Tag: bidadi

  • ಹೆಂಡ್ತಿ ಟಾರ್ಚರ್‌ ಕೊಡ್ತಾಳೆ ಅಂತ ವೀಡಿಯೋ ಮಾಡಿ ರೈಲಿಗೆ ತಲೆಕೊಟ್ಟ ನವವಿವಾಹಿತ

    ಹೆಂಡ್ತಿ ಟಾರ್ಚರ್‌ ಕೊಡ್ತಾಳೆ ಅಂತ ವೀಡಿಯೋ ಮಾಡಿ ರೈಲಿಗೆ ತಲೆಕೊಟ್ಟ ನವವಿವಾಹಿತ

    ರಾಮನಗರ: ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಡದಿ (Bidadi) ರೈಲು ನಿಲ್ದಾಣದ ಸಮೀಪ ನಡೆದಿದೆ.

    ಆತ್ಮಹತ್ಯೆಗೆ ಶರಣಾದವನನ್ನು ಹಾರೋಹಳ್ಳಿ ತಾಲೂಕಿನ ಅಣ್ಣೆದೊಡ್ಡಿ ಗ್ರಾಮದ ರೇವಂತ್ ಕುಮಾರ್ (30) ಎಂದು ಗುರುತಿಸಲಾಗಿದೆ. ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡ್ತಿದ್ದ ರೇವಂತ್, ಕಳೆದ ಐದು ತಿಂಗಳ ಹಿಂದಷ್ಟೇ ಮಲ್ಲಿಕಾ ಎಂಬವಳನ್ನು ಮದುವೆಯಾಗಿದ್ದ. ಇನ್ನೂ ಆತ್ಮಹತ್ಯೆಗೂ ಮುನ್ನ ರೇವಂತ್ ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾನೆ. ಇದನ್ನೂ ಓದಿ: ಕುಡಿಯಲು ಹಣ ನೀಡದಕ್ಕೆ ಗೆಳೆಯ ಆತ್ಮಹತ್ಯೆ – ಮೃತಪಟ್ಟಿರೋದು ಕಂಡು ತಾನೂ ನೇಣಿಗೆ ಶರಣಾದ ಲಿವಿನ್ ಗೆಳತಿ

    ವೀಡಿಯೋದಲ್ಲಿ ನನಗೆ ಬದುಕಲು ಆಗ್ತಿಲ್ಲ. ಹೆಂಡತಿಯಿಂದ (Wife) ತುಂಬಾ ಟಾರ್ಚರ್ ಆಗ್ತಿದೆ. ಸಿಕ್ಕಾಪಟ್ಟೆ ಕಿರುಕುಳ ಕೊಡ್ತಿದ್ದಾಳೆ. ನನ್ನ ಸಾವಿಗೆ ಅವಳೇ ಕಾರಣ ಎಂದು ಆರೋಪಿಸಿದ್ದಾನೆ.

    ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಸೈಟ್‌ ಕೊಟ್ರೆ ಮಾತ್ರ ಸಂಸಾರ, ಮಗು ಬೇಕಿದ್ರೆ ಮೈದುನನ ಜೊತೆ ಮಲಗು – ಗಂಡ, ಅತ್ತೆಯ ಟಾರ್ಚರ್‌ಗೆ ಉಪನ್ಯಾಸಕಿ ಆತ್ಮಹತ್ಯೆ

  • ಕಟ್ಟಡ ಕಾರ್ಮಿಕರ ಶೆಡ್‌ನಲ್ಲಿ ಅಗ್ನಿ ಅವಘಡ – ಚಿಕಿತ್ಸೆ ಫಲಿಸದೇ ನಾಲ್ವರು ಸಾವು, ಮೂವರ ಸ್ಥಿತಿ ಗಂಭೀರ

    ಕಟ್ಟಡ ಕಾರ್ಮಿಕರ ಶೆಡ್‌ನಲ್ಲಿ ಅಗ್ನಿ ಅವಘಡ – ಚಿಕಿತ್ಸೆ ಫಲಿಸದೇ ನಾಲ್ವರು ಸಾವು, ಮೂವರ ಸ್ಥಿತಿ ಗಂಭೀರ

    ರಾಮನಗರ: ಬಿಡದಿ (Bidadi) ಸಮೀಪದ ಬೀಮೇನಹಳ್ಳಿ ಬಳಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ (Fire Accident) ಗಾಯಗೊಂಡಿದ್ದ 7 ಕಾರ್ಮಿಕರ ಪೈಕಿ, 4 ಮಂದಿ ಕಾರ್ಮಿಕರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

    ಪಶ್ಚಿಮ ಬಂಗಾಳ ಮೂಲದ ಜಾಯಿದ್ ಅಲಿ, ಶಪೀಜುಲ್ ಶೇಕ್, ಮನ್ರೂಲ್ ಶೇಕ್, ಜಿಯಾಬುರ್ ಶೇಕ್ ಮೃತ ಕಾರ್ಮಿಕರಾಗಿದ್ದಾರೆ. ಮಂಗಳವಾರ (ಅ.7) ಶೆಡ್‌ನಲ್ಲಿ ಗ್ಯಾಸ್ ಲೀಕ್ ಆಗಿ ಈ ಅಗ್ನಿ ಅವಘಡ ಸಂಭವಿಸಿತ್ತು. ಈ ಅವಘಡದಲ್ಲಿ 7 ಮಂದಿಗೆ ಸುಟ್ಟಗಾಯಗಳಾಗಿದ್ದವು. ಗಾಯಾಳುಗಳನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಆಗಿದ್ದ ದರ್ಶನ್ ಸಾಂಗ್ ರಿಲೀಸ್

    ಗಾಯಗೊಂಡ ಮೂವರು ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಘಟನೆಗೆ ಕಟ್ಟಡ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯ ಕಾರಣ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ಸೂಕ್ತ ಪರಿಹಾರಕ್ಕೆ ಒತ್ತಾಯಿಸಿವೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕನಕರಾಜನಾದ ನಟ ಅನೂಪ್ ರೇವಣ್ಣ – ಇದು ಸಿಎಂ ಅಭಿಮಾನಿ ಸ್ಟೋರಿ

  • ತಕ್ಷಣವೇ ಜಾಲಿವುಡ್‌ ಸ್ಟುಡಿಯೋಸ್‌ ಸೀಲ್‌ ತೆಗೆಯಿರಿ: ಬೆ.ದಕ್ಷಿಣ ಡಿಸಿಗೆ ಡಿಕೆಶಿ ಸೂಚನೆ

    ತಕ್ಷಣವೇ ಜಾಲಿವುಡ್‌ ಸ್ಟುಡಿಯೋಸ್‌ ಸೀಲ್‌ ತೆಗೆಯಿರಿ: ಬೆ.ದಕ್ಷಿಣ ಡಿಸಿಗೆ ಡಿಕೆಶಿ ಸೂಚನೆ

    – ಈಗಲ್‌ಟನ್‌ ರೆಸಾರ್ಟ್‌ನಿಂದ ಬಿಗ್‌ಬಾಸ್‌ ಮನೆಗೆ 17 ಸ್ಪರ್ಧಿಗಳು ಇಂದೇ ಶಿಫ್ಟ್‌

    ಜಾಲಿವುಡ್‌ ಬಂದ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಬಿಗ್‌ಬಾಸ್‌ಗೆ ಕೊನೆಗೂ ಗುಡ್‌ನ್ಯೂಸ್‌ ಸಿಕ್ಕಿದೆ. ತಕ್ಷಣವೇ ಜಾಲಿವುಡ್‌ ಸ್ಟುಡಿಯೋಸ್‌ ಸೀಲ್‌ ತೆಗೆಯುವಂತೆ ಬೆಂಗಳೂರು ದಕ್ಷಿಣ ಡಿಸಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ನಿರ್ದೇಶನ ನೀಡಿದ್ದಾರೆ.

    ಡಿಸಿಎಂ ಎಕ್ಸ್‌ ಪೋಸ್ಟ್‌ನಲ್ಲೇನಿದೆ?
    ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಡಿಕೆಶಿ, ಬಿಗ್‌ಬಾಸ್ ಕನ್ನಡ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಆವರಣದ ಸೀಲ್ ಅನ್ನು ತೆಗೆದುಹಾಕಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಾನು ನಿರ್ದೇಶನ ನೀಡಿದ್ದೇನೆ.

    ಪರಿಸರ ಅನುಸರಣೆ ಪ್ರಮುಖ ಆದ್ಯತೆಯಾಗಿ ಉಳಿದಿದ್ದರೂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಲು ಸ್ಟುಡಿಯೋಗೆ ಸಮಯ ನೀಡಲಾಗುವುದು.

    ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ, ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ನಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

  • ಬಿಗ್‌ಬಾಸ್‌ ಸ್ಪರ್ಧಿಗಳು ಈಗಲ್‌ಟನ್‌ ರೆಸಾರ್ಟ್‌ಗೆ ಶಿಫ್ಟ್‌

    ಬಿಗ್‌ಬಾಸ್‌ ಸ್ಪರ್ಧಿಗಳು ಈಗಲ್‌ಟನ್‌ ರೆಸಾರ್ಟ್‌ಗೆ ಶಿಫ್ಟ್‌

    ಬಿಗ್‌ಬಾಸ್‌ ಮನೆಗೆ ಕಂದಾಯ ಇಲಾಖೆ ಅಧಿಕಾರಿಗಳು ಬೀಗ ಹಾಕಿದ ಬಳಿಕ ಸ್ಪರ್ಧಿಗಳನ್ನು ಈಗಲ್‌ಟನ್‌ ರೆಸಾರ್ಟ್‌ ಶಿಫ್ಟ್‌ ಮಾಡಲಾಗಿದೆ.

    ಇನ್ನೋವಾ ಕಾರಿನಲ್ಲಿ ಸ್ಪರ್ಧಿಗಳು ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿದೆ. ಒಂದು ಕಾರಿನಲ್ಲಿ ತಲಾ ಐದು ಮಂದಿ ಪ್ರಯಾಣಿಸಿದರು. ಗೇಟ್ ನಂಬರ್ ಸಿ ಮೂಲಕ ಜಾಲಿವುಡ್ ಸ್ಟುಡಿಯೋದಿಂದ ಆಚೆ ಬಂದ ಬಿಗ್ ಬಾಸ್ ಸ್ಪರ್ಧಿಗಳು ಐದಕ್ಕೂ ಹೆಚ್ಚು ಇನ್ನೋವಾ ಕಾರುಗಳ ಮೂಲಕ ಹೊರಟರು.

    15 ಕ್ಕೂ ಹೆಚ್ಚು ರೂಮ್‌ಗಳನ್ನು ಬಿಗ್‌ಬಾಸ್‌ ಮ್ಯಾನೇಜ್‌ಮೆಂಟ್‌ ಬುಕ್‌ ಮಾಡಿದೆ. ಸ್ಪರ್ಧಿಗಳು, ಟೆಕ್ನಿಷಿಯನ್‌ಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

  • ಬಿಗ್‌ಬಾಸ್‌ ಶೋ ಬಂದ್‌ – ರಾತ್ರೋರಾತ್ರಿ ಮನೆಯಿಂದ ಎಲ್ಲಾ ಸ್ಪರ್ಧಿಗಳು ಹೊರಕ್ಕೆ

    ಬಿಗ್‌ಬಾಸ್‌ ಶೋ ಬಂದ್‌ – ರಾತ್ರೋರಾತ್ರಿ ಮನೆಯಿಂದ ಎಲ್ಲಾ ಸ್ಪರ್ಧಿಗಳು ಹೊರಕ್ಕೆ

    ರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್‌ ಸ್ಟುಡಿಯೋಸ್‌ಗೆ ಬೀಗ ಬಿದ್ದಿದ್ದು, ಅಲ್ಲೇ ನಡೆಯುವ ಬಿಗ್‌ಬಾಸ್‌ ಶೋ ಕೂಡ ಬಂದ್‌ ಆಗಿದೆ. ಬಿಗ್‌ಬಾಸ್‌ ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದಾರೆ.

    ಅಧಿಕೃತವಾಗಿ ಬಿಗ್‌ಬಾಸ್‌ ಮನೆಗೆ ಬೀಗ ಹಾಕಲಾಗಿದೆ. ಸ್ಪರ್ಧೆಯಲ್ಲಿದ್ದ ಎಲ್ಲರನ್ನೂ ರಾತ್ರಿ ಮನೆಯಿಂದ ಹೊರಹಾಕಲಾಗಿದೆ. ಸ್ವತಃ ತಹಶೀಲ್ದಾರ್‌ ತೇಜಸ್ವಿನಿಯವರು ಮುಂದೆ ನಿಂತು ಸ್ಪರ್ಧಿಗಳು ಹೊರಗೆ ಕರೆತಂದಿದ್ದಾರೆ.

    ಬಿಗ್‌ಬಾಸ್‌ ದಿಢೀರ್‌ ಸ್ಥಗಿತದಿಂದ ಸ್ಪರ್ಧಿಗಳು, ತಂತ್ರಜ್ಞರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಮನೆಗೆ ವಾಪಸ್‌ ಆಗುವಂತಾಗಿದೆ. ಆರು ತಿಂಗಳ ಕಾಲ ಮೂರು ಶಿಫ್ಟ್‌ನಲ್ಲಿ ತಂತ್ರಜ್ಞರು ಕೆಲಸ ಮಾಡುತ್ತಿದ್ದರು.

    ಐದು ಕೋಟಿಗೂ ಅಧಿಕ ವೆಚ್ಚದಲ್ಲಿ ಬಿಗ್‌ ಬಾಸ್‌ ಮನೆ ನಿರ್ಮಾಣವಾಗಿತ್ತು. ಈಗ ತಾತ್ಕಾಲಿಕವಾಗಿ ಅನಾಥವಾಗಲಿದೆ. ಅರಮನೆ ವಿನ್ಯಾಸದಲ್ಲಿ ಬಿಗ್‌ ಬಾಸ್‌ ಮನೆಯನ್ನು ನಿರ್ಮಿಸಲಾಗಿತ್ತು. ಕಿಚ್ಚ ಸುದೀಪ್‌ ಆಶಯದಂತೆ ಇದೇ ಮೊದಲ ಬಾರಿಗೆ ಅದ್ಧೂರಿಯಾಗಿ ಮನೆ ನಿರ್ಮಾಣಗೊಂಡಿತ್ತು.

  • ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ಗೆ ನೋಟಿಸ್ -‌ ಬಿಗ್‌ ಬಾಸ್‌ ಮನೆಗೆ ಬೀಳುತ್ತಾ ಬೀಗ?

    ಜಾಲಿವುಡ್‌ ಸ್ಟುಡಿಯೋಸ್‌ ಬಂದ್‌ಗೆ ನೋಟಿಸ್ -‌ ಬಿಗ್‌ ಬಾಸ್‌ ಮನೆಗೆ ಬೀಳುತ್ತಾ ಬೀಗ?

    – ಅರಣ್ಯ ಸಚಿವ ಈಶ್ವರ ಖಂಡ್ರೆ ಸಮರ್ಥನೆ ಏನು?

    ರಾಮನಗರ: ಜಿಲ್ಲೆಯ ಬಿಡದಿ (Bidadi) ಬಳಿಯಿರುವ ವೆಲ್ಸ್ ಸ್ಟುಡಿಯೋಸ್ & ಎಂಟರ್‌ಟೈನ್ಮೆಂಟ್ ಪ್ರೈ.ಲಿ. (Jollywood Studios) ಜಲ ಕಾಯಿದೆ, ವಾಯು ಕಾಯಿದೆಯಡಿ ಅನುಮತಿ ಪಡೆಯದೆ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

    ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಗ್ ಬಾಸ್ (Bigg Boss Kannada 12) ಕಾರ್ಯಕ್ರಮ ನಡೆಯುತ್ತಿರುವ ಸ್ಟುಡಿಯೋಗೆ ನೋಟಿಸ್ ನೀಡಿರುವ ವಿಚಾರ ತಿಳಿಯಿತು. ಈ ಬಗ್ಗೆ ಮಾಹಿತಿ ಪಡೆದಾಗ, ರಾಮನಗರ ಪ್ರಾದೇಶಿಕ ಕಚೇರಿಯಿಂದ 2024ರಲ್ಲೇ 2 ಬಾರಿ ನೋಟಿಸ್ ನೀಡಿದ್ದರೂ ಅನುಪಾಲನೆ ಮಾಡಿದ ಕಾರಣ ಈ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: ಅಕ್ಕ, ಬಾವನ ಜೊತೆ ಗಲಾಟೆ – ಬಿಗ್‌ ಬಾಸ್‌ ರಂಜಿತ್‌ ಮೇಲೆ ದೂರು ದಾಖಲು

    ಇಲ್ಲಿ ಎಸ್‌ಟಿಪಿ ಕಾರ್ಯನಿರ್ವಹಣೆ ಸೇರಿದಂತೆ ಸಮರ್ಪಕವಾಗಿ ತಾಜ್ಯ ವಿಲೇವಾರಿ ಆಗುತ್ತಿಲ್ಲ. ಜನರೇಟರ್ ಸೆಟ್‌ಗಳಿದ್ದು, ಅದಕ್ಕೂ ಅನುಮತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹೀಗಾಗಿ, ಮಂಡಳಿ ಕ್ರಮ ಕೈಗೊಂಡಿದೆ ಎಂದು ಹೇಳಿದರು.

  • ಬಿಡದಿಯ ಕೇತಗಾನಹಳ್ಳಿ‌ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ – ಹೆಚ್‌ಡಿಕೆಗೆ ಹೈಕೋರ್ಟ್ ಶಾಕ್

    ಬಿಡದಿಯ ಕೇತಗಾನಹಳ್ಳಿ‌ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ – ಹೆಚ್‌ಡಿಕೆಗೆ ಹೈಕೋರ್ಟ್ ಶಾಕ್

    ಬೆಂಗಳೂರು: ಬಿಡದಿಯ ಕೇತಗಾನಹಳ್ಳಿ‌ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ (H.D.Kumaraswamy) ಹೈಕೋರ್ಟ್ ಶಾಕ್ ಕೊಟ್ಟಿದೆ.

    ಎಸ್‌ಐಟಿ ರಚನೆಗೆ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿತ್ತು. ಈ ಆದೇಶಕ್ಕೆ ಸಿಜೆ ವಿಭು ಬಖ್ರು, ನ್ಯಾ.ಸಿ.ಎಂ.ಜೋಷಿ ಅವರಿದ್ದ ಪೀಠ ಮಧ್ಯಂತರ ತಡೆ ನೀಡಿದೆ. ನವೆಂಬರ್ 26 ರವರೆಗೆ ಏಕಸದಸ್ಯ ಪೀಠದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಇದನ್ನೂ ಓದಿ: ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣ – ಹೆಚ್‌ಡಿಕೆಗೆ ಬಿಗ್ ರಿಲೀಫ್

    ಜಮೀನು ಒತ್ತುವರಿ ಆರೋಪ ಪ್ರಕರಣ ಸಂಬಂಧ ಎಸ್ಐಟಿ ರಚನೆಗೆ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿತ್ತು. ಪೀಠದ ಆದೇಶ ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

    6 ಎಕರೆ ಒತ್ತುವರಿ ತೆರವಿಗೆ ಸರ್ಕಾರ ಕ್ರಮ ಕೈಗೊಂಡಿದೆ. ದಾಖಲೆಗಳನ್ನು ಹಾಜರುಪಡಿಸುವಂತೆ ಎಸ್ಐಟಿ ನೋಟಿಸ್ ಜಾರಿಗೊಳಿಸಿದೆ. ಆದರೆ, ಎಸ್ಐಟಿ ರಚನೆಗೆ ಏಕಸದಸ್ಯ ಪೀಠ ತಡೆ ನೀಡಿದೆ. ಹೀಗಾಗಿ, ತಡೆಯಾಜ್ಞೆ ತೆರವಿಗೆ ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು.

    ಈಗ ಹೈಕೋರ್ಟ್ ಆದೇಶದಿಂದ ಎಸ್ಐಟಿ ತನಿಖೆ ಮುಂದುವರಿಯಲಿದೆ. ಇದನ್ನೂ ಓದಿ: ಕೇತಗಾನಹಳ್ಳಿ‌ ಸರ್ಕಾರಿ ಜಮೀನು ಒತ್ತುವರಿ ಪ್ರಕರಣ; ಹೆಚ್‌ಡಿಕೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದ ಸುಪ್ರೀಂ

  • ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣ – ಹೆಚ್‌ಡಿಕೆಗೆ ಬಿಗ್ ರಿಲೀಫ್

    ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣ – ಹೆಚ್‌ಡಿಕೆಗೆ ಬಿಗ್ ರಿಲೀಫ್

    ಬೆಂಗಳೂರು: ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣದಲ್ಲಿ(Kethaganahalli Land Encroachment Case) ಕೇಂದ್ರ ಭಾರೀ ಕೈಗಾರಿಕಾ ಸಚಿವ ಕುಮಾರಸ್ವಾಮಿಗೆ (HD Kumaraswamy) ಹೈಕೋರ್ಟ್‌ನಿಂದ (High Court) ಬಿಗ್ ರಿಲೀಫ್ ಸಿಕ್ಕಿದೆ.

    ಬಿಡದಿಯ ಕೇತಗಾನಹಳ್ಳಿ ಬಳಿಯ ಸರ್ವೆ ನಂಬರ್ 7,8,9 ರ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡ ತನಿಖೆಗೆ ಎಸ್‌ಐಟಿ ರಚನೆ ಮಾಡಿತ್ತು.  ಇದನ್ನೂ ಓದಿ: Thug Life | ಹಿಂಸಾಚಾರ, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಯಾಕಿಲ್ಲ – ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

     

    ಎಸ್‌ಐಟಿ ರಚನೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಕುಮಾರಸ್ವಾಮಿ ಪರ ವಕೀಲರಾದ ಉದಯ್ ಹೊಳ್ಳ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಸಂದರ್ಭದಲ್ಲಿ ಔಪಚಾರಿಕವಾಗಿ ಯಾವುದೇ ತೆರನಾದ ಅಧಿಸೂಚನೆಯನ್ನು ಪ್ರಕಟಿಸಿಲ್ಲ ಎಂದು ಮಂಡಿಸಿದರು. ಇದನ್ನೂ ಓದಿ: ಬೆಂಗಳೂರು | ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಅಕ್ಷಯ್ ಸಾವು

    ವಾದ ಪುರಸ್ಕರಿಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ. ಜೊತೆಗೆ ಎಸ್‌ಐಟಿ ರಚನೆಯ ಬಳಿಕ ಕುಮಾರಸ್ವಾಮಿಗೆ ನೀಡಿದ್ದ ಸಮನ್ಸ್ ಅನ್ನು ಕೂಡ ತಡೆ ಹಿಡಿದಿದ್ದು, ರಾಮನಗರ ಜಿಲ್ಲಾಧಿಕಾರಿ ಮತ್ತು ತಹಸಿಲ್ದಾರ್‌ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

  • Ramanagara | ಹತ್ಯೆಯಾದ ಅಪ್ರಾಪ್ತ ಬಾಲಕಿ ಮನೆಗೆ ಸಂಸದ ಡಾ.ಮಂಜುನಾಥ್ ಭೇಟಿ, ಸಾಂತ್ವನ

    Ramanagara | ಹತ್ಯೆಯಾದ ಅಪ್ರಾಪ್ತ ಬಾಲಕಿ ಮನೆಗೆ ಸಂಸದ ಡಾ.ಮಂಜುನಾಥ್ ಭೇಟಿ, ಸಾಂತ್ವನ

    ರಾಮನಗರ: ಬಿಡದಿಯ (Bidadi) ಭದ್ರಾಪುರ (Bhadrapura) ಗ್ರಾಮದ ಅಪ್ರಾಪ್ತ ಬಾಲಕಿ ಹತ್ಯೆ ಪ್ರಕರಣ ಹಿನ್ನೆಲೆ ಇಂದು ಭದ್ರಾಪುರ ಗ್ರಾಮಕ್ಕೆ ಸಂಸದ ಡಾ.ಮಂಜುನಾಥ್ ಭೇಟಿ ನೀಡಿ ಮೃತ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

    ಮೃತ ಬಾಲಕಿ ತಾಯಿಗೆ ಧೈರ್ಯ ತುಂಬಿದ ಸಂಸದರು, ಘಟನೆ ಕುರಿತು ಪೊಲೀಸರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ. ವಿಕಲಚೇತನ ಬಾಲಕಿ ಹತ್ಯೆಗೆ ವಿಷಾದ ವ್ಯಕ್ತಪಡಿಸಿದ ಸಂಸದರು, ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಇದನ್ನೂ ಓದಿ: 13 ಎಟಿಎಂ ದೋಚಿದ್ದ ಖದೀಮನಿಗೆ ಪೊಲೀಸರಿಂದ ಗುಂಡೇಟು

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 14 ವರ್ಷದ ಬಾಲಕಿಯನ್ನ ಹತ್ಯೆ ಮಾಡಿರೋದು ವಿಕೃತಿ. ಯಾವ ಕಾರಣಕ್ಕೆ ಹತ್ಯೆಯಾಗಿದೆ ಎಂಬುದು ಮರಣೋತ್ತರ ವರದಿ ಹಾಗೂ ಎಫ್‌ಎಸ್‌ಎಲ್ ವರದಿಯಲ್ಲಿ ಬಹಿರಂಗವಾಗಬೇಕಿದೆ. ಈಗಾಗಲೇ ಎರಡು-ಮೂರು ತಂಡಗಳ ರಚನೆ ಮಾಡಿಕೊಂಡು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಬಾಲಕಿ ಸಾವಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು. ಗ್ರಾಮಕ್ಕೆ ಕೆಲ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಅದನ್ನೂ ಸರಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ತಿಳಿಸಿದರು. ಇದನ್ನೂ ಓದಿ: ಆಂಧ್ರ ಪ್ರದೇಶ ಬಹುಕೋಟಿ ಅಬಕಾರಿ ಹಗರಣ – ಪ್ರಮುಖ ಆರೋಪಿ ಬಾಲಾಜಿ ಗೋವಿಂದಪ್ಪ ಎಸ್‌ಐಟಿ ವಶಕ್ಕೆ

  • ಭದ್ರಾಪುರದಲ್ಲಿ ಹತ್ಯೆಯಾದ ಬಾಲಕಿ ಮನೆಗೆ ಡಿಕೆಶಿ ಭೇಟಿ – ಪರಿಹಾರ ಚೆಕ್ ವಿತರಣೆ

    ಭದ್ರಾಪುರದಲ್ಲಿ ಹತ್ಯೆಯಾದ ಬಾಲಕಿ ಮನೆಗೆ ಡಿಕೆಶಿ ಭೇಟಿ – ಪರಿಹಾರ ಚೆಕ್ ವಿತರಣೆ

    – ಪೋಷಕರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ಡಿಸಿಎಂ

    ರಾಮನಗರ: ಬಿಡದಿ ಹೋಬಳಿಯ ಭದ್ರಾಪುರ (Bhadrapura) ಗ್ರಾಮದ ಅಪ್ರಾಪ್ತ ಬಾಲಕಿ ಖುಷಿ ಹತ್ಯೆಯ ಹಿನ್ನೆಲೆ ಭದ್ರಾಪುರ ಗ್ರಾಮಕ್ಕೆ ಇಂದು ಡಿಸಿಎಂ ಡಿಕೆಶಿ (DK Shivakumar) ಭೇಟಿ ನೀಡಿ ಮೃತ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

    ಬಳಿಕ ಜಿಲ್ಲಾಡಳಿತ ಪರವಾಗಿ 4.12 ಲಕ್ಷ ರೂ. ಹಾಗೂ ಗ್ರಾ.ಪಂ ವತಿಯಿಂದ 50,000 ರೂ. ಪರಿಹಾರ ಚೆಕ್ ವಿತರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಯಾರ ಒತ್ತಡಕ್ಕೂ ಒಳಗಾಗದೆ ನ್ಯಾಯಪರ, ನಿಷ್ಠುರವಾಗಿ ತನಿಖೆ ನಡೆಯಲಿದೆ. ಯಾರ ಮೇಲಾದರೂ ಅನುಮಾನವಿದೆಯೇ ಎಂದು ಬಾಲಕಿಯ ಕುಟುಂಬಸ್ಥರ ಬಳಿ ಕೇಳಿದೆ. ಅವರು ಇಲ್ಲ ಎಂದು ಹೇಳುತ್ತಿದ್ದಾರೆ. ತನಿಖೆ ಮಾಡುವುದು ಪೊಲೀಸ್ ಇಲಾಖೆ ಕರ್ತವ್ಯ ಎಂದರು. ಇದನ್ನೂ ಓದಿ: ಡ್ರೋನ್‌ಗಳನ್ನು ಧ್ವಂಸ ಮಾಡೋ ಭಾರ್ಗವಾಸ್ತ್ರ ಪ್ರಯೋಗ ಯಶಸ್ವಿ!

    ಎಲ್ಲಾ ಆಯಾಮದಲ್ಲಿಯೂ ಪೊಲೀಸರು ತನಿಖೆ ಮಾಡಲಿದ್ದಾರೆ. ದ್ವೇಷದಿಂದ ನಡೆದಿದೆಯೇ? ಅತ್ಯಾಚಾರವಾಗಿದೆಯೇ? ಏನಾದರೂ ಬೇರೆ ಕಾರಣ ಇದೆಯೇ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ನ್ಯಾಯ ಒದಗಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು. ಇದನ್ನೂ ಓದಿ: ಜಪಾನ್ ಕಾನ್ಸುಲ್ ಜನರಲ್ ಜೊತೆ ಸಚಿವ ಶರಣ ಪ್ರಕಾಶ್ ಪಾಟೀಲ್ ಚರ್ಚೆ