Tag: bidar

  • ತವರಿನಲ್ಲಿದ್ದ ಪತ್ನಿಯನ್ನ ಕರೆಯಲು ಹೋದ ಪತಿ ಸಾವು

    ತವರಿನಲ್ಲಿದ್ದ ಪತ್ನಿಯನ್ನ ಕರೆಯಲು ಹೋದ ಪತಿ ಸಾವು

    ಬೀದರ್: ಮಹಾರಾಷ್ಟ್ರಲ್ಲಿರುವ ತವರು ಮನೆಗೆ ಹೋಗಿದ್ದ ತನ್ನ ಪತ್ನಿಯನ್ನು ಕರೆದುಕೊಂಡು ಬರಲು ತೆರೆಳಿದ್ದ ಪತಿಯ ಬೈಕಿಗೆ ಗೂಡ್ಸ್ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಬಸವಕಲ್ಯಾಣ ಹಾಗೂ ಮಹಾರಾಷ್ಟ್ರ ಗಡಿ ಭಾಗದ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಈ ಅಪಘಾತ ನಡೆದಿದೆ. ಬಸವಕಲ್ಯಾಣ ತಾಲೂಕಿನ ಕೋಹಿನೂರವಾಡಿ ಗ್ರಾಮದ ಧೂಳಪ್ಪ ವಿಠಲ್ ಕುನಾಳೆ (35) ಮೃತ ದುರ್ದೈವಿ. ಕೋಯಿನೂರವಾಡಿಯಿಂದ ಉಮ್ಮರ್ಗಾಕ್ಕೆ ಹೊರಟಿದ್ದ ವೇಳೆ ಬೈಕಿಗೆ ಹಿಂದಿನಿಂದ ಗೂಡ್ಸ್ ಲಾರಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಧೂಳಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಪತಿ ಸಾವನ್ನಪ್ಪಿದ ಸುದ್ದಿ ತಿಳಿದು ಪತ್ನಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಅಪಘಾತದ ಬಗ್ಗೆ ತಿಳಿದ ತಕ್ಷಣ ಸ್ಥಳಕ್ಕೆ ಉಮ್ಮರ್ಗಾ ಪೊಲೀಸರು ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.

  • ರಾಜ್ಯದಲ್ಲೇ ಮೊದಲು- ವಾರ್ತಾಧಿಕಾರಿಗಳಿಂದ ಗಡಿ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ

    ರಾಜ್ಯದಲ್ಲೇ ಮೊದಲು- ವಾರ್ತಾಧಿಕಾರಿಗಳಿಂದ ಗಡಿ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ

    ಬೀದರ್: ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ವಾರ್ತಾಧಿಕಾರಿಗಳು ಪ್ರತಿ ತಿಂಗಳು 2 ಗ್ರಾಮಗಳಲ್ಲಿ ವಾಸ್ತವ್ಯ ಹೂಡಬೇಕು ಎಂದು ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮದಲ್ಲಿ ಬೀದರ್ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಗ್ರಾಮ ವಾಸ್ತವ್ಯ ಮಾಡಿದ್ದಾರೆ.

    ಗ್ರಾಮದ ಹೈಸ್ಕೂಲ್‍ನ ಆವರಣದಲ್ಲಿ ವಾರ್ತಾಧಿಕಾರಿ ಜೊತೆಗೆ ವಾರ್ತಾ ಇಲಾಖೆಯ ಮೂವರು ಸಿಬ್ಬಂದಿ ಮತ್ತು ಬೀದಿನಾಟಕ ಮತ್ತು ಜಾನಪದ ಸಂಗೀತ ಕಲಾ ತಂಡಗಳ 11 ಜನ ಕಲಾವಿದರು ಕೂಡ ವಾಸ್ತವ್ಯ ಮಾಡಿದ್ದಾರೆ. ರಾಜ್ಯ ಸರ್ಕಾರವು ಆದೇಶ ಹೊರಡಿಸಿದ ಬಳಿಕ ಇಡೀ ರಾಜ್ಯದಲ್ಲೇ ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಕರ್ನಾಟಕದ ಕಿರೀಟ ಎಂದೇ ಹೆಸರಾದ ಬೀದರನಿಂದಲೇ ಮೊಟ್ಟ ಮೊದಲನೇ ಬಾರಿಗೆ ಆರಂಭವಾಗುತ್ತಿರುವುದು ವಿಶೇಷವಾಗಿದೆ.

    ಈ ಗ್ರಾಮ ವಾಸ್ತವ್ಯ ವಿಶೇಷ ಕಾರ್ಯಕ್ರಮಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಸ್.ಎನ್ ಸಿದ್ದರಾಮಪ್ಪ ಅವರು ಹಸಿರು ನಿಶಾನೆ ತೋರುವ ಮೂಲಕ ಶನಿವಾರ ವಿದ್ಯುಕ್ತ ಚಾಲನೆ ನೀಡಿದರು. ಸರ್ಕಾರದ ವಿವಿಧ ಇಲಾಖೆಗಳ ಜನಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು, ಯೋಜನೆಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಲು ಕ್ಷೇತ್ರ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಾರ್ತಾಧಿಕಾರಿಗಳು ಈ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

    ಇನ್ನು ಮುಂದೆ ಪ್ರತಿ ತಿಂಗಳು ಎರಡು ಗ್ರಾಮಗಳಲ್ಲಿ ನಡೆಯಲಿರುವ ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಸ್ಥಳೀಯ ಗ್ರಾಮ ಪಂಚಾಯ್ತಿ, ಸಂಘ-ಸಂಸ್ಥೆಗಳ ಸದಸ್ಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ನಡೆಯಲಿದೆ.

  • ಪೌರತ್ವ ವಿಧೇಯಕ ವಿರೋಧಿಸಿ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ

    ಪೌರತ್ವ ವಿಧೇಯಕ ವಿರೋಧಿಸಿ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ

    ಬೀದರ್: ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಪಾಸಾದ ಪೌರತ್ವ ವಿಧೇಯಕ ವಿರೋಧಿಸಿ ಇಂದು ಮುಸ್ಲಿಂ ಹಾಗೂ ಕೆಲ ಸಂಘಟನೆಗಳ ಕಾರ್ಯಕರ್ತರು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಬೀದರ್ ನಲ್ಲಿ ಮೌನ ಪ್ರತಿಭಟನೆ ಮಾಡಿದ್ದಾರೆ.

    ಸಾವಿರಾರು ಮುಸ್ಲಿಂ ಸಂಘಟನೆಯ ಕಾರ್ಯಕರ್ತರು ಹಾಗೂ ಕೇಲ ಕೇಂದ್ರ ಸಂಘಟನೆ ಕಾರ್ಯಕರ್ತರು ಸೇರಿ ಬೃಹತ್ ರ್ಯಾಲಿ ಮಾಡುವ ಮೂಲಕ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾಗೆ ವಿಧೇಯಕ ವಾಪಸ್ ಪಡೆಯುವಂತೆ ಎಚ್ಚರಿಕೆ ನೀಡಿದರು. ನಗರದ ಚೌಬಾರ್ ವೃತದಿಂದ ಪ್ರಾರಂಭವಾದ ರ್ಯಾಲಿ ನಯಾಕಮಾನ್, ಅಂಬೇಡ್ಕರ್ ವೃತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಗೆ ಬಂದು ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವಗೆ ಮನವಿ ಸಲ್ಲಿಸಿದರು.

    ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪೌರತ್ವ ವಿಧೇಯಕದ ವಿರುದ್ಧ ಕಿಡಿಕಾರಿದ ಸಂಘಟನೆ ಮುಖಂಡರು ಈ ವಿಧೇಯಕ ಮುಸ್ಲಿಂರಗೆ ಅಷ್ಟೇ ಅಲ್ಲ.ಇದು ದೇಶದ ಎಲ್ಲಾ ಜನರಿಗೆ ಮಾರಕವಾಗಲಿದೆ. ಮೋದಿ ದೇಶದ ಯುವಕರಿಗೆ ಕೋಟ್ಯಂತರ ಉದ್ಯೋಗ ಸೃಷ್ಟಿ ಮಾಡಿ ಯುವಕರಿಗೆ ದಾರಿ ದೀಪವಾಗುತ್ತೇನೆ ಎಂದಿದ್ದರು. ಆದರೆ ಇಂದು ಲಕ್ಷಾಂತರ ಯುವಕರು ಬೀದಿಗೆ ಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಂಘಟನೆಗಳ ಮುಖಂಡರು ತೀವ್ರ ವಾಗ್ದಾಳಿ ನಡೆಸಿದರು.

  • ಹೊಂದಾಣಿಕೆ ಕೊರತೆ – ಮದುವೆಯಾದ 6 ತಿಂಗಳಲ್ಲಿ ಬಾವಿಗೆ ಹಾರಿದ ನವದಂಪತಿ

    ಹೊಂದಾಣಿಕೆ ಕೊರತೆ – ಮದುವೆಯಾದ 6 ತಿಂಗಳಲ್ಲಿ ಬಾವಿಗೆ ಹಾರಿದ ನವದಂಪತಿ

    ಬೀದರ್: ಮದುವೆಯಾದ 6 ತಿಂಗಳಲ್ಲಿಯೇ ನವ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

    ಗ್ರಾಮದ ಅಂಜಲಿ (25) ಹಾಗೂ ಅವರ ಪತಿ ಉಮೇಶ ಮಡಿವಾಳ (28) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಕಳೆದ ಮೇ ತಿಂಗಳಲ್ಲಿ ತಾಲೂಕಿನ ಮಂಠಾಳ ಗ್ರಾಮದ ಅಂಜಲಿಯನ್ನು ತಡೋಳ ಗ್ರಾಮದ ಉಮೇಶನಿಗೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾದಾಗಿನಿಂದ ದಂಪತಿ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಆಗಾಗ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.

    ಗುರುವಾರ ತಡ ರಾತ್ರಿ ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದ್ದು, ಇಬ್ಬರು ಕೂಡಿಯೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿದು ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ಸಹಾಯದೊಂದಿಗೆ ಬಾವಿಯಿಂದ ಶವಗಳನ್ನು ಮೇಲೆತ್ತಿದ್ದಾರೆ. ಸ್ಥಳಕ್ಕೆ ಮಂಠಾಳ ಸಿಪಿಐ ಮಹೇಶಗೌಡ ಪಾಟೀಲ, ಪಿಎಸ್‍ಐ ಅರುಣಕುಮಾರ ಆಗಮಿಸಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಭಿಕ್ಷುಕರು, ಅಲೆಮಾರಿಗಳಿಗೆ ಅನ್ನದಾತರು-ವೇಸ್ಟ್ ಆಗೋ ಆಹಾರದ ಹಂಚಿಕೆದಾರರು

    ಭಿಕ್ಷುಕರು, ಅಲೆಮಾರಿಗಳಿಗೆ ಅನ್ನದಾತರು-ವೇಸ್ಟ್ ಆಗೋ ಆಹಾರದ ಹಂಚಿಕೆದಾರರು

    ಬೀದರ್: ನಗರದಲ್ಲಿ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ಅಲೆಮಾರಿಗಳಿಗೆ ಇಂದಿನ ನಮ್ಮ ಪಬ್ಲಿಕ್ ಹೀರೋಗಳು ಅನ್ನದಾತರಾಗಿದ್ದಾರೆ.

    ಡಿಗ್ರಿ, ಡಿಪ್ಲೋಮಾ, ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ಬೀದರ್ ನಗರದ ಹೊಸ ಬಸ್ ನಿಲ್ದಾಣದ ಬಳಿ ರಿಶೈನ್ ಎಂಬ ಎನ್‍ಜಿಓ ಕಟ್ಟಿಕೊಂಡಿದ್ದಾರೆ. ಈ ರಿಶೈನ್ ಎನ್‍ಜಿಓದ ಸದಸ್ಯರೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಈ ತಂಡದ ಸದಸ್ಯರು ಪ್ರತಿದಿನ ಹಸಿವಿನಿಂದ ಮಲಗುವವರಿಗೆ ಅನ್ನ ನೀಡುತ್ತಿದ್ದಾರೆ. ಮದುವೆ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ವೇಸ್ಟ್ ಆಗಿರೋ ಉಳಿಯೋ ಅನ್ನವನ್ನು ಈ ತಂಡ ಸಂಗ್ರಹಿಸುತ್ತದೆ. ಭಿಕ್ಷುಕರು, ಅನಾಥರು, ಅಲೆಮಾರಿಗಳಿಗೆ ಸಂಗ್ರಹಿಸಿದ ಆಹಾರವನ್ನು ಹಂಚಿಕೆ ಮಾಡ್ತಿದೆ. ರಿಶೈನ್ ತಂಡದ ಸದಸ್ಯರು ಕಳೆದ 2 ವರ್ಷಗಳಿಂದ 24 ಗಂಟೆಗಳ ಕಾಲವೂ ಈ ಸೇವೆಯನ್ನು ಮಾಡುತ್ತಿದ್ದಾರೆ.

    ಅನ್ನ ಸಾಗಿಸಲು ಗಾಡಿ ಇಲ್ಲದೆ ಕೈಯಿಂದ ಹಣ ಹಾಕಿ ಆಟೋದಲ್ಲಿ ಸಾಗಿಸುತ್ತಿದ್ದಾರೆ. ನಿಮ್ಮ ಸಮಾರಂಭಗಳಲ್ಲಿ ಮಣ್ಣುಪಾಲು ಆಗುವ ಆಹಾರವನ್ನು ಇವರಿಗೆ ನೀಡಿದರೆ ಅದನ್ನು ಅನಾಥರಿಗೆ ತಲುಪಿಸುತ್ತಾರೆ. ಜೊತೆಗೆ ಅನ್ನ ಕೊಟ್ಟವರಿಗೆ ಒಂದು ಸಸಿಕೊಟ್ಟು ಪರಿಸರ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಪಿಂಚಣಿ, ಆರೋಗ್ಯ ಸಮಸ್ಯೆ ಅನುಭವಿಸುತ್ತಿರುವ ಸಾರ್ವಜನಿಕರಿಗೆ ನೆರವು ಕೊಡಿಸುತ್ತಿದ್ದಾರೆ.

    ಎಲ್ಲಿ ಮಾನವೀಯತೆ ಇರುತ್ತದೆಯೋ ಅಲ್ಲಿ ದೇವರ ಪ್ರೀತಿ ಇರುತ್ತದೆ ಎಂಬುವುದು ಈ ತಂಡದ ಮಾತು. ಈ ತಂಡಕ್ಕೆ ಇನ್ಫೋಸಿಸ್ ಪೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನು ಭೇಟಿಯಾಗಬೇಕು ಅನ್ನೋದು ಆಸೆಯಾಗಿದೆ.

  • ಪರಿಹಾರಕ್ಕಾಗಿ ಅಧಿಕಾರಿ ಮುಂದೆ ಸೆರಗು ಒಡ್ಡಿ ಅಜ್ಜಿ ಕಣ್ಣೀರು

    ಪರಿಹಾರಕ್ಕಾಗಿ ಅಧಿಕಾರಿ ಮುಂದೆ ಸೆರಗು ಒಡ್ಡಿ ಅಜ್ಜಿ ಕಣ್ಣೀರು

    ಬೀದರ್: ಪರಿಹಾರಕ್ಕಾಗಿ ರೈತ ಮಹಿಳೆಯೊಬ್ಬರು ಜಂಟಿ ನಿರ್ದೇಶಕನ ಮುಂದೆ ಸೆರಗು ಒಡ್ಡಿ, ಕಣ್ಣೀರು ಹಾಕಿ ಅಳಲು ತೋಡಿಕೊಂಡ ಘಟನೆ ಬೀದರಿನ ಕೃಷಿ ಜಂಟಿ ನಿರ್ದೇಶಕರ ಕಚೇರಿ ಮುಂಭಾಗ ಇಂದು ನಡೆದಿದೆ.

    ಎರಡು ವರ್ಷಗಳ ಹಿಂದೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮುಧೋಳ ಗ್ರಾಮದ ಬಾಬುರಾವ್(60) ಎಂಬ ರೈತ ವಿವಿಧ ಬ್ಯಾಂಕ್ ಗಳಲ್ಲಿ 1 ಲಕ್ಷ ಬೆಳೆ ಸಾಲ ಮಾಡಿದ್ದರು. ಈ ಸಾಲ ಮರುಪಾವತಿ ಮಾಡಲಾಗದೆ ವಿಷ ಸೇವಿಸಿ ಬಾಬುರಾವ್ ಆತ್ಮಹತ್ಯೆಗೆ ಶರಣಾಗಿದ್ದರು. ಅಂದು ಜನಪ್ರತಿನಿಧಿಗಳು ಹಾಗೂ ಕೃಷಿ ಅಧಿಕಾರಿಗಳು ಶೀಘ್ರ ಪರಿಹಾರ ಕೊಡುವುದಾಗಿ ಹೇಳಿದ್ದರು. ಆದರೆ ಎರಡು ವರ್ಷಗಳು ಕಳೆದರೂ ಪರಿಹಾರ ಸಿಗದಿದ್ದಕ್ಕೆ ಇಂದು ರೈತನ ಪತ್ನಿ ಸಿದ್ದಮ್ಮ, ಮೊಮ್ಮಗಳು ಹಾಗೂ ಕರವೇ ಕಾರ್ಯಕರ್ತರು ಜಂಟಿ ಕೃಷಿ ಇಲಾಖೆಯ ಮುಂಭಾಗ ಪ್ರತಿಭಟನೆ ಮಾಡಿದರು.

    ಸಿದ್ದಮ್ಮ ಪ್ರತಿಭಟನೆ ಮಾಡುವಾಗ ಸ್ಥಳಕ್ಕೆ ಬಂದ ಜಂಟಿ ಕೃಷಿ ನಿರ್ದೇಶಕ ಸಿ.ವಿದ್ಯಾನಂದ್ ಮುಂದೆ ಪತಿಗೆ ಪರಿಹಾರ ನೀಡಿ ಎಂದು ಸೀರೆ ಸೆರಗು ಒಡ್ಡಿ, ಕಣ್ಣೀರು ಹಾಕಿದರು. ಸಿದ್ದಮ್ಮ ಹಲವಾರು ಬಾರಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪರಿಹಾರ ಸಿಗದೆ ಸಿದ್ದಮ್ಮ ನೊಂದಿದ್ದಾರೆ.

  • ವಿದೇಶದಿಂದ ಬಂದ ಗೆಳೆಯನ ಭೇಟಿಯಾಗಲು ಬಂದಿದ್ದ ಸ್ನೇಹಿತನ ಸಾವು

    ವಿದೇಶದಿಂದ ಬಂದ ಗೆಳೆಯನ ಭೇಟಿಯಾಗಲು ಬಂದಿದ್ದ ಸ್ನೇಹಿತನ ಸಾವು

    ಬೀದರ್: ವಿದೇಶದಿಂದ ಬಂದಿದ್ದ ಗೆಳೆಯನ್ನು ಮಾತನಾಡಿಸಲು ಬಂದ ಯುಕನೋರ್ವ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬಸವಕಲ್ಯಾಣ ತಾಲೂಕಿನ ಕೋಹಿನೂರ ಹಾಗೂ ವಿ.ಕೆ. ಸಲಗರ ಗ್ರಾಮದ ಮಧ್ಯೆ ನಡೆದಿದೆ.

    ಅಪಘಾತದಲ್ಲಿ ಸಾವನ್ನಪ್ಪಿದ ಯುವಕನನ್ನು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಮೊಹಮ್ಮದ್ ನಜೀಮೋದ್ದೀನ್ ಗೌಸೋದ್ದೀನ್ ಶೇಖ್ (26) ಎಂದು ಗುರುತಿಸಲಾಗಿದೆ. ವಿದೇಶದಿಂದ ಬಂದ ಸ್ನೇಹಿತನನ್ನು ಮಾತನಾಡಿಸಿಕೊಂಡು ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ.

    ವಿದೇಶದಿಂದ ಆಗಮಿಸಿದ್ದ ಗೆಳೆಯನನ್ನು ಭೇಟಿ ಮಾಡಲೆಂದು ಇಂದು ಸಂಜೆ ವಿ.ಕೆ. ಸಲಗರ ಗ್ರಾಮಕ್ಕೆ ತೆರಳಿದ್ದ ಮೊಹಮ್ಮದ್ ನಜೀಮೋದ್ದೀನ್ ಗೌಸೋದ್ದೀನ್ ಶೇಖ್, ಗೆಳೆಯನೊಂದಿಗೆ ಮಾತನಾಡಿ ಮರಳಿ ಗ್ರಾಮಕ್ಕೆ ಹಿಂದಿರುಗುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಸೇತುವೆ ಕೆಳಗೆ ಬಿದಿದೆ. ಪರಿಣಾಮ ಶೇಖ್‍ಗೆ ಗಂಭೀರವಾದ ಗಾಯಗಳಗಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಈ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೆಟ್ರೋಲ್ ಹಣ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಪುಂಡರ ಹಲ್ಲೆ

    ಪೆಟ್ರೋಲ್ ಹಣ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಪುಂಡರ ಹಲ್ಲೆ

    ಬೀದರ್: ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡುವ ವಿಚಾರಕ್ಕೆ ಕೆಲ ಪುಂಡರು ಬಂಕ್ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಭಾಲ್ಕಿ ಪಟ್ಟಣದ ಭಾರತ್ ಪೆಟ್ರೋಲಿಯಂ ಬಂಕ್ ನಲ್ಲಿ ತಡರಾತ್ರಿ ನಡೆದಿದೆ.

    ತಡರಾತ್ರಿ ನಾಲ್ವರ ತಂಡವೊಂದು ಭಾಲ್ಕಿಯಲ್ಲಿನ ಭಾರತ್ ಪೆಟ್ರೋಲಿಯಂ ಬಂಕ್‍ಗೆ ಬಂದು ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಬಳಿಕ ಸಿಬ್ಬಂದಿ ಹಣ ಕೇಳಿದಾಗ ಪುಂಡರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಬಂಕ್ ಸಿಬ್ಬಂದಿ ಹಣ ಕೊಡಿ ಎಂದಾಗ ನಮ್ಮ ಬಳಿ ಹಣ ಇಲ್ಲ. ಸ್ವೈಪಿಂಗ್ ಮಿಷನ್ ಇದ್ರೆ ಹೇಳಿ ಅದರಲ್ಲಿ ಹಾಕುತ್ತೇವೆ ಎಂದಿದ್ದಾರೆ. ಆಗ ಬಂಕ್ ಸಿಬ್ಬಂದಿ ನಮ್ಮಲ್ಲಿ ಸ್ವೈಪಿಂಗ್ ಮಿಷನ್ ಇಲ್ಲಾ ಹಣ ಕೊಡಿ ಎಂದಿದ್ದಾರೆ. ಈ ವೇಳೆ ಪುಂಡರು ಹಾಗೂ ಸಿಬ್ಬಂದಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ.

    ಬಂಕ್ ಸಿಬ್ಬಂದಿಯ ಮೇಲೆ ಪುಂಡರು ಗಂಭೀರವಾಗಿ ಹಲ್ಲೆ ಮಾಡಿದ್ದು ಸಿಬ್ಬಂದಿಗೆ ತೀವ್ರವಾದ ಗಾಯಗಳಗಿವೆ. ಸದ್ಯ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋ ಮಾಡಿದ್ದು, ವಿಡಿಯೋ ಆಧಾರದ ಮೇಲೆ ನಗರದ ಪೊಲೀಸರು ತನಿಖೆ ನಡೆಸಿ ವಿಜಯಕುಮಾರ್, ದಿಲೀಪ್ ಹಾಗೂ ಮೇಘರಾಜ್ ಮೂವರು ಆರೋಪಿಗಳನ್ನು ಗುರುತಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸೀಟ್ ಬೆಲ್ಟ್ ತೆಗೆಯಲಾಗದೆ ಕಾರಿನಲ್ಲೆ ಮಹಿಳೆ ಸಜೀವ ದಹನ

    ಸೀಟ್ ಬೆಲ್ಟ್ ತೆಗೆಯಲಾಗದೆ ಕಾರಿನಲ್ಲೆ ಮಹಿಳೆ ಸಜೀವ ದಹನ

    ಬೀದರ್: ಸೀಟ್ ಬೆಲ್ಟ್ ತೆಗೆಯಲಾಗದೆ ಕಾರಿನಲ್ಲಿಯೇ ಮಹಿಳೆ ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ನಿರ್ಣಾ ಕ್ರಾಸ್ ಬಳಿ ನಡೆದಿದೆ.

    ಕಲ್ಯಾಣಿ (42) ಸಜೀವ ದಹನವಾದ ಮಹಿಳೆ. ಇಂದು ಬೆಳಗ್ಗಿನ ಜಾವ ಒಂದೇ ಕುಟುಂಬದ ನಾಲ್ವರು ಹುಂಡೈ ಕಾರಿನಲ್ಲಿ ಮಹಾರಾಷ್ಟ್ರ ಉದಗೀರ್ ನಿಂದ ಹೈದರಾಬಾದ್‍ಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಕಾರಿನ ಹಿಂಬದಿಯ ಎಸಿ ಬಿಸಿಯಾಗಿ ಸ್ಫೋಟಗೊಂಡಿದೆ. ಪರಿಣಾಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಮಹಿಳೆ ಸಜೀವ ದಹನವಾಗಿದ್ದಾರೆ.

    ಕಾರಿಗೆ ಬೆಂಕಿ ತಗುಲಿದ ಗಲಿಬಿಲಿಯಲ್ಲಿ ಸೀಟ್ ಬೆಲ್ಟ್ ತೆಗೆಯಲಾಗದೆ ಕಲ್ಯಾಣಿ ಸೀಟ್‍ನಲ್ಲಿಯೇ ಸಜೀವ ದಹನವಾಗಿರುವ ದೃಶ್ಯ ಎಲ್ಲರ ಕರಳು ಕಿತ್ತು ಬರುವಂತ್ತಿದೆ. ಈ ಘಟನೆಯಲ್ಲಿ ಪತಿ ಉದಯಕುಮಾರ್ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

    ಸದ್ಯ ಮೂವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮನ್ನಾಏಖೇಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ಮನ್ನಾಏಖೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸುಡು ಬಿಸಿಲಿನಿಂದ ದೂರಾಗಿ ಮಂಜಿನಗರಿಯಾದ ಗಡಿ ಜಿಲ್ಲೆ

    ಸುಡು ಬಿಸಿಲಿನಿಂದ ದೂರಾಗಿ ಮಂಜಿನಗರಿಯಾದ ಗಡಿ ಜಿಲ್ಲೆ

    ಬೀದರ್: ಸದಾ ಬಿಸಿಲಿನ ಬೆಗೆಯಿಂದ ಸುಡುತ್ತಿದ್ದ ಗಡಿ ಜಿಲ್ಲೆ ಬೀದರ್ ಅರಬ್ಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಮಂಜಿನನಗರಿಯಾಗಿ ಬದಲಾಗಿದ್ದು, ಮೊದಲ ಬಾರಿಗೆ ಕೂಲ್ ವಾತಾವರಣ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ.

    ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಬೀದರ್ ಜಿಲ್ಲೆ ಮಂಜಿನಿಂದ ಆವರಿಸಿಕೊಂಡಿದೆ. ಯಾವಾಗಲೂ ಕೆಂಡದಂತ ಬಿಸಿಲಿನ ಬೇಗೆಗೆ ಸುಡುತ್ತಿದ್ದ ಜನರು ಇಂದು ಮಂಜಿನ ವಾತವಾರಣಕ್ಕೆ ಮನಸೋತ್ತಿದ್ದಾರೆ.

    ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ದಟ್ಟವಾದ ಮಂಜು ಕವಿದಿದ್ದು ಜನರು ಸುಂದರ ವಾತಾವರಣವನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಚಳಿ ಗಡಿ ಜಿಲ್ಲೆಯಲ್ಲಿ ದಾಖಲಾಗಿದ್ದು, ಒಂದೆಡೆ ಜಿಲ್ಲೆ ಮಂಜಿನ ನಗರಿಯಾಗಿದೆ ಎಂದು ಜನರು ಖುಷಿ ಪಟ್ಟರೆ, ಇನ್ನೊಂದೆಡೆ ಚಳಿಗೆ ಹೈರಾಣಾಗಿದ್ದಾರೆ.

    ಶಬ್ಬಲ್ ಬರಿದ್, ಕೋಟೆ, ರಿಂಗ್ ರೋಡ್ ಸೇರಿದಂತೆ ಹಲವು ಕಡೆ ಜನರು ಹೆಚ್ಚಾಗಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದರು. ಆದರೆ ಇಂದು ದಟ್ಟವಾದ ಮಂಜು ಕವಿದಿರುವ ವಾತಾವರಣ ಇರುವ ಪರಿಣಾಮ ಜನರು ಮನೆಯಿಂದ ಹೊರಗೆ ಬಾದರೆ ಬೆಚ್ಚಗೆ ಕುಳಿತಿದ್ದಾರೆ.