Tag: Bhuvneshwar Kumar

  • ಜಡೇಜಾ ಭರ್ಜರಿ ಬ್ಯಾಟಿಂಗ್ – ಭಾರತದ ವಿಶ್ವಕಪ್ ಕನಸು ಭಗ್ನ

    ಜಡೇಜಾ ಭರ್ಜರಿ ಬ್ಯಾಟಿಂಗ್ – ಭಾರತದ ವಿಶ್ವಕಪ್ ಕನಸು ಭಗ್ನ

    ಮ್ಯಾಂಚೆಸ್ಟರ್: ಮಳೆಯಿದ್ದ ಸ್ಥಗಿತಗೊಂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತವನ್ನು 18 ರನ್‍ಗಳಿಂದ ಸೋಲಿಸಿ  ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

    ಗೆಲ್ಲಲು 240 ರನ್ ಗಳ ಗುರಿಯನ್ನು ಪಡೆದ ಭಾರತ 49.3 ಓವರ್ ಗಳಲ್ಲಿ 221 ರನ್ ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿತು. ಆರಂಭದಲ್ಲಿ 5 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 92 ರನ್‍ಗಳಿಗೆ 6 ವಿಕೆಟ್ ಉರುಳಿದಾಗ ನ್ಯೂಜಿಲೆಂಡ್ ಸುಲಭವಾಗಿ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಜಡೇಜಾ ಮತ್ತು ಧೋನಿ 7ನೇ ವಿಕೆಟಿಗೆ 116 ರನ್ ಜೊತೆಯಾಟವಾಡಿ ಭಾರತವನ್ನು ಗೆಲುವಿನ ಹತ್ತಿರ ತಂದಿಟ್ಟಿದ್ದರು.

    ಕಿವೀಸ್ ಇನ್ನಿಂಗ್ಸ್ ಬಳಿಕ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ತಂಡದ ಪರ ಆರಂಭಿಕರಾದ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ತಲಾ 1 ರನ್ ಗಳಿಸಿ ನಿರ್ಗಮಿಸಿದ್ದರು. ಇದರ ಬೆನ್ನಲ್ಲೇ ರಕ್ಷಣಾತ್ಮಕ ಆಟಕ್ಕೆ ಮುಂದಾದ ದಿನೇಶ್ ಕಾರ್ತಿಕ್ 25 ಎಸೆತಗಳಲ್ಲಿ 6 ರನ್ ಗಳಿಸಿ ಹೆನ್ರಿ ಅವರಿಗೆ 3ನೇ ಬಲಿಯಾಗಿ ನಿರ್ಗಮಿಸಿದರು.

    ಆರಂಭಿಕ ವೈಫಲ್ಯ: ಕೊಹ್ಲಿ ಪಡೆಗೆ ಅಘಾತ ನೀಡಿದ ಕಿವೀಸ್ ಬೌಲರ್ ಲ್ಯಾಥಮ್ ಹೆನ್ರಿ, ರೋಹಿತ್, ರಾಹುಲ್ ವಿಕೆಟ್ ಪಡೆದು ಅಘಾತ ನೀಡಿದರು. ಇತ್ತ ಬೋಲ್ಟ್ ನಾಯಕ ಕೊಹ್ಲಿ ಅವರನ್ನು ಎಲ್‍ಬಿ ಡಬ್ಲೂ ಬಲೆಗೆ ಕೆಡವಿದರು. ಪರಿಣಾಮ ಟೀಂ ಇಂಡಿಯಾ 3.1 ಓವರ್ ಗಳಲ್ಲಿ ಕೇವಲ 3 ರನ್ ಗಳಿಗೆ 5 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ತಂಡವೊಂದರ ಟಾಪ್ 3 ಆಟಗಾರರು ತಲಾ 1 ರನ್ ಗಳಿಸಿ ಔಟಾಗಿದ್ದು ಇದೇ ಮೊದಲ ಬಾರಿಗೆ ಆಗಿದೆ.

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ವಿಶ್ವಕಪ್ ಟೂರ್ನಿಯ 3 ಸೆಮಿಫೈನಲ್ ಪಂದ್ಯದಲ್ಲಿ ಎಡಗೈ ವೇಗಿ ಬೌಲರ್ ಗಳಿಗೆ ಔಟಾಗಿದ್ದಾರೆ. ಅಲ್ಲದೇ ಮೂರು ಪಂದ್ಯಗಳಲ್ಲಿ ಕೇವಲ 11 ರನ್ ಗಳಿಸಿದ್ದಾರೆ. 2011ರ ವಿಶ್ವಕಪ್ ಸೆಮಿ ಫೈನಲ್‍ನಲ್ಲೂ ಪಾಕಿಸ್ತಾನ ಎಡಗೈ ವೇಗಿ ವಯಾಬ್ ರಿಯಾಜ್ ಅವರಿಗೆ ವಿಕೆಟ್ ಒಪ್ಪಿಸಿದ್ದರು. 2015ರ ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಆಸೀಸ್ ತಂಡದ ವಿರುದ್ಧ ಮಿಚೆಲ್ ಜಾನ್ಸನ್ ಅವರ ಬೌಲಿಂಗ್‍ನಲ್ಲಿ ಔಟಾಗಿದ್ದರು.

    ಇನ್ನಿಂಗ್ಸ್ ನ 10 ಓವರ್ ಗಳ ಅಂತ್ಯದ ವೇಳೆ 4 ವಿಕೆಟ್ ಕಳೆದುಕೊಂಡು 24 ರನ್ ಗಳಿಸಿದ್ದ ಟೀಂ ಇಂಡಿಯಾ 2019 ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯವೊಂದರ ಪವರ್ ಪ್ಲೇನಲ್ಲಿ ಗಳಿಸಿದ ಅತಿ ಕಡಿಮೆ ಮೊತ್ತ ಇದಾಗಿದೆ. ಈ ಸಂದರ್ಭದಲ್ಲಿ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದ ಯುವ ಆಟಗಾರ ರಿಷಬ್ ಪಂತ್ ಅನಗತ್ಯ ಹೊಡೆತಕ್ಕೆ ಕೈ ಹಾಕಿ 56 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 32 ರನ್ ಗಳಿಸಿ ಸ್ಯಾಂಟನರ್ ಗೆ ವಿಕೆಟ್ ಒಪ್ಪಿಸಿದರು.  ಪಾಂಡ್ಯ- ರಿಷಬ್ ಪಂತ್ ಜೋಡಿ 5ನೇ ವಿಕೆಟ್‍ಗೆ 47 ರನ್ ಜೊತೆಯಾಟ ನೀಡಿತ್ತು. ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಸ್ಯಾಂಟನರ್ 62 ಎಸೆತಗಳಲ್ಲಿ 2 ಬೌಂಡರಿ ಸಹಿತ 32 ರನ್ ಗಳಿಸಿದ್ದ ಪಾಂಡ್ಯ ವಿಕೆಟ್ ಪಡೆದರು.

    ಧೋನಿ-ಜಡೇಜಾ ಜೊತೆಯಾಟ: ಟೀಂ ಇಂಡಿಯಾ 30.3 ಓವರ್ ಗಳಲ್ಲಿ 92 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದ ಸಂದರ್ಭದಲ್ಲಿ ಒಂದಾದ ಮಾಜಿ ನಾಯಕ ಧೋನಿ ಹಾಗೂ ಜಡೇಜಾ ತಂಡವನ್ನು ಗೆಲುವಿನತ್ತ ಕರೆತರಲು ಪ್ರಯತ್ನ ನಡೆಸಿದರು. ಈ ಸಂದರ್ಭದಲ್ಲಿ ಭಾರತಕ್ಕೆ 117 ಎಸೆತಗಳಲ್ಲಿ 148 ರನ್ ಗಳಿಸುವ ಅಗತ್ಯವಿತ್ತು.

    ಜಡೇಜಾ ಮಿಂಚು: ಟೂರ್ನಿಯಲ್ಲಿ ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದ ಜಡೇಜಾ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದರು. 39 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಗಳಿಂದ ಅರ್ಧ ಶತಕ ಪೂರ್ಣಗೊಳಿಸಿದರು. ಆ ಮೂಲಕ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ನಲ್ಲಿ ನಂ.8ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಅರ್ಧ ಶತಕ ಬ್ಯಾಟ್ಸ್ ಮನ್ ಸಿಡಿಸಿದ ಸಾಧನೆ ಮಾಡಿದರು. 5 ವರ್ಷಗಳ ಬಳಿಕ ಜಡೇಜಾ ಗಳಿಸಿದ ಏಕದಿನ ಅರ್ಧ ಶತಕ ಇದಾಗಿದೆ.

    5 ಓವರ್ ಗಳಲ್ಲಿ 52 ರನ್ ಗಳಿಸುವ ಒತ್ತಡದಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ಜಡೇಜಾ ತಂಡವನ್ನು ಗೆಲುವಿನ ಸನಿಹ ಕೊಂಡ್ಯೊಯುವ ಪ್ರಯತ್ನ ನಡೆಸಿದರು. 46ನೇ ಓವರಿನಲ್ಲಿ ಬೌಂಡರಿ ಸಮೇತ 10 ರನ್ ಗಳಿಸಿದ ಈ ಜೋಡಿ 7ನೇ ವಿಕೆಟ್‍ಗೆ ಶತಕದ ಜೊತೆಯಾಟ ನೀಡಿದರು. 122 ಎಸೆತಗಳಲ್ಲಿ ಈ ಜೋಡಿ 116 ಗಳಿಸಿತು. ಆದರೆ ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್(4 ಬೌಂಡರಿ, 4 ಸಿಕ್ಸರ್) ಗಳಿಸಿ ಬೋಲ್ಟ್ ಗೆ ವಿಕೆಟ್ ಒಪ್ಪಿಸಿದರು. ಇತ್ತ ಜಡೇಜಾ ನಿರ್ಗಮನದೊಂದಿಗೆ ತಂಡದ ಗೆಲುವಿನ ಆಸೆಯಾಗಿದ್ದ ಧೋನಿ 50 ರನ್(72 ಎಸೆತ, 1 ಬೌಂಡರಿ, 1ಸಿಕ್ಸರ್) ಸಿಡಿಸಿ ರನೌಟ್ ಆದರು. ಈ ಹಂತದಲ್ಲಿ ಟೀಂ ಇಂಡಿಯಾ ತಂಡದ ಗೆಲುವಿಗೆ 24 ರನ್ ಗಳ ಅಗತ್ಯವಿತ್ತು. ನ್ಯೂಜಿಲೆಂಡ್ ಪರ ಬೋಲ್ಟ್ 2 ವಿಕೆಟ್ ಪಡೆದರೆ, ಹೆನ್ರಿ 3 ವಿಕೆಟ್, ಸ್ಟಾನ್ನರ್ 2 ವಿಕೆಟ್ , ಫಾರ್ಗೂಸನ್ 1 ವಿಕೆಟ್ ಪಡೆದರು.

    ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿದ್ದ ಟೀಂ ಇಂಡಿಯಾ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲೂ  ನಿರಾಸ ಪ್ರದರ್ಶನ ನೀಡಿದೆ. ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿ 179 ರನ್ ಗಳಿಗೆ ಅಲೌಟ್ ಆಗಿತ್ತು. ಗುರಿ ಬೆನ್ನತ್ತಿದ್ದ ಕಿವೀಸ್ ಪಡೆ 4 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿ ಜಯ ಪಡೆದಿತ್ತು.

    2015ರ ವಿಶ್ವಕಪ್ ಫೈನಲ್‍ನಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್‍ಗಳಿಂದ ಜಯಗಳಿಸಿ ಟ್ರೋಫಿ ಗೆದ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 45 ಓವರ್ ಗಳಲ್ಲಿ 183 ರನ್ ಗಳಿಗೆ ಆಲೌಟ್ ಆಗಿದ್ದರೆ ಆಸ್ಟ್ರೇಲಿಯಾ 33.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತ್ತು.

  • ಟೀಂ ಇಂಡಿಯಾಗೆ ಬೆಂಬಿಡದ ಗಾಯದ ಸಮಸ್ಯೆ – ಧವನ್ ಬಳಿಕ ವಿಜಯ್ ಶಂಕರ್‌ಗೆ  ಗಾಯ

    ಟೀಂ ಇಂಡಿಯಾಗೆ ಬೆಂಬಿಡದ ಗಾಯದ ಸಮಸ್ಯೆ – ಧವನ್ ಬಳಿಕ ವಿಜಯ್ ಶಂಕರ್‌ಗೆ ಗಾಯ

    ಲಂಡನ್: ಟೀಂ ಇಂಡಿಯಾ ಆಲೌಂಡರ್ ಆಟಗಾರ ವಿಜಯ್ ಶಂಕರ್ ಅಫ್ಘಾನಿಸ್ತಾನದ ಎದುರಿನ ಪಂದ್ಯಕ್ಕಾಗಿ ತರಬೇತಿ ಪಡೆಯುತ್ತಿದ್ದ ವೇಳೆ ಗಾಯಗೊಂಡಿದ್ದಾರೆ.

    ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ವಿಜಯ್ ಶಂಕರ್ ಗಾಯಗೊಂಡಿರುವುದು ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಗಾಯದ ಸಮಸ್ಯೆಯಿಂದ ವಿಜಯ್ ಶಂಕರ್ ತರಬೇತಿಯನ್ನು ಅರ್ಧಕ್ಕೆ ನಿಲ್ಲಿಸಿ ಮೈದಾನದಿಂದ ಹೊರ ನಡೆದಿದ್ದಾರೆ.

    ತರಬೇತಿಯ ವೇಳೆ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ವಿಜಯ್ ಶಂಕರ್ ಅವರ ಕಾಲಿನ ಬೆರಳಿಗೆ ಚೆಂಡು ಬಡಿದಿದೆ. ಪರಿಣಾಮ ನೋವಿನಿಂದ ಶಂಕರ್ ತೆರಳಿದ್ದಾರೆ. ಸದ್ಯ ವಿಜಯ್ ಶಂಕರ್ ಅವರ ಗಾಯದ ಸಮಸ್ಯೆ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ಮೂಲಗಳ ಪ್ರಕಾರ ವಿಜಯ್ ಶಂಕರ್ ಅವರ ಗಾಯದ ಬಗ್ಗೆ ಹೆಚ್ಚಿನ ಆತಂಕ ಪಡುವಂತಿಲ್ಲ ಎಂಬ ಮಾಹಿತಿ ಲಭಿಸಿದೆ.

    ಧವನ್ ಅವರು ತಂಡದಿಂದ ಹೊರಗುಳಿದ ಪರಿಣಾಮ ರಾಹುಲ್ ಬ್ಯಾಟಿಂಗ್ ಬಡ್ತಿ ನೀಡಿ ಆರಂಭಿಕರಾಗಿ ಕಣಕ್ಕೆ ಇಳಿಸಲಾಗಿತ್ತು. ರಾಹುಲ್ ಅವರ ನಂ.4 ಸ್ಥಾನದಲ್ಲಿ ವಿಜಯ್ ಶಂಕರ್ ಅವರಿಗೆ ಸ್ಥಾನ ನೀಡಲಾಗಿತ್ತು. ಇತ್ತ ಟೀಂ ಇಂಡಿಯಾ ಪ್ರಮುಖ ವೇಗಿ ಭುವನೇಶ್ವರ್ ಅವರು ಕೂಡ ಗಾಯದ ಸಮಸ್ಯೆಗೆ ಸಿಲುಕಿದ್ದು, 8 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದಾರೆ. ಅಫ್ಘಾನಿಸ್ತಾನ ಪಂದ್ಯ ಸೇರಿದಂತೆ ಜೂನ್ 30 ರಂದು ನಡೆಲಿರುವ ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕೂ ಭುವನ್ ಅಲಭ್ಯರಾಗಿದ್ದಾರೆ.

    ಧವನ್ ಪ್ರಕರಣದಂತೆಯೇ ಭುವನೇಶ್ವರ್ ಮೇಲೆ ವಿಶ್ವಾಸ ಹೊಂದಿರುವ ಬಿಸಿಸಿಐ ಸಮಿತಿ ಭುವಿ ಚೇತರಿಸಿಕೊಳ್ಳಲಿದ್ದಾರೆ ಎಂದಿದೆ. ಇತ್ತ ಭುವನೇಶ್ವರ್ ಅವರು ಕೂಡ ಕಠಿಣ ಅಭ್ಯಾಸದಿಂದ ದೂರ ಉಳಿದಿದ್ದಾರೆ. ಒಂದೊಮ್ಮೆ ಭುವನೇಶ್ವರ್ ಕೂಡ ಸರಣಿಯಿಂದ ಹೊರಗುಳಿದರೆ ಯುವ ವೇಗಿ ಖಲೀಲ್ ಅಹ್ಮದ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಆದರೆ ಅನುಭವಿ ಆಟಗಾರರ ಪರ ಬಿಸಿಸಿಐ ಒಲವು ತೋರಿದರೆ ಇಶಾಂತ್ ಶರ್ಮಾ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕೊಹ್ಲಿ ಪಡೆಗೆ ಮುಖಭಂಗ – ಸರಣಿ ಗೆದ್ದು ಬೀಗಿದ ಕಾಂಗರೂ ಪಡೆ

    ಕೊಹ್ಲಿ ಪಡೆಗೆ ಮುಖಭಂಗ – ಸರಣಿ ಗೆದ್ದು ಬೀಗಿದ ಕಾಂಗರೂ ಪಡೆ

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 50 ಓವರ್ ಗಳಲ್ಲಿ 237 ರನ್ ಗಳಿಗೆ ಅಲೌಟ್ ಅಯ್ತು. 35 ರನ್ ಗೆಲುವು ಪಡೆದ ಆಸೀಸ್ ಪಡೆ 5 ಪಂದ್ಯಗಳ ಏಕದಿನ ಸರಣಿಯನ್ನು 3-2 ಅಂತರದಲ್ಲಿ ಗೆದ್ದು ಬೀಗಿತು.

    ಆಸೀಸ್ ನೀಡಿದ್ದ 273 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಅರ್ಧ ಶತಕ ಸಿಡಿಸಿದ್ದು ಹೊರತು ಪಡಿಸಿದರೆ, ಕೊಹ್ಲಿ 20 ರನ್, ಧವನ್ 12 ರನ್, ಪಂತ್ ಹಾಗೂ ವಿಜಯ್ ಶಂಕರ್ ತಲಾ 16 ರನ್ ಗಳಿಸಿದರೆ ಜಡೇಜಾ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಟೀಂ ಇಂಡಿಯಾ 28.5 ಓವರ್ ಗಳಲ್ಲಿ 132 ರನ್ ಗಳಿಗೆ 6 ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

    ತಂಡ ಗೆಲುವಿಗೆ 21 ಓವರ್ ಗಳಲ್ಲಿ 141 ರನ್ ಅಗತ್ಯವಿದ್ದ ವೇಳೆ ಒಂದಾದ ಕೇದಾರ್ ಜಾಧವ್ ಹಾಗೂ ಭುವನೇಶ್ವರ್ ಕುಮಾರ್ ಜೋಡಿ ತಂಡವನ್ನು ಗೆಲುವಿನ ಸನಿಹ ತರಲು ಪ್ರಯತ್ನಿಸಿದರು. ಈ ಜೋಡಿ 95 ಎಸೆತಗಳಲ್ಲಿ 91 ರನ್ ಜೊತೆಯಾಟ ನೀಡಿತು. ಈ ವೇಳೆ ಗೆಲುವಿನ ಆಸೆ ಮೂಡಿಸಿದ್ದ ಜೋಡಿಯನ್ನು ಕಮ್ಮಿನ್ಸ್ ಬೇರ್ಪಡಿಸಲು ಯಶಸ್ವಿಯಾದ್ರು. 54 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೊಂದಿಗೆ 46 ರನ್ ಗಳಿಸಿದ್ದ ಭುವನೇಶ್ವರ್ ಕುಮಾರ್ ಫಿಂಚ್‍ಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ, 57 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್ ಗಳಿಂದ 44 ರನ್ ಗಳಿಸಿದ್ದ ಜಾಧವ್ ಕೂಡ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಟೀಂ ಇಂಡಿಯಾ ಗೆಲುವಿನ ಆಸೆ ಬಹುತೇಕ ಅಂತ್ಯವಾಯ್ತು. ಅಂತಿಮವಾಗಿ ತಂಡ 237 ರನ್ ಗಳಿಗೆ ಅಲೌಟ್ ಆಯ್ತು. ಆಸೀಸ್ ಪರ ಜಂಪಾ 3 ವಿಕೆಟ್ ಪಡೆದರೆ, ಕಮ್ಮಿನ್ಸ್ ಮತ್ತು ರಿಚಡ್ರ್ಸನ್ ತಲಾ 2 ವಿಕೆಟ್ ಹಾಗೂ ಸ್ಟೋಯಿನ್ಸ್, ಲಯನ್ ತಲಾ ವಿಕೆಟ್ ಪಡೆದರು.

    8 ಸಾವಿರ ರನ್: ಪಂದ್ಯದಲ್ಲಿ ರೋಹಿತ್ ಶರ್ಮಾ 46 ರನ್ ಗಳಿಸಿದ್ದ ವೇಳೆ ಏಕದಿನ ಕ್ರಿಕೆಟಿನಲ್ಲಿ 8 ಸಾವಿರ ರನ್ ಪೂರೈಸಿದರು. ಆ ಮೂಲಕ ಭಾರತ ಪರ ವೇಗವಾಗಿ 8 ಸಾವಿರ ರನ್ ಪೂರೈಸಿದ 3ನೇ ಆಟಗಾರ ಎನಿಸಿಕೊಂಡರು. ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಸೌರವ್ ಗಂಗೂಲಿ ಅವರು ವೇಗವಾಗಿ 8 ಸಾವಿರ ರನ್ ಪೂರೈಸಿದ ಮೊದಲ ಎರಡು ಸ್ಥಾನ ಪಡೆದಿದ್ದಾರೆ. 31 ವರ್ಷದ ರೋಹಿತ್ ಶರ್ಮಾ 200 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

    ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಪರ ಖವಾಜಾ ಶತಕ ಸಿಡಿಸಿದರೆ, ಹ್ಯಾಡ್ಸ್ ಕಂಬ್ 52 ರನ್ ಸಿಡಿಸಿ ಆಸೀಸ್ ಸ್ಪರ್ಧಾತ್ಮಕ ಮೊತ್ತ ಗಳಿಸಲು ಕಾರಣರಾದರು. ಉಳಿದಂತೆ ಸರಣಿಯಲ್ಲಿ 366 ರನ್ ಗಳಿಸಿದ ಖವಾಜಾ ಭಾರತ ವಿರುದ್ಧದ 5 ಪಂದ್ಯಗಳ ಏಕದಿನ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಈ ಹಿಂದೆ 2014ರಲ್ಲಿ ನ್ಯೂಜಿಲೆಂಡ್ ತಂಡದ ಕೆನ್ ವಿಲಿಯಮ್ಸನ್ 361 ಹಾಗೂ 2015 ರಲ್ಲಿ ಎಬಿ ಡಿವಿಲಿಯರ್ಸ್ 358 ರನ್ ಹೊಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರೋಹಿತ್ ಶತಕ, ಭುವನೇಶ್ವರ್ ಅಮೋಘ ಆಟ ವ್ಯರ್ಥ

    ರೋಹಿತ್ ಶತಕ, ಭುವನೇಶ್ವರ್ ಅಮೋಘ ಆಟ ವ್ಯರ್ಥ

    – ಮೊದಲ ಏಕದಿನ ಪಂದ್ಯದಲ್ಲಿಯೇ ಮುಗ್ಗರಿಸಿದ ಟೀಂ ಇಂಡಿಯಾ

    ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದು, ಹಿಟ್‍ಮ್ಯಾನ್ ರೋಹಿತ್ ಶರ್ಮಾ ಅಮೋಘ ಶತಕ ವ್ಯರ್ಥವಾಯಿತು.

    ಆಸೀಸ್ ತಂಡದ ವೇಗಿ ಜೇಸನ್ ಬೆಹ್ರೆನ್‍ಡಾರ್ಫ್ ಮೊದಲ ಓವರ್‌ನಲ್ಲೇ ಆರಂಭಿಕ ಎಡಗೈ ಬ್ಯಾಟ್ಸಮನ್ ಶಿಖರ್ ಧವನ್ ಅವರನ್ನು ಶೂನ್ಯಕ್ಕೆ ಹೊರಗಟ್ಟಿದರು. ಈ ಮೂಲಕ ಚೊಚ್ಚಲ ಅಂತರಾಷ್ಟ್ರೀಯ ವಿಕೆಟ್ ಸಾಧನೆಯನ್ನು ಬೆಹ್ರೆನ್‍ಡಾರ್ಫ್ ಮಾಡಿದರು. ಆರಂಭದಲ್ಲಿ ಟೀಂ ಇಂಡಿಯಾ ಬ್ಯಾಟ್ಸಮನ್‍ಗಳು ಎಡವಿದರು. ನಾಯಕ ವಿರಾಟ್ ಕೊಹ್ಲಿ (3), ಅಂಬಟಿ ರಾಯುಡು (0) ವಿಕೆಟ್ ಒಪ್ಪಿಸಿದ್ದರಿಂದ ಟೀಂ ಇಂಡಿಯಾ ಆಘಾತಕ್ಕೆ ಒಳಗಾಯಿತು.

    ಇದರೊಂದಿಗೆ 3.5 ಓವರ್‌ಗಳಲ್ಲೇ 4 ರನ್ ಗಳಿಸುವುದರೆಡೆಗೆ ಪ್ರಮುಖ ಮೂರು ವಿಕೆಟುಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ನಾಲ್ಕನೇ ಓವರ್ ಪೂರ್ಣಗೊಂಡಾಗ ಭಾರತ 3 ವಿಕೆಟ್ ಕಳೆದುಕೊಂಡು ಕೇವಲ 4 ರನ್ ಗಳಿಸಿತ್ತು. 18 ಎಸೆತಗಳನ್ನು ಎದುರಿಸಿದ್ದರೂ ಒಂದೇ ಒಂದು ರನ್ ಬಾರಿಸದ ರೋಹಿತ್ ಶರ್ಮಾ ನೋ ಬಾಲ್ ಫ್ರಿ ಹಿಟ್‍ನಲ್ಲಿ ಸಿಕ್ಸರ್ ಸಿಡಿ ರನ್ ಖಾತೆ ತೆರೆದರು. ಆರನೇ ಓವರ್‌ನ ಕೊನೆಯ ಎಸೆತಕ್ಕೆ ಸಿಂಗಲ್ ರನ್ ಗಳಿಸಿದ ಮಹೇಂದ್ರ ಸಿಂಗ್ ಧೋನಿ ಏಕದಿನದ ಪಂದ್ಯದಲ್ಲಿ 10,000 ರನ್‍ಗಳ ದಾಖಲೆ ಬರೆದರು.

    10 ಓವರ್ ಮುಕ್ತಾಯದ ವೇಳೆಗೆ ಭಾರತ ಮೂರು ವಿಕೆಟ್ ನಷ್ಟಕ್ಕೆ ಕೇವಲ 21 ಗಳಿಸಿದ್ದ ಭಾರತ ನಿಧಾನವಾಗಿ ರನ್ ಗಳಿಕೆಯನ್ನು ಆರಂಭಿಸಿತ್ತು. ಧೋನಿ ಹಾಗೂ ರೋಹಿತ್ ಎಚ್ಚರಿಕೆ ಆಟವಾಡಿ, ವಿಕೆಟ್ ಕಾಯ್ದುಕೊಂಡು 20 ಓವರ್‌ಗಳಲ್ಲಿ 68 ರನ್ ಗಳಿಸಲು ಯಶಸ್ವಿಯಾದರು. ಬಳಿಕ ಧೋನಿ ನಿಧಾನವಾಗಿ ಸಾಥ್ ನೀಡಿದರೆ, ಹಿಟ್‍ಮ್ಯಾನ್ ರೋಹಿತ್ ಶರ್ಮಾ ರನ್ ಕಲೆಹಾಕಲು ಮುಂದಾದರು. ಇದರಿಂದಾಗಿ 63ನೇ ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

    ರೋಹಿತ್‍ಗೆ ಸಾಥ್ ನೀಡುತ್ತಲೇ ಮಹೇಂದ್ರ ಸಿಂಗ್ ದೋನಿ ಕೂಡ 96 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. ಆದರೆ ಅರ್ಧಶತಕದ ಬೆನ್ನಲ್ಲೇ ಧೋನಿ (51 ರನ್- 3ಬೌಂಡರಿ, ಒಂದು ಸಿಕ್ಸರ್‌ಗೆ) ವಿಕೆಟ್ ಒಪ್ಪಿಸಿದರು.

    ಅಲ್ಲದೆ ರೋಹಿತ್ ಜತೆ ನಾಲ್ಕನೇ ವಿಕೆಟ್‍ಗೆ 137 ರನ್‍ಗಳ ಜತೆಯಾಟದಲ್ಲಿ ಭಾಗಿಯಾದರು. ಧೋನಿ ವಿಕೆಟ್ ಸಹ ಡೆಬ್ಯು ವೇಗಿ ಬೆಹ್ರೆನ್‍ಡಾರ್ಫ್ ಪಾಲಾಯಿತು. ಬಳಿಕ ಮೈದಾನಕ್ಕೆ ಬಂದ ದಿನೇಶ್ ಕಾರ್ತಿಕ್ 12 ರನ್ ಗಳಿಸಿ ಪೆವಿಲಿಯನ್‍ಗೆ ಮರಳಿದರು. ಈ ವೇಳೆಗೆ ರೋಹಿತ್ ಶರ್ಮಾ 110 ಎಸೆತಗಳಲ್ಲಿ ಶತಕ ಪೂರೈಸಿ, ಏಕದಿನದಲ್ಲಿ 22ನೇ ಶತಕ ಸಾಧನೆ ಮಾಡಿದರು. ಶತಕದ ಬಳಿಕ ಸ್ಫೋಟಕ ಬ್ಯಾಟಿಂಗ್ ಮಾಡಿದ ರೋಹಿತ್ 129 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್ ಗಳನ್ನು ಸಿಡಿಸಿ ವಿಕೆಟ್ ಒಪ್ಪಿಸಿದರು.

    ರವೀಂದ್ರ ಜಡೇಜಾ (8) ರನ್‍ಗೆ ವಿಕೆಟ್ ಒಪ್ಪಿಸಿ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. ಇತ್ತ ಬೌಲರ್ ಭುವನೇಶ್ವರ್ ಕುಮಾರ್ ಅಜೇಯ (29), ಕುಲದೀಪ್ ಯಾದವ್ (3) ಹಾಗೂ ಮೊಹಮ್ಮದ್ ಶಮಿ (1) ರನ್ ಗಳಿಸಿದರು ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. 50 ಓವರ್ ಆಡಿದ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 254 ಗಳಿಸಿ ಸೋಲು ಕಂಡಿತು.

    ಆಸ್ಟ್ರೇಲಿಯಾ ಬ್ಯಾಟಿಂಗ್:
    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ, 50 ಓವರ್‍ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 288 ರನ್‍ಗಳನ್ನು ಕಲೆಹಾಕಿತ್ತು. ಮೂರನೇ ಓವರ್ ಬಾಲಿಂಗ್ ಮಾಡಿದ ಭುನೇಶ್ವರ್ ಆ್ಯರೋನ್ ಫಿಂಚ್ (6) ವಿಕೆಟ್ ಕಬಳಿಸಿದರು. ಈ ಮೂಲಕ ಏಕದಿನ ಕ್ರಿಕೆಟ್‍ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದರು.

    10ನೇ ಓವರ್ ಬಾಲಿಂಗ್ ಮಾಡಿದ ಕುಲದೀಪ್ ಯಾದವ್ ವಿಕೆಟ್ ಕೀಪರ್ ಎಡಗೈ ಬ್ಯಾಟ್ಸ್‍ಮನ್ ಅಲೆಕ್ಸ್ ಕ್ಯಾರಿ (24) ವಿಕೆಟ್ ಕಬಳಿಸಿದರು. ಇದರೊಂದಿಗೆ 10 ಓವರ್‌ಗೆ ಆಸ್ಟ್ರೇಲಿಯಾವನ್ನು ಟೀಂ ಇಂಡಿಯಾ ಬೌಲರ್‌ಗಳು 41 ರನ್‍ಗೆ ಕಟ್ಟಿಹಾಕಿದ್ದರು. ಈ ವೇಳೆ ತಂಡಕ್ಕೆ ಆಸರೆಯಾಗಿ ನಿಂತ ಉಸ್ಮಾನ್ ಖವಾಜ ಹಾಗೂ ಶಾನ್ ಮಾರ್ಶ್ ಜೊತೆಯಾಟದಿಂದ ನಿಧಾನವಾಗಿ ರನ್ ಏರಿಕೆ ಕಂಡಿತು. ಆದರೆ ಉಸ್ಮಾನ್ ಖವಾಜ 59 ರನ್‍ಗೆ (81 ಎಸೆತ) ಪೆವೆಲಿನ್‍ಗೆ ಮರಳಿದರು. ಉಸ್ಮಾನ್ ಖವಾಜ ಹಾಗೂ ಮಾರ್ಶ್ ಅವರು 92 ರನ್ ಜತೆಯಾಟವು ತಂಡಕ್ಕೆ ಆಸರೆ ಆಗಿತ್ತು.

    ಮಾರ್ಶ್ ಜತೆ ಸೇರಿದ ಹ್ಯಾಂಡ್ಸ್‍ಕಾಂಬ್ ಬಿರುಸಿನ ಆಟ ಆರಂಭಿಸಿದರು. ಇದ್ಕಕೆ ಸಾಥ್ ನೀಡಿದ ಮಾರ್ಶ್ ರನ್‍ಗಳನ್ನು ಕಲೆಹಾಕುವಲ್ಲಿ ಮುಂದಾದರು. 70 ಎಸೆತಗಳಲ್ಲಿ ನಾಲ್ಕು ಬೌಂಡರಿಗಳಿಂದ 54 ರನ್ ಗಳಿಸಿದ ಮಾರ್ಶ್ ಕುಲದೀಪ್ ಯಾದವ್ ದಾಳಿಗೆ ವಿಕೆಟ್ ಕಳೆದುಕೊಂಡರು. ತಂಡದ ಮೊತ್ತವನ್ನು ವೇಗವಾಗಿ ಏರಿಸಿದ್ದ ಹ್ಯಾಂಡ್ಸ್ ಕಾಂಬ್ 61 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ಗಳಿಂದ 73 ಗಳಿಸಿ ಭುವನೇಶ್ವರ್ ಬೌಲಿಂಗ್ ವೇಳೆ ಶಿಖರ್ ಧವನ್‍ಗೆ ಕ್ಯಾಚ್ ಒಪ್ಪಿಸಿ ಪೆವಿಲಿಯನ್‍ಗೆ ನಡೆದರು. ಸ್ಟೋಯ್ನಿಸ್ 43 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 47 ರನ್ ಹಾಗೂ ಗ್ಲೆನ್ ಮ್ಯಾಕ್ಸ್‍ವೆಲ್ 11 ರನ್‍ಗಳನ್ನು ಅಜೇಯರಾಗುಳಿದರು. ಈ ಮೂಲಕ ಐದು ವಿಕೆಟ್ ನಷ್ಟಕ್ಕೆ 288 ರನ್‍ಗಳ ಗಳಿಸಿ ಟೀ ಇಂಡಿಯಾಗೆ ಸವಾಲು ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಗ್ಲೆಂಡ್ ಟೆಸ್ಟ್: ಬುಮ್ರಾ ಬಳಿಕ ಮತ್ತೊಬ್ಬ ವೇಗಿ ಫಿಟ್

    ಇಂಗ್ಲೆಂಡ್ ಟೆಸ್ಟ್: ಬುಮ್ರಾ ಬಳಿಕ ಮತ್ತೊಬ್ಬ ವೇಗಿ ಫಿಟ್

    ಲಂಡನ್: ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆರಂಭದ 2 ಪಂದ್ಯಗಳಲ್ಲಿ ಸೋಲುಂಡು ತೀವ್ರ ಟೀಕೆಗಳನ್ನು ಎದುರಿಸುತ್ತಿರುವ ಟೀಂ ಇಂಡಿಯಾಗೆ ಪ್ರಮುಖ ಇಬ್ಬರು ವೇಗದ ಬೌಲರ್ ಗಳು ಕಮ್ ಬ್ಯಾಕ್ ಮಾಡುವ ನಿರೀಕ್ಷೆ ಇದೆ.

    ಗಾಯದ ಸಮಸ್ಯೆಯಿಂದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಜಸ್‍ಪ್ರೀತ್ ಬುಮ್ರಾ ಈಗಾಗಲೇ ಸಂಪೂರ್ಣ ಚೇತರಿಸಿಕೊಂಡಿದ್ದು, ಮತ್ತೊಬ್ಬ ಬೌಲರ್ ಭುವನೇಶ್ವರ್ ಕುಮಾರ್ ಸಹ ಲಭ್ಯರಾಗಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಟೀಂ ಇಂಡಿಯಾ ಆಟಗಾರರು ಇಂದು 3ನೇ ಟೆಸ್ಟ್ ಪಂದ್ಯಕ್ಕೆ ಮತ್ತಷ್ಟು ಫಿಟ್ ಆಗಲು ಜೀಮ್ ಸೆಶನ್ ಏರ್ಪಡಿಸಲಾಗಿದೆ. ಇನ್ನು 2ನೇ ಟೆಸ್ಟ್ ವೇಳೆ ಗಾಯಗೊಂಡಿದ್ದ ಸ್ಪಿನ್ನರ್ ಅಶ್ವಿನ್ ಹಾಗೂ ಹಾರ್ದಿಕ್ ಪಾಂಡ್ಯ ಸಹ 3ನೇ ಟೆಸ್ಟ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

    ಕಳೆದ ಜೂನ್ ನಲ್ಲಿ ನಡೆದ ಐರ್ಲೆಂಡ್ ವಿರುದ್ಧ ಟೂರ್ನಿಯ ವೇಳೆ ಬುಮ್ರಾ ಗಾಯಗೊಂಡಿದ್ದರು. ಬಳಿಕ ಬುಮ್ರಾ ಬಿಸಿಸಿಐ ನ ಎನ್‍ಸಿಎ ತಜ್ಞ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಬುಮ್ರಾ ಟೆಸ್ಟ್ ಪಂದ್ಯದ ಅಭ್ಯಾಸ ವೇಳೆ ಬೆರಳಿಗೆ ಪ್ಲಾಸ್ಟರ್ ಧರಿಸದೆ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ಈ ಹಿಂದೆ ಬಿಸಿಸಿಐ ಕೂಡ ತಂಡದ ಆಟಗಾರರು ಜೀಮ್ ನಲ್ಲಿ ಬೆವರಿಳಿಸುತ್ತಿರುವ ಫೋಟೋ ಟ್ವೀಟ್ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv