Tag: Bhupesh Baghel

  • ಛತ್ತೀಸ್‌ಗಢ ಮದ್ಯ ಹಗರಣ | ಮಾಜಿ ಸಿಎಂ ಭೂಪೇಶ್ ಬಘೇಲ್ ಪುತ್ರ ಎಸಿಬಿ ಕಸ್ಟಡಿಗೆ

    ಛತ್ತೀಸ್‌ಗಢ ಮದ್ಯ ಹಗರಣ | ಮಾಜಿ ಸಿಎಂ ಭೂಪೇಶ್ ಬಘೇಲ್ ಪುತ್ರ ಎಸಿಬಿ ಕಸ್ಟಡಿಗೆ

    ರಾಯ್ಪುರ್‌: ಮದ್ಯ ಹಗರಣದಲ್ಲಿ (Chhattisgarh Liquor Scam) ಜಾರಿ ನಿರ್ದೇಶನಾಲಯದಿಂದ (Enforcement Directorate) ಅರೆಸ್ಟ್‌ ಆಗಿ, ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಿಎಂ ಭೂಪೇಶ್ ಬಘೇಲ್ (Bhupesh Baghel) ಪುತ್ರ ಚೈತನ್ಯ ಬಘೇಲ್‌ರನ್ನು ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau) ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದೆ.

    ಜುಲೈ 18 ರಂದು ಜಾರಿ ನಿರ್ದೇಶನಾಲಯ ಬಂಧಿಸಿದಾಗಿನಿಂದ ಚೈತನ್ಯ ನ್ಯಾಯಾಂಗ ಬಂಧನದಲ್ಲಿದ್ದರು. ಚೈತನ್ಯ ಸೇರಿದಂತೆ ಮತ್ತೊಬ್ಬ ಆರೋಪಿಯನ್ನು ಎಸಿಬಿ ಬುಧವಾರ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಿ, ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ಅಕ್ಟೋಬರ್ 6 ರವರೆಗೆ ಎಸಿಬಿ ಕಸ್ಟಡಿಗೆ ಒಪ್ಪಿಸಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌ – ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಪುತ್ರ ಬಂಧನ

    ಕಳೆದ ಜನವರಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಕೋನಗಳ ಕುರಿತು ಎಸಿಬಿ ತನಿಖೆ ನಡೆಸುತ್ತಿದೆ. ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 2019 ಮತ್ತು 2022 ರ ನಡುವೆ 2,500 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಮದ್ಯ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಸುಮಾರು 1,000 ಕೋಟಿ ರೂ.ಗಳನ್ನು ವೈಯಕ್ತಿಕವಾಗಿ ನಿರ್ವಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.

    ಚೈತನ್ಯ ಅವರ ವಕೀಲ ಫೈಸಲ್ ರಿಜ್ವಿ, ಈ ಬಗ್ಗೆ ಪ್ರತಿಕ್ರಿಯಿಸಿ, ಯಾವುದೇ ಪುರಾವೆಗಳಿಲ್ಲದೆ ಅವರನ್ನು ಬಂಧಿಸಲಾಗಿದೆ. ಎಸಿಬಿ ಮಾಡಿರುವ ಆರೋಪಪಟ್ಟಿಯಲ್ಲಿ ಸುಮಾರು 45 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಅವರಲ್ಲಿ 29 ಜನರನ್ನು ಬಂಧಿಸಲಾಗಿಲ್ಲ. ಇಲ್ಲಿಯವರೆಗೆ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಚೈತನ್ಯ ಅವರ ಹೆಸರಿನ ಉಲ್ಲೇಖವಿಲ್ಲ. ರಾಜಕೀಯ ಒತ್ತಡದಿಂದ ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.

    ಇ.ಡಿ ಚೈತನ್ಯರನ್ನು ಬಂಧಿಸಿದಾಗ ರಾಜ್ಯದ ರಾಯ್‌ಗಢ ಜಿಲ್ಲೆಯ ತಮ್ನಾರ್ ತಹಸಿಲ್‌ನಲ್ಲಿ ಅದಾನಿ ಗ್ರೂಪ್‌ನಿಂದ ಕಲ್ಲಿದ್ದಲು ಗಣಿ ಯೋಜನೆಗಾಗಿ ಮರಗಳನ್ನು ಕಡಿಯುತ್ತಿರುವ ವಿಷಯವನ್ನು ಡೈವರ್ಟ್‌ ಮಾಡಲು ಹೀಗೆ ಮಾಡಲಾಗಿದೆ ಎಂದು ಭೂಪೇಶ್ ಬಘೇಲ್ ಟೀಕಿಸಿದ್ದರು. ಇದನ್ನೂ ಓದಿ: ಬೆಟ್ಟಿಂಗ್ ಆಪ್ ಕೇಸ್‌ | `ಕೈʼ ನಾಯಕ ಭೂಪೇಶ್ ಬಘೇಲ್‌ ಮನೆ ಮೇಲೆ ಸಿಬಿಐ ದಾಳಿ

  • ಅಕ್ರಮ ಹಣ ವರ್ಗಾವಣೆ ಕೇಸ್‌ – ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಪುತ್ರ ಬಂಧನ

    ಅಕ್ರಮ ಹಣ ವರ್ಗಾವಣೆ ಕೇಸ್‌ – ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಪುತ್ರ ಬಂಧನ

    ರಾಯ್ಪುರ: ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ (Bhupesh Baghel) ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಮತ್ತು ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Chaitanya Baghel) ಅವರ ಪುತ್ರನನ್ನು ಇ.ಡಿ ಬಂಧಿಸಿದೆ.

    ಶುಕ್ರವಾರ ಬೆಳಗ್ಗೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ವರ್ಷ ಎರಡನೇ ಬಾರಿಗೆ ಭಿಲಾಯಿಯಲ್ಲಿರುವ ಬಘೇಲ್ ಕುಟುಂಬದ ನಿವಾಸದ ಮೇಲೆ ದಾಳಿ ನಡೆಸಿದರು. ಬಳಿಕ ಬಘೇಲ್ ಪುತ್ರ ಚೈತನ್ಯ ಬಘೇಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಇದನ್ನೂ ಓದಿ: ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆ| ಸಂಸತ್‌ನಲ್ಲಿ ಮಹಾಭಿಯೋಗಕ್ಕೆ ತಯಾರಿ – ಸುಪ್ರೀಂ ಮೆಟ್ಟಿಲೇರಿದ ನ್ಯಾ.ಯಶವಂತ್ ವರ್ಮಾ

    ರಾಜ್ಯದ ರಾಯ್‌ಗಢ ಜಿಲ್ಲೆಯ ತಮ್ನಾರ್ ತಹಸಿಲ್‌ನಲ್ಲಿ ಅದಾನಿ ಗ್ರೂಪ್‌ನಿಂದ ಕಲ್ಲಿದ್ದಲು ಗಣಿ ಯೋಜನೆಗಾಗಿ ಮರಗಳನ್ನು ಕಡಿಯುತ್ತಿರುವ ವಿಷಯವನ್ನು ಡೈವರ್ಟ್‌ ಮಾಡಲು ಹೀಗೆ ಮಾಡಲಾಗಿದೆ ಎಂದು ಭೂಪೇಶ್ ಬಘೇಲ್ ಟೀಕಿಸಿದ್ದಾರೆ.

    ಚೈತನ್ಯ ಬಂಧನದ ಹಿನ್ನೆಲೆಯಲ್ಲಿ ಬಘೇಲ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಶಾಸಕರು ಇಂದು ಬೆಳಗ್ಗೆ ವಿಧಾನಸಭಾ ಕಲಾಪಗಳನ್ನು ಬಹಿಷ್ಕರಿಸಿದರು. ‘ಬಘೇಲ್ ಮತ್ತು ನಮ್ಮ ಮೇಲೆ ಕಿರುಕುಳ ನೀಡಲು ಇಡಿ ಮುಂದಾಗಿದೆ. ಅದರ ಬಗ್ಗೆ ಮಾತನಾಡುವುದು ಮುಖ್ಯ. ಚೈತನ್ಯರ ಬಂಧನವನ್ನು ನಾವು ವಿರೋಧಿಸುತ್ತೇವೆ. ನಾವು ಕಲಾಪವನ್ನು ಬಹಿಷ್ಕರಿಸುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಚರಣ್ ದಾಸ್ ಮಹಂತ್ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯ 50, ಬೆಂಗ್ಳೂರಿನ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ

    ಕಾಂಗ್ರೆಸ್ ನಾಯಕ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದ ಮದ್ಯ ಹಗರಣದ ಭಾಗವಾಗಿ ಜಾರಿ ನಿರ್ದೇಶನಾಲಯ (ED) ಶುಕ್ರವಾರ ಅವರ ನಿವಾಸದಲ್ಲಿ ಮತ್ತೆ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

  • ಬೆಟ್ಟಿಂಗ್ ಆಪ್ ಕೇಸ್‌ | `ಕೈʼ ನಾಯಕ ಭೂಪೇಶ್ ಬಘೇಲ್‌ ಮನೆ ಮೇಲೆ ಸಿಬಿಐ ದಾಳಿ

    ಬೆಟ್ಟಿಂಗ್ ಆಪ್ ಕೇಸ್‌ | `ಕೈʼ ನಾಯಕ ಭೂಪೇಶ್ ಬಘೇಲ್‌ ಮನೆ ಮೇಲೆ ಸಿಬಿಐ ದಾಳಿ

    ರಾಯ್ಪುರ್‌: ಮಹಾದೇವ್‌ ಬೆಟ್ಟಿಂಗ್‌ ಆಪ್‌ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಛತ್ತಿಸ್‌ಗಢದ ಮಾಜಿ ಸಿಎಂ ಹಾಗೂ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಭೂಪೇಶ್‌ ಬಘೇಲ್‌ (Bhupesh Baghel) ಅವರ ನಿವಾಸದ ಮೇಲೆ ಕೇಂದ್ರೀಯ ತನಿಖಾ ದಳ (CBI) ಇಂದು ಬೆಳಗ್ಗೆ ದಾಳಿ ನಡೆಸಿದೆ.

    ಮೂಲಗಳ ಪ್ರಕಾರ, ಸಿಬಿಐ ಅಧಿಕಾರಿಗಳ ತಂಡ ರಾಯ್‌ಪುರ ಮತ್ತು ಭಿಲಾಯಿ ಎರಡೂ ಪ್ರದೇಶದಲ್ಲಿರುವ ಬಘೇಲ್‌ ನಿವಾಸದ ಮೇಲೆ ದಾಳಿನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮನೆ ಓನರ್‌ ಹೆಂಡ್ತಿ ಜೊತೆಗೇ ಕಳ್ಳಸಂಬಂಧ – ಬಾಡಿಗೆದಾರನನ್ನ 7 ಅಡಿ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ ಪತಿ!

    ಕಳೆದ ಮಾರ್ಚ್ 10 ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಪೇಶ್ ಬಘೇಲ್ ನಿವಾಸ ಮತ್ತು ಅವರ ಪುತ್ರ ಚೈತನ್ಯ ಬಘೇಲ್ ಅವರ ನಿವಾಸ, ಸೇರಿ ದುರ್ಗ್ ಜಿಲ್ಲೆಯ 14 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಸರಣಿ ದಾಳಿ ನಡೆಸಿತ್ತು. ಇದನ್ನೂ ಓದಿ: Tumakuru | 19 ಸಾವಿರ ಗಡಿ ದಾಟಿದ ಕ್ವಿಂಟಲ್ ಕೊಬ್ಬರಿ ಧಾರಣೆ – ಸಾರ್ವಕಾಲಿಕ ದಾಖಲೆ

    508 ಕೋಟಿ ಲಂಚ:
    ಮಹದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರು (Mahadev Betting App Promoters) ಭೂಪೇಶ್‌ ಬಘೇಲ್‌ ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಈ ಹಿಂದೆಯೇ ಹೇಳಿತ್ತು. ಈ ಹಿಂದೆ ದಾಳಿ ನಡೆಸಿದಾಗ 5.39 ಕೋಟಿ ರೂ. ನಗದು ವಶಪಡಿಸಿಕೊಂಡಿತ್ತು. ಜೊತೆಗೆ ದಾಳಿ ವೇಳೆ 15 ಕೋಟಿ ರೂ. ಇರುವ ಬ್ಯಾಂಕ್‌ ಖಾತೆಯನ್ನೂ ಜಪ್ತಿ ಮಾಡಿತ್ತು.

    ಇದೀಗ ಭೂಪೇಶ್‌ ಬಘೇಲ್‌ಗೆ ಸಂಬಂಧಿಸಿದ ಎರಡು ನಿವಾಸಗಳ ಮೇಲೆ ದಾಳಿ ನಡೆಸಿರುವ ಸಿಬಿಐ ಶೋಧಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ಬೆಟ್ಟಿಂಗ್‌ ಆ್ಯಪ್‌ನಿಂದ ಛತ್ತೀಸ್‌ಗಢ ಸಿಎಂಗೆ 508 ಕೋಟಿ ಲಂಚ

  • 508 ಕೋಟಿ ನೀಡಿದ್ದೇನೆ, ಯುಎಇಗೆ ಪರಾರಿಯಾಗುವಂತೆ ಸಲಹೆ ನೀಡಿದ್ದೇ ಸಿಎಂ ಬಘೇಲ್‌: ಬೆಟ್ಟಿಂಗ್ ಆ್ಯಪ್‌ ಮಾಲೀಕ

    508 ಕೋಟಿ ನೀಡಿದ್ದೇನೆ, ಯುಎಇಗೆ ಪರಾರಿಯಾಗುವಂತೆ ಸಲಹೆ ನೀಡಿದ್ದೇ ಸಿಎಂ ಬಘೇಲ್‌: ಬೆಟ್ಟಿಂಗ್ ಆ್ಯಪ್‌ ಮಾಲೀಕ

    ನವದೆಹಲಿ: ಛತ್ತೀಸ್‌ಗಢದಲ್ಲಿ (Chhattisgarh) ಮಂಗಳವಾರ ಮೊದಲ ಹಂತದ ಚುನಾವಣೆ ನಡೆಯಲಿದೆ. ಈ ಹೊತ್ತಲ್ಲಿ ಮಹದೇವ್ ಬೆಟ್ಟಿಂಗ್ ಆ್ಯಪ್‌ (Mahadev Betting App) ಸುತ್ತ ಜೋರಾಗಿ ರಾಜಕೀಯ ನಡೆಯುತ್ತಿದ್ದು 508 ಕೋಟಿ ಲಂಚ (Corruption) ಪಡೆದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಸಿಎಂ ಭೂಪೇಶ್‌ ಬಘೇಲ್‌ (Bhupesh Baghel) ವಿರುದ್ಧ ಇದೀಗ ಬೆಟ್ಟಿಂಗ್ ಆಪ್ ಮಾಲಿಕನೇ ಸ್ಫೋಟಕ ಆರೋಪ ಮಾಡಿದ್ದಾನೆ.

    ಸದ್ಯ ದುಬೈನಲ್ಲಿರುವ ಆಪ್ ಮಾಲೀಕ ಶುಭಂ ಸೋನಿ (Subham Soni) ಮಾತನಾಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಬೆಟ್ಟಿಂಗ್ ಆ್ಯಪ್‌ ರೂಪಿಸಲು ಭೂಪೇಶ್‌ ಬಘೇಲ್‌ ಪ್ರೋತ್ಸಾಹಿಸಿದ್ದರು. ತನ್ನ ಬೆಟ್ಟಿಂಗ್‌ ವ್ಯವಹಾರ ಸಂಬಂಧ 508 ಕೋಟಿ ರೂ. ಹಣವನ್ನು ಸಿಎಂಗೆ ಪಾವತಿಸಿದ್ದೇನೆ. ಭಿಲಾಯ್‌ನಲ್ಲಿ ತಮ್ಮ ಸಹಚರರು ಅರೆಸ್ಟ್ ಆದಾಗ ಯುಎಇಗೆ ಪರಾರಿಯಾಗುವಂತೆ ಸಲಹೆ ನೀಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾನೆ. ಸದ್ಯ ಇಡಿ ಪ್ರಕರಣದ ತನಿಖೆ ನಡೆಸುತ್ತಿದ್ದು ತನ್ನನ್ನು ರಕ್ಷಿಸಬೇಕು ಎಂದು ಕೇಂದ್ರಕ್ಕೆ ಮೊರೆ ಇಟ್ಟಿದ್ದಾನೆ.

    ಈತನ ವೀಡಿಯೋವನ್ನು ಬಿಜೆಪಿ (BJP) ಅಸ್ತ್ರ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ. ಇಂಥವರಿಗೆ ಮತ್ತೆ ಅಧಿಕಾರ ನೀಡಬೇಕೇ ಯೋಚಿಸಿ ಎಂದು ಛತ್ತೀಸ್‌ಗಢ ಜನತೆಯನ್ನು ಪ್ರಶ್ನಿಸಿದೆ.

    ಈ ಆರೋಪಗಳನ್ನು ಭೂಪೇಶ್‌ ಬಘೇಲ್‌ ಖಂಡಿಸಿದ್ದು, ತಮ್ಮ ಪ್ರತಿಷ್ಠೆಗೆ ಮಸಿ ಬಳಿದು ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿಯೇ ಈ ಷಡ್ಯಂತ್ರ್ಯ ಮಾಡಿದೆ. ಅವನು ಯಾರು ಎನ್ನುವುದೇ ಗೊತ್ತಿಲ್ಲ. ತಿಂಗಳಿನಿಂದ ಈ ಪ್ರಕರಣದ ತನಿಖೆ ಮಾಡುತ್ತಿರುವ ಇಡಿಗೆ ಆತ ಮಾಲೀಕ ಎನ್ನುವುದು ಗೊತ್ತಿರಲಿಲ್ವಾ? ಎರಡು ದಿನದ ಹಿಂದಿನವರೆಗೂ ಆತನನ್ನು ಮ್ಯಾನೇಜರ್ ಎಂದೇ ಇಡಿ ಪರಿಗಣಿಸಿತ್ತು. ಈಗ ಮಾಲೀಕ ಹೇಗಾದ? ಈ ಕುತಂತ್ರ ಜನರಿಗೆ ಅರ್ಥವಾಗುತ್ತದೆ. ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಭೂಪೇಶ್‌ ಬಘೇಲ್‌ ಹೇಳಿದ್ದಾರೆ.

     

    ಬಿಜೆಪಿ ನವೆಂಬರ್‌ 17 ರವರೆಗೆ ಈ ವಿಷಯವನ್ನು ಇಟ್ಟುಕೊಂಡು ಸಂಭ್ರಮಿಸಲಿ. ಇಲ್ಲಿ ಬಿಜೆಪಿ ಇಡಿ ಮತ್ತು ಐಟಿಯನ್ನು ಬಳಸಿಕೊಂಡು ಸ್ಪರ್ಧೆ ಮಾಡುತ್ತಿದೆ ಎಂದು ಸಿಎಂ ಕಿಡಿಕಾರಿದ್ದಾರೆ.

    ಛತ್ತೀಸ್‌ಗಢದಲ್ಲಿ ನವೆಂಬರ್‌ 7 ಹಾಗೂ ನವೆಂಬರ್‌ 17ರಂದು ಎರಡು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಗೋಧಿ ಹಿಟ್ಟಿನ ಬೆಲೆ‌ ನಿಯಂತ್ರಣಕ್ಕೆ ಸರ್ಕಾರದ ಕ್ರಮ – ರಿಯಾಯಿತಿ ದರದಲ್ಲಿ ಭಾರತ್ ಅಟ್ಟಾ ಮಾರಾಟ. 1 ಕೆಜಿ ಗೋಧಿ ಹಿಟ್ಟು ಬೆಲೆ ಎಷ್ಟು?

    ಏನಿದು ಪ್ರಕರಣ?
    ಮಹದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರಲ್ಲಿ ಒಬ್ಬರಾದ ಸೌರಭ್ ಚಂದ್ರಕರ್ ಅವರು 2023ರ ಫೆಬ್ರವರಿಯಲ್ಲಿ ಯುಎಇನಲ್ಲಿ 200 ಕೋಟಿ ರೂ. ಖರ್ಚು ಮಾಡಿ ವಿವಾಹ ನಡೆಸಿದ್ದರು. ಈ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕುಟುಂಬ ಸದಸ್ಯರಿಗೆ ಖಾಸಗಿ ಜೆಟ್‌ ವಿಮಾನವನ್ನು ಬುಕ್‌ ಮಾಡಲಾಗಿತ್ತು. ಚಂದ್ರಕರ್ ಅವರು ಮದುವೆಗೆ ವೆಚ್ಚ ಮಾಡಿದ 200 ಕೋಟಿ ರೂಪಾಯಿಯನ್ನು ನಗದಿನಲ್ಲಿ ಪಾವತಿಸಿದ್ದು ಬಯಲಾಗಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮಹದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ವ್ಯವಹಾರ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಈಗ ತನಿಖೆ ನಡೆಸುತ್ತಿದೆ.

  • ಕಾಂಗ್ರೆಸ್‍ನವರು ಮಹದೇವನ ಹೆಸರನ್ನೂ ಬಿಟ್ಟಿಲ್ಲ- ಮೋದಿ ವಾಗ್ದಾಳಿ

    ಕಾಂಗ್ರೆಸ್‍ನವರು ಮಹದೇವನ ಹೆಸರನ್ನೂ ಬಿಟ್ಟಿಲ್ಲ- ಮೋದಿ ವಾಗ್ದಾಳಿ

    ರಾಯ್ಪುರ: ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಅವರ ಹೆಸರು ಮಹದೇವ ಬೆಟ್ಟಿಂಗ್ ಆಪ್‍ನಲ್ಲಿ ಕೇಳಿ ಬಂದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಛತ್ತೀಸ್‍ಗಢದ Chhattisgarh) ದುರ್ಗ್‍ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಕಾಂಗ್ರೆಸ್ ಅಕ್ರಮ ಹಣವನ್ನು ಬಳಸುತ್ತಿದೆ. ಅವರು ಮಹಾದೇವನ (Mahadev Betting App) ಹೆಸರನ್ನು ಸಹ ಬಿಡಲಿಲ್ಲ. ಚುನಾವಣಾ ಪ್ರಚಾರಕ್ಕಾಗಿ ಅಕ್ರಮ ಬೆಟ್ಟಿಂಗ್ ಆಪರೇಟರ್ ಗಳು ತಂದ ಹವಾಲಾ ಹಣವನ್ನು ಕಾಂಗ್ರೆಸ್ ಬಳಸುತ್ತಿದೆ ಎಂದು ಆರೋಪಿಸಿದರು.

    ನಾವು ಹೇಳಿದ್ದನ್ನು ಮಾಡುತ್ತೇವೆ. ಛತ್ತೀಸ್‍ಗಢವನ್ನು ಬಿಜೆಪಿ ರೂಪಿಸುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಆದರೆ ಕಾಂಗ್ರೆಸ್ ಪಕ್ಷದ ‘ಝೂತ್ ಕಾ ಪುಲಿಂದಾ’ ಬಿಜೆಪಿಯ ಮುಂದೆ ನಿಂತಿದೆ. ‘ಸಂಕಲ್ಪ ಪತ್ರ’ ಭ್ರಷ್ಟಾಚಾರದ ಮೂಲಕ ತನ್ನ ಬೊಕ್ಕಸವನ್ನು ತುಂಬಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಆದ್ಯತೆಯಾಗಿದೆ ಎಂದು ಹೇಳಿದರು.

    ಕಾಂಗ್ರೆಸ್ ಪಕ್ಷದವರು ಮಹಾದೇವನ ಹೆಸರನ್ನು ಸಹ ಬಿಡಲಿಲ್ಲ. ಎರಡು ದಿನಗಳ ಹಿಂದೆ ರಾಯ್‍ಪುರದಲ್ಲಿ ಭಾರೀ ಕಾರ್ಯಾಚರಣೆ ನಡೆದಿತ್ತು. ಅಪಾರ ಪ್ರಮಾಣದ ಕರೆನ್ಸಿ ನೋಟು ಪತ್ತೆಯಾಗಿದೆ. ಈ ಹಣ ಜೂಜುಕೋರರು ಮತ್ತು ಬೆಟ್ಟಿಂಗ್ ಕಟ್ಟುವವರದ್ದು ಎಂದು ಜನರು ಹೇಳುತ್ತಾರೆ ಎಂದು ಮೋದಿ (Narendra Modi) ಟಾಂಗ್ ನೀಡಿದರು. ಇದನ್ನೂ ಓದಿ: ಬೆಟ್ಟಿಂಗ್‌ ಆ್ಯಪ್‌ನಿಂದ ಛತ್ತೀಸ್‌ಗಢ ಸಿಎಂಗೆ 508 ಕೋಟಿ ಲಂಚ

    ಹಗಲಿರುಳು ಎನ್ನದೇ ಕಾಂಗ್ರೆಸ್ (Congress) ಪಕ್ಷ ಮೋದಿಯನ್ನು ನಿಂದಿಸುತ್ತದೆ. ಈಗ ಮುಖ್ಯಮಂತ್ರಿಗಳು ದೇಶದ ತನಿಖಾ ಸಂಸ್ಥೆಗಳನ್ನೂ ನಿಂದಿಸಲು ಪ್ರಾರಂಭಿಸಿದ್ದಾರೆ. ಆದರೆ ಮೋದಿಯು ಈ ನಿಂದನೆಗಳಿಗೆ ಹೆದರುವುದಿಲ್ಲ ಎಂದು ಛತ್ತೀಸ್‍ಗಢದ ಜನರಿಗೆ ನಾನು ಹೇಳಲು ಬಯಸುತ್ತೇನೆ. ಭ್ರಷ್ಟರನ್ನು ಎದುರಿಸಲು ನೀವು ಮೋದಿಯನ್ನು ದೆಹಲಿಗೆ ಕಳುಹಿಸಿದ್ದೀರಿ ಎಂದು ತಿಳಿಸಿದರು.

    ಛತ್ತೀಸ್‍ಗಢವನ್ನು ಲೂಟಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಲ್ಲಿನ ಭ್ರಷ್ಟ ಸರ್ಕಾರವು ಒಂದರ ನಂತರ ಒಂದರಂತೆ ನಿಮ್ಮ ನಂಬಿಕೆಯನ್ನು ಮುರಿದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಮತ್ತೊಮ್ಮೆ ಇಂತಹ ಹಗರಣಗಳ ಬಗ್ಗೆ ಕಟ್ಟುನಿಟ್ಟಿನ ತನಿಖೆ ನಡೆಸಿ ಲೂಟಿ ಮಾಡಿದವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಮೋದಿ ಹೇಳಿದರು.

    ಛತ್ತೀಸ್‍ಗಢ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಹಾಲಿ ಕಾಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಮಹಾದೇವ್ ಬೆಟ್ಟಿಂಗ್ ಆಪ್‍ನ ಅಕ್ರಮದ ಸುಳಿಗೆ ಬಿದ್ದಿದ್ದಾರೆ. ಮಹದೇವ್ ಬೆಟ್ಟಿಂಗ್ ಆಪ್ ಪ್ರವರ್ತಕರು ಇಲ್ಲಿಯವರೆಗೆ  ಬಘೇಲ್ ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಎಂದು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಹೇಳಿದೆ.

  • ಬೆಟ್ಟಿಂಗ್‌ ಆ್ಯಪ್‌ನಿಂದ ಛತ್ತೀಸ್‌ಗಢ ಸಿಎಂಗೆ 508 ಕೋಟಿ ಲಂಚ

    ಬೆಟ್ಟಿಂಗ್‌ ಆ್ಯಪ್‌ನಿಂದ ಛತ್ತೀಸ್‌ಗಢ ಸಿಎಂಗೆ 508 ಕೋಟಿ ಲಂಚ

    – ಸಂಚಲನ ಮೂಡಿಸಿದ ಇಡಿ ಹೇಳಿಕೆ

    ರಾಯ್‌ಪುರ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆಗೆ (Chhattisgarh Election) ಕೆಲವೇ ದಿನಗಳು ಬಾಕಿ ಇರುವಾಗ ಹಾಲಿ ಕಾಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ (Bhupesh Baghel) ಅವರು ಮಹದೇವ್‌ ಬೆಟ್ಟಿಂಗ್‌ ಆಪ್‌ನ ಅಕ್ರಮದ ಸುಳಿಗೆ ಬಿದ್ದಿದ್ದಾರೆ.

    ಮಹದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರು (Mahadev Betting App Promoters) ಇಲ್ಲಿಯವರೆಗೆ ಭೂಪೇಶ್‌ ಬಘೇಲ್‌ ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಎಂದು ಜಾರಿ ನಿರ್ದೇಶನಾಲಯ (ED) ಹೇಳಿದೆ.

    ಇಡಿ ಈಗಾಗಲೇ ಮಹದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರನ್ನು ವಿಚಾರಣೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ 5.39 ಕೋಟಿ ರೂಪಾಯಿಯನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ 15 ಕೋಟಿ ರೂ. ಇರುವ ಬ್ಯಾಂಕ್‌ ಖಾತೆಯನ್ನೂ ಜಪ್ತಿ ಮಾಡಿದ್ದು, ಆಸಿಂ ದಾಸ್‌ ಎಂಬಾತನನ್ನು ಬಂಧಿಸಿದೆ.   ಇದನ್ನೂ ಓದಿ: ಮಸೀದಿಯಲ್ಲಿ ಒಗ್ಗಟ್ಟಿನ ಸಭೆ, ಮುಸ್ಲಿಂ ಮತಗಳಿಂದಲೇ ಕಾಂಗ್ರೆಸ್ ಅಧಿಕಾರ: ಜಮೀರ್

    ಗುರುವಾರ ಹೋಟೆಲ್ ಟ್ರಿಟಾನ್ ಮತ್ತು ಭಿಲಾಯಿಯ ಮತ್ತೊಂದು ಸ್ಥಳದಲ್ಲಿ ಶೋಧಗಳನ್ನು ನಡೆಸಲಾಗಿದೆ. ಈ ವೇಳೆ ಹಣ ಸಾಗಾಟದ ಕೊರಿಯರ್‌ ಅನ್ನು ಯಶಸ್ವಿಯಾಗಿ ತಡೆ ಹಿಡಿಯಲಾಗಿದೆ. ಕಾಂಗ್ರೆಸ್ ಪಕ್ಷದ ಚುನಾವಣಾ ವೆಚ್ಚಕ್ಕಾಗಿ ದೊಡ್ಡ ಮೊತ್ತದ ನಗದನ್ನು ತಲುಪಿಸಲು ಈ ಹಣ ಸಾಗಾಟ ಮಾಡಲಾಗುತ್ತಿತ್ತು ಎಂದು ಇಡಿ ತಿಳಿಸಿದೆ.

    ದಾಸ್ ಕಾರು ಮತ್ತು ನಿವಾಸದಿಂದ 5.39 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಯುಎಇಯಲ್ಲಿ ನೆಲೆಸಿರುವ ಮಹದೇವ್ ಆ್ಯಪ್‌ನ ಪ್ರವರ್ತಕರು ಹಣವನ್ನು ರಾಜಕಾರಣಿ ಭೂಪೇಶ್‌ ಬಘೇಲ್‌ ತಲುಪಿಸಲು ವ್ಯವಸ್ಥೆ ಮಾಡಿದ್ದನ್ನು ದಾಸ್‌ ಒಪ್ಪಿಕೊಂಡಿದ್ದಾನೆ. ಛತ್ತೀಸ್‌ಗಢ ರಾಜ್ಯದಲ್ಲಿ ಮುಂದೆ ನಡೆಯಲಿರುವ ಚುನಾವಣಾ ವೆಚ್ಚಕ್ಕೆ ಬಳಸಲು ಈ ಹಣ ಬಳಕೆಯಾಗುತ್ತಿತ್ತು. ಇಲ್ಲಿಯವರೆಗೆ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರಿಗೆ ಸುಮಾರು 508 ಕೋಟಿ ರೂ. ಸಂದಾಯ ಮಾಡಲಾಗಿದೆ ಎಂದು ಆತ ಹೇಳಿದ್ದಾನೆ. ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಯುತ್ತಿದೆ ಎಂದು ಇಡಿ ಹೇಳಿದೆ.

    ಛತ್ತೀಸ್‌ಗಢದಲ್ಲಿ ನವೆಂಬರ್‌ 7 ಹಾಗೂ ನವೆಂಬರ್‌ 17ರಂದು ಎರಡು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

     

    ಏನಿದು ಪ್ರಕರಣ?
    ಮಹದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರಲ್ಲಿ ಒಬ್ಬರಾದ ಸೌರಭ್ ಚಂದ್ರಕರ್ ಅವರು 2023ರ ಫೆಬ್ರವರಿಯಲ್ಲಿ ಯುಎಇನಲ್ಲಿ 200 ಕೋಟಿ ರೂ. ಖರ್ಚು ಮಾಡಿ ವಿವಾಹ ನಡೆಸಿದ್ದರು. ಈ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕುಟುಂಬ ಸದಸ್ಯರಿಗೆ ಖಾಸಗಿ ಜೆಟ್‌ ವಿಮಾನವನ್ನು ಬುಕ್‌ ಮಾಡಲಾಗಿತ್ತು. ಚಂದ್ರಕರ್ ಅವರು ಮದುವೆಗೆ ವೆಚ್ಚ ಮಾಡಿದ 200 ಕೋಟಿ ರೂಪಾಯಿಯನ್ನು ನಗದಿನಲ್ಲಿ ಪಾವತಿಸಿದ್ದು ಬಯಲಾಗಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮಹದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ವ್ಯವಹಾರ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಈಗ ತನಿಖೆ ನಡೆಸುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಮುವಾದ, ಮತಾಂತರ.. ಬಿಜೆಪಿ ಬಳಿ ಇರೋದು ಇವೆರಡೆ ವಿಚಾರ: ಛತ್ತೀಸ್‌ಗಢ ಸಿಎಂ

    ಕೋಮುವಾದ, ಮತಾಂತರ.. ಬಿಜೆಪಿ ಬಳಿ ಇರೋದು ಇವೆರಡೆ ವಿಚಾರ: ಛತ್ತೀಸ್‌ಗಢ ಸಿಎಂ

    ರಾಯ್ಪುರ: ಕೋಮುವಾದ ಮತ್ತು ಮತಾಂತರ. ಬಿಜೆಪಿ ಬೇಕಿರುವುದು ಇವೆರಡೆ ವಿಚಾರ ಎಂದು ಛತ್ತೀಸ್‌ಗಢ (Chhattisgarh CM) ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ (Bhupesh Baghel) ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿಯವರಲ್ಲಿ (BJP) ಕೇವಲ 2 ವಿಷಯಗಳಿವೆ. ಕೋಮುವಾದ ಮತ್ತು ಧಾರ್ಮಿಕ ಮತಾಂತರ. ಸಮುದಾಯಗಳ ನಡುವೆ ಜಗಳ ತಂದಿಡುತ್ತಾರೆ. ಅವರು ಯಾವುದೇ ಕೆಲಸ ಮಾಡುವುದಿಲ್ಲ. ಆದರೆ ಜನರಲ್ಲಿ ದ್ವೇಷ ತಂದಿಟ್ಟು ಮತ ಗಳಿಸುತ್ತಾರೆ. ಅವರದ್ದು ದ್ವೇಷ, ಹಿಂಸಾಚಾರದ ಮನೋಭಾವ ಎಂದು ಬಸ್ತಾರ್‌ನಲ್ಲಿ ನಡೆದ ಸಭೆಯೊಂದರಲ್ಲಿ ಬಿಜೆಪಿ ವಿರುದ್ಧ ಸಿಎಂ ಹರಿಹಾಯ್ದರು. ಇದನ್ನೂ ಓದಿ: ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ತಲೆ ಎತ್ತಲಿದೆ ಶ್ರೀರಾಮನ ಮೂರ್ತಿ

    ಛತ್ತೀಸ್‌ಗಢದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆಯೊಂದಿಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.

    ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಮುಖ ಪಾತ್ರ ವಹಿಸಿವೆ. ತೆಲಂಗಾಣದಲ್ಲಿ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಇದನ್ನೂ ಓದಿ: ಕರ್ನಾಟಕ ಆಧುನಿಕ ಉದ್ಯಮದ ತೊಟ್ಟಿಲು – ರಾಜ್ಯೋತ್ಸವಕ್ಕೆ ಶುಭಕೋರಿದ ಮೋದಿ, ಸಿಎಂ

    ಮುಂಬರುವ 2024 ರ ಲೋಕಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಕಾಂಗ್ರೆಸ್ ಆಡಳಿತದ ರಾಜ್ಯದಿಂದ ಅಧಿಕಾರವನ್ನು ಕಸಿದುಕೊಳ್ಳುವ ಗುರಿಯನ್ನು ಬಿಜೆಪಿ ಹೊಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಗತ್ಯವಿದ್ದರೆ ರಾಜ್ಯದಲ್ಲೂ ಬಜರಂಗದಳ ನಿಷೇಧ ಮಾಡ್ತೀವಿ – ಛತ್ತೀಸಗಢ ಸಿಎಂ

    ಅಗತ್ಯವಿದ್ದರೆ ರಾಜ್ಯದಲ್ಲೂ ಬಜರಂಗದಳ ನಿಷೇಧ ಮಾಡ್ತೀವಿ – ಛತ್ತೀಸಗಢ ಸಿಎಂ

    ರಾಯ್ಪುರ: ರಾಜ್ಯದಲ್ಲಿ ಬಜರಂಗದಳ (Bajrang Dal) ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ರಾಜ್ಯದಲ್ಲೂ ಸಂಘಟನೆಯನ್ನು ನಿಷೇಧಿಸಲಾಗುವುದು ಎಂದು ಛತ್ತೀಸಗಢ (Chhattisgarh) ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ (Bhupesh Baghel) ತಿಳಿಸಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್‌ (Congress) ಪ್ರಣಾಳಿಕೆ ಬಿಡುಗಡೆ ಮಾಡಿತು. ಪಕ್ಷ ಅಧಿಕಾರಕ್ಕೆ ಬಂದರೆ ಬಜರಂಗದಳ ಸಂಘಟನೆಯನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಹಿಂದೂಪರ ಸಂಘಟನೆಗಳ ಆಕ್ರೋಶ ಹೊರಹಾಕಿವೆ. ಇದೇ ಹೊತ್ತಿನಲ್ಲಿ ಬಜರಂಗದಳ ಸಂಘಟನೆ ಬಗ್ಗೆ ಛತ್ತೀಸಗಢ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬ್ರಾಹ್ಮಣರು ಭಾರತದವರಲ್ಲ, ರಷ್ಯಾದಿಂದ ಬಂದಿದ್ದಾರೆ: ಆರ್‌ಜೆಡಿ ನಾಯಕ ಯದುವಂಶ್ ಕುಮಾರ್

    ಎರಡೂ ರಾಜ್ಯಗಳಲ್ಲಿನ ಪರಿಸ್ಥಿತಿಗಳು ವಿಭಿನ್ನವಾಗಿರುವ ಕಾರಣ ಕರ್ನಾಟಕದಲ್ಲಿ ತೆಗೆದುಕೊಂಡ ನಿರ್ಧಾರಗಳು ಛತ್ತೀಸಗಢಕ್ಕೆ ಅನ್ವಯಿಸುವುದಿಲ್ಲ. ಬಜರಂಗಿಗಳು ಇಲ್ಲಿ (ಛತ್ತೀಸ್‌ಗಢದಲ್ಲಿ) ಕೆಲವು ಗೊಂದಲಗಳನ್ನು ಉಂಟುಮಾಡಿದರು. ಅವೆಲ್ಲವನ್ನು ನಾವು ಸರಿಪಡಿಸಿದ್ದೇವೆ. ಕರ್ನಾಟಕ ಕಾಂಗ್ರೆಸ್‌ನ ನಿರ್ಧಾರಗಳು ಛತ್ತೀಸಗಢಕ್ಕೂ ಅನ್ವಯಿಸುವ ಅಗತ್ಯವಿಲ್ಲ. ಒಂದು ವೇಳೆ ಅಗತ್ಯವೆನಿಸಿದರೆ ಆಲೋಚಿಸಿ ಕ್ರಮಕೈಗೊಳ್ಳುತ್ತೇವೆ. ನಮ್ಮ ನಾಯಕರು ಮತ್ತು ಪಕ್ಷದ ಪದಾಧಿಕಾರಿಗಳು ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಹೇಳಿಕೆಗೆ ಛತ್ತೀಸಗಢ ರಾಜ್ಯದ ಬಜರಂಗದಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮೊದಲು ರಾಮ ಜನ್ಮಭೂಮಿ. ನಂತರ ರಾಮಸೇತು ಪುರಾವೆ ಕೇಳಿದರು. ಈಗ ಅವರು ಬಜರಂಗದಳವನ್ನು ಪ್ರಶ್ನಿಸುತ್ತಿದ್ದಾರೆ. ಛತ್ತೀಸಗಢದ ಜನರು ಇದನ್ನು ಸಹಿಸುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುತ್ತಾರೆ ಎಂದು ಹಿರಿಯ ಬಿಜೆಪಿ ನಾಯಕ ಬ್ರಿಜ್‌ಮೋಹನ್ ಅಗರ್ವಾಲ್ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ತಂದೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಅಭ್ಯರ್ಥಿಯ ಪುತ್ರ – ಕಾಂಗ್ರೆಸ್‍ನಿಂದ ವೀಡಿಯೋ ರಿಲೀಸ್

  • ದಾಂತೇವಾಡ ನಕ್ಸಲ್ ದಾಳಿ- ಮೃತ ಯೋಧನ ಶವಕ್ಕೆ ಹೆಗಲು ಕೊಟ್ಟ ಭೂಪೇಶ್ ಬಘೇಲ್

    ದಾಂತೇವಾಡ ನಕ್ಸಲ್ ದಾಳಿ- ಮೃತ ಯೋಧನ ಶವಕ್ಕೆ ಹೆಗಲು ಕೊಟ್ಟ ಭೂಪೇಶ್ ಬಘೇಲ್

    ರೈಪುರ್: ದಾಂತೇವಾಡದ (Dantewada) ಐಇಡಿ ದಾಳಿಯಲ್ಲಿ  (IED attack) ಪ್ರಾಣ ಕಳೆದುಕೊಂಡ ಜಿಲ್ಲಾ ಮೀಸಲು ಪಡೆ ಸಿಬ್ಬಂದಿಯ ಪಾರ್ಥೀವ ಶರೀರವನ್ನು ಸಾಗಿಸುವಾಗ ಛತ್ತೀಸ್‍ಗಢ ಸಿಎಂ ಭೂಪೇಶ್ ಬಘೇಲ್ (Bhupesh Baghel) ಹೆಗಲು ನೀಡಿದ್ದಾರೆ.

    ಘಟನೆಯಲ್ಲಿ ಹುತಾತ್ಮರಾದ ಯೋಧನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಿಎಂ ಭೂಪೇಶ್ ಬಘೇಲ್ ತೆರಳಿದ್ದರು. ಈ ವೇಳೆ ಯೋಧನ ಪಾರ್ಥಿವ ಶರಿರವನ್ನು ಸಾಗಿಸಲು ತಮ್ಮ ಹೆಗಲು ನೀಡಿ ಸಹಕರಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಾಳಿಯ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಗುಂಡಿನ ದಾಳಿ ನಡೆದಿದ್ದು ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೋರ್ವ ನಕ್ಸಲ್ ಸದಸ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾನೆ ಎಂದು ಅವರು ತಿಳಿಸಿದ್ದಾರೆ.

    ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ ಅವರು ಸೈನಿಕರ ತ್ಯಾಗ ವ್ಯರ್ಥವಾಗುವುದಿಲ್ಲ. ನಕ್ಸಲ್ ಬೆದರಿಕೆಯನ್ನು ಎದುರಿಸಲು ಸೇನೆ ಸದೃಢವಾಗಿದೆ. ಈ ಘಟನೆಯು ಸರ್ಕಾರ ಮತ್ತು ಸೈನಿಕರ ನೈತಿಕ ಸ್ಥೈರ್ಯವನ್ನು ಕೆಡಿಸುವುದಿಲ್ಲ. ಪ್ರತಿಯಾಗಿ ಹೋರಾಡಲು ಸೇನೆ ಸಜ್ಜಾಗಿದೆ ಎಂದಿದ್ದಾರೆ.

    ಬುಧವಾರ ದಾಂತೇವಾಡದಲ್ಲಿ ನಡೆದ ಐಇಡಿ ದಾಳಿಯಲ್ಲಿ 10 ಡಿಆರ್‍ಜಿ ಸಿಬ್ಬಂದಿ ಮತ್ತು ವಾಹನದ ಚಾಲಕನಾಗಿದ್ದ ಒಬ್ಬ ನಾಗರಿಕ ಮೃತಪಟ್ಟಿದ್ದರು.

    ದಾಳಿಯನ್ನು ಪ್ರಧಾನಿ ಮೋದಿ (Narendra Modi) ಖಂಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಅವರ ತ್ಯಾಗವನ್ನು ಸದಾ ಸ್ಮರಿಸಲಾಗುವುದು ಎಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಇದನ್ನು ಹೇಡಿಗಳ ಕೃತ್ಯ ಎಂದು ಕರೆದಿದ್ದು, ಛತ್ತೀಸ್‍ಗಢ ಸರ್ಕಾರಕ್ಕೆ ಅಗತ್ಯವಾದ ಬೆಂಬಲವನ್ನು ನೀಡುವುದಾಗಿ ಘೋಷಿಸಿದ್ದರು.

  • BJP ನಾಯಕರ ಹೆಣ್ಮಕ್ಕಳು ಮುಸ್ಲಿಮರನ್ನು ಮದ್ವೆ ಆದ್ರೆ ಪ್ರೀತಿ ಅಂತಾರೆ, ಬೇರೆಯವರಾದ್ರೆ ಜಿಹಾದ್: ಛತ್ತೀಸ್‍ಗಢ ಸಿಎಂ

    BJP ನಾಯಕರ ಹೆಣ್ಮಕ್ಕಳು ಮುಸ್ಲಿಮರನ್ನು ಮದ್ವೆ ಆದ್ರೆ ಪ್ರೀತಿ ಅಂತಾರೆ, ಬೇರೆಯವರಾದ್ರೆ ಜಿಹಾದ್: ಛತ್ತೀಸ್‍ಗಢ ಸಿಎಂ

    ರಾಯ್ಪುರ: ಬಿಜೆಪಿ (BJP) ನಾಯಕರ ಹೆಣ್ಣು ಮಕ್ಕಳು ಮುಸ್ಲಿಮರನ್ನು ಮದುವೆಯಾದಾಗ ಅದನ್ನು ಅವರು ಪ್ರೀತಿ ಎಂದು ಕರೆಯುತ್ತಾರೆ, ಆದರೆ ಬೇರೆ ಯಾರಾದರೂ ಹಾಗೆ ಮಾಡಿದರೇ ಅದನ್ನು ಜಿಹಾದ್ (Jihad) ಎಂದು ಕರೆಯುತ್ತಾರೆ ಎಂದು ಛತ್ತೀಸ್‍ಗಢದ (Chhattisgarh) ಮುಖ್ಯಮಂತ್ರಿ ಭೂಪೇಶ್ ಬಾಘೇಲ್ (Bhupesh Baghel) ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಲವ್ ಜಿಹಾದ್ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯ ಹಿರಿಯ ನಾಯಕರ ಬಗ್ಗೆ ಮಾತನಾಡುವುದಾದರೆ ಅವರ ಹೆಣ್ಣುಮಕ್ಕಳು ಮುಸ್ಲಿಮರನ್ನು ಮದುವೆಯಾಗಿದ್ದಾರೆ. ಇದು ಲವ್ ಜಿಹಾದ್ ವರ್ಗಕ್ಕೆ ಸೇರುವುದಿಲ್ಲವೇ? ಛತ್ತೀಸ್‍ಗಢದ ಬಿಜೆಪಿಯ ದೊಡ್ಡ ನಾಯಕನ ಮಗಳು ಎಲ್ಲಿ ಹೋದಳು ಎಂದು ಕೇಳುತ್ತೀರಿ. ಅದು ಲವ್ ಜಿಹಾದ್ ಅಲ್ಲವೇ? ಅವರ ಮಗಳು ಅದನ್ನು ಮಾಡಿದರೆ ಅದು ಪ್ರೀತಿ ಆದರೆ ಬೇರೆಯವರು ಅದನ್ನು ಮಾಡಿದಾಗ ಲವ್ ಜಿಹಾದ್ ಆಗುತ್ತದೆಯೇ ಎಂದು ಕಿಡಿಕಾರಿದರು.

    ಬಿಜೆಪಿ ದ್ವಿಗುಣ ನೀತಿಯನ್ನು ಹೊಂದಿದೆ. ಬೆಮೆತಾರಾ ಜಿಲ್ಲೆಯ ಬಿರಾನ್‍ಪುರ ಗ್ರಾಮದಲ್ಲಿ ಕಳೆದ ವಾರ ನಡೆದ ಕೋಮು ಹಿಂಸಾಚಾರದ ರಾಜಕೀಯ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಚುನಾವಣೆ ವೇಳೆ ಶಾಂತಿ ಕದಡಲು VHP ಅಧ್ಯಕ್ಷನ ಮೇಲೆ ಫೈರಿಂಗ್: ಬೋಪಯ್ಯ

    ಕೆಲವು ಅಂತರ್‌ಧರ್ಮೀಯ ವಿವಾಹಗಳ ನಂತರ ಬಿರಾನ್‍ಪುರದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯು ಈ ಘರ್ಷಣೆಯನ್ನು ಪರೀಶಿಲಿಸಿಲ್ಲ. ಜೊತೆಗೆ ಬಂದ್‍ಗೆ ಕರೆ ನೀಡುವ ಮೊದಲು ಯಾವುದೇ ವರದಿಯನ್ನು ನೀಡಲಿಲ್ಲ. ಇಬ್ಬರು ಮಕ್ಕಳ ನಡುವಿನ ಜಗಳ ಘರ್ಷಣೆಗೆ ಕಾರಣವಾಯಿತು. ಇದು ದುಃಖಕರವಾದ ಸಂಗತಿಯಾಗಿದೆ. ಆದರೆ ಬಿಜೆಪಿ ತನ್ನ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹೆಲಿಪ್ಯಾಡ್ ಬಳಿ ಬೆಂಕಿ – ಸಿಎಂ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ತಪ್ಪಿದ ಅನಾಹುತ