Tag: Bidar Contractor Case

  • ಸಚಿನ್ ಆತ್ಮಹತ್ಯೆ ಕೇಸ್ – ಬೀದರ್‌ನಲ್ಲಿ ಬಹುತೇಕ ತನಿಖೆ ಮುಕ್ತಾಯ, ಕಲಬುರಗಿಗೆ ತೆರಳಿದ ಸಿಐಡಿ ಟೀಂ

    ಸಚಿನ್ ಆತ್ಮಹತ್ಯೆ ಕೇಸ್ – ಬೀದರ್‌ನಲ್ಲಿ ಬಹುತೇಕ ತನಿಖೆ ಮುಕ್ತಾಯ, ಕಲಬುರಗಿಗೆ ತೆರಳಿದ ಸಿಐಡಿ ಟೀಂ

    -ಸತತ 8 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ

    ಬೀದರ್: ಎರಡು ದಿನಗಳ ಸಿಐಡಿ ವಿಚಾರಣೆ ಮುಕ್ತಾಯವಾಗಿದ್ದು, ಇಂದು ಸಿಐಡಿ ತಂಡ ಕಲಬುರಗಿಗೆ ತೆರಳಿದ್ದಾರೆ.

    ಗುತ್ತಿಗೆದಾರ ಸಚಿನ್ ಪಾಂಚಾಳ (Sachin Panchal) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುತೇಕ ಸಿಐಡಿ ತನಿಖೆ ಮುಕ್ತಾಯವಾಗಿದ್ದು, ಇಂದು (ಜ.05) ಸಿಐಡಿ ತಂಡ ಕಲಬುರಗಿಗೆ (Kalaburagi) ತೆರಳಿದೆ. ಬೀದರ್‌ನಲ್ಲಿ (Bidar) ಸತತ ಮೂರು ದಿನಗಳಿಂದ ಬಿಡುಬಿಟ್ಟಿದ್ದ ಸಿಐಡಿ ತಂಡ, ಸಚಿನ್ ಕುಟುಂಬಸ್ಥರನ್ನು ಸತತ 8 ಗಂಟೆಗಳ ಕಾಲ ತೀವ್ರ ವಿಚಾರಣೆ ಮಾಡಿ ಹೇಳಿಕೆಗಳಿನ್ನು ದಾಖಲಿಸಿದೆ. ರಾತ್ರಿ ಕುಟುಂಬಸ್ಥರ ದಾಖಲೆಗಳಿಗೆ ಸಹಿ ಪಡೆದು ಸಿಐಡಿ ತಂಡ ಎರಡು ದಿನಗಳ ತನಿಖೆ ಅಂತ್ಯಗೊಳಿಸಿದ್ದು, ಇಂದು ಕಲಬುರಗಿಗೆ ತೆರಳಿದ ತಂಡ ಸಚಿನ್ ಕಚೇರಿ ಸೇರಿದಂತೆ ಆರೋಪಿಗಳ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆಯಿದೆ.ಇದನ್ನೂ ಓದಿ: BBK 11: ಪತಿ ಜೊತೆಗಿನ ಗೌತಮಿ ರೊಮ್ಯಾನ್ಸ್ ಕದ್ದು ನೋಡಿದ ದೋಸ್ತರಿಗೆ ಕಾಲೆಳೆದ ಕಿಚ್ಚ

    ಕಲಬುರಗಿಯಲ್ಲಿ ಡೆತ್‌ನೋಟ್‌ನಲ್ಲಿ ಸಚಿನ್ ಉಲ್ಲೇಖ ಮಾಡಿರುವ ಪ್ರಮುಖ ಆರೋಪಿ ರಾಜು ಕಪನೂರು ಸೇರಿದಂತೆ ಎಲ್ಲಾ ಆರೋಪಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದ್ದು, ನೋಟಿಸ್ ಜೊತೆಗೆ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಅಂಡ್ ಗ್ಯಾಂಗ್ ಬಂಧನ ಸಾಧ್ಯತೆಯಿದೆ.

    ಸಿಐಡಿ ಡಿವೈಎಸ್ಪಿ ಸುಲೇಮಾನ್ ತಹಸೀಲ್ದಾರ ನೇತೃತ್ವದ ತಂಡದಿಂದ ಬೀದರ್‌ನಲ್ಲಿ ಸಚಿನ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲಿ ಎರಡು ದಿನಗಳ ಕಾಲ ತೀವ್ರ ತನಿಖೆ ಮಾಡಿದೆ. ಈ ಮಧ್ಯೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತರ ಕುಟುಂಬಸ್ಥರನ್ನು ಭೇಟಿ ಮಾಡಿದ್ದು, ಮತ್ತೊಂದು ತಿರುವಿಗೆ ಕಾರಣವಾಗಿದೆ. ಸಿಐಡಿ ತನಿಖೆ ಮಾಡಿ ಆದಷ್ಟು ಬೇಗ ಸರ್ಕಾರಕ್ಕೆ ತನಿಖಾ ವರದಿಯನ್ನು ಸಲ್ಲಿಸಲಿದೆ.

    ಇನ್ನೂ (ಜ.4) `ಪಬ್ಲಿಕ್ ಟಿವಿ’ಯೊಂದಿಗೆ ಸಚಿನ್ ಸಹೋದರಿ ಸುರೇಖಾ ಮಾತನಾಡಿದ್ದು, ಸಚಿನ್ ಡೆತ್‌ನೋಟ್, ಕೊನೆಯ ಬಾರಿ ಪೋನ್ ಮಾಡಿದ್ದು ಯಾವಾಗ? ಕಪನೂರು ಬೀದರ್‌ಗೆ ಬಂದು ಧಮ್ಕಿ ಹಾಕಿದ ಬಗ್ಗೆ ಹೇಳಿಕೆ ಪಡೆದುಕೊಂಡಿದ್ದಾರೆ. ನಮ್ಮ ತನಿಖೆ ಮುಗಿದಿದೆ, ಬಳಿಕ ಕಲಬುರಗಿಗೆ ತೆರಳಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಸಚಿವ ಪ್ರಿಯಾಂಕ್ ಖರ್ಗೆ ಅವರು ನಮ್ಮ ಜೊತೆ ನೇರವಾಗಿ ಮಾತಾನಾಡಿಲ್ಲ. ಆದರೆ ಅವರ ಆಪ್ತರು ಬಂದು ನಮ್ಮ ಜೊತೆ ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆನೇ ಸಿಐಡಿ ತನಿಖೆ ಮಾಡಿಸುತ್ತಿದ್ದಾರೆ. ಖರ್ಗೆ ಸಾಹೇಬರು ಸದ್ಯ ಬ್ಯೂಸಿಯಾಗಿದ್ದಾರೆ. ಮುಂದಿನ ವಾರ ಬರುತ್ತಾರೆ. ಸಿಐಡಿ ತನಿಖೆಯಿಂದ ನ್ಯಾಯ ಸಿಗದಿದ್ದರೆ ಸಿಬಿಐ ತನಿಖೆ ಬೇಕು ಎಂದು ಹೇಳಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಯಾವುದೇ ಮಂತ್ರಿ, ಶಾಸಕರ ಮಕ್ಕಳು ಬಸ್‌ನಲ್ಲಿ ಓಡಾಡಲ್ಲ: ಟಿಕೆಟ್ ದರ ಏರಿಕೆಗೆ ಹೆಚ್‌ಡಿಕೆ ಕಿಡಿ

  • ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ – ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಇಲ್ಲ: ಸಿದ್ದರಾಮಯ್ಯ

    ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ – ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಇಲ್ಲ: ಸಿದ್ದರಾಮಯ್ಯ

    ಬೆಂಗಳೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್‌ನಲ್ಲಿ (Bidar Contractor Case) ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಯಾವುದೇ ಸಾಕ್ಷಿಗಳು ಇಲ್ಲ. ಡೆತ್‌ ನೋಟ್‌ನಲ್ಲಿ ಸಚಿವರ ಹೆಸರು ಇಲ್ಲ. ಹೀಗಾಗಿ ರಾಜೀನಾಮೆ ಪಡೆಯುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟಪಡಿಸಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಅವರು ದಾಖಲಾತಿ ಇಟ್ಟುಕೊಂಡು ಹೋರಾಟ ಮಾಡಬೇಕು. ಸಚಿನ್ ಡೆತ್ ನೋಟ್ ಬರೆದಿದ್ದಾನೆ. ಅದರಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಇಲ್ಲ. ಯಾಕೆ ಅವರು ರಾಜೀನಾಮೆ ಕೊಡಬೇಕು. ಅವರ ಪಾತ್ರ ಏನು ಇಲ್ಲ, ಹಾಗಾದರೆ ಯಾಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.

    ಈಶ್ವರಪ್ಪ ಕೇಸ್‌ನಲ್ಲಿ ಡೆತ್ ನೋಟ್‌ನಲ್ಲಿ ಈಶ್ವರಪ್ಪ ಹೆಸರು ಇತ್ತು. ಈ ಕೇಸ್‌ನಲ್ಲಿ ಡೆತ್ ನೋಟ್ ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಇದೆಯಾ? ಪ್ರಿಯಾಂಕ್ ಖರ್ಗೆ ಹೆಸರು ಎಲ್ಲೂ ಕೂಡಾ ಇಲ್ಲ. ಪ್ರಿಯಾಂಕ್ ಖರ್ಗೆ ಈಗಾಗಲೇ ಹೇಳಿದ್ದಾರೆ ಯಾವುದೇ ತನಿಖೆಗೆ ಸಿದ್ದ ಅಂತ. ಈಗ ನಾವು ದೂರಿನ ಮೇಲೆ CODಗೆ ಪ್ರಕರಣ ಕೊಟ್ಟಿದ್ದೇವೆ. COD ವರದಿ ಕೊಡಲಿ. ವರದಿ ಕೊಟ್ಟ ಮೇಲೆ ಪ್ರಿಯಾಂಕ್ ಖರ್ಗೆ ತಪ್ಪು ಮಾಡಿದ್ದಾರೆ ಎಂದು ಗೊತ್ತಾಗಬೇಕಲ್ಲವಾ? ಸದ್ಯಕ್ಕೆ ಅವರ ಮೇಲೆ ಯಾವುದೇ ದಾಖಲೆ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಪರ ಬ್ಯಾಟ್‌ ಬೀಸಿದ್ದಾರೆ.

    ಪ್ರಕರಣವನ್ನ CBIಗೆ ಕೊಡಬೇಕು ಎಂಬ ಬಿಜೆಪಿ ಒತ್ತಾಯ ಬಿಜೆಪಿ ವಿರುದ್ದ ಕಿಡಿಕಾರಿದ ಅವರು, ಯಾಕೆ ಸಿಬಿಐಗೆ ಕೊಡಬೇಕು. ಅವರು ಯಾವಾಗ ಸಿಬಿಐಗೆ ಕೊಟ್ಟಿದ್ರು? ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲವಾ ಅವರಿಗೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಒಂದೇ ಒಂದು ಕೇಸ್ ಸಿಬಿಐಗೆ ಕೊಟ್ಟಿರಲಿಲ್ಲ. ಹೀಗಿರುವಾಗ ಸಿಬಿಐಗೆ ಕೊಡಿ ಅಂತ ಕೇಳೋಕೆ ಬಿಜೆಪಿ ಅವರಿಗೆ ಯಾವ ನೈತಿಕತೆ ಇದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಯಾವುದೇ ಸಾಕ್ಷಿ ಇಲ್ಲದೆ, ಡೆತ್ ನೋಟ್‌ನಲ್ಲಿ ಹೆಸರು ಇಲ್ಲದೇ ರಾಜೀನಾಮೆ ಹೇಗೆ ಪಡೆಯೋದು? ಬಿಜೆಪಿಯವರು ರಾಜಕೀಯ ದ್ವೇಷದಿಂದ ಆರೋಪ ಮಾಡ್ತಿದ್ದಾರೆ ಎಂದು ದೂರಿದ್ದಾರೆ.