Tag: bidar

  • ಬೀದರ್‌ನಲ್ಲಿ ಇಂದು ಮೂವರು ಸಾವು- 45 ಜನರಿಗೆ ಕೊರೊನಾ ಸೋಂಕು

    ಬೀದರ್‌ನಲ್ಲಿ ಇಂದು ಮೂವರು ಸಾವು- 45 ಜನರಿಗೆ ಕೊರೊನಾ ಸೋಂಕು

    ಬೀದರ್: ಜಿಲ್ಲೆಯಲ್ಲಿ ದಿನೇ ದಿನೇ ಸಾವಿನ ರಣಕೇಕೆ ಹಾಕುತ್ತ ಕ್ರೂರಿ ಕೊರೊನಾ ಅಬ್ಬರಿಸುತ್ತಿದೆ. ಇಂದು ಸಹ ಗಡಿ ಜಿಲ್ಲೆಯಲ್ಲಿ ಮೂವರ ಬಲಿಯೊಂದಿಗೆ ತನ್ನ ಮರಣ ಮೃದಂಗ ವನ್ನು ಮುಂದುವರೆಸಿದೆ.

    ಒಟ್ಟು 45 ಜನಕ್ಕೆ ಕೊರೊನಾ ಪಾಸಿಟಿವ್ ಧೃಡವಾಗಿದ್ದು, ಅದರಲ್ಲಿ ಮೂವರನ್ನು ಬಲಿ ಪಡೆದಿದೆ. ಬೀದರ್ ನಗರದ 70 ವರ್ಷದ ವೃದ್ಧೆ, 60 ವರ್ಷದ ವೃದ್ಧ ಹಾಗೂ 52 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಉಸಿರಾಟದ ತೊಂದರೆ ಹಾಗೂ ಜ್ವರದಿಂದ ಬಳಲುತ್ತಿದ್ದ ಮೂವರು ಇಂದು ಮಹಾಮಾರಿಗೆ ಬಲಿಯಾಗಿದ್ದಾರೆ. ಬೀದರ್‍ನಲ್ಲಿ 22, ಹುಮ್ನಬಾದ್ ನಲ್ಲಿ 13 ಬಸವಕಲ್ಯಾಣದಲ್ಲಿ 9 ಹಾಗೂ ಕಮಲಾನಗರ 1 ಸೇರಿದಂತೆ ಇಂದು ಒಟ್ಟು 45 ಜನಕ್ಕೆ ಸೋಂಕು ಧೃಡವಾಗಿದೆ.

    ಕಂಟೈನ್ಮೆಂಟ್ ಝೋನ್ ಹಾಗೂ ಪ್ರಾಥಮಿಕ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1377ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 733 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 585 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿಯವರೆಗೆ 57 ಜನರನ್ನು ಮಹಾಮಾರಿ ಬಲಿ ಪಡೆದಿದೆ.

  • ಬೀದರ್‌ನಲ್ಲಿ ಇಂದು ಕೊರೊನಾಗೆ ಇಬ್ಬರು ಬಲಿ- ಸೋಂಕಿತರ ಸಂಖ್ಯೆ 1191ಕ್ಕೆ ಏರಿಕೆ

    ಬೀದರ್‌ನಲ್ಲಿ ಇಂದು ಕೊರೊನಾಗೆ ಇಬ್ಬರು ಬಲಿ- ಸೋಂಕಿತರ ಸಂಖ್ಯೆ 1191ಕ್ಕೆ ಏರಿಕೆ

    ಬೀದರ್: ಜಿಲ್ಲೆಯಲ್ಲಿ ಮಹಾಮಾರಿಯ ಅಟ್ಟಹಾಸಕ್ಕೆ ಕೊನೆಯೇ ಇಲ್ಲದಂತಾಗಿದ್ದು, ಇಂದು ಕೂಡ ಇಬ್ಬರು ವೃದ್ಧರನ್ನು ಬಲಿ ಪಡೆಯುವ ಮೂಲಕ ಮತ್ತೆ ಆರ್ಭಟಿಸಿದೆ.

    ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬೀದರ್‍ನ ಓಲ್ಡ್ ಸಿಟಿಯ 66 ಹಾಗೂ 65 ವರ್ಷದ ವೃದ್ಧರು ಮಹಾಮಾರಿಗೆ ಬಲಿಯಾಗಿದ್ದಾರೆ. ಜೊತೆಗೆ 53 ಜನಕ್ಕೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಬೀದರ್‍ನಲ್ಲಿ 33, ಬಾಲ್ಕಿಯಲ್ಲಿ 8, ಔರಾದ್‍ನಲ್ಲಿ 6, ಹುಮ್ನಬಾದ್‍ನಲ್ಲಿ 5, ಬಸವಕಲ್ಯಾಣದಲ್ಲಿ 1 ಸೇರಿದಂತೆ 54 ಜನಕ್ಕೆ ಪಾಸಿಟಿವ್ ಧೃಡವಾಗಿದೆ. ಜಿಲ್ಲೆಯಲ್ಲಿ ಸಾವು ಹಾಗೂ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನ ಆತಂಕಗೊಂಡಿದ್ದಾರೆ.

    ಕಂಟೈನ್ಮೆಂಟ್ ಝೋನ್ ಹಾಗೂ ಪ್ರಾಥಮಿಕ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1191ಕ್ಕೆ ಏರಿಕೆಯಾದೆ. ಇದರಲ್ಲಿ 670 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 466 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 55ಕ್ಕೆ ಏರಿಯಾಗಿದೆ.

  • ಸಂಸದ ಭಗವಂತ್ ಖೂಬಾ ಸೇರಿ ಬೀದರ್‌ನಲ್ಲಿ 35 ಜನರಿಗೆ ಕೊರೊನಾ

    ಸಂಸದ ಭಗವಂತ್ ಖೂಬಾ ಸೇರಿ ಬೀದರ್‌ನಲ್ಲಿ 35 ಜನರಿಗೆ ಕೊರೊನಾ

    ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ಸಂಸದರು ಸೇರಿದಂತೆ 35 ಜನರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ.

    ಸಂಸದ ಭಗವಂತ್ ಖೂಬಾಗೆ ಇಂದು ಪಾಸಿಟಿವ್ ಧೃಡವಾಗಿದ್ದು, ತಮ್ಮ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೀದರ್ ನಲ್ಲಿ 11, ಬಾಲ್ಕಿಯಲ್ಲಿ 11, ಹುಮ್ನಬಾದ್ ನಲ್ಲಿ 10 ಬಸವಕಲ್ಯಾಣದಲ್ಲಿ 3 ಜಿಲ್ಲೆಯಾದ್ಯಂತ ಒಟ್ಟು 35 ಕೊರೊನಾ ಪಾಸಿಟಿವ್ ಪ್ರಕರಣಗಳು ಇಂದು ದೃಢಪಟ್ಟಿವೆ. ಸಂಸದರಿಗೆ ಹೇಗೆ ಕೊರೊನಾ ವಕ್ಕಿಸಿತು ಎಂಬುದೇ ಆಶ್ಚರ್ಯವಾಗಿದ್ದು, ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ.

    ಉಳಿದಂತೆ ಎಲ್ಲರಿಗೂ ಪ್ರಾಥಮಿಕ ಹಾಗೂ ಕಂಟೈನ್ಮೆಂಟ್ ಝೋನ್ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1138ಕ್ಕೆ ಏರಿಕೆಯಾಗಿದೆ. ಇದರಲ್ಲಿ 667 ಜನ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 418 ಸಕ್ರಿಯ ಪ್ರಕರಣಗಳಿದ್ದು, 53 ಜನರನ್ನು ಮಹಾಮಾರಿ ಬಲಿ ಪಡೆದಿದೆ. ದಿನೇ ದಿನೇ ಜಿಲ್ಲೆಯಲ್ಲಿ ಮಹಾಮಾರಿ ಅಟ್ಟಹಾಸ ಮೇರೆಯುತ್ತಿದ್ದು, ಜಿಲ್ಲೆಯ ಜನ ತೀವ್ರ ಆತಂಕಗೊಂಡಿದ್ದಾರೆ.

  • ಕಲಬುರಗಿ, ಬೀದರ್ ಸೇರಿ ರಾಜ್ಯದ ಹಲವೆಡೆ ವರುಣನ ಅಬ್ಬರ

    ಕಲಬುರಗಿ, ಬೀದರ್ ಸೇರಿ ರಾಜ್ಯದ ಹಲವೆಡೆ ವರುಣನ ಅಬ್ಬರ

    – ಸಿಲಿಕಾನ್ ಸಿಟಿಯಲ್ಲೂ ತಂಪೆರೆದ ಮಳೆ
    – ಕಲಬುರಗಿಯಲ್ಲಿ ಬೆಳೆ ಹಾನಿ
    – ಬೀದರ್ ರೈತರ ಮೊಗದಲ್ಲಿ ಸಂತಸ

    ಬೆಂಗಳೂರು: ಉದ್ಯಾನ ನಗರಿ ಸೇರಿದಂತೆ ರಾಜ್ಯದ ಹಲವೆಡೆ ವರುಣನ ಅಬ್ಬರ ಮುಂದುವರಿದಿದ್ದು, ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಬೆಂಗಳೂರಿನಲ್ಲಿ ಸಹ ಒಂದು ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ನಗರವನ್ನು ತಂಪಾಗಿಸಿದೆ.

    ಬೆಂಗಳೂರಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಲಾಕ್‍ಡೌನ್ ಹಿನ್ನೆಲೆ ಅಷ್ಟೇನು ವಾಹನಗಳು ಸಂಚರಿಸದ ಹಿನ್ನೆಲೆ ಟ್ರಾಫಿಕ್ ಸಮಸ್ಯೆ ಉಂಟಾಗಿಲ್ಲ. ಆದರೆ ತುರ್ತು ಸೇವೆಯ ವಾಹನಗಳಿಗೆ ಸ್ವಲ್ಪ ಮಟ್ಟಿಗೆ ಅಡಚಣೆ ಉಂಟಾಗಿದೆ. ಮಳೆಯಿಂದಾಗಿ ನಗರಕ್ಕೆ ತಂಪೆರೆದಂತಾಗಿದ್ದು, ಮಧ್ಯಾಹ್ನದಿಂದ ಬಿಸಿಲಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ವರಣ ತಂಪೆರೆದಿದ್ದಾರೆ. ಆದರೆ ಅಲ್ಲಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಸ್ವಲ ತೊಂದರೆಯುಂಟಾಗಿದೆ.

    ಗಡಿ ಜಿಲ್ಲೆ ಬೀದರ್ ನಲ್ಲಿ ಸತತ ಎರಡು ಗಂಟೆಯಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ವರುಣನ ಅಬ್ಬರಕ್ಕೆ ಜಿಲ್ಲೆಯ ಜನ ಜೀವನ ಅಸ್ತವ್ಯಸ್ತವಾಗಿದೆ. ಬೀದರ್, ಔರಾದ್, ಬಾಲ್ಕಿ ಹಾಗೂ ಹುಮ್ನಬಾದ್ ಸೇರಿದಂತೆ ಜಿಲ್ಲೆಯಾದ್ಯಂತ ಮಳೆರಾಯ ಅಬ್ಬರಿಸುತ್ತಿದ್ದಾನೆ. ಮಳೆರಾಯನ ಅಬ್ಬರದಿಂದಾಗಿ ಜಿಲ್ಲೆಯ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಮಳೆ ಪ್ರಾರಂಭವಾದರೂ ಜಿಲ್ಲೆಯಲ್ಲಿ ಮಳೆಯಾಗದ ಕಾರಣ ಬೇಸರದಲ್ಲಿದ್ದ ರೈತರಿಗೆ ಈ ಮಳೆಯಿಂದ ಸಂತಸ ಉಂಟಾಗಿದೆ. ಇದೀಗ ಬಿತ್ತನೆ ಕಡೆ ಮುಖ ಮಾಡಲಿದ್ದಾರೆ. ಇಂದು ರಾತ್ರಿ 8 ಗಂಟೆಯಿಂದ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಾಗಲಿದ್ದು, ಮೊತ್ತೊಂದು ಕಡೆ ವರುಣ ಅಬ್ಬರಿಸುತ್ತಿದ್ದಾನೆ.

    ಕಲಬುರ್ಗಿ ನಗರ ಮತ್ತು ಜಿಲ್ಲೆಯ ಹಲವೆಡೆ ಮಳೆ ಅಬ್ಬರಿಸಿ ಬೊಬ್ಬಿರಿದಿದ್ದು, ಕೆಲವೊಮ್ಮೆ ಜಿಟಿ ಜಿಟಿ, ಇನ್ನೂ ಕೆಲವೊಮ್ಮೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮಳೆ ಬಿರುಸಾಗಿ ಸುರಿದಿದ್ದು, ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹೊಲಗಳಿಗೂ ನೀರು ನುಗ್ಗಿದ್ದು, ಬೆಳೆಗಳು ಜಲಾವೃತಗೊಂಡಿವೆ. ಕಮಲಾಪುರ ತಾಲೂಕಿನ ಓಕಳಿ ಮತ್ತಿತರ ಕಡೆ ಜಮೀನುಗಳಲ್ಲಿ ನೀರು ಹರಿಯುತ್ತಿದೆ.

    ಮಳೆ ನೀರಿಗೆ ಗೇಣು ಉದ್ದದ ಪೈರು ಕೊಚ್ಚಿ ಹೋಗಿದ್ದು, ತೊಗರಿ, ಹೆಸರು, ಉದ್ದು, ಎಳ್ಳು ಇತ್ಯಾದಿಗಳನ್ನು ರೈತರು ಬಿತ್ತನೆ ಮಾಡಿದ್ದಾರೆ. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

  • ಬೀದರ್‌ನಲ್ಲಿ ಇಂದು 42 ಜನರಿಗೆ ಕೊರೊನಾ- ಮಹಾಮಾರಿಯ ನಿಯಂತ್ರಣಕ್ಕಾಗಿ ಲಾಕ್‍ಡೌನ್

    ಬೀದರ್‌ನಲ್ಲಿ ಇಂದು 42 ಜನರಿಗೆ ಕೊರೊನಾ- ಮಹಾಮಾರಿಯ ನಿಯಂತ್ರಣಕ್ಕಾಗಿ ಲಾಕ್‍ಡೌನ್

    – ಒಟ್ಟು ಸೋಂಕಿತರ ಸಂಖ್ಯೆ 1103ಕ್ಕೆ ಏರಿಕೆ

    ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ  ಚೀನಾ ಮಹಾಮಾರಿಯ ಆರ್ಭಟ ನಿಲ್ಲುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಇಂದೂ ಸಹ 42 ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯ ಜನರನ್ನು ಭಯಭೀತರನ್ನಾಗಿಸಿದೆ. ಹೀಗಾಗಿ ನಾಳೆಯಿಂದ ಒಂದು ವಾರಗಳ ಕಾಲ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿ ಮಾಡಲಾಗಿದೆ.

    ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಲಾಕ್‍ಡೌನ್ ಘೋಷಣೆ ಮಾಡಿದ್ದು, ಅಗತ್ಯ ವಸ್ತುಗಳನ್ನು ಬಿಟ್ಟು ಉಳಿದೆಲ್ಲವೂ ನಾಳೆಯಿಂದ ಬಂದ್ ಆಗಲಿವೆ. ಇಂದೂ ಸಹ ಬೀದರ್ ನಲ್ಲಿ 42 ಜನರಿಗೆ ಕೊರೊನಾ ಪಾಸಿಟಿವ್ ಧೃಡವಾಗುವ ಮೂಲಕ ಜಿಲ್ಲೆಯಲ್ಲಿ ಮಹಾಮಾರಿ ಅಟ್ಟಹಾಸ ಮೆರೆದಿದೆ.

    ಬೀದರ್‍ನಲ್ಲಿ 18, ಬಾಲ್ಕಿಯಲ್ಲಿ 5, ಹುಮ್ನಬಾದ್‍ನಲ್ಲಿ 15, ಔರಾದ್‍ನಲ್ಲಿ 2, ಕಮಲಾನಗರದಲ್ಲಿ 2 ಸೇರಿದಂತೆ ಒಟ್ಟು 42 ಜನಕ್ಕೆ ಪಾಸಿಟಿವ್ ಧೃಡವಾಗಿದೆ. ಕಂಟೈನ್ಮೆಂಟ್ ಝೋನ್, ಪ್ರಾಥಮಿಕ ಹಾಗೂ ಸಾರಿ ಕೇಸ್‍ನಿಂದಾಗಿ ಸೋಂಕು ಧೃಡವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1103ಕ್ಕೆ ಏರಿಕೆಯಾಗಿದೆ. ಇದರಲ್ಲಿ 613 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 437 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿಯವರೆಗೆ 53 ಜನರನ್ನು ಮಹಾಮಾರಿ ಬಲಿ ಪಡೆದಿದೆ.

  • ಬೀದರ್‌ನಲ್ಲಿ ಕೊರೊನಾಗೆ ಮತ್ತೊಬ್ಬ ಬಲಿ- ಸಾವಿರದ ಆಸುಪಾಸಿನಲ್ಲಿ ಸೋಂಕಿತರ ಸಂಖ್ಯೆ

    ಬೀದರ್‌ನಲ್ಲಿ ಕೊರೊನಾಗೆ ಮತ್ತೊಬ್ಬ ಬಲಿ- ಸಾವಿರದ ಆಸುಪಾಸಿನಲ್ಲಿ ಸೋಂಕಿತರ ಸಂಖ್ಯೆ

    ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಕೊರೊನಾಗೆ ಮತ್ತೊಬ್ಬರು ಬಲಿಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.

    ಉಸಿರಾಟ ಹಾಗೂ ಜ್ವರದಿಂದ ಬಳಲುತ್ತಿದ್ದ ಬೀದರ್‍ನ ಓಲ್ಡ್ ಸಿಟಿಯ 40 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಅಲ್ಲದೆ ಇಂದು 63 ಕೊರೊನಾ ಪಾಸಿಟಿವ್ ಪ್ರಕರಣಗಳು ಧೃಡವಾಗಿವೆ. ಹುಮ್ನಬಾದ್ 39, ಬಾಲ್ಕಿ 8, ಕಮಲಾನಗರ 8, ಔರಾದ್ 4, ಬಸವಕಲ್ಯಾಣದಲ್ಲಿ 4 ಸೇರಿದಂತೆ ಒಟ್ಟು 63 ಜನರಿಗೆ ಸೋಂಕು ತಗುಲಿದೆ.

    ಬಹುತೇಕರಿಗೆ ಕಂಟೈನ್ಮೆಂಟ್ ಝೋನ್ ಸಂಪರ್ಕ, ಪ್ರಾಥಮಿಕ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 976ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 591 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನೂ 332 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಸೋಂಕಿನ ಪ್ರಕರಣಗಳು ಸಾವಿರದ ಗಡಿ ಸಮೀಪಿಸುತ್ತಿರುವ ಹಿನ್ನೆಲೆ ಜಿಲ್ಲೆಯ ಜನತೆ ಆತಂಕ್ಕೀಡಾಗಿದ್ದಾರೆ.

  • ಬೀದರಿನಲ್ಲಿ ಇಂದು ಕೊರೊನಾಗೆ 5 ಬಲಿ – ಜಿಲ್ಲೆಯಲ್ಲಿ 850ಕ್ಕೇರಿದ ಸೋಂಕಿತರ ಸಂಖ್ಯೆ

    ಬೀದರಿನಲ್ಲಿ ಇಂದು ಕೊರೊನಾಗೆ 5 ಬಲಿ – ಜಿಲ್ಲೆಯಲ್ಲಿ 850ಕ್ಕೇರಿದ ಸೋಂಕಿತರ ಸಂಖ್ಯೆ

    ಬೀದರ್: ಗಡಿ ಜಿಲ್ಲೆ ಬೀದರಿನಲ್ಲಿ ಕೊರೊನಾ ಮರಣ ಕೇಕೆ ಮುಂದುವರಿದಿದೆ. ಬೀದರ್‍ನಲ್ಲಿ ಇಂದು 5 ಜನರ ಬಲಿಯೊಂದಿಗೆ ಮತ್ತೆ 51 ಜನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದೆ.

    ಬೀದರಿನಲ್ಲಿ 4 ಹಾಗೂ ಬಸವಕಲ್ಯಾಣದಲ್ಲಿ ಒಬ್ಬರನ್ನು ಕೊರೊನಾಗೆ ಇಂದು ಬಲಿಯಾಗಿದ್ದಾರೆ. ಬೀದರ್, ಬಸವಕಲ್ಯಾಣ, ಭಾಲ್ಕಿ, ಔರಾದ್‍ನಲ್ಲಿ ಸೇರಿ ಒಟ್ಟು 51 ಜನಕ್ಕೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಅಸ್ತಮಾ, ಉಸಿರಾಟ, ಜ್ವರ, ಹೃದಯ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಐವರು ಇಂದು ಸಾವನ್ನಪ್ಪಿದ್ದಾರೆ.

    ಇಂದು 51 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 850ಕ್ಕೆ ಏರಿಕೆಯಾಗಿದೆ. ಇದರಲ್ಲಿ 561 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾದ್ದಾರೆ. 240 ಜನಕ್ಕೆ ಸೋಂಕು ಸಕ್ರಿಯವಾಗಿದ್ದು ಜಿಲ್ಲೆಯಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಈ ಚೀನಾ ಮಹಾಮಾರಿ ದಿನೇ ದಿನೇ ಬಲಿಯನ್ನು ಪಡೆಯುತ್ತಿರುವ ವೇಗ ನೋಡಿ ಜಿಲ್ಲೆಯ ಜನರು ಆತಂಕಗೊಂಡಿದ್ದಾರೆ.

  • ಬೀದರ್​​ನಲ್ಲಿ ಕೊರೊನಾ ಮ’ರಣ’ ಕೇಕೆ – 25 ವರ್ಷದ ಯುವತಿ ಸೇರಿ 9 ಮಂದಿ ಬಲಿ

    ಬೀದರ್​​ನಲ್ಲಿ ಕೊರೊನಾ ಮ’ರಣ’ ಕೇಕೆ – 25 ವರ್ಷದ ಯುವತಿ ಸೇರಿ 9 ಮಂದಿ ಬಲಿ

    -ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 37ಕ್ಕೇರಿಕೆ

    ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ಮತ್ತೆ 9 ಜನರನ್ನು ಕೊರೊನಾ ಬಲಿ ಪಡೆಯುವ ಮೂಲಕ ಜಿಲ್ಲೆಯಲ್ಲಿ ಮಹಾಮಾರಿ ಮರಣ ಮೃದಂಗ ಬಾರಿಸಿದೆ.

    ಬೀದರ್ ನಗರದ ಓಲ್ಡ್ ಸಿಟಿಯ 70 ಹಾಗೂ 65 ವರ್ಷದ ವೃದ್ಧರು ಹಾಗೂ 54 ವರ್ಷದ ವ್ಯಕ್ತಿ ಬಲಿಯಾದ್ರೆ, ಬೀದರ್ ತಾಲೂಕಿನ ಅಮಲಾಪರ್ ಗ್ರಾಮದ 25 ವರ್ಷದ ಯುವತಿಯನ್ನು ಬಲಿ ಪಡೆದಿದೆ. ತೆಲಂಗಾಣದ ಜಹೀರಾಬಾದ್ ಮೂಲದ 63 ವರ್ಷದ ವ್ಯಕ್ತಿ ಬ್ರಿಮ್ಸ್ ನಲ್ಲಿ ಸಾವನ್ನಪ್ಪಿದ್ದು, ಬೀದರ್ ನಗರದಲ್ಲಿಯೇ ಐದು ಜನ ಕೊರೊನಾಗೆ ಬಲಿಯಾಗಿದ್ದಾರೆ. ಬಸವಕಲ್ಯಾಣ ಪಟ್ಟಣದ 60 ವರ್ಷದ ವೃದ್ಧೆ, 32 ವರ್ಷದ ಯುವತಿ, ಭಾಲ್ಕಿ 54 ವರ್ಷದ ವ್ಯಕ್ತಿ, ಚಿಟ್ಟಗುಪ್ಪ ಪಟ್ಟಣದ 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.

    ಉಸಿರಾಟ, ಕಿಡ್ನಿ, ಹೃದಯ ಸಂಬಂಧಿತ ಕಾಯಿಲೆ, ಜ್ವರ ಸೇರಿದಂತೆ ಹಲವು ಸಮಸ್ಯೆಯಿಂದ ಬಳಲುತ್ತಾ ಸಾವನ್ನಪ್ಪಿದರು. ಬಹುತೇಕರಿಗೆ ಕಂಟೈನ್‍ಮೆಂಟ್ ಝೋನ್ ನಿವಾಸಿ, ಪ್ರಾಥಮಿಕ ಸಂಪರ್ಕ, ಮುಂಬೈ ಕಂಟಕದಿಂದ ಸೋಂಕು ಧೃಡವಾಗಿದೆ. ಎಲ್ಲರಿಗೂ ಸಾವನ್ನಪ್ಪಿದ ಬಳಿಕ ಕೊರೊನಾ ಪಾಸಿಟಿವ್ ಧೃಡವಾಗಿದ್ದು, ಎರಡನೇ ದಿನಗಳಲ್ಲಿ 15 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

  • ಬೀದರ್‌ನಲ್ಲಿ ಒಂದೇ ದಿನ 6 ಜನ ಬಲಿ, ಜಿಲ್ಲೆಯಲ್ಲಿ 726ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

    ಬೀದರ್‌ನಲ್ಲಿ ಒಂದೇ ದಿನ 6 ಜನ ಬಲಿ, ಜಿಲ್ಲೆಯಲ್ಲಿ 726ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

    ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ಕೊರೊನಾ ಇಂದು ಸಾವಿನ ರಣಕೇಕೆ ಹಾಕಿದೆ. ಒಂದೇ ದಿನ 6 ಜನರನ್ನು ಬಲಿ ಪಡೆದಿದ್ದು, ಜಿಲ್ಲೆಯ ಜನರನ್ನು ಭಯಭೀತರನ್ನಾಗಿಸಿದೆ.

    ಬೀದರ್ ನ ಹಳೆ ನಗರದ 55 ವರ್ಷದ ವ್ಯಕ್ತಿ ಹಾಗೂ 70 ವರ್ಷದ ವೃದ್ಧೆ ಕೊರೊನಾಗೆ ಬಲಿಯಾಗಿದ್ದಾರೆ. ಭಾಲ್ಕಿ ಪಟ್ಟಣದ 50 ಹಾಗೂ 31 ವರ್ಷದ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಬಸವಕಲ್ಯಾಣ ಪಟ್ಟಣದ 24 ವರ್ಷದ ಯುವತಿ ಹಾಗೂ ಹುಮ್ನಬಾದ್ ಪಟ್ಟಣದ 70 ವರ್ಷದ ವೃದ್ಧೆ ಕೊರೊನಾ ಗೆ ಬಲಿಯಾಗಿದ್ದಾರೆ. ಎಲ್ಲರೂ ಬಿಪಿ, ಶುಗರ್, ಉಸಿರಾಟದ ತೊಂದರೆ ಹಾಗೂ ಜ್ವರದಿಂದ ಬಳಲುತ್ತಿದ್ದರು.

    ಇಂದು ಎಲ್ಲರ ವರದಿಗಳು ಬಂದಿದ್ದು, ಆರೂ ಜನಕ್ಕೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಜೊತೆಗೆ ಇಂದು ಜಿಲ್ಲೆಯಲ್ಲಿ 51ಜನಕ್ಕೆ ಮಹಾಮಾರಿ ವಕ್ಕರಿಸಿದೆ. ಮುಂಬೈ, ತೆಲಂಗಾಣ ಕಂಟಕ ಹಾಗೂ ಪ್ರಾಥಮಿಕ ಸಂಪರ್ಕದಿಂದಾಗಿ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 726ಕ್ಕೆ ಏರಿಕೆಯಾದ್ದು, ಇದರಲ್ಲಿ 512 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾದ್ದಾರೆ. ಇನ್ನು 187 ಜನಕ್ಕೆ ಸೋಂಕು ಸಕ್ರಿಯವಾಗಿದ್ದು, ಇಂದು 6 ಜನರನ್ನು ಬಲಿ ಪಡೆಯುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.

  • ಆರೋಗ್ಯ ಸಚಿವರ ಸೂಚನೆಗೂ ಬೆಲೆಯಿಲ್ಲ- ಪಿಪಿಇ ಕಿಟ್, ಮಾಸ್ಕ್ ಬೇಕಾಬಿಟ್ಟಿ ಎಸೆತ

    ಆರೋಗ್ಯ ಸಚಿವರ ಸೂಚನೆಗೂ ಬೆಲೆಯಿಲ್ಲ- ಪಿಪಿಇ ಕಿಟ್, ಮಾಸ್ಕ್ ಬೇಕಾಬಿಟ್ಟಿ ಎಸೆತ

    – ಸೋಂಕಿತರ ಅಂತ್ಯಕ್ರಿಯೆ ಬಳಿಕ ಬೇಜವಾಬ್ದಾರಿ

    ಬೀದರ್: ರಾಜ್ಯದಲ್ಲಿ ಕೊರೊನಾ ದಿನೇ ದಿನೇ ತನ್ನ ಅಟ್ಟಹಾಸವನ್ನು ಮುಂದುರಿಸಿದೆ. ಆದರೆ ಈ ಸಮಯದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯ ಬಳಿಕ ಸಿಬ್ಬಂದಿ ಧರಿಸಿದ ಪಿಪಿಇ ಕಿಟ್, ಮಾಸ್ಕ್‌ಗಳನ್ನು ಮುಖ್ಯ ರಸ್ತೆಯ ಪಕ್ಕದಲ್ಲೆ ಬೇಕಾಬಿಟ್ಟಿ ಬಿಸಾಡುತ್ತಿದ್ದಾರೆ.

    ನಗರದ ಮಧ್ಯ ಭಾಗದಲ್ಲಿರುವ ಬಸವನಗರ ರುದ್ರಭೂಮಿಯಲ್ಲಿ ಕೋವಿಡ್‍ಗೆ ಬಲಿಯಾಗಿರುವ ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಗುತ್ತೆ. ಈ ಪ್ರದೇಶದಿಂದ 150 ಮೀಟರ್ ದೂರದಲ್ಲಿ ಹತ್ತಾರು ಕಾಲೋನಿಗಳು, ಪ್ರಮುಖ ಕಚೇರಿಗಳು ಇವೆ.

    ಶವ ಸಂಸ್ಕಾರಕ್ಕೆ ಬಳಸಿದ ಎಲ್ಲಾ ವಸ್ತುಗಳನ್ನು ಕೊರೊನಾ ನಿಯಮದಂತೆ ಡಿಸ್‌ಪೋಸ್ ಮಾಡಬೇಕು. ಆದರೆ ಇಲ್ಲಿನ ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್, ಮಾಸ್ಕ್‌ಗಳನ್ನು ರುದ್ರ ಭೂಮಿಯಿಂದ ಹೊರಗೆ ಬಂದು ಮುಖ್ಯರಸ್ತೆಯ ಪಕ್ಕದಲ್ಲೇ ಬಿಸಾಡಿ ಹೋಗುತ್ತಿದ್ದಾರೆ.

    ಸಿಬ್ಬಂದಿ ನಿರ್ಲಕ್ಷ್ಯ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ಮಾಡಿ ಸಂಬಂಧಪಟ್ಟ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಹೇಳುತ್ತಾರೆ.

    ಕೊರೊನಾ ನಿಯಮಗಳನ್ನು ಪಾಲನೆ ಮಾಡಿ ಎಂದು ಜನರಿಗೆ ಜಾಗೃತಿ ಮೂಡಿಸಬೇಕಾದ ಆರೋಗ್ಯ ಸಿಬ್ಬಂದಿಯೇ ಹೀಗೆ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಸೋಂಕು ಹರಡುವ ಆತಂಕ ಎದುರಾಗಿದೆ.