ಪೊಲೀಸರು ಬಾಲಕಿಯ 32 ಬಗೆಯ ಸ್ಯಾಂಪಲ್ಸ್‌ಗಳನ್ನು ಎಫ್‌ಎಸ್‌ಎಲ್‌ಗೆ(Forensic Science Laboratory) ಕಳುಹಿಸಿದ್ದರು. ಬಳಿಕ ಎಫ್‌ಎಸ್‌ಎಲ್ ವರದಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬುದು ದೃಢವಾಗಿತ್ತು. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಮಳೆ ಕಾಟ – KSRTC ಮೇಲೆ ಉರುಳಿಬಿದ್ದ ಮರ
ಇದೀಗ ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಹೆಡ್ ಇಂಜುರಿಯಿಂದ ಬಾಲಕಿ ಸಾವನ್ನಪ್ಪಿರುವುದು ದೃಢವಾಗಿದೆ. ರೈಲು ಡಿಕ್ಕಿಯಾದ ಪರಿಣಾಮ ಬಾಲಕಿ ತಲೆಗೆ ತೀವ್ರ ಪೆಟ್ಟು ಬಿದ್ದು ಮೃತಪಟ್ಟಿದ್ದಾಳೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಅಲ್ಲದೇ ರೈಲು ಡಿಕ್ಕಿಯಾಗಿರುವ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಲ್ಲದೇ ಎಫ್‌ಎಸ್‌ಎಲ್ ವರದಿಗಾಗಿ (Forensic Science Laboratory Report) ಕಾಯುತ್ತಿರುವ ಪೊಲೀಸರು, ವಶಪಡಿಸಿಕೊಂಡ 7 ಗನ್‌ಗಳಲ್ಲಿ ಯಾವ ಗನ್‌ಗೆ ಸ್ಥಳದಲ್ಲಿ ಸಿಕ್ಕ ಬುಲೆಟ್ ಮ್ಯಾಚ್ ಆಗುತ್ತೆ ಎಂಬ ಮಾಹಿತಿ ತಿಳಿದು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಲು ಮುಂದಾಗಿದ್ದಾರೆ.
ರಾಮನಗರ: ರಿಕ್ಕಿ ರೈ (Ricky Rai) ಮೇಲೆ ಫೈರಿಗ್ ಪ್ರಕರಣ ಸಂಬಂಧ ಇಂದು ಪ್ರಕರಣದ ಎ2 ಆರೋಪಿ ಅನುರಾಧ ರೈ (Anuradha Rai) ಬಿಡದಿ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದಾರೆ. ಸತತ 6 ಗಂಟೆಗಳ ಕಾಲ ಬಿಡದಿ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ಅವರು ಅನುರಾಧ ರೈರನ್ನ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅನುರಾಧ ಅವರು, ಪೊಲೀಸರು ವಿಚಾರಣೆಗೆ ಕರೆದಿದ್ರು, ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೀನಿ. ಪೊಲೀಸರ ಮೇಲೆ ನಂಬಿಕೆ ಇದೆ. ಇದರಲ್ಲಿ ಯಾರಿದ್ದಾರೋ, ಯಾರು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು. ನಮ್ಮ ಪಾತ್ರ ಇದರಲ್ಲಿ ಏನು ಇಲ್ಲ. ಯಾಕೆ ನನ್ನ ಮೇಲೆ ಕಂಪ್ಲೆಂಟ್ ಕೊಟ್ಟಿದ್ದಾರೊ ಎಂಬುದನ್ನ ಅವರನ್ನೇ ಕೇಳಬೇಕು ಎಂದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಳಿಕ ಪಾಕ್‌ನಿಂದ ಆಮದಾಗ್ತಿದ್ದ ಡ್ರೈಫ್ರೂಟ್ಸ್ ಪೂರೈಕೆಯಲ್ಲಿ ವ್ಯತ್ಯಯ – ಬೆಲೆ ಏರಿಕೆ ಆತಂಕ!
ಫೈರಿಂಗ್ ಪ್ರಕರಣದಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಜಮೀನು ವ್ಯಾಜ್ಯ ಈ ಹಿಂದೆ ಇತ್ತು, ಅದು ರಾಜೀ ಆಗಿದೆ. ಕೋರ್ಟ್ ನಲ್ಲಿ ಸುಖಾಂತ್ಯವಾಗಿ ಕೇಸ್ ಮುಗಿದಿದೆ. ನಮಗೂ ಅವರಿಗೂ ಯಾವುದೇ ಸಂಬಂಧ ಇಲ್ಲ. ಪೊಲೀಸರು ನ್ಯಾಯ ದೊರಕಿಸಿಕೊಡುತ್ತಾರೆ ಎಂಬ ನಂಬಿಕೆ ಇದೆ. ಅಕ್ಟೋಬರ್ ನಲ್ಲಿ ನಾನು ರಿಕ್ಕಿ ರೈ ನೋಡಿದ್ದು. 6 ತಿಂಗಳ ಹಿಂದೆ ಕೋರ್ಟ್‌ನಲ್ಲಿ ಸಹಿ ಮಾಡುವಾಗ ನೋಡಿದ್ದೆ. ಅದಾದಮೇಲೆ ನಾನು ನೋಡಿಯೂ ಇಲ್ಲ, ಸಂಪರ್ಕ ಕೂಡ ಇಲ್ಲ. ಪೊಲೀಸರು ಮತ್ತೆ ವಿಚಾರಣೆಗೆ ಕರೆದರೆ ಬರುತ್ತೇನೆ ಎಂದು ಅನುರಾಧ ರೈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಮೂರು ಕಾರುಗಳ ನಡುವೆ ಸರಣಿ ಅಪಘಾತ – ಬೆಂಗಳೂರು ಮೂಲದ ವ್ಯಕ್ತಿ ಸಾವು!
– ಶಾಟ್ ಗನ್ ಹಿಡಿದು ಸದಾಕಾಲ ಕಾಯುವ ಅಂಗರಕ್ಷಕರಿದ್ರೂ ರಿಕ್ಕಿ ರೈಗೆ ಗುಂಡು ಹಾರಿಸಿದ್ಯಾರು..?
ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ (Muthappa Rai) ಮಗ ರಿಕ್ಕಿ ರೈ ಮೇಲಿನ ಶೂಟೌಟ್ ಪ್ರಕರಣ ಸಾಕಷ್ಟು ಚರ್ಚಗೆ ಕಾರಣವಾಗಿದೆ. ಸಾಮಾನ್ಯವಾಗಿ ರಿಕ್ಕಿ ರೈ ಸೆಕ್ಯುರಿಟಿಯನ್ನ ಕಣ್ಣಾರೆ ಕಂಡವರು ಅದ್ಯಾವ ಗಟ್ಟಿ ಪಿಂಡ ಇವನನ್ನ ಟಾರ್ಗೆಟ್ ಮಾಡ್ತು ಅಂತಾ ಮಾತಾಡ್ತಿದ್ದಾರೆ.
ರಿಕ್ಕಿ ರೈನ (Ricky Rai) ಸೆಕ್ಯುರಿಟಿ ಹೇಗಿದೆ ಗೊತ್ತಾದ್ರೆ ವಿರೋಧಿಗಳು ಹತ್ರ ಸುಳಿಯೋಕು ಭಯ ಪಡ್ತಾರೆ. ನೂರಾರು ಕೋಟಿ ಆಸ್ತಿ, ಊರೆಲ್ಲಾ ಶತೃಗಳನ್ನ ಇಟ್ಕೊಂಡು ಒಬ್ಬಂಟಿ ತಿರುಗಾಡ್ತಿದ್ನಾ ರಿಕ್ಕಿ ರೈ ಅನ್ನೊ ಪ್ರಶ್ನೆ ಕೇಳಿದ್ರೆ, ನೋ ನೆವರ್. ಕಣ್ಣಲ್ಲಿ ಕಣ್ಣಿಟ್ಟು, ಕೈಯಲ್ಲಿ ಗನ್ ಇಡ್ಕೊಂಡು ರಿಕ್ಕಿ ರೈನ ಕಾಯ್ತಿದ್ದ ಬಾಡಿಗಾರ್ಡ್ಸ್ ಸದಾ ಕಣ್ಮುಂದೆ ಬರ್ತಾರೆ. ಹಾಗಿದ್ರೆ ರಿಕ್ಕಿ ರೈಗೆ ಭದ್ರತೆ ಹೇಗಿತ್ತು ಅಂತ ತಿಳಿಯೋಕೆ ಮುಂದೆ ಓದಿ… ಇದನ್ನೂ ಓದಿ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹತ್ಯೆಗೆ ಯತ್ನ – ಶೂಟೌಟ್ ಹಿಂದೆ ಭೂಗತ ಲೋಕದ ಕೈವಾಡ..?
ರಿಕ್ಕಿಗೆ ಟೈಟ್ ಸೆಕ್ಯುರಿಟಿ ಹೇಗಿತ್ತು?
ʻಪಬ್ಲಿಕ್ ಟಿವಿʼಗೆ ರಿಕ್ಕಿ ರೈ ಸೆಕ್ಯುರಿಟಿಯ ಎಕ್ಸ್‌ಕ್ಲೂಸಿವ್ ವೀಡಿಯೊ ಲಭ್ಯವಾಗಿದೆ. ಡಬಲ್ ಬ್ಯಾರೆಲ್, ಸಿಂಗಲ್ ಬ್ಯಾರೆಲ್, ಪಿಸ್ತೂಲ್ ಹಿಡಿದು ರಿಕ್ಕಿ ರೈನ ಕಾಯೋಕೆ ಸದಾ ಇಬ್ಬರು ಬಾಡಿಗಾರ್ಡ್ ಜೊತೆ ಪಿಸ್ತೂಲ್ ಹಿಡಿದು ಓರ್ವ ಅಂಗರಕ್ಷಕ ಇರ್ತಾನೆ. ಶಾಟ್ ಗನ್‌ಗಳಾದ ಡಬಲ್ ಬ್ಯಾರೆಲ್ ಹಾಗೂ ಸಿಂಗಲ್ ಬ್ಯಾರೆಲ್ ಗನ್‌ಗಳಲ್ಲಿ ಪವರ್ ಹಾಗೂ ಇಂಪ್ಯಾಕ್ಟ್ ಜಾಸ್ತಿಯಿರುತ್ತೆ. ಅಕ್ಯುರೇಟ್ ಆಗಿ ದೂರದವರೆಗೆ ಟಾರ್ಗೆಟ್ ಇಡಬಹುದು. ಹೀಗಾಗಿಯೇ ಈ ಗನ್ ಗಳಲ್ಲಿ ಪಳಗಿದ್ದ ಶಾರ್ಪ್ ಶೂಟರ್ಸ್‌ನ ರಿಕ್ಕಿ ರೈ ಜೊತೆಯಲ್ಲಿಟ್ಟುಕೊಂಡಿದ್ದ. ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ಎಷ್ಟಿದೆ? – ವಿವಾದ ಹುಟ್ಟಿಕೊಂಡಿದ್ದು ಯಾವಾಗ?
ಶೂಟೌಟ್ ನಡೆದ ದಿನ ರಿಕ್ಕಿ ಮೇಲೆ ಫೈರಿಂಗ್ ನಡೆದಾಗ ಗನ್ ಮ್ಯಾನ್‌ಗಳು ಯಾಕೆ ರಿವರ್ಸ್ ಫೈರಿಂಗ್ ಮಾಡಿಲ್ಲ ಅನ್ನೋ ಪ್ರಶ್ನೆ ಮೂಡುತ್ತೆ. ಇನ್ನೂ ರಿಕ್ಕಿಗೆ ಗುಂಡೇಟು ಬಿದ್ದಾಗ ಡ್ರೈವರ್ ಹಾಗೂ ಮತ್ತೊಬ್ಬ ಗನ್ ಮ್ಯಾನ್ ಆರೈಕೆ ಮಾಡಿದ್ರಂತೆ. ಉಳಿದ ಇಬ್ಬರು ಗನ್ ಮ್ಯಾನ್ ಗಳು ಯಾಕೆ ಇರಲಿಲ್ಲ ಅನ್ನೊ ಪ್ರಶ್ನೆ ಸಹಜವಾಗೆ ಮೂಡಿದೆ. ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಫೈರಿಂಗ್ – ಕೂದಲೆಳೆ ಅಂತರದಲ್ಲಿ ಪಾರು
ರಾಮನಗರ: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ (Ricky Rai Shootout), ಸಾವಿನಿಂದ ಜಸ್ಟ್ ಮಿಸ್ ಆಗಿದ್ದಾರೆ.. ರಿಕ್ಕಿ ರೈ ಹತ್ಯೆಗೆ ಯತ್ನ ಪ್ರಕರಣ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಯಾವ ಕಾರಣಕ್ಕೆ ಗುಂಡು ಹಾರಿಸಲಾಯ್ತು ಅನ್ನೋದು ಇನ್ನೂ ನಿಗೂಢವಾಗಿದೆ. ಮೇಲ್ನೊಟಕ್ಕೆ ಕುಟುಂಬದ ಆಸ್ತಿ ವಿಚಾರಕ್ಕೆ ಕೊಲೆ ಯತ್ನ ನಡೆದಿದೆ ಎಂಬ ಬಗ್ಗೆ ಚರ್ಚೆ ಆಗ್ತಿದೆ. ಅಲ್ಲದೇ, ಹತ್ಯೆ ಯತ್ನದ ಹಿಂದೆ ಭೂಗತ ಲೋಕದ ಕೈವಾಡದ ಶಂಕೆ ಕೂಡ ವ್ಯಕ್ತವಾಗ್ತಿದೆ.
ರಿಕ್ಕಿ ರೈ ಮೇಲಿನ ಅಟ್ಯಾಕ್ ಸಾಕಷ್ಟು ಸಂಚಲನ ಮೂಡಿಸಿದೆ. ಭೂಗತ ಲೋಕದ ಡಾನ್ ಆಗಿ ಮೆರೆದಿದ್ದ ಮುತ್ತಪ್ಪ ರೈ ಪುತ್ರನಿಗೆ ಸ್ಕೆಚ್ ಹಾಕಿದ್ದು ಯಾರು? ಯಾವ ಕಾರಣಕ್ಕಾಗಿ ಈ ಕೊಲೆ ಯತ್ನ ನಡೆದಿದೆ? ಎಂಬುದರ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ಯವಾಗ್ತಿವೆ. ಒಂದು ಕಾಲದಲ್ಲಿ ಮುತ್ತಪ್ಪ ರೈ ಆಪ್ತನಾಗಿದ್ದ ದಕ್ಷಿಣ ಕನ್ನಡ ಮೂಲದ ರಾಕೇಶ್ ಮಲ್ಲಿ, ಮುತ್ತಪ್ಪ ರೈ 2ನೇ ಪತ್ನಿ ಅನುರಾಧ, ನಿತೇಶ್ ಎಸ್ಟೇಟ್‌ನ ಮಾಲೀಕ ನಿತೇಶ್ ಶೆಟ್ಟಿ ಹಾಗೂ ವೈದ್ಯನಾಥನ್ ಎಂಬುವವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಆಸ್ತಿ ಎಷ್ಟಿದೆ? – ವಿವಾದ ಹುಟ್ಟಿಕೊಂಡಿದ್ದು ಯಾವಾಗ?
ತಂದೆ ಮುತ್ತಪ್ಪ ರೈ ಗಳಿಸಿದ್ದ ಆಸ್ತಿಗಳ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರವನ್ನು ರಿಕ್ಕಿ ನೋಡಿಕೊಳ್ತಿದ್ರು. ಪ್ರಕರಣವೊಂದರ ವ್ಯಾಜ್ಯ ಹಿನ್ನೆಲೆ ಕೋರ್ಟ್‌ಗೆ ಹಾಜರಾಗುವ ಸಲುವಾಗಿ ಕಳೆದೆರಡು ದಿನಗಳ ಹಿಂದೆ ರಿಕ್ಕಿ ರಷ್ಯಾದಿಂದ ವಾಪಸ್ ಬಂದಿದ್ದ, ಬಿಡದಿ ನಿವಾಸಕ್ಕೆ ಬಂದಿದ್ದ ರಿಕ್ಕಿ, ಬೆಂಗಳೂರಿಗೆ ಹೋಗುವಾಗ ಗುಂಡಿನ ದಾಳಿ ನಡೆದಿದೆ. ತಂದೆ ಸಾವಿನ ಬಳಿಕ ಮಲತಾಯಿ ಅನುರಾಧ ಜೊತೆ ಆಸ್ತಿ ವ್ಯಾಜ್ಯ ಹಾಗೂ ತಂದೆಯ ವ್ಯವಹಾರ ಪಾಲುದಾರರಾಗಿದ್ದವರ ಜೊತೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ರಿಕ್ಕಿ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿನ ದ್ವೇಷಕ್ಕೆ ಸುಫಾರಿ ಕಿಲ್ಲರ್ ಮೂಲಕ ರಿಕ್ಕಿ ಹತ್ಯೆಗೆ ಸ್ಕೆಚ್ ಹಾಕಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಮೈಸೂರು | ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನಿಂದ ಮಹಿಳೆಗೆ 1.41 ಕೋಟಿ ವಂಚನೆ ಆರೋಪ
ಅಲ್ಲದೇ ರಿಕ್ಕಿ ಕೊಲೆ ಯತ್ನದ ಹಿಂದೆ ಅಂಡರ್ ವರ್ಲ್ಡ್ ಕೈವಾಡ ಇದ್ಯಾ ಎಂಬುದರ ಬಗ್ಗೆಯೂ ಪೊಲೀಸರಿಗೆ ಅನುಮಾನ ಹುಟ್ಟಿಸಿದೆ. ಮುತ್ತಪ್ಪ ರೈ ಮೇಲಿನ ಸೇಡಿಗೆ ರಿಕ್ಕಿ ಮೇಲೆ ಅಟ್ಯಾಕ್ ಮಾಡಿಸಲಾಯ್ತಾ ಎನ್ನುವ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಅದರಲ್ಲೂ ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಉನ್ನತ ತನಿಖಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಫೈರಿಂಗ್ – ಕೂದಲೆಳೆ ಅಂತರದಲ್ಲಿ ಪಾರು
ಇನ್ನೂ ಪ್ರಕರಣದ ತನಿಖೆ ಚುರುಕುಗೊಳಿಸಿರೋ ಪೊಲೀಸರು, ಕೃತ್ಯ ನಡೆದ ಸ್ಥಳದಲ್ಲಿ ಶ್ವಾನದಳ ಹಾಗೂ ಎಫ್‌ಎಸ್‌ಎಲ್ ಟೀಂ ಪರಿಶೀಲನೆ ನಡೆಸಿದ್ದಾರೆ. ಹಂತಕರು ಗುಂಡು ಹಾರಿಸಿರುವ ಕಾಂಪೌಂಡ್ ಬಳಿ ಬಂದೂಕಿನ ಎಂಟಿ ಸ್ಟಾಕ್ಸ್ ಹಾಗೂ ಸಿಮ್ ಕಾರ್ಡ್ ಇಲ್ಲದ ಬೇಸಿಕ್ ಮೊಬೈಲ್ ಸಿಕ್ಕಿದೆ. ಕಾರಿನೊಳಗೆ ಇದ್ದ ಗುಂಡನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಮನಗರ: ತಲೆಬುರುಡೆ ಹಾಗೂ ಅಸ್ಥಿಪಂಜರಗಳನ್ನಿಟ್ಟುಕೊಂಡು ಗ್ರಾಮಸ್ಥರಿಗೆ ಹೆದರಿಸುತ್ತಿದ್ದ ವ್ಯಕ್ತಿಯನ್ನು ಬಿಡದಿ ಪೊಲೀಸರು (Bidadi Police) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಜೋಗೂರು ದೊಡ್ಡಿ ಗ್ರಾಮದ ಬಲರಾಮ್ ಎಂದು ಗುರುತಿಸಲಾಗಿದೆ. ಆರೋಪಿ ವಾಮಾಚಾರದ ಮೂಲಕ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ. ಪ್ರಶ್ನಿಸಿದರೆ ಗ್ರಾಮಸ್ಥರ ಮೇಲೆ ವಾಮಾಚಾರ ಮಾಡುವುದಾಗಿ ಬೆದರಿಸುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಸ ಹಾಕುವ ವಿಚಾರಕ್ಕೆ ಗಲಾಟೆ- ವೃದ್ಧೆ ಮೇಲೆ ಮಾರಣಾಂತಿಕ ಹಲ್ಲೆ
ಆರೋಪಿ ತನ್ನ ತೋಟದ ಮನೆ ಹಾಗೂ ಗ್ರಾಮದ ಸ್ಮಶಾನದಲ್ಲಿ ಅಮವಾಸ್ಯೆಯಂದು ವಿಚಿತ್ರ ಪೂಜೆಗಳನ್ನು ಮಾಡಿ ಗ್ರಾಮಸ್ಥರನ್ನು ಭಯಪಡಿಸುತ್ತಿದ್ದ. ಇದೇ ರೀತಿ ಭಾನುವಾರ ಪೂಜೆ ಮಾಡಿ ವಾಪಸ್ ಆಗುತ್ತಿದ್ದ ವೇಳೆ ಗ್ರಾಮಸ್ಥರು ಆತನನ್ನು ಹಾಗೂ ಆತನ ಸಹೋದರ ರವಿ ಎಂಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ರಾಮನಗರ: ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru – Mysuru Expressway) ಟೋಲ್ ಕಟ್ಟಲಾಗದೇ ಕೆಎಸ್‌ಆರ್‌ಟಿಸಿ (KSRTC) ಬಸ್ ಒನ್ ವೇಯಲ್ಲಿ ವಾಪಸ್ಸಾಗಿರುವ ಘಟನೆ ಬಿಡದಿಯ ಶೇಷಗಿರಿಹಳ್ಳಿ ಟೋಲ್ ಬಳಿ ನಡೆದಿದೆ.
ಕೆಎ 10 ಎಫ್ 0492 ನಂಬರ್‌ನ ಸಾರಿಗೆ ಬಸ್ ಮೈಸೂರಿನಿಂದ ಬೆಂಗಳೂರಿಗೆ ಹೊರಟ್ಟಿತ್ತು. ಈ ವೇಳೆ ಬಸ್‍ನಲ್ಲಿ ಫಾಸ್ಟ್ ಟ್ಯಾಗ್ ಇಲ್ಲದ ಕಾರಣ ಶೇಷಗಿರಿಹಳ್ಳಿ ಟೋಲ್ ಸಿಬ್ಬಂದಿ ದುಪ್ಪಟ್ಟು ಹಣ ಕಟ್ಟುವಂತೆ ತಿಳಿಸಿದ್ದಾರೆ. ಆದರೆ ಹಣ ಕಟ್ಟದೇ ಬಸ್ ಚಾಲಕ ಹಾಗೂ ನಿರ್ವಾಹಕ ಒನ್ ವೇಯಲ್ಲೇ ಮೈಸೂರು ಕಡೆಗೆ ಮರಳಿದ್ದಾನೆ. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಜಾರಿಗೆ ಕೌಂಟ್‍ಡೌನ್ – ನೋಂದಣಿ ಪ್ರಕ್ರಿಯೆ ಹೇಗೆ? ಯಾರು ಅರ್ಹರು?
ಟೋಲ್‍ನಿಂದ ಬಿಡದಿಯ ಹನುಮಂತನಗರದವರೆಗೂ ಸುಮಾರು 2 ಕೀ.ಮೀ ಬಸ್ ಒನ್ ವೇಯಲ್ಲೇ ಸಂಚರಿಸಿದೆ. ಬಳಿಕ ಸರ್ವಿಸ್ ರಸ್ತೆಯ ಮೂಲಕ ಬೆಂಗಳೂರಿಗೆ ತೆರಳಿದೆ. ಬಸ್ ಶುಭ ಕಾರ್ಯಕ್ರಮಕ್ಕೆ ತೆರಳಿರುವ ಸಾಧ್ಯತೆಗಳಿದ್ದು, ಬಸ್‍ನ್ನು ಹೂವಿನ ಹಾರಗಳಿಂದ ಸಿಂಗರಿಸುವುದು ವೀಡಿಯೋದಲ್ಲಿ ಕಂಡು ಬಂದಿದೆ.
ಬಸ್ ಒನ್‍ವೇಯಲ್ಲಿ ಸಂಚರಿಸುವ ದೃಶ್ಯ ವಾಹನ ಸವಾರರ ಮೊಬೈಲ್‍ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಜಾಗರೂಕತೆ ತೋರಿಸಿರುವ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಸಾರ್ವಜನಿಕರು ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಬಿಡದಿ ಪೊಲೀಸರು (Bidadi Police) ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: 12 ಜಿಲ್ಲೆಗಳ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ ಅನ್ನ ಭಾಗ್ಯದ ಹಣ
ಬೆಂಗಳೂರು: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಮಾರಾಣಾಂತಿಕ ಹಲ್ಲೆ ಪ್ರಕರಣದಲ್ಲಿ ಬಂಧನವಾಗಿದ್ದ ಶಾಸಕ ಕಂಪ್ಲಿ ಗಣೇಶ್ ಅವರನ್ನು ರಾಮನಗರ ಪೊಲೀಸರು ಅಹಮದಾಬಾದ್‍ನಿಂದ ಬೆಂಗಳೂರಿಗೆ ಕರೆತಂದಿದ್ದಾರೆ.
ಬೆಳಗ್ಗೆ 5:50ಕ್ಕೆ ಅಹಮಾದಾಬಾದ್‍ನಿಂದ ಹೊರಟ ಸ್ಪೈಸ್ ಜೆಟ್ ವಿಮಾನದಲ್ಲಿ ಕಂಪ್ಲಿ ಗಣೇಶ್ ಅವರನ್ನು ಬೆಂಗಳೂರಿಗೆ ಕರೆತರಲಾಯಿತು. ಬಳಿಕ ಏರ್ ಪೋರ್ಟ್‍ನಿಂದ ನೈಸ್ ರೋಡ್ ಮೂಲಕ ರಾಮನಗರ ಪೊಲೀಸರ ತಂಡ ಹಾಗೂ ಬಿಡದಿ ಠಾಣೆಯ ಎಸ್‍ಐ ಹರೀಶ್ ತಂಡದ ನೇತೃತ್ವದಲ್ಲಿ ಬೊಲೆರೋ ಜೀಪ್‍ನಲ್ಲಿ ಶಾಸಕರನ್ನು ಬಿಡದಿ ಠಾಣೆಗೆ ಕರೆದೊಯ್ಯಲಾಯಿತು.
ಆರೋಪಿ ಶಾಸಕರನ್ನು ಮಧ್ಯಾಹ್ನ 3 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದು, 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ಅನುಮತಿ ನೀಡುವಂತೆ ಈಗಾಗಲೇ ಬಿಡದಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಮೊದಲು ಗಣೇಶ್ ಅವರ ಬಂಧನ ಪ್ರಕ್ರಿಯೆ ಮುಗಿಸಿ ಬಳಿಕ ಅವರ ಪ್ರಾಥಮಿಕ ಹೇಳಿಕೆಯನ್ನು ಪೊಲೀಸರು ಪಡೆಯಲಿದ್ದಾರೆ. ಇದನ್ನೂ ಓದಿ: ಬರೋಬ್ಬರಿ ಒಂದು ತಿಂಗ್ಳ ಬಳಿಕ ಶಾಸಕ ಗಣೇಶ್ ಸಿಕ್ಕಿಬಿದ್ದಿದ್ದು ಹೇಗೆ?
ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಬಳಿಕ ಬರೋಬ್ಬರಿ ಒಂದು ತಿಂಗಳು ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಶಾಸಕ ಗಣೇಶ್ ಅವರು ಬುಧವಾರ ಗುಜರಾತ್ ನ ಸೋಮನಾಥ ದೇವಾಲಯದ ಬಳಿ ಬಂಧನವಾಗಿದ್ದರು.
ಎಷ್ಟೇ ಹುಡುಕಾಟ ನಡೆಸಿದರೂ ಒಂದು ತಿಂಗಳಿನಿಂದ ಶಾಸಕ ಗಣೇಶ್ ಅವರು ಪತ್ತೆಯಾಗಿರಲಿಲ್ಲ. ಆದರೆ ಕಳೆದ ವಾರದ ಹಿಂದೆ ಗಣೇಶ್ ತಮ್ಮ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದರು. ಈ ವೇಳೆ ಪತ್ನಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದು ಎಚ್ಚೆತ್ತ ಪೊಲೀಸ್ ತಂಡ ಬುಧವಾರ ಬೆಳಗ್ಗೆ 11.30ರ ವೇಳೆಗೆ ಶಾಸಕರನ್ನು ಬಂಧಿಸಿದೆ.