Tag: bidar

  • ಆಕಸ್ಮಿಕ ಬೆಂಕಿ- ನೋಡ ನೋಡುತ್ತಲೇ ಹೊತ್ತಿ ಉರಿದ ಬಸ್

    ಆಕಸ್ಮಿಕ ಬೆಂಕಿ- ನೋಡ ನೋಡುತ್ತಲೇ ಹೊತ್ತಿ ಉರಿದ ಬಸ್

    ಬೀದರ್: ಚಲಿಸುತ್ತಿದ್ದ ಖಾಸಗಿ ಬಸ್ ಎಂಜಿನ್‍ನಲ್ಲಿ ಉಂಟಾದ ಅಗ್ನಿ ಅವಘಡದಿಂದಾಗಿ ನೋಡು ನೋಡುತ್ತಲೇ ಬಸ್ ತುಂಬೆಲ್ಲ ಬೆಂಕಿ ಆವರಿಸಿಕೊಂಡು ಧಗ ಧಗನೆ ಹೊತ್ತಿ ಉರಿದ ಘಟನೆ ನಡೆದಿದೆ.

    ಜಿಲ್ಲೆಯ ಹುಮನಾಬಾದ್ ಸಮಿಪದ ಬೀದರ್- ಕಲಬುರಗಿ ಹೆದ್ದಾರಿಯ ಧುಮ್ಮನಸೂರು ಗ್ರಾಮದ ಬಳಿ ತಡರಾತ್ರಿ ಘಟನೆ ನಡೆದಿದೆ. ಡ್ರೈವರ್ ಸಮಯ ಪ್ರಜ್ಞೆಯಿಂದಾಗಿ ಬಸ್‍ನಲ್ಲಿದ್ದ 17 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೀದರ್ ನಿಂದ ಬೆಂಗಳೂರಿಗೆ ಹೊರಟಿದ್ದಾಗ ರೋಡ್ ಬ್ರೇಕರ್ ಬಳಿ ಒಮ್ಮಲೆ ಜಂಪ್ ಆಗಿದ್ದು, ಹೀಗಾಗಿ ಬಸ್ ಇಂಜನ್ ನಲ್ಲಿ ಅಗ್ನಿ ಕಾಣಿಸಿಕೊಂಡಿದೆ. ಈ ಕುರಿತು ಅರಿವಾಗುತ್ತಿದ್ದಂತೆ ಚಾಲಕ ಬಸ್ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾನೆ.

    ಬಸ್ ನಿಲ್ಲಿಸಿದ ತಕ್ಷಣವೇ ಚಾಲಕ ಬಸ್‍ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾನೆ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದರಿಂದಾಗಿ ಭಾರೀ ದುರಂತವೊಂದು ತಪ್ಪಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎರಡು ಅಗ್ನಿ ಶಾಮಕ ದಳದ ತಂಡ ಬೆಂಕಿ ನಂದಿಸಲು ಹರ ಸಾಹಸ ಪಟ್ಟಿದೆ. ಆದರೆ ನಂದಿಸುವ ಕಾರ್ಯ ನಡೆಯುವಷ್ಟರಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಹುಮ್ನಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

  • ಬೀದರ್ ಜಿಲ್ಲಾಧಿಕಾರಿಗೆ ಕೊರೊನಾ ಸೋಂಕು ದೃಢ

    ಬೀದರ್ ಜಿಲ್ಲಾಧಿಕಾರಿಗೆ ಕೊರೊನಾ ಸೋಂಕು ದೃಢ

    ಬೀದರ್: ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಅವರಿಗೆ ಇಂದು ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

    ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ತಪಾಸಣೆ ಮಾಡಿಸಿದ್ದ ಜಿಲ್ಲಾಧಿಕಾರಿ ರಾಮಚಂದ್ರನ್ ಅವರಿಗೆ ಇಂದು ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಬ್ರೀಮ್ಸ್ ವೈದ್ಯರ ಸಲಹೆಯಂತೆ ಜಿಲ್ಲಾಧಿಕಾರಿಗಳು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಕೆಲ ದಿನಗಳಿಂದ ಜಿಲ್ಲಾಧಿಕಾರಿಗೆ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನಲೆ ತಪಾಸಣೆ ಮಾಡಿಸಿದ್ದು, ಇಂದು ಕೊರೊನಾ ಪಾಸಿಟಿವ್ ಇರುವುದು ಧೃಡವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ವಿ.ಜಿ.ರೆಡ್ಡಿ ಪಬ್ಲಿಕ್ ಟಿವಿಗೆ ಸ್ಪಷ್ಟ ಪಡಿಸಿದ್ದಾರೆ. ಜಿಲ್ಲಾಧಿಕಾರಿಗಳು ಮೂರು ತಿಂಗಳಿನಿಂದ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದು, ಕರ್ತವ್ಯ ಸಮಯದಲ್ಲೇ ಕೊರೊನಾ ಸೋಂಕಿತರ ಸಂಪರ್ಕದಿಂದಾಗಿ ಸೋಂಕು ತಗುಲಿರುವ ಸಾದ್ಯತೆ ಇದೆ.

  • ಆಕಸ್ಮಿಕವಾಗಿ 40 ಅಡಿಯ ಪಾಳು ಬಾವಿಗೆ ಬಿದ್ದ ಕೃಷ್ಣ ಮೃಗ ರಕ್ಷಣೆ

    ಆಕಸ್ಮಿಕವಾಗಿ 40 ಅಡಿಯ ಪಾಳು ಬಾವಿಗೆ ಬಿದ್ದ ಕೃಷ್ಣ ಮೃಗ ರಕ್ಷಣೆ

    – ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ

    ಬೀದರ್: ಮೇಯಲು ಹೋದಾಗ ಆಕಸ್ಮಿಕವಾಗಿ 40 ಅಡಿಯ ಪಾಳು ಬಾವಿಗೆ ಎರಡು ಕೃಷ್ಣ ಮೃಗಗಳು ಬಿದ್ದಿದ್ದು, ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

    ಬೀದರ್ ತಾಲೂಕಿನ ಔರಾದ್ ಸಿರ್ಸಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಎರಡು ಕೃಷ್ಣ ಮೃಗಗಳು ಬಾವಿಗೆ ಬಿದ್ದಿದ್ದನ್ನು ನೋಡುತ್ತಿದ್ದಂತೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಜಂಟಿ ಕಾರ್ಯಾರಚಣೆ ನಡೆಸಿ ಎರಡೂ ಕೃಷ್ಣ ಮೃಗಗಳನ್ನು ರಕ್ಷಿಸಿದ್ದಾರೆ. ಕಾರ್ಯಾಚರಣೆ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಜಂಟಿಯಾಗಿ ಹರಸಾಹಸಪಟ್ಟು ಎರಡು ಕೃಷ್ಣ ಮೃಗಗಳ ರಕ್ಷಣೆ ಮಾಡಿದ್ದಾರೆ. ಸತತ ಒಂದು ಗಂಟೆಗಳ ಕಾಲ ರಕ್ಷಣೆ ಕಾರ್ಯಚರಣೆ ನಡೆಸಿದ್ದು, ಕೊನೆಗೂ ಎರಡೂ ಕೃಷ್ಣ ಮೃಗಗಳನ್ನು ರಕ್ಷಣೆ ಮಾಡಿ, ಅರಣ್ಯ ಅಧಿಕಾರಿಗಳು ಅವುಗಳನ್ನು ಕಾಡಿಗೆ ಬಿಟ್ಟಿದ್ದಾರೆ.

  • ಬೀದರಿನಲ್ಲಿ ಇಂದು 8 ಮಂದಿಯ ಬಲಿಯೊಂದಿಗೆ ಸಾವಿನ ರಣಕೇಕೆ ಹಾಕಿದ ಕೊರೊನಾ

    ಬೀದರಿನಲ್ಲಿ ಇಂದು 8 ಮಂದಿಯ ಬಲಿಯೊಂದಿಗೆ ಸಾವಿನ ರಣಕೇಕೆ ಹಾಕಿದ ಕೊರೊನಾ

    ಬೀದರ್: ಗಡಿ ಜಿಲ್ಲೆ ಬೀದರಿನಲ್ಲಿ ಇಂದು ಎಂಟು ಜನರ ಬಲಿಯೊಂದಿಗೆ ಕೊರೊನಾ ಮಹಾಮಾರಿ ತನ್ನ ಸಾವಿನ ರಣಕೇಕೆ ಹಾಕಿದೆ.

    ಬೀದರ್ ತಾಲೂಕಿನ 65 ಮತ್ತು 34 ವರ್ಷದ ಮಹಿಳೆಯರು ಹಾಗೂ 62 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಹುಮ್ನಬಾದ್ ತಾಲೂಕಿನ 65 ವರ್ಷದ ವ್ಯಕ್ತಿ ಹಾಗೂ 55 ವರ್ಷದ ಮಹಿಳೆ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬಸವಕಲ್ಯಾಣದ 60 ವರ್ಷದ ವ್ಯಕ್ತಿ, ಔರಾದ್ ತಾಲೂಕಿನ 62 ವರ್ಷದ ವ್ಯಕ್ತಿ ಹಾಗೂ ಭಾಲ್ಕಿ ಪಟ್ಟಣದ 24 ವರ್ಷದ ಯುವಕ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ತೀವ್ರ ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲಿ ಸಾವನ್ನಪ್ಪಿದ ಎಂಟು ಜನರಿಗೆ ಇಂದು ಕೊರೊನಾ ಪಾಸಿಟಿವ್ ಧೃಡವಾಗಿದೆ. ಎಂಟು ಜನರ ಬಲಿಯೊಂದಿಗೆ ಜಿಲ್ಲೆಯಲ್ಲಿ ಇಂದು 99 ಜನಕ್ಕೆ ಕೊರೊನಾ ಪಾಸಿಟಿವ್ ಬಂದಿದೆ. ಬೀದರಿನಲ್ಲಿ 44, ಬಸವಕಲ್ಯಾಣದಲ್ಲಿ 30, ಹುಮ್ನಬಾದ್‍ನಲ್ಲಿ 10, ಭಾಲ್ಕಿಯಲ್ಲಿ 9, ಔರಾದ್‍ನಲ್ಲಿ 6 ಜನಕ್ಕೆ ಕೊರೊನಾ ಪಾಸಿಟಿವ್ ಬಂದಿದೆ. ಪ್ರಾಥಮಿಕ ಹಾಗೂ ಕಂಟೈನ್ಮೆಂಟ್ ಏರಿಯಾ ಸಂಪರ್ಕದಿಂದಾಗಿ ಸೋಂಕು ದೃಢವಾಗಿದೆ.

    ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,748ಕ್ಕೆ ಏರಿಕೆಯಾಗಿದೆ. ಇದರಲ್ಲಿ 2,571 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ್ದಾರೆ. 1,057 ಜನರಿಗೆ ಸೋಂಕು ಸಕ್ರಿಯವಾಗಿದ್ದು ಇಲ್ಲಿಯವರೆಗೆ 116 ಜನರನ್ನು ಮಹಾಮಾರಿ ಬಲಿ ಪಡೆದಿದೆ. ಅನ್ಯ ಕಾರಣದಿಂದಾಗಿ 4 ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  • ಬೀದರ್‌ನಲ್ಲಿ ಓರ್ವನ ಬಲಿಯೊಂದಿಗೆ ಶತಕ ಬಾರಿಸಿದ ಕೊರೊನಾ

    ಬೀದರ್‌ನಲ್ಲಿ ಓರ್ವನ ಬಲಿಯೊಂದಿಗೆ ಶತಕ ಬಾರಿಸಿದ ಕೊರೊನಾ

    ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ಓರ್ವ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದು, 119 ಜನರಿಗೆ ಸೋಂಕು ತಗುಲಿದೆ.

    ಬಾಲ್ಕಿ ತಾಲೂಕಿನ 50 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಳಲುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಇಂದು ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.

    ಓರ್ವನ ಬಲಿಯೊಂದಿಗೆ ಇಂದು ಜಿಲ್ಲೆಯಲ್ಲಿ 119 ಜನಕ್ಕೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಬೀದರ್‍ನಲ್ಲಿ 42, ಬಾಲ್ಕಿ 34, ಔರಾದ್ 17, ಹುಮ್ನಬಾದ್ 14, ಬಸವಕಲ್ಯಾಣದಲ್ಲಿ 12 ಜನಕ್ಕೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪ್ರಾಥಮಿಕ ಹಾಗೂ ಕಂಟೈನ್ಮೆಂಟ್ ಏರಿಯಾ ಸಂಪರ್ಕದಿಂದಾಗಿ ಸೋಂಕು ತಗುಲಿದೆ.

    ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,577ಕ್ಕೆ ಏರಿಕೆಯಾಗಿದೆ. ಇದರಲ್ಲಿ 2,505 ಜನ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 960 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 108 ಜನರನ್ನು ಮಹಾಮಾರಿ ಬಲಿ ಪಡೆದಿದೆ. ಅನ್ಯ ಕಾರಣದಿಂದಾಗಿ 4 ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ.

  • ಬೀದರ್‌ನಲ್ಲಿಂದು ಕೊರೊನಾಗೆ ಓರ್ವ ಬಲಿ- 3 ಸಾವಿರ ಗಡಿಯತ್ತ ಮಹಾಮಾರಿ

    ಬೀದರ್‌ನಲ್ಲಿಂದು ಕೊರೊನಾಗೆ ಓರ್ವ ಬಲಿ- 3 ಸಾವಿರ ಗಡಿಯತ್ತ ಮಹಾಮಾರಿ

    ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ಓರ್ವನ ಬಲಿಯೊಂದಿಗೆ ಕೊರೊನಾ ಸಾವಿನ ರಣಕೇಕೆ ಹಾಕಿದೆ.

    ಬೀದರ್ ತಾಲೂಕಿನ 55 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಇಂದು ಕೊರೊನಾ ಪಾಸಿಟಿವ್ ಧೃಡವಾಗಿದೆ. ಇಂದು ಜಿಲ್ಲೆಯಲ್ಲಿ 28 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಬಾಲ್ಕಿಯಲ್ಲಿ 9, ಬೀದರ್ 8, ಔರಾದ್ 7, ಬಸವಕಲ್ಯಾಣ 2, ಹುಮ್ನಬಾದ್ ನಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ.

    ಪ್ರಾಥಮಿಕ ಹಾಗೂ ಕಂಟೈನ್ಮೆಂಟ್ ಏರಿಯಾ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,941ಕ್ಕೆ ಏರಿಕೆಯಾಗಿದೆ. ಇದರಲ್ಲಿ 1,940 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ್ದಾರೆ. ಇನ್ನೂ 899 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 98 ಜನರನ್ನು ಮಹಾಮಾರಿ ಬಲಿ ಪಡೆದಿದೆ. ಅನ್ಯ ಕಾರಣದಿಂದಾಗಿ 4 ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ.

  • ಬೀದರ್ ನಲ್ಲಿಂದು ಕೊರೊನಾ ಸಾವಿನ ರಣಕೇಕೆ

    ಬೀದರ್ ನಲ್ಲಿಂದು ಕೊರೊನಾ ಸಾವಿನ ರಣಕೇಕೆ

    ಬೀದರ್ : ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ನಾಲ್ವರ ಬಲಿಯೊಂದಿಗೆ ಕೊರೊನಾ ಮಹಾಮಾರಿ ತನ್ನ ಸಾವಿನ ರಣಕೇಕೆ ಹಾಕಿದೆ. ಬೀದರ್ ತಾಲೂಕಿನ 75 ಹಾಗೂ 69 ವರ್ಷದ ವೃದ್ಧರು ಹಾಗೂ ಬಸವಕಲ್ಯಾಣ ಪಟ್ಟಣದ 55 ವರ್ಷದ ವ್ಯಕ್ತಿ ಹಾಗೂ ಔರಾದ್ ತಾಲೂಕಿನ 80 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ.

    ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲುತ್ತಾ ಸಾವನ್ನಪ್ಪಿದ ನಾಲ್ಕು ಜನಕ್ಕೆ ಇಂದು ಕೊರೊನಾ ಪಾಸಿಟಿವ್ ಧೃಡವಾಗಿದೆ. ನಾಲ್ವರ ಬಲಿಯೊಂದಿಗೆ ಇಂದು ಮತ್ತೆ 70 ಜನಕ್ಕೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಭಾಲ್ಕಿ 25, ಹುಮ್ನಾಬಾದ್ 18, ಔರಾದ್ 13, ಬೀದರ್ 11, ಬಸವಕಲ್ಯಾಣದಲ್ಲಿ ಮೂವರಿಗೆ ಕೊರೊನಾ ಸೋಂಕು ಧೃಡವಾಗಿದೆ.

    ಪ್ರಾಥಮಿಕ ಹಾಗೂ ಕಂಟೈನ್‍ಮೆಂಟ್ ಏರಿಯಾ ಸಂಪರ್ಕದಿಂದಾಗಿ ಸೋಂಕು ಧೃಡವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,913ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 1,894 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ್ದಾರೆ. ಇನ್ನು 918 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 97 ಜನರನ್ನು ಮಹಾಮಾರಿ ಬಲಿ ಪಡೆದಿದೆ. ಅನ್ಯ ಕಾರಣದಿಂದಾಗಿ 4 ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  • ಬೀದರ್‌ನಲ್ಲಿ ಇಂದು 77 ಜನರಿಗೆ ಕೊರೊನಾ- 2 ಸಾವಿರ ಗಡಿಯತ್ತ ಸೋಂಕಿತರ ಸಂಖ್ಯೆ

    ಬೀದರ್‌ನಲ್ಲಿ ಇಂದು 77 ಜನರಿಗೆ ಕೊರೊನಾ- 2 ಸಾವಿರ ಗಡಿಯತ್ತ ಸೋಂಕಿತರ ಸಂಖ್ಯೆ

    ಬೀದರ್: ಗಡಿ ಜಿಲ್ಲೆ ಬೀದರ್‍ನಲ್ಲಿ ಇಂದು ಕೊರೊನಾಘಾತವಾಗಿದ್ದು, 77 ಜನರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ.

    ಬೀದರ್‍ನಲ್ಲಿ 30, ಬಾಲ್ಕಿಯಲ್ಲಿ 16, ಔರಾದ್‍ನಲ್ಲಿ 15, ಬಸವಕಲ್ಯಾಣದಲ್ಲಿ 12, ಹುಮ್ನಬಾದ್‍ನಲ್ಲಿ 4 ಸೇರಿದಂತೆ ಜಿಲ್ಲೆಯಲ್ಲಿ ಇಂದು ಒಟ್ಟು 77 ಜನರಿಗೆ ಪಾಸಿಟಿವ್ ಧೃಡವಾಗಿದೆ. ಪ್ರಾಥಮಿಕ ಹಾಗೂ ಕಂಟೈನ್ಮೆಂಟ್ ಝೋನ್ ಸಂಪರ್ಕದಿಂದಾಗಿ ಸೋಂಕು ತಗುಲಿದೆ.

    ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,866ಕ್ಕೆ ಏರಿಕೆಯಾಗಿದೆ. ಇದರಲ್ಲಿ 1,228 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 567 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 69 ಜನರನ್ನು ಮಹಾಮಾರಿ ಬಲಿ ಪಡೆದಿದೆ. ಅನ್ಯ ಕಾರಣದಿಂದಾಗಿ 4 ಜನ ಸಾವನ್ನಪ್ಪಿದ್ದು, ದಿನೇ ದಿನೇ ಜಿಲ್ಲೆಯಲ್ಲಿ ಮಹಾಮಾರಿಯ ಆರ್ಭಟ ನೋಡಿ ಜಿಲ್ಲೆಯ ಜನ ಆತಂಕಗೊಂಡಿದ್ದಾರೆ.

  • ಬೀದರ್‌ನಲ್ಲಿ ಇಂದು 87 ಜನರಿಗೆ ಕೊರೊನಾ- ಸೋಂಕಿತರ ಸಂಖ್ಯೆ 1727ಕ್ಕೆ ಏರಿಕೆ

    ಬೀದರ್‌ನಲ್ಲಿ ಇಂದು 87 ಜನರಿಗೆ ಕೊರೊನಾ- ಸೋಂಕಿತರ ಸಂಖ್ಯೆ 1727ಕ್ಕೆ ಏರಿಕೆ

    ಬೀದರ್: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಇಂದು ಮತ್ತೆ 87 ಜನರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ.

    ಬೀದರ್ ನಲ್ಲಿ 38, ಔರಾದ್ ನಲ್ಲಿ 20, ಬಸವಕಲ್ಯಾಣದಲ್ಲಿ 14, ಭಾಲ್ಕಿಯಲ್ಲಿ 8, ಹುಮ್ನಬಾದ್ ನಲ್ಲಿ 7 ಸೇರಿದಂತೆ ಜಿಲ್ಲೆಯಲ್ಲಿ ಇಂದು ಒಟ್ಟು 87 ಜನಕ್ಕೆ ಸೋಂಕು ತಗುಲಿದೆ. ಪ್ರಾಥಮಿಕ ಹಾಗೂ ಕಂಟೈನ್ಮೈಂಟ್ ಝೋನ್ ಸಂಪರ್ಕದಿಂದಾಗಿ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,727ಕ್ಕೆ ಏರಿಕೆಯಾಗಿದೆ.

    ಇದರಲ್ಲಿ 1,171 ಜನ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 485 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮಹಾಮಾರಿಗೆ 67 ಜನ ಬಲಿಯಾಗಿದ್ದಾರೆ. ನಾನ್ ಕೋವಿಡ್-19 ನಿಂದ 4 ಜನ ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಲಾಗಿದೆ. ಸಾವಿನ ಸಂಖ್ಯೆ ಹಾಗೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಜಿಲ್ಲೆಯ ಜನತೆ ಭಯಭೀತರಾಗಿದ್ದಾರೆ.

  • ಬೀದರ್‌ನಲ್ಲಿ ಕೊರೊನಾಗೆ ಇಂದು ಮತ್ತೆ ಮೂವರು ಬಲಿ

    ಬೀದರ್‌ನಲ್ಲಿ ಕೊರೊನಾಗೆ ಇಂದು ಮತ್ತೆ ಮೂವರು ಬಲಿ

    ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಕೊರೊನಾಗೆ ಇಂದು ಮೂವರು ಬಲಿಯಾಗಿದ್ದು, ಈ ಮೂಲಕ ಒಟ್ಟು 69 ಜನ ಸಾವನ್ನಪ್ಪಿದಂತಾಗಿದೆ.

    ಬೀದರ್ ನಗರದ 70 ವರ್ಷದ ವೃದ್ಧ, 70 ವರ್ಷದ ವೃದ್ಧೆ ಹಾಗೂ 65 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ. ಮೂವರು ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲುತ್ತಿದ್ದರು. ಈ ಮೂವರಿಗೆ ಇಂದು ಪಾಸಿಟಿವ್ ದೃಢವಾಗಿದೆ.

    ಜಿಲ್ಲೆಯಲ್ಲಿ ಇಂದು 94 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಬೀದರ್ ನಲ್ಲಿ 33, ಬಸವಕಲ್ಯಾಣದಲ್ಲಿ 31, ಬಾಲ್ಕಿಯಲ್ಲಿ 13, ಹುಮ್ನಬಾದ್ ನಲ್ಲಿ 10, ಔರಾದ್ ನಲ್ಲಿ 7 ಸೇರಿದಂತೆ ಒಟ್ಟು 94 ಜನರಿಗೆ ಮಹಾಮಾರಿ ವಕ್ಕರಿಸಿದೆ. ಪ್ರಾಥಮಿಕ ಹಾಗೂ ಕಂಟೈನ್ಮೆಂಟ್ ಝೋನ್ ಸಂಪರ್ಕದಿಂದಾಗಿ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,640ಕ್ಕೆ ಏರಿಕೆಯಾಗಿದೆ.

    ಇದರಲ್ಲಿ 1,021 ಜನ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 548 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿಯವರೆಗೆ 69 ಜನರನ್ನು ಮಹಾಮಾರಿ ಬಲಿ ಪಡೆದಿದೆ. ದಿನೇ ದಿನೇ ಮಹಾಮಾರಿ ತನ್ನ ಅಟ್ಟಹಾಸ ಮೇರೆಯುತ್ತಿದ್ದು, ಜಿಲ್ಲೆಯ ಜನ ತೀವ್ರ ಆತಂಕಗೊಂಡಿದ್ದಾರೆ.