Tag: BIAL

  • ಬೆಂಗಳೂರು ಏರ್‌ಪೋರ್ಟ್ ಸಿಟಿಯಲ್ಲಿ ‘ಬಿಸಿನೆಸ್ ಪಾರ್ಕ್’ ತೆರೆಯಲು ಮೊದಲ ಹೆಜ್ಜೆ ಇಟ್ಟ BACL

    ಬೆಂಗಳೂರು ಏರ್‌ಪೋರ್ಟ್ ಸಿಟಿಯಲ್ಲಿ ‘ಬಿಸಿನೆಸ್ ಪಾರ್ಕ್’ ತೆರೆಯಲು ಮೊದಲ ಹೆಜ್ಜೆ ಇಟ್ಟ BACL

    ಬೆಂಗಳೂರು: ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (BIAL) ಅಂಗಸಂಸ್ಥೆಯಾದ ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್‌ನ (BACL) ಮಹತ್ವಾಕಾಂಕ್ಷಿ ಯೋಜನೆಯಾದ ‘ಬಿಸಿನೆಸ್ ಪಾರ್ಕ್’ ತೆರೆಯಲು 2 ದಶಲಕ್ಷ ಚದರ ಅಡಿ ಪ್ರದೇಶವನ್ನು ತನ್ನದಾಗಿಸಿಕೊಳ್ಳುವ ಮೂಲಕ ಈ ಯೋಜನೆಯತ್ತ ತನ್ನ ಮೊದಲ ಹೆಜ್ಜೆಯನ್ನು ಇಟ್ಟಿದೆ.

    ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲೇ (ಗ್ಲೋಬಲ್ ಕೆಪ್ಯಾಸಿಟಿ ಸೆಂಟರ್,ಜಿಸಿಸಿ) ಬೆಂಗಳೂರನ್ನು ಜಾಗತಿಕ ಕೇಂದ್ರವನ್ನಾಗಿಸುವ ಗುರಿಯನ್ನು ಹೊಂದಲಾಗಿದ್ದು, ಇದರ ಭಾಗವಾಗಿ ಬೃಹತ್ ಬಿಸಿನೆಸ್ ಪಾರ್ಕ್ ತೆರೆಯಲಾಗುತ್ತಿದೆ. ಇದರಿಂದ ಒಟ್ಟು 3.5 ಲಕ್ಷ ಉದ್ಯೋಗ ಸೃಷ್ಟಿಗೆ ಹಾಗೂ ಆರ್ಥಿಕತೆಗೆ 50 ಶತಕೋಟಿ ಡಾಲರ್ ಕೊಡುಗೆ ನೀಡಲಿದೆ.

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (BLR ವಿಮಾನ ನಿಲ್ದಾಣ) ಆವರಣದಲ್ಲಿರುವ ಬೆಂಗಳೂರು ವಿಮಾನ ನಿಲ್ದಾಣ ನಗರವನ್ನು ವಿಶ್ವ ದರ್ಜೆಯ ಮಿಶ್ರ-ಬಳಕೆಯ ತಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ವಿಮಾನ ನಿಲ್ದಾಣ ನಗರದಲ್ಲಿ ಪ್ರಮುಖವಾಗಿ ವ್ಯಾಪಾರ, ಉದ್ಯಾನವನಗಳು, ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳು, ಸಂಶೋಧನೆ ಮತ್ತು ಅಭಿವೃದ್ಧಿ (ಆರ್&ಡಿ) ಕೇಂದ್ರಗಳು ಮತ್ತು ವಿವಿಧ ಮನರಂಜನಾ ಹಾಗೂ ಆತಿಥ್ಯ ತಾಣಗಳು ತಲೆಯೆತ್ತಲಿದೆ. ಈ ನಗರವು ಸುಸ್ಥಿರ, ಸ್ಮಾರ್ಟ್, ಆಕರ್ಷಕ ನಗರಾಭಿವೃದ್ಧಿಯಿಂದ ಅಂತಾರಾಷ್ಟ್ರೀಯ ಹೆಬ್ಬಾಗಿಲಾಗಿ ಈ ನಗರ ಕಾರ್ಯನಿರ್ವಹಿಸಲು ಸಿದ್ಧವಾಗುತ್ತಿದೆ.

    ಈ ಬಿಸಿನೆಸ್ ಪಾರ್ಕ್ ಅನ್ನು 17.7 ಎಕರೆಗಳಲ್ಲಿ ನಿರ್ಮಿಸಲಾಗುತ್ತಿರುವ ಈ ಬಿಸಿನೆಸ್ ಪಾರ್ಕ್, ನಾಲ್ಕು ಬ್ಲಾಕ್‌ಗಳನ್ನು ಒಳಗೊಂಡಿದ್ದು, ಪ್ರತಿ ಬ್ಲಾಕ್ 0.5 ಮಿಲಿಯನ್ ಚದರ ಅಡಿ ನಗರ ಅರಣ್ಯದೊಳಗೆ ಮೂಡಿಬರಲಿದೆ. ಬಯೋಫಿಲಿಕ್ ವಿನ್ಯಾಸವು ಸೊಂಪಾದ ಉದ್ಯಾನಗಳು, ಬಾಲ್ಕನಿಗಳು ಮತ್ತು ಹಸಿರಿನಿಂದ ಕೂಡಿರುವ ಸ್ಥಳಗಳನ್ನು ಒಳಗೊಂಡಿದ್ದು, ಈ ಮೂಲಕ ವ್ಯಾಪಾರ ವಹಿವಾಟನ್ನು ಇನ್ನಷ್ಟು ಆಸಕ್ತಿದಾಯಗೊಳಿಸುವ ಉದ್ದೇಶವನ್ನು ಹೊಂದಿದೆ.

    ಬಿಎಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ರಾವ್ ಮುನುಕುಟ್ಲ ಮಾತನಾಡಿ, ಬೆಂಗಳೂರು ವಿಶ್ವದ ಜಿಸಿಸಿ ರಾಜಧಾನಿಯಾಗಿ ಬೆಳೆಯುತ್ತಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಾಹನ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಶೇ.36ರಷ್ಟು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (ಜಿಸಿಸಿಎಸ್) ಬೆಂಗಳೂರು ಭಾರತದ ಪ್ರಧಾನ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಬೆಂಗಳೂರು ಏರ್‌ಪೋರ್ಟ್ ಸಿಟಿಯಲ್ಲಿರುವ 2 ಮಿಲಿಯನ್ ಚದರ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬಿಸಿನೆಸ್ ಪಾರ್ಕ್ ಸಾಕಷ್ಟು ನೆಟ್‌ವರ್ಕಿಂಗ್ ಅವಕಾಶಗಳು, ಸುಧಾರಿತ ಮೂಲಸೌಕರ್ಯಗಳು ಹಾಗೂ ಉನ್ನತ ದರ್ಜೆಯ ಸೌಕರ್ಯಗಳೊಂದಿಗೆ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.

    ಈ ನಮ್ಮ ಯೋಜನೆಯು ಕರ್ನಾಟಕ ರಾಜ್ಯದ ಪ್ರಸ್ತುತ ಜಿಸಿಸಿ ನೀತಿಯೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ಮೂಲಕ, ಬೆಂಗಳೂರನ್ನು ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಕೇಂದ್ರಬಿಂದುವಾಗಿಸಲಿದೆ. ವಿಮಾನ ನಿಲ್ದಾಣ ನಗರದ ಒಟ್ಟಾರೆ ಅಭಿವೃದ್ಧಿಯ ಶೇ.52 ರಷ್ಟು ಭಾಗವು ವ್ಯಾಪಾರ ಉದ್ಯಾನವನಗಳ (ಬಿಸಿನೆಸ್ ಪಾರ್ಕ್) ಜಾಲವನ್ನು ಹೊಂದಲಿದ್ದು, ಸಹಯೋಗ ಹಾಗೂ ನಾವಿನ್ಯತೆಗೆ ಪ್ರೋತ್ಸಾಹಕೊಡಲಿದೆ. ಮುಂದಿನ ದಿನಗಳಲ್ಲಿ ತಲೆ ಎತ್ತಲಿರುವ ಏರ್‌ಪೋರ್ಟ್ ವೆಸ್ಟ್ ಮೆಟ್ರೋ ನಿಲ್ದಾಣವು ಈ ಬಿಸಿನೆಸ್‌ನ ಅತಿ ಸಮೀಪದಲ್ಲಿದ್ದು, ಬೆಂಗಳೂರಿನ ಸಿಟಿ ಸೆಂಟರ್‌ಗೆ ಸಂಪರ್ಕವನ್ನು ಕಲ್ಪಿಸಲಿದೆ. ಇದರಿಂದ ಉದ್ಯೋಗಿಗಳು, ಸಂದರ್ಶಕರಿಗೂ ಸಹ ವೇಗ ಮತ್ತು ಪರಿಸರ ಸ್ನೇಹಿ ಪ್ರಯಾಣವನ್ನು ಒದಗಿಸಲಿದೆ. ಬೆಂಗಳೂರು ವಿಮಾನ ನಿಲ್ದಾಣ ನಗರವು ಸುಧಾರಿತ ತಂತ್ರಜ್ಞಾನ ಕೇಂದ್ರವನ್ನು ರೂಪಿಸುತ್ತಿದ್ದು, ಇದರಲ್ಲಿ 3ಡಿ ಮುದ್ರಣ ಸಂಸ್ಥೆ ಮತ್ತು ಹೈಟೆಕ್ ಕೇಂದ್ರ ಪಾಕಶಾಲೆಗಳು ಸೇರಿದಂತೆ ಹಲವು ನಾವಿನ್ಯತೆಯ ಕೇಂದ್ರಬಿಂದುವಾಗಿರಲಿದೆ ಎಂದರು.

    ಈ ನಗರದಲ್ಲಿ ಮನರಂಜನೆ ಮತ್ತು ಆತಿಥ್ಯ ತಾಣಗಳು ತಲೆ ಎತ್ತುತ್ತಿದ್ದು, ವಿಮಾನ ನಿಲ್ದಾಣ ಪರಿಸರ ವ್ಯವಸ್ಥೆಯಲ್ಲಿ ಭಾರತದ ಪ್ರಪ್ರಥಮ ಕನ್ಸರ್ಟ್ ಅರೆನಾ, ಸಮಾವೇಶ ಮತ್ತು ಪ್ರದರ್ಶನ ಕೇಂದ್ರಗಳನ್ನು ಸಹ ಈ ಯೋಜನೆ ಒಳಗೊಂಡಿದೆ. ಈಗಾಗಲೇ ಏರ್‌ಪೋರ್ಟ್ ಆವರಣದಲ್ಲಿರುವ ಹೋಟೆಲ್ ತಾಜ್ ಬೆಂಗಳೂರು ಮತ್ತು ಪ್ರಸ್ತುತ ನಿರ್ಮಾಣ ಹಂತದಲ್ಲಿರುವ 775 ಕೊಠಡಿಗಳ ಕಾಂಬೋ ಹೋಟೆಲ್ (ವಿವಾಂಟಾ&ಜಿಂಜರ್) ಸೇರಿದಂತೆ ಏರ್‌ಪೋರ್ಟ್ ಸಿಟಿಯೊಳಗೆ 5,200 ಹೋಟೆಲ್ ಕೊಠಡಿಗಳನ್ನು ಒಳಗೊಂಡು ಬೃಹತ್ ಆತಿಥ್ಯ ತಾಣವಾಗಿ ಹೊರಹೊಮ್ಮಲಿದೆ.

    ಏರ್‌ಪೋರ್ಟ್ ಸಿಟಿಯು ಅದ್ಭುತ ವಿನ್ಯಾಸದಿಂದ ರೂಪುಗೊಳ್ಳುತ್ತಿದ್ದು, ಇಡೀ ಆವರಣ ಶಕ್ತಿ-ತಟಸ್ಥವಾಗಿ ಕಾರ್ಯನಿರ್ವಹಿಸಿ, ನವೀಕರಿಸಬಹುದಾದ ಸಂಪನ್ಮೂಲಗಳಿಂದ ನಿರ್ಮಾಣಗೊಳ್ಳುತ್ತಿದ್ದು, ಐಜಿಬಿಸಿಯ ಗ್ರೀನ್ ಸಿಟಿಸ್ ಪ್ಲಾಟಿನಂ ಪ್ರಮಾಣೀಕರಣವನ್ನು ಗಳಿಸಿದೆ. ಅಷ್ಟೇ ಅಲ್ಲದೆ ಬೃಹತ್ ಪ್ರಮಾಣದಲ್ಲಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಲಾಗುತ್ತಿದ್ದು, ಇದರಿಂದ ವಿಮಾನ ನಿಲ್ದಾಣ ನಗರದ ನೀರಿನ ಅಗತ್ಯಗಳನ್ನು ಪೂರೈಸಲಿದೆ. ಈ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯ ಪರಿಸರ ಸ್ನೇಹಿ, ಸುಸ್ಥಿರ ಅಭಿವೃದ್ಧಿ ಮಾರ್ಗದರ್ಶನದ ಜವಾಬ್ದಾರಿ ನಿರ್ವಹಣೆಯ ಧ್ಯೇಯದೊಂದಿಗೆ ಹೊಂದಿಸಲಾಗಿದೆ.

    ಇನ್ನು ಬೆಂಗಳೂರು ವಿಮಾನ ನಿಲ್ದಾಣ ನಗರವು ಅತಿ ನಿರೀಕ್ಷಿತ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸುತ್ತಿದೆ. ಇದಕ್ಕಾಗಿ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಆಕರ್ಷಿಸುತ್ತಿದ್ದು, ಇದು ರಾಜ್ಯದ ಶೈಕ್ಷಣಿಕ ಮತ್ತು ಆರೋಗ್ಯ ಮೂಲಸೌಕರ್ಯವನ್ನು ಉನ್ನತೀಕರಿಸಲು ಲೈಫ್ ಸೈನ್ಸಸ್ ಪಾರ್ಕ್ ಅನ್ನು ಸ್ಥಾಪಿಸುತ್ತಿದೆ. ಬಿಐಎಎಲ್ ಅಕಾಡೆಮಿ ಮತ್ತು ಏರ್ ಇಂಡಿಯಾ ಅಕಾಡೆಮಿಯಂತಹ ಸಂಸ್ಥೆಗಳು ಮುಂದಿನ ಪೀಳಿಗೆಯ ವಾಯುಯಾನ ಮತ್ತು ಆತಿಥ್ಯ ವೃತ್ತಿಪರರಿಗೆ ತರಬೇತಿ ನೀಡಲಿವೆ.

    ಬೆಂಗಳೂರು ವಿಮಾನ ನಿಲ್ದಾಣ ನಗರವು ಸುಸ್ಥಿರ, ನವೀನ ಮತ್ತು ಸಂಪರ್ಕಿತ ನಗರಾಭಿವೃದ್ಧಿಯ ದೃಷ್ಟಿಯನ್ನು ಸಾಕಾರಗೊಳಿಸುತ್ತಿದ್ದು, ಮಿಶ್ರ-ಬಳಕೆಯ ನಗರದ ಯೋಜನೆಗೆ ಜಾಗತಿಕವಾಗಿ ಮಾದರಿಯಾಗಲಿದೆ. ಈ ಪ್ರದೇಶದ ಆರ್ಥಿಕ ಬೆಳವಣಿಗೆಯ ಕೇಂದ್ರಭಾಗದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವಾದ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಕಳೆದ ವರ್ಷ 37.5 ದಶಲಕ್ಷ ಜನರನ್ನು ನಿರ್ವಹಿಸಿದೆ. ವಿಮಾನ ನಿಲ್ದಾಣವು 2030ರ ವೇಳೆಗೆ ತನ್ನ ಸಾಮರ್ಥ್ಯವನ್ನು 90 ದಶಲಕ್ಷ ಪ್ರಯಾಣಿಕರಿಗೆ ವಿಸ್ತರಿಸಲು ಯೋಜಿಸಲಾಗಿದೆ. ಈ ಅಭಿವೃದ್ಧಿ ಬೆಂಗಳೂರಿನ ಪಾತ್ರವನ್ನು ಜಾಗತಿಕ ವ್ಯವಹಾರಗಳಿಗೆ ಮತ್ತು ಸುಧಾರಿತ ಉತ್ಪಾದನೆಗೆ ಪ್ರಮುಖ ಕೇಂದ್ರವಾಗಿ ಮತ್ತಷ್ಟು ಗಟ್ಟಿಗೊಳಿ ಸಲು ಅನುವು ಮಾಡಿಕೊಡಲಿದೆ. ವಿಶೇಷವಾಗಿ ಏರೋಸ್ಪೇಸ್ ವಲಯದಲ್ಲಿ, ಏರ್‌ಬಸ್ ಮತ್ತು ಬೋಯಿಂಗ್‌ನಂತಹ ಉದ್ಯಮದ ದೈತ್ಯರು ನಗರದ ನುರಿತ ಉದ್ಯೋಗಿಗಳಿಂದ ಲಾಭ ಪಡೆಯಲಿದ್ದಾರೆ.

  • ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎನ್‌ಎಸ್‌ಜಿಯಿಂದ ಆ್ಯಂಟಿ- ಹೈಜಾಕ್‌ ಅಣುಕು ಪ್ರದರ್ಶನ

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎನ್‌ಎಸ್‌ಜಿಯಿಂದ ಆ್ಯಂಟಿ- ಹೈಜಾಕ್‌ ಅಣುಕು ಪ್ರದರ್ಶನ

    ಬೆಂಗಳೂರು: ಭದ್ರತೆ ಮತ್ತು ತುರ್ತು ಪ್ರತಿಕ್ರಿಯೆಯ ಪ್ರೋಟೋಕಾಲ್‌ನ ಭಾಗವಾಗಿ ರಾಷ್ಟ್ರೀಯ ಭದ್ರತಾ ಪಡೆ (NSG) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ಆ್ಯಂಟಿ-ಹೈಜಾಕ್ ಅಣುಕು ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಿತು.

    ಜೂನ್ 24, ಸೋಮವಾರ ರಾತ್ರಿ 8 ಗಂಟೆಗೆ ಆರಂಭಗೊಂಡು, ಮಧ್ಯರಾತ್ರಿ ಮುಕ್ತಾಯಗೊಂಡ ಈ ಅಣುಕು ಪ್ರದರ್ಶನವು ನೈಜ-ಸಮಯದ ಸಂವಹನ ವ್ಯವಸ್ಥೆ, ಸುಧಾರಿತ ಕಣ್ಗಾವಲು ಉಪಕರಣಗಳು ಮತ್ತು ಅತ್ಯಾಧುನಿಕ ಭಯೋತ್ಪಾದನಾ-ವಿರೋಧಿ ಕ್ರಮಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಎನ್ಎಸ್‌ಜಿಯ ಸಮರ್ಪಣೆಯನ್ನು ಉದಾಹರಿಸುತ್ತದೆ.

    ಈ ಅಣುಕು ಪ್ರದರ್ಶನವು ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ನಿಲುವು ಹೊಂದಿರುತ್ತದೆ. ವಿಮಾನ ನಿಲ್ದಾಣದ ಯುದ್ಧತಂತ್ರದ ಸಿದ್ಧತೆಯನ್ನು ನಿರ್ಣಯಿಸಲು ಮತ್ತು ಸುಧಾರಿಸಲು ವಿನ್ಯಾಸಗೊಳಿಸಲಾದ ವಿವಿಧ ಸನ್ನಿವೇಶಗಳನ್ನು ಒಳಗೊಂಡಿತ್ತು.

    ಅಪಹರಿಸಿದ ವಿಮಾನ ಏರ್‌ಪೋರ್ಟ್‌ಗೆ ಬಂದು ಇಳಿದ ಕೃತಕ ಸನ್ನಿವೇಶವನ್ನು ನಿರ್ಮಾಣ ಮಾಡಲಾಗಿತ್ತು. ಇದು ಏರೋಡ್ರೋಮ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಕಮಿಟಿ (ಎಇಎಂಸಿ) ಅನ್ನು ತಕ್ಷಣವೇ ಸಕ್ರಿಯಗೊಳಿಸಿತು. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಭಾರತ ಸರ್ಕಾರ, ಸಿಐಎಸ್‌ಎಫ್, ಗ್ರೌಂಡ್ ಹ್ಯಾಂಡ್ಲಿಂಗ್ ಏಜೆನ್ಸಿಗಳು, ಸಿಟಿ ಆಸ್ಪತ್ರೆಗಳು, ಭಾರತೀಯ ವಾಯುಪಡೆ (ಐಎಎಫ್), ಪೊಲೀಸ್, ಟ್ರಾಫಿಕ್ ಪೊಲೀಸ್, ಏರ್ ಟ್ರಾಫಿಕ್ ಸರ್ವೀಸಸ್ ಕಂಟ್ರೋಲ್ (ಎಟಿಸಿ), ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಸ್ಥಳೀಯ ಸಮುದಾಯಗಳು, ನಾಗರಿಕ ಸಂಘ ಸಂಸ್ಥೆಗಳು, ವಾಯುಯಾನ ಸಂಸ್ಥೆಗಳು ಮತ್ತು ಜಿಲ್ಲಾ ಆಡಳಿತ ಅಧಿಕಾರಿಗಳು ಸೇರಿದಂತೆ ಪ್ರಮುಖ ಪಾಲುದಾರರ ಸಹಯೋಗದಲ್ಲಿ ಈ ಅಣುಕು ಪ್ರದರ್ಶನವನ್ನು ಆಯೋಜಿಸಲಾಗಿತ್ತು.  ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್ – ನಾಲ್ವರು ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್

    ತರಬೇತಿ ಪಡೆದ ಸಮಾಲೋಚಕರು, ವಿಮಾನ ಆಗಮನದ ನಂತರ ಹೈಜಾಕರ್ಸ್‌ನೊಂದಿಗೆ ಸಂಧಾನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಪರಿಸ್ಥಿತಿಯನ್ನು ಶಾಂತಿಯುತವಾಗಿ ನಿಭಾಹಿಸುವ ಗುರಿ ಹೊಂದಿರುತ್ತಾರೆ. ಒಂದು ವೇಳೆ ಮಾತುಕತೆ ವಿಫಲವಾದಲ್ಲಿ ರಾಷ್ಟ್ರೀಯ ಭದ್ರತಾ ಪಡೆಯು (NSG) ಮಧ್ಯಪ್ರವೇಶಿಸಲು ಮುಂದಾಗುತ್ತದೆ. ಬೆದರಿಕೆಯ ಮುಂಜಾಗರುಕತೆ ಮತ್ತು ಪರಿಣಾಮಕಾರಿ ನಿಯಂತ್ರಣದಲ್ಲಿ ಕಡಿಮೆ ಹಾನಿ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಪ್ರಮುಖವಾಗಿ ಇರಿಸಲಾಗುತ್ತದೆ.

    ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಅವರು ಅಣುಕು ಪ್ರದರ್ಶನದ ಮಹತ್ವವನ್ನು ಉಲ್ಲೇಖಿಸುತ್ತಾ, “ಈ ನೈಜ-ಸಮಯದ ಸಿಮ್ಯುಲೇಟೆಡ್ ಆಂಟಿ-ಹೈಜಾಕ್ ಅಣುಕು ಪ್ರದರ್ಶನ ನಡೆಸುವುದು ಬಿಎಲ್‌ಆರ್ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಇದು ನಮ್ಮ ಪ್ರತಿಕ್ರಿಯೆ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಲು, ಅಂತರ್‌-ಇಲಾಖೆಯ ಸಮನ್ವಯವನ್ನು ಹೆಚ್ಚಿಸಲು ಮತ್ತು ನೈಜ-ಜೀವನದ ಸನ್ನಿವೇಶಗಳಿಗೆ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಅಣುಕು ಪ್ರದರ್ಶನವನ್ನು ಸಾಧ್ಯವಾಗಿಸಿದ ಎಲ್ಲಾ ಆಂತರಿಕ ಮತ್ತು ಬಾಹ್ಯ ವ್ಯಕ್ತಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಅವರ ಸಾಮೂಹಿಕ ಪ್ರಯತ್ನ ನಮ್ಮ ಸಾಮರ್ಥ್ಯ ಮತ್ತು ಕಾರ್ಯಾಚರಣೆಯನ್ನು ಮೌಲ್ಯೀಕರಿಸುತ್ತದೆ. ಈ ನಿರಂತರ ಸುಧಾರಣೆ ಮತ್ತು ಬಿಕ್ಕಟ್ಟಿನ ಸಿದ್ಧತೆಗೆ ನಮ್ಮ ಬದ್ಧತೆ ತೋರುತ್ತದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸಲು ಇಂತಹ ಪೂರ್ವಭಾವಿ ಉಪಕ್ರಮಗಳು ಅಗತ್ಯವಾಗಿದೆ ಎಂದರು.

    ಇಂಟರ್ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಶನ್ ಮತ್ತು ಡಿಜಿಸಿಎ ನಿಯಮಗಳಿಗೆ ಅನುಸಾರವಾಗಿ ಬೆಂಗಳೂರು ಏರ್‌ಪೋರ್ಟ್‌ನ ಭದ್ರತಾ ಕ್ರಮಗಳು ಮತ್ತು ತುರ್ತು ಪ್ರತಿಕ್ರಿಯೆ ಸಾಮರ್ಥ್ಯವನ್ನು ಹೆಚ್ಚಿಸಲು ನಡೆಯುತ್ತಿರುವ ಬದ್ಧತೆಯೊಂದಿಗೆ ಈ ಅಣುಕು ಪ್ರದರ್ಶನ ಹೊಂದಿಕೆಯಾಗುತ್ತಿದೆ. ಯಾವುದೇ ಪರಿಸ್ಥಿತಿ ಅಥವಾ ಸನ್ನಿವೇಶದಲ್ಲಿ ಎಲ್ಲಾ ವಿಮಾನ ನಿಲ್ದಾಣ ಬಳಕೆದಾರರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಸುರಕ್ಷಿತ ವಾತಾವರಣವನ್ನು ಒದಗಿಸುವ ಗುರಿಯನ್ನು ಹೊಂದಿದೆ.

     

  • ದಕ್ಷಿಣ ಭಾರತದ ‘ಪ್ರೀಮಿಯರ್ ಏವಿಯೇಷನ್ ಹಬ್’ ಆಗಿ ಬೆಂಗಳೂರು ಅಭಿವೃದ್ಧಿಪಡಿಸಲು ಏರ್ ಇಂಡಿಯಾದೊಂದಿಗೆ BIAL ಒಪ್ಪಂದ

    ದಕ್ಷಿಣ ಭಾರತದ ‘ಪ್ರೀಮಿಯರ್ ಏವಿಯೇಷನ್ ಹಬ್’ ಆಗಿ ಬೆಂಗಳೂರು ಅಭಿವೃದ್ಧಿಪಡಿಸಲು ಏರ್ ಇಂಡಿಯಾದೊಂದಿಗೆ BIAL ಒಪ್ಪಂದ

    ಬೆಂಗಳೂರು/ಚಿಕ್ಕಬಳ್ಳಾಪುರ: ಭಾರತದ ಪ್ರಮುಖ ಜಾಗತಿಕ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ಮತ್ತು ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್ ಲಿಮಿಟೆಡ್ (BIAL) ದಕ್ಷಿಣ ಭಾರತದ ಪ್ರಮುಖ ವಾಯುಯಾನ ಕೇಂದ್ರವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಮಹತ್ವದ ಒಪ್ಪಂದ ಮಾಡಿಕೊಂಡಿವೆ.

    ಈ ಮೂಲಕ ಭಾರತದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ವಿಮಾನಯಾನ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಈ ಒಪ್ಪಂದವು ಭಾರತೀಯ ವಾಯುಯಾನ ಉದ್ಯಮದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಏರ್ ಇಂಡಿಯಾ (ಇತರ ಟಾಟಾ ಗ್ರೂಪ್ ಏರ್‌ಲೈನ್ಸ್ – AIX ಮತ್ತು ವಿಸ್ತಾರಾ ಜೊತೆಗೆ) ಮತ್ತು BIAL ಮುಂದಿನ ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಸಂಪರ್ಕ, ಕಾರ್ಯಾಚರಣೆಯ ದಕ್ಷತೆ ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಗುರಿ ಹೊಂದಿದೆ. ಇದನ್ನೂ ಓದಿ: ‘ಕೆಂಪೇಗೌಡ’ ಚಿತ್ರದ ಬಜೆಟ್ 60 ಕೋಟಿ ರೂಪಾಯಿ: ಫಿಕ್ಸ್ ಆಗಿದ್ದಾರೆ ಹೀರೋ

    ಇದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAB ಅಥವಾ BLR ವಿಮಾನ ನಿಲ್ದಾಣ) ವರ್ಧಿತ ನೆಟ್‌ವರ್ಕ್ ಮೂಲಕ ಟಾಟಾ ಗ್ರೂಪ್ ಏರ್‌ಲೈನ್ಸ್, ಏರ್ ಇಂಡಿಯಾ ಮತ್ತು ವಿಸ್ತಾರಾ ಪ್ರೀಮಿಯಂ ಹಾಗೂ ಪ್ರಯಾಣಿಕರಿಗೆ ಮೀಸಲಾದ ದೇಶೀಯ ವಿಶ್ರಾಂತಿ ಕೋಣೆ ನಿರ್ಮಿಸುವುದು ಸೇರಿದಂತೆ ಇತರೆ ಸೌಕರ್ಯಗಳನ್ನು ಒಳಗೊಂಡಿದೆ.

    ಈ ಒಪ್ಪಂದದ ಭಾಗವಾಗಿ, BLR ವಿಮಾನ ನಿಲ್ದಾಣದಲ್ಲಿ ಸಮಗ್ರ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ (MRO) ಸೌಲಭ್ಯಗಳನ್ನು ಸ್ಥಾಪಿಸಲು ಏರ್ ಇಂಡಿಯಾ ಕರ್ನಾಟಕ ಸರ್ಕಾರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಿದೆ. ಇದು ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಏರ್ ಇಂಡಿಯಾದ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಅಷ್ಟೇ ಅಲ್ಲದೇ, ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಿಂದ ನೇರ ದೀರ್ಘ-ಪ್ರಯಾಣದ ಮಾರ್ಗಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಜಾಗತಿಕ ಹೆಜ್ಜೆ ಗುರುತನ್ನು ವಿಸ್ತರಿಸುತ್ತಿದೆ. ಈ ಪಾಲುದಾರಿಕೆಯು MRO ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಜೊತೆಗೆ ರಾಜ್ಯದಲ್ಲಿ ಹೆಚ್ಚು ನುರಿತ ವ್ಯಕ್ತಿಗಳಿಗೆ 1,200 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಯೋಜಿಸಲಾಗಿದೆ. ಇದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದು ಬಿದ್ದವನ ಮೇಲೆ ಬಸ್ ಹರಿದಿದೆ: ಶೋಭಾ ಕರಂದ್ಲಾಜೆ

    ಏರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್, ಬೆಂಗಳೂರು ವಾಯು ಸಂಪರ್ಕ ಕೇಂದ್ರದ ಹಬ್‌ ಆಗಿದ್ದು, ವಿಮಾನಯಾನ ಹಾಗೂ ವಿಮಾನ ನಿಲ್ದಾಣದಲ್ಲಿನ ದಕ್ಷ ಕಾರ್ಯಾಚರಣೆಯಿಂದ ಗ್ರಾಹಕರು ಉತ್ತಮ ಅನುಭವ ಪಡೆಯುತ್ತಿದ್ದಾರೆ. ವಿಮಾನ ನಿಲ್ದಾಣದ ಅನುಭೂತಿಯನ್ನು ಇನ್ನಷ್ಟು ಹೆಚ್ಚಿಸಲು ಹಾಗೂ ವಾಯು ಸಂಪರ್ಕವನ್ನು ವಿಸ್ತರಿಸಲು ಮುಂದಾಗಿದ್ದೇವೆ. ಇದಕ್ಕಾಗಿ ಪ್ರಮುಖ MRO ಕೇಂದ್ರವನ್ನು ನಿರ್ಮಿಸುವ ದೃಷ್ಟಿಯಿಂದ BIAL ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಪಾಲುದಾರಿಕೆಯು ಏರ್ ಇಂಡಿಯಾ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದರು.

    ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಮಾತನಾಡಿ, ದಕ್ಷಿಣ ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿ BLR ವಿಮಾನ ನಿಲ್ದಾಣವು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಪ್ರಾಥಮಿಕ ಅಂತಾರಾಷ್ಟ್ರೀಯ ಗೇಟ್‌ವೇ ಆಗಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಈ ಸಹಯೋಗದ ಮೂಲಕ ಭಾರತೀಯ ವಾಯುಮಾರ್ಗಗಳ ಹಬ್‌ ಆಗಿ ಅಭಿವೃದ್ಧಿಪಡಿಸುವ ನಾಗರಿಕ ವಿಮಾನಯಾನ ಸಚಿವಾಲಯದ ದೃಷ್ಟಿಕೋನದಲ್ಲಿ ಹೊಂದಿಕೆಯಾಗಲಿದೆ. ಇದರಿಂದ ನಮ್ಮ ಪ್ರಯಾಣಿಕರ ಪ್ರಯಾಣದ ಅನುಭವವನ್ನು ಇನ್ನಷ್ಟು ಹೆಚ್ಚಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಬೆಂಗಳೂರಿನಿಂದ ಹೊರಹೋಗುವ ಅರ್ಧದಷ್ಟು ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು ನಮ್ಮ ಕ್ಯಾಚ್‌ಮೆಂಟ್ ಹೆಡ್‌ ಟು ಯೂರೋಪ್, ಉತ್ತರ ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಪೂರ್ವಕ್ಕೆ ಹೋಗಬಹುದು, ಏರ್ ಇಂಡಿಯಾದೊಂದಿಗಿನ ನಮ್ಮ ಮೈತ್ರಿಯು ಈ ಗುರಿಯತ್ತ ಗಣನೀಯ ಏರಿಕೆಯನ್ನು ಸಾಧಿಸಲಿದೆ. ಮುಂದಿನ ಐದು ವರ್ಷಗಳಲ್ಲಿ BLR ವಿಮಾನ ನಿಲ್ದಾಣದಿಂದ ದೀರ್ಘ-ಪ್ರಯಾಣದ ಮಾರ್ಗಗಳ ಗಮನಾರ್ಹ ಪಾಲನ್ನು ಹೊಂದುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಚುನಾವಣೆಗಾಗಿ ಇಲ್ಲಿಗೆ ಬಂದಿದ್ದೀರಿ, ಇಲ್ದಿದ್ರೆ ನಿವೆಲ್ಲಿ ಬರ್ತಿದ್ರಿ- ಯತೀಂದ್ರಗೆ ರೈತರಿಂದ ತರಾಟೆ

  • ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತು ಆಕ್ಸಿಜನ್ ಜನರೇಟರ್ಸ್ ಸ್ಥಾಪನೆ

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತು ಆಕ್ಸಿಜನ್ ಜನರೇಟರ್ಸ್ ಸ್ಥಾಪನೆ

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಅನುಕೂಲಕ್ಕಾಗಿ 10 ತುರ್ತು ಆಮ್ಲಜನಕ ಜನರೇಟರ್‌ಗಳನ್ನು ಸ್ಥಾಪಿಸಲಾಗಿದೆ.

    ಡಿಪಾರ್ಚರ್ಸ್ ಮತ್ತು ಆಗಮನದ ಪ್ರದೇಶದಲ್ಲಿ ತುರ್ತು ಆಮ್ಲಜನಕದ ಸಕಾಲಿಕ ಲಭ್ಯತೆಯು ಹೃದಯಾಘಾತ, ಉಸಿರಾಟದ ತೊಂದರೆ, ಮೂರ್ಜೆ ಅಥವಾ ಇತರೆ ಉಸಿರಾಟದ ಸಮಸ್ಯೆಯುಳ್ಳವರಿಗೆ ತುರ್ತಾಗಿ ಆಮ್ಲಜನಕ ಒದಗಿಸುವ ಉದ್ದೇಶದಿಂದ ಈ ಸೇವೆ ಪ್ರಾರಂಭಿಸಲಾಗಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಎರಡೇ ದಿನ: ಯಾತ್ರಾರ್ಥಿಗಳಿಗೆ ಆಧಾರ್, ಸರ್ಕಾರಿ ಗುರುತಿನ ಚೀಟಿ ಕಡ್ಡಾಯ  

    40 ನಿಮಿಷಗಳವರೆಗೆ 99.7 ಶೇಕಡಾ ಶುದ್ಧ ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಒದಗಿಸುತ್ತದೆ. ಇದು ಆರೋಗ್ಯದಲ್ಲಿ ಸಮಸ್ಯೆ ಇರುವ ವ್ಯಕ್ತಿಯು ಆಸ್ಪತ್ರೆಯನ್ನು ತಲುಪುವವರೆಗೆ ಸಾಕಷ್ಟು ಬೆಂಬಲವನ್ನು ನೀಡುತ್ತದೆ.

    ಈ ಕುರಿತು ಪ್ರತಿಕ್ರಿಯಿಸಿದ ಬಿಐಎಎಲ್(ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್) ವಕ್ತಾರರು, ಪ್ರಯಾಣಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ:  ಕಾಶ್ಮೀರದಲ್ಲಿ ಸರಣಿ ಸ್ಫೋಟ- ಇಬ್ಬರು ಲಷ್ಕರ್ ಉಗ್ರರು ಅರೆಸ್ಟ್ 

    Live Tv