಅವರು ವರ್ಗಾವಣೆಗೊಂಡಿದ್ದು, ಕುಮಾರ ಚಿಂಚೊಳಿ ಗ್ರಾಮದ ಶಾಲೆಯಿಂದ ತೆರಳುತ್ತಿದ್ದ ಶಿಕ್ಷಕರಿಗಾಗಿ ವಿದ್ಯಾರ್ಥಿಗಳೆಲ್ಲರೂ ಗೊಳೋ ಎಂದು ಅತ್ತಿದ್ದಾರೆ. ನಮ್ಮನ್ನು ಬಿಟ್ಟು ಹೊಗಬೇಡಿ ಸಾರ್ ಎಂದು ಅಂಗಲಾಚಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋ ನೋಡಿದರೆ ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎನ್ನುವುದು ತಿಳಿಯುತ್ತದೆ.

  • ಸಿಕ್ಕಸಿಕ್ಕವರನ್ನು ಕಚ್ಚಿ, ದಾಳಿ ಮಾಡ್ತಿರೋ ವಾನರ ಸೇನೆ

    ಸಿಕ್ಕಸಿಕ್ಕವರನ್ನು ಕಚ್ಚಿ, ದಾಳಿ ಮಾಡ್ತಿರೋ ವಾನರ ಸೇನೆ

    – 8ರಿಂದ 10 ಮಂದಿ ಮೇಲೆ ದಾಳಿ

    ಬೀದರ್: ದರೋಡೆಕೋರರಿಗೆ ಹೆದರಿ ಜನರು ಮನೆಯಿಂದ ಹೊರಗೆ ಬಾರದ ಪ್ರಕರಣ ಬಗ್ಗೆ ಕೇಳಿರುತ್ತೇವೆ, ನೋಡಿರುತ್ತೇವೆ. ಆದರೆ ಬೀದರ್‌ನ ಗ್ರಾಮವೊಂದರಲ್ಲಿ ಮಂಗಗಳಿಗೆ ಹೆದರಿ ಗ್ರಾಮಸ್ಥರು ಮನೆಯಲ್ಲಿ ಕೂರುವಂತ ಸ್ಥಿತಿ ನಿರ್ಮಾಣವಾಗಿದೆ.

    ಹೌದು ಜಿಲ್ಲೆಯ ಭಾಲ್ಕಿ ತಾಲೂಕಿನ ಜವಳಗಾ ಗ್ರಾಮಸ್ಥರು ಮಂಗಗಳ ಹಾವಳಿಗೆ ಹೆದರಿ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಜವಳಗಾ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಸುಮಾರು 2 ತಿಂಗಳಲ್ಲಿ ಗ್ರಾಮದ 8 ರಿಂದ 10 ಮಂದಿ ಮೇಲೆ ಮಂಗಗಳು ಕಚ್ಚಿ, ದಾಳಿ ನಡೆಸಿವೆ. ರಸ್ತೆಯಲ್ಲಿ ಓಡಾಡುವ ಜನರ ಮೇಲೆ ಕಾರಣವಿಲ್ಲದೆ ಮಂಗಗಳು ದಾಳಿ ಮಾಡುತ್ತಿವೆ. ಜನರನ್ನು ಕಂಡರೆ ಸಾಕು ಅವರ ಮೇಲೆ ಎಗರಿ, ಕಚ್ಚಿ ಗಾಯಗೊಳಿಸುತ್ತಿವೆ. ಆದ್ದರಿಂದ ಮಂಗಗಳು ಯಾವಾಗ? ಯಾರ ಮೇಲೆ ದಾಳಿ ಮಾಡುತ್ತವೋ ಎನ್ನುವ ಭಯದಲ್ಲಿ ಇಲ್ಲಿನ ಜನರು ಬದುಕುತ್ತಿದ್ದಾರೆ.

    ಈ ಗ್ರಾಮದ ಜನರು ವಾನರ ಸೈನ್ಯದ ದಾಳಿಗೆ ಹೆದರಿ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಮಂಗಗಳು ಹಿಂಡು ಹಿಂಡಾಗಿ ಬಂದು ಜನರ ಮೇಲೆ ದಾಳಿ ಮಾಡುತ್ತಿದ್ದು, ಗಾಯಗಳಿಗೆ 15-20 ಹೊಲಿಗೆಗಳು ಹಾಕುವ ರೀತಿ ತೀವ್ರವಾಗಿ ಮಂಗಗಳು ಜನರನ್ನು ಗಾಸಿಗೊಳಿಸುತ್ತಿದೆ. ದರೋಡೆಕೋರು ಚಾಕುವಿನಿಂದ ಭೀಕರವಾಗಿ ಹಲ್ಲೆ ಮಾಡುವ ರೀತಿ ಮಂಗಗಳು ಜನರ ಮೇಲೆ ದಾಳಿ ಮಾಡುತ್ತಿವೆ.

    ಸತತ ಎರಡು ತಿಂಗಳಿನಿಂದ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಜನರ ಮೇಲೆ ದಾಳಿ ಮಾಡುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಕ್ರಮ ತೆಗೆದುಕೊಂಡು ಮಂಗಗಳ ಕಾಟದಿಂದ ಮುಕ್ತಿಗೊಳಿಸಿ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

  • ಹೊಟ್ಟೆಗೆ ಏನು ತಿಂತೀರಿ, ಹಣ ಎಲ್ಲಿ ಹೋಯ್ತು – ಅಧಿಕಾರಿಗೆ ಸಚಿವ ಸಿ.ಟಿ.ರವಿ ಕ್ಲಾಸ್

    ಹೊಟ್ಟೆಗೆ ಏನು ತಿಂತೀರಿ, ಹಣ ಎಲ್ಲಿ ಹೋಯ್ತು – ಅಧಿಕಾರಿಗೆ ಸಚಿವ ಸಿ.ಟಿ.ರವಿ ಕ್ಲಾಸ್

    ಬೀದರ್: ಹೊಟ್ಟೆಗೆ ಏನು ತಿಂತೀರಿ ಎಂದು ಅಧಿಕಾರಿಯೊಬ್ಬರಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಬೀದರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಪ್ರಸಂಗ ನಡೆದಿದ್ದು, ಸಿ.ಟಿ.ರವಿ ಅಧಿಕಾರಿಗೆ ಫುಲ್ ತರಾಟೆ ತಗೆದುಕೊಂಡಿದ್ದಾರೆ. ನಿರ್ಮಿತಿ ಕೇಂದ್ರದ ಕಾಮಗಾರಿ ಸ್ಥಗಿತವಾಗಿರುವುದು ನಿನಗೆ ಗೋತ್ತಿದೆಯೋ ಇಲ್ವಾ? ನೀವು ಹಾಗೂ ನಿರ್ಮಿತಿ ಕೇಂದ್ರದವರು ಸೇರಿ ಇಲಾಖೆ ಮುಳುಗಿಸಬೇಕು ಎಂದು ಮಾಡಿದ್ದೀರಾ ಎಂದು ಪ್ರಶ್ನಿಸಿ ಬೆವರಿಳಿಸಿದ್ದಾರೆ.

    ಹಣ ವಾಪಸ್ ತರಸಿ ಹಾಗೂ ಅಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಮೇಲಧಿಕಾರಿಗೆ ಸಚಿವರು ಸೂಚನೆ ನೀಡಿದರು. ನಿರ್ಮಿತಿ ಕೇಂದ್ರದ ಕಾಮಗಾರಿ ಸ್ಥಗಿತವಾಗಿದ್ದರೂ ಒಂದು ಕೋಟಿ ರೂ. ಬಿಡುಗಡೆ ಮಾಡುವಂತೆ ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ಪತ್ರ ಬರೆಯುತ್ತೀರಿ. ದುಡ್ಡು ತೆಗೆದುಕೊಂಡು ಏನು ಮಾಡುತ್ತೀರಿ? ನಿಮಗೇನು ತಿಳಿಯುವುದಿಲ್ಲವೇ? ಹಿಂದೆ ಬಿಡುಗಡೆ ಮಾಡಿದ ಆ ಒಂದು ಕೋಟಿ ರೂ. ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.

    ಪತ್ರ ಬರೆದಿದ್ದರಿಂದ ಕೆಂಡಾಮಂಡಲರಾದ ಸಚಿವರು ಅಧಿಕಾರಿಗೆ ಫುಲ್ ತರಾಟೆ ತೆಗೆದುಕೊಂಡು ಒಂದು ಕೋಟಿ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು. ಈ ಹಣ ನಿನ್ನ ಸಂಬಳದಲ್ಲಿ ಕಡತಗೊಳಿಸಬೇಕೇ ಎಂದು ಅಧಿಕಾರಿ ವಿರುದ್ಧ ಗರಂ ಆದರು. ಒಂದು ಕೋಟಿ ರೂ. ಹಣ ಎಲ್ಲಿ ಹೋಗಿದೆ? ಪರಿಶೀಲನೆ ನಡೆಸಿ ಈ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

    ಸಚಿವರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದರೂ ಅಧಿಕಾರಿಗಳು ಮಾತ್ರ ತುಟಿ ಪಿಟಿಕ್ ಎನ್ನದೆ ಮೌನಕ್ಕೆ ಶರಣಾಗಿದ್ದರು.