Tag: bidar

  • ಬೀದರ್ ನಲ್ಲಿ ನಡೆಯೋ ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ: ಸಿಎಂ

    ಬೀದರ್ ನಲ್ಲಿ ನಡೆಯೋ ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ: ಸಿಎಂ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೀದರ್ ನಲ್ಲಿ ನಡೆಯೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಈ ಕಾರ್ಯಕ್ರಮಕ್ಕೆ ಹೋಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಈ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ, ನಾಳೆ ಬೀದರ್ ನಲ್ಲಿ ನಡೆಯಲಿರುವ ರೈಲ್ವೇ ಇಲಾಖೆಯ ಕಾರ್ಯಾಕ್ರಮಕ್ಕೆ ನನಗೆ ತಡವಾಗಿ ಆಹ್ವಾನ ನೀಡಿದ್ದಾರೆ. ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸದ ಕೇಂದ್ರ ಸರ್ಕಾರ ಇದುವರೆಗೂ ನನಗೆ ಆಹ್ವಾನವೇ ನೀಡಿಲ್ಲ. ಯಾವುದೇ ಒಂದು ಯೋಜನೆಗೆ ರಾಜ್ಯ ಸರ್ಕಾರ ಅದರ ಅರ್ಧದಷ್ಟು ಹಣ ಹಾಗೂ ಜಮೀನು ಉಚಿತವಾಗಿ ನೀಡುತ್ತಿದೆ. ಆದ್ರೆ ಉದ್ಘಾಟನೆಯಾಗ್ತಿರೋದು ಮಾತ್ರ ಪ್ರಧಾನಿ ಮೋದಿಯವರಿಂದ ಅಂತ ಸಿಎಂ ಹೇಳಿದ್ರು.

    ಇದನ್ನೂ ಓದಿ: 3 ದಶಕಗಳ ಕನಸು ಆಗ್ತಿದೆ ನನಸು- ನಾಳೆ ಕಲಬುರಗಿ-ಬೀದರ್ ರೈಲ್ವೆ ಯೋಜನೆಗೆ ಪ್ರಧಾನಿಯಿಂದ ಚಾಲನೆ

    ರೈಲ್ವೇ ಇಲಾಖೆಯ ಈ ಕಾರ್ಯಕ್ರಮದ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸದೆ ನಿಗದಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಾರ್ಯಕ್ರಮಕ್ಕೆ ಒಂದೆರಡು ದಿನ ಇರೋವಾಗ ಕಾಟಾಚಾರದಂತೆ ರೈಲ್ವೇ ಅಧಿಕಾರಿಗಳು ಬಂದು ಆಹ್ವಾನ ನೀಡಿದ್ದಾರೆ. ತಡವಾಗಿ ಆಹ್ವಾನ ನೀಡಿದ್ದರಿಂದ ನಾನು ಬೇರೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ಬೀದರ್ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್‍ವಿ ದೇಶಪಾಂಡೆ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಅಂತ ಸಿಎಂ ಹೇಳಿದ್ರು.

    ಆಹ್ವಾನ ನೀಡಲು ಬಂದ ರೈಲ್ವೇ ಅಧಿಕಾರಿಗಳ ಬಳಿ ಶಿಷ್ಟಾಚಾರ ಉಲ್ಲಂಘನೆಗೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ನಾನು ಕಾರ್ಯಕ್ರಮಕ್ಕೆ ಬರಲ್ಲ ಹೋಗ್ರಿ ಅಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

  • ಚಲಿಸುತ್ತಿದ್ದ ರೈಲಿನಲ್ಲೇ ಮಂಗಳಮುಖಿಯರ ಗೂಂಡಾಗಿರಿ- ವಿದ್ಯಾರ್ಥಿ ಮೇಲೆ ಹಲ್ಲೆ

    ಚಲಿಸುತ್ತಿದ್ದ ರೈಲಿನಲ್ಲೇ ಮಂಗಳಮುಖಿಯರ ಗೂಂಡಾಗಿರಿ- ವಿದ್ಯಾರ್ಥಿ ಮೇಲೆ ಹಲ್ಲೆ

    ಬೀದರ್: ಚಲಿಸುತ್ತಿದ್ದ ರೈಲಿನಲ್ಲಿಯೇ ಮಂಗಳಮುಖಿಯರು ಗೂಂಡಾಗಿರಿ ನಡೆಸಿರೋ ಘಟನೆಯೊಂದು ಬೀದರ್ ನಲ್ಲಿ ನಡೆದಿದೆ.

    ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಮಂಗಳಮುಖಿಯರು ವಿದ್ಯಾರ್ಥಿಗೆ ಹಣ ಕೇಳಿದ್ದಾರೆ. ಆದ್ರೆ ಹಣ ನೀಡದ ಕಾರಣ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ವಿದ್ಯಾರ್ಥಿಯ ಕಿವಿಯಲ್ಲಿ ರಕ್ತ ಬಂದಿದೆ.

    ರೈಲಿನಲ್ಲಿ ಮುಂಗಳಮುಖಿಯರು ನಡೆಸಿದ ಈ ಗೂಂಡಾಗಿರಿಯನ್ನು ಬೀದರ್ ನ ವ್ಯಕ್ತಿಯೊಬ್ಬರು ರಹಸ್ಯವಾಗಿ ಮೊಬೈಲ್ ನಲ್ಲಿ ಚಿತ್ರಿಕರಣ ಮಾಡಿದ್ದಾರೆ. ಈ ದೃಶ್ಯ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಬೆಂಗಳೂರು-ದೆಹಲಿ ಎಕ್ಸ್ ಪ್ರೆಸ್ ನಲ್ಲಿ 4 ಮಂಗಳಮುಖಿಯರು ಈ ಕೃತ್ಯ ಎಸಗಿದ್ದಾರೆ. ಗೌರಿಬಿದನೂರು ಸ್ಟೇಷನ್ ನಲ್ಲಿ ಹತ್ತಿ ಪುಟ್ಟಪತಿ9 ಸ್ಟೇಷನ್ ವರೆಗೆ ಗೂಂಡಾಗಿರಿ ಮಾಡಿದ್ದಾರೆ. ಇನ್ನು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿರುವುದನ್ನು ಪ್ರಶ್ನಿಸಿದ ಸಹಪ್ರಯಾಣಿಕರ ಮೇಲೂ ಅವರು ಹಲ್ಲೆ ಮಾಡಿದ್ದಾರೆ. ಬಳಿಕ ಮಂಗಳಮುಖಿಯರು ಮುಂದಿನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

  • ಬೀದರ್ ನಲ್ಲಿ ಮತ್ತೆ ಭೂಮಿ ಗಢ ಗಢ- ನಿದ್ದೆ ಮಾಡ್ದೆ ದೇವಸ್ಥಾನದಲ್ಲಿ ಕಾಲಕಳೆದ ಜನ

    ಬೀದರ್ ನಲ್ಲಿ ಮತ್ತೆ ಭೂಮಿ ಗಢ ಗಢ- ನಿದ್ದೆ ಮಾಡ್ದೆ ದೇವಸ್ಥಾನದಲ್ಲಿ ಕಾಲಕಳೆದ ಜನ

    ಬೀದರ್: ತಡರಾತ್ರಿ ಎರಡನೇ ಬಾರಿಗೆ ಲಘು ಭೂಕಂಪನದ ಅನುಭವಾಗಿ ಗ್ರಾಮಸ್ಥರು ರಾತ್ರಿಯಿಡೀ ಗ್ರಾಮದ ದೇವಸ್ಥಾನದಲ್ಲಿ ಕಾಲಕಳೆದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಟರನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಡರಾತ್ರಿ ಸುಮಾರು 12:40ಕ್ಕೆ ಲಘು ಭೂಕಂಪನವಾಗಿದ್ದು ಜನರು ಭಯಗೊಂಡು ಮನೆಯಿಂದ ಓಡಿ ಬಂದಿದ್ದಾರೆ. ಎಲ್ಲಿ ನಿದ್ದೆ ಮಾಡಿದರೆ ಮತ್ತೆ ಭೂಕಂಪನವಾಗಿ ಅನಾಹುತವಾಗುತ್ತೋ ಎಂದು ಭಯಗೊಂಡ ಜನ ರಾತ್ರಿಯಿಡೀ ಗ್ರಾಮದ ದೇವಸ್ಥಾನದಲ್ಲಿ ಜಾಗರಣೆ ಮಾಡಿದ್ದಾರೆ. 5 ಸೆಕೆಂಡ್‍ಗಳ ಕಾಲ ನಡುಗಿದ ಭೂಮಿಗೆ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಗ್ರಾಮಸ್ಥರು ಭಯದಲ್ಲಿ ನಿದ್ದೆ ಮಾಡದೆ ಕುಳಿತುಕೊಂಡೆ ಭಯದಲ್ಲಿ ಬೆಳಗ್ಗೆವರೆಗೆ ಕಾಲ ಕಳೆದಿದ್ದಾರೆ.

    ಮಂಗಳವಾರ ಭೂಮಿ ಕಂಪನವಾದಾಗ ಸ್ಥಳಕ್ಕೆ ತಹಶೀಲ್ದಾರ್ ಮತ್ತು ಡಿವೈಎಸ್‍ಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ರೀತಿ ಪದೇ ಪದೇ ಭೂಮಿ ನಡುತ್ತಿರುವುದಾದ್ರೂ ಏಕೆ ಎಂದು ಆತಂಕದಿಂದ ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ಗ್ರಾಮಸ್ಥರಿಗೆ ಉತ್ತರ ನೀಡಬೇಕಾಗಿದೆ.

  • ರಾಜ್ಯಾದ್ಯಂತ ವರುಣನ ಆರ್ಭಟ-ಹಳ್ಳ ದಾಟುವಾಗ ಒಂದೇ ಕುಟುಂಬದ ಮೂವರು ನೀರುಪಾಲು

    ರಾಜ್ಯಾದ್ಯಂತ ವರುಣನ ಆರ್ಭಟ-ಹಳ್ಳ ದಾಟುವಾಗ ಒಂದೇ ಕುಟುಂಬದ ಮೂವರು ನೀರುಪಾಲು

    – ಗದಗದಲ್ಲಿ ಮೇಲ್ಛಾವಣಿ ಕುಸಿದು ಅಜ್ಜಿ, ಮೊಮ್ಮಕ್ಕಳ ಸಾವು

    ಬೀದರ್/ಗದಗ: ಮಳೆಯ ಅವಾಂತರದಿಂದ ಒಂದೇ ಕುಟುಂಬದ ಮೂವರು ಸದ್ಯಸರು ನೀರುಪಾಲಗಿರುವ ಘಟನೆ ಬೀದರ್ ನ ಬಕನಾಳ ಲಾಡವಂತಿ ಬಳಿಯ ಹಳ್ಳದಲ್ಲಿ ನಡೆದಿದೆ.

    ಹಳ್ಳ ದಾಟುವಾಗ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ ನಡೆದ ಈ ಘಟನೆಯಲ್ಲಿ ಶಂಕರ್, ಲಕ್ಷ್ಮಿ ಮತ್ತು ಲತಾ ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದ ಬಳಿ ಘಟನೆ ನಡೆದಿದ್ದು, ಮಂಠಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

    ಗದಗ ಜಿಲ್ಲಾದ್ಯಂತ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಮನೆಯ ಮೇಲ್ಛಾವಣಿ ಕುಸಿದು ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಮೆಹಬೂಬಿ(56), ಮುಸ್ಕಾನ್(8), ನಾಜೀಯಾ(10) ಮೃತ ದುರ್ದೈವಿಗಳು. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮಹಾಮಳೆಯಿಂದಾಗಿ ಶಾಲೆಗೆ ಹೋಗದೇ ಗ್ರಾಮಕ್ಕೆ ವಾಪಸ್ ಆಗ್ತಿದ್ದಾರೆ ಬೀದರ್ ಮಕ್ಕಳು

    ಮಹಾಮಳೆಯಿಂದಾಗಿ ಶಾಲೆಗೆ ಹೋಗದೇ ಗ್ರಾಮಕ್ಕೆ ವಾಪಸ್ ಆಗ್ತಿದ್ದಾರೆ ಬೀದರ್ ಮಕ್ಕಳು

    ಬೀದರ್: ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಔರಾದ್ ತಾಲೂಕಿನ ಗ್ರಾಮವೊಂದರ ಏಕೈಕ ರಸ್ತೆ ಕಡಿತಗೊಂಡಿದ್ದರಿಂದ ಶಾಲೆಗೆ ಹೋಗುತ್ತಿದ್ದ ಮಕ್ಕಳು ಮರಳಿ ಗ್ರಾಮಕ್ಕೆ ವಾಪಸ್ ಆಗುತ್ತಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ನಿಡೋದಾ ಗ್ರಾಮ ನಡುಗಡೆಯಂತ್ತಾಗಿದ್ದು, ಗ್ರಾಮದ ಜನರು ಈ ಮಹಾಮಳೆಗೆ ಹೈರಾಣಾಗಿ ಹೋಗಿದ್ದಾರೆ. ಒಂದು ಕಡೆ ಮಾಂಜ್ರಾ ನದಿ ಮತ್ತೊಂದು ಕಡೆ ಹಳ್ಳ ತುಂಬಿ ಗ್ರಾಮದಿಂದ ಹೊರ ಹೋಗಲು ಸಾಧ್ಯವಾಗದೇ ಗ್ರಾಮಸ್ಥರು ಹರಸಾಹಸ ಪಡುತ್ತಿದ್ದಾರೆ.

    ಸತತ ಮೂರು ಗಂಟೆಗಳಿಂದ ಹೋಬಳಿಗೆ ಹೋಗಲು ಹರಸಾಹಸ ಪಟ್ಟುಕೊಂಡು ಸ್ಥಳದಲ್ಲೇ ಕುಳಿತಿದ್ದಾರೆ. ಸೇತುವೆ ಬಳಿ ನೀರಿನ ಸೆಳೆತ ಹೆಚ್ಚಾಗಿ ಇರೋದ್ರಿಂದ ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸ್ ಕಣ್ಣಗಾವಲು ಹಾಕಲಾಗಿದೆ. ಮೂರು ವರ್ಷಗಳಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೂ, ಶಾಸಕರಿಗೆ, ಅಧಿಕಾರಿಗಳು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇಂದು ನಾವು ಪರದಾಟ ಅನುಭವಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಡರಾತ್ರಿ ಸುರಿಯುತ್ತಿರುವ ಮಳೆಗೆ ಒಂದೊಂದೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಜಿಲ್ಲೆಯ ಜನರು ಈ ಮಹಾಮಳೆಗೆ ಹೈರಾಣಾಗಿರವುದಂತು ಸುಳ್ಳಲ್ಲ.

  • ಬೀದರ್ ಶಾಕಿಂಗ್: 10ನೇ ಕ್ಲಾಸ್ ಓದಿರೋ ವೈದ್ಯರ ಸಹಾಯಕನಿಂದ ರೋಗಿಗಳಿಗೆ ಇಂಜೆಕ್ಷನ್!

    ಬೀದರ್ ಶಾಕಿಂಗ್: 10ನೇ ಕ್ಲಾಸ್ ಓದಿರೋ ವೈದ್ಯರ ಸಹಾಯಕನಿಂದ ರೋಗಿಗಳಿಗೆ ಇಂಜೆಕ್ಷನ್!

    ಬೀದರ್: 10ನೇ ಕ್ಲಾಸ್ ಪಾಸಾಗಿರೋ ವೈದ್ಯರ ಸಹಾಯಕ ರೋಗಿಗಳಿಗೆ ಇಂಜೆಕ್ಷನ್ ಹಾಗೂ ಔಷಧಿ ನೀಡಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಸಾವಿನ ಮನೆಗೆ ಕಳಿಸುತ್ತಿರುವ ಭಯಾನಕ ಪ್ರಕರಣವೊಂದು ಬೀದರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಔರಾದ್ ತಾಲೂಕಿನ ತೋರಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 10 ಹಾಸಿಗೆಗಳ ಹೆರಿಗೆ ಆಸ್ಪತ್ರೆಯಲ್ಲಿರುವ ವೈದ್ಯರ ಸಹಾಯಕ ಶ್ರೀಕಾಂತ್ ಕೆಲಸ ಈಗ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಆಸ್ಪತ್ರೆಗೆ ವೈದ್ಯರು ವಾರಕ್ಕೆ ಒಂದು ಅಥವಾ ಎರಡು ದಿನ ಬಂದು ಇನ್ನುಳಿದ ದಿನ ಗೈರಾಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಶ್ರೀಕಾಂತ್ ವೈದ್ಯರ ಕೆಲಸವನ್ನು ಕ್ಷಣದಲ್ಲೇ ಮಾಡಿ ಮುಗಿಸುತ್ತಾನೆ.

    10ನೇ ಕ್ಲಾಸ್ ಓದಿರುವ ಶ್ರೀಕಾಂತ್‍ಗೆ ಎಂಬಿಬಿಎಸ್ ನೀರು ಕುಡಿದಷ್ಟೆ ಸಲಿಸಾಗಿದೆ ಎಂದರೆ ನೀವು ನಂಬಲೇಬೇಕು. ಎರಡು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಶ್ರೀಕಾಂತ್ ವೈದ್ಯರ ಸಹಾಯವಿಲ್ಲದೆ ರೋಗಿಗಳಿಗೆ ಇಂಜೆಕ್ಷನ್ ನೀಡುತ್ತಾನೆ.

    ವೈದ್ಯರ ಸಹಾಯಕ ಇಂಜೆಕ್ಷನ್ ಹಾಗೂ ಔಷಧಿ ಕೊಡುತ್ತಿರುವುದರಿಂದ ಭಯಭೀತರಾಗಿರುವ ರೋಗಿಗಳು, ಗರ್ಭಿಣಿಯರು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಒಂದು ತಿಂಗಳಿನಿಂದ ಫಾಲೋಅಪ್ ಮಾಡಿ ಆಸ್ಪತ್ರೆಗೆ ಭೇಟಿ ನೀಡಿದ ಟಿವಿ ಕ್ಯಾಮೆರಾಗೆ ರೆಡ್ ಹ್ಯಾಂಡಾಗಿ ಈ ಸಹಾಯಕನ ಬಣ್ಣ ಬಯಲು ಮಾಡಿದೆ.

    ಕ್ಯಾಮೆರಾ ನೋಡುತ್ತಿದಂತೆ ಕಕ್ಕಾಬಿಕ್ಕಿಯಾದ ಸಹಾಯಕರು ಹೌದು ಸಾರ್ ನಾನು ವೈದ್ಯರು ಹೇಳಿದರೆ ಮಾತ್ರ ರೋಗಿಗಳಿಗೆ ಚಿಕಿತ್ಸೆ ನೀಡತ್ತೇವೆ ಎಂದು ಒಪ್ಪಿಕೊಂಡಿದ್ದಾನೆ.

  • ನಡುರಸ್ತೆಯಲ್ಲೇ ನರ್ಸ್ ಗೆ ಚಾಕು ಇರಿದ ಭಗ್ನ ಪ್ರೇಮಿ

    ನಡುರಸ್ತೆಯಲ್ಲೇ ನರ್ಸ್ ಗೆ ಚಾಕು ಇರಿದ ಭಗ್ನ ಪ್ರೇಮಿ

    ಬೀದರ್: ನಡುರಸ್ತೆಯಲ್ಲೇ ಭಗ್ನ ಪ್ರೇಮಿಯೊಬ್ಬ ನರ್ಸ್ ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಗಾಂಧಿ ವೃತದಲ್ಲಿ ನಡೆದಿದೆ.

    ಆರೋಪಿ ರಜನಿಕಾಂತ ಶಾಮರಾವ (25) ಎಂಬಾತನೆ ಪಾಗಲ್ ಪ್ರೆಮಿ. ತನ್ನ ಪ್ರೀತಿಯನ್ನು ನಿರಾಕರಿಸಿದಕ್ಕೆ ಸೋದರತ್ತೆ ಮಗಳ ಮೇಲೆಯೇ ಹಲ್ಲೆ ಮಾಡಿದ್ದಾನೆ. ರಜನಿಕಾಂತ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಅವನ ಅತ್ತೆ ಮಗಳು ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ರಜಿನಿಕಾಂತ ತನ್ನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾನೆ. ಆದರೆ ನರ್ಸ್ ಅವನ ಪ್ರೀತಿಯನ್ನು ತಿರಸ್ಕರಿಸಿದಕ್ಕೆ ಭಗ್ನ ಪ್ರೇಮಿಯಂತೆ ನಡು ರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ.

    ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಸಮೀಪದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಪಾದಯಾತ್ರೆಗೆ ಹೊರಟಿದ್ದ ಮಹಿಳಾ ಭಕ್ತಾದಿಗಳ ಮೇಲೆ ಹರಿದ ಲಾರಿ- ಇಬ್ಬರು ಸ್ಥಳದಲ್ಲೇ ಸಾವು

    ಪಾದಯಾತ್ರೆಗೆ ಹೊರಟಿದ್ದ ಮಹಿಳಾ ಭಕ್ತಾದಿಗಳ ಮೇಲೆ ಹರಿದ ಲಾರಿ- ಇಬ್ಬರು ಸ್ಥಳದಲ್ಲೇ ಸಾವು

    ಬೀದರ್: ತುಳಜಾಪುರ ಅಂಬಾಭವಾನಿ ದೇವಿ ದರ್ಶನಕ್ಕೆ ಪಾದಯಾತ್ರೆ ಹೊರಟಿದ್ದ ಇಬ್ಬರು ಮಹಿಳಾ ಭಕ್ತಾರ ಮೇಲೆ ಲಾರಿ ಹರಿದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಹೊರ ವಲಯದ ಎನ್‍ಎಚ್-9ರಲ್ಲಿ ನಡೆದಿದೆ.

    ಲಕ್ಷ್ಮೀ ವೆಂಕಟಗೌಡ (40), ಗೌರಮ್ಮ ಸಂಗಮೇಶ್ (30) ಸಾವನ್ನಪ್ಪಿದ ಮಹಿಳಾ ಭಕ್ತಾದಿಗಳು. ರಸ್ತೆ ಪಕ್ಕದಲ್ಲಿ ಹೊರಟಿದ್ದ ಭಕ್ತಾದಿಗಳ ಮೇಲೆ ಲಾರಿ ಹರಿದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಅಪಘಾತದ ಬಳಿಕ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಮೃತರು ತೆಲಂಗಾಣ ರಾಜ್ಯದವರು ಎಂದು ತಿಳಿದುಬಂದಿದೆ. ಈ ಸಂಬಂಧ ಹುಮ್ನಾಬಾದ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೀದರ್ ನಗರಸಭೆ ಅಧಿಕಾರಿಗಳು ಇದ್ದಾರೋ? ಸತ್ತಿದ್ದಾರೋ: ಜನ್ರ ಆಕ್ರೋಶ

    ಬೀದರ್ ನಗರಸಭೆ ಅಧಿಕಾರಿಗಳು ಇದ್ದಾರೋ? ಸತ್ತಿದ್ದಾರೋ: ಜನ್ರ ಆಕ್ರೋಶ

    ಬೀದರ್: ನಗರಸಭೆ ಅಧಿಕಾರಿಗಳು ಇದ್ದಾರೋ? ಸತ್ತಿದ್ದಾರೋ? ಜನರು ಪ್ರತಿ ದಿನ ನಾಯಿಗಳ ಹಾವಳಿಗೆ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿರುವುದು ಇವರ ಕಣ್ಣಿಗೆ ಕಾಣಿಸುತ್ತಿಲ್ಲವೆ?

    ಇದು ಬೀದರ್ ನಗರದ ಮಂದಿ ಬೀದಿ ನಾಯಿ ನಿಯಂತ್ರಿಸಲು ವಿಫಲರಾದ ನಗರ ಸಭೆ ಅಧಿಕಾರಿಗಳಿಗೆ ಕೇಳುತ್ತಿರುವ ಪ್ರಶ್ನೆ.

    ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗೋವುಗಳು ಮತ್ತು ಮನುಷ್ಯರಿಗೆ ನಾಯಿ ಭಯ ಶುರುವಾಗಿದ್ದು ಸಂಜೆಯಾಗುತ್ತಿದ್ದಂತೆ ಸಂಚಾರ ಮಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ನಾಯಿಗಳದ್ದೇ ದರ್ಬಾರ್ ಶುರುವಾಗಿದ್ದು 20 ರಿಂದ 30 ನಾಯಿಗಳು ಒಟ್ಟಿಗೆ ಸೇರಿ ಅಟ್ಯಾಕ್ ಮಾಡಿ ಗೋವುಗಳನ್ನು ಹಿಗ್ಗಾಮಗ್ಗಾ ಕಚ್ಚುತ್ತಿರುವ ದೃಶ್ಯ ನೋಡಿದ್ದರೆ ಎಂಥವರಿಗೂ ಮೈಜುಂ ಎನ್ನುತ್ತೆ.

    ಬೀದರ್ ನಗರದ ಬಹುತೇಕ ಸ್ಥಳಗಳಲ್ಲಿ ನಾಯಿಗಳ ಸ್ವರಾಜ್ಯವಾಗಿದ್ದು 50 ರಿಂದ 100 ನಾಯಿಗಳ ಗುಂಪಿನ ದೃಶ್ಯ ನೋಡಿದರೆ ಎಂಥವರಿಗೆ ಈ ಕಡೆ ಹೋಗದೆ ಬೇಡಪ್ಪಾ ಎಂಬ ಭಯ ಶುರುವಾಗಿದೆ. ಈಗಾಗಲ್ಲೇ ಶಾಲಾ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಸಾರ್ವಜನಿಕರಿಗೆ ಗಂಭೀರವಾಗಿ ಕಚ್ಚಿದ್ದು ಈಗಲೇ ನಿಯಂತ್ರಣ ಹೇರದೇ ಇದ್ದರೆ ಮತ್ತಷ್ಟು ಮಂದಿ ನಾಯಿಗಳಿಗೆ ತುತ್ತಾಗುವ ಸಾಧ್ಯತೆಯಿದೆ.

    ಸಮಸ್ಯೆಯ ಬಗ್ಗೆ ಶಾರ್ಹೇದ್ ಅಲಿ ಎಂಬುವರು ನಗರಸಭೆ ದೂರು ನೀಡಿದ್ದು, ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹಾರವಾಗಿದೆ ಎಂದು ಉತ್ತರ ನೀಡಿದ್ದಾರೆ. ಆದರೆ ನಾಯಿಗಳ ಹಾವಳಿ ಮಾತ್ರ ದಿನೇ ದಿನೇ ಹೆಚ್ಚುತ್ತಿದ್ದು, ನಗರಸಭೆ ಅಧಿಕಾರಿಗಳ ನಕಲಿ ಮಾಹಿತಿ ನೀಡಿ ನಿರ್ಲಕ್ಷ್ಯ ತೋರಿದ್ದಾರೆ.

  • ಶೌಚಾಯಲ ಇಲ್ಲದಕ್ಕೆ ಕಾಲೇಜು ಬಿಡಲು ಸಿದ್ಧರಿರುವ ವಿದ್ಯಾರ್ಥಿಗಳಿಗೆ ಬೇಕಿದೆ ಸಹಾಯ

    ಶೌಚಾಯಲ ಇಲ್ಲದಕ್ಕೆ ಕಾಲೇಜು ಬಿಡಲು ಸಿದ್ಧರಿರುವ ವಿದ್ಯಾರ್ಥಿಗಳಿಗೆ ಬೇಕಿದೆ ಸಹಾಯ

    ಬೀದರ್: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯದ ವ್ಯವಸೈ ಇಲ್ಲದೆ ಪರದಾಡುತ್ತಿದ್ದಾರೆ. ಶಾಲಾ-ಕಾಲೇಜಿನಲ್ಲಿ ಕಡ್ಡಾಯವಾಗಿ ಶೌಚಾಲಯ ಇರಬೇಕು ಎಂಬ ನಿಯಮವಿದ್ದರೂ ಇಲ್ಲಿನ ಶಿಕ್ಷಣ ಇಲಾಖೆ ಮಾತ್ರ ಅದನ್ನು ಗಾಳಿಗೆ ತೂರಿದೆ. ಬೆಳಕು ಕಾರ್ಯಕ್ರಮದ ಮೂಲಕವಾದರೂ ಸಂಕಷ್ಟದ ಪರಿಸ್ಥಿತಿಗೆ ಪರಿಹಾರ ಸಿಗುತ್ತದೆ ಎಂದು ಭರವಸೆ ಇಟ್ಟುಕೊಂಡು ನೊಂದ ವಿದ್ಯಾರ್ಥಿನಿಯರು ಬಂದಿದ್ದಾರೆ.

    ಜಿಲ್ಲೆಯ ನೌಬಾದ್‍ನಲ್ಲಿರುವ ಸರ್ಕಾರಿ ಕಾಜೇಜಿನಲ್ಲಿ ಸುಮಾರು 1,442 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಕಾಲೇಜಿನಲ್ಲಿ ಶೌಚಾಲಯವಿಲ್ಲದೆ ವಿದ್ಯಾರ್ಥಿನಿಯರು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಹೋಗುವ ಹಂತಕ್ಕೆ ಬಂದಿದ್ದಾರೆ. ಹಲವು ವರ್ಷಗಳಿಂದ ಕಾಲೇಜಿಗೆ ಮೂಲಭೂತ ಸೌಕರ್ಯ ಒದಗಿಸಿ ಎಂದು ಹಲವು ಬಾರಿ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ. ಆದರೂ ಇದುವರೆಗೂ ಯಾವ ಪ್ರಯೋಜನವೂ ಕೂಡ ಆಗಿಲ್ಲ.

    ಕಾಲೇಜಿನಲ್ಲಿ ಹಳೆಯ ಶೌಚಾಲಯವಿದೆ. ಅದು ಪಾಳು ಬಿದ್ದಿದ್ದೆ. ಅದರಿಂದ ಬಯಲು ಜಾಗವೇ ನಮಗೆ ಶೌಚಾಲಯವಾಗಿದೆ. ಕಾಲೇಜಿನಲ್ಲಿ 1,442 ವಿದ್ಯಾರ್ಥಿಗಳ ಪೈಕಿ ಶೇಕಡ 60ರಷ್ಟು ವಿದ್ಯಾರ್ಥಿನಿಯರೇ ಓದುತ್ತಿದ್ದಾರೆ. ಇಂದು ನಾವೆಲ್ಲಾ ಬಯಲಲ್ಲಿ ಶೌಚಾಲಯ ಮಾಡಬೇಕಾಗಿದ್ದು, ಇದರಿಂದ ಅವಮಾನವನ್ನು ಎದುರಿಸುತ್ತಿದ್ದೇವೆ. ಶೌಚಾಲಯವಿಲ್ಲದೆ ತತ್ತರಿಸಿ ಹೋಗಿರುವ ವಿದ್ಯಾರ್ಥಿಗಳಿಗೆ ಶೌಚಾಲಯ ಕಟ್ಟಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡು ಸಾಕಾಗಿ ಹೋಗಿದ್ದೇವೆ. ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಕ್ಕಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ ಆದ್ದರಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಪದವಿ ವಿದ್ಯಾರ್ಥಿ ಮಾಹಾನಂದ ಹೇಳಿದ್ದಾರೆ.

    ಶೌಚಾಲಯವಿಲ್ಲದೆ ವಿದ್ಯಾರ್ಥಿಗಳು ರೋಸಿ ಹೋಗಿದ್ರೆ ಮೊತ್ತೊಂದು ಕಡೆ ಕಾಲೇಜಿನ 50 ಅಥಿತಿ ಉಪನ್ಯಾಸಕರು, 32 ಖಾಯಂ ಉಪನ್ಯಾಶಕರು ಕಾರ್ಯನಿರ್ವಹಿಸುತ್ತಿದ್ದು ಅವರಿಗೂ ಸಹ ಶೌಚಾಲಯವಿಲ್ಲದೆ ರೋಸಿ ಹೋಗಿದ್ದಾರೆ. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ ಕಡ್ಡಾಯವಾಗಿರುಬೇಕು ಎಂಬ ನಿಯಮವನ್ನು ಇಲ್ಲಿ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಗಾಳಿಗೆ ತೂರಿವೆ. ಉನ್ನತ ಶಿಕ್ಷಣ ಸಚಿವರೆ ಗಡಿ ಜಿಲ್ಲೆಯ ಪದವಿ ಕಾಲೇಜಿನ ಅವಮಾನವಿಯ ಪರಿಸ್ಥತಿಯನ್ನು ಒಮ್ಮೆ ನೋಡಿ. ಮೊದಲೆ ಗಡಿ ಭಾಗದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳು ಇಲ್ಲದೆ ಮುಚ್ಚುತ್ತಿವೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯ ಕಾರ್ಯಕರ್ತರು ಹೋರಾಟಗಳನ್ನು ಮಾಡಿದರು ಯಾವ ಒಬ್ಬ ಅಧಿಕಾರಿಗಳು ಕ್ಯಾರೆ ಎನ್ನದೆ ಇರುವುದು ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಮಾಡುತ್ತಿರುವ ಬಹು ದೊಡ್ಡ ದ್ರೋಹವಾಗಿದೆ ಎಂದು ವಿಭಾಗೀಯ ಸಂಚಾಲಕ ರೇವಣಸಿದ್ದಾ ಹೇಳಿದರು.

    ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಸಚಿವರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ವಿದ್ಯಾರ್ಥಿನಿಯರಿಗೆ ಕಾಲೇಜು ಆವರಣದಲ್ಲಿ ಎರಡು ಶೌಚಾಲಯವನ್ನು ಕಟ್ಟಿಸಿ ಬಡ ವಿದ್ಯಾರ್ಥಿಗಳು ಕಾಲೇಜು ಬಿಟ್ಟು ಹೋಗದಂತೆ ಮಾಡಬೇಕಾಗಿ ವಿನಂತಿ.