Tag: bicchi giligili 2

  • `ಅವತಾರ್ ಲುಕ್‌ನಲ್ಲಿ ಮಿಂಚಿದ ನಿವೇದಿತಾ ಗೌಡ

    `ಅವತಾರ್ ಲುಕ್‌ನಲ್ಲಿ ಮಿಂಚಿದ ನಿವೇದಿತಾ ಗೌಡ

    `ಬಿಗ್ ಬಾಸ್’ (Bigg Boss) ಮತ್ತು `ಗಿಚ್ಚಿ ಗಿಲಿಗಿಲಿ’ (Gichchi Giligili) ಶೋ ಮೂಲ ಮನೆಮಾತಾದ ನಟಿ ನಿವೇದಿತಾ ಮತ್ತೆ ಸುದ್ದಿಯಲ್ಲಿದ್ದಾರೆ. `ಅವತಾರ್’ (Avatar) ಸಿನಿಮಾದ ಲುಕ್‌ನಿಂದ ನಿವೇದಿತಾ ಎಂಟ್ರಿ ಕೊಟ್ಟಿರುವ ಫೋಟೋ ಮತ್ತು ವೀಡಿಯೋ ಸಾಮಾಜಿಕ ಸದ್ದು ಮಾಡ್ತಿದೆ.

    ಸೋಷಿಯಲ್ ಮೀಡಿಯಾ ಸೆನ್ಸೆಷನಲ್ ಆಗಿರುವ ನಿವೇದಿತಾ ಗೌಡ (Niveditha Gowda) ಸದಾ ಸುದ್ದಿರುತ್ತಾರೆ. ಕಳೆದ ಬಾರಿ ನ್ಯೂಸ್ ಪೇಪರ್ ಅನ್ನೇ ಡ್ರೆಸ್ ಮಾಡಿಕೊಂಡಿದ್ದ ನಟಿ ಈಗ ಅವತಾರ್ ಲುಕ್ ಮೂಲಕ ಹೊಸ ಅವತಾರವೆತ್ತಿದ್ದಾರೆ. ಇದನ್ನೂ ಓದಿ: ಗಾಯಕಿ ವಾಣಿ ಜಯರಾಮ್ ನಿಗೂಢ ಸಾವು : ಮರಣೋತ್ತರ ವರದಿಯಲ್ಲೇನಿದೆ?

    ವಿನೋದ್ ಗೊಬ್ಬರಗಾಲ (Vinod Gobbaragala)  ಜೊತೆ ನಿವೇದಿತಾ, ಅವತಾರ್ ಲುಕ್ ಮೂಲಕ ಗಿಚ್ಚಿ ಗಿಲಿಗಿಲಿ-2 ಶೋನಲ್ಲಿ ಕಾಮಿಡಿ ಪ್ರೇಮ ಕಥೆ ಮೂಲಕ ಕಮಾಲ್ ಮಾಡಿದ್ದಾರೆ. ಫೆ.5ರಂದು ಈ ಏಪಿಸೋಡ್ ಪ್ರಸಾರ ಕೂಡ ಆಗಿದೆ. ನಿವಿ ನಟನೆ ಜಡ್ಜ್‌, ಪ್ರೇಕ್ಷಕರಿಗೆ ಇಷ್ಟವಾಗಿದೆ.

    `ಅವತಾರ್’ ಲುಕ್ ತುಂಬಾ ಮುದ್ದಾಗಿ ಕಾಣಿಸಿಕೊಂಡಿರುವ ನಿವೇದಿತಾ ಅವರ ತೆರೆಹಿಂದಿನ ತಯಾರಿ ಹೇಗಿತ್ತು ಎಂಬುದರ ಝಲಕ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಿವಿ ಪ್ರಯತ್ನಕ್ಕೆ ನೆಟ್ಟಿಗರು ಕೂಡ ಭೇಷ್ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k