ಬೀದರ್: ಮನೆಯ ಬೀಗ ಮುರಿದು 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಬೀದರ್ (Bidar) ಜಿಲ್ಲೆಯ ಭಾಲ್ಕಿ (Bhalki) ಪಟ್ಟಣದ ಬಾಲಾಜಿ ನಗರದಲ್ಲಿ ನಡೆದಿದೆ.
ಜಾಲೇಂದರ್ ಭೀಮಣ್ಣ ಮತ್ರೆ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಕಳ್ಳರು ಕೈಚಳಕ ತೋರಿಸಿದ್ದಾರೆ. 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ 250 ಗ್ರಾಂ ಬೆಳ್ಳಿ ಆಭರಣಗಳು ಕದ್ದು ಪರಾರಿಯಾಗಿದ್ದಾರೆ.ಇದನ್ನೂ ಓದಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ – ಯೋಗ ಗುರು ನಿರಂಜನಾ ಮೂರ್ತಿ ಅರೆಸ್ಟ್
ಮಾಲೀಕರು ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನದಳದಿಂದ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೀದರ್: ಬಾಲಕಿಗೆ ಆಟ ಆಡಿಸುವ ನೆಪದಲ್ಲಿ ಟೆರಸ್ಗೆ ಕರೆದೊಯ್ದು ಮೂರನೇ ಮಹಡಿಯಿಂದ ಮಲತಾಯಿ ತಳ್ಳಿ ಕೊಲೆ ಮಾಡಿದ ಅಮಾನವೀಯ ಘಟನೆ ಬೀದರ್ (Bidar) ನಗರದ ಆದರ್ಶ ಕಾಲೋನಿಯಲ್ಲಿ ನಡೆದಿದೆ.
7 ವರ್ಷದ ಸಾನ್ವಿ ಮೃತ ಬಾಲಕಿ ಹಾಗೂ ಆರೋಪಿಯನ್ನು ರಾಧಾ ಎಂದು ಗುರುತಿಸಲಾಗಿದೆ. ಆ.27ರಂದು ಮಲತಾಯಿ ರಾಧಾ ಬಾಲಕಿಗೆ ಆಟ ಆಡಿಸುವ ನೆಪದಲ್ಲಿ 3ನೇ ಮಹಡಿಗೆ ಕರೆದೊಯ್ದಿದ್ದಳು. ಈ ವೇಳೆ ಯಾರಿಗೂ ಕಾಣದಂತೆ ತಳ್ಳಿ ಕೊಲೆ ಮಾಡಿದ್ದಳು. ಆ ದಿನ ಎಲ್ಲರೂ ಸಾನ್ವಿ ಆಯತಪ್ಪಿ ಬಿದ್ದಳು ಎಂದು ನಂಬಿದ್ದರು. ಆ.28ರಂದು ಮೃತ ಬಾಲಕಿ ತಂದೆ ಸಿದ್ಧಾಂತ ಗಾಂಧಿಗಂಜ್ ಠಾಣೆಯಲ್ಲಿ ಆಕಸ್ಮಿಕ ಸಾವು ದೂರು ನೀಡಿದ್ದರು.ಇದನ್ನೂ ಓದಿ: ಕೊಪ್ಪಳ | ಬೆಳ್ಳಂಬೆಳಗ್ಗೆ ನಗರಸಭೆ ಕಚೇರಿ ಸೇರಿ ಐದು ಕಡೆ `ಲೋಕಾ’ ದಾಳಿ
ಸೆ.12ರಂದು ಮೃತ ಬಾಲಕಿ ತಂದೆ ಸಿದ್ಧಾಂತಗೆ ಪಕ್ಕದ ಮನೆಯವರು ವಿಡಿಯೋವೊಂದನ್ನು ಕಳುಹಿಸಿದ್ದರು. ವಿಡಿಯೋದಲ್ಲಿ ಬಾಲಕಿ ಸಾವನ್ನಪ್ಪಿದ ದಿನ ಆಕೆಯ ಜೊತೆ ಮಲತಾಯಿ ರಾಧಾ ಅನುಮಾನಾಸ್ಪದವಾಗಿ ಓಡಾಡಿರುವುದು ಕಂಡುಬಂದಿದೆ. ಈ ಸಿಸಿಟಿವಿ ದೃಶ್ಯ ನೋಡಿದಾಗ ವಿಷಯ ಬಹಿರಂಗವಾಗಿದ್ದು, ವಿಡಿಯೋ ಆಧರಿಸಿ ಬಾಲಕಿಯ ಅಜ್ಜಿ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ಸಾನ್ವಿ ತಾಯಿ ಖಾಯಿಲೆಗೆ ತುತ್ತಾಗಿ 6 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಬಳಿಕ 2023ರಲ್ಲಿ ರಾಧಾ ಜೊತೆ ಸಿದ್ಧಾಂತ ಎರಡನೇ ವಿವಾಹವಾಗಿದ್ದು, ಅವರಿಗೆ ಎರಡು ಅವಳಿ ಮಕ್ಕಳಿವೆ. ಹೀಗಾಗಿ ಸಿದ್ಧಾಂತನ ಮೊದಲ ಮಗುವನ್ನು ಎರಡನೇ ಪತ್ನಿ ರಾಧಾ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.
ಬೀದರ್: ಮಕ್ಕಳನ್ನು ಕರೆದುಕೊಂಡು ಹೆಂಡತಿ ಬಿಟ್ಟು ಹೋಗಿದ್ದಕ್ಕೆ 30 ಅಡಿ ಬ್ರಿಡ್ಜ್ ಮೇಲಿಂದ ನದಿಗೆ ಹಾರಿರುವ ಘಟನೆ ಬೀದರ್ (Bidar) ಜಿಲ್ಲೆಯ ಭಾಲ್ಕಿ (Bhalki) ತಾಲೂಕಿನ ಹಲಸಿತೂಗಾಂವ್ ಗ್ರಾಮದ ಬಳಿ ನಡೆದಿದೆ.
ಕೆಲವು ವರ್ಷಗಳ ಹಿಂದೆ ಹೆಂಡತಿ ಮತ್ತು ಮಕ್ಕಳು ಬಿಟ್ಟು ತವರು ಮನೆಗೆ ಹೋಗಿದ್ದರು. ಇದರಿಂದ ಮನನೊಂದ ಪತಿ ಪ್ರಭಾಕರ್ ಸೂರ್ಯವಂಶಿ ಕುಡಿತದ ಚಟಕ್ಕೆ ದಾಸನಾಗಿದ್ದ. ಇದೀಗ ನದಿಗೆ ಹಾರಿ ನೀರುಪಾಲಾಗಿದ್ದಾನೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಶೋಧ ಕಾರ್ಯಚರಣೆ ನಡೆಸುತ್ತಿದ್ದಾರೆ.
ಕಲಬುರಗಿ/ಯಾದಗಿರಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಉತ್ತರದ ಹಲವು ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ. ನಿನ್ನೆ ಯಾದಗಿರಿಯಲ್ಲಿ (Yadagiri) ಸುರಿದ ಮಳೆಯು 30 ಕುಟುಂಬದ ಜನರನ್ನು ಬೀದಿಗೆ ತಂದಿದೆ.
ಯಾದಗಿರಿಯಲ್ಲಿ ವರುಣ ಅಬ್ಬರಿಸಿ ಬೊಬ್ಬರಿದಿದ್ದು, ಭಾರಿ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಇದರಿಂದ ಜನರ ಕಂಗಾಲಾಗಿ ಹೋಗಿದ್ದಾರೆ. ತಡರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಯರಗೋಳ ಗ್ರಾಮದ ಸೇತುವೆ, ಹಾಗೂ ಬಾಚವಾರ ಗ್ರಾಮದ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ವಾಹನ ಸಂಚಾರ ಅಡ್ಡಿಯಾಗಿದ್ದು ಜನರು ಪರದಾಡಿದ್ದಾರೆ.
ರಣಮಳೆಗೆ ಬೀದಿಗೆ ಬಿದ್ದ 30 ಕುಟುಂಬಗಳು
ಇನ್ನು ಯರಗೋಳ ಕೆರೆ ನೀರು ಗ್ರಾಮಕ್ಕೆ ನುಗ್ಗಿದ್ದು ಗ್ರಾಮದ 30ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಇದರಿಂದ ಮನೆಯಲ್ಲಿದ್ದ ಧವಸ ಧಾನ್ಯ ಹಾಗೂ ಇನ್ನಿತರ ವಸ್ತುಗಳು ಹಾನಿಹಾಗಿದ್ದು ಜನರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ಇನ್ನು ಬಾಚವಾರ ಗ್ರಾಮದ ಸೇತುವೆ ಮುಳುಗಡೆ ಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ. ಇದರಿಂದ ಗ್ರಾಮದಲ್ಲಿರುವ ಸೇತುವೆಯನ್ನು ಎತ್ತರಗೊಳಿಸಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಕರೆಂಟ್ ಶಾಕ್ನಿಂದ ಜೀವ ಕಳೆದುಕೊಂಡಿದ್ದ ಕಾರ್ಮಿಕ – ರಹಸ್ಯವಾಗಿ ಶವ ಹೂತಿಟ್ಟ ಲೈನ್ಮ್ಯಾನ್ ಅರೆಸ್ಟ್!
ಕಲಬುರಗಿ:
ಇತ್ತ ಕಲಬುರಗಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆಳಂದ ತಾಲ್ಲೂಕಿನ ಪಡಸಾವಳಿಯಲ್ಲಿ ರಸ್ತೆ ಭಾರಿ ಮಳೆಗೆ ಕೊಚ್ಚಿ ಹೋಗಿದ್ದು ಮಣ್ಣೂರ-ಅಫಜಲಪುರ ತೆರಳುವ ರಸ್ತೆ ಸಂಚಾರ ಬಂದ್ ಆಗಿದೆ. ಇದರಿಂದ ಜನರು ಸಂಚಾರ ಮಾಡಲಾಗದೆ ಪರದಾಡಿದರು. ಇದನ್ನೂ ಓದಿ: ಬಿಜೆಪಿಯವರು ಮದ್ದೂರು ಬಂದ್ ಮಾಡಿದ್ದೇ ಶಾಂತಿ ಕದಡೋಕೆ: ಚಲುವರಾಯಸ್ವಾಮಿ
ಬೀದರ್:
ಇನ್ನು, ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೀದರ್, ಔರಾದ್, ಭಾಲ್ಕಿ, ಹುಮ್ನಾಬಾದ್, ಬಸವಕಲ್ಯಾಣದಲ್ಲಿ ಭಾರೀ ಅವಾಂತರ ಸೃಷ್ಟಿ ಆಗಿದೆ. ಬೆಳಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಪರದಾಡಿದರು. ಇದನ್ನೂ ಓದಿ: ಕಾರು, ಬೈಕ್ ಮುಖಾಮುಖಿ ಡಿಕ್ಕಿ – ಮದುವೆ ನಿಶ್ಚಯವಾಗಿದ್ದ ಜೋಡಿ ದುರ್ಮರಣ
ದಾವಣಗೆರೆ:
ದಾವಣಗೆರೆಯಲ್ಲಿಯೂ ಭಾರೀ ಮಳೆ ಆಗುತ್ತಿರುವ ಹಿನ್ನೆಲೆ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಭದ್ರಾ ಬಲದಂಡೆ ನಾಲೆಯ ಅಕ್ವಾಡಕ್ ಹೊಡೆದು ಅಪಾರ ಪ್ರಮಾಣದ ನೀರು ಪೋಲಾಯಿತು. ನಾಲೆ ಹೊಡೆದ ಪರಿಣಾಮ ನಾಲೆಯ ಅಕ್ಕಪಕ್ಕ ಇರುವ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣ ಬೆಳೆ ಹಾನಿ ಆಗಿದೆ. ಇದರಿಂದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಕಳೆದ 20 ವರ್ಷದಿಂದ ನಾಲೆ ರಿಪೇರಿ ಆಗಿಲ್ಲ ಈ ಕಾರಣದಿಂದ ನಾಲೆ ಹೊಡೆದಿದೆ ಎಂದು ಸ್ಥಳೀಯ ರೈತರ ಆಕ್ರೋಶ ವ್ಯಕ್ತಪಡಿಸಿದ್ರು.
ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಗುರುವಾರ (ಸೆ.11) ಬೆಳಿಗ್ಗೆ ಶಾಲಾ – ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಇನ್ನೂ ಕಚೇರಿಗೆ ಹೋಗಲು ಕೂಡ ಜನರು ಹೈರಾಣಾಗಿದ್ದರು. ಹವಾಮಾನ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ಗುರುವಾರ ಕೂಡ ಭಾರೀ ಮಳೆಯಾಗುವ ಸಾಧ್ಯೆತೆಯಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳಲು ನಾಲ್ಕು ಮಕ್ಕಳ ಸಮೇತ ದಂಪತಿ ಕಾಲುವೆಗೆ ಹಾರಿದ್ದಾರೆ. ಈ ವೇಳೆ ತಾಯಿ ಮತ್ತು ಇನ್ನೊಬ್ಬ ಮಗನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇವರು ಮೂಲತಃ ಬೀದರ್ (Bidar) ನಗರದ ಮೈಲೂರು ನಿವಾಸಿಗಳಾಗಿದ್ದಾರೆ.
ಮೃತದೇಹವನ್ನು ಭಾಲ್ಕಿ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಶಾಸಕ ಈಶ್ವರ್ ಖಂಡ್ರೆ ಭೇಟಿ (Eshwara Khandre) ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಎಸ್ಪಿ ಪ್ರದೀಪ್ ಗುಂಟಿ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರು | ರಸ್ತೆ ಗುಂಡಿಗೆ ಬಿದ್ದ ಮಹಿಳೆ – ಕ್ಯಾಂಟರ್ ಲಾರಿ ಹರಿದು ಸಾವು
ಬೀದರ್: ಇಂದು ವರ್ಷದ ಕೊನೆಯ ಚಂದ್ರಗ್ರಹಣ (Lunar Eclipse) ಹಿನ್ನೆಲೆ ಗಡಿಜಿಲ್ಲೆ ಬೀದರ್ನ (Bidar) ಐತಿಹಾಸಿಕ 9 ದೇವಸ್ಥಾನಗಳ ಬಾಗಿಲು ಬಂದ್ ಆಗಿದೆ.
ಜಿಲ್ಲೆಯ ಐತಿಹಾಸಿಕ ದೇವಾಲಯಗಳಾದ ಶ್ರೀ ನರಸಿಂಹ ಝರಣಿ, ಮೈಲಾರ ಮಲ್ಲಣ್ಣ, ಹೊನ್ನಿಕೇರಿ ಸಿದ್ದೇಶ್ವರ, ಚಾಂಗಲೇರ್ ವೀರಭದ್ರೇಶ್ವರ ಸೇರಿದಂತೆ ಒಟ್ಟು 9 ದೇವಸ್ಥಾನಗಳ ಬಾಗಿಲುಗಳು ಬಂದ್ ಆಗಿವೆ. ಭಾನುವಾರ (ಸೆ.7) ಮಧ್ಯಾಹ್ನ 12 ಗಂಟೆಗೆ ವೇದಕಾಲ ಪ್ರಾರಂಭವಾಗಿದ್ದು, ಇದೇ ಸಮಯದಲ್ಲಿ 9 ದೇವಸ್ಥಾನಗಳ ಬಾಗಿಲುಗಳನ್ನು ಬಂದ್ ಮಾಡಲಾಗಿದೆ.ಇದನ್ನೂ ಓದಿ: ರಾಹುಗ್ರಸ್ತ ರಕ್ತಚಂದ್ರಗ್ರಹಣ – ರಾಯರ ಮಠದಲ್ಲಿ ಮಧ್ಯಾಹ್ನದಿಂದ ತೀರ್ಥ, ಪ್ರಸಾದ ಬಂದ್
ಇನ್ನೂ ಇಂದು ಮಧ್ಯಾಹ್ನ 12 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ಸೋಮವಾರ (ಸೆ.8) ಬೆಳಗ್ಗೆ 8 ಗಂಟೆಗೆ ದೇವಸ್ಥಾನಗಳ ಬಾಗಿಲು ತೆರೆಯಲಿದ್ದು, ಬಳಿಕ ಗೋಮೂತ್ರದಿಂದ ದೇವಸ್ಥಾನ ಶುದ್ಧೀಕರಣಗೊಳಿಸಿ, ವಿಶೇಷ ಪೂಜೆ ಮಾಡಲಾಗುತ್ತದೆ. ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಿದ್ದಾರೆ.
ಬಾಗಿಲು ಬಂದ್ ಮಾಡುವ ಮುನ್ನ ವಿಶೇಷ ಪೂಜೆ ಮತ್ತು ಹಾಲಿನ ಅಭಿಷೇಕ ಮಾಡಿ ಮಹಾರಾಷ್ಟ್ರ, ತೆಲಂಗಾಣ ಹಾಗೂ ರಾಜ್ಯದಿಂದ ಬಂದಿದ್ದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿದ್ದರು.ಇದನ್ನೂ ಓದಿ: ಇಂದು ವರ್ಷದ ಕೊನೆಯ ಗ್ರಹಣ; ಮಧ್ಯಾಹ್ನವೇ ದೇವಾಲಯಗಳು ಬಂದ್
ಬೀದರ್: ಖಾಸಗಿ ಶಾಲಾ ಬಸ್ (School Bus) ಹರಿದು ಯುಕೆಜಿ ಓದುತ್ತಿದ್ದ 6 ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ಎಕ್ಕಂಬಾ ಗ್ರಾಮದಲ್ಲಿ ನಡೆದಿದೆ.
ಬೀದರ್: ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟಕ್ಕೆ ತಂದಿದ್ದ 5 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಜಪ್ತಿ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ (Basava Kalyana) ತಾಲೂಕಿನ ಜಿಜಾವು ನಗರದಲ್ಲಿ ನಡೆದಿದೆ.
ನೆರೆರಾಜ್ಯ ಮಹಾರಾಷ್ಟ್ರದಿಂದ ಗಾಂಜಾ ತಂದು ಬಸವಕಲ್ಯಾಣದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಖದೀಮರ ಜಾಲವನ್ನು ಬಯಲಿಗೆಳೆದಿದ್ದು, ಹೆಡೆಮುರಿ ಕಟ್ಟಿದ್ದಾರೆ.
ಬೀದರ್: ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬೀದರ್ (Bidar) ಜಿಲ್ಲೆ ತತ್ತರಿಸಿ ಹೋಗಿದ್ದು, 5 ಕೋಟಿ ರೂ.ಗೂ ಅಧಿಕ ಮೌಲ್ಯದ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ.
600 ನಿಂಬೆಹಣ್ಣು, 400 ಸೀಬೆ ಹಣ್ಣು, 200 ಮಾವಿನಕಾಯಿ ಸೇರಿದಂತೆ ಹಲವು ಹಣ್ಣುಗಳು ನೆಲಕ್ಕೆ ಬಿದ್ದು ಕೊಳೆತು ಹೋಗಿವೆ. ಒಟ್ಟು 5 ಲಕ್ಷ ರೂ.ಗೂ ಅಧಿಕ ಮೌಲ್ಯದ ತೋಟಗಾರಿಕೆ ಬೆಳೆಗಳು ನಾಶವಾಗಿದ್ದು, ಕಣ್ಣೀರು ಹಾಕುತ್ತಿದ್ದಾರೆ.