Tag: Bhuvaneswara

  • ಅಪರೂಪದ ಹಳದಿ ಬಣ್ಣದ ಆಮೆ ಪತ್ತೆ

    ಅಪರೂಪದ ಹಳದಿ ಬಣ್ಣದ ಆಮೆ ಪತ್ತೆ

    ಭುವನೇಶ್ವರ: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಅಪರೂಪದ ಹಳದಿ ಬಣ್ಣದ ಆಮೆ ಪತ್ತೆಯಾಗಿದೆ.

    ಬಾಲಸೋರ್ ಜಿಲ್ಲೆಯ ಸುಜನ್‍ಪುರ ಗ್ರಾಮದ ಸ್ಥಳೀಯರು ಭಾನುವಾರ ಈ ವಿಶಿಷ್ಟವಾದ ಆಮೆಯನ್ನು ನೋಡಿದ್ದಾರೆ. ನಂತರ ಸ್ಥಳೀಯರು ಆಮೆ ಹಳದಿ ಬಣ್ಣ ಇರುವುದನ್ನು ನೋಡಿ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.

    ಹಿರಿಯ ವನ್ಯಜೀವಿ ಅಧಿಕಾರಿಯೊಬ್ಬರು ಇದು ಅಪರೂಪದ ಆಮೆಯಾಗಿದೆ ಎಂದು ತಿಳಿಸಿದ್ದಾರೆ. ಹಳದಿ ಆಮೆ ಬಾಲಸೋರ್ ಜಿಲ್ಲೆಯ ಸುಜನ್‍ಪುರ ಗ್ರಾಮದ ಸ್ಥಳೀಯರು ಭಾನುವಾರ ರಕ್ಷಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಆಮೆಯನ್ನು ತೆಗೆದುಕೊಂಡು ಹೋಗಿದ್ದಾರೆ.

    “ರಕ್ಷಿಸಿದ ಆಮೆಯ ಸಂಪೂರ್ಣ ಕವಚ ಮತ್ತು ದೇಹ ಹಳದಿಯಾಗಿದೆ. ಇದು ಅಪರೂಪದ ಆಮೆಯಾಗಿದ್ದು, ನಾನು ಇದುವರೆಗೂ ಈ ರೀತಿಯ ಆಮೆಯನ್ನು ನೋಡಿಲ್ಲ” ಎಂದು ವನ್ಯಜೀವಿ ವಾರ್ಡನ್ ಆಚಾರ್ಯ ಹೇಳಿದ್ದಾರೆ.

    “ಬಹುಶಃ ಇದು ಆಲ್ಬಿನೋ ಆಗಿರಬಹುದು. ಕೆಲವು ವರ್ಷಗಳ ಹಿಂದೆ ಸಿಂಧ್‍ನ ಸ್ಥಳೀಯರು ಇಂತಹ ಒಂದು ಅಪರೂಪದ ಆಮೆಯನ್ನು ಪತ್ತೆ ಮಾಡಿದ್ದರು ಎಂದು ಐಎಫ್‍ಎಸ್ ಅಧಿಕಾರಿ ಸುಸಂತಾ ನಂದಾ ಟ್ವಿಟ್ಟಿರಿನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಆಮೆ ನೀರಿನಲ್ಲಿ ಈಜುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ಕಳೆದ ತಿಂಗಳು ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಡಿಯುಲಿ ಅಣೆಕಟ್ಟಿನಲ್ಲಿ ಅಪರೂಪದ ಜಾತಿಯ Trionychidae (ಟ್ರಯೋನಿಚಿಡೆ) ಆಮೆಯನ್ನು ಮೀನುಗಾರರು ಹಿಡಿದಿದ್ದರು. ನಂತರ ಅರಣ್ಯ ಇಲಾಖೆಯವರು ಆ ಆಮೆಯನ್ನು ರಕ್ಷಿಸಿ ಡಿಯುಲಿ ಅಣೆಕಟ್ಟಿನ ವ್ಯಾಪ್ತಿಯಲ್ಲಿರುವ ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿತ್ತು.

    ಈ ಆಮೆಗಳು ಸಾಫ್ಟ್ ಕವಚ ಹೊಂದಿದ್ದು, ಇದು ಆಫ್ರಿಕಾ, ಏಷ್ಯಾ ಮತ್ತು ಉತ್ತರ ಅಮೆರಿಕಾದಲ್ಲಿ ಕಂಡುಬರುತ್ತದೆ. ಈ ಆಮೆ 30 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವಿತ್ತು. ಅದರ ಗರಿಷ್ಠ ಜೀವಿತಾವಧಿ 50 ವರ್ಷಗಳು ಎಂದು ಅರಣ್ಯ ಇಲಾಖೆ ತಿಳಿಸಿತ್ತು.

  • ಪ್ರಿಯಕರನೊಂದಿಗೆ ಬೆಡ್ ಮೇಲೆ ಇದ್ದಾಗಲೇ ಸಿಕ್ಕಿಬಿದ್ಳು- ಪತಿಯನ್ನ ಕೊಂದು ರಸ್ತೆಗೆ ಎಸೆದ್ಳು

    ಪ್ರಿಯಕರನೊಂದಿಗೆ ಬೆಡ್ ಮೇಲೆ ಇದ್ದಾಗಲೇ ಸಿಕ್ಕಿಬಿದ್ಳು- ಪತಿಯನ್ನ ಕೊಂದು ರಸ್ತೆಗೆ ಎಸೆದ್ಳು

    – ಅನೈತಿಕ ಸಂಬಂಧ ಹೊಂದಿದ್ದ 2 ಮಕ್ಕಳ ತಾಯಿ

    ಭುವನೇಶ್ವರ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಸಹಾಯದಿಂದ ಪತಿಯನ್ನೇ ಕೊಲೆ ಮಾಡಿರುವ ಘಟನೆ ಒಡಿಶಾದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ.

    ಮುನಿಗುಡ ನಿವಾಸಿ ರಾಜ್‍ಕುಮಾರ್ ಕೊಲೆಯಾದ ವ್ಯಕ್ತಿ. ಈತನ ಪತ್ನಿ ನಿವೇದಿತಾ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿದ್ದಾಳೆ. ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ರಾಜ್‍ಕುಮಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಈತ ನಿವೇದಿತಾ ಜೊತೆ ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಪತ್ನಿ ನಿವೇದಿತಾ ಅದೇ ಗ್ರಾಮದ ಬೇರೊಬ್ಬನ ಜೊತೆ ತನ್ನ ಪತಿಗೆ ಗೊತ್ತಿಲ್ಲದೇ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಎರಡು ದಿನಗಳ ಹಿಂದೆ ತನ್ನ ಪ್ರಿಯಕರನನ್ನ ಮನೆಗೆ ಕರೆಸಿಕೊಂಡಿದ್ದಳು. ಆದರೆ ಇದೇ ವೇಳೆ ರಾಜ್‍ಕುಮಾರ್ ಮನೆಗೆ ಬಂದಿದ್ದಾನೆ. ಆಗ ತನ್ನ ಪತ್ನಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಬೆಡ್ ಮೇಲೆ ಮಲಗಿರುವುದು ನೋಡಿದ್ದಾನೆ. ಇದರಿಂದ ಕೋಪಗೊಂಡ ರಾಜ್‍ಕುಮಾರ್ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ನಿವೇದಿತಾ ತನ್ನ ಪ್ರಿಯಕರನ ಸಹಾಯ ಪಡೆದ ಆತನ ತಲೆಗೆ ಹೊಡೆದಿದ್ದಾಳೆ.

    ರಾಜ್‍ಕುಮಾರ್ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಂತರ ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿ ಕಾರಿನಲ್ಲಿ ತೆಗೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ಬಿಸಾಡಿ ಮನೆಗೆ ವಾಪಸ್ ಬಂದಿದ್ದಾಳೆ. ತಾನೇ ಕೊಲೆ ಮಾಡಿ ಬುಧವಾರ ಮುಂಗಡ ಪೊಲೀಸ್ ಠಾಣೆಗೆ ಹೋಗಿ ಪತಿ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದಾಳೆ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು.

    ಆಗ ಪೊಲೀಸರಿಗೆ ರಾಜ್‍ಕುಮಾರ್ ಮೃತದೇಹ ಪತ್ತೆಯಾಗಿದೆ. ಜೊತೆಗೆ ಮೃತದೇಹದ ಬಳಿ ಕೆಲವು ಸಾಕ್ಷ್ಯಗಳು ಪತ್ತೆಯಾಗಿವೆ. ನಂತರ ಆ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದಾರೆ. ಆಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯಕ್ಕೆ ಪೊಲೀಸರು ನಿವೇದಿತಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.