Tag: bidar

  • ಶಾಲೆಯಲ್ಲಿಯೇ ಶಿಕ್ಷಕಿಯೊಂದಿಗೆ ಸಂಸ್ಥೆಯ ಅಧ್ಯಕ್ಷನ ಲವ್ವಿ-ಡವ್ವಿ-ಸಿಸಿಟಿವಿಯಲ್ಲಿ ಸೆರೆಯಾಯ್ತು ರೊಮ್ಯಾನ್ಸ್

    ಶಾಲೆಯಲ್ಲಿಯೇ ಶಿಕ್ಷಕಿಯೊಂದಿಗೆ ಸಂಸ್ಥೆಯ ಅಧ್ಯಕ್ಷನ ಲವ್ವಿ-ಡವ್ವಿ-ಸಿಸಿಟಿವಿಯಲ್ಲಿ ಸೆರೆಯಾಯ್ತು ರೊಮ್ಯಾನ್ಸ್

    ಬೀದರ್: ಶಾಲಾ ಶಿಕ್ಷಕಿಯೊಂದಿಗೆ ಸಂಸ್ಥೆಯ ಅಧ್ಯಕ್ಷನೋರ್ವ ಶಾಲಾ ಕಟ್ಟಡದಲ್ಲಿಯೇ ಲವ್ವಿ-ಡವ್ವಿ ನಡೆಸಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ.

    ಶಿಕ್ಷಕಿ ಮತ್ತು ಸಂಸ್ಥೆಯ ಅಧ್ಯಕ್ಷರ ರೊಮ್ಯಾನ್ಸ್ ಶಾಲಾ ಕಟ್ಟಡದಲ್ಲಿ ಅಳವಡಿಸಿದ್ದ ಸಿಸಿಟಿವಿ ಯಲ್ಲಿ ಸೆರೆಯಾಗಿವೆ. ಈ ವಿಡಿಯೋವನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಹರಿದಾಡುತ್ತಿದ್ದು, ಶಾಲಾ ಆವರಣದಲ್ಲಿ ಶಿಕ್ಷಕಿ ಮತ್ತು ಸಂಸ್ಥೆಯ ಅಧ್ಯಕ್ಷನ ವರ್ತನೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವಿಡಿಯೋ ಯಾವ ಶಾಲೆಯದು ಎಂಬುವುದು ಮಾತ್ರ ರಿವೀಲ್ ಆಗಿಲ್ಲ. ಆದ್ರೆ ಇದು ಸ್ಥಳೀಯ ವಿಡಿಯೋ ಆಗಿದೆ ಎಂದು ಹೇಳಲಾಗಿದೆ.

  • ಕಾಲು ಕಳೆದುಕೊಂಡ್ರು ಸ್ವಾಭಿಮಾನ ಜೀವನ ನಡೆಸುತ್ತಿದ್ದ ವ್ಯಕ್ತಿಗೆ ಸರ್ಕಾರಿ ಅಧಿಕಾರಿಗಳೇ ಶತ್ರುಗಳಾದ್ರು!

    ಕಾಲು ಕಳೆದುಕೊಂಡ್ರು ಸ್ವಾಭಿಮಾನ ಜೀವನ ನಡೆಸುತ್ತಿದ್ದ ವ್ಯಕ್ತಿಗೆ ಸರ್ಕಾರಿ ಅಧಿಕಾರಿಗಳೇ ಶತ್ರುಗಳಾದ್ರು!

    ಬೀದರ್: ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡ್ರು ಸ್ವಾಭಿಮಾನದ ಜೀವನ ನಡೆಸುತ್ತಿದ್ದ ವಿಕಲಚೇತನನಿಗೆ ಸರ್ಕಾರಿ ಅಧಿಕಾರಿಗಳೇ ಶತ್ರುಗಳಾಗಿದ್ದಾರೆ.

    ಬೀದರ್ ತಾಲೂಕಿನ ಅಯಾಸಪೂರ್ ಗ್ರಾಮ ನಿವಾಸಿ ನಾಗಪ್ಪ ಎಂಬವರು 20 ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ಆದ್ರೆ ಕಾಲು ಕಳೆದುಕೊಂಡರೂ ಕುಗ್ಗದ ನಾಗಪ್ಪ ನಗರದ ನೆಹರು ಕ್ರೀಡಾಂಗಣದ ಸರ್ಕಾರಿ ಮಳಿಗೆಯಲ್ಲಿ ಹೋಟೆಲ್ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇದೇ ಹಣದಿಂದ ಇಬ್ಬರು ಮಕ್ಕಳು ಸೇರಿದಂತೆ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುತ್ತಾ ಜೀವನ ಸಾಗಿಸುತ್ತಿದ್ದರು.

    ಒಂದು ವರ್ಷದ ಹಿಂದೆ ಸರ್ಕಾರಿ ಅಧಿಕಾರಿಗಳು ಸ್ಟೇಡಿಯಂ ನವೀಕರಣ ಹೆಸರಿನಲ್ಲಿ ಮಳಿಗೆಯನ್ನ ಖಾಲಿ ಮಾಡಿಸಿ ಕುಟುಂಬವನ್ನು ಬೀದಿ ಪಾಲು ಮಾಡಿದ್ದಾರೆ. ಕಾಲು ಕಳೆದುಕೊಂಡಿದ್ದರೂ ಸ್ವಾಭಿಮಾನದಿಂದ ಕಷ್ಟ ಪಟ್ಟು ದುಡಿಯುತ್ತಿದ್ದ ವಿಕಲಚೇತನ ನಾಗಪ್ಪ ಅಕ್ಷರಶಃ ದಿಕ್ಕು ದೋಚದೇ ಕಂಗಲಾಗಿದ್ದಾರೆ. ಪತ್ನಿ ಕೂಲಿ ಕೆಲಸ ಮಾಡಿಕೊಂಡು ಪ್ರತಿದಿನ ಬಿಡಿಗಾಸು ಸಂಪಾದನೆ ಮಾಡಿ ಕುಟುಂಬಕ್ಕೆ ಆಸರೆಯಾಗುತ್ತಿದ್ದಾರೆ. ಆದರೆ ಕೂಲಿ ಕೆಲಸ ಇಲ್ಲದಿದ್ದರೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸ್ಥಿತಿಯಲ್ಲಿದ್ದಾರೆ.

    ಯಾರಾದ್ರೂ ದಾನಿಗಳು ಒಂದು ಪುಟ್ಟ ಟೀ ಅಂಗಡಿಯನ್ನು ಹಾಕಿಕೊಟ್ಟರೆ ಜೀವನವನ್ನು ನಡೆಸುತ್ತೇನೆ ಅಂತಾ ನಾಗಪ್ಪ ಹೇಳ್ತಾರೆ.

    https://youtu.be/19–4_B2QHk

  • ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ- ಮೂವರ ದುರ್ಮರಣ

    ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ- ಮೂವರ ದುರ್ಮರಣ

    ಬೀದರ್: ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೌಡಿಯಾಳ ಗ್ರಾಮದ ಬಳಿ ನಡೆದಿದೆ.

    ಯರಂಡಗಿ ಗ್ರಾಮದ ನಿವಾಸಿಗಳಾದ ಇಸ್ಮಾಯಿಲ್ ಜಾಧವ್(48), ಯಲ್ಲಪ್ಪ ನಿಲೆ(34) ಹಾಗೂ ಸುಭಾಶ್ ಗುಂಡೆ(38) ಘಟನೆಯಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ಚರಂಡಿಗೆ ಗ್ರಾಮದಿಂದ ಹುಮ್ನಾಬಾದ್ ಗೆ ತೆರಳುವ ಮಾರ್ಗ ಮಧ್ಯೆ ಈ ಘಟನೆ ಸಂಭವಿಸಿದೆ.

    ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಪಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಬೀದರ್ ಡಿಸಿ

    ಅಪಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಬೀದರ್ ಡಿಸಿ

    ಬೀದರ್: ಅಫಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಜಿಲ್ಲಾಧಿಕಾರಿ ತಮ್ಮ ಕಾರಿನಲ್ಲಿ ಜಿಲ್ಲಾಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ಬೀದರ್ ತಾಲೂಕಿನ ಅಮಿಲಾಪೂರ್ ಗ್ರಾಮದ ಬಳಿ ನಡೆದಿದೆ.

    ಶಿವಕುಮಾರ್ (40) ಟ್ರ್ಯಾಕ್ಟರ್ ಡಿಕ್ಕಿಯಾಗಿ ಬಿದ್ದು ರಸ್ತೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಡಿಸಿ ಎಚ್.ಆರ್ ಮಹದೇವ ಆಂಬುಲೆನ್ಸ್ ಗೆ ಕರೆ ಮಾಡಿದ್ರು. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ನಂತರ ತಮ್ಮ ಕಾರಿನಲ್ಲಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದ್ರೆ ಸಿಬ್ಬಂದಿಗಳು ರೋಗಿಯನ್ನು ಕರೆದುಕೊಂಡು ಹೋಗಲು ಸ್ಟ್ರೆಚರ್ ನೀಡಲಿಲ್ಲ. ಈ ವೇಳೆ ಆಸ್ಪತ್ರೆಯ ಸಿಬ್ಬಂದಿಗಳನ್ನು ಡಿಸಿ ತರಾಟೆ ತೆಗೆದುಕೊಂಡಿದ್ದಾರೆ. ಜಿಲ್ಲಾಧಿಕಾರಿ ತರಾಟೆಯ ಬಳಿಕ ಚಿಕಿತ್ಸೆ ನೀಡಿ ವ್ಯಕ್ತಿಯನ್ನು ಪ್ರಾಣ ಅಪಾಯದಿಂದ ಪಾರು ಮಾಡಲಾಗಿದೆ.

    ಒಟ್ಟಿನಲ್ಲಿ ಸರಿಯಾದ ಸಮಯಕ್ಕೆ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದ ಜಿಲ್ಲಾಧಿಕಾರಿಗೆ ಜಿಲ್ಲೆಯ ಜನರು ಸಲಾಂ ಹಾಕುತ್ತಿದ್ದಾರೆ.

  • ಬೆಂಗಳೂರಿಗೆ ನೈಸ್ ರಸ್ತೆ, ಸ್ವಕ್ಷೇತ್ರಕ್ಕೆ ಕಳಪೆ ರಸ್ತೆ – ಖೇಣಿ ಕ್ಷೇತ್ರದಲ್ಲಿ 40 ದಿನಕ್ಕೆ ರೋಡ್ ಮಾಯ!

    ಬೆಂಗಳೂರಿಗೆ ನೈಸ್ ರಸ್ತೆ, ಸ್ವಕ್ಷೇತ್ರಕ್ಕೆ ಕಳಪೆ ರಸ್ತೆ – ಖೇಣಿ ಕ್ಷೇತ್ರದಲ್ಲಿ 40 ದಿನಕ್ಕೆ ರೋಡ್ ಮಾಯ!

    ಬೀದರ್: 2013ರ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರವನ್ನು ಸಿಂಗಾಪೂರ ಮಾಡುತ್ತೇನೆ ಎಂದು ಕ್ಷೇತ್ರದ ಜನರಿಗೆ ಭರವಸೆ ನೀಡಿದ್ದ ಶಾಸಕ ಅಶೋಕ್ ಖೇಣಿಯವರ ಮೊತ್ತೊಂದು ಕಳಪೆ ಕಾಮಗಾರಿಯ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಬರುವ ನಿರ್ಣಾ ಗ್ರಾಮದಲ್ಲಿ ಕಳೆದ 40 ದಿನಗಳ ಹಿಂದೆ, 1 ಕೋಟಿ ರೂ. ಬಜೆಟ್‍ನಲ್ಲಿ ಮಾಡಿದ್ದ ಸಿಸಿ ರೋಡ್ ಇಂದು ಕಾಣದಂತೆ ಮಾಯವಾಗಿದೆ. ರಸ್ತೆಯಲ್ಲಿ ಹಾಕಿದ್ದ ಟಾರು ಕಿತ್ತುಹೋಗಿದ್ದು, ಮಣ್ಣಿನ ರಸ್ತೆಯನ್ನು ನಿರ್ಮಾಣ ಮಾಡಿದ್ದಾರೆ.

    ನಿರ್ಣಾ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದ್ದು, ಈ ರೀತಿ ಮಾಡಿದ್ದರಿಂದ ಗ್ರಾಮಸ್ಥರು ಖೇಣಿ ವಿರುದ್ಧ ಗರಂ ಆಗಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವಾಗಿರುವ ಖೇಣಿ ಸಾಹೇಬ್ರು ಅಭಿವೃದ್ಧಿಯ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಕ್ಷೇತ್ರದ ಸಿಸಿ ರೋಡ್ ಮಾಡೋಕೆ ಆಗುತ್ತಿಲ್ಲ. ಇನ್ನು ಕ್ಷೇತ್ರವನ್ನು ಸಿಂಗಾಪೂರ ಎಲ್ಲಿ ಮಾಡ್ತಾರೆ..? ಇಂಥಾ ಶಾಸಕರನ್ನು ನಮ್ಮ ಜೀವನದಲ್ಲಿ ಹಿಂದೆಯೂ ನೋಡಿಲ್ಲ, ಮುಂದೆನು ನೋಡಲ್ಲ..? ಖೇಣಿ ದಕ್ಷಿಣ ಕ್ಷೇತ್ರದಲ್ಲಿ ನಿಲ್ಲೋಕೆ ಅಸಮರ್ಥರು ಎಂದು ದಕ್ಷಿಣ ಕ್ಷೇತ್ರದ ಮತದಾರ ಪ್ರಭುಗಳು ಖೇಣಿಯವರ ಕಳಪೆ ಕಾಮಗಾರಿಗೆ ಗರಂ ಆಗಿದ್ದಾರೆ.

  • ಬೀದರ್ ನಲ್ಲಿ ಮತದಾರರನ್ನು ಸೆಳೆಯಲು ಗಡಿಯಾರ ಹಂಚಿಕೆ

    ಬೀದರ್ ನಲ್ಲಿ ಮತದಾರರನ್ನು ಸೆಳೆಯಲು ಗಡಿಯಾರ ಹಂಚಿಕೆ

    ಬೀದರ್: ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಸೆಳೆಯಲು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಗಡಿಯಾರಗಳನ್ನ ಹಂಚುತ್ತಿರುವುದು ಬಯಲಿಗೆ ಬಂದಿದೆ.

    ಸರ್ಕಾರದ ದುಡ್ಡಿನಲ್ಲಿ ಭಾಲ್ಕಿ ಕ್ಷೇತ್ರದ ಮತದಾರ ಪ್ರಭುಗಳಿಗೆ ತಮ್ಮ ಭಾವಚಿತ್ರವಿರುವ ಗಡಿಯಾರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಂಚುತ್ತಿದ್ದಾರೆ. 200 ರಿಂದ 300 ರೂ. ಬೆಲೆ ಬಾಳುವ ಗಡಿಯಾರವನ್ನು ಸರ್ಕಾರದ ಹೆಸರಿನಲ್ಲಿ ಈಶ್ವರ ಖಂಡ್ರೆ ಹಂಚಿಕೆ ಮಾಡುತ್ತಿದ್ದಾರೆ.

    ನಿಟ್ಟೂರು, ಖಟಕ್ ಚಿಂಚೊಳಿ, ಮೇಕರ ಹಾಗೂ ಸಾಯಿಗಾಂವ ಗ್ರಾಮಗಳು ಸೇರಿದಂತೆ ಕ್ಷೇತ್ರದ ಮನೆ ಮನೆಗಳಿಗೆ ಸರ್ಕಾರದ ಗಡಿಯಾರಗಳನ್ನು ನೀಡುತ್ತಿದ್ದಾರೆ.

    ಮತದಾರರನ್ನು ಸೆಳೆಯಲು ಜಿಲ್ಲಾ ಉಸ್ತುವಾರಿ ಸಚಿವರು ಹಲವು ದಿನಗಳಿಂದ ಗಡಿಯಾರಗಳನ್ನು ಗಿಫ್ಟ್ ನೀಡುತ್ತಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಜೋರಾಗಿ ಕೇಳಿ ಬರುತ್ತಿದೆ.

  • ನಿದ್ರೆ ಮಾತ್ರೆ ಸೇವಿಸಿ MBBS ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

    ನಿದ್ರೆ ಮಾತ್ರೆ ಸೇವಿಸಿ MBBS ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

    ಬೀದರ್: ನಿದ್ರೆ ಮಾತ್ರೆ ಸೇವಿಸಿ ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ವೈದ್ಯಕೀಯ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ನಡೆದಿದೆ.

    ಉಮಾದೇವಿ ಆತ್ನಹತ್ಯೆ ಮಾಡಿಕೊಂಡ ಎಂಬಿಬಿಎಸ್ ವಿದ್ಯಾರ್ಥಿನಿ. ಬೀದರ್ ತಾಲೂಕಿನ ಚಿಟ್ಟವಾಡಿ ಗ್ರಾಮದ ನಿವಾಸಿಯಾಗಿದ್ದ ಉಮಾದೇವಿ ಬೀದರ್ ನ ವೈದ್ಯಕೀಯ ಮೆಡಿಕಲ್ ಕಾಲೇಜಿನಲ್ಲಿ 3 ಸೇಮಿಸ್ಟರ್  ಓದುತ್ತಿದ್ದಳು. ಆದರೆ ರಾತ್ರಿ ಹಾಸ್ಟೆಲ್‍ನಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಉಮಾದೇವಿ ರಾತ್ರಿ ಊಟ ಮಾಡಿ ಮಲಗಿದ್ದು, ತಡರಾತ್ರಿ ಎದ್ದು ಸ್ನೇಹಿತರಿಗೆ ತಿಳಿಯದಂತೆ ನಿದ್ರೆ ಮಾತ್ರೆ ಸೇವಿಸಿ ಮತ್ತೆ ಮಲಗಿಕೊಂಡಿದ್ದಾಳೆ. ಮುಂಜಾನೆ ಸ್ನೇಹಿತರು ಎಬ್ಬಿಸಲು ಹೋದಾಗ ಉಮಾದೇವಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಪರೀಕ್ಷೆ ಮಾಡಿ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.

    ಎಂಬಿಬಿಎಸ್ ನ 2ನೇ ಸೆಮಿಸ್ಟರ್ ಫಲಿತಾಂಶ ಬಂದಿದ್ದು, ಅದರಲ್ಲಿ ಉಮಾದೇವಿ ಫೇಲ್ ಆಗಿದ್ದಳು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಇತ್ತ ಆಸ್ಪತ್ರೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ನಕ್ಸಲ್ ದಮನಕ್ಕೆ ಬೀದರ್ ನ ಪೊಲೀಸ್ ಹುತಾತ್ಮ – ಸರ್ಕಾರ ಗೌರವದೊಂದಿಗೆ ಅಂತ್ಯಕ್ರಿಯೆ

    ನಕ್ಸಲ್ ದಮನಕ್ಕೆ ಬೀದರ್ ನ ಪೊಲೀಸ್ ಹುತಾತ್ಮ – ಸರ್ಕಾರ ಗೌರವದೊಂದಿಗೆ ಅಂತ್ಯಕ್ರಿಯೆ

    ಬೀದರ್: ನಕ್ಸಲ್ ನಿಗ್ರಹ ಪಡೆಯ ಹೆಡ್ ಕಾನ್ ಸ್ಟೇಬಲ್ ಬೀದರ್ ಮೂಲದ ಬಿ.ಸುಶೀಲ್‍ಕುಮಾರ್ ಅವರ ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಸ್ವಗ್ರಾಮ ಮಂಗಲಪೇಟೆಯಲ್ಲಿರುವ ಮೇಥೋಡಿಯಸ್ ಚರ್ಚ್ ಬಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

    ಶುಕ್ರವಾರ ತಡರಾತ್ರಿ ತೆಲಂಗಾಣ-ಛತ್ತೀಸ್‍ಗಢ ಗಡಿಯಲ್ಲಿ ನಕ್ಸಲ್ ಕಾರ್ಯಾಚರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಾವೋ ನಕ್ಸಲ್ ದಮನದಲ್ಲಿ ಬೀದರ್‍ನ ಮೂಲದ ಪೊಲೀಸ್ ಪೇದೆ ಬಿ ಸುಶೀಲ್‍ಕುಮಾರ್ ಹುತಾತ್ಮನಾಗಿದ್ದರು. ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಬಿ. ಸುಶೀಲ್‍ಕುಮಾರ್ ಪಾರ್ಥಿವ ಶರೀರ ವಿಶೇಷ ಆಂಬುಲೆನ್ಸ್ ಮೂಲಕ ಬೀದರ್ ನಗರದ ಗ್ರೇಸ್ ಕಾಲೋನಿಯ ನಿವಾಸಕ್ಕೆ ಬಂದು ತಲುಪಿತ್ತು.

    ಹುತಾತ್ಮನ ಪಾರ್ಥಿವ ಶರೀರ ನಿವಾಸಕ್ಕೆ ಆಗಮಿಸುತ್ತಿದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು ಇಂದು ಬೀದರ್‍ನ ಮಂಗಲಪೇಟೆಯಲ್ಲಿರುವ ಮೇಥೋಡಿಯಸ್ ಚರ್ಚ್ ಬಳಿಯಲ್ಲಿ ಅಂತ್ಯಕ್ರಿಯೆ ನಡೆದಿದೆ. ಅಂತ್ಯಕ್ರಿಯೆಗೆ ತೆಲಂಗಾಣ ಡಿಜಿಪಿ ಮಹೇಂದ್ರಕುಮಾರ್ ರೆಡ್ಡಿ ಬಂದು ಗೌರವ ಸಲ್ಲಿಸಿದ್ದಾರೆ.

    ರಾಜ್ಯ ಹಾಗೂ ತೆಲಂಗಾಣ ಪೊಲೀಸ್ ರಿಂದ ಜಂಟಿ ಸಕಲ ಸರ್ಕಾರಿ ಗೌರವದೊಂದಿದೆ ಅಂತ್ಯಕ್ರಿಯೆ ನಡೆದಿದೆ. ಸಂಬಂಧಿಕರು ಹಾಗೂ ಪೊಲೀಸ್ ಬಾಂಧವರು ಭಾಗಿಯಾಗಿದ್ದರು.

    ಬಿ.ಸುಶೀಲ್‍ಕುಮಾರ್ ತೆಲಂಗಾಣದ ಹೈದರಾವಾದ್ ನ ಗ್ರೇಹಹುಣ್ಸ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಕಾರ್ಯಾಚರಣೆಯಲ್ಲಿ 10 ಜನ ನಕ್ಸಲರನ್ನು ಹತ್ಯೆ ಮಾಡಲಾಗಿದೆ.

  • ಉದ್ಯೋಗ ಸೃಷ್ಟಿ ಬಗ್ಗೆ ಏನ್ ಮಾಡಿದ್ದೀರಿ- ಸಂವಾದ ಕಾರ್ಯಕ್ರಮದಲ್ಲಿ ಅಮಿತ್ ಶಾಗೆ ರೈತ ಪ್ರಶ್ನೆ

    ಉದ್ಯೋಗ ಸೃಷ್ಟಿ ಬಗ್ಗೆ ಏನ್ ಮಾಡಿದ್ದೀರಿ- ಸಂವಾದ ಕಾರ್ಯಕ್ರಮದಲ್ಲಿ ಅಮಿತ್ ಶಾಗೆ ರೈತ ಪ್ರಶ್ನೆ

    ಬೀದರ್: ಚುನಾವಣಾ ಚಾಣಕ್ಯ ಎಂದೇ ಖ್ಯಾತಿ ಹೊಂದಿರುವ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ರೈತರೊಬ್ಬರು ಪ್ರಶ್ನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

    ಕಾಂಗ್ರೆಸ್ ನ ಭದ್ರಕೋಟೆ ಎಂದು ಕರೆಯಲ್ಪಡುವ ಹುಮ್ನಾಬಾದ್ ಗೆ ಭಾನುವಾರ ತೆರಳಿ ಪ್ರಸಿದ್ಧ ವಿರಭದ್ರೇಶ್ವರ್ ದೇವರ ದರ್ಶನ ಪಡೆದ ಶಾ, ಬಳಿಕ ಆವರಣದಲ್ಲಿ ಆಯೋಜನೆ ಮಾಡಿದ್ದ ಕಬ್ಬು ಬೆಳೆಗಾರರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ರೈತರ ಪ್ರಶ್ನೆಗಳಿಗೆ ಉತ್ತರ ನೀಡಿದರು.

    ಈ ವೇಳೆ ಉದ್ಯೋಗ ಸೃಷ್ಟಿ ಬಗ್ಗೆ ಏನ್ ಮಾಡಿದ್ದೀರಿ ಅಂತ ರೈತರೊಬ್ಬರು ಅಮಿತ್ ಶಾ ಅವರಿಗೆ ನೇರ ಪ್ರಶ್ನೆ ಹಾಕಿದ್ದಾರೆ. ಪ್ರಶ್ನೆ ಕೇಳುತ್ತಿದ್ದಂತೆ ರೈತನ ಕೈಯಲ್ಲಿದ್ದ ಮೈಕ್ ನ್ನು ಬಿಜೆಪಿ ಮುಖಂಡ ಕಿತ್ತುಕೊಂಡಿದ್ದಾರೆ. ರೈತನ ಕೈಯಿಂದ ಮೈಕ್ ಕಿತ್ಕೊಂಡ ಬೆನ್ನಲ್ಲೇ ಅಮಿತ್ ಶಾ ಸಂವಾದ ಕಾರ್ಯಕ್ರಮದಲ್ಲಿ ಗದ್ದಲವೇ ಉಂಟಾಯಿತು.

    ಈ ಸಂದರ್ಭ ಅಮಿತ್ ಶಾ ಅವರು, ಹೀಗೆಲ್ಲಾ ಮಾತಾಡ್ಬೇಡಿ, ಎಲ್ಲರೂ ದಯವಿಟ್ಟು ಕುಳಿತುಕೊಳ್ಳಿ ಎಂದು ವಿನಂತಿಸಿಕೊಂಡ್ರು. ಪರಿಸ್ಥಿತಿ ತಿಳಿಗೊಳಿಸಲು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಹೈರಾಣರಾಗಿದ್ರು ಎನ್ನುವ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಬಳಿಕ ಭಾಷಣ ಮಾಡಿದ ಅಮಿತ್ ಶಾ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ರು. ರಾಹುಲ್ ಉದ್ಯಮಿಗಳ ಸಾಲವನ್ನು ಮೋದಿ ಸರ್ಕಾರ ಮನ್ನಾ ಮಾಡಿದೆ ಎಂದು ಆರೋಪ ಮಾಡುತ್ತಿದ್ದಾರೆ. ಹಾಗೇನಾದ್ರು ದಾಖಲೆಗಳು ಇದ್ರೆ ಪ್ರೂವ್ ಮಾಡಲಿ. ನಾನು ರೈತರ ಮುಂದೆ ತಲೆ ಬಾಗುತ್ತೆನೆ ಎಂದು ವಾಗ್ದಾಳಿ ನಡೆಸಿದ್ರು. 2018ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ್ರೆ, 90 ದಿನಗಳಲ್ಲಿ ಕಬ್ಬಿನ ಬಾಕಿ ಹಣ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ರು.

    ಬೀದರ್ ನಗರದ ಸಿಖ್ಖರ ಪವಿತ್ರ ದೇವಸ್ಥಾನಕ್ಕೆ ಅಮಿತ್ ಶಾ ಹಾಗೂ ಪತ್ನಿ ಭೇಟಿ ನೀಡಿ ಗುರುನಾನಕರ ದರ್ಶನ ಪಡೆದ ಸಿಖ್ ಧರ್ಮಿಯರ ಮನಸ್ಸು ಗೆಲುವ ಯತ್ನ ಮಾಡಿದ್ರು. ನಂತರ ಮನ್ನಾಏಖೇಳ್ಳಿಯಲ್ಲಿರುವ ಬೌದ್ಧ ವಿಹಾರಕ್ಕೆ ಭೇಟಿ ನೀಡಿದ್ರು. ಇದೇ ವೇಳೆ ಇನ್ನು ಒಂದೇ ಗ್ರಾಮದಲ್ಲಿ ಮೂರು ಜನ ರೈತರು ಅತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಈ ವೇಳೆ ಚಂದ್ರಪ್ಪ ಧನ್ನಕರ್ ರೈತನ ಪತ್ನಿ ಭಾಗಮ್ಮ ಶಾ ಮುಂದೆ ಕಣ್ಣೀರು ಹಾಕಿದ ಪ್ರಸಂಗ ಕೂಡಾ ನಡೆಯಿತು.

    ಸಂಸದ ಭಗವಂತ್ ಖೂಬಾ, ಶಾಸಕ ಪ್ರಭು ಚವ್ಹಾಣ್, ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪೂರೆ ಸೇರಿದಂತೆ ಪಕ್ಷದ ಕೆಲವು ಮುಖಂಡರು ಭಾಗಿಯಾಗಿದ್ದರು.

    https://twitter.com/KtakaCongress/status/967765129155698688

  • ಇಂದು ಬೀದರ್‍ಗೆ ಬಿಜೆಪಿ ಚಾಣಕ್ಯ- ಬಿಎಸ್‍ವೈ, ಈಶ್ವರಪ್ಪ ಜಗಳಕ್ಕೆ ಬ್ರೇಕ್ ಹಾಕಲು ಶಾ ಪ್ಲಾನ್

    ಇಂದು ಬೀದರ್‍ಗೆ ಬಿಜೆಪಿ ಚಾಣಕ್ಯ- ಬಿಎಸ್‍ವೈ, ಈಶ್ವರಪ್ಪ ಜಗಳಕ್ಕೆ ಬ್ರೇಕ್ ಹಾಕಲು ಶಾ ಪ್ಲಾನ್

    ಬೀದರ್: ಕರಾವಳಿ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹೈದ್ರಾಬಾದ್ ಕರ್ನಾಟಕದಲ್ಲಿ ನಾಳೆಯಿಂದ ಪ್ರವಾಸ ಕೈಗೊಳ್ಳಲಿದ್ದಾರೆ. ಅದಕ್ಕಾಗಿ ಇಂದು ರಾತ್ರಿ ಬೀದರ್‍ಗೆ ಆಗಮಿಸಲಿದ್ದಾರೆ.

    ಬೀದರ್ ನ ಹಬ್ಸಿಕೋಟೆ ಗೆಸ್ಟ್ ಹೌಸ್‍ನಲ್ಲಿ ಶಾ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಭಾನುವಾರ ಬೆಳಗ್ಗೆ ಬೀದರ್‍ನ ಐತಿಹಾಸಿಕ ಧಾರ್ಮಿಕ ತಾಣಗಳಾದ ನರಸಿಂಹ ಝರಣಾ, ಗುರುದ್ವಾರಾಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಹುಮನಾಬಾದ್‍ನ ಮಂಗಲಗಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಶಿವರಾಜ ಬಸವಲಿಂಗಪ್ಪ ಮನೆಗೆ ಭೇಟಿ ನೀಡಲಿದ್ದಾರೆ. ನಂತರ ರಾಹುಲ್ ಹೋಗಿದ್ದ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಜಗಳಕ್ಕೆ ಬ್ರೇಕ್: ರಾಜ್ಯ ಪ್ರವಾಸಕ್ಕೆ ಆಗಮಿಸುತ್ತಿರೋ ಶಾ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ನಾಯಕ ಈಶ್ವರಪ್ಪ ನಡುವಿನ ಕಾದಾಟಕ್ಕೆ ಬ್ರೇಕ್ ಹಾಕಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಏಪ್ರಿಲ್‍ನಲ್ಲಿ ಬಿಜೆಪಿ ಹೈಕಮಾಂಡ್ 150 ಕ್ಷೇತ್ರಗಳ ಮೊದಲ ಪಟ್ಟಿ ರಿಲೀಸ್ ಮಾಡಲಿದೆ. ಮೊದಲ ಪಟ್ಟಿಯಲ್ಲಿ ಶಿವಮೊಗ್ಗ, ಶಿಕಾರಿಪುರ ಟಿಕೆಟ್ ಘೋಷಣೆ ಮಾಡದಿರಲು ನಿರ್ಧಾರ ಮಾಡಲಾಗಿದೆ. ಎರಡನೇ ಹಂತದಲ್ಲಿ ಶಿವಮೊಗ್ಗ, ಶಿಕಾರಿಪುರ ಕ್ಷೇತ್ರದ ಟಿಕೆಟ್ ಘೋಷಣೆ ಮಾಡೋ ಸಾಧ್ಯತೆಗಳಿವೆ. ಶಿವಮೊಗ್ಗ ರಾಜಕೀಯ ಕಿತ್ತಾಟ ರಾಜ್ಯಕ್ಕೆ ವ್ಯಾಪಿಸೋದು ಬೇಡ ಎಂದು ತೀರ್ಮಾನ ಮಾಡಲಾಗಿದೆ ಎಂದು ಬಿಜೆಪಿ ಹೈಕಮಾಂಡ್ ಮೂಲಗಳು ಪಬ್ಲಿಕ್ ಟವಿಗೆ ಮಾಹಿತಿ ನೀಡಿವೆ.