Tag: Bidar Urban Development Authority

  • ಬುಡಾದಿಂದ ಸೈಟ್ ರಿಲೀಸ್‌ಗೆ 50 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆಯುಕ್ತ, ಸದಸ್ಯರ ಬಂಧನ

    ಬುಡಾದಿಂದ ಸೈಟ್ ರಿಲೀಸ್‌ಗೆ 50 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆಯುಕ್ತ, ಸದಸ್ಯರ ಬಂಧನ

    ಬೀದರ್: ಗಡಿಜಿಲ್ಲೆ ಬೀದರ್‌ನಲ್ಲಿ (Bidar) ಲೋಕಾಯುಕ್ತ ಪೊಲೀಸರು (Lokayukta Officers) ದಾಳಿ ನಡೆಸಿದ್ದು, ಬುಡಾ ಸೈಟ್ ರಿಲೀಸ್‌ಗಾಗಿ 50 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆಯುಕ್ತರು ಹಾಗೂ ಸದಸ್ಯರನ್ನು ಬಂಧಿಸಿದ್ದಾರೆ.

    ಬುಡಾದಿಂದ (BUDA) (ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ) ಲೇಔಟ್ ಸೈಟ್‌ಗಳನ್ನು ರಿಲೀಸ್ ಮಾಡಲು 50 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬುಡಾ ಆಯುಕ್ತ ಶ್ರೀಕಾಂತ್ ಚಿಮ್ಮಕೊಡೆ ಹಾಗೂ ಬುಡಾ ಸದಸ್ಯ ಚಂದ್ರಕಾಂತ್ ರೆಡ್ಡಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಇದನ್ನೂ ಓದಿ: ಫ್ಯಾಷನ್ ಪ್ರಿಯರ ಮನಗೆದ್ದ ವೆಡ್ಡಿಂಗ್ ಜ್ಯುವೆಲ್ ಬ್ಲೌಸ್‌ಗಳು

    ಬುಡಾ ಆಯುಕ್ತರ ಆದೇಶದ ಮೇರೆಗೆ ಲಂಚದ ಹಣ ತೆಗೆದುಕೊಳ್ಳುತ್ತಿದ್ದ ಸಿದ್ದು ಹೂಗಾರನನ್ನು ಲೋಕಾ ಪೊಲೀಸರು ಬೀದರ್‌ನ ಪ್ರತಾಪ್ ನಗರದ ಬಳಿ ರೆಡ್‌ಹ್ಯಾಂಡಾಗಿ ಹಿಡಿದಿದ್ದಾರೆ. 50 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದು, ದಾಳಿ ವೇಳೆ 10 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.

    10 ಲಕ್ಷ ರೂ. ಜಪ್ತಿ ಮಾಡಿಕೊಂಡು ಬಳಿಕ ಜಿಲ್ಲೆಯ ಹೋಟೆಲ್‌ವೊಂದರ ಬಳಿ ಬುಡಾ ಆಯುಕ್ತರನ್ನು ಬಂಧಿಸಿದ್ದಾರೆ.

    ಬಳಿಕ ಅವರನ್ನು ನಗರದ ಬಾಲಭವನದ ಬಳಿಯಿರುವ ಲೋಕಾಯುಕ್ತ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಠಾಣೆ ಬಳಿ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಲೋಕಾಯುಕ್ತಕ್ಕೆ ದೂರುದಾರ ಸತೀಶ್ ನೌಬಾದೆ ಎಂಬುವವರಿಂದ ದೂರು ದಾಖಲಾದ ಹಿನ್ನೆಲೆ ದಾಳಿ ಮಾಡಲಾಗಿದೆ.ಇದನ್ನೂ ಓದಿ: ಕ್ಷೇತ್ರ ಬಿಟ್ಟು ಕೊಟ್ಟು ಬಿಜೆಪಿ ಸೇರಿದವಳು ನಾನು, ನಮ್ಮದು ತ್ಯಾಗ ಮಾಡಿರುವ ಕುಟುಂಬ: ಸುಮಲತಾ