Tag: bidar

  • ಬೀದರ್‍ನಲ್ಲಿ ಕೊಹ್ಲಿ ವಿರುದ್ಧ ಕೇಂದ್ರ ಸಚಿವ ರಾಮದಾಸ್ ಅಠವಾಲೆ ಕಿಡಿ

    ಬೀದರ್‍ನಲ್ಲಿ ಕೊಹ್ಲಿ ವಿರುದ್ಧ ಕೇಂದ್ರ ಸಚಿವ ರಾಮದಾಸ್ ಅಠವಾಲೆ ಕಿಡಿ

    ಬೀದರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಪಾಕ್ ವಿರುದ್ಧ ಭಾರತ ಸೋತಿದ್ದು ಅವಮಾನವಾಗಿದೆ. ಈ ಬಗ್ಗೆ ತಖೆಯಾಗಬೇಕು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವ ರಾಮದಾಸ್ ಅಠವಾಲೆ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.

    ಬೀದರ್‍ನ ವಸತಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವರು, ಹೀನಾಯವಾಗಿ ಪಾಕಿಸ್ತಾನದ ವಿರುದ್ಧ ಸೋತಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು. ಟೀಂ ಇಂಡಿಯಾವನ್ನು ಬದಲಾವಣೆ ಮಾಡಬೇಕು. ಈ ಪಂದ್ಯದ ಬಗ್ಗೆ ತನಿಖೆಯಾಗಬೇಕು. ಕ್ರಿಕೆಟ್ ಮತ್ತು ಕ್ರೀಡೆಯಲ್ಲಿ ದಲಿತರಿಗೆ ಶೇ.25 ಮೀಸಲಾತಿ ನೀಡಬೇಕು ಎಂದು ಅವರು ಆಗ್ರಹಿಸಿದ್ರು.

    ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು: ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟ ಪಾಕ್

    ಬಳಿಕ ಹೋ ರಕ್ಷಣೆ ಬಗ್ಗೆ ಮಾತನಾಡಿದ ಸಚಿವರು, ಇಂದು ಗೋ ರಕ್ಷಣೆ ಹೆಸರಿನಲ್ಲಿ ಗೂಂಡಾಗಿರಿ ನಡೆಯುತ್ತಿದ್ದು, ಕಾನೂನು ಕ್ರಮ ಕೈಗೆತ್ತಿಕೊಳ್ಳಬೇಕು. ಗೋ ರಕ್ಷಣೆ ಹೆಸರಿನಲ್ಲಿ ದಲಿತ ಹಾಗೂ ಮುಸ್ಲಿಮರ ಕೊಲೆಯಾಗುತ್ತಿದ್ದು, ಮೋದಿ ಸರ್ಕಾರವನ್ನು ಕೆಡಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ರಾಮದಾಸ್ ಅಠವಾಲೆ ನಕಲಿ ಗೋ ರಕ್ಷಕರ ವಿರುದ್ಧ ಕಿಡಿಕಾರಿದರು.

  • ಮಲಗಿದ್ದಲ್ಲೇ ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಪತಿ!

    ಮಲಗಿದ್ದಲ್ಲೇ ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಪತಿ!

    ಬೀದರ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯ ಕುತ್ತಿಗೆಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ಬೆಲೂರು ಎನ್ ಗ್ರಾಮದಲ್ಲಿ ನಡೆದಿದೆ. 24 ವರ್ಷದ ಸುಜಾತ ಕೊಲೆಯಾದ ದುರ್ದೈವಿಯಾಗಿದ್ದಾರೆ. ರಾತ್ರಿ ಮಲಗಿದ್ದ ಸಮಯದಲ್ಲಿ ಪತಿ ಈ ಕೃತ್ಯ ಎಸಗಿದ್ದಾನೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪತಿ ಅನಿಲ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

    6 ವರ್ಷಗಳ ಹಿಂದೆಯಷ್ಟೇ ಸೋದರಮಾವ ಅನಿಲ್‍ಗೆ ಸುಜಾತರನ್ನು ಮದುವೆ ಮಾಡಿಕೊಡಲಾಗಿತ್ತು. ಇನ್ನು ಪ್ರಕರಣ ಸಂಬಂಧ ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

  • ನೋಟ್ ಬ್ಯಾನ್ ಬೆಂಬಲಿಸಿ, ರಂಜಾನ್ ಪ್ರಯುಕ್ತ 10 ಪೈಸೆಗೊಂದು ಸೀರೆ ಮಾರಾಟ

    ನೋಟ್ ಬ್ಯಾನ್ ಬೆಂಬಲಿಸಿ, ರಂಜಾನ್ ಪ್ರಯುಕ್ತ 10 ಪೈಸೆಗೊಂದು ಸೀರೆ ಮಾರಾಟ

    ಬೀದರ್: ಪ್ರಧಾನಿ ಮೋದಿ ಸರ್ಕಾರದ ನೋಟ್ ಬ್ಯಾನ್ ಬೆಂಬಲಿಸಿ ನಗರದ ವರ್ತಕರೊಬ್ಬರು ರಂಜಾನ್ ಹಬ್ಬದ ಪ್ರಯುಕ್ತವಾಗಿ 10 ಪೈಸೆಗೆ ಒಂದು ಸೀರೆಯನ್ನ ಮಾರಾಟ ಮಾಡುತ್ತಿದ್ದಾರೆ.

    ನಗರದ ದೃಷ್ಟಿ-ಸೃಷ್ಟಿ ಸ್ಯಾರಿ ಸೆಂಟರ್‍ನಲ್ಲಿ 10 ಪೈಸೆಗೊಂದು ಸೀರೆಯನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಸೀರೆಗಳನ್ನು ಕೊಳ್ಳಲು ಕೇವಲ ಹಳೆಯ 10, 25 ಮತ್ತು 50 ಪೈಸೆಯ ನಾಣ್ಯಗಳನ್ನು ನೀಡಿದರೆ ಸೀರೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

    ಮೋದಿಯವರು ನೋಟ್ ಬ್ಯಾನ್ ಮಾಡಿ ದೇಶಕ್ಕೆ ಒಳ್ಳೆಯದನ್ನು ಮಾಡಿದ್ದಾರೆ. ಅದರ ಪ್ರಯುಕ್ತವಾಗಿ ನಾನು ಸೀರೆಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡ್ತಾಯಿದ್ದೀನಿ. ಫ್ರೀಯಾಗಿ ನೀಡಿದ್ರೆ ಜನ ತೆಗೆದುಕೊಳ್ಳಲು ಮುಂದೆ ಬರಲ್ಲ. ಅದಕ್ಕಾಗಿ ಒಂದು ಸೀರೆಗಾಗಿ 10 ಪೈಸೆಯನ್ನು ನಿಗದಿ ಮಾಡಲಾಗಿದೆ. ಇದು ವಿಶೇಷವಾಗಿ ರಂಜಾನ್ ಹಬ್ಬಕ್ಕಾಗಿ ಈ ಆಫರ್‍ನ್ನು ಕೊಡಲಾಗಿದೆ ಎಂದು ಅಂಗಡಿಯ ಮಾಲೀಕ ಚಂದ್ರಶೇಖರ್ ಪರಸಂಗಿ ಹೇಳಿದ್ದಾರೆ.

    10 ಪೈಸೆ ಯಾಕೆ? 10 ಪೈಸೆ ಬಹಳಷ್ಟು ಮಂದಿಯ ಜೊತೆಗೆ ಇಲ್ಲದ ಕಾರಣ ಮಾಲೀಕರು ಈ ಆಫರ್ ಇಟ್ಟಿದ್ದಾರೆ. ಆದರೆ ಒಂದು ರೂ. ನೀಡಿ 10 ಸೀರೆಯನ್ನು ಪಡೆಯಲು ಸಾಧ್ಯವಿಲ್ಲ.

    ಸೀರೆ ಖರೀದಿಸಲು ಮಹಿಳೆಯರು ಬೆಳಗ್ಗೆಯಿಂದ ಬಿಸಿಲನ್ನು ಲೆಕ್ಕಿಸದೇ ಸರತಿ ಸಾಲಿನಲ್ಲಿ ನಿಂತು ಸೀರೆ ಖರೀದಿಸಿ ಖುಷಿಯಿಂದ ಮನೆಗೆ ತೆರಳುತ್ತಿದ್ದಾರೆ. ಇತ್ತ ಪುರುಷರು ತಮ್ಮ ಪತ್ನಿಯರಿಗಾಗಿ 10 ಪೈಸೆ ನೀಡಿ ಸೀರೆ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.

    ಮಂಗಳವಾರದಿಂದ ಈ ವಿಶೇಷ ಆಫರ್ ಪ್ರಾರಂಭವಾಗಿದ್ದು, ಜುಲೈ 15ರವರೆಗೂ ನಿಮಗೆ ನಗರದ ದೃಷ್ಟಿ-ಸೃಷ್ಟಿ ಸ್ಯಾರಿ ಸೆಂಟರ್‍ನಲ್ಲಿ 10 ಪೈಸೆಗೊಂದು ಸೀರೆ ಸಿಗಲಿದೆ. ಕೆಲವು ತಿಂಗಳ ಹಿಂದೆ ಇದೇ ಚಂದ್ರಶೇಖರ್ 20 ರೂ.ಗೆ ಒಂದು ಸೀರೆಯನ್ನು ಮಾರಾಟ ಮಾಡಿದ್ದರು.

     

  • ಬೀದರ್ ಲೋಕೋಪಯೋಗಿ ಇಲಾಖೆ ಮುಂದೆಯೇ ರಸ್ತೆ ಕುಸಿದು ಹಳ್ಳಕ್ಕೆ ಬಿದ್ದ ಲಾರಿ, ಕಾರು

    ಬೀದರ್ ಲೋಕೋಪಯೋಗಿ ಇಲಾಖೆ ಮುಂದೆಯೇ ರಸ್ತೆ ಕುಸಿದು ಹಳ್ಳಕ್ಕೆ ಬಿದ್ದ ಲಾರಿ, ಕಾರು

    ಬೀದರ್: ಕಳಪೆ ಕಾಮಗಾರಿಗೆ ಸಾಕ್ಷಿ ಎಂಬಂತೆ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಮುಂದೆಯೇ ರಸ್ತೆ ಕುಸಿದ ಪರಿಣಾಮ ಕಾರು ಹಾಗೂ ಲಾರಿ ಹಳ್ಳಕ್ಕೆ ಬಿದ್ದಿದೆ.

    ಕೆಲವೇ ದಿನಗಳ ಹಿಂದಷ್ಟೆ ಮಾಡಿದ್ದ ಯುಜಿಡಿ ರಸ್ತೆ ಕುಸಿದು ಕಾರು ಮತ್ತು ಲಾರಿ ಹಳ್ಳದಲ್ಲಿ ಸಿಲುಕಿಕೊಂಡಿದೆ. ವಿಪರ್ಯಾಸವೆಂದರೆ ಲೋಕೋಪಯೋಗಿ ಇಲಾಖೆಯ ಕಚೇರಿ ಮುಂದೆಯೇ ರಸ್ತೆ ಕುಸಿದು ಈ ಅವಘಡ ಸಂಭವಿಸಿದ್ದಕ್ಕೆ ಅಧಿಕಾರಿಗಳು ನಾಚಿಕೆಪಡುವಂತಾಗಿದೆ.

    ಎರಡು ವರ್ಷಗಳಿಂದ ಮಂದಗತಿಯಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿಗೆ ಯಾವಾಗ ಮುಕ್ತಿ ಸಿಗುತ್ತೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಚಿವರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ಯುಜಿಡಿ ಕಳಪೆ ಕಾಮಗಾರಿಯ ಭಯದಲ್ಲೇ ವಾಹನ ಸವಾರರು ಸಂಚಾರ ಮಾಡುತ್ತಿದ್ದಾರೆ.

  • ಇಡೀ ಗ್ರಾಮಕ್ಕೆ ನೀರು ಸರಬರಾಜು ಮಾಡುವ ವಾಟರ್ ವಾಲ್ ತಿಪ್ಪೆಗುಂಡಿಯಲ್ಲಿ!

    ಇಡೀ ಗ್ರಾಮಕ್ಕೆ ನೀರು ಸರಬರಾಜು ಮಾಡುವ ವಾಟರ್ ವಾಲ್ ತಿಪ್ಪೆಗುಂಡಿಯಲ್ಲಿ!

    ಬೀದರ್: ಇಡೀ ಗ್ರಾಮಕ್ಕೆ ನೀರು ಸರಬರಾಜು ಮಾಡುವ ವಾಟರ್ ವಾಲ್ ತಿಪ್ಪೆಗುಂಡಿಯಲ್ಲಿದೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಟ್ನಳ್ಳಿ ಗ್ರಾಮದ 3 ಸಾವಿರ ಜನರು ಪ್ರತಿದಿನ ನೀರು ಕುಡಿಯಲು ಭಯ ಪಡುತ್ತಿರುವ ಸ್ಟೋರಿ ಇದು. ಈ ದೃಶ್ಯ ನೋಡಿದ ಎಂಥವರಿಗೂ ಮೈ ಜುಮ್ ಎನ್ನದೆ ಇರದು. ಈ ನೀರು ಕುಡಿದ್ರೆ ಕಾಯಿಲೆ ಗ್ಯಾರಂಟಿ. ವಾಟರ್ ವಾಲ್ ತಿಪೆಗುಂಡಿಯಲ್ಲಿರುವುದರಿಂದ ಯಾವಾಗಲೂ ನೀರು ಕಲುಷಿತಗೊಂಡಿರುತ್ತದೆ. ಮಳೆಗಾಲ ಬಂದರಂತೂ ಈ ಗ್ರಾಮದ ಜನರ ನೀರಿನ ಗತಿ ಕೇಳೋರೆ ಇಲ್ಲ. ಹತ್ತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ.

    ಈ ಬಗ್ಗೆ ಶೆಂಬೆಳ್ಳಿ ಪಿಡಿಓ ಸುಜಾತರನ್ನು ಕೇಳಿದ್ರೆ ನೀವ್ಯಾರು ಎಂದು ವರದಿಗಾರರನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ನಂತರ ಹೋಗಿ ನೋಡತ್ತೇನೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಇನ್ನು ಕ್ಷೇತ್ರದ ಜನರ ಸಮಸ್ಯೆಗೆ ಪರಿಹಾರ ನೀಡಬೇಕಿರುವ ಶಾಸಕ ಪ್ರಭು ಚವ್ಹಾಣ ಕಾಣೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇದ್ದರೂ ಗ್ರಾಮದ ಜನರು ಈ ರೀತಿ ಕಲುಷಿತ ನೀರು ಕುಡಿಯುವ ಬವಣೆ ತಪ್ಪಿಲ್ಲ.

  • ಚಿಕಿತ್ಸೆಗೆ ಬಂದಿದ್ದ ಯುವತಿಗೆ ಬಲವಂತವಾಗಿ ಸಗಣಿ ತಿನ್ನಿಸಿದ ಮಾಂತ್ರಿಕ

    ಚಿಕಿತ್ಸೆಗೆ ಬಂದಿದ್ದ ಯುವತಿಗೆ ಬಲವಂತವಾಗಿ ಸಗಣಿ ತಿನ್ನಿಸಿದ ಮಾಂತ್ರಿಕ

    ಲಾತೂರ್: ಚಿಕಿತ್ಸೆಗಾಗಿ ಬಂದಿದ್ದ 18 ವರ್ಷದ ಯುವತಿಗೆ ಮಾಂತ್ರಿಕನೊಬ್ಬ ಬಲವಂತವಾಗಿ ಸಗಣಿ ತಿನ್ನಿಸಿದ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನಡೆದಿದೆ.

    ಬಿಎ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿರುವ ಯುವತಿ ಕೆಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಇದರಿಂದ ಆಕೆಗೆ ಮಾಟ ಮಂತ್ರ ಮಾಡಿಸಲಾಗಿದೆ ಎಂದು ನಂಬಿದ್ದ ಆಕೆಯ ಪೋಷಕರು ಚಿಕಿತ್ಸೆಗಾಗಿ ಯುವತಿಯನ್ನು ಜೂನ್ 4ರಂದು ಬೀದರ್‍ನ ಮಾಂತ್ರಿಕನೊಬ್ಬನ ಬಳಿ ಕರೆತಂದಿದ್ದರು.

    ಮಾಂತ್ರಿಕ ಚಿಕಿತ್ಸೆಯ ನೆಪದಲ್ಲಿ ಯುವತಿಗೆ ಥಳಿಸಿ, ಬಲವಂತವಾಗಿ ಸಗಣಿಯನ್ನು ತಿನ್ನಿಸಿದ್ದಾನೆ. ಸ್ಥಳದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಇದನ್ನು ವಿಡಿಯೋ ಮಾಡಿ ಸಾಮಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಮಗನ ಸಮಸ್ಯೆ ಪರಿಹಾರಕ್ಕಾಗಿ ತಾಯಿಯನ್ನು 7 ಬಾರಿ ಸಂಭೋಗಿಸಿ 21 ಲಕ್ಷ ದೋಚಿದ್ದ ಕಾಮಿ ಜ್ಯೋತಿಷಿ ಅರೆಸ್ಟ್!

    ಘಟನೆಯ ಸಂಬಂಧ ಯುವತಿಯ ತಂದೆ ಹಾಗೂ ಮಾಂತ್ರಿಕ ಸೇರಿದಂತೆ 6 ಜನರ ವಿರುದ್ಧ ಲಾತೂರು ಜಿಲ್ಲೆಯ ಚಾಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಪ್ರಭಾಕರ್ ಕೆಸಳೆ (35), ಗಂಗಾಧರ್ ಶೇವಲೆ (65), ಪಂಡಿತ್ ಕೋರೆ (37) ಮತ್ತು ದಗಡು ಶೇವಲೆ (40) ಎಂಬವರನ್ನು ಬಂಧಿಸಲಾಗಿದೆ. ನಾಪತ್ತೆಯಾಗಿರುವ ಮಾಂತ್ರಿಕನ ಪತ್ತೆಗಾಗಿ ಕರ್ನಾಟಕದ ಬೀದರ್‍ಗೆ ಪೊಲೀಸರ ತಂಡವೊಂದನ್ನ ಕಳುಹಿಸಲಾಗಿದೆ ಎಂದು ಡಿಎಸ್‍ಪಿ ವಿಕಾಸ್ ನಾಯಕ್ ಹೇಳಿದ್ದಾರೆ.

    ನರಬಲಿ ತಡೆ ಹಾಗೂ 2013ರ ಮಹಾರಾಷ್ಟ್ರ ಅಘೋರಿ ಆಚರಣೆ ಮತ್ತು ಮಾಟ ಮಂತ್ರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

     

  • ಲವ್ವರ್ ತಂದೆ ಬೈದಿದ್ದಕ್ಕೆ ಮನನೊಂದು ರೈಲಿಗೆ ತಲೆಕೊಟ್ಟ ಯುವಕ

    ಲವ್ವರ್ ತಂದೆ ಬೈದಿದ್ದಕ್ಕೆ ಮನನೊಂದು ರೈಲಿಗೆ ತಲೆಕೊಟ್ಟ ಯುವಕ

    ಬೀದರ್: ತಾನು ಪ್ರೀತಿಸುತ್ತಿದ್ದ ಯುವತಿಯ ಪೋಷಕರು ಮನೆಗೆ ಬಂದು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಯುವಕನೋರ್ವ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಭಾಲ್ಕಿ ಪಟ್ಟಣದ ರೈಲ್ವೆ ಗೇಟ್ ಬಳಿ ನಡೆದಿದೆ.

    ಸಚಿನ್ ರಾಮ್‍ರಾವ್ ವಾಂಗೆ (18) ಆತ್ಮಹತ್ಯೆಗೆ ಶರಣಾದ ಯುವಕ. ಭಾಲ್ಕಿ ಪಟ್ಟಣದ ಗುರು ಪ್ರಸನ್ನ ಐಟಿಐ ಕಾಲೇಜಿನ ವ್ಯಾಸಂಗ ಮಾಡುತ್ತಿದ್ದ ಸಚಿನ್ ತನ್ನ ಕ್ಲಾಸ್‍ಮೇಟ್ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ.

    ಸಚಿನ್ ಮತ್ತು ಯುವತಿಯ ನಡುವಿನ ಲವ್ ವಿಷಯ ತಿಳಿದ ಯುವತಿಯ ಪೋಷಕರು ಸಚಿನ್ ಮನಗೆ ಬಂದು ಗಲಾಟೆ ಮಾಡಿದ್ದರು. ಈ ವೇಳೆ ಸಚಿನ್ ಪೋಷಕರಿಗೂ ಬೈದಿದ್ರು. ತನ್ನಿಂದಾಗಿ ಪೋಷಕರಿಗೆ ಸಾರ್ವಜನಿಕವಾಗಿ ಅವಮಾನವಾಯಿತು ಎಂದು ಮನನೊಂದು ಸಚಿನ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಗುಲ್ಬರ್ಗಾ ರೈಲ್ವೆ ವಿಭಾಗದ ಡಿವೈಎಸ್‍ಪಿ ಬಸವರಾಜು ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಘಟನಾ ಸ್ಥಳಕ್ಕೆ ಬೀದರ್ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ಬಾಯ್ಲರ್ ಸ್ಫೋಟದಿಂದ ಕೆಮಿಕಲ್ ಕಾರ್ಖಾನೆಗೆ ಬೆಂಕಿ – ಕಾರ್ಮಿಕ ಸಾವು

    ಬಾಯ್ಲರ್ ಸ್ಫೋಟದಿಂದ ಕೆಮಿಕಲ್ ಕಾರ್ಖಾನೆಗೆ ಬೆಂಕಿ – ಕಾರ್ಮಿಕ ಸಾವು

    ಬೀದರ್: ಬಾಯ್ಲರ್ ಸ್ಫೋಟದಿಂದ ಕೆಮಿಕಲ್ ಕಾರ್ಖಾನೆಗೆ ಬೆಂಕಿ ಬಿದ್ದು ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಆರ್.ಟಿ.ಓ ಚೆಕ್ ಪೋಸ್ಟ್ ಬಳಿ ನಡೆದಿದೆ.

    ಹೈದ್ರಾಬಾದ್ ಮೂಲದ 38 ವರ್ಷದ ವೆಂಕಟೇಶ್ ಸಾವನ್ನಪ್ಪಿರೋ ಕಾರ್ಮಿಕ ಅಂತ ಗೊತ್ತಾಗಿದೆ. ಆರ್.ಕೆ ಆರ್ಗಾನಿಕ್ ಕೆಮಿಕಲ್ ಕಾರ್ಖಾನೆಯಲ್ಲಿ ಗುರುವಾರ ರಾತ್ರಿ ಈ ಅವಘಡ ಸಂಭವಿಸಿದೆ. ಮೂರು ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸಿವೆ.

    ಘಟನೆ ಬಗ್ಗೆ ಮಾಹಿತಿ ತಿಳಿದು ಹುಮ್ನಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮದ್ವೆಯಾದ ಒಂದೇ ವಾರಕ್ಕೆ ಗಂಡ, ಅತ್ತೆ, ಮಾವನಿಂದಲೇ ನವವಿವಾಹಿತೆಯ ಕೊಲೆ

    ಮದ್ವೆಯಾದ ಒಂದೇ ವಾರಕ್ಕೆ ಗಂಡ, ಅತ್ತೆ, ಮಾವನಿಂದಲೇ ನವವಿವಾಹಿತೆಯ ಕೊಲೆ

    ಬೀದರ್: ಮದುವೆ ಮಾಡಿಕೊಂಡು ಗಂಡನ ಮನೆಯಲ್ಲಿ ಸುಖವಾಗಿ ಬಾಳುವ ಕನಸು ಕಂಡಿದ್ದ ನವ ವಧುವನ್ನು ಆಕೆಯ ಅತ್ತೆ, ಮಾವ, ಗಂಡ ಸೇರಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಕಲ್ಲೂರ್ ತಾಂಡಾದಲ್ಲಿ ನಡೆದಿದೆ.

    19 ವರ್ಷದ ದೀಪಾ ಕೊಲೆಯಾದ ದುರ್ದೈವಿ. ಗಂಡ ದಿಲೀಪ್, ಅತ್ತೆ ಶೂಲಾಬಾಯಿ ಹಾಗೂ ಮಾವ ಸೋಮಲ್ಲಾ ಪವಾರ ಸೇರಿಕೊಂಡು ಹಾಡಹಗಲೇ ದೀಪಾಳನ್ನು ಹೊಡೆದು ಕೊಲೆ ಮಾಡಿ ಹೊಲದ ಬಾವಿಯಲ್ಲಿ ಬಿಸಾಕಿದ್ದಾರೆ.

    ಮೇ 29ರಂದು ಕಲ್ಲೂರ್ ತಾಂಡಾದಲ್ಲಿ ದೀಪಾ ಹಾಗೂ ದಿಲೀಪ್ ಮದುವೆಯಾಗಿತ್ತು. ಮೌಸಿ ಮಗನ ಜೊತೆ ಮಾತನಾಡುತ್ತಿದ್ದಕ್ಕೆ ಅನೈತಿಕ ಸಂಬಂಧ ಇದೆ ಎಂದು ಅನುಮಾನಿಸಿ ಕೊಲೆ ಮಾಡಲಾಗಿದೆ ಎಂದು ದೀಪಾ ಸಹೋದರ ಪ್ರವಿಣ್ ಜಾಧವ ದೂರಿನಲ್ಲಿ ತಿಳಿಸಿದ್ದಾರೆ.

    ಈ ಕುರಿತು ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತಿ ದಿಲೀಪ್ ಪವಾರ್‍ನನ್ನ ಪೊಲೀಸರು ಬಂಧಿಸಿದ್ದು, ಆತನ ತಂದೆ-ತಾಯಿ ಪರಾರಿಯಾಗಿದ್ದಾರೆ.

    ಮೃತ ದೀಪಾ ತಂದೆ ತಾಯಿ ಇಬ್ಬರೂ ಇತ್ತೀಚಿಗೆ ತೀರಿಕೊಂಡಿದ್ದರು. ಅಣ್ಣ ಪ್ರವಿಣ್ ಜಾಧವ್ 50 ಸಾವಿರ ರೂ, ಎರಡು ತೊಲೆ ಬಂಗಾರ, ಸ್ಪ್ಲೆಂಡರ್ ಬೈಕ್ ನೀಡಿ ತಂಗಿಯನ್ನ ದಿಲೀಪ್‍ಗೆ ಮದುವೆ ಮಾಡಿಕೊಟ್ಟಿದ್ರು.

  • ನಾಯಿ ದಾಳಿಯಿಂದ ಗಂಭೀರ ಗಾಯಗೊಂಡ ಕೋತಿಯ ಮನಕಲಕುವ ವಿಡಿಯೋ ನೋಡಿ

    ನಾಯಿ ದಾಳಿಯಿಂದ ಗಂಭೀರ ಗಾಯಗೊಂಡ ಕೋತಿಯ ಮನಕಲಕುವ ವಿಡಿಯೋ ನೋಡಿ

    ಬೀದರ್: ನಾಯಿಗಳ ದಾಳಿಗೊಳಗಾಗಿ ರಕ್ತದ ಮಡುವಿನಲ್ಲಿ ಕೋತಿಯೊಂದು ಒದ್ದಾಡುತ್ತಿರೋ ಮನಕಲಕುವ ಘಟನೆಯೊಂದು ಬೀದರ್ ನಗರದ ಸಾಯಿ ದೇವಸ್ಥಾನದ ಬಳಿ ನಡೆದಿದೆ.

    ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶ್ವಾನಗಳ ದಾಳಿಗೆ ಸಿಲುಕಿ ಕೋತಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರೋ ದೃಶ್ಯ ನೆರೆದವರ ಕಣ್ಣಂಚಲ್ಲಿ ನೀರು ತರಿಸಿದೆ. ಕೋತಿ ತನ್ನ ಪ್ರಾಣ
    ಸಂಕಟದಿಂದ ಒದ್ದಾಡುತ್ತಿರೋ ಈ ದೃಶ್ಯವನ್ನು ಸ್ಥಳೀಯರೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಬೀದರ್ ನಗರದಲ್ಲಿ ಬೀದಿ ಶ್ವಾನಗಳ ಕಾಟ ವಿಪರೀತವಾಗಿದ್ದು, ಇಂದು 8 ರಿಂದ 10 ಶ್ವಾನಗಳು ಗುಂಪೊಂದು ಕೋತಿ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿವೆ. ಗಂಭೀರವಾಗಿ ಗಾಯಗೊಂಡ ಕೋತಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿತ್ತು. ಹಲವು ತಿಂಗಳುಗಳಿಂದ ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಹಲವು ಬಾರಿ ಹಸುಗೂಸುಗಳ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದವು. ಇಂತಹ ಘಟನೆ ನಡೆದಿದ್ರೂ ನಗರಸಭೆ ಅಧಿಕಾರಿಗಳು ಮಾತ್ರ ಎಚ್ಚರಗೊಂಡಿಲ್ಲಾ ಅನಿಸುತ್ತೆ. ಇದೀಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸ್ಥಳೀಯರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಶು ಇಲಾಖೆಯ ಅಧಿಕಾರಿಗಳಿಗೆ ಹಲವು ಗಂಟೆಗಳಿಂದ ಸ್ಥಳೀಯರು ಫೋನ್ ಮಾಡಿದ್ರು ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಾರದೆ ಬೇಜಾಬ್ದಾರಿತನ ವರ್ತಿಸಿದ್ದಾರೆ. ಇದರಿಂದ ಮಾನವೀಯತೆ ಇಲ್ಲದ ಅಧಿಕಾರಿಗಳ ವಿರುದ್ಧವೂ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=3qiWAXpVnVc