Tag: bidar

  • ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಪಾಟೀಲ್ ವಿರುದ್ಧ ದೂರು ದಾಖಲು

    ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಪಾಟೀಲ್ ವಿರುದ್ಧ ದೂರು ದಾಖಲು

    ಬೀದರ್: ಹುಮನಾಬಾದ್‍ನ ಹಾಲಿ ಶಾಸಕ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಪಾಟೀಲ್ ವಿರುದ್ಧ ದೂರು ದಾಖಲಾಗಿದೆ.

    ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪದಡಿ ಎಫ್‍ಐಆರ್ ದಾಖಲಾಗಿದ್ದು, ಬಿಜೆಪಿ ಕಾರ್ಯಕರ್ತ ಶ್ರೀನಿವಾಸರೆಡ್ಡಿ, ಪಾಟೀಲ್ ವಿರುದ್ಧ ದೂರು ನೀಡಿದ್ದಾರೆ.

    ಇದೇ ತಿಂಗಳು 12 ರಂದು ಮತದಾನ ವೇಳೆ ಮತಗಟ್ಟೆ-94 ರಲ್ಲಿ ಶ್ರೀನಿವಾಸರೆಡ್ಡಿ ಬಿಜೆಪಿ ಏಜೆಂಟಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಪಾಟೀಲ್, ಶ್ರೀನಿವಾಸ ರೆಡ್ಡಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಈ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹನುಮಂತವಾಡಿಯಲ್ಲಿ ನಡೆದಿದ್ದು, ಸದ್ಯ ಪ್ರಕರಣ ಸಂಬಂಧ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕಾರ್, ಕಂಟೇನರ್ ಮುಖಾಮುಖಿ ಡಿಕ್ಕಿ- ಮೂವರು ಸಾವು!

    ಕಾರ್, ಕಂಟೇನರ್ ಮುಖಾಮುಖಿ ಡಿಕ್ಕಿ- ಮೂವರು ಸಾವು!

    ಬೀದರ್: ಕಾರು ಮತ್ತು ಕಂಟೇನರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಘಟನೆ ನಸುಕಿನ ಜಾವ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ಕೌಡಿಯಾಳ ಬಳಿ ಸಂಭವಿಸಿದೆ.

    ರಾಜೇಂದ್ರ ಶಿವಲಿಂಗಪ್ಪಾ ಚಿತಕೋಟೆ(52), ಶ್ರೀಧರ್ ಚಿತಕೋಟೆ(32) ಹಾಗೂ ಸಂತೋಷ್ ಕಾರಮೋರೆ (40) ಮತ ದುರ್ದೈವಿಗಳು. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹೊದಲೂರು ಗ್ರಾಮದವರು ಸಂಬಂಧಿಕರ ಮದುವೆಗೆಂದು ಮಹಾರಾಷ್ಟ್ರಕ್ಕೆ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರು ಓವರ್ ಟೆಕ್ ಮಾಡಿ ಮುಂದೆ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

    ಈ ಕುರಿತು ಬಸವಕಲ್ಯಾಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೈಸ್ ಅಶೋಕ್ ಖೇಣಿಗೆ ಐಟಿ ಶಾಕ್

    ನೈಸ್ ಅಶೋಕ್ ಖೇಣಿಗೆ ಐಟಿ ಶಾಕ್

    ಬೀದರ್: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಹಾಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಗೆ ಐಟಿ ಶಾಕ್ ನೀಡಿದೆ.

    ಅಭ್ಯರ್ಥಿ ಅಶೋಕ್ ಖೇಣಿಯ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ್ದಾರೆ. ಅಕ್ರಮ ಹಣ ಸಂಗ್ರಹ ದೂರು ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೀದರ್ ರಾಂಪೂರೆ ಕಾಲೋನಿಯಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ದಾಖಲೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

    ಖೇಣಿ ನಿವಾಸದ ಮೇಲೆ ಐಟಿ ದಾಳಿ ನಡೆಯುತ್ತಿದ್ದಾಗ ಖೇಣಿ ಬೆಂಬಲಿಗರು ಮಾಧ್ಯಮಗಳ ಮೇಲೆ ದರ್ಪ ತೋರಿದ್ದಾರೆ. ಬೆಂಬಲಿಗರು ಖೇಣಿ ವಿರುದ್ಧ ಸುದ್ದಿ ಮಾಡುತ್ತೀರಿ ಎಂದು ಅವಾಜ್ ಹಾಕಿ ದರ್ಪ ತೋರಿಸಿದ್ದಾರೆ.

     

  • ಬಿಜೆಪಿ ಪರ ಕೆಲ್ಸ ಮಾಡಿದ್ರೆ ಕೊಲೆ ಬೆದರಿಕೆ- ಕಾರ್ಯಕರ್ತನ ಮೇಲೆ ಜೆಡಿಎಸ್ ನವರಿಂದ ಹಲ್ಲೆ

    ಬಿಜೆಪಿ ಪರ ಕೆಲ್ಸ ಮಾಡಿದ್ರೆ ಕೊಲೆ ಬೆದರಿಕೆ- ಕಾರ್ಯಕರ್ತನ ಮೇಲೆ ಜೆಡಿಎಸ್ ನವರಿಂದ ಹಲ್ಲೆ

    ಬೀದರ್: ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ಮಾಡಿರುವ ಆರೋಪವೊಂದು ಕೇಳಿಬಂದಿದೆ.

    ಬಿಜೆಪಿ ಪರ ಕೆಲಸ ಮಾಡಿದ್ರೆ ಕೊಲೆ ಮಾಡುವುದಾಗಿ ಜೆಡಿಎಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

    ಭಾಲ್ಕಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಿಕೆ ಸಿದ್ರಾಮ್ ಬೆಂಬಲಿಗ ಭಾಲ್ಕಿ ವೈಜನಾಥಾ ಸಗಾರೆ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ. ತಡರಾತ್ರಿ ಮನೆಗೆ ಹೋಗುವಾಗ ಕೆಲ ಜೆಡಿಎಸ್ ಅಭ್ಯರ್ಥಿ ಬೆಂಬಲಿಗರು ಹಲ್ಲೆ ಮಾಡಿರುವುದಾಗಿ ಬಿಜೆಪಿ ಕಾರ್ಯಕರ್ತ ಆರೋಪಿಸಿದ್ದಾರೆ.

    ಜೆಡಿಎಸ್ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಬೆಂಬಲಿಗರು ಹಲ್ಲೆ ನಡೆಸಿರುವುದಾಗಿ ಆರೋಪ ವ್ಯಕ್ತವಾಗಿದ್ದು, ಈ ಸಂಬಂಧ ಭಾಲ್ಕಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ – 80 ಕೆಜಿ ಚಿಕನ್, 10 ಲಕ್ಷ ಹಣ ಜಪ್ತಿ

    ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ – 80 ಕೆಜಿ ಚಿಕನ್, 10 ಲಕ್ಷ ಹಣ ಜಪ್ತಿ

    ಬೀದರ್/ಚಿಕ್ಕಬಳ್ಳಾಪುರ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುನಾವಣಾ ಅಧಿಕಾರಿಗಳ ಕಾರ್ಯಾಚರಣೆ ಭರ್ಜರಿಯಾಗಿ ನಡೆಯುತ್ತಿದ್ದು, ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಹಣ ಮತ್ತು ಚಿಕನ್ ನನ್ನು ವಶಪಡಿಸಿಕೊಂಡಿದ್ದಾರೆ.

    ಬೀದರ್ ನ ಗಾಂಧಿಗಂಜನ್ ನಲ್ಲಿ ಮತದಾರರಿಗೆ ಹಂಚುತ್ತಿದ್ದ ಬರೋಬ್ಬರಿ 10 ಲಕ್ಷ 50 ಸಾವಿರ ಹಣವನ್ನು ಚುನಾವಣಾ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಗಾಂಧಿಗಂಜ್ ಪೊಲೀಸರು ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಹಿಡಿದಿದ್ದು, ಒಬ್ಬ ಆರೋಪಿಯಾದ ಅಬ್ದುಲ್ ಸಮ್ಮದ್ ನನ್ನು ಬಂಧಿಸಿದ್ದಾರೆ. ಆದರೆ ಒಬ್ಬ ಆರೋಪಿ ಪರಾರಿಯಾಗಿದ್ದಾರೆ.

    ಜಪ್ತಿಯಾದ ಹಣ ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್‍ ಗೆ ಸೇರಿದ್ದು ಎನ್ನಲಾಗಿದೆ. ಈ ಘಟನೆ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಇನ್ನು ಚಿಕ್ಕಬಳ್ಳಾಪುರದಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಚಿಕನ್ ನನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚಿಂತಾಮಣಿ ತಾಲೂಕು ಜೀಡರಹಳ್ಳಿ ಗ್ರಾಮದ ಬಳಿ ಮಾರುತಿ ಓಮ್ನಿ ಕೆಎ-40 ಎಂ-4588 ಕಾರಿನಲ್ಲಿ ಚಿಕನ್ ಸಾಗಾಟ ಮಾಡುತ್ತಿದ್ದರು.

    ಈ ವೇಳೆ ಚುನಾವಣಾಧಿಕಾರಿಗಳು ಖಚಿತ ಮಾಹಿತಿ ತಿಳಿದು ದಾಳಿ ನಡೆಸಿದ್ದಾರೆ. ಆಗ ತಲಾ ಒಂದು ಕೆಜಿಯ 80 ಕೆಜಿ ಚಿಕನ್ ಪಾಕೆಟ್ ಪತ್ತೆಯಾಗಿದ್ದು, ಅಧಿಕಾರಿಗಳು ಕಾರು ಸಮೇತ ಚಿಕನ್ ಜಪ್ತಿ ಮಾಡಿದ್ದಾರೆ. ದಾಳಿಯ ವೇಳೆ ಚಾಲಕ ಹಾಗೂ ಮತ್ತೋರ್ವ ಕಾರು ಬಿಟ್ಟು ಪರಾರಿಯಾಗಿದ್ದಾರೆ.

  • ಪ್ರಚಾರಕ್ಕಾಗಿ ಬಾಚಣಿಕೆ, ಕತ್ತರಿ ಹಿಡಿದ ಕಾಂಗ್ರೆಸ್ ಅಭ್ಯರ್ಥಿ

    ಪ್ರಚಾರಕ್ಕಾಗಿ ಬಾಚಣಿಕೆ, ಕತ್ತರಿ ಹಿಡಿದ ಕಾಂಗ್ರೆಸ್ ಅಭ್ಯರ್ಥಿ

    ಬೀದರ್: ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಅವರು ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತದಾರರನ್ನು ಸೆಳೆಯಲು ವಿಚಿತ್ರ ವರಸೆ ಸುರು ಮಾಡಿದ್ದಾರೆ.

    ನೈಸ್ ಖ್ಯಾತಿಯ ಅಶೋಕ್ ಖೇಣಿ ಬೀದರ್ ದಕ್ಷಿಣ ಕ್ಷೇತ್ರದ ಅಣದೂರು ಗ್ರಾಮದಲ್ಲಿ ಗುರುವಾರ ಮತಯಾಚನೆ ಮಾಡುವ ವೇಳೆ, ಸೆಲೂನ್ ಅಂಗಡಿಯಲ್ಲಿ ಕ್ಷೌರ ಮಾಡುವ ಮೂಲಕ ಮೊತ್ತೊಮ್ಮೆ ಮತದಾರರನ್ನು ಸೆಳೆಯುವ ನಾಟಕ ಮಾಡಿದ್ದಾರೆ. ಇದನ್ನೂ ಓದಿ: ಮತ ಕೇಳಲು ಹೋದ ಶಾಸಕ ಅಶೋಕ್ ಖೇಣಿಗೆ ಬೆವರಿಳಿಸಿದ ಬೀದರ್ ಮತದಾರರು!

    ಬಾಚಣಿಕೆ, ಕತ್ತರಿ ಹಿಡಿಯುವ ಮೂಲಕ ಸವಿತ ಸಮಾಜದ ಮತಗಳ ಬೇಟೆಗಾಗಿ ವಿಚಿತ್ರ ಗಿಮಿಕ್ ಮಾಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಮದುವೆ, ಮುಂಜಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನರನ್ನು ಮೊತ್ತೊಮ್ಮೆ ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ರೋಸಿ ಹೋಗಿರುವ ಮತದಾರ ಪ್ರಭು ಕಿಡಿ ಕಾರಿದ್ದಾರೆ.

    ಕಳೆದ ಬಾರಿ ಚುನಾವಣೆಯಲ್ಲಿ ಬೀದರ್ ದಕ್ಷಿಣವನ್ನು ಮಿನಿ ಸಿಂಗಾಪೂರ್ ಮಾಡುವುದಾಗಿ ಕಲರ್ ಕಲರ್ ಕಾಗೆ ಹಾರಿಸಿದ್ದರು. ನಂತರ ಗೆದ್ದು ಐದು ವರ್ಷ ಕಣ್ಮರೆಯಾಗಿದ್ದ ಖೇಣಿ ಈಗ ಮತ್ತೆ ಬಂದಿರುವುದರಿಂದ ಅವರ ವಿರುದ್ಧ ಕ್ಷೇತ್ರದ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

  • ಪ್ರಧಾನಿ ಮೋದಿಗೆ 3 ಸವಾಲೆಸೆದ ರಾಹುಲ್ ಗಾಂಧಿ!

    ಪ್ರಧಾನಿ ಮೋದಿಗೆ 3 ಸವಾಲೆಸೆದ ರಾಹುಲ್ ಗಾಂಧಿ!

    ಬೀದರ್: ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು 15 ನಿಮಿಷ ಯಾವುದೇ ನೋಟ್ಸ್ ಸಹಾಯವಿಲ್ಲದೇ ಮಾತನಾಡುವಂತೆ ಸವಾಲು ಎಸೆದಿದ್ದ ಪ್ರಧಾನಿ ನರೇಂದ್ರ ಮೋದಿಗೆ ಮೂರು ಪ್ರಶ್ನೆ ಗಳನ್ನು ಕೇಳುವ ಮೂಲಕ ರಾಹುಲ್ ಗಾಂಧಿ ಟಾಂಗ್ ನೀಡಿದ್ದಾರೆ.

    ಜಿಲ್ಲೆಯ ಔರಾದದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಬಗ್ಗೆ ಕಳಾಜಿ ಇಲ್ಲ. ಸುಳ್ಳು ಹೇಳುವ ಮೂಲಕ ಜನರನ್ನು ಹೆದರಿಸುವ ಕಾರ್ಯಮಾಡುತ್ತಿದ್ದಾರೆ. ನಾನು ಮೋದಿ ಅವರನ್ನು ಎಂದು ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ಆದ್ರೆ ಮೋದಿ ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಇವರಿಗೆ ತಾನು 3 ಪ್ರಶ್ನೆಗಳನ್ನು ಕೇಳುತ್ತೇನೆ ಉತ್ತರಿಸಲಿ ಎಂದು ಸವಾಲು ಎಸೆದರು.

    ಕಾಂಗ್ರೆಸ್ ಸರ್ಕಾರದ ವಿರುದ್ಧ ಮೋದಿ ಅವರು ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಆದರೆ ಅವರು ನೀರವ್ ಮೋದಿಯನ್ನು ದೇಶ ಬಿಟ್ಟು ಹೋಗಲು ಅವಕಾಶ ನೀಡಿದ್ದು ಯಾಕೆ? ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದ ಯರಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಮಾಡಿದ್ದು ಯಾಕೆ? ಭ್ರಷ್ಟಾಚಾರ ಆರೋಪ ಹೊಂದಿರುವ ಅಮಿತ್ ಶಾ ಪುತ್ರನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಈ ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಹೇಳಿದರು.

    ಬಿಜೆಪಿ ನಾಯಕರು ಆರ್ ಎಸ್‍ಎಸ್ ಸಿದ್ಧಾಂತವನ್ನು ದೇಶದಲ್ಲಿ ಜಾರಿಗೆ ತರಲು ಮುಂದಾಗಿದ್ದಾರೆ. ಬಸವಣ್ಣನವರ ಬಗ್ಗೆ ಮೋದಿ ಅವರು ಮಾತನಾಡುತ್ತಾರೆ. ಆದರೆ ಬಸವಣ್ಣನವರ ನುಡಿದಂತೆ ನಡೆಯಬೇಕು ಎಂಬ ತತ್ವವನ್ನು ಅನುಸರಿಸುವುದಿಲ್ಲ. ಭ್ರಷ್ಟಾಚಾರ ನಡೆಸಿ ಜೈಲು ಸೇರಿದ್ದ ಜನಾರ್ದನ ರೆಡ್ಡಿರನ್ನು ಮತ್ತೆ ವಿಧಾನಸೌದಕ್ಕೆ ತರಲು ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂದು ಆರೋಪಿಸಿದರು.

  • ಮುಸ್ಲಿಂ ವೋಟ್ ಹೆಚ್ಚಿರುವುದ್ದರಿಂದ ನನಗೆ ಟಿಕೆಟ್ ಕೊಟ್ರು- ವಿವಾದಾತ್ಮಕ ಹೇಳಿಕೆ ನೀಡಿದ ಕೈ ಅಭ್ಯರ್ಥಿ

    ಮುಸ್ಲಿಂ ವೋಟ್ ಹೆಚ್ಚಿರುವುದ್ದರಿಂದ ನನಗೆ ಟಿಕೆಟ್ ಕೊಟ್ರು- ವಿವಾದಾತ್ಮಕ ಹೇಳಿಕೆ ನೀಡಿದ ಕೈ ಅಭ್ಯರ್ಥಿ

    ಬೀದರ್: ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್ ಮುಸ್ಲಿಂ ಮತ ಓಲೈಕೆ ಮಾಡಿಕೊಳ್ಳಲು ಹೋಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಬ್ ನಬಿ ಆಜಾದ್ ಬೀದರ್ ಜಿಲ್ಲೆಗೆ ಆಗಮಿಸಿದ್ರು. ಈ ವೇಳೆ ಬೀದರ್ ಉತ್ತರ ಕ್ಷೇತ್ರದ ಕೈ ಅಭ್ಯರ್ಥಿ ರಹೀಂ ಖಾನ್, ಗುಲಾಬ್ ನಬಿ ಆಜಾದ್, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲೆ ಈ ಹೇಳಿಕೆ ನೀಡಿದ್ದಾರೆ.

    ಮುಸ್ಲಿಂ ವೋಟ್ ಹೆಚ್ಚು ಇರುವುದರಿಂದ ನನಗೆ ಬೀದರ್ ಉತ್ತರ ಕ್ಷೇತ್ರದ ಟಿಕೆಟ್ ಸಿಕ್ಕಿದೆ. ಇಲ್ಲದಿದ್ದರೆ ಜೀವನದಲ್ಲೇ ನನಗೆ ಟಿಕೆಟ್ ಸಿಗುತ್ತಿರಲಿಲ್ಲ. ಕೇವಲ ಮುಸ್ಲಿಂ ಮತದಾರರಿಂದ ನನ್ನ ಗೆಲುವು ಸಾಧ್ಯ. ಆದ್ದರಿಂದ ನೀವು ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ನಾನು ಸೋತರೆ ಅದು ಮುಸ್ಲಿಂ ಸಮಾಜಕ್ಕೆ ಮಾಡಿದ ಅವಮಾನ ಎಂದು ಮತ್ತೊಂದು ಹೇಳಿಕೆಯನ್ನು ರಹೀಂ ಖಾನ್ ನೀಡಿದ್ದಾರೆ.

    ರಹೀಂ ಖಾನ್‍ಗೆ ಮುಸ್ಲೀಂ ಮತಗಳು ಮಾತ್ರ ಬೇಕಾ? ಹಾಗಾದ್ರೆ ಬೇರೆ ಸಮಾಜದ ಮತ ಬೇಡವೇ ಎಂದು ಜನ ಈಗ ಪ್ರಶ್ನೆ ಮಾಡುತ್ತಿದ್ದಾರೆ. ಒಬ್ಬ ಶಾಸಕರಾಗಿ ಧರ್ಮವನ್ನು ಮುಂದಿಟ್ಟುಕೊಂಡು ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಜನ ಜನ ಪ್ರಶ್ನೆ ಮಾಡುತ್ತಿದ್ದಾರೆ.

  • ಅಶೋಕ್ ಖೇಣಿ ಅಮೆರಿಕದ ಪ್ರಜೆ – ಆಯೋಗದಿಂದ ನಾಮಪತ್ರ ಅಂಗೀಕಾರಕ್ಕೆ ಬ್ರೇಕ್

    ಅಶೋಕ್ ಖೇಣಿ ಅಮೆರಿಕದ ಪ್ರಜೆ – ಆಯೋಗದಿಂದ ನಾಮಪತ್ರ ಅಂಗೀಕಾರಕ್ಕೆ ಬ್ರೇಕ್

    ಬೀದರ್: ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ನಾಮಪತ್ರ ಅಂಗೀಕಾರ ಮಾಡದಂತೆ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

    ಅಶೋಕ್ ಖೇಣಿ ಭಾರತದ ಪ್ರಜೆ ಅಲ್ಲ. ಅವರು ಅಮೆರಿಕದ ಪ್ರಜೆಯಾಗಿದ್ದು, ಸರ್ಕಾರದ ಹಲವು ಯೋಜನೆಗಳಲ್ಲಿ ಗುತ್ತಿಗೆ ಪಡೆದಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

    ದೂರು ದಾಖಲಾದ ಹಿನ್ನೆಲೆಯಲ್ಲಿ ಖೇಣಿ ನಾಮಪತ್ರ ಅಂಗೀಕಾರಕ್ಕೆ ಆಯೋಗದ ಅಧಿಕಾರಿಗಳು ತಡೆ ನೀಡಿದ್ದಾರೆ. ದೂರಿನ ಸಂಬಂಧ ಚುನಾವಣಾ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

    2013ರಲ್ಲಿ ಅಶೋಕ್ ಖೇಣಿ ಕರ್ನಾಟಕ ಮಕ್ಕಳ ಪಕ್ಷದ ಅಡಿಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಕಣಕ್ಕೆ ಇಳಿದು ಗೆದ್ದಿದ್ದರು. ರಾಜ್ಯಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳಿಗೆ ವೋಟ್ ಹಾಕಿದ್ದ ಖೇಣಿ ಮಾರ್ಚ್ ತಿಂಗಳಿನಲ್ಲಿ ಕಾಂಗ್ರೆಸ್ ಸೇರಿದ್ದರು. ಪ್ರಸ್ತುತ ಖೇಣಿ ಅವರಿಗೆ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿದೆ.

  • ಕ್ಷೇತ್ರವನ್ನು ಮಿನಿಸಿಂಗಾಪುರ್ ಮಾಡ್ತೀನಿ ಅಂದಿದ್ದ ಶಾಸಕ ಖೇಣಿಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್

    ಕ್ಷೇತ್ರವನ್ನು ಮಿನಿಸಿಂಗಾಪುರ್ ಮಾಡ್ತೀನಿ ಅಂದಿದ್ದ ಶಾಸಕ ಖೇಣಿಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್

    ಬೀದರ್: ಇಲ್ಲಿನ ದಕ್ಷಿಣ ಶಾಸಕ ಅಶೋಕ್ ಖೇಣಿಯವರಿಗೆ ಬಗದಲ್ ಗ್ರಾಮಸ್ಥರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಶಾಸಕರು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಂತೆಯೇ ಘೇರಾವ್ ಹಾಕಿದ ಗ್ರಾಮಸ್ಥರು, ಏನ್ ಸ್ವಾಮೀ ಕ್ಷೇತ್ರವನ್ನು ಮಿನಿ ಸಿಂಗಾಪುರ್ ಮಾಡ್ತೀವಿ ಅಂಥ ಹೇಳಿದ್ರಿ. ಈ ರಸ್ತೆ ನೋಡಿ, ಇದೇನಾ ಮಿನಿ ಸಿಂಗಾಪುರ್.. ಇದೇನಾ ನಿಮ್ಮ ಅಭಿವೃದ್ಧಿ.. ಅಂತ ಕಿಡಿಕಾರುವ ಮೂಲಕ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಗ್ರಾಮಸ್ಥರ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾಗಿ ಎಸಿ ಕಾರ್‍ನಲ್ಲೇ ಕುಳಿತ ಶಾಸಕರು, ಜನರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೇ ಸೈಲೆಂಟ್ ಆಗಿ ಜಾಗ ಖಾಲಿ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.